ಪ್ರಧಾನಿ ನರೇಂದ್ರ ಮೋದಿ ಅವರ ‘ಅಪ್ಪುಗೆ ವಿದೇಶಾಂಗ ನೀತಿ’ಯನ್ನು ಟೀಕಿಸುತ್ತ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸಂದೀಪ್ ದೀಕ್ಷಿತ್ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹೆಸರನ್ನು ಪ್ರಸ್ತಾಪಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಇಲಾಖೆ, ‘ಎರಡೂ ದೇಶಗಳ ಸಂಬಂಧ ಗಟ್ಟಿಯಾಗಿದ್ದು ಪರಸ್ಪರ ಗೌರವ ಹೊಂದಿವೆ’ ಎಂದಿದೆ.
ಸುದ್ದಿಗಾರರ ಜತೆ ಮಾತನಾಡಿದ ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್, ‘ನಾವು ಇಟಲಿಯೊಂದಿಗೆ ಬಲವಾದ ಸಂಬಂಧ ಹೊಂದಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಇಟಲಿಯೊಂದಿಗಿನ ನಮ್ಮ ಸಂಬಂಧಗಳು ಎಲ್ಲ ರೀತಿಯಲ್ಲೂ ವಿಸ್ತರಿಸಿವೆ ಮತ್ತು ಬಲಗೊಂಡಿವೆ, ರಾಜತಾಂತ್ರಿಕ ಅಭ್ಯಾಸದ ಭಾಗವಾಗಿ, ನಾವು ನಮ್ಮ ಸಂಬಂಧಗಳನ್ನು ಬಲಪಡಿಸುವುದು ಮುಖ್ಯ. ಪರಸ್ಪರರ ಭಾವನೆಗಳನ್ನು ಗಮನಿಸುತ್ತೇವೆ ಮತ್ತು ಗೌರವಿಸುತ್ತೇವೆ’ ಎಂದರು.
11:15 PM (IST) Aug 16
ಶ್ರೀಲಂಕಾ ವಿರುದ್ಧ ಅಜೇಯ 131 ರನ್ ಸಿಡಿಸಿದ ನಂತರ ದೇವದತ್ ಪಡಿಕ್ಕಲ್ ತೀವ್ರ ಭಾವುಕರಾದರು. ರಾಷ್ಟ್ರೀಯ ತಂಡದಿಂದ ದೂರವಿದ್ದ ಕಳೆದ ಒಂದೂವರೆ ವರ್ಷಗಳಲ್ಲಿ ಪಟ್ಟ ಕಠಿಣ ಪರಿಶ್ರಮ ಮತ್ತು ಅನುಭವಿಸಿದ ಮಾನಸಿಕ ಸಂಘರ್ಷದ ಫಲವೇ ಈ ಶತಕ ಎಂದು ಅವರು ತಿಳಿಸಿದರು.
10:46 PM (IST) Aug 16
ಫ್ಲೈಟ್ ಹತ್ತದೆಯೇ ಭಾರತ, ಆಸ್ಟ್ರೇಲಿಯಾ, ಜಪಾನ್, ಅಮೆಜಾನ್ ಕಾಡು ಮತ್ತು ಪೆಸಿಫಿಕ್ ದ್ವೀಪಗಳಂತಹ ವಿಭಿನ್ನ ಜಗತ್ತಿಗೆ ನಮ್ಮನ್ನು ಕರೆದೊಯ್ಯುವ 5 ಅದ್ಭುತ ಸಿನಿಮಾಗಳ ಲಿಸ್ಟ್ ಇಲ್ಲಿದೆ!
10:36 PM (IST) Aug 16
ಯುಜಿಸಿ NET 2026ರ ಪ್ರಶ್ನೆ ಪತ್ರಿಕೆಯಲ್ಲಿ ಹಲವು ತಪ್ಪುಗಳು ಪತ್ತೆಯಾಗಿದೆ. ಪರಿಣಾಮ ಮೂರು ವಿಷಯಗಳ ಪರೀಕ್ಷೆ ರದ್ದುಗೊಳಿಸಲಾಗಿದೆ. ಇಷ್ಟೇ ಅಲ್ಲ ಮರು ಪರೀಕ್ಷೆಗೆ ದಿನಾಂಕವನ್ನು ಎನ್‌ಟಿಎ ಘೋಷಿಸಿದೆ.
10:21 PM (IST) Aug 16
2027ರ ಏಕದಿನ ವಿಶ್ವಕಪ್ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದೇ ಆರಂಭವಾಗಲಿದ್ದು, ಮಹಾತ್ಮ ಗಾಂಧೀಜಿಯವರಿಗೆ ಐಸಿಸಿ ವಿಶೇಷ ಗೌರವ ಸಲ್ಲಿಸುತ್ತಿದೆ. 14 ತಂಡಗಳ ಈ ಮಹಾಸಮರ ನವೆಂಬರ್ 21 ರಂದು ಮುಕ್ತಾಯಗೊಳ್ಳಲಿದೆ.
