ಸತತ 7ನೇ ಬಾರಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಮೋದಿ!

First Published 14, Nov 2020, 3:40 PM

ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಬಾರಿಯೂ ಭಾರತೀಯ ಸೇನಾ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಅವರು ದೀಪಾವಳಿ ಆಚರಿಸಲು ರಾಜಸ್ಥಾನದ ಜೈಸಲ್‌ಮೇರ್‌ಗೆ ತಲುಪಿದ್ದಾರೆ. ಅವರೊಂದಿಗೆ ಸೇನಾ ಮುಖ್ಯಸ್ಥ ಜನರಲ್ ಎಂ. ಎಂ. ನರವಣೆ , ಬಿಎಸ್‌ಎಫ್‌ ಮಹಾ ನಿರ್ದೇಶಕ ರಾಕೇಶ್ ಅಸ್ಥಾನಾ ಕೂಡಾ ಇದ್ದರು. ಪಿಎಂ ಆದ ಬಳಿಕ ನರೇಂದ್ರ ಮೋದಿ ಏಳು ವರ್ಷದಿಂದ ನಿರಂತರ ದೇಶದ ಸೈನಿಕರೊಂದಿಗೇ ದೀಪಾವಳಿ ಆಚರಿಸುತ್ತಿದ್ದಾರೆ.  2014 ರಿಂದ ಮೋದಿ ಎಲ್ಲೆಲ್ಲಿ ದೀಪಾವಳಿ ಆಚರಿಸಿದ್ದಾರೆ? ಇಲ್ಲಿದೆ ವಿವರ

23 ಅಕ್ಟೋಬರ್ 2014: ಪಿಎಂ ಆದ ಬಳಿಕ ಸಿಯಾಚಿನ್‌ನಲ್ಲಿ ಮೊದಲ ದೀಪಾವಳಿ ಆಚರಿಸಿದ ನರೇಂದ್ರ ಮೋದಿ. ಸಿಯಾಚಿನ್‌ಗೆ ಭೇಟಿ ನಿಡಿ ಸೈನಿಕರೊಂದಿಗೆ ಸಮಯ ಕಳೆದಿದ್ದ ಪ್ರಧಾನಿ.

11 ನವೆಂಬರ್ 2015- ಅಮೃತಸರದಲ್ಲಿ ಮೋದಿ: ಪ್ರಧಾನ ಮಂತ್ರಿ ಮೋದಿ ಅಮೃತಸರದಲ್ಲಿ ಖಾಸಾದಲ್ಲಿ ಡೊಗ್ರಾಯಿ ವಾರ್ ಮೆಮೋರಿಯಲ್‌ ತಲುಪಿ ದೀಪಾವಳಿ ಆಚರಿಸಿದ್ದರು. ಪಿಎಂ ಮೋದಿ 1965ರ ಭಾರತ- ಪಾಕಿಸ್ತಾನ ಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು.

30 ಅಕ್ಟೋಬರ್ 2016, ಹಿಮಾಚಲಕ್ಕೆ ತಲುಪಿದ್ದ ಮೋದಿ: ಅಂದು ಮೋದಿ ಹಿಮಾಚಲದ ಕಿನೌರ್ ತಲುಪಿದ್ದರು. ಇಲ್ಲಿ ಅವರು ಭಾರತ ಹಾಗೂ ಚೀನಾ ಗಡಿಯಲ್ಲಿ ಸುಮುಡೋ ಹಾಗೂ ಛಾಂಗೋನಲ್ಲಿಮೀರದ  ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು.,

18 ಅಕ್ಟೋಬರ್ 2017: LoCಯಲ್ಲಿ ಗುರೇಜ್‌ ಸೆಕ್ಟರ್‌ನಲ್ಲಿ ದೀಪಾವಳಿ: 2017ರಲ್ಲೂ ನರೇಂದ್ರ ಮೋದಿ ಸೈನಿಕರೊಂದಿಗೇ ದೀಪಾವಖಿ ಆಚರಿಸಿದ್ದರು. ಜಮ್ಮು ಕಾಶ್ಮೀರದ ಗುರೇಜ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದ ಮೋದಿ ಯೋಧರನ್ನು ತಮ್ಮ ಕುಟುಂಬ ಸದಸ್ಯರೆಂದು ಹೇಳಿದ್ದರು.

7 ನವೆಂಬರ್ 2018, ITBP ಯೋಧರೊಂದಿಗೆ ಮೋದಿ: ಉತ್ತರಾಖಂಡ್‌ನ ಹರ್ಷಿಲ್‌ನಲ್ಲಿ ಮೋದಿ ದೀಪಾವಳಿ ಆಚರಿಸಿದ್ದರು, ಬರೋಬ್ಬರಿ 45 ನಿಮಿಷ ಅವರು ಇಲ್ಲಿ ಯೋಧರೊಂದಿಗೆ ಕಳೆದಿದ್ದರು. ಜೊತೆಗೆ ಭಗವಾನ್ ಕೇದಾರನಾಥನಿಗೆ ಪೂಜೆ ಸಲ್ಲಿಸಿದ್ದ ಪಿಎಂ ಇಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದಿದ್ದರು.

27 ಅಕ್ಟೋಬರ್ 2019: LoCಯಲ್ಲಿ ದೀಪಾವಳಿ ಆಚರಣೆ: ರಾಜೌರಿಯ LoC ಬೋಇ ತೆರಳಿದ್ದ ಮೋದಿ ಅಲ್ಲಿನ ಸೈನಿಕರಿಗೆ ಸಿಹಿ ವಿತರಿಸಿ ದೀಪಾವಳಿ ಆಚರಿಸಿದ್ದರು.

14 ಅಕ್ಟೋಬರ್ 2020: ಈ ಬಾರಿ ಪಿಎಂ ಮೋದಿ ರಾಜಸ್ಥಾನದ ಲಾಂಗ್‌ವಾಲಾ ಪೋಸ್ಟ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದಾರೆ