ಬೆಂಗಳೂರು (ಆ.26) ಗೌರಿ ಗಣೇಶ ಹಬ್ಬದ ಹಿನ್ನಲೆಯಲ್ಲಿ ಮುಂಜಾನೆ 3 ಗಂಟೆಯಿಂದಲೇ ಬೆಂಗಳೂರಿನ ಕೆಆರ್ ಮಾರ್ಕೆಟ್ ಫುಲ್ ರಶ್ ಆಗಿದೆ. ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಯಲ್ಲಿ ಗ್ರಾಹಕರು ಮುಗಿಬಿದ್ದಿದ್ದಾರೆ. ಇದರಿಂದ ಸಂಚಾರ ದಟ್ಟಣೆಯೂ ಎದುರಾಗಿದೆ. ಟ್ರಾಫಿಕ್ ಜಾಮ್ ಸಮಸ್ಯೆಯೂ ತಲೆದೋರಿದೆ. ಕಳೆದ ಹಬ್ಬಕ್ಕೆ ಹೋಲಿಸಿದ್ರೆ ಈ ಬಾರಿ ಹೂ ಹಣ್ಣುಗಳ ದರ ದುಬಾರಿಯಾಗಿದೆ. ಇದು ಗ್ರಾಹಕರು ಹಾಗೂ ವ್ಯಾಪಾರಿಗಳಿಗೂ ತಲೆನೋವಾಗಿ ಪರಿಣಿಮಿಸಿದೆ. ಇತ್ತ ಬೆಂಗಳೂರಿನಲ್ಲಿ ಸರ್ಕಾರ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಿದೆ. ಖುದ್ದು ಡಿಕೆ ಶಿವಕುಮಾರ್ ತಡ ರಾತ್ರಿ ರಸ್ತೆ ಗುಂಡಿ ಮುಚ್ಚುವ ಕಾಮಾಗಾರಿ ಪರಿಶೀಲಿಲಿದ್ದಾರೆ. ರಾಜ್ಯ ರಾಜಕಾರಣ, ಜಿಲ್ಲೆಯ ಬೆಳವಣಿಗೆ ಸೇರಿದಂತೆ ಈ ದಿನದ ಕ್ಷಣ ಕ್ಷಣದ ಸುದ್ದಿ ಅಪ್‌ಡೇಟ್ ಇಲ್ಲಿದೆ.
11:14 PM (IST) Aug 26
11:00 PM (IST) Aug 26
ನವವಿವಾಹಿತ ಮಹಿಳೆಯೊಬ್ಬಳು ಗಂಡ ಮತ್ತು ಪ್ರೇಮಿ ಇಬ್ಬರ ಜೊತೆಗೂ 15 ದಿನಗಳಂತೆ ಕಾಲ ಕಳೆಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರಿಂದ ಪಂಚಾಯಿತಿಯಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಪ್ರಿಯಕರನೊಂದಿಗೆ 10 ಬಾರಿ ಓಡಿ ಹೋಗಿದ್ದ ಈ ಮಹಿಳೆಯ ನಿರ್ಧಾರಕ್ಕೆ ಗಂಡ ಒಪ್ಪಿಗೆ ನೀಡಿದ್ದಾನೆ.
09:44 PM (IST) Aug 26
09:04 PM (IST) Aug 26
ಡಿಸಿಎಂ ಡಿ.ಕೆ. ಶಿವಕುಮಾರ್ ಅವರ 'ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ' ಎಂಬ ಹೇಳಿಕೆಗೆ ಯದುವೀರ್ ಒಡೆಯರ್ ತಿರುಗೇಟು ನೀಡಿದ್ದಾರೆ. ಚಾಮುಂಡಿ ಬೆಟ್ಟ ಹಿಂದೆಯೂ ಹಿಂದೂಗಳದ್ದೇ, ಈಗಲೂ ಮತ್ತು ಮುಂದೆಯೂ ಹಿಂದೂಗಳದ್ದೇ ಆಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
08:23 PM (IST) Aug 26
ನಾಟಿ ಕೋಳಿಯೊಂದು ನೀಲಿ ಮೊಟ್ಟೆಯನ್ನಿಟ್ಟಿದೆ. ನಿತ್ಯ ಬಿಳಿ ಮೊಟ್ಟೆ ಇಡುತ್ತಿದ್ದ ಕೋಳಿ ಇದ್ದಕ್ಕಿದ್ದಂತೆ ನೀಲಿ ಮೊಟ್ಟೆ ಇಟ್ಟಿದ್ದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.
