ನವದೆಹಲಿ(ನ.14):  ಅಮೆರಿಕಾ ಕಾರ್‌ಮೇಕರ್ ಜೀಪ್ ಕಂಪಾಸ್ ದೀಪಾವಳಿ ಹಬ್ಬಕ್ಕೆ ವಿಶೇಷ ಕೊಡುಗೆ ಪರಿಚಯಿಸಿದೆ. ಜೀಪ್ ಕಂಪಾಸ್ ಡೀಲರ್‌ಗಳು ಡಿಸ್ಕೌಂಟ್ ಆಫರ್ ನೀಡಿದ್ದರೆ. ಇದೀಗ ಭಾರತದ ಎಲ್ಲಾ ಭಾಗಗಳಲ್ಲಿ ಸುಲಭ EMI ಆಫರ್ ನೀಡಲಾಗಿದೆ.  ಈ ಮೂಲಕ ಕಡಿಮೆ ಮಾಸಿಕ ಕಂತು ಹಾಗೂ ಕಡಿಮೆ ಬಡ್ಡಿದರದ ಪ್ಲಾನ್ ಘೋಷಿಸಿದೆ.

ಬ್ರಿಜ್ಜಾ, ವೆನ್ಯೂ ಪ್ರತಿಸ್ಪರ್ಧಿ, ಬಿಡುಗಡೆಯಾಗುತ್ತಿದೆ ಜೀಪ್ ಕಂಪಾಸ್!

ದೀಪಾವಳಿ ಹಬ್ಬಕ್ಕೆ ಹಲವು EMI ಆಯ್ಕೆ ನೀಡಿದೆ ಜೀಪ್ ಕಂಪಾಸ್ ಕಾರು ಖರೀದಿಸುವ ಗ್ರಾಹಕರಿಗೆ ಪ್ರತಿ ತಿಂಗಳು 22,823 ರೂಪಾಯಿ EMI ಆಯ್ಕೆ ನೀಡಿದೆ. ಇನ್ನು ಹೈಬ್ರಿಡ್ ಕಾರಿನ EMI 1,111 ರೂಪಾಯಿ ಪ್ರತಿ ಲಕ್ಷಕ್ಕೆ  ನೀಡಲಾಗಿದೆ. ಇನ್ನು ಈಸಿ EMI ಆಯ್ಕೆಯನ್ನು ನೀಡಲಾಗಿದೆ. ಕೇವ 899 ರೂಪಾಯಿ ಪ್ರತಿ ಲಕ್ಷ ರೂಪಾಯಿಗೆ ನೀಡಲಾಗಿದೆ.

ಈ ಆಫರ್ ಜೊತೆಗೆ ಗ್ರಾಹಕರು ಶೇಕಡಾ 50 ರಷ್ಟು ಇಎಂಐ ಕಡಿತಗೊಳಿಸವು ಆಫರ್ ಕೂಡ ಲಭ್ಯವಿದೆ. ಆರಂಭಿಕ 3 ತಿಂಗಳು ಶೇಕಡಾ 50 ರಷ್ಟು ಮಾತ್ರ ಇಎಂಐ ಪಾವತಿಸುವ ಆಫರ್ ಕೂಡ ನೀಡಲಾಗಿದೆ. ಮಹಿಳೆಯರಿಗೆ ಮತ್ತೊಂದು ಆಫರ್ ನೀಡಲಾಗಿದೆ. ಮಹಿಳಾ ಗ್ರಾಹಕರಿಗೆ ಕೇವಲ 8.20 ಶೇಕಡಾ ಬಡ್ಡಿಯಲ್ಲಿ ಸಾಲ ಸೌಲಭ್ಯ ಸಿಗಲಿದೆ. ಇನ್ನು ಶಕೇಡಾ 100 ರಷ್ಟು ಆನ್‌ರೋಡ್ ಸಾಲ ಸಿಗಲಿದೆ.