ತಿರುಮಲ ತಿರುಪತಿ ದೇವಸ್ಥಾನವು (ಟಿಟಿಡಿ) ನವೆಂಬರ್ ತಿಂಗಳ ದರ್ಶನ, ಸೇವೆ ಮತ್ತು ವಸತಿ ಕೋಟಾ ಟಿಕೆಟ್‌ಗಳ ಆನ್‌ಲೈನ್ ಬಿಡುಗಡೆ ದಿನಾಂಕಗಳನ್ನು ಪ್ರಕಟಿಸಿದೆ. ಅರ್ಜಿತ ಸೇವೆ, ವಿಶೇಷ ದರ್ಶನ, ಮತ್ತು ವಸತಿ ಬುಕಿಂಗ್‌ಗಾಗಿ ನಿಗದಿತ ದಿನಾಂಕಗಳಂದು ಭಕ್ತರು ಅಧಿಕೃತ ವೆಬ್‌ಸೈಟ್ ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು.
ತಿರುಮಲದಲ್ಲಿ ಭಕ್ತರ ಜನಸಂದಣಿ ಹೆಚ್ಚಾಗಿದೆ. ಇದರ ನಡುವೆಯೂ ಭಕ್ತರಿಗೆ ಯಾವುದೇ ಅನಾನುಕೂಲ ಎದುರಾಗಬಾರದು ಎಂದು ಟಿಟಿಡಿ ಚೆರ್ಮನ್ ಬಿಆರ್ ನಾಯುಡು ಸ್ಪಷ್ಟನೆ ನೀಡಿದ್ದಾರೆ. ಆದರೆ ಭಕ್ತರು ತಿರುಮಲಕ್ಕೆ ಆಗಮಿಸುವ ಮುನ್ನ ಮೊದಲೇ ಯೋಜನೆ ಮಾಡಿಕೊಳ್ಳಬೇಕಿದೆ ಎಂದು ಸೂಚನೆಯನ್ನು ನೀಡಿದ್ದಾರೆ. ದರ್ಶನದ ಸಮಯದಲ್ಲಿ ಭಕ್ತರು ಸಂಯಮ ಪಾಲಿಸಬೇಕು, ಟಿಟಿಡಿ ಸಿಬ್ಬಂದಿ ನೀಡಿದ ಸೂಚನೆಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಟಿಕೆಟ್ ಬುಕ್ ಮಾಡಿಕೊಳ್ಳುವುದು ಹೇಗೆ?
ನವೆಂಬರ್ ತಿಂಗಳಿಗೆ ಸಂಬಂಧಿಸಿದ ದರ್ಶನ ಹಾಗೂ ವಸತಿ ಕೋಟಾ ಟಿಕೆಟ್ ಬಿಡುಗಡೆಯ ಬಗ್ಗೆಯೂ ಟಿಟಿಡಿ ಪ್ರಮುಖ ಪ್ರಕಟನೆಯನ್ನು ಬಿಡುಗಡೆ ಮಾಡಿದೆ. ಟಿಟಿಡಿ ಶ್ರೀವಾರಿ ಅರ್ಜಿತ ಸೇವಾ ಟಿಕೆಟ್, ಅಂದರೆ ಸುಪ್ರಭಾತ, ತೋಮಾಲ, ಅರ್ಚನ, ಅಷ್ಟದಳ, ಪಾದಪದ್ಮಾರಾಧನ ಸೇವೆಗೆ ಸಂಬಂಧಿಸಿದ ಕೋಟಾವನ್ನು ಆಗಸ್ಟ್ 18ರ ಬೆಳಗ್ಗೆ 10 ಗಂಟೆಗೆ ಟಿಟಿಡಿ ವೆಬ್ ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸೇವಾ ಟಿಕೆಟ್‌ಗಳನ್ನು ಎಲೆಕ್ಟ್ರಾನಿಕ್ ಡಿಪ್ ಗಾಗಿ ಆಗಸ್ಟ್ 20ರ ಬೆಳಗ್ಗೆ 10 ಗಂಟೆಗೆ ವರೆಗೂ ಆನ್ ಲೈನ್‌ನಲ್ಲಿ ದಾಖಲು ಮಾಡಿಕೊಳ್ಳಬಹುದು. ಈ ಟಿಕೆಟ್ ಖರೀದಿ ಮಾಡಿದವರು 20 ರಿಂದ 22ರ ನಡುವೆ ಮಧ್ಯಾಹ್ನ 12 ಗಂಟೆ ವೇಳೆಗೆ ಹಣ ಪಾವತಿ ಮಾಡಬೇಕಾಗುತ್ತದೆ, ಹಣ ಪಾವತಿ ಮಾಡಿದವರಿಗೆ ಮಾತ್ರ ಟಿಕೆಟ್ ಸಿಗಲಿದೆ.