08:13 PM (IST) Aug 26
ಆರ್‌ಎಸ್‌ಎಸ್ ಪ್ರಾರ್ಥನಾ ಗೀತೆಗೆ ಹಾಡಿದ್ದಕ್ಕೆ ಡಿಕೆಶಿ ಕ್ಷಮೆ ಕೇಳಬೇಕೆಂಬ ಕಾಂಗ್ರೆಸ್ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ತಾಯ್ನಾಡಿಗೆ ನಮಸ್ಕರಿಸುವುದು ತಪ್ಪೇ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ. ಡಿಕೆಶಿ ಕ್ಷಮೆ ಕೇಳಲೊಪ್ಪದೇ ರಾಜೀನಾಮೆ ನೀಡಬೇಕಿತ್ತು ಎಂದು ಆರ್. ಅಶೋಕ್ ಒತ್ತಾಯಿಸಿದ್ದಾರೆ.
08:02 PM (IST) Aug 26
07:51 PM (IST) Aug 26
ಉಡುಪಿಯ ಪರಿಕಾ ಜಮೀನು ವಿವಾದದಲ್ಲಿ ಸುಜಾತಾ ಭಟ್ ಅವರ ಹಕ್ಕು ಪ್ರಶ್ನಾರ್ಹ ಎಂದು ಮಾಜಿ ನಗರಸಭಾ ಸದಸ್ಯ ಮಹೇಶ್ ಠಾಕೂರ್ ಹೇಳಿದ್ದಾರೆ. ಜಮೀನು ಧರ್ಮಸ್ಥಳ ಕ್ಷೇತ್ರಕ್ಕೆ ದಾನವಾಗಿದ್ದು, ಸುಜಾತಾ ಭಟ್ ಅವರ ತಂದೆಗೆ ಪರಿಹಾರ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
07:36 PM (IST) Aug 26
07:26 PM (IST) Aug 26
ದಸರಾ ಉದ್ಘಾಟನೆಗೆ ಆಯ್ಕೆಯಾದ ಬಗ್ಗೆ ಟೀಕಿಸಿದವರಿಗೆ ಸಾಹಿತಿ ಬಾನು ಮುಷ್ತಾಕ್ ತಿರುಗೇಟು ನೀಡಿದ್ದಾರೆ. ಕೋಟಿಗಟ್ಟಲೆ ಕನ್ನಡಿಗರ ಪ್ರೀತಿ-ಅಭಿಮಾನವನ್ನು ಪಡೆದಿರುವ ನಾನು, ಒಂದಿಬ್ಬರ ಟೀಕೆಗಳಿಗೆ ಉತ್ತರ ನೀಡಬೇಕಾದ ಅಗತ್ಯವಿಲ್ಲ ಎಂದಿದ್ದಾರೆ. ಜನರೇ ಇಂಥವರಿಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ಹೇಳಿದರು.
07:20 PM (IST) Aug 26
ಭರವಸೆ ಪತ್ರವನ್ನು ಕಟ್ಟುಕಥೆ ಎಂದು ಕಾಲೇಜಿನವರು ಹೇಳಿದ್ದನ್ನು ನ್ಯಾಯಾಧೀಶರು ತಳ್ಳಿಹಾಕಿದರು, ನಕಲಿ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳನ್ನು ನೀಡಲಾಗಿಲ್ಲ ಎಂದು ಹೇಳಿದರು.
07:12 PM (IST) Aug 26
ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಟ್ರ್ಯಾಕ್‌ಗೆ ಬೀಳದಂತೆ ಪಕ್ಕಕ್ಕೆ ಸರಿಸಿ ಎಚ್ಚರಿಕೆ ನೀಡುವ ಭದ್ರತಾ ಸಿಬ್ಬಂದಿಯೇ ಆಯತಪ್ಪಿ ಟ್ರ್ಯಾಕ್‌ಗೆ ಬಿದ್ದಂತಹ ಘಟನೆಯೊಂದು ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.
06:32 PM (IST) Aug 26
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ. ೪೫ ಎಕರೆ ಭೂಮಿಯನ್ನು ವಶಕ್ಕೆ ಪಡೆದು ವಿಸ್ತರಣೆ ಕಾರ್ಯ ನಡೆಯಲಿದ್ದು, ಹೊಸ ಹೂಡಿಕೆಗಳನ್ನು ಆಕರ್ಷಿಸಲು 'ಬೊಲ್ಪು' ಮತ್ತು 'ಬ್ಯಾಕ್ ಟು ಊರು' ಯೋಜನೆಗಳನ್ನು ರೂಪಿಸಲಾಗಿದೆ.
