ಅರಬ್ ವ್ಯಕ್ತಿಯ ಸಂದರ್ಶನ ಮಾಡುತ್ತಿದ್ದ ಅಮೆರಿಕದ ವ್ಯಕ್ತಿ ನನಗೆ ಒಬ್ಬರೆ ಪತ್ನಿ ಎಂದಿದ್ದಾನೆ. ಈ ಮಾತು ಹೇಳುತ್ತಿದ್ದಂತೆ ಅರಬ್ ವ್ಯಕ್ತಿಗೆ ನಗು ತಡೆಯಲು ಸಾಧ್ಯವಾಗಿಲ್ಲ. ಕೇವಲ ಒಬ್ಬಳೇ ಪತ್ನಿ ಎಂದು ಮತ್ತೆ ಮತ್ತೆ ನಕ್ಕಿದ್ದಾನೆ. ಕಾರಣ ಈ ಸಕಲವಲ್ಲಭನ ಪತ್ನಿ ಹಾಗೂ ಮಕ್ಕಳ ಸಂಖ್ಯೆಯನ್ನು ಈತನೇ ಬಾಯ್ಬಿಟ್ಟ ವಿಡಿಯೋ ಇಲ್ಲಿದೆ.
ಯುಎಇ(ನ.26) ಮದುವೆ ಜೀವನ ಅಮೂಲ್ಯ ಕ್ಷಣ. ಆದರೆ ಕೆಲವರಿಗೆ ಈ ಕ್ಷಣಗಳು ಮತ್ತೆ ಮತ್ತೆ ಬರುತ್ತದೆ. ಭಾರತ ಸೇರಿದಂತೆ ಬಹುತೇಕ ಕಡೆ ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಕಾನೂನಾತ್ಮಕ, ಅಧಿಕೃತವಾಗಿ ನಿರ್ವಹಣೆ ಮಾಡುವುದು ಕಷ್ಟ. ಆದರೆ ಕೆಲ ರಾಷ್ಟ್ರಗಳಲ್ಲಿ ಬಹು ಪತ್ನಿತ್ವಕ್ಕೆ ಅವಕಾಶವಿದೆ. ಹೀಗೆ ಯುಎಇನ ಸೂಪರ್ ಡ್ಯಾಡ್ ಎಂದೇ ಜನಪ್ರಿಯಗೊಂಡಿರುವ ಮೊಹಮ್ಮದ್ ಅಲ್ ಬಲುಶಿಯನ್ನು ಸಂದರ್ಶನ ಮಾಡಲು ಅಮೆರಿಕ ವ್ಯಕ್ತಿಯೊಬ್ಬ ಆಗಮಿಸಿದ್ದಾನೆ. ಬಲುಶಿ ಪತ್ನಿ, ಮಕ್ಕಳ ಸಂಖ್ಯೆ ಕೇಳಿ ತಲೆ ತಿರುಗಿದ ಸಂದರ್ಶಕನಿಗೆ ನನಗೆ ಒಬ್ಬರೇ ಪತ್ನಿ ಎಂದಿದ್ದಾನೆ. ಈ ಮಾತು ಕೇಳಿಸಿಕೊಂಡ ಬಲುಶಿಗೆ ನಂಬಲು ಸಾಧ್ಯವಾಗುತ್ತಿಲ್ಲ. ಕೇವಲ ಒಬ್ಬರೇ ಪತ್ನಿನಾ? ಅರೆ ಎಂದು ನಗಲು ಶುರುಮಾಡಿದ್ದಾನೆ. ಈತನ ನಗು ಕಂಟ್ರೋಲ್‌ಗೆ ಬರುತ್ತಿಲ್ಲ. ಒಂದು ಪತ್ನಿ ಎಂದು ಹೇಳಿ ಮತ್ತೆ ಮತ್ತೆ ನಗುತ್ತಿರುವ ಈ ಮೊಹಮ್ಮದ್ ಅಲ್ ಬಲುಶಿಯ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಅಲ್ ಬಲುಶಿಗೆ ಮಕ್ಕಳು, ಪತ್ನಿಯರು ಎಷ್ಟಿದ್ದಾರೆ ಗೊತ್ತಾ?
