- Home
- Entertainment
- Sandalwood
- ಇಲ್ಲಿ ಗಣೇಶನಿಲ್ಲ; ಆದ್ರೂ ಹಳದಿ ಸೀರೆಯಲ್ಲಿ ಗೌರಿ-ಗಣೇಶ ಹಬ್ಬದ ಶುಭ ಕೋರಿದ ಸೋನಲ್ ಮೊಂಥೆರೋ!
ಇಲ್ಲಿ ಗಣೇಶನಿಲ್ಲ; ಆದ್ರೂ ಹಳದಿ ಸೀರೆಯಲ್ಲಿ ಗೌರಿ-ಗಣೇಶ ಹಬ್ಬದ ಶುಭ ಕೋರಿದ ಸೋನಲ್ ಮೊಂಥೆರೋ!
ಹಳದಿ ಸೀರೆಯುಟ್ಟು ಸಾಂಪ್ರದಾಯಿಕ ಲುಕ್‌ನಲ್ಲಿ ಗೌರಿ-ಗಣೇಶ ಹಬ್ಬದ ಶುಭಾಶಯ ತಿಳಿಸಿದ ನಟಿ ಸೋನಲ್ ಮೊಂಥೆರೋ. ಆದರೆ ಫೋಟೋದಲ್ಲಿ ತಾಳಿ ಕಾಣದೇ ಇರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಜೊತೆಗೆ ಗಂಡನೂ ಇಲ್ಲ, ಗಣೇಶನೂ ಇಲ್ಲ.

ಸಾಮಾನ್ಯವಾಗಿ ಎಲ್ಲ ಸೆಲೆಬ್ರಿಟಿಗಳು ಗೌರಿ-ಗಣೇಶ ಹಬ್ಬವನ್ನು ಆಚರಣೆ ಮಾಡಿ ತಮ್ಮ ಅಭಿಮಾನಿಗಳಿಗೆ, ಫಾಲೋವರ್ಸ್‌ಗಳಿಗೆ ಶುಭಾಶಯ ತಿಳಿಸುತ್ತಾರೆ. ಆದರೆ, ಇಲ್ಲಿ ಸೋನಲ್ ಮೊಂಥೆರೋ ಪಕ್ಕದಲ್ಲಿ ಗಣೇಶನಿಲ್ಲದಿದ್ದರೂ ನಾಡಿನ ಜನತೆಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಹಳದಿ ಸೀರೆಯುಟ್ಟು ಸಾಂಪ್ರದಾಯಿಕ ಲುಕ್‌ನಲ್ಲಿ ಫೋಟೋ ಶೂಟ್ ಮಾಡಿಸಿದ ನಟಿ ಸೋನೆಲ್, ತಮ್ಮ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಹಬ್ಬದ ಶುಭ ಕೋರಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುಖ-ಶಾಂತಿ ಸದಾ ನಿಮ್ಮ ಮನೆಯಲ್ಲಿ ನೆಲೆಸಲಿ. ಎಲ್ಲರಿಗೂ ಹಬ್ಬದ ಶುಭಾಶಯಗಳು ಎಂದು ತಿಳಿಸಿ ಒಂದು ಹಾರ್ಟ್ ಸ್ಮೈಲಿಯನ್ನು ಹಾಕಿದ್ದಾರೆ. ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದ್ದಿ, 82 ಸಾವಿರಕ್ಕೂ ಅಧಿಕ ಲೈಕ್‌ಗಳು ಬಂದಿವೆ.
ಸೋನಲ್ ಅವರ ಹಬ್ಬದ ಶುಭಾಶಯಕ್ಕೆ ನೂರಾರು ಕಾಮೆಂಟ್‌ಗಳು ಕೂಡ ಬಂದಿವೆ. ನಿಮಗೂ ಗಣೇಶ ಹಬ್ಬದ ಶುಭಾಶಯಗಳು ಅಕ್ಕ. ಈ ಹಬ್ಬ ನಿಮಗೆ ಇನ್ನಷ್ಟು ಸಂತೋಷ ತರಲಿ. ಹಣ, ಐಶ್ವರ್ಯ, ಆರೋಗ್ಯ ಕೊಟ್ಟು ಕಾಪಾಡಲಿ ನೂರಾರು ಕಾಲ ನಗುನಗುತ್ತಾ ಇರಿ ಅಕ್ಕ ' ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು, ನಿಮ್ಮ ಮೇಲೆ ನಮಗೆ ತುಂಬಾ ಗೌರವ ಅಭಿಮಾನಕ್ಕೆ ಕಾರಣ ನಿಮ್ಮ ಸಿಂಪ್ಲಿಸಿಟಿ, ನಿಮ್ಮ ಸಂಸ್ಕಾರ, ನಿಮ್ಮ ಉಡುಗೆ ಶೈಲಿ, ಎಲ್ಲರೊಂದಿಗೂ ನಗು ನಗುತ್ತಾ ಗೌರವಿಸುವ ಮನೋಭಾವ. ಹೀಗೆ ನೀವು ಎಲ್ಲದರಲ್ಲೂ ಪರಿಪೂರ್ಣ ಅದಕ್ಕೆ ನನಗೆ ತುಂಬಾ ಖುಷಿ ಅನಿಸುತ್ತೆ ನಿಮ್ಮ ಪೋಸ್ಟ್ ನೋಡಿದಾಗೆಲ್ಲ' ಎಂದು ತಿಳಿಸಿದ್ದಾರೆ.