06:27 PM (IST) Aug 26
06:11 PM (IST) Aug 26
ಸಾಮಾಜಿಕ ಹೋರಾಟಗಾರ ವಸಂತ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕರ್ನಾಟಕ SYRO ಮಲಬಾರ್ ಕೆತೋಲಿಕ್ ಅಸೋಸಿಯೇಷನ್ ದೂರು ದಾಖಲಿಸಿದೆ.
05:47 PM (IST) Aug 26
05:27 PM (IST) Aug 26
ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಹೆಚ್ಚುತ್ತಿದ್ದು, ದುರಸ್ತಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ. ತೇಪೆ ಹಾಕಿದ ಕೆಲವೇ ದಿನಗಳಲ್ಲಿ ಗುಂಡಿಗಳು ಮತ್ತೆ ಕಾಣಿಸಿಕೊಳ್ಳುತ್ತಿವೆ ಎಂದು ಪ್ರಯಾಣಿಕರು ದೂರಿದ್ದಾರೆ.
05:06 PM (IST) Aug 26
ಶಿವಮೊಗ್ಗ ಜಿಲ್ಲೆಯ ಸಿಗಂದೂರು ಬಳಿ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ವಾಟರ್ ಏರ್‌ಡ್ರೋಮ್ ಆರಂಭಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.
04:59 PM (IST) Aug 26
04:52 PM (IST) Aug 26
04:11 PM (IST) Aug 26
ಚಿಕ್ಕಮಗಳೂರಿನಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ತೆಯನ್ನು ಕೊಲೆಗೈದ ಸೊಸೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಅತ್ತೆ ಸಾಯಿಸಿ ಸಹಜ ಸಾವು ಎಂದು ಎಲ್ಲರನ್ನೂ ನಂಬಿಸಿ ಅಂತ್ಯಕ್ರಿಯೆಯನ್ನೂ ನಡೆಸಿದ್ದಾರೆ. ಆದರೆ, ಅತ್ತೆ ಸತ್ತು 10 ದಿನಗಳಾದ ಬಳಿಕ ಸೊಸೆಯ ಕೊಲೆಯ ಸಣ್ಣ ಸುಳಿವು ಸಿಕ್ಕಿದೆ.
04:07 PM (IST) Aug 26
ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಅವರು ಮದುವೆಯಾಗಿ ಇಂದಿಗೆ 18 ವರ್ಷಗಳಾಗಿವೆ. ಪತ್ನಿಯನ್ನು ಕಳೆದುಕೊಂಡ ಬಳಿಕ ಇದು 3ನೇ ವಾರ್ಷಿಕೋತ್ಸವ. ಪತ್ನಿಗಾಗಿ ಹಾಡು ಹಾಡಿದ್ದಾರೆ ನಟ. ವಿಡಿಯೋ ವೈರಲ್ ಆಗಿದೆ.
04:03 PM (IST) Aug 26
03:54 PM (IST) Aug 26
03:25 PM (IST) Aug 26
2024ರ ಹಾಸನಾಂಬೆ ದರ್ಶನದ ವೇಳೆ ಪಾಸ್ ವ್ಯವಸ್ಥೆಯಿಂದ ಉಂಟಾದ ಅನಾನುಕೂಲತೆಗಳ ಹಿನ್ನೆಲೆಯಲ್ಲಿ, ಈ ವರ್ಷ ದರ್ಶನ ಪಾಸ್ ವ್ಯವಸ್ಥೆಯನ್ನು ರದ್ದುಗೊಳಿಸುವ ಬಗ್ಗೆ ಹಾಸನದಲ್ಲಿ ಸಭೆ ನಡೆಯಿತು.
03:20 PM (IST) Aug 26
ರೆನಾಲ್ಟ್ ಇಂಡಿಯಾ ಇದೀಗ ಕೈಗರ್ ಕಾರನ್ನು ಹೊಸ ವಿನ್ಯಾಸ, ಸುಧಾರಿತ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಕೇವಲ 6.29 ಲಕ್ಷ ರೂಪಾಯಿ ಬೆಲೆಯಲ್ಲಿ ಕಾರು ಲಭ್ಯವಿದೆ.