ಯುನೈಟೆಡ್ ಅರಬ್ ಎಮಿರೈಟ್ಸ್‌ನ ಮೊಹಮ್ಮದ್ ಅಲ್ ಬಲುಶಿ ವಯಸ್ಸು 60 ದಾಟಿದರೂ ಉತ್ಸಾಹ, ಚೈತನ್ಯ ಹಾಗೂ ಶಕ್ತಿ ಸಾಮರ್ಥ್ಯಕ್ಕೆ ಯಾವುದೇ ಕೊರತೆ ಇಲ್ಲ. ಅಲ್ ಬಲುಶಿಗೆ 17 ಪತ್ನಿಯರಿದ್ದಾರೆ. ಈ ವಿಡಿಯೋ ರೆಕಾರ್ಡ್ ಮಾಡುವ ಸಂದರ್ಭ ಅಲ್ ಬಲುಶಿ ಮಕ್ಕಳ ಸಂಖ್ಯೆ 84. ಇದೀಗ 90. ಇಲ್ಲಿಗೆ ನಿಂತಿಲ್ಲ. ಅಮೆರಿಕ ವ್ಯಕ್ತಿಯೊಬ್ಬ ಯುಎಇನ ಸೂಪರ್ ಡ್ಯಾಡ್ ಎಂದೇ ಗುರುತಿಸಿಕೊಂಡ ಅಲ್ ಬಲುಶಿ ಸಂದರ್ಶನ ಮಾಡಲು ಆಗಮಿಸಿದ್ದಾನೆ.
ನಿಮಗೆ ಮಕ್ಕಳೆಷ್ಟು ಎಂದು ಕೇಳಿದ್ದಾನೆ. ಇದಕ್ಕೆ ಉತ್ತರಿಸಿದ ಅಲ್ ಬಲುಶಿ, 84 ಮಕ್ಕಳಿದ್ದಾರೆ ಎಂದಿದ್ದಾನೆ. ಶುಭಾಶಯ ಕೋರುತ್ತಿದ್ದಂತೆ ನಸು ನಕ್ಕ ಅಲ್ ಬಲುಶಿ ಜೊತೆಗೆ 17 ಪತ್ನಿಯರಿದ್ದಾರೆ ಎಂದಿದ್ದಾನೆ. ಬಲುಶಿ ಪತ್ನಿ ಹಾಗೂ ಮಕ್ಕಳ ಸಂಖ್ಯೆ ಕೇಳಿಸಿಕೊಂಡ ಅಮೆರಿಕ ಸಂದರ್ಶಕ, ನನಗೆ ಒಬ್ಬರೇ ಪತ್ನಿ ಎಂದಿದ್ದಾನೆ. ಈ ಮಾತು ಅಲ್ ಬಲುಶಿಗೆ ನಗುವನ್ನು ಕಂಟ್ರೋಲ್ ಮಾಡಲು ಸಾಧ್ಯವಾಗಿಲ್ಲ. ಕೇವಲ ಒಬ್ಬಳೇ ಪತ್ನಿ ಎಂದು ಮತ್ತೆ ಮತ್ತೆ ನಗಲು ಆರಂಭಿಸಿದ್ದಾನೆ. ಕೇವಲ ಒಂದೇ ಪತ್ನಿ ಎಂದು ವ್ಯಂಗ್ಯವಾಡಿದ್ದಾನೆ.
ವಿವಾಹಿತ ಪುರುಷರೇ ಗಮನಿಸಿ, ಪತ್ನಿಗೆ ಕಿರಿಕಿರಿ ಉಂಟುಮಾಡುವ ಈ 5 ತಪ್ಪುಗಳನ್ನು ಮಾಡಲೇಬೇಡಿ!
