ಸಾಮಾಜಿಕ ಹೋರಾಟಗಾರ ವಸಂತ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕರ್ನಾಟಕ SYRO ಮಲಬಾರ್ ಕೆತೋಲಿಕ್ ಅಸೋಸಿಯೇಷನ್ ದೂರು ದಾಖಲಿಸಿದೆ.

ದಕ್ಷಿಣ ಕನ್ನಡ: ಸಾಮಾಜಿಕ ಹೋರಾಟಗಾರನಾಗಿ ಗುರುತಿಸಿಕೊಂಡಿರುವ ವಸಂತ್ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕರ್ನಾಟಕ SYRO ಮಲಬಾರ್ ಕೆತೋಲಿಕ್ ಅಸೋಸಿಯೇಷನ್ ಈ ದೂರು ದಾಖಲಿಸಿದೆ. ಬೆಳ್ತಂಗಡಿ ತಾಲೂಕಿನ ಕ್ರೈಸ್ತರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಅಸೋಶಿಯೇಷನ್ ಆರೋಪಿಸಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸಿದ ಧರ್ಮ ಸಂರಕ್ಷಣಾ ಸಭೆಯಲ್ಲಿ ಮಾತನಾಡಿದ್ದ ವಸಂತ್ ಗಿಳಿಯಾರ್, ಮಿಶನರಿಗಳ ಪ್ರಭಾವದಿಂದ ಹಿಂದುಗಳ ತುಳಸಿ ಕಟ್ಟೆ ಒಡೆಯಲಾಗಿದೆ. ನಂತರ ಆ ಸ್ಥಳದಲ್ಲಿ ಶಿಲುಬೆ ಇರಿಸಲಾಗಿದೆ. 1983 ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಪ್ರಾರಂಭವಾದ ನಂತರ ಈ ಕೃತ್ಯ ನಿಂತಿದೆ ಎಂದು ಹೇಳಿದ್ದರು.

ಆಮಿಷಗಳಿಗೆ ಬಲಿಯಾಗದಂತೆ ಗ್ರಾಮ ಅಭಿವೃದ್ಧಿ ಯೋಜನೆ ನೋಡಿಕೊಂಡಿದೆ ಎಂದ ವಸಂತ್ ಗಿಳಿಯಾರ್ ಹೇಳಿದ್ದರು. ಸಾರ್ವಜನಿಕವಾಗಿ ಸುಳ್ಳು ಆರೋಪ ಮಾಡಿದ್ದಾರೆ. ದಂಗೆ ಹೇಳುವಂತೆ ಪ್ರೇರೇಪಿಸುವ ಉದ್ದೇಶದಿಂದ ಈ ಭಾಷಣ ಮಾಡಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ನಮಗೆ ಉತ್ತಮ ಅಭಿಪ್ರಾಯವಿದೆ. ಅದರ ಗಿಳಿ ಯಾರ್ ಕಟ್ಟುಕಥೆ ಹೇಳಿದ್ದಾರೆ ಎಂದು ಕರ್ನಾಟಕ SYRO ಮಲಬಾರ್ ಕೆತೋಲಿಕ್ ಅಸೋಸಿಯೇಷನ್ ಹೇಳಿದೆ.

ಈ ಷಡ್ಯಂತ್ರದ ಹಿಂದೆ ಭಯೋತ್ಪಾದಕ ಸಂಘಟನೆಗಳು

ಧರ್ಮಸ್ಥಳದ ಪರವಾಗಿ ಮಾತನಾಡಿದ ವಸಂತ ಗಿಳಿಯಾರ್, ಸೌಜನ್ಯ ಪ್ರಕರಣದ ಹೆಸರಿನಲ್ಲಿ ಕ್ಷೇತ್ರವನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಧರ್ಮಸ್ಥಳದ ಖಾವಂದರು ಮಾಡಿದ ಸಾಮೂಹಿಕ ವಿವಾಹ, ಮತಾಂತರ ತಡೆಯಂತಹ ಸಾಮಾಜಿಕ ಕಾರ್ಯಗಳನ್ನು ಸ್ಮರಿಸಿದ ಅವರು, ಹೋರಾಟದ ದಿಕ್ಕು ತಪ್ಪಿಸಲು ದೆಹಲಿಯಲ್ಲಿ ಕಾಂಗ್ರೆಸ್ ಸಂಸದರ ಜೊತೆ ಸೇರಿ ಕಥೆ ಸೃಷ್ಟಿಸಲಾಗಿದೆ ಎಂದು ದೂರಿದ್ದಾರೆ. ಈ ಷಡ್ಯಂತ್ರದ ಹಿಂದೆ ಭಯೋತ್ಪಾದಕ ಸಂಘಟನೆಗಳು ಮತ್ತು ವಿದೇಶಿ ಹಣದ ಕೈವಾಡವಿದ್ದು, ಪ್ರಕರಣವನ್ನು NIA ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದ್ದಾರೆ. ಕಾನೂನು ಶಿಕ್ಷೆ ನೀಡದಿದ್ದರೂ, ಅಣ್ಣಪ್ಪ ಸ್ವಾಮಿಯ ಶಿಕ್ಷೆ ಭಯಂಕರವಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.