02:56 PM (IST) Aug 26
ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದಕ್ಕೆ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
02:50 PM (IST) Aug 26
ದರ್ಶನ್ ಅಭಿನಯದ 'ಡೆವಿಲ್' ಸಿನಿಮಾದ ಮೊದಲ ಹಾಡು 'ಇದ್ರೆ ನೆಮ್ದಿಯಾಗಿರ್ಬೇಕ್..' ಬಿಡುಗಡೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಈ ಹಾಡು ಸಂಚಾರಿ ವಿಜಯ್ ನಟಿಸಿದ್ದ 'ನಾನು ಅವನಲ್ಲ.. ಅವಳು' ಸಿನಿಮಾದ ಹಾಡಿನ ಟ್ಯೂನ್‌ಗೆ ಹೋಲುತ್ತದೆ ಎಂಬ ಆರೋಪ ಕೇಳಿಬಂದಿದೆ.
02:13 PM (IST) Aug 26
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಸುಂಕಗಳು ಅಮೆರಿಕದಲ್ಲಿರುವ ಭಾರತೀಯರನ್ನು ತೀವ್ರವಾಗಿ ತೊಂದರೆಗೊಳಿಸುತ್ತಿವೆ. ಭಾರತದಿಂದ ಬರುವ ಪ್ರತಿಯೊಂದು ಉತ್ಪನ್ನದ ಬೆಲೆಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ವಿಷಯವನ್ನು ಓರ್ವ ಪ್ರವಾಸಿ ಭಾರತೀಯರು ವಿಡಿಯೋದಲ್ಲಿ ತಿಳಿಸಿದ್ದಾರೆ.
02:00 PM (IST) Aug 26
ಎಲಾನ್ ಮಸ್ಕ್ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ತಮ್ಮ ಗ್ರಾಕ್ ಇಮ್ಯಾಜಿನ್ AI ಟೂಲ್ ಇದೀಗ ಎಲ್ಲರಿಗೂ ಉಚಿತವಾಗಿ ನೀಡಿದ್ದಾರೆ. ಮೊದಲು ಪೇಯ್ಡ್ ಸಬ್‌ಸ್ಕ್ರೈಬರ್‌ಗೆ ಮಾತ್ರವಿಲ್ಲ ಈ ಎಐ ಟೂಲ್ ಎಲ್ಲರಿಗೂ ಇದೀಗ ಉಚಿತವಾಗಿದೆ.
01:45 PM (IST) Aug 26
ಧರ್ಮಸ್ಥಳ ಪ್ರಕರಣದ ತನಿಖೆಯ ಪ್ರಗತಿಯನ್ನು ಡಿಜಿಪಿ ಸಲೀಂ ಅವರು ಗೃಹ ಸಚಿವ ಪರಮೇಶ್ವರ್ ಅವರಿಗೆ ವಿವರಿಸಿದ್ದಾರೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದು, ಎಸ್ಐಟಿಗೆ ಸತ್ಯಾಸತ್ಯತೆ ಹೊರಗೆಡಹಲು ಜವಾಬ್ದಾರಿ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
01:41 PM (IST) Aug 26
01:31 PM (IST) Aug 26
01:09 PM (IST) Aug 26
ಇತ್ತೀಚೆಗೆ ಯುವ ಸಮುದಾಯ ಫೇಮಸ್ ಆಗುವುದಕ್ಕೋಸ್ಕರ ರಸ್ತೆಯಲ್ಲಿ ಸ್ಟಂಟ್ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದೆ. ಅದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಈ ವಾರ ವೈರಲ್ ಆದ ದಂಡ ವಿಧಿಸಲ್ಪಟ್ಟ ವಿಡಿಯೋಗಳು ಇಲ್ಲಿವೆ ನೋಡಿ.
01:01 PM (IST) Aug 26
12:58 PM (IST) Aug 26
12:55 PM (IST) Aug 26
12:49 PM (IST) Aug 26
ಕರ್ನಾಟಕದಲ್ಲಿ ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗುತ್ತಿರುವ ಸಂಖ್ಯೆ ಕಳೆದ ಹತ್ತು ತಿಂಗಳಿನಲ್ಲಿ 26 ಸಾವಿರ ದಾಖಲಾಗಿದೆ. ಈ ಹಿಂದಿನ ಅಂಕಿ ಅಂಶಗಳು ಕೂಡ ಬೆಚ್ಚಿ ಬೀಳಿಸುತ್ತಿವೆ. ಇದಕ್ಕೆ ಕಾರಣವೇನು?
12:20 PM (IST) Aug 26
ಬಾಂಗ್ಲಾದೇಶದಲ್ಲಿ ಕೇವಲ 7 ತಿಂಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ಅತ್ಯಾ*ರ ಪ್ರಕರಣ ಶೇಕಡಾ 75ರಷ್ಟು ಏರಿಕೆ ಕಂಡಿದೆ. ಬಾಂಗ್ಲಾದಲ್ಲಿನ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ.
12:08 PM (IST) Aug 26