ಸಾಹಿತಿಗಳು ಸೇರಿ ಅನೇಕರು ದಸರಾ ಉದ್ಘಾಟನೆ ಮಾಡಿದ್ದಾರೆ. ಬಾನು ಮುಷ್ತಾಕ್ ಸಾಧನೆಗೆ ದೊಡ್ಡ ಗೌರವ ಇದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ (ಆ.28): ಏನು ಇಲ್ಲದಿದ್ದರೆ ಬಿಜೆಪಿಯವರು ಈ ರೀತಿ ಕ್ಯಾತೆ ತೆಗೆಯುತ್ತಾರೆ. ಈ ಹಿಂದೆ ನಿಸಾರ್ ಅಹಮದ್ ದಸರಾ ಉದ್ಘಾಟಿಸಿದ್ದಾರೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆಗೆ ಬಿಜೆಪಿ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಸಾಹಿತಿಗಳು ಸೇರಿ ಅನೇಕರು ದಸರಾ ಉದ್ಘಾಟನೆ ಮಾಡಿದ್ದಾರೆ. ಬಾನು ಮುಷ್ತಾಕ್ ಸಾಧನೆಗೆ ದೊಡ್ಡ ಗೌರವ ಇದೆ. ಅದಕ್ಕೆ ಅವರನ್ನ ದಸರಾ ಉದ್ಘಾಟನೆಗೆ ಸರ್ಕಾರ ಆಹ್ವಾನಿಸಿದೆ. ಏನು ವಿಚಾರ ಇಲ್ಲದಿದ್ದರೆ ಏನಾರು ತಿಟೇ ಮಾಡೋದು ವಿರೋಧ ಪಕ್ಷದ ಕೆಲಸ ಎಂದರು.
ವಿರೋಧ ಪಕ್ಷದವರು ತೀಟೇ ಮಾಡಿದಾಗ ಸಾರ್ವಜನಿಕವಾಗಿ ಕೆಲವು ಭಿನ್ನಾಭಿಪ್ರಾಯ ಬರ್ತಾವೆ ಅಷ್ಟೆ. ಸಾರ್ವಜನಿಕರ ಭಿನ್ನಾಭಿಪ್ರಾಯ ಗೌರವಿಸುತ್ತೇವೆ. ಪ್ರತಿಯೊಬ್ಬರ ನಡೆ ಸಣ್ಣಪುಟ್ಟ ವ್ಯತ್ಯಾಸಗಳು ಇರ್ತಾವೆ. ಮಸೀದಿ ಯಾವಾಗ ಕಟ್ಟುತ್ತಿರಾ ಎಂಬ ಆರ್.ಅಶೋಕ್ ಹೇಳಿಕೆ ವಿಚಾರವಾಗಿ ಅದು ನನಗೆ ಗೊತ್ತಿಲ್ಲ, ದೇವರು ಎಲ್ಲರ ಆಸ್ತಿ. ಇಷ್ಟ ಪಟ್ಟವರು ಪೂಜೆ ಮಾಡಲಿ ಯಾವುದೇ ನಿರ್ಬಂಧ ಇಲ್ಲ. ಜೆಡಿಎಸ್ ಧರ್ಮಸ್ಥಳ ಸತ್ಯ ಯಾತ್ರೆ ವಿಚಾರವಾಗಿ ಇಲ್ಲಿಯವರೆಗೆ ಸತ್ಯ ಇರಲಿಲ್ಲವಾ? ಇವಾಗ ಸತ್ಯಕ್ಕೆ ಹೋಗ್ತಿದ್ದಾರಾ? ಅವರಿಗೆ ಒಳ್ಳೆಯದಾಗಲಿ ಎಂದು ವ್ಯಂಗ್ಯವಾಡಿದರು.
ಸರ್ಕಾರಕ್ಕೆ ಮಂಜುನಾಥ ಸ್ವಾಮಿ ಶಿಕ್ಷೆ ಕೊಡ್ತಾರೆ ಎಂಬ ಎಚ್‌ಡಿಕೆ ಹೇಳಿಕೆ ವಿಚಾರವಾಗಿ ಧರ್ಮಸ್ಥಳದ ಧರ್ಮಾಧಿಕಾರಿ SIT ತನಿಖೆಯನ್ನು ಸ್ವಾಗತ ಮಾಡಿದ್ದಾರೆ. ಸಂಸ್ಥೆಯಿಂದ ಯಾವ ತಪ್ಪು ನಡೆದಿಲ್ಲ ಇದು ನಿಲ್ಲಬೇಕು. ಇವಾಗ ತನಿಖೆ ನಡೆಸಿ ಮುಕ್ತಾಯ ಮಾಡೋದು ಸೂಕ್ತ ವಿಚಾರ ಅನ್ನೊದನ್ನ ಹೇಳಿದ್ದಾರೆ. ಅಸೆಂಬ್ಲಿಯಲ್ಲಿ ಅಶೋಕ್ ಪಾಪಾ ತಡ್ಡಿತಾರಿಸಿದ್ರು. ಸುಳ್ಳು ಮಾಹಿತಿ ಕೊಟ್ಟವರ ಮೇಲೆ ಕ್ರಮ ತೆಗೆದುಕೊಳ್ಳಿ ಅಂತ ಹೇಳಿದ್ರು. ಬಹುಶಃ ಬಹಳ ವರ್ಷದಿಂದ ಚರ್ಚೆಯಲ್ಲಿ ಇತ್ತು.
ಇದನ್ನ ಅಂತಿಮ ಮಾಡಬೇಕಿತ್ತು ಎಲ್ಲರ ಅಭಿಪ್ರಾಯ ಇತ್ತು ತನಿಖೆ ಆಗ್ತಿದೆ. ತನಿಖೆಗೆ ಹೊರಟಾಗ ಕುಮಾರಸ್ವಾಮಿ, ಅಶೋಕ್ ಮಾತನಾಡಿಲ್ಲ. ಮಾಡಿದ ಬಳಿಕ ಇವಾಗ ಮಾತನಾಡ್ತಾರೆ ಅಷ್ಟೆ. ಕುಮಾರಸ್ವಾಮಿ ಬಹಳ ದಿನಗಳ ನಂತರ ಬಂದಿದ್ದಾರೆ, ಏನು ವಿಚಾರ ಇಲ್ಲದೇ ಮಾತನಾಡಿದ್ದಾರೆ. ಸರ್ಕಾರ ತಪ್ಪು ಮಾಡಿದ್ರೆ, ಅಥವಾ ಯಾರು ಅಪಮಾನ ಮಾಡಿ ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗುತ್ತೊ? ಯಾರಿಗೆ ಶಿಕ್ಷೆ ಆಗುತ್ತೆ ನೋಡೋಣ ಎಂದು ಚಲುವರಾಯಸ್ವಾಮಿ ತಿಳಿಸಿದರು.
