ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ವಿವಿಧ ಇಲಾಖೆಗಳ ಮೌಲ್ಯಮಾಪನ ಮಾಡಿ ರ್‍ಯಾಂಕಿಂಗ್ ನೀಡಿದ್ದು, ಇದರ ಆಧಾರದ ಮೇಲೆ ಸಚಿವರಾದ ಪ್ರಹ್ಲಾದ್ ಜೋಶಿ ಅವರ ಗ್ರಾಹಕರ ವ್ಯವಹಾರಗಳ ಸಚಿವಾಲಯವು ನಂ.1 ಸ್ಥಾನ ಪಡೆದಿದೆ. ಗ್ರಾಹಕರ ವ್ಯವಹಾರಗಳ ಇಲಾಖೆಯು ಗ್ರಾಹಕರ ಕುಂದು-ಕೊರತೆ ಪರಿಹಾರ ಮತ್ತು ಪಶ್ಚಿಮ ಏಷ್ಯಾ ಯುದ್ಧದಿಂದಾಗಿ ಎದುರಾಗಿರುವ ಬಿಕ್ಕಟ್ಟು ನಿಭಾಯಿಸುವ ವಿಚಾರದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಇಲಾಖೆ ಎಂಬ ಗೌರವಕ್ಕೆ ಪಾತ್ರವಾಗಿದೆ.
ಮೋದಿ ಜತೆ ಭೇಟಿ । ಶ್ವೇತಭವನಕ್ಕೆ ಭೇಟಿ ನೀಡಲು ಆಹ್ವಾನ
ಅಮೆರಿಕ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ 4 ದಿನಗಳ ಭಾರತ ಭೇಟಿಗೆ ಆಗಮಿಸಿದ್ದು, ಇದರ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಜತೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಶನಿವಾರ ಯಶಸ್ವಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಅವರು ಶ್ವೇತಭವನಕ್ಕೆ ಭೇಟಿ ನೀಡುವಂತೆ ಮೋದಿ ಅವರನ್ನು ಆಹ್ವಾನಿಸಿದ್ದಾರೆ.
09:45 PM (IST) May 24
ಕಿತ್ತು ತಿನ್ನೋ ಬಡತನ, ಮತ್ತೊಂದೆಡೆ ಕೆವೈಸಿ ಅಪೂರ್ಣವಾಗಿದ್ದ ಕಾರಣ 90ರ ಅತ್ತೆಗೆ ಕಳೆದ ನಾಲ್ಕು ತಿಂಗಳಿನಿಂದ ಪೆನ್ಶನ್ ಬಂದಿಲ್ಲ. ಅತ್ತೆಗೆ ನಡೆಯಲು ಸಾಧ್ಯವಿಲ್ಲ, ಆಟೋದಲ್ಲಿ ಹೋಗಲು ಹಣವಿಲ್ಲ. ಬೆನ್ನ ಮೇಲೆ ಹೊತ್ತು ಬಿರು ಬಿಸಿಲಿನಲ್ಲಿ ನಡೆದುಕೊಂಡ ಸಾಗಿದ ಹೃದಯವಿದ್ರಾವಕ ಘಟನೆ.
08:32 PM (IST) May 24
ಕರ್ನಾಟಕದ ಮಣ್ಣಿನ ಮಗ ಯಶ್ ಇಂದು ಉತ್ತರ ಭಾರತದ ಬೆಡಗಿಯರ ಮನಗೆದ್ದಿದ್ದಾರೆ ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿ. ಸಿನಿಮಾ ಯಾವಾಗ ಬಂದರೂ ಸರಿ, ರಾಕಿ ಭಾಯ್ ಒಂದು ಝಲಕ್ ನೋಡಲು ಇಡೀ ದೇಶವೇ ಕಾತರದಿಂದ ಕಾಯುತ್ತಿದೆ ಅನ್ನೋದಕ್ಕೆ ಈ ‘ಕಿಸ್ ವಿಡಿಯೋ’ ಸಾಕ್ಷಿ ಎಂಬುದು ಸುಳ್ಳಲ್ಲ!