10:09 PM (IST) Aug 16
09:49 PM (IST) Aug 16
ಪ್ರಭಾಸ್ ಅಭಿಮಾನಿಗಳು ಬಹಳ ದಿನಗಳಿಂದ ಕಾತುರದಿಂದ ಕಾಯುತ್ತಿರುವ ‘ಸಲಾರ್ 2’ ಸಿನಿಮಾಗೆ ಇದೀಗ ಭರ್ಜರಿ ಅಪ್‌ಡೇಟ್ ಸಿಕ್ಕಿದೆ. ಜೂ.ಎನ್‌ಟಿಆರ್ ಅವರ ಭುಜದ ಗಾಯದಿಂದಾಗಿ ‘ಡ್ರ್ಯಾಗನ್’ ಚಿತ್ರದ ಶೂಟಿಂಗ್ ಮುಂದೂಡಿಕೆಯಾಗಿದೆ.
09:39 PM (IST) Aug 16
08:59 PM (IST) Aug 16
ಮಳೆ ಪೀಡಿತ ಎರಡನೇ ದಿನದಾಟದಲ್ಲಿ ದೇವದತ್ ಪಡಿಕ್ಕಲ್ (167) ಮತ್ತು ಕೆಎಲ್ ರಾಹುಲ್ (82) ಅವರ ಬ್ಯಾಟಿಂಗ್ ನೆರವಿನಿಂದ ಭಾರತ 460/9 ರನ್ ಗಳಿಸಿದೆ. ಲಂಕಾ ಪರ ಪ್ರಭಾತ್ ಜಯಸೂರ್ಯ 4 ವಿಕೆಟ್ ಪಡೆದರೂ, ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.
08:55 PM (IST) Aug 16
08:38 PM (IST) Aug 16
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತಾನು ಧರಿಸಿದ್ದ ಸೀರೆ ತಮ್ಮ ತಾಯಿಯದ್ದು ಎಂದು ತ್ರಿಷಾ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ ತಾಯಿಯ ಸೀರೆಯಲ್ಲೇ ವಿಶೇಷ ಫೋಟೋಶೂಟ್..
08:17 PM (IST) Aug 16
06:51 PM (IST) Aug 16
06:50 PM (IST) Aug 16
ಇಸ್ರೋ ತನ್ನ ನೂತನ ಕುಲಶೇಖರಪಟ್ನಂ ಬಾಹ್ಯಾಕಾಶ ನಿಲ್ದಾಣದ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವ ಮೂಲಕ ಬಾಹ್ಯಾಕಾಶ ವಾಣಿಜ್ಯ ಕ್ಷೇತ್ರವನ್ನು ಖಾಸಗೀಕರಣಗೊಳಿಸುತ್ತಿದೆ. ನಾಸಾ ಮತ್ತು ಸ್ಪೇಸ್‌ಎಕ್ಸ್ ಮಾದರಿಯಂತೆ, ಈ ಕ್ರಮವು ಸಣ್ಣ ಉಪಗ್ರಹಗಳ ಉಡಾವಣೆಯಲ್ಲಿ ಖಾಸಗಿ ಸಹಭಾಗಿತ್ವವನ್ನು ಹೆಚ್ಚಿಸಿ ಇಸ್ರೋಗೆ ಹೆಚ್ಚಿನ ಸಂಶೋಧನೆಗೆ ಅವಕಾಶ ಕಲ್ಪಿಸಲಿದೆ.
06:31 PM (IST) Aug 16
ರಾಮಾಯಣ ದೃಶ್ಯಕಾವ್ಯದ ಮೊದಲ ಭಾಗ 2026ರ ನವೆಂಬರ್ 8ರಂದು ಭಾರತದಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಎರಡನೇ ಭಾಗ 2027ರ ದೀಪಾವಳಿಗೆ ತೆರೆಗೆ ಬರಲಿದೆ. ಒಟ್ಟಿನಲ್ಲಿ, ಅಂದು ಕೋಲಾರದ ಬಸ್ ಡ್ರೈವರ್ ಮಗನಾಗಿ ಬಂದ ಹುಡುಗ, ಇಂದು 4,000 ಕೋಟಿ ರೂಪಾಯಿಯ ಜಾಗತಿಕ ಸಿನಿಮಾವನ್ನು ಮುನ್ನಡೆಸುತ್ತಿದ್ದಾರೆ.
