ಧರ್ಮಸ್ಥಳದ ಮುಸ್ಲಿಂ ಹುಡುಗಿಯರನ್ನು ಸಂದರ್ಶನ ಮಾಡಿದಾಗ ಅದರ ವಿಡಿಯೋ ವೈರಲ್​ ಆದಾಗ, ನಡೆದ ಶಾಕಿಂಗ್​ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಯುಟ್ಯೂಬರ್​. ಅದೇನು ನೋಡಿ... 

ಸದ್ಯ ಧರ್ಮಸ್ಥಳ ಭಾರಿ ಸದ್ದು ಮಾಡುತ್ತಿದೆ. ಬರ್ಬರವಾಗಿ ಹತ್ಯೆಗೀಡಾದ ಸೌಜನ್ಯಾಳಿಗೆ ನ್ಯಾಯ ಕೊಡಿಸುವುದಾಗಿ ಹೇಳಿದ ಕೇಸ್​ ಏನೆಲ್ಲಾ ತಿರುವುಗಳನ್ನು ಪಡೆದುಕೊಂಡು, ಯಾರದ್ದೋ ದುರುದ್ದೇಶಕ್ಕೆ ಇನ್ನೇನೋ ಆಗಿ ಇಡೀ ಪ್ರಕರಣವೇ ಉಲ್ಟಾ ಪಲ್ಟಾ ಆಗಿ ಹೋಗಿದೆ. ಜನರು ಯಾವುದು ಸುಳ್ಳು, ಯಾವುದು ಸತ್ಯ, ಯಾವುದು ನಾಟಕ ಎಂದು ಅರಿಯುವುದೇ ಕಷ್ಟ ಎನ್ನುವಷ್ಟರ ಮಟ್ಟಿಗೆ ದಿನದಿಂದ ದಿನಕ್ಕೆ ಹೈಡ್ರಾಮಾ ಸೃಷ್ಟಿಯಾಗುತ್ತಲೇ ಇದೆ. ಯಾವುದೋ ದುರುದ್ದೇಶ ಇಟ್ಟುಕೊಂಡು, ಯಾವುದೋ ವ್ಯಕ್ತಿಯನ್ನು, ಹಿಂದೂಗಳ ಧರ್ಮಕ್ಷೇತ್ರವನ್ನು ಮುಗಿಸುವ ಹುನ್ನಾರವೂ ಸೌಜನ್ಯಾಳ ಹೆಸರಿನಲ್ಲಿ ಸೃಷ್ಟಿಯಾಗಿರುವುದು ದೊಡ್ಡ ದುರಂತ ಎನ್ನುವಷ್ಟರ ಮಟ್ಟಿಗೆ ಈ ಪ್ರಕರಣ ಸಾಗಿದ್ದು, ಸದ್ಯ ಇದು SIT ತನಿಖೆಯಲ್ಲಿದೆ.

ಆದರೆ, ಇದೀಗ ಧರ್ಮಸ್ಥಳದಲ್ಲಿ ಮುಸ್ಲಿಂ ಯುವತಿಯರ ಸಂದರ್ಶನ ಮಾಡಿದಾಗ ಮುಂದೇನಾಯಿತು ಎನ್ನುವ ಕುತೂಹಲದ ಹಾಗೂ ಅಚ್ಚರಿಯ ಬಗ್ಗೆ ಯುಟ್ಯೂಬರ್​ ವಿನಯ್​ ರೇಡಿಯೋಸಿಟಿಗೆ ನೀಡಿರುವ ಸಂದರ್ಶನದಲ್ಲಿ ರಿವೀಲ್​ ಮಾಡಿದ್ದಾರೆ. ಸುಮಾರು ಒಂದೂವರೆ ವರ್ಷಗಳ ಹಿಂದೆ ಹೀಗೆ ಧರ್ಮಸ್ಥಳಕ್ಕೆ ಬಂದಿದ್ದ ಕೆಲವು ಮುಸ್ಲಿಂ ಯುವತಿಯರನ್ನು ಸಂದರ್ಶನ ಮಾಡಿದ್ದೆ. ಅವರೂ ತುಂಬಾ ಇಷ್ಟಪಟ್ಟುಕೊಂಡೇ ಮಾತನಾಡಲು ಒಪ್ಪಿದ್ದರು. ಹಿಜಾಬ್​ ಹಾಕಿದ್ದರು. ಆದರೆ ಮುಖ ಕಾಣಿಸುತ್ತಿತ್ತು ಎನ್ನುತ್ತಲೇ ಮುಂದೆ ನಡೆದ ಘಟನೆಯನ್ನು ಅವರು ವಿವರಿಸಿದ್ದಾರೆ.