08:30 PM (IST) May 24
ಡೆಲ್ಲಿ ಹಾಗೂ ಕೆಕೆಆರ್ ನಡುವಿನ ಕೊನೆಯ ಲೀಗ್ ಪಂದ್ಯಕ್ಕೂ ಮೊದಲೇ ರಾಜಸ್ಥಾನ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿದೆ. ಇದೀಗ ಪ್ಲೇ ಆಫ್ ಹೋರಾಟದ ಸಂಪೂರ್ಣ ಚಿತ್ರಣ ಲಭ್ಯವಾಗಿದೆ. ನಾಲ್ಕು ತಂಡಗಳ ಮುಂದಿನ ಪಂದ್ಯದ ವೇಳಾಪಟ್ಟಿ ಇಲ್ಲಿದೆ.
07:55 PM (IST) May 24
43ರ ಹರೆಯದಲ್ಲೂ ಹೊಸ ನಟಿಯರಿಗೆ ಟಫ್ ಕಾಂಪಿಟೇಷನ್ ಕೊಡುತ್ತಿರುವ ತ್ರಿಶಾ, ತಾವೇಕೆ ಸೌತ್ ಇಂಡಿಯಾದ 'ಅಲ್ಟಿಮೇಟ್ ಕ್ವೀನ್' ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ವಿಜಯ್, ಅಜಿತ್, ಸೂರ್ಯ.. ಹೀಗೆ ಎಲ್ಲರಿಗೂ 'ಪ್ರೀತಿ'ಯ ನಟಿಯಾಗಿರುವ ತ್ರಿಶಾ, ಈಗ ಹೀಗೆ ಮಾಡಿ ಸುದ್ದಿಯಾಗಿದ್ದಾರೆ!
07:53 PM (IST) May 24
ಒಬ್ಬ ನಟಿಯಾಗಿ ನಿಜವಾದ ಮನ್ನಣೆ ಸಿಗಬೇಕೆಂದರೆ ಮಲಯಾಳಂ ಚಿತ್ರರಂಗದಲ್ಲಿ ನಟಿಸಬೇಕು. ಬೇರೆ ಭಾಷೆಗಳಿಗಿಂತ ಇಲ್ಲಿ ಸಹಜ ನಟನೆಗೆ ಹೆಚ್ಚು ಪ್ರಾಮುಖ್ಯತೆ ಇದೆ ಎಂದು ನಟಿ ಮೀನಾ ಹೇಳಿದ್ದಾರೆ.
07:42 PM (IST) May 24
ಪ್ರಧಾನಿ ನರೇಂದ್ರ ಮೋದಿ ಮಕ್ಕಳ ಜೊತೆ ಹರಟೆ ಹೊಡೆದ, ಕಾಲ ಕಳೆದ ಹಲವು ಘಟನೆಗಳಿವೆ. ಈ ಬಾರಿ ಕೊಂಚ ವಿಶೇಷವಿದೆ. ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ಕುಟುಂಬದ ಭೇಟಿ ವೇಳೆ ಮೋದಿ ಕೆಲ ಹೊತ್ತು ಸಚಿವರ ಇಬ್ಬರು ಮಕ್ಕಳ ಜೊತೆ ಕೆಲ ಹೊತ್ತು ಕಳೆದ ಚಿತ್ರಗಳು ಭಾರಿ ಸದ್ದು ಮಾಡುತ್ತಿದೆ.
07:16 PM (IST) May 24
ಜನಪ್ರಿಯ ಗಾಯಕಿ ಅಭಿರಾಮಿ ಸುರೇಶ್ ತಮಗೆ ದೊಡ್ಡ ಆರ್ಥಿಕ ವಂಚನೆಯಾಗಿದೆ ಎಂದು ನೋವಿನಿಂದ ಹೇಳಿಕೊಂಡಿದ್ದಾರೆ. ಸಹೋದರಿ ಅಮೃತಾ ಸುರೇಶ್ ಜೊತೆ ಸೇರಿ ಹಲವು ಸಂಗೀತ ಕಾರ್ಯಕ್ರಮಗಳನ್ನು ನೀಡುವ ಅಭಿರಾಮಿ..
07:03 PM (IST) May 24
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬಿರುಗಾಳಿಯಲ್ಲಿ ಟಿಎಂಸಿ ಈಗ ಪೂರ್ಣ ಕೊಚ್ಚಿ ಹೋಗಿದೆ. ಫಾಲ್ಟಾ ಕ್ಷೇತ್ರದ ಮರುಚುನಾವಣೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಬರೋಬ್ಬರಿ 1 ಲಕ್ಷ ಮತಗಳ ಅಂತರದಲ್ಲಿ ಗೆದ್ದುಕೊಂಡಿದೆ.
