ಭರ್ಜರಿ ಗಿಫ್ಟ್ ಕೊಟ್ಟ ಎಲಾನ್ ಮಸ್ಕ್, ಗ್ರಾಕ್ ಇಮ್ಯಾಜಿನ್ ಎಐ ಟೂಲ್ ಎಲ್ಲರಿಗೂ ಉಚಿತ
ಎಲಾನ್ ಮಸ್ಕ್ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ತಮ್ಮ ಗ್ರಾಕ್ ಇಮ್ಯಾಜಿನ್ AI ಟೂಲ್ ಇದೀಗ ಎಲ್ಲರಿಗೂ ಉಚಿತವಾಗಿ ನೀಡಿದ್ದಾರೆ. ಮೊದಲು ಪೇಯ್ಡ್ ಸಬ್‌ಸ್ಕ್ರೈಬರ್‌ಗೆ ಮಾತ್ರವಿಲ್ಲ ಈ ಎಐ ಟೂಲ್ ಎಲ್ಲರಿಗೂ ಇದೀಗ ಉಚಿತವಾಗಿದೆ.

ಗ್ರಾಕ್ ಇಮ್ಯಾಜಿನ್: ಎಲ್ಲರಿಗೂ ಉಚಿತ
ಎಲಾನ್ ಮಸ್ಕ್ ತಮ್ಮ ಹೊಸ AI ಟೂಲ್ ಗ್ರಾಕ್ ಇಮ್ಯಾಜಿನ್ ಈಗ ಎಲ್ಲರಿಗೂ ಉಚಿತವಾಗಿ ನೀಡಿದ್ದಾರೆ. ಈ ಟೂಲ್ ಈ ಹಿಂದೆ ಪೇಯ್ಡ್ ಸಬ್ಸ್ಕ್ರೈಬರ್‌ಗಳಿಗೆ ಮಾತ್ರ ಲಭ್ಯವಿತ್ತು. ಈ ಘೋಷಣೆ ವಿಶ್ವಾದ್ಯಂತ ಕಂಟೆಂಟ್ ಕ್ರಿಯೇಟರ್‌ಗಳು, ಕಲಾವಿದರು ಮತ್ತು ಮಾರ್ಕೆಟರ್‌ಗಳಿಗೆ ಒಂದು ವರದಾನವಾಗಿದೆ. ಮೊದಲು ಪಾವತಿ ಮಾಡಿ ಈ ಟೂಲ್ ಬಳಕೆ ಮಾಡಬೇಕಿತ್ತು. ಆದರೆ ಇದೀಗ ಸಂಪೂರ್ಣ ಉಚಿತವಾಗಿ ನೀಡಲಾಗಿದೆ.
ಗ್ರಾಕ್ ಇಮ್ಯಾಜಿನ್ ಎಂದರೇನು?
ಗ್ರಾಕ್ ಇಮ್ಯಾಜಿನ್ ಮುಂದುವರಿದ AI ಬಳಸಿ ತಕ್ಷಣ ವೀಡಿಯೊಗಳು ಮತ್ತು ಚಿತ್ರಗಳನ್ನು ರಚಿಸುವ ಒಂದು ಟೂಲ್ ಆಗಿದೆ. ಎಲಾನ್ ಮಸ್ಕ್ ತಮ್ಮ X ಪುಟದಲ್ಲಿ ಒಂದು ಪೋಸ್ಟ್ ಮೂಲಕ ಈ ಘೋಷಣೆಯನ್ನು ದೃಢಪಡಿಸಿದರು. ಹಲವು ಎಐ ಟೂಲ್‌ಗಳು ಲಭ್ಯವಿದೆ. ಈ ಪೈಕಿ ಗ್ರಾಮ್ ಇಮ್ಯಾಜಿನ್ ಪರಿಣಾಮಕಾರಿಯಾಗಿ ಫೋಟೋ ಹಾಗೂ ವಿಡಿಯೋ ಸೃಷ್ಟಿಸುತ್ತದೆ.
ಗ್ರಾಕ್ ಇಮ್ಯಾಜಿನ್‌ನ ವೈಶಿಷ್ಟ್ಯಗಳು
ಈ ಟೂಲ್ ವಿವಿಧ AI ಮಾದರಿಗಳನ್ನು ಸಂಯೋಜಿಸುತ್ತದೆ. ಇದರ ವೈಶಿಷ್ಟ್ಯಗಳು: ಉತ್ತಮ ಗುಣಮಟ್ಟದ ಚಿತ್ರಗಳನ್ನು ರಚಿಸುವುದು, 6-ಸೆಕೆಂಡ್ ವೀಡಿಯೊಗಳನ್ನು ರಚಿಸುವುದು. ಅತೀ ವೇಗದಲ್ಲಿ ಹಾಗು ಸುಲಭದಲ್ಲಿ ಪೋಟೋ ಹಾಗೂ ವಿಡಿಯೋಗಳನ್ನು ಗ್ರಾಗ್ ಇಮ್ಯಾಜಿನ್ ಟೂಲ್ ನೀಡಲಿದೆ.
ಬಳಕೆದಾರರ ಪ್ರತಿಕ್ರಿಯೆ
ಗ್ರಾಕ್ ಇಮ್ಯಾಜಿನ್ ಉಚಿತವಾಗಿ ಲಭ್ಯವಾದ್ದರಿಂದ, ಬಳಕೆದಾರರು ಉತ್ಸುಕರಾಗಿದ್ದಾರೆ. ಇದು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ. ಪ್ರಮುಖವಾಗಿ ಯೂಟ್ಯೂಬ್ ಸೇರಿದಂತೆ ಇತರ ಕಂಟೆಂಟ್ ಕ್ರಿಯೇಟರ್ಸ್ ಈ ಟೂಲ್ ಬಳಸಿ ತಮ್ಮ ವಿಡಿಯೋಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಿದೆ.
AI ಶಕ್ತಿ ಎಲ್ಲರಿಗೂ
ಎಲಾನ್ ಮಸ್ಕ್‌ರ ಈ ಕ್ರಮವು AI-ಚಾಲಿತ ಸೃಜನಶೀಲತೆಯನ್ನು ಎಲ್ಲರಿಗೂ ಸಿಗುವಂತೆ ಮಾಡಿದ್ದಾರೆ. ಯಾವುದೇ ಪಾವತಿಯಿಲ್ಲದೆ ಉಚಿತವಾಗಿ ಇದೀಗ ಗ್ರಾಗ್ ಇಮ್ಯಾಜಿನ್ ಎಐ ಟೂಲ್‌ನ್ನು ಬಳಕೆ ಮಾಡಬಹುದು.