ಮೈಸೂರು ದಸರಾ ಉದ್ಘಾಟನೆ, ಚಾಮುಂಡೇಶ್ವರಿ ದೇಗುಲ ಸುತ್ತ ನಡೆಯುತ್ತಿರುವ ರಾಜಕೀಯಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಬಹಿರಂಗ ಪತ್ರ ಬರೆದಿರುವ ಪ್ರಮೋದಾ ದೇವಿ ಒಡೆಯರ್, ದಸರಾ ಆಚರಣೆಗಳು, ವಿಶೇಷವಾಗಿ ಚಾಮುಂಡಿ ಬೆಟ್ಟದ ಮೇಲಿರುವ ಪವಿತ್ರ ಚಾಮುಂಡೇಶ್ವರಿ ದೇವಾಲಯದ ಸುತ್ತ ರಾಜಕೀಯವು ನಡೆಯುತ್ತಿರುವುದು ತೀವ್ರ ಬೇಸರ ತರಿಸಿದೆ ಎಂದಿದ್ದಾರೆ. ಚಾಮುಂಡೇಶ್ವರಿ ದೇವಾಲಯ ಹಿಂದೂಗಳಿಗೆ ಸೇರಿಲ್ಲ ಎಂಬಂತಹ ಅಸಂವೇದನಾಶೀಲ ಹೇಳಿಕೆಗಳು ಅನಗತ್ಯ ಎಂದಿದ್ದಾರೆ. ಇತ್ತ ರಾಜ್ಯದಲ್ಲಿ ಭಾರಿ ಮಳೆಯಿಂದ ಕೆಲ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ಕ್ಷಣ ಕ್ಷಣದ ಅಪ್‌ಡೇಟ್ ಇಲ್ಲಿದೆ.

12:15 AM (IST) Aug 29
ಪರಿಸರ ಸಂರಕ್ಷಣೆ ದೃಷ್ಟಿಯಿಂದ ಈ ನಿರ್ಧಾರವು ಮಹತ್ವದ್ದೇ ಸರಿ. ಈ ನಿಟ್ಟಿನಲ್ಲಿ ಎಲ್ಲಾ ಹೊಸ ಮಾದರಿಯ ವಾಹನಗಳಲ್ಲಿ AdBlue SCR ವ್ಯವಸ್ಥೆ ಅಳವಡಿಕೆಯನ್ನು ತಯಾರಕರಿಗೆ ಕಡ್ಡಾಯಗೊಳಿಸಲಾಯಿತು.
11:23 PM (IST) Aug 28
ಮಂಗಳೂರಿನ ತಲಪಾಡಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು 6 ಜನರು ಸಾವನ್ನಪ್ಪಿದ್ದಾರೆ. ಫಿಟ್ನೆಸ್ ಸರ್ಟಿಫಿಕೇಟ್ ಪಡೆದ ಬಸ್ಸಿನ ಚಾಲಕನ ನಿರ್ಲಕ್ಷ್ಯ ಅಪಘಾತಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ರಿಪೇರಿ ಮಾಡಿ ಎಫ್‌ಸಿ ಪಡೆದುಕೊಂಡು ಬಂದಾಕ್ಷಣ ನಿಗಮದ ತಪ್ಪಿಲ್ಲ ಎಂದು ಹೇಳುತ್ತಿದೆ.
10:52 PM (IST) Aug 28
ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಫಾರ್ಮ್‌ನಲ್ಲಿ ಬೆಳೆಸುತ್ತಿರುವ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದ್ದು, 50 ಹಂದಿಗಳು ಸಾವನ್ನಪ್ಪಿವೆ. ಉಳಿದ 57 ಹಂದಿಗಳನ್ನು ಕಲ್ಲಿಂಗ್ ಮಾಡಲು ಪಶುಸಂಗೋಪನಾ ಇಲಾಖೆ ನಿರ್ಧರಿಸಿದೆ. ಇದು ಮನುಷ್ಯರಿಗೆ ಹರಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
10:17 PM (IST) Aug 28
ಸಾಮಾನ್ಯ ವ್ಯಕ್ತಿಯೊಬ್ಬ ಬಾರ್‌ನಲ್ಲಿ ಮದ್ಯ ಖರೀದಿ ಮಾಡದೇ, ನೇರವಾಗಿ ಟಾಯ್ಲೆಟ್ ಬಳಸಿದ್ದಕ್ಕೆ ₹1000 ಬಿಲ್ ಪಾವತಿಸಬೇಕಾಯಿತು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಾರ್‌ನ ಕ್ರಮ ಸರಿಯೇ ತಪ್ಪೇ ಎಂಬ ಬಗ್ಗೆ ನೆಟ್ಟಿಗರು ಭಾರೀ ಚರ್ಚೆ ನಡೆಸುತ್ತಿದ್ದಾರೆ.