ನಟ, ನಿರ್ದೇಶಕ ತರುಣ್ ಸುಧೀರ್ ಅವರನ್ನು ಮದುವೆ ಮಾಡಿಕೊಂಡಿರುವ ನಟಿ ಸೋನಲ್ ಮೊಂಥೆರೋ ಅವರು ಇತ್ತೀಚೆಗೆ ಅದ್ಧೂರಿಯಾಗಿ 1ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ. ಎಲ್ಲಿಯೇ ಹೋದರೂ ತಾಳಿ, ಕುಂಕುಮ, ಕೈಬಳೆ, ತಲೆತುಂಬಾ ಮಲ್ಲಿಗೆ ಮುಡಿದು ಬಹಳ ಸಾಂಪ್ರದಾಯಿಕವಾಗಿ ಕಾಣಿಸುತ್ತಾರೆ.
ಆದರೆ, ಇದೀಗ ಫೋಟೋ ಶೂಟ್ ವೇಳೆ ತಾಳಿಯನ್ನು ಕಾಣದಂತೆ ಹೈಡ್ ಮಾಡಿದ್ದಾರೆ. ಇದರಿಂದಾಗಿ ನೆಟ್ಟಿಗರೊಬ್ಬರು 'ತಾಳಿ ಎಲ್ಲಿ ಮೇಡಂ' ಪ್ರಶ್ನೆ ಮಾಡಿದ್ದಾರೆ.
ಈ ಹಿಂದೆಯೂ ಸೋನಲ್ ಅವರು ತಾಳಿಯನ್ನು ತೆಗೆದಿಟ್ಟು ಫೋಟೋ ಶೂಟ್ ಮಾಡಿಸಿದ್ದರು. ಆಗಲೂ ತಾಳಿ ಹಾಕಿಲ್ಲದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಆದರೆ, ಇದರ ಹೊರತಾಗಿ ಬೇರೆ ಎಲ್ಲ ಕಾರ್ಯಕ್ರಮಗಳಿಗೂ ದೊಡ್ಡದಾಗಿ ತಾಳಿಯನ್ನು ಧರಿಸಿಕೊಂಡು ಹೋಗುತ್ತಾರೆ.
ಇತ್ತೀಚಿನ ದಿನಗಳಲ್ಲಿ ಬಹುತೇಕ ಸೆಲೆಬ್ರಿಟಿಯರು ತಾಳಿಯನ್ನು ಹಾಕುವುದಿಲ್ಲ. ಇನ್ನು ಫೋಟೋ ಶೂಟ್ ಮತ್ತು ಸಿನಿಮಾ ಪಾತ್ರಗಳಿಗೆ ಅನುಗುಣವಾಗಿ ತಾಳಿಯನ್ನು ತೆಗೆದಿಟ್ಟಿರುತ್ತಾರೆ. ಇದನ್ನು ಪ್ರಶ್ನೆ ಮಾಡಿದರೂ ಸರಿಯಾದ ಉತ್ತರ ಸಿಗುವುದಿಲ್ಲ.
ಸಿನಿಮಾ ನಟನೆಯಲ್ಲಿ ಈಗಲೂ ಬ್ಯೂಸಿ:
ಸೋನಲ್ ಮೊಂಥೆರೋಗೆ ಮದುವೆ ಆಗಿದ್ದರೂ ಸಂಸಾರದ ಜಂಜಾಟ ಎನ್ನದೇ ಸಿನಿಮಾದಲ್ಲಿಯೂ ಬ್ಯೂಸಿ ಆಗಿದ್ದಾರೆ. ಸಂಸಾರ ಮತ್ತು ಸಿನಿಮಾ ನಟನೆ ಎರಡನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಮದುವೆಗೂ ಮುನ್ನ ರೋಲೆಕ್ಸ್, ರಾಧೇಯ, ತಲ್ವಾರ್‌ಪೇಟೆ, ಬುದ್ಧಿವಂತ-2, ಸರೋಜಿನಿ ನಾಯ್ಡು ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ಇದೀಗ ಕೆಲವು ಚಿತ್ರಗಳ ಶೂಟಿಂಗ್ ನಡೆಯುತ್ತಿದೆ.
ಮದುವೆಯಾದ ನಂತರವೂ ಸಿನಿಮಾ ಆಫರ್:
ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ಕೆಲವೇ ಕೆಲವು ಬೆರಳೆಣಿಕೆಯಷ್ಟು ನಟಿಯರಿಗೆ ಹೀರೋಯಿನ್ ಆಗಿ ನಟಿಸಲು ಸಿನಿಮಾ ಆಫರ್‌ಗಳು ಬರುತ್ತವೆ. ಅದರಲ್ಲಿ ಸೋನಲ್ ಕೂಡ ಒಬ್ಬರು. ಗ್ಲಾಮರಸ್ ಆಗಲಿ ಅಥವಾ ಇನ್ನಿತರ ಯಾವುದೇ ಪಾತ್ರಗಳ ಆಫರ್‌ಗಳನ್ನು ಒಪ್ಪುವುದು, ಬಿಡುವುದು ಮದುವೆಯಾದ ಮೇಲೂ ನಟಿಯರದ್ದೇ ಆಯ್ಕೆಯಾಗಿರುತ್ತದೆ ಎಂದು ಇತ್ತೀಚೆಗೆ ಖಾಸಗಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.