ನೀವು ಒಂದು ವೇಳೆನ 24 ಹುಡುಗ ಆಗಿದ್ದರೆ ಏನು ಮಾಡುತ್ತಿದ್ರಿ ಎನ್ನುವ ಸಿಂಪಲ್​ ಪ್ರಶ್ನೆ ಕೇಳಿದೆ. ಅದಕ್ಕೆ ಅವರು ಅಣ್ಣಾ ನಾವು ಹುಡುಗರ ಹಾಗೆ ನೈಟ್​ಔಟ್​ ಮಾಡುತ್ತಿದ್ದೆವು. ನಾವು ಸುತ್ತಬೇಕು, ನೈಟ್​ಲೈಫ್​ ನೋಡಬೇಕು, ಬೀಚ್​ನಲ್ಲಿ ಓಡಾಡಬೇಕು. ರಾತ್ರಿಯಿಡೀ ಸ್ವತಂತ್ರವಾಗಿ ಫ್ರೀ ಆಗಿ ಇರಲು ಬಯಸುತ್ತಿದ್ದೆವು ಎಂದರು. ಅವರು ತುಂಬಾ ಇನ್ನೊಸೆಂಟ್​ ಆಗಿ ಮಾತನಾಡಿದ್ದರು. ಅಷ್ಟೇ ಅದನ್ನು ಬಿಟ್ಟು ಅವರು ಏನೂ ಹೇಳಿರಲಿಲ್ಲ. ಅವರ ಮನದ ಮಾತು ಅಲ್ಲಿ ತೆರೆದಿಟ್ಟಿದ್ದರು. ಈ ವಿಡಿಯೋ ರಾತ್ರೋರಾತ್ರಿ ಸಕತ್​ ವೈರಲ್​ ಆಗಿಹೋಯ್ತು. ಕನಸಿನಲ್ಲಿಯೂ ಊಹಿಸದಷ್ಟು ರೀತಿ ಅದು ವೈರಲ್​ ಆಯಿತು. ಆದರೆ ಆಮೇಲೆ ಆಗಿದ್ದೇ ಬೇರೆ ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ ವಿನಯ್​.

ಆಗ ಅವರ ಧರ್ಮಗುರುಗಳು ಕರೆ ಮಾಡಿ ಈ ವಿಡಿಯೋ ತೆಗೆಯಲು ಬಲವಂತ ಮಾಡಿದರು. ಹುಡುಗಿಯರು ಹೇಳಿದ್ರೆ ನಾನು ತೆಗೆಯಬಹುದು, ಆದರೆ ಯಾರ್ಯಾರೋ ಕಾಲ್​ ಮಾಡಿ ಹೇಳಿದರೆ ನಾನು ಡಿಲೀಟ್​ ಮಾಡುವುದು ಬೇಡ ಎಂದು ಸುಮ್ಮನಾದೆ. ಆಮೇಲೆ ಆ ಹುಡುಗಿಯನ್ನು ಮದುವೆಯಾಗುವ ಹುಡುಗನೇ ಕಾಲ್​ ಮಾಡಿ, ವಿಡಿಯೋ ತೆಗೆದಿಲ್ಲ ಎಂದರೆ ನಮ್ಮ ಮದುವೆ ಕ್ಯಾನ್ಸಲ್​ ಆಗತ್ತೆ. ಪ್ಲೀಸ್​ ಡಿಲೀಟ್ ಮಾಡಿ ಎಂದ. ಕೈಮುಗಿದು ಕೇಳಿಕೊಂಡ, ನೀವು ಡಿಲೀಟ್​ ಮಾಡಿಲ್ಲ ಎಂದರೆ ಹುಡುಗಿನೇ ಏನಾದ್ರೂ ಮಾಡಿಕೊಳ್ತಾಳೆ, ಅಥ್ವಾ ಅವರ ಅಪ್ಪ-ಅಮ್ಮ ಬಿಡಲ್ಲ ಎಂದಾಗ ಅನಿವಾರ್ಯವಾಗಿ ಅದನ್ನು ಡಿಲೀಟ್​ ಮಾಡಬೇಕಾಯ್ತು ಎಂದಿದ್ದಾರೆ. ಅವರು ಅಂಥ ತಪ್ಪು ಏನು ಹೇಳಿದ್ರು ಎನ್ನೋದೇ ಅರ್ಥವಾಗಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

View post on Instagram