Asianet Suvarna News Asianet Suvarna News

ಕಡಕ್‌ನಾಥ್‌ ಕೋಳಿ ಸಾಕಲು ಮುಂದಾದ ಎಂ ಎಸ್ ಧೋನಿ..!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಡಕ್‌ನಾಥ್‌ ಕೋಳಿ ಸಾಕಾಣಿಕೆಗೆ ಮುಂದಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Former Team India Cricketer MS Dhoni set for poultry farming orders kadaknath Chicks kvn
Author
New delhi, First Published Nov 14, 2020, 9:01 AM IST

ನವದೆಹಲಿ(ನ.14): 13ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಮುಗಿಯುತ್ತಿದ್ದಂತೆ ತವರು ರಾಂಚಿಗೆ ಆಗಮಿಸಿರುವ ಟೀಂ ಇಂಡಿಯಾ ಮಾಜಿ ಆಟಗಾರ ಎಂ.ಎಸ್‌. ಧೋನಿ ಕುಕ್ಕುಟೋದ್ಯಮದತ್ತ ಚಿತ್ತ ಹರಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. 

ಮುಂದಿನ 4 ರಿಂದ 5 ತಿಂಗಳುಗಳ ಕಾಲ ಧೋನಿ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ಈ ವೇಳೆಯಲ್ಲಿ ಧೋನಿ ಪೌಲ್ಟ್ರಿ ಫಾರ್ಮ್ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಧೋನಿ ಈಗಾಗಲೇ 2000 ಕಡಕ್‌ನಾಥ್‌ ಕೋಳಿ ಮರಿಗಳಿಗೆ ಆರ್ಡರ್‌ ಮಾಡಿದ್ದಾರೆ. ರಾಂಚಿಯಲ್ಲಿರುವ ತಮ್ಮ ಸಾವಯವ ಕೇಂದ್ರದಲ್ಲಿ ಕೋಳಿಗಳನ್ನು ಸಾಕಾಣಿಕೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಜಬುವಾದ ಕಡಕ್‌ನಾಥ್‌ ಕೋಳಿ ಸಂಶೋಧನಾ ಕೇಂದ್ರದ ನಿರ್ದೇಶಕ ತೋಮರ್‌ ಎಂಬುವರನ್ನು ಧೋನಿ ಸಂಪರ್ಕಿಸಿದ್ದಾರೆ.

Former Team India Cricketer MS Dhoni set for poultry farming orders kadaknath Chicks kvn

ಕೊರೋನಾ ನಡುವೆ ಕಡಕ್‌ನಾತ್‌ ಕೋಳಿಗೆ ಭಾರೀ ಬೇಡಿಕೆ!

Former Team India Cricketer MS Dhoni set for poultry farming orders kadaknath Chicks kvn

ಧೋನಿ ನೀಡಿರುವ ಆರ್ಡರನ್ನು ಡಿಸೆಂಬರ್ 15ರೊಳಗಾಗಿ ಪೂರೈಸಲಾಗುವುದು ಎಂದು ಕಡಕ್‌ನಾಥ್ ಕೋಳಿ ಸಾಕಾಣಿಕೆದಾರ ವಿನೋದ್ ಮೆಂದಾ ತಿಳಿಸಿದ್ದಾರೆ. ಕಡಕ್‌ನಾಥ್ ಕೋಳಿ ತಳಿಗೆ ತನ್ನದೇ ಆದ ಮಾರುಕಟ್ಟೆಯಿದೆ. ಕಪ್ಪು ಬಣ್ಣದ ಹಾಗೆಯೇ ಕಪ್ಪು ಮಾಂಸ ಹೊಂದಿರುವ ಈ ಕಡಕ್‌ನಾಥ್ ಕೋಳಿಯ ಮಾಂಸ ಸಾಕಷ್ಟು ರುಚಿಕಟ್ಟಾಗಿದ್ದು, ಜಾಗತಿಕ ಮಟ್ಟದಲ್ಲಿ ತನ್ನದೇಯಾದ ಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ.
 

Follow Us:
Download App:
  • android
  • ios