ಭಕ್ತರ ದರ್ಶನ, ವಸತಿ
ಕಲ್ಯಾಣೋತ್ಸವ, ಉಂಜಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ, ಸಹಸ್ರದೀಪಾಲಂಕಾರ ಸೇವಾ, ಪುಷ್ಪಯಾಗ ಟಿಕೆಟ್‌ಗಳನ್ನು ಆಗಸ್ಟ್ 21ರ ಬೆಳಗ್ಗೆ 10 ಗಂಟೆಗೆ ಟಿಟಿಡಿ ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲಿದೆ. ವರ್ಚುವಲ್ ಸೇವೆಗಳು, ಅವುಗಳ ದರ್ಶನ ಸ್ಲಾಟ್‌ಗಳಿಗೆ ಸಂಬಂಧಿಸಿದ ಕೋಟಾವನ್ನು ಆಗಸ್ಟ್ 21ರ ಮಧ್ಯಾಹ್ನ 3 ಗಂಟೆಗೆ ಟಿಟಿಡಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದೆ.
ಶ್ರೀವಾಣಿ ಟ್ರಸ್ಟ್ ದರ್ಶನ ಕೋಟಾ ಟಿಕೆಟ್‌ಗಳನ್ನು ಆಗಸ್ಟ್ 24ರ ಬೆಳಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಿದ್ದಾರೆ. ವಯೋವೃದ್ಧರು, ವಿಶೇಷಚೇತನರು, ದೀರ್ಘಕಾಲಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಶ್ರೀವಾರಿ ದರ್ಶನವನ್ನು ಸುಲಭವಾಗಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಉಚಿತ ಪ್ರತ್ಯೇಕ ದರ್ಶನ ಟಿಕೆಟ್ ಕೋಟಾವನ್ನು ಆಗಸ್ಟ್ 24ರ ಮಧ್ಯಾಹ್ನ 3ಗಂಟೆಗೆ ಟಿಟಿಡಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದೆ.
ಉಳಿದಂತೆ ಪ್ರತ್ಯೇಕ ದರ್ಶನ ಟಿಕೆಟ್ ಕೋಟಾವನ್ನು ಆಗಸ್ಟ್ 25ರ ಬೆಳಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಿದ್ದು, ಇದುವರೆಗೂ ಪ್ರತಿ ತಿಂಗಳ 24ರಂದು ಬಿಡುಗಡೆಯಾಗುತ್ತಿದ್ದ ಕೋಟಾ ಟಿಕೆಟ್‌ಗಳು 25ಕ್ಕೆ ಬಿಡುಗಡೆ ಮಾಡಲಿದೆ. ತಿರುಮಲ ಕೊಠಡಿಗಳ ಬುಕ್ಕಿಂಗ್ ಕೋಟಾ ಆಗಸ್ಟ್ 25ರ ಮಧ್ಯಾಹ್ನ 3ಗಂಟೆಗೆ ಬಿಡುಗಡೆ ಮಾಡಲಿದೆ. ತಿರುಮಲ ಶ್ರೀವೆಂಕಟೇಶ್ವರನ ದರ್ಶನಕ್ಕೆ ಆಗಮಿರುವ ಭಕ್ತರು, https://ttdevasthanams.ap.gov.in ವೆಬ್‌ಸೈಟ್ ಮೂಲಕ ಬುಕ್ ಮಾಡಿಕೊಳ್ಳಬಹುದಾಗಿದೆ.


