ಶಿವಮೊಗ್ಗ ಜಿಲ್ಲೆಯ ಸಿಗಂದೂರು ಬಳಿ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ವಾಟರ್ ಏರ್‌ಡ್ರೋಮ್ ಆರಂಭಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. 

ಶಿವಮೊಗ್ಗ: ಇತ್ತೀಚೆಗಷ್ಟೇ ಸಿಗಂದೂರು ಸೇತುವೆಯನ್ನು ಉದ್ಘಾಟನೆ ಮಾಡಲಾಗಿತ್ತು. ಸಿಂಗದೂರು ಸೇತುವೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಈ ಭಾಗಕ್ಕೆ ಆಗಮಿಸುತ್ತಿದ್ದಾರೆ. ಈ ಹಿಂದೆ ಬಳಸಲಾಗುತ್ತಿದ್ದ ಲಾಂಚ್ ಮುಂದುವರಿಸಲಾಗುತ್ತೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದೀಗ ಸಿಗಂದೂರು ಬಳಿಯ ಲಿಂಗನಮಕ್ಕಿ ಜಲಾಶಯದ ಶರವಾತಿ ಹಿನ್ನೀರಿನಲ್ಲಿ ವಾಟರ್ ಏರ್‌ಡ್ರೋಮ್ ಆರಂಭಿಸಲು ಕೇಂದ್ರ ವಿಮಾನಯಾನ ಸಚಿವಾಯ ಯೋಜನೆಯೊಂದನ್ನು ರೂಪಿಸಿದೆ. ಈ ಮೂಲಕ ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. ಕರ್ನಾಟಕದ ಏಳು ಭಾಗದಲ್ಲಿ ಕೇಂದ್ರ ಸಚಿವಾಲಯ ವಾಟರ್ ಏರ್‌ಡ್ರೋಮ್ ಆರಂಭಿಸಲು ಸ್ಥಳವನ್ನು ಗುರುತಿಸಿದೆ.

ವಾಟರ್ ಏರ್‌ಡ್ರೋಮ್‌ಗೆ ಕರ್ನಾಟಕದ ಏಳು ಸ್ಥಳಗಳು

ಕಾರವಾರದ ಕಾಳಿ ನದಿ ಸೇತುವೆ, ಉಡುಪಿಯ ಬೈಂದೂರು, ಮಲ್ಪೆ, ಮೈಸೂರಿನ ಕಬಿನಿ ಹಿನ್ನೀರು, ಉತ್ತರ ಕನ್ನಡ ಜಿಲ್ಲೆಯ ಸೂಪಾ ಡ್ಯಾಮ್‌ನ ಗಣೇಶಗುಡಿ, ಮಂಗಳೂರು ಮತ್ತು ಸಿಗಂದೂರು ಸಮೀಪ ವಾಟರ್ ಏರೋ ಡ್ರೋಮ್

ವಿಸ್ತಾರವಾದ ನದಿಗಳು, ಜಲಾಶಯಗಳ ಹಿನ್ನೀರ ಭಾಗಗಳಲ್ಲಿ ನೀರಿನ ಮೇಲೆ ಸಣ್ಣ ಪ್ರಮಾಣದ ವಿಮಾನಗಳು ಲ್ಯಾಂಡ್ ಮತ್ತು ಟೇಕಾಫ್ ಮಾಡಲು ನಿರ್ಧಿಷ್ಟ ಸ್ಥಳವನ್ನು ಗುರುತಿಸಲಾಗುತ್ತದೆ. ಈ ಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತದೆ. ಇದನ್ನು ವಾಟರ್ ಏರೋಡ್ರೋಮ್ ಎಂದು ಕರೆಯಲಾಗುತ್ತದೆ. ಕೇಂದ್ರ ಸರ್ಕಾರದ ಉಡಾನ್ 5.5 ಯೋಜನೆಗೆ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ. ಕಬಿನಿ ಮತ್ತು ಮಂಗಳೂರು ಭಾಗದಲ್ಲಿ ಏರ್‌ಡ್ರೋಮ್ ಸ್ಥಾಪನೆಗೆ ಹಲವು ಕಂಪನಿಗಳು ಆಸಕ್ತಿಯನ್ನು ತೋರಿಸಿವೆ. ಇನ್ನುಳಿದ ಸ್ಥಳಗಳಿಗೆ ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ.