ಮದುವೆಯಾಗುವಾಗ ಬಂಗಾರದ ತಾಳಿಯನ್ನ ಕೊಳ್ಳಲು ಸಾಧ್ಯವಾಗದೇ ಇದ್ದವರಿಗೆ ಸಾಮೂಹಿಕ ವಿವಾಹ ಮಾಡಿಸುವಂತ ಕೆಲಸ ಮಾಡಿದವರು ಖಾವಂದರು. 1983 ರ ಹೊತ್ತಿಗೆ ಕ್ರೈಸ್ತರ ಮಿಷನರಿಗಳ ಪ್ರಭಾವದಿಂದ ತುಳಸಿ ಕಟ್ಟೆ ಹೊಡೆದ ಶಿಲುಬೆ ನಿಲ್ಲಿಸಿದ್ರು. ಬಳಿಕ ಯಾರು ಅನ್ಯ ಧರ್ಮಕ್ಕೆ ಮತಾಂತರ ಆಗದಂತೆ ಮತ್ತೆ ಎಲ್ಲ ಮನೆಗಳ ಮನೆಮುಂದೆ ತುಳಸಿ ನೆಟ್ಟಿಸಿದ್ದು ಧರ್ಮಸ್ಥಳದ ಖಾವಂದರು. ಸಾಕಷ್ಟು ಜನ ಆರ್ಥಿಕ ಪರಿಸ್ಥಿತಿಯನ್ನ ಸುಧಾರಿಸುವಂತೆ ಮಾಡಿದ್ದು, ಧರ್ಮಸ್ಥಳದ ಸಂಘ ಎಂದು ಹೇಳಿದರು.

YouTube video player

ಸಸಿಕಾಂತ್ ಸಿಂಥೆಲ್ ಜೊತೆ ಸಭೆ ಮಾಡಿ ಕಥೆ ರೆಡಿ

ನಾವು ಕೂಡ ಸೌಜನ್ಯ ಪರವಾಗಿಯೇ ಹೋರಾಟ ಮಾಡಿದವರು ನಾವು. ಈಗಲೂ ಸೌಜನ್ಯ ಪರವಾಗಿಯೇ ಹೋರಾಟ ಮಾಡುತ್ತೇವೆ. ಸೌಜನ್ಯ ಹೆಸರಲ್ಲಿ ಧರ್ಮಸ್ಥಳನ್ನ ಗುರಿಯಾಗಿಸಿಕೊಂಡ ಪರಮಪಾಪಿಗಳು ಇವರು. ಯಾರೋ ಹೆಣ್ಣು ಮಗಳು ತಮ್ಮ ಆಸ್ತಿಗಾಗಿ ಬಂದ್ರೆ. ಆ ಹೆಣ್ಣು ಮಗಳನ್ನ ದೆಹಲಿಗೆ ಕರೆದುಕೊಂಡು ಹೋಗಿದ್ರು‌. ಅಲ್ಲಿ ಕಾಂಗ್ರೆಸ್ ಸಂಸದ ಸಸಿಕಾಂತ್ ಸಿಂಥೆಲ್ ಜೊತೆ ಸಭೆ ಮಾಡಿ ಕಥೆ ರೆಡಿ ಮಾಡಿದ್ರು. ನಂತ್ರ ಒಬ್ಬ. ಬುರುಡೆ ಹಿಡಿದುಕೊಂಡು ಬಂದ. ಅವರ ಕೈಯಲ್ಲಿ ಬುರುಡೆ ಕೊಟ್ಟು ಕಳಿಸಿದ್ದೆ ಶಿವ. ಇವರ ನಾಟಕವನ್ನ ಬಿಚ್ಚಿಡಲು ಅವನನ್ನ ಕಳಿಸಿದ್ದು ಧೈವ. ಇನ್ಮುಂದೆ ರಾಜ್ಯದ ಹಳ್ಳಿ ಹಳ್ಳಿಯಲ್ಲೂ ಈ ಸಮಿತಿಯ ಮೂಲಕ ಜಾಗೃತಿ ಮೂಡಿಸುತ್ತೇವೆ. ಈ ಷಡ್ಯಂತ್ರ ಹಿಂದೆ ಭಯೋತ್ಪಾದಕ ಸಂಘಟನೆ ಭಾಗಿಯಾಗಿದೆ. ವಿದೇಶಿ ದುಡ್ಡು ಬಂದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಪ್ರಕರಣ NIA ತನಿಖೆಗೆ ಒಳಪಡಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಕಾನೂನು ಕೊಡುವ ಶಿಕ್ಷೆ ಕಡಿಮೆ ಇರಬಹುದು. ಆದ್ರೆ ಅಣ್ಣಪ್ಪ ಕೊಡುವ ಶಿಕ್ಷೆ ಭಯಂಕರವಾಗಿರುತ್ತದೆ ಎಂದು ವಸಂತ್ ಗಿಳಿಯಾರ್ ಹೇಳಿದರು.