06:26 PM (IST) Aug 16
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬಲಿಷ್ಠ ಸ್ಥಿತಿಯಲ್ಲಿದ್ದರೂ ವರುಣನ ಅಬ್ಬರ ಭಾರತದ ಗೆಲುವಿನ ಆಸೆಗೆ ತಣ್ಣೀರು ಎರಚುವ ಮುನ್ಸೂಚನೆ ನೀಡಿದೆ. ಗಾಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯಕ್ಕೆ ಮಳೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದ್ದು, ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ತಲುಪುವ ಭಾರತದ ಕನಸಿಗೆ ಪೆಟ್ಟು ನೀಡುವ ಸಾಧ್ಯತೆಯಿದೆ.
05:39 PM (IST) Aug 16
ನಟಿ ಶ್ರೀದೇವಿ ದುಬೈನಲ್ಲಿ ಅಕಾಲಿಕವಾಗಿ ನಿಧನರಾದ ಸುದ್ದಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅವರ ಪಾರ್ಥಿವ ದೇಹವನ್ನು ದುಬೈನಿಂದ ಭಾರತಕ್ಕೆ ತರಲು ಹಲವು ಕಾನೂನು ಮತ್ತು ಅಧಿಕೃತ ಪ್ರಕ್ರಿಯೆಗಳು ಪೂರ್ಣಗೊಳಿಸಬೇಕಾಗಿತ್ತು.
05:11 PM (IST) Aug 16
'ರಣವೀರ್ ಸಿಂಗ್ ನಟನೆಯ ಧುರಂಧರ್ ಸಿನಿಮಾ ಜೊತೆ ನಿಮ್ಮ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗುತ್ತಿದೆ ಅಂದಾಗ ಹಲವರು ಭಯಭೀತರಾಗಿದ್ದರು' ಎಂಬ ಮಾತಿಗೆ ಯಶ್ ಮಾರ್ಮಿಕ ಉತ್ತರ ನೀಡಿದ್ದಾರೆ. ರಜತ್ ಶರ್ಮಾ ಪ್ರಶ್ನೆ ಹಾಗೂ ಯಶ್ ಉತ್ತರದ ಮಧ್ಯೆ ಅಲ್ಲೊಂದು ಟ್ವಿಸ್ಟ್ ಇದೆ. ಹಾಗಿದ್ದರೆ ಅದೇನು ನೋಡಿ..
04:54 PM (IST) Aug 16
ಕಾರಿನಲ್ಲಿ ಪುತ್ರನ ಜೊತೆ ಮನೆಗೆ ಮರಳುತ್ತಿದ್ದ ವೇಳೆ ದುರ್ಷರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಹಲವು ಸುತ್ತಿನ ದಾಳಿಯಲ್ಲಿ ಕಾಂಗ್ರೆಸ್ ನಾಯಕ ಹಾಗೂ 24ರ ಹರೆಯದ ಪುತ್ರ ಇಬ್ಬರು ಮೃತಪಟ್ಟಿದ್ದಾರೆ. ಇದೀಗ ಪರಿಸ್ಥಿತಿ ಉದ್ವಿಘ್ನಗೊಂಡಿದೆ.
04:40 PM (IST) Aug 16
03:23 PM (IST) Aug 16
ಟಿವಿಕೆ ನಾಯಕ ವಿಜಯ್ ಅವರ ರಾಜಕೀಯಕ್ಕೆ ನಟಿ ತ್ರಿಶಾ ಅವರ ಸಾಮಿಪ್ಯವು ಹೊಸ ವಿವಾದಕ್ಕೆ ಕಾರಣವಾಗಿದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ತ್ರಿಶಾಗೆ ನೀಡಿದ ಪ್ರಾಮುಖ್ಯತೆಯನ್ನು ವಿರೋಧ ಪಕ್ಷಗಳು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದು, ಈ ಅಸ್ಪಷ್ಟತೆಯು ವಿಜಯ್ ಅವರ ರಾಜಕೀಯ ಇಮೇಜ್‌ಗೆ ಹಾನಿ ಮಾಡುವ ಸಾಧ್ಯತೆಯಿದೆ.
03:00 PM (IST) Aug 16
02:34 PM (IST) Aug 16
ಯುಎಸ್‌ಬಿ ಕೇಬಲ್ ಮೇಲಿರುವ ತ್ರಿಶೂಲದಂತಹ ಚಿಹ್ನೆಯನ್ನು ಹೊಂದಿರುತ್ತದೆ. ಹಾಗೆಯೇ ಈ ಕೇಬಲ್‌ಗಳು ವಿವಿಧ ಬಣ್ಣಗಳಲ್ಲಿಯೂ ಲಭ್ಯವಿರುತ್ತದೆ. ಈ ಚಿಹ್ನೆಯ ಜೊತೆಗೆ ಇರುವ 'SS' ಅಕ್ಷರಗಳು, ಸಂಖ್ಯೆಗಳನ್ನು ಕಾಣಬಹುದು.