06:22 PM (IST) May 24
ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾದ 'ಹೆಲ್ಲಲ್ಲಲ್ಲೋ' ಹಾಡು ಬಿಡುಗಡೆಯಾಗಿದೆ. ಎ.ಆರ್. ರೆಹಮಾನ್ ಸಂಗೀತ ನೀಡಿರುವ ಈ ಹಾಡಿನಲ್ಲಿ ರಾಮ್ ಚರಣ್ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಹೆಜ್ಜೆ ಹಾಕಿದ್ದಾರೆ.
05:59 PM (IST) May 24
ಕೇನ್ಸ್ ವೇದಿಕೆಯಲ್ಲಿ ತನ್ನ ಸೌಂದರ್ಯದ ಜೊತೆಗೆ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ ಐಶ್ವರ್ಯಾ ರೈ ಬಚ್ಚನ್, ತಾವು ಯಾಕೆ ಬಾಲಿವುಡ್‌ನ 'ಕ್ವೀನ್' ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಐಶ್ ಅವರ ಈ ಮಾತುಗಳು ಕೇವಲ ಸಿನಿಮಾ ಮಂದಿಗಷ್ಟೇ ಅಲ್ಲ, ಜೀವನದಲ್ಲಿ ಸಾಧನೆ ಮಾಡಬಯಸುವ ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ.
05:08 PM (IST) May 24
80ರ ಹರೆಯದ ಅಜ್ಜಿಯ ಐಸ್‌ಕ್ರೀಂ ಉದ್ಯಮ ಇದೀಗ ಭಾರಿ ಸದ್ದು ಮಾಡುತ್ತಿದೆ. ಹೋಮ್‌ಮೇಡ್ ಐಸ್‌ಕ್ರೀಂ ಇದೀಗ ಮಳಿಗೆ ರೂಪದಲ್ಲಿ ವಿಸ್ತರಣೆಗೊಂಡಿದೆ. ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ವಯಸ್ಸು ಲೆಕ್ಕಕ್ಕಿಲ್ಲ ಅನ್ನೋದು ಸಾಬೀತಾಗಿದೆ.
05:02 PM (IST) May 24
ಸ್ಟಾರ್ ನಟಿ ತಬು ತನಗೆ ಯಾವುದೇ ಸಮಸ್ಯೆ ಬಂದರೂ ಟಾಲಿವುಡ್‌ನ ಸ್ಟಾರ್ ನಟರೊಬ್ಬರಿಗೆ ಫೋನ್ ಮಾಡ್ತಾರಂತೆ. ಮಧ್ಯರಾತ್ರಿ 2 ಗಂಟೆಗೆ ಕರೆ ಮಾಡಿ ಅಳುತ್ತಾ ತಮ್ಮ ನೋವನ್ನು ಹಂಚಿಕೊಳ್ಳುವ ಆ ನಟ ಯಾರು? ತಬುಗೆ ಆ ನಟ ಅಷ್ಟೊಂದು ಆಪ್ತ ಸ್ನೇಹಿತನಾಗಿದ್ದು ಹೇಗೆ?
04:38 PM (IST) May 24
ಆರ್ಮಾಕ್ಸ್ ಮೀಡಿಯಾ ಬಿಡುಗಡೆ ಮಾಡಿದ ಏಪ್ರಿಲ್ ತಿಂಗಳ ಜನಪ್ರಿಯ ನಟಿಯರ ಪಟ್ಟಿಯಲ್ಲಿ ಆಲಿಯಾ ಭಟ್, ಸಮಂತಾರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ. ಟಾಪ್ 10 ಪಟ್ಟಿಯಲ್ಲಿ ದಕ್ಷಿಣ ಭಾರತದ ನಟಿಯರೇ ಹೆಚ್ಚು.
04:30 PM (IST) May 24
04:19 PM (IST) May 24
ನಟ ದುಲ್ಕರ್ ಸಲ್ಮಾನ್ ನಟನೆಯ ಹೊಸ ತೆಲುಗು ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೊಂದು ಪ್ರೇಮಕಥೆಯಾಗಿದ್ದು, ಸದ್ಯದಲ್ಲೇ ಚಿತ್ರದ ಶೀರ್ಷಿಕೆ ಘೋಷಣೆಯಾಗಲಿದೆ.