17 ಪತ್ನಿಯರು, 90 ಮಕ್ಕಳನ್ನು ಹೊಂದಿರುವ ಮೊಹಮ್ಮದ್ ಅಲ್ ಬಲುಶಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆ. 17 ಪತ್ನಿಯರಿಗೆ 17 ಮನೆಗಳಿವೆ. ಪ್ರತಿ ಪತ್ನಿಗೂ ಕಾರು ನೀಡಿದ್ದಾನೆ. ಪ್ರತಿ ಮನೆಯಲ್ಲಿ ಮನೆಕೆಲಸದವರಿದ್ದಾರೆ. ಎಲ್ಲಾ ಪತ್ನಿಯರನ್ನು ನೋಡಿಕೊಳ್ಳುತ್ತಿರುವುದಾಗಿ ಅಲ್ ಬಲುಶಿ ಹೇಳಿದ್ದಾನೆ. ಈತನ ಪತ್ನಿಯರ ಪೈಕಿ ಕೆಲವರು ಪಿಲಿಪೈನ್ಸ್, ಮೊರಾಕ್ಕೋ ಮೂಲದವರು ಎಂದಿದ್ದಾನೆ. 17 ಮನೆ, 17ಕುಟುಂಬ, 17 ಪತ್ನಿ ಹಾಗೂ 90 ಮಕ್ಕಳನ್ನು ನೋಡಿಕೊಳ್ಳುತ್ತಿರುವ ಅಲ್ ಬಲುಶಿ ಸಂತೋಷದ ಜೀವನ ನಡೆಸುತ್ತಿದ್ದಾರೆ. 90 ಮಕ್ಕಳ ಪೈಕಿ 60 ಗಂಡು ಮಕ್ಕಳಾಗಿದ್ದರೆ, 30 ಹೆಣ್ಣುಮಕ್ಕಳು.
Arab man with 17 wives laughing at American man with one wife😂 pic.twitter.com/08jwNO7InQ
— Historic Vids (@historyinmemes)
ಒಂದೊಂದು ಪತ್ನಿಯರ ಮನೆಯಲ್ಲಿ ಒಂದೊಂದು ದಿನ ಎಂದರೂ ಅರ್ಥ ತಿಂಗಳೇ ಬೇಕು. ವಿಶೇಷ ಅಂದರೆ ಈತನ ಸಹೋದರರು, ಆಪ್ತರು, ಸಂಬಂಧಿಕರು ಎಲ್ಲರು ನಾಲ್ಕು ಪತ್ನಿಯರಿಗಿಂತ ಹೆಚ್ಚಿದ್ದಾರೆ. ಹೀಗಾಗಿ ಒಂದೇ ಪತ್ನಿ ಎಂದು ಕೇಳಿದಾಗ ವ್ಯಂಗ್ಯವಾಡಿದ್ದಾನೆ. ಈ ವಿಡಿಯೋಗೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ. ಪರ ವಿರೋಧಳು ವ್ಯಕ್ತವಾಗಿದೆ. ಇಲ್ಲಿ ಮಹಿಳೆಯರನ್ನು ಗುಲಾಮರಂತೆ ಕಾಣಲಾಗುತ್ತದೆ. ಈತನ ಪತ್ನಿಯರು ಮಕ್ಕಳ ಹೆರುವ ಫ್ಯಾಕ್ಟರಿಯಾಗಿದ್ದಾರೆ. ನಗುವನ್ನೇ ಮರೆತಿದ್ದಾರೆ ಎಂದು ಟೀಕಿಸಿದ್ದಾರೆ. ಮತ್ತೆ ಕೆಲವರುು ಅವರವರ ಸಾಮರ್ಥ್ಯ ಎಂದಿದ್ದಾರೆ.
ನಟ ಕಮಲ್ ಹಾಸನ್ ನಿರ್ಮಿಸಿದ 5 ಬ್ಲಾಕ್ ಬಸ್ಟರ್ ಸಿನಿಮಾಗಳಿವು