ನವದೆಹಲಿ: ವ್ಯಾಪಾರಿಗಳಿಗೆ ಯುಪಿಐ ಮೂಲಕ ಮಾಡಲಾಗುವ 2 ಸಾವಿರ ರು. ಮೇಲ್ಪಟ್ಟ ಪಾವತಿಗಳಿಗೆ ವಿಧಿಸಲು ಉದ್ದೇಶಿಸಲಾಗಿರುವ ಪ್ರಸ್ತಾಪಿತ ಎಂಡಿಆರ್ ಶುಲ್ಕವನ್ನು ಗ್ರಾಹಕರ ತಲೆಗೆ ಹೊರಿಸಲಾಗದು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಎಂಡಿಆರ್‌ಗೆ ತಡೆ ನೀಡಲು ನಿರಾಕರಿಸಿದ್ದ ಕೋರ್ಟ್, ಆ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಗಳಿಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರ ಹಾಗೂ ಸಂಬಂಧಿತ ಸಂಸ್ಥೆಗಳಿಗೆ ಸೆ.28ರಂದು ಸೂಚಿಸಿತ್ತು. ಇದಕ್ಕೆ ಮಂಗಳವಾರ ಸಿಜೆಐ ನ್ಯಾ। ಸೂರ್ಯಕಾಂತ್ ನೇತೃತ್ವದ ಪೀಠದೆದುರು ಉತ್ತರಿಸಿದ ಎನ್‌ಪಿಸಿಐ, ‘ಈ ಶುಲ್ಕವು 2 ಸಾವಿರ ರು.ಗಿಂತ ಹೆಚ್ಚಿನ ಮೌಲ್ಯದ, ವ್ಯಕ್ತಿಯಿಂದ ವ್ಯಾಪಾರಿಗೆ ಮಾಡಲಾಗುವ ಪಾವತಿಗಳ ಪೈಕಿ ಶೇ.0.4ರಷ್ಟು ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ. ಹೀಗಾಗಿ, ವ್ಯಾಪಾರಿಗಳು ಬೆಲೆ ಏರಿಸುವ ಮೂಲಕ ಶುಲ್ಕವು ಎಲ್ಲ ಗ್ರಾಹಕರಿಗೆ ಅನ್ವಯಿಸುವಂತೆ ಮಾಡಲಾಗದು’ ಎಂದು ಸ್ಪಷ್ಟನೆ ನೀಡಿದೆ.
10:46 AM (IST) Nov 06
10:22 AM (IST) Nov 06
ಮೊದಲ ದಿನವೇ ಭಾರೀ ಕಲೆಕ್ಷನ್ ಮೂಲಕ ‘ರಾಮಾಯಣ’ ಭರ್ಜರಿ ಆರಂಭ ಪಡೆದಿದೆ. ಆದರೆ ಟಾಕ್ಸಿಕ್, ಆದಿಪುರುಷ್ ಮತ್ತು ‘ಧುರಂಧರ್: ದಿ ರಿವೆಂಜ್’ ದಾಖಲೆಗಳನ್ನು ಮುರಿಯಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಚಿತ್ರದ ಗಳಿಕೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
08:47 AM (IST) Nov 06
Bathinda Panipat Face Extreme Air Pollution ಚಳಿಗಾಲ ಮತ್ತು ದೀಪಾವಳಿ ಪಟಾಕಿಗಳಿಂದಾಗಿ ದೇಶದ ಹಲವು ನಗರಗಳಲ್ಲಿ ವಾಯು ಮಾಲಿನ್ಯ ತೀವ್ರವಾಗಿ ಹೆಚ್ಚಾಗಿದೆ. ಪಂಜಾಬ್‌ನ ಬಟಿಂಡಾ ಮತ್ತು ಹರಿಯಾಣದ ಪಾಣಿಪತ್ ಅತ್ಯಂತ ಕಲುಷಿತ ನಗರಗಳಾಗಿದ್ದು, ದೆಹಲಿಯಲ್ಲೂ ಉಸಿರಾಡಲು ಕಷ್ಟಕರವಾದ ಪರಿಸ್ಥಿತಿ ನಿರ್ಮಾಣ