2ನೇ ಅತಿ ಉದ್ದದ ಕೇಬಲ್ ಆಧಾರಿತ ಸೇತುವೆ

ದೇಶದಲ್ಲಿಯೇ 2ನೇ ಅತಿ ಉದ್ದದ ಕೇಬಲ್ ಆಧಾರಿತ ಸೇತುವೆ ಎಂಬ ಹೆಗ್ಗಳಿಕೆಗೆ ಸೇತುವೆ ಪಾತ್ರವಾಗಿದೆ. ರಾಜ್ಯದ ಅತಿ ದೊಡ್ಡ ತೂಗು ಸೇತುವೆ ಎಂಬ ಖ್ಯಾತಿಗೆ ಇದು ಪಾತ್ರವಾಗಿದೆ. ₹473 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆಯನ್ನು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದ್ದಾರೆ. ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಸಾಗುವ ಹಾದಿಗೆ ಈ ಸೇತುವೆ ನಿರ್ಮಿಸಲಾಗಿದೆ. ಇದೀಗ ವಾಟರ್ ಏರ್‌ಡ್ರೋಮ್‌ ಆರಂಭ ಈ ಭಾಗದ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ನಂಬಲಾಗಿದೆ.

ದೇಶದ 2ನೇ ಅತಿ ಉದ್ದದ ಕೇಬಲ್ ಬ್ರಿಡ್ಜ್‌:

ಗುಜರಾತ್ ನ ಓಖಾ ಮುಖ್ಯಪ್ರದೇಶದಿಂದ ಬೇಯ್ತ್ ಧ್ವಾರ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಸುದರ್ಶನ ಸೇತು, ದೇಶದ ಅತಿ ಉದ್ದದ ಕೇಬಲ್ ಬ್ರಿಡ್ಜ್‌ ಆಗಿದೆ. ಇದು ₹980 ಕೋಟಿ ವೆಚ್ಚದಲ್ಲಿ 2024ರಲ್ಲಿ ಅನಾವರಣಗೊಂಡಿದ್ದು 2.32 ಕಿ.ಮೀ. ಚತುಷ್ಪಥ ಹೊಂದಿದೆ. ₹423.15 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಸೇತುವೆ, 2.44 ಕಿ.ಮೀ.ಉದ್ದ (ಇದರಲ್ಲಿ 740 ಮೀಟರ್ ಮಾತ್ರ ಕೇಬಲ್ ಸೇತುವೆ), ದ್ವಿಪಥ ಹೊಂದಿದೆ. 

3 ಕಡೆ 1.5 ಮೀಟರ್ ಅಗಲದ ಪುಟ್ ಪಾತ್ ಕೂಡ ಇದೆ. 140 ಮೀಟರ್ ಅಂತರವನ್ನು 4 ಫೌಂಡೇಶನ್ ಮೇಲೆ ಕವರ್ ಮಾಡಲಾಗಿದೆ. ಪ್ರತಿ ಪಿಲ್ಲರ್ ಫೌಂಡೇಶನ್ 177 ಮೀಟರ್ ಅಂತರವಿದೆ. ಈ ಸೇತುವೆಗೆ 30 ಮೀಟರ್ ಅಂತರದಲ್ಲಿ 80 ಪಿಲ್ಲರ್ ಫೌಂಡೇಷನ್ ಹಾಕಬೇಕಿತ್ತು. ಆದರೆ, ಇದನ್ನು 19 ಫಿಲ್ಟರ್ ಫೌಂಡೇಷನ್‌ ನಲ್ಲಿ ಮುಗಿಸಲಾಗಿದೆ. 177, 105, 93 ಮೀಟರ್ ಅಂತರದಲ್ಲಿ ಪಿಲ್ಲರ್‌ಗಳಿವೆ.

ಇದನ್ನೂ ಓದಿ: Sigandur Bridge Inauguration: ಸಿಗಂದೂರು ಸೇತುವೆ ಬರೀ ಸಂಪರ್ಕವಲ್ಲ, ಬದುಕಿಗೆ ಬೆಳಕು: ಸಂಸದ ಬಿವೈ ರಾಘವೇಂದ್ರ