MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಗಂಡ-ಹೆಂಡ್ತಿ ಒಬ್ಬರಿಗೊಬ್ರು ಮುಟ್ಟುವಂತಿಲ್ಲ, ಜೋರಾಗಿ ನಗುವಂತಿಲ್ಲ; ವಿಶೇಷ ಆಚರಣೆಯ ಗ್ರಾಮ

ಗಂಡ-ಹೆಂಡ್ತಿ ಒಬ್ಬರಿಗೊಬ್ರು ಮುಟ್ಟುವಂತಿಲ್ಲ, ಜೋರಾಗಿ ನಗುವಂತಿಲ್ಲ; ವಿಶೇಷ ಆಚರಣೆಯ ಗ್ರಾಮ

ಗ್ರಾಮದಲ್ಲಿ ಶ್ರಾವಣ ಮಾಸದ ಐದು ದಿನಗಳ ಕಾಲ ವಿಶಿಷ್ಟ ಆಚರಣೆಯೊಂದನ್ನು ಪಾಲಿಸಲಾಗುತ್ತದೆ. ಈ ಸಮಯದಲ್ಲಿ ಮಹಿಳೆಯರು ತಮ್ಮ ಪತಿಯನ್ನು ಭೇಟಿಯಾಗುವುದಿಲ್ಲ ಮತ್ತು ಮನೆಯಿಂದ ಹೊರಬರುವುದಿಲ್ಲ.

2 Min read
Author : Mahmad Rafik
Published : Aug 16 2026, 12:47 PM IST
Share this Photo Gallery
  • FB
  • TW
  • Linkdin
  • Whatsapp
15
ಗ್ರಾಮದ ವಿಶಿಷ್ಟ ಆಚರಣೆ
Image Credit : Gemini

ಗ್ರಾಮದ ವಿಶಿಷ್ಟ ಆಚರಣೆ

ಪ್ರತಿಯೊಂದು ಊರು ತನ್ನದೇ ಆದ ಆಚರಣೆ ಸಂಪ್ರದಾಯಗಳನ್ನು ಹೊಂದಿರುತ್ತವೆ. ಗ್ರಾಮಸ್ಥರು ಸಹ ನಿಯಮಗಳನ್ನು ಕಠಿಣವಾಗಿ ಆಚರಿಸುತ್ತಾರೆ. ನಿಯಮಗಳ ಉಲ್ಲಂಘನೆಯಾದ್ರೆ ಕಷ್ಟಕ್ಕೆ ಸಿಲುಕುತ್ತಾರೆ ಎಂಬ ನಂಬಿಕೆಯೂ ಆಳವಾಗಿ ಬೇರೂರಿರುತ್ತದೆ. ಒಂದು ನಾವು ನಿಮಗೆ ಅಂತಹವುದೇ ಒಂದು ಗ್ರಾಮದ ಬಗ್ಗೆ ಹೇಳುತ್ತಿದ್ದೇವೆ. ಈ ಗ್ರಾಮದ ಮಹಿಳೆಯರ ಮೇಲೆ ಕೆಲವೊಂದು ದಿನಗಳಲ್ಲಿ ಹಲವು ನಿಬಂಧನೆಗಳಿರುತ್ತವೆ. ಇದೇ ರೀತಿಯಲ್ಲಿಯೇ ಪುರಷರು ಸಹ ಕೆಲವೊಂದು ನಿಯಮಗಳನ್ನು ಪಾಲನೆ ಮಾಡುತ್ತಾರೆ. (ಸಾಂದರ್ಭಿಕ ಚಿತ್ರ)

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಪಿನಿ ಗ್ರಾಮದಲ್ಲಿ 5 ದಿನದ ಉತ್ಸವ
Image Credit : Gemini