03:41 PM (IST) May 24
ಸಾಮಾನ್ಯವಾಗಿ ಸ್ಟಾರ್ ನಟಿಯರು ಒಂದು ಇಡೀ ಸಿನಿಮಾಗೆ 5 ರಿಂದ 10 ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ ಊರ್ವಶಿ ರೌಟೇಲಾ ಲೆಕ್ಕಾಚಾರವೇ ಬೇರೆ. ಆದರೆ ಈಕೆ ಕೇವಲ ಒಂದು ಹಾಡಿನಲ್ಲಿ ಕುಣಿಯಲು ಪಡೆಯುವ ಸಂಭಾವನೆ 1 ನಿಮಿಷಕ್ಕೆ 1 ಕೋಟಿ.. ಅಷ್ಟೊಂದು ಏಕೆ? ಸೀಕ್ರೆಟ್ ಇಲ್ಲಿದೆ..
03:38 PM (IST) May 24
ಐಪಿಎಲ್ ಪ್ರತಿ ಪಂದ್ಯದಲ್ಲಿ ಆಯಾ ತಂಡದ ಚಿಯರ್ ಲೀಡರ್ಸ್ ಪಂದ್ಯದಕ್ಕೆ ಮತ್ತಷ್ಟು ಹುರಪು ನೀಡುತ್ತಾರೆ. ಆದರೆ ಇದೇ ಚಿಯರ್‌ಲೀಡರ್ಸ್ ಜೊತೆಗೆ ಕೆಲೆ ಅಭಿಮಾನಿಗಳು ಅನುಚಿತ ವರ್ತನೆ ತೋರಿದ್ದಾರೆ. ಘಟನೆಯ ವಿಡಿಯೋ ಸೆರೆ.
03:15 PM (IST) May 24
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್ ಹಂತವು ಇದೀಗ ಕ್ಲೈಮ್ಯಾಕ್ಸ್ ಬಳಿ ಬಂದು ನಿಂತಿದೆ. ಇಂದಿನ ಪಂದ್ಯಗಳ ಬಳಿಕ ಈ ಬಾರಿ ನಾಲ್ಕನೇ ತಂಡವಾಗಿ ಐಪಿಎಲ್ ಪ್ಲೇ ಆಫ್ ಪ್ರವೇಶಿಸುವುದು ಯಾವ ತಂಡ ಎನ್ನುವ ಸ್ಪಷ್ಟ ಚಿತ್ರಣ ಸಿಗಲಿದೆ. ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ ನೋಡೋಣ ಬನ್ನಿ.
03:05 PM (IST) May 24
ಇಂದು ಸಲ್ಮಾನ್ ಖಾನ್ ಬಳಿ ಸಾವಿರಾರು ಕೋಟಿ ಆಸ್ತಿ ಇದೆ, ಸ್ಟಾರ್‌ಡಮ್ ಇದೆ, ಲಕ್ಷಾಂತರ ಜನರ ಪ್ರೀತಿ ಇದೆ. ಆದರೆ ಲೈಫ್ ಪಾರ್ಟ್ನರ್ ವಿಷಯಕ್ಕೆ ಬಂದರೆ ಮಾತ್ರ ಅವರು ಇಂದಿಗೂ 'ಸಿಂಗಲ್'. 58ರ ಪ್ರಾಯದಲ್ಲೂ ಈ 'ಟೈಗರ್' ತನ್ನ ಬಾಳ ಸಂಗಾತಿಗಾಗಿ ಕಾಯುತ್ತಿದ್ದಾರಾ?
02:41 PM (IST) May 24
What to get before leaving a job: ಕೆಲವರು ಈಗ ಇರುವ ಕಂಪೆನಿಯಲ್ಲಿ ಸಂಬಳದ ಕಾರಣಕ್ಕೋ ಅಥವಾ ಅವಕಾಶದ ಕಾರಣಕ್ಕೋ ಬೇಸರದಲ್ಲಿ ಇರುತ್ತಾರೆ, ಬೇರೆ ಕಂಪೆನಿಗೆ ಹೋಗಬೇಕು ಎಂದುಕೊಳ್ತಾರೆ. ಈ ರೀತಿ ಕೆಲಸ ಬಿಡುವ ಆಲೋಚನೆಯಲ್ಲಿರುವವರು ಒಂದಿಷ್ಟು ವಿಚಾರಗಳನ್ನು ನೆನಪಿನಲ್ಲಿಡಬೇಕು. ಅವು ಯಾವುವು?