09:36 PM (IST) Aug 28
ಹನುಮಾನ್ ಸಿನಿಮಾದ ಮೂಲಕ ಬಾಕ್ಸ್ ಆಫೀಸ್ ಶೇಕ್ ಮಾಡಿದ್ದ ತೇಜ ಸಜ್ಜಾ ಈಗ ಸೂಪರ್ ಯೋಧನಾಗಿ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಮಿರಾಯ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ನಿರ್ದೇಶಕ ಕಾರ್ತಿಕ್ ಘಟ್ಟಮನೇನಿ ಪ್ರೇಕ್ಷಕರಿಗೆ ಭರ್ಜರಿ ವಿಷ್ಯುವಲ್ ಟ್ರೀಟ್ ನೀಡಿದ್ದಾರೆ.
09:32 PM (IST) Aug 28
09:22 PM (IST) Aug 28
ಕನ್ನಡದ ಜನಪ್ರಿಯ ನಿರೂಪಕಿ ಆ್ಯಂಕರ್ ಅನುಶ್ರೀ, ಐಟಿ ಉದ್ಯೋಗಿ ರೋಷನ್ ರಾಮಮೂರ್ತಿ ಅವರೊಂದಿಗೆ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ನೆನಪು ಮಾಡಿಕೊಂಡು ಕೆಲವು ಪ್ರಮುಖ ವ್ಯಕ್ತಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
09:12 PM (IST) Aug 28
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ನಗದು ಬಹುಮಾನ ಹೆಚ್ಚಳ. ಬಂಗಾರ ₹7 ಲಕ್ಷ, ಬೆಳ್ಳಿಗೆ ₹5 ಲಕ್ಷ, ಕಂಚು ₹2 ಲಕ್ಷ ಘೋಷಣೆ. ಇನ್ನು ಒಲಿಂಪಿಕ್ಸ್ ಬಂಗಾರ ವಿಜೇತರಿಗೆ ₹5 ಕೋಟಿ ಕೊಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು. ರಾಜ್ಯದ ಕ್ರೀಡಾಪಟುಗಳ ಸಾಧನೆಗೆ ಮೆಚ್ಚುಗೆ.
08:52 PM (IST) Aug 28
9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿಯಾದ ಘಟನೆ ಎಲ್ಲವನ್ನು ತಲೆ ಕೆಳಗೆ ಮಾಡಿಸಿದೆ. ವಿದ್ಯಾರ್ಥಿನಿ ತಮ್ಮ ಶಾಲೆ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
08:26 PM (IST) Aug 28
ಧರ್ಮಸ್ಥಳ ದೇಗುಲ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಹರಡಿರುವ ಸುಳ್ಳು ವರದಿಗಳನ್ನು ತೆಗೆದುಹಾಕಲು ನಿಖಿಲ್ ಕುಮಾರಸ್ವಾಮಿ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ. ಸಾಮೂಹಿಕ ಹತ್ಯೆ, ಅನನ್ಯಾ ಭಟ್ ಪ್ರಕರಣದಂತಹ ಸುಳ್ಳು ಸುದ್ದಿಗಳನ್ನು ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ.
08:21 PM (IST) Aug 28
ಇಂದು ರಾಜ್ಯ ಸಚಿವಾಲಯದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಕ್ಯಾಬಿನೆಟ್ ಈ ನಿರ್ಧಾರ ತೆಗೆದುಕೊಂಡಿದೆ.
08:19 PM (IST) Aug 28
ಧರ್ಮಸ್ಥಳ ರಕ್ಚಣೆ ವಿಚಾರದಲ್ಲಿ ನಾವು ಸದಾ ಬೆಂಬಲವಾಗಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
08:11 PM (IST) Aug 28
07:36 PM (IST) Aug 28
07:29 PM (IST) Aug 28
ಮಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಆಟೋಗೆ ಡಿಕ್ಕಿ ಹೊಡೆದು 6 ಜನರು ಸಾವನ್ನಪ್ಪಿದ್ದಾರೆ. ಬಸ್ ಹಿಂದಕ್ಕೆ ಚಲಿಸುವಾಗ ಡ್ರೈವರ್ ಇರಲಿಲ್ಲ ಎಂಬುದು ತಿಳಿದುಬಂದಿದೆ. ಚಾಲಕನ ಅತಿಯಾದ ವೇಗ ಮತ್ತು ಇಳಿಜಾರಿನಲ್ಲಿ ಬಸ್ ನಿಲ್ಲಿಸಿ ಕೆಳಗೆ ಇಳಿದು ಹೋಗಿದ್ದೇ ಅಪಘಾತಕ್ಕೆ ಕಾರಣವಾಗಿದೆ.