ಪಿನಿ ಗ್ರಾಮದಲ್ಲಿ 5 ದಿನದ ಉತ್ಸವ

ಹಿಮಾಚಲ ಪ್ರದೇಶದ ಕುಲ್ಲೂ ಜಿಲ್ಲೆಯ ಪಿನಿ ಎಂಬ ಗ್ರಾಮದಲ್ಲಿ ಇಂದಿಗೂ ಹಲವು ಆಚರಣೆಗಳು ಚಾಲ್ತಿಯಲ್ಲಿವೆ. ಶ್ರಾವಣ ಮಾಸದ ಸೂಚಿತ ಐದು ದಿನಗಳಂದು ಮಹಿಳೆಯರು ತಮ್ಮ ಪತಿಯನ್ನು ಭೇಟಿಯಾಗುವುದಿಲ್ಲ ಮತ್ತು ಹಾಗೆಯೇ ಮನೆಯಿಂದಲೂ ಹೊರಗೆ ಬರಲ್ಲ. ಇಂದಿನ ಯುವ ಸಮುದಾಯ ಇದನ್ನು ಮೂಢನಂಬಿಕೆ ಎಂದು ಕರೆದರೂ, ಪಿನಿ ಗ್ರಾಮಸ್ಥರು ಮಾತ್ರ ಈ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ. (ಸಾಂದರ್ಭಿಕ ಚಿತ್ರ)

Related Articles

Related image1
ಡ್ರ್ಯಾಗನ್ ಶಕ್ತಿಯಿಂದ ಬ್ರಹ್ಮಾಂಡ ರಾಜಯೋಗ; 3 ತಿಂಗಳು 4 ರಾಶಿಗಳಿಗೆ ಅದೃಷ್ಟದ ಕಿರೀಟ
Related image2
ಈ ವರ್ಷದ ನಾಗಪಂಚಮಿಯಂದು 5 ರಾಶಿಗಳಿಗೆ ಸಂಪತ್ತಿನ ಯೋಗ! ಹಣಕಾಸಿನ ಅಡೆತಡೆಗಳೆಲ್ಲಾ ದೂರ
35
ಮಹಿಳೆಯರಿಗಿರೋ ನಿಬಂಧನೆ
Image Credit : Gemini

ಮಹಿಳೆಯರಿಗಿರೋ ನಿಬಂಧನೆ

ಶ್ರಾವಣ ಬಂದ್ರೆ ಪಿನಿ ಗ್ರಾಮದಲ್ಲಿ ಐದು ದಿನಗಳ ಉತ್ಸವ ನಡೆಯುತ್ತದೆ. ಜಾತ್ರೆಯ ಐದು ದಿನಗಳಲ್ಲಿ ಮಹಿಳೆಯರು ಅನಗತ್ಯವಾಗಿ ಗಂಡಂದಿರನ್ನು ಭೇಟಿಯಾಗಲ್ಲ. ಐದು ದಿನ ಮನೆಯಿಂದ ಹೊರಗೆ ಬಾರದೇ ಸರಳ ಜೀವನ ಅಳವಡಿಸಿಕೊಳ್ಳುತ್ತಾರೆ. ಈ ಸಮಯದಲ್ಲಿ ಸಾಧಾರಣ ಕಾಟನ್ ಬಟ್ಟೆಗಳನ್ನು ಧರಿಸುತ್ತಾರೆ. ಆದ್ರೆ ಕೆಲ ಮಹಿಳೆಯರು ಈ ಪದ್ಧತಿಯನ್ನು ಮುಂದಿನ ಪೀಳಿಗೆಯವರು ಪಾಲಿಸಿಲ್ಲ ಎಂದು ಹೇಳುತ್ತಾರೆ. (ಸಾಂದರ್ಭಿಕ ಚಿತ್ರ)

