Asianet Suvarna News Asianet Suvarna News

ಓವೈಸಿ ನಡೆಯಿಂದ ಬೆಚ್ಚಿ ಬಿದ್ದ ಮಮತಾ!

 ಬಿಹಾರ ವಿಧಾನಸಭೆ ಚುನಾವಣೆಯಲ್ಲಿ 5 ಸ್ಥಾನ ಗೆದ್ದು, ಮುಸ್ಲಿಂ ಮತ ವಿಭಜಿಸಿದ್ದ ಓವೈಸಿ| ಈಗ ಬಂಗಾಳದಲ್ಲೂ ಸ್ಪರ್ಧೆಗೆ ಒವೈಸಿ ರೆಡಿ| ಮಮತಾಗೆ ಡವಡವ

Asaduddin Owaisi party entry into Bengal likely to unsettle TMC sway over minorities pod
Author
Bangalore, First Published Nov 14, 2020, 7:44 AM IST

ಕೋಲ್ಕತಾ(ನ.14): ಬಿಹಾರ ವಿಧಾನಸಭೆ ಚುನಾವಣೆಯಲ್ಲಿ 5 ಸ್ಥಾನ ಗೆದ್ದು, ಮುಸ್ಲಿಂ ಮತ ವಿಭಜಿಸುವ ಮೂಲಕ ಮಹಾಗಠಬಂಧನ ಸೋಲಿಗೆ ಕಾರಣಕರ್ತರಾದರು ಎಂದು ವಿಶ್ಲೇಷಿಸಲಾಗುತ್ತಿರುವ ಹೈದರಾಬಾದ್‌ ಸಂಸದ ಒವೈಸಿ ಪಕ್ಷ ಎಐಎಂಐಎಂ ಇದೀಗ ಬಂಗಾಳ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸುವುದಾಗಿ ಘೋಷಿಸಿದೆ.

ಇದರಿಂದಾಗಿ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ಸಿಗೆ ನಡುಕ ಆರಂಭವಾಗಿದೆ.

ಬಂಗಾಳದ ಜನಸಂಖ್ಯೆಯಲ್ಲಿ ಶೇ.30ರಷ್ಟುಮುಸ್ಲಿಂ ಮತದಾರರಿದ್ದು, 294 ಕ್ಷೇತ್ರಗಳ ಪೈಕಿ 100ರಿಂದ 110 ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿದ್ದಾರೆ. ಮುಸ್ಲಿಮರು ಹಾಲಿ ತೃಣಮೂಲ ಕಾಂಗ್ರೆಸ್ಸನ್ನು ಬೆಂಬಲಿಸುತ್ತಿದ್ದಾರೆ.

ಈಗ ಒವೈಸಿ ಮತ ವಿಭಜಿಸಿದರೆ, ಬಂಗಾಳದಲ್ಲಿ ಕಮಲ ಅರಳಿಸಲು ಯತ್ನಿಸುತ್ತಿರುವ ಬಿಜೆಪಿಗೆ ಪರೋಕ್ಷವಾಗಿ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.

Follow Us:
Download App:
  • android
  • ios