01:02 PM (IST) Aug 16
12:47 PM (IST) Aug 16
ಗ್ರಾಮದಲ್ಲಿ ಶ್ರಾವಣ ಮಾಸದ ಐದು ದಿನಗಳ ಕಾಲ ವಿಶಿಷ್ಟ ಆಚರಣೆಯೊಂದನ್ನು ಪಾಲಿಸಲಾಗುತ್ತದೆ. ಈ ಸಮಯದಲ್ಲಿ ಮಹಿಳೆಯರು ತಮ್ಮ ಪತಿಯನ್ನು ಭೇಟಿಯಾಗುವುದಿಲ್ಲ ಮತ್ತು ಮನೆಯಿಂದ ಹೊರಬರುವುದಿಲ್ಲ.
12:24 PM (IST) Aug 16
ಫುಟ್‌ಬಾಲ್‌ಗೆ ಹೆಸರುವಾಸಿಯಾದ ಸ್ಪೇನ್, ಇದೀಗ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದಿದೆ. ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಫಿನ್ಲೆಂಡ್ ತಂಡವನ್ನು ಸೋಲಿಸುವ ಮೂಲಕ, ಸತತ 21ನೇ ಗೆಲುವು ದಾಖಲಿಸಿ ಆಸ್ಟ್ರೇಲಿಯಾದ 23 ವರ್ಷಗಳ ಹಳೆಯ ವಿಶ್ವದಾಖಲೆಯನ್ನು ಮುರಿದಿದೆ.
12:19 PM (IST) Aug 16
ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಈಗ ಸಖತ್ ವೈರಲ್ ಆಗಿದೆ. ನೆಟ್ಟಿಗರು ಆ 'ಒರಟು ನಟ' ಯಾರು ಇರಬಹುದು? ಎಂದು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಆದರೆ ಯಶ್ ಮಾತ್ರ ಎಲ್ಲಿಯೂ ಆ ನಟನ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ, ಸಿಕ್ಕ ಮಾಹಿತಿಯಲ್ಲಿ ಅವರು ಯಾರು ಅಂತ ನಿಮಗೇನಾದ್ರೂ ಗೊತ್ತಾಗುತ್ತಾ ನೋಡಿ..!
12:06 PM (IST) Aug 16
11:09 AM (IST) Aug 16
'ಆಪ್ ಕೀ ಅದಾಲತ್'ನಲ್ಲಿ ರಾಕಿಂಗ್ ಸ್ಟಾರ್ ಕೇವಲ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ, ಬದಲಾಗಿ ಟೀಕೆ ಮಾಡುವವರಿಗೆ ತಮ್ಮ ಸಭ್ಯತೆಯ ಮೂಲಕವೇ ಸೈಲೆಂಟಾಗಿ 'ಟಕ್ಕರ್' ನೀಡಿದರು. ರಶ್ಮಿಕಾ ಹಳೆಯ ಹೇಳಿಕೆ ಕೆದಕಿದ ಪ್ರಶ್ನೆಗೆ ಯಶ್ ಕೊಟ್ಟ ಉತ್ತರವೇನು? ನೋಡಿ..
11:08 AM (IST) Aug 16
ಟೀಂ ಇಂಡಿಯಾ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಕೇವಲ 30 ಟೆಸ್ಟ್ ಪಂದ್ಯಗಳನ್ನು ಆಡಿ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಓದಿ.
10:45 AM (IST) Aug 16
10:07 AM (IST) Aug 16
ಕೋಲ್ಕತ್ತಾದಲ್ಲಿ ಕಾಳಿ ದೇವಿಯ ವೇಷದಲ್ಲಿ ಮಾಡಿದ ನೃತ್ಯವೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ನೃತ್ಯದ ವೇಷಭೂಷಣ ಮತ್ತು ಕೆಲವು ಸ್ಟೆಪ್ಸ್‌ಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ನಂತರ, ಕಾರ್ಯಕ್ರಮ ಆಯೋಜಿಸಿದ್ದ ಕಲಾತಂಡ ಕ್ಷಮೆ ಕೇಳಿದೆ.
09:20 AM (IST) Aug 16
09:01 AM (IST) Aug 16
ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ರೋಗಿಯೊಬ್ಬರ ಪಿತ್ತಕೋಶದಿಂದ ವೈದ್ಯರು 4000ಕ್ಕೂ ಹೆಚ್ಚು ಕಲ್ಲುಗಳನ್ನು ಯಶಸ್ವಿಯಾಗಿ ತೆಗೆದಿದ್ದಾರೆ. ಲ್ಯಾಪರೊಸ್ಕೋಪಿಕ್ ವಿಧಾನದಲ್ಲಿ ನಡೆದ ಈ ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.