45
ಪುರುಷರಿಗೂ ಉಂಟು ನಿಯಮಗಳು
Image Credit : Gemini

ಪುರುಷರಿಗೂ ಉಂಟು ನಿಯಮಗಳು

ಉತ್ಸವದ ಐದು ದಿನ ಪುರುಷರ ಅನಗತ್ಯವಾಗಿ ಪತ್ನಿಯರೊಂದಿಗೆ ಕಾಲಹರಣ ಮಾಡಲ್ಲ. ಹಾಗೆಯೇ ಈ ಸಮಯದಲ್ಲಿ ಮಾಂಸಾಹಾರ ಸೇವನೆ ಮತ್ತು ಮದ್ಯಪಾನ ಸಹ ಮಾಡಲ್ಲ. ಒಂದು ವೇಳೆ ಧಾರ್ಮಿಕ ನಿಯಮಗಳನ್ನು ಉಲ್ಲಂಘನೆ ಮಾಡಿದ್ರೆ ಗ್ರಾಮಕ್ಕೆ ಅಪಾಯವುಂಟಾಗುತ್ತೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. ಉತ್ಸವದ ಐದು ದಿನದಲ್ಲಿ ಊರಿಗೆ ಹೊರಗಿನವರು ಬರುವಂತಿಲ್ಲ ಎಂಬ ನಿಯಮವನ್ನು ಸಹ ಪಿನಿ ಗ್ರಾಮ ಹೊಂದಿದೆ. (ಸಾಂದರ್ಭಿಕ ಚಿತ್ರ)

55
ಯಾಕೆ ಈ ಆಚರಣೆ?
Image Credit : Gemini

ಯಾಕೆ ಈ ಆಚರಣೆ?

ಶತಮಾನಗಳ ಹಿಂದೆ ಪಿನಿ ಗ್ರಾಮದ ಮಹಿಳೆಯರಿಗೆ ದುಷ್ಟಶಕ್ತಿಗಳು ತೊಂದರೆ ನೀಡುತ್ತಿದ್ದವು. ಈ ವೇಳೆ ಗ್ರಾಮದೇವತೆ ಲಾಹು ಘೋಂಡ್ ಶ್ರಾವಣದ ಮೊದಲ ದಿನದಂದು ದುಷ್ಟಶಕ್ತಿಗಳನ್ನು ಸೋಲಿಸಿ ಮಹಿಳೆಯರನ್ನು ರಕ್ಷಣೆ ಮಾಡುತ್ತಾಳೆ. ಈ ಕಾರಣದಿಂದ ಶ್ರಾವಣದಲ್ಲಿ ಐದು ದಿನದ ಉತ್ಸವ ಆಚರಣೆ ಮಾಡಲಾಗುತ್ತದೆ. ಇದರಿಂದ ಗ್ರಾಮದೇವತೆಯ ಆಶೀರ್ವಾದ ಸಿಗುತ್ತೆ ಎಂದು ಮಹಿಳೆಯರು ಹೇಳುತ್ತಾರೆ. (ಸಾಂದರ್ಭಿಕ ಚಿತ್ರ)

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ವೈರಲ್ ಸುದ್ದಿ
ಮಹಿಳೆಯರು

Latest Videos
Recommended Stories
Recommended image1
ಸಿಂಹದಲ್ಲಿ ಸೂರ್ಯ-ಕೇತುಗಳ ಸಂಯೋಗ; ನಾಳೆ ಆಗಸ್ಟ್ 17 ರಿಂದ ಈ ಐದು ರಾಶಿಗೆ ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಕಷ್ಟ
Recommended image2
ಡ್ರ್ಯಾಗನ್ ಶಕ್ತಿಯಿಂದ ಬ್ರಹ್ಮಾಂಡ ರಾಜಯೋಗ; 3 ತಿಂಗಳು 4 ರಾಶಿಗಳಿಗೆ ಅದೃಷ್ಟದ ಕಿರೀಟ
Recommended image3
ಆಗಸ್ಟ್ 16 ಈ 5 ರಾಶಿಗೆ ಅದೃಷ್ಟದ ದಿನ, ಕೆಟ್ಟ ಸಮಯಗಳು ಶೀಘ್ರದಲ್ಲೇ ಕೊನೆಗೊಳ್ಳುತ್ತವೆ
Related Stories
Recommended image1
ಡ್ರ್ಯಾಗನ್ ಶಕ್ತಿಯಿಂದ ಬ್ರಹ್ಮಾಂಡ ರಾಜಯೋಗ; 3 ತಿಂಗಳು 4 ರಾಶಿಗಳಿಗೆ ಅದೃಷ್ಟದ ಕಿರೀಟ
Recommended image2
ಈ ವರ್ಷದ ನಾಗಪಂಚಮಿಯಂದು 5 ರಾಶಿಗಳಿಗೆ ಸಂಪತ್ತಿನ ಯೋಗ! ಹಣಕಾಸಿನ ಅಡೆತಡೆಗಳೆಲ್ಲಾ ದೂರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved