ಸೈನಿಕರ ಜೊತೆ ಮೋದಿ ದೀಪಾವಳಿ, ಧೋನಿ ಫಾರ್ಮ್‌ನಲ್ಲಿ ಕಡಕ್‌ನಾಥ್ ಕೋಳಿ; ನ.14ರ ಟಾಪ್ 10 ಸುದ್ದಿ!

By Suvarna News  |  First Published Nov 14, 2020, 4:46 PM IST

ಪ್ರಧಾನಿ ನರೇಂದ್ರ ಮೋದಿ ಸತತ 7ನೇ ಬಾರಿಗೆ ಸೈನಿಕರೊಂದಿಗೆ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಟಿಕ್‌ಟಾಕ್  ಮತ್ತೆ ಭಾರತದಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆ ದಟ್ಟವಾಗುತ್ತಿದೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ 578 ಕೋಟಿ ನೆರೆ ನೆರವು ನೀಡಿದೆ. ದೀಪಾವಳಿ ಹಬ್ಬಕ್ಕೆ ಸುಲಭ EMI ಪ್ಲಾನ್ ಘೋಷಿಸಿದ ಜೀಪ್ ಕಂಪಾಸ್, ನಿರೂಪಕನ ರೋಮ್ಯಾಟಿಂಕ್ ಫೋಟೋಶೂಟ್ ಸೇರಿದಂತೆ ನವೆಂಬರ್ 14ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.


ಸತತ 7ನೇ ಬಾರಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಮೋದಿ!...

Latest Videos

undefined

ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಬಾರಿಯೂ ಭಾರತೀಯ ಸೇನಾ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಅವರು ದೀಪಾವಳಿ ಆಚರಿಸಲು ರಾಜಸ್ಥಾನದ ಜೈಸಲ್‌ಮೇರ್‌ಗೆ ತಲುಪಿದ್ದಾರೆ. ಅವರೊಂದಿಗೆ ಸೇನಾ ಮುಖ್ಯಸ್ಥ ಜನರಲ್ ಎಂ. ಎಂ. ನರವಣೆ , ಬಿಎಸ್‌ಎಫ್‌ ಮಹಾ ನಿರ್ದೇಶಕ ರಾಕೇಶ್ ಅಸ್ಥಾನಾ ಕೂಡಾ ಇದ್ದರು. 

ನಿಯಂತ್ರಣಕ್ಕೆ ಬಾರದ ಕೊರೋನಾ, ಅಮೆರಿಕದಲ್ಲಿ ಒಂದು ತಿಂಗಳು ಲಾಕ್‌ಡೌನ್?...

ಕೊರೋನಾ ಲಸಿಕೆ ಪರಿಣಾಮಕಾರಿ ಎಂಬ ಸುದ್ದಿ ಬೆನ್ನಲ್ಲೇ ಮಾರುಕಟ್ಟೆ ಚೇತರಿಕೆ. ಕಠಿಣ ಮಾರ್ಗಸೂಚಿ ಡಿಸ್ನಿ ಆರಂಭವಾಗೋದು ಡೌಟ್. ಕೊರೋನಾ ನಿಯಂತ್ರಿಸಲು ಅಮೆರಿಕದಲ್ಲಿ ಲಾಕ್‌ಡೌನ್. 

ಓವೈಸಿ ನಡೆಯಿಂದ ಬೆಚ್ಚಿ ಬಿದ್ದ ಮಮತಾ!...

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ 5 ಸ್ಥಾನ ಗೆದ್ದು, ಮುಸ್ಲಿಂ ಮತ ವಿಭಜಿಸುವ ಮೂಲಕ ಮಹಾಗಠಬಂಧನ ಸೋಲಿಗೆ ಕಾರಣಕರ್ತರಾದರು ಎಂದು ವಿಶ್ಲೇಷಿಸಲಾಗುತ್ತಿರುವ ಹೈದರಾಬಾದ್‌ ಸಂಸದ ಒವೈಸಿ ಪಕ್ಷ ಎಐಎಂಐಎಂ ಇದೀಗ ಬಂಗಾಳ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸುವುದಾಗಿ ಘೋಷಿಸಿದೆ.

ಕಡಕ್‌ನಾಥ್‌ ಕೋಳಿ ಸಾಕಲು ಮುಂದಾದ ಎಂ ಎಸ್ ಧೋನಿ..!...

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಡಕ್‌ನಾಥ್‌ ಕೋಳಿ ಸಾಕಾಣಿಕೆಗೆ ಮುಂದಾಗಿದ್ದಾರೆ. 