07:09 PM (IST) Aug 28
07:02 PM (IST) Aug 28
07:02 PM (IST) Aug 28
ಸಾಹಿತಿಗಳು ಸೇರಿ ಅನೇಕರು ದಸರಾ ಉದ್ಘಾಟನೆ ಮಾಡಿದ್ದಾರೆ. ಬಾನು ಮುಷ್ತಾಕ್ ಸಾಧನೆಗೆ ದೊಡ್ಡ ಗೌರವ ಇದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
06:22 PM (IST) Aug 28
06:13 PM (IST) Aug 28
ಧರ್ಮಸ್ಥಳದ ಮುಸ್ಲಿಂ ಹುಡುಗಿಯರನ್ನು ಸಂದರ್ಶನ ಮಾಡಿದಾಗ ಅದರ ವಿಡಿಯೋ ವೈರಲ್ ಆದಾಗ, ನಡೆದ ಶಾಕಿಂಗ್ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಯುಟ್ಯೂಬರ್. ಅದೇನು ನೋಡಿ...
05:59 PM (IST) Aug 28
ಹಳದಿ ಸೀರೆಯುಟ್ಟು ಸಾಂಪ್ರದಾಯಿಕ ಲುಕ್‌ನಲ್ಲಿ ಗೌರಿ-ಗಣೇಶ ಹಬ್ಬದ ಶುಭಾಶಯ ತಿಳಿಸಿದ ನಟಿ ಸೋನಲ್ ಮೊಂಥೆರೋ. ಆದರೆ ಫೋಟೋದಲ್ಲಿ ತಾಳಿ ಕಾಣದೇ ಇರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಜೊತೆಗೆ ಗಂಡನೂ ಇಲ್ಲ, ಗಣೇಶನೂ ಇಲ್ಲ.
05:54 PM (IST) Aug 28
ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ (ಎಲ್‌ಪಿಯು) ತನ್ನ ಕ್ಯಾಂಪಸ್‌ನಲ್ಲಿ ಅಮೆರಿಕ ಮೂಲದ ದೈತ್ಯ ಕಂಪನಿಗಳಾದ ಕೋಕಾ-ಕೋಲಾ ಮತ್ತು ಪೆಪ್ಸಿಕೋದ ಪಾನೀಯಗಳನ್ನು ನಿಷೇಧಿಸಿದೆ.
05:47 PM (IST) Aug 28
ಬಹಳಷ್ಟು ಕಾಂಗ್ರೆಸ್ ನಾಯಕರಲ್ಲಿ ಆರ್‌ಎಸ್‌ಎಸ್ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ. ರಾಹುಲ್ ಗಾಂಧಿ, ಖರ್ಗೆ ಅವರು ಕಲ್ಸಿದ್ದಕ್ಕೆ ವಿರೋಧ ಮಾಡ್ತಾರೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
05:26 PM (IST) Aug 28
ಬಿಜೆಪಿ ಶಾಸಕ ಕುಶ್ವಾಹ ಮುಷ್ಟಿ ಬಿಗಿದುಕೊಂಡು ಹೊಡೆಯುವಂತೆ ಮುಂದೆ ಹೋಗಿದ್ದಾರೆ. ನಂತರ ಜಿಲ್ಲಾಧಿಕಾರಿಗಳ ಗನ್ನರ್ ಅವರನ್ನು ತಡೆದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
05:22 PM (IST) Aug 28
ಆರ್ಟ್ ಆಫ್ ಲಿವಿಂಗ್‌ನ ಶಿಬಿರದ ನಂತರ, ನಮ್ಮ ಜೀವನವು ಬದಲಾಗಲು ಪ್ರಾರಂಭಿಸಿದೆ. ಗಂಭೀರವಾದ ದೈಹಿಕ ಗಾಯಗಳನ್ನು ಹೊಂದಿರುವವರು ಸಹ ಈಗ ತಮ್ಮ ಭವಿಷ್ಯದ ಬಗ್ಗೆ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ.
05:14 PM (IST) Aug 28
ಬೆಂಗಳೂರಿನಲ್ಲಿ ಇನ್ಫೋಸಿಸ್ ಉದ್ಯೋಗಿ ಶಿಲ್ಪಾ ವರದಕ್ಷಿಣೆ ಕಿರುಕುಳದಿಂದ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಪತಿ, ಅತ್ತೆ ಮತ್ತು ನಾದಿನಿಯ ವಿರುದ್ಧ ಆರೋಪ ಕೇಳಿಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕುಟುಂಬಸ್ಥರು ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.