01:41 PM (IST) May 24
Arjun Tendulkar LSG Debut 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತಮ್ಮ ಮಗ ಅರ್ಜುನ್ ತೆಂಡೂಲ್ಕರ್ ಲಖನೌ ಸೂಪರ್ ಜೈಂಟ್ಸ್ ಪರ ಪಾದಾರ್ಪಣೆ ಮಾಡಿ ಉತ್ತಮ ಪ್ರದರ್ಶನ ನೀಡಿದ್ದರ ಬಗ್ಗೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಭಾವುಕ ಸಂದೇಶ ರವಾನಿಸಿದ್ದಾರೆ.
12:40 PM (IST) May 24
11:37 AM (IST) May 24
11:06 AM (IST) May 24
ಬೆಂಗಳೂರು: ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ಅವರ ಕುರಿತಂತೆ ಬಹುಭಾಷಾ ನಟ ರಾಮ್ ಚರಣ್ ಆಡಿರುವ ಒಂದು ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಲ್ಲದೇ ಕ್ಷಮೆಯಾಚಿಸಿದ್ದಾರೆ. ಅಷ್ಟಕ್ಕೂ ಏನಿದು ಪ್ರಕರಣ ನೋಡೋಣ ಬನ್ನಿ.
11:02 AM (IST) May 24
Why shouldn't you dry clothes outside: ಭಾರತದಲ್ಲಿ ಎಲ್ಲಿ ಜಾಗ ಸಿಕ್ಕಿದರೂ ಸಾಕು, ಬಟ್ಟೆ ಒಣಗಿಸುತ್ತಾರೆ. ಟ್ರೇನ್‌ನಲ್ಲಿ, ಬಸ್‌ನಲ್ಲಿ ಕೂಡ ಹೀಗೆ ಬಟ್ಟೆ ಒಣಗಿಸೋದುಂಟು. ಆದರೆ ಅಮೆರಿಕದಲ್ಲಿ ಮನೆ ಮುಂದೆ ಏನಾದರೂ ಬಟ್ಟೆ ಒಣಗಿಸಿದರೆ ಮಾತ್ರ ದಂಡ ತೆರಬೇಕು. ಇದಕ್ಕೆ ಕೆಲವು ಕಾರಣಗಳು ಇವೆ.
10:54 AM (IST) May 24
2019ರ ಪುಲ್ವಾಮಾ ದಾಳಿಯ ಪ್ರಮುಖ ರೂವಾರಿ ಹಮ್ಜಾ ಬುರ್ಹಾನ್‌ನನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹತ್ಯೆ ಮಾಡಲಾಗಿದೆ. ಇಸ್ಲಾಮಾಬಾದ್‌ನಲ್ಲಿ ನಡೆದ ಅವನ ಅಂತ್ಯಕ್ರಿಯೆಯಲ್ಲಿ ಐಎಸ್‌ಐ ಅಧಿಕಾರಿಗಳು ಮತ್ತು ಸೈಯದ್ ಸಲಾಹುದ್ದೀನ್‌ನಂತಹ ಮೋಸ್ಟ್ ವಾಂಟೆಡ್ ಉಗ್ರರು ಭಾಗಿಯಾಗಿರುವುದು ಬಯಲಾಗಿದೆ.
10:19 AM (IST) May 24
09:55 AM (IST) May 24
ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು, 'ಕಾಕ್ರೋಚ್ ಜನತಾ ಪಾರ್ಟಿ'ಯು ಭಾರತವನ್ನು ಅಸ್ಥಿರಗೊಳಿಸಲು ಮತ್ತು ಪ್ರಧಾನಿ ಮೋದಿಯವರನ್ನು ಗುರಿಯಾಗಿಸಲು ನಡೆಸುತ್ತಿರುವ ಗಡಿಯಾಚೆಗಿನ ಕಾರ್ಯಾಚರಣೆಯ ಭಾಗವಾಗಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ವಿಪಕ್ಷಗಳ ಕೆಲವು ವಿಪಕ್ಷಗಳ ಕುಮ್ಮಕ್ಕು?
09:01 AM (IST) May 24
ಲಖನೌ: ಶ್ರೇಯಸ್ ಅಯ್ಯರ್ ಸ್ಪೋಟಕ ಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ಎದುರು ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಪಂಜಾಬ್ ಪ್ಲೇ ಆಫ್ ಕನಸು ಜೀವಂತವಾಗಿಟ್ಟುಕೊಂಡರೇ, ಮತ್ತೊಂದು ತಂಡ ಪ್ಲೇ ಆಫ್ ರೇಸ್‌ನಿಂದ ಔಟ್ ಆಗಿದೆ.