'ಸರಿಗಮಪ' ನಿರೂಪಕನ ರೊಮ್ಯಾಂಟಿಕ್‌ ಫೋಟೋ; ನೆಗೆಟಿವ್ ಕಾಮೆಂಟ್‌ಗೆ ನೋ ಪ್ರಾಬ್ಲಂ!...

5ನೇ ವಿವಾಹ ವಾರ್ಷಿಕೋತ್ಸವಕ್ಕೆ ವಿಶೇಷವಾದ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿದ ಕಿರುತೆರೆ ಜನಪ್ರಿಯ ನಿರೂಪಕ. ಹಾಟ್‌ ಫೋಟೋಗೆ ಟ್ರೋಲ್, 'We dont care'ಎಂದ ದಂಪತಿ.

ಭಾರತದಲ್ಲಿ ಮತ್ತೆ ಟಿಕ್ ‌ಟಾಕ್ ಕಾರುಬಾರು ಶುರುವಾಗತ್ತಾ?...

ಭಾರತೀಯ ಗ್ರಾಹಕರ ಡೇಟಾ ಅಸುರಕ್ಷತೆಯ ಕಾರಣಕ್ಕಾಗಿ ಚೀನಾ ಮೂಲದ 58 ಆ್ಯಪ್‌‌ಗಳ ಮೇಲೆ ಭಾರತ ಸರಕಾರ ನಿಷೇಧ ಹೇರಿತ್ತು. ಇದರಲ್ಲಿ  ಭಾರಿ ಜನಪ್ರಿಯವಾಗಿದ್ದ ಟಿಕ್‌ಟಾಕ್ ಕೂಡ ಇತ್ತು. ಭಾರತ ಸರ್ಕಾರದೊಂದಿಗೆ ಮಾತುಕತೆಯಲ್ಲಿರುವ ಕಂಪನಿ ಮತ್ತೆ ತನ್ನ ಕಾರ್ಯಚರಣೆ ನಡೆಸುವ ಬಗ್ಗೆ ಆಶಾಭಾವನೆಯನ್ನು ಹೊಂದಿದೆ ಎನ್ನಲಾಗಿದೆ. 

ದೀಪಾವಳಿ ಹಬ್ಬಕ್ಕೆ ಸುಲಭ EMI ಪ್ಲಾನ್ ಘೋಷಿಸಿದ ಜೀಪ್ ಕಂಪಾಸ್!...

ಕೊರೋನಾ ವೈರಸ್ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಭಾರತೀಯ ಆಟೋಮೊಬೈಲ್ ಇಂಡಸ್ಟ್ರಿ ಇದೀಗ ಚೇತರಿಸಿಕೊಳ್ಳುತ್ತಿದೆ. ದೀಪಾವಳಿ ಹಬ್ಬಕ್ಕೆ ಚೇತರಿಕೆ ವೇಗ ಹಚ್ಚಿಸಲು ಜೀಪ್ ಕಂಪಾಸ್ ನಿರ್ಧರಿಸಿದೆ. ಇದೀಗ  ಸುಲಭ ಕಂತು ಪ್ಲಾನ್ ಘೋಷಿಸಲಾಗಿದೆ. ಲಕ್ಷಕ್ಕೆ 899 ರೂಪಾಯಿ EMI ಆಫರ್ ಘೋಷಿಸಲಾಗಿದೆ.

ಕರ್ನಾಟಕಕ್ಕೆ ಕೇಂದ್ರದಿಂದ 578 ಕೋಟಿ ನೆರೆ ನೆರವು...

ಒಟ್ಟು 6 ರಾಜ್ಯಗಳಿಗೆ 4,382 ಕೋಟಿ ಸಹಾಯ|ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರೀಯ ನೆರವು ಬಿಡುಗಡೆಗೆ ಅನುಮೋದನೆ| ಕರ್ನಾಟಕವಲ್ಲದೆ ಪಶ್ಚಿಮ ಬಂಗಾಳ, ಒಡಿಶಾ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಸಿಕ್ಕಿಂಗಳಿಗೂ ನೆರವು| 

ಬೆಂಗಳೂರು ತೊರೆದ ಒಳ್ಳೇ ಹುಡುಗ; 'ಬಿಡುವಾಗ ಬೇಸರವಾಯ್ತು'!...

ನಟ ಒಳ್ಳೆ ಹುಡುಗ ಪ್ರಥಮ್ ಮೂರು ವರ್ಷಗಳಿಂದ ಉಳಿದಿದ್ದ ಮನೆ ಖಾಲಿ ಮಾಡಿ, ತಮ್ಮ ಹುಟ್ಟೂರಿಗೆ ತೆರಳಿದ್ದಾರೆ. 
 

click me!