05:01 PM (IST) Aug 28
04:53 PM (IST) Aug 28
ಮುಂಬೈನಲ್ಲಿ ಆಟೋ ಚಾರ್ಜ್ ಕೊಡದ ಬಾಲಕನಿಗೆ ಆಟೋ ಚಾಲಕನೊಬ್ಬ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
04:27 PM (IST) Aug 28
ಸದಾ ಸಿಡುಕಿನಲ್ಲಿಯೇ ಇರುವ, ಯಾರನ್ನೇ ಕಂಡರೂ ಉರಿದು ಬೀಳುವ ನಟಿ, ಸಂಸದೆ ಜಯಾಬಚ್ಚನ್ಗೆ ಅಂಟಿರುವ ರೋಗವೇನು? ಇದನ್ನು ರಿವೀಲ್ ಮಾಡಿದ್ದಾರೆ ಅಭಿಷೇಕ್ ಬಚ್ಚನ್.
04:27 PM (IST) Aug 28
04:14 PM (IST) Aug 28
ಡಿಕೆ ಶಿವಕುಮಾರ್ ಅವರು RSS ಗೀತೆ ವಿಚಾರದಲ್ಲಿ ಕ್ಷಮೆ ಕೇಳಿರುವುದನ್ನು ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಖಂಡಿಸಿದ್ದಾರೆ. ಡಿಕೆಶಿ ಒರಿಜಿನಲ್ ಆಗಿರಬೇಕು, ಕ್ಷಮೆ ಕೇಳಿದ್ದು ಅವರ ರಾಜಕೀಯ ಬದುಕಿನ ಕಪ್ಪುಚುಕ್ಕೆ ಎಂದಿದ್ದಾರೆ. ಸಿಎಂ ಸ್ಥಾನ ಉಳಿಸಿಕೊಳ್ಳುವ ಭಯದಿಂದಲೇ ಕ್ಷಮೆ ಕೇಳಿದ್ದಾರೆ ಎಂದಿದ್ದಾರೆ.
03:48 PM (IST) Aug 28
03:40 PM (IST) Aug 28
03:34 PM (IST) Aug 28
ಹಿಮಾಚಲ ಪ್ರದೇಶದಲ್ಲಿ ಭೀಕರ ಪ್ರವಾಹದ ನಡುವೆಯೂ ಹನುಮಾನ್ ದೇಗುಲದ ಅರ್ಚಕರು ಪ್ರವಾಹಕ್ಕೆ ಅಂಜದೇ ದೇವಸ್ಥಾನದ ಆವರಣದಲ್ಲೇ ಕೈ ಕಟ್ಟಿ ನಿಂತು ಪ್ರವಾಹದ ನೀರು ಉಕ್ಕೇರುವುದನ್ನು ನೋಡುತ್ತಿರುವ ವೀಡಿಯೋ ವೈರಲ್ ಆಗಿದೆ.
03:27 PM (IST) Aug 28
ಸಂಭಲ್ ಗಲಭೆ ದೇಶಾದ್ಯಂತ ಭಾರಿ ಸದ್ದು ಮಾಡಿತ್ತು. ಇದೀಗ ನಿವೃತ್ತ ನ್ಯಾಯಾಧೀಶರ ನೇತತ್ವದ ಸಮಿತಿ ವರದಿ ಸಲ್ಲಿಸಿದೆ. ಈ ವರದಿಯ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ. ಹರಿಹರ ದೇವಾಲಯದ ಅವಶೇಷದಲ್ಲಿ ಮಸೀದಿ ನಿರ್ಮಾಣವಾಗಿದೆ. ಇಷ್ಟೇ ಅಲ್ಲ ಜನಸಂಖ್ಯೆ ಬದಲಾವಣೆ ಹಲವರ ಆತಂಕಕ್ಕೆ ಕಾರಣವಾಗಿದೆ.
03:18 PM (IST) Aug 28
02:46 PM (IST) Aug 28
ಮಕ್ಕಳಿಗೆ ಫೈರ್ ಇಲ್ಲದ ಅಡುಗೆ ಪಾಕವಿಧಾನಗಳು: ನಿಮ್ಮ ಮಕ್ಕಳು ಅಡುಗೆ ಸ್ಪರ್ಧೆಯಲ್ಲಿ ಪ್ರಥಮ ಬರಬೇಕೆಂದು ಬಯಸಿದರೆ, ಈ 5 ಫೈರ್ ಇಲ್ಲದ ಖಾದ್ಯಗಳನ್ನು ಅವರಿಗೆ ಪ್ರಯತ್ನಿಸಲು ಕೊಡಿ.
02:34 PM (IST) Aug 28
02:33 PM (IST) Aug 28
ನನ್ನ ಮದುವೆ ತಡವಾಗಿದೆ ಎಂದು ಹೇಳುತ್ತ, ಹುಡುಗ ಯಾರು? ಸಿಕ್ಕಿದ್ದೆಲ್ಲಿ? ಲವ್ ಹೇಗೆ ಶುರುವಾಯ್ತು ಎಂದು ಅನುಶ್ರೀ ಅವರು ಹೇಳಿದ್ದಾರೆ.
02:08 PM (IST) Aug 28