MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • LSG ಪರ ಡೆಬ್ಯೂ ಮಾಡಿದ ಅರ್ಜುನ್; ಮಗನ ದಿಟ್ಟ ಪ್ರದರ್ಶನ ಕಂಡು ಭಾವುಕ ಪತ್ರ ಬರೆದ ಸಚಿನ್ ತೆಂಡೂಲ್ಕರ್

LSG ಪರ ಡೆಬ್ಯೂ ಮಾಡಿದ ಅರ್ಜುನ್; ಮಗನ ದಿಟ್ಟ ಪ್ರದರ್ಶನ ಕಂಡು ಭಾವುಕ ಪತ್ರ ಬರೆದ ಸಚಿನ್ ತೆಂಡೂಲ್ಕರ್

Arjun Tendulkar LSG Debut 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತಮ್ಮ ಮಗ ಅರ್ಜುನ್ ತೆಂಡೂಲ್ಕರ್ ಲಖನೌ ಸೂಪರ್ ಜೈಂಟ್ಸ್‌ ಪರ ಪಾದಾರ್ಪಣೆ ಮಾಡಿ ಉತ್ತಮ ಪ್ರದರ್ಶನ ನೀಡಿದ್ದರ ಬಗ್ಗೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಭಾವುಕ ಸಂದೇಶ ರವಾನಿಸಿದ್ದಾರೆ. 

2 Min read
Author : Naveen Kodase
Published : May 24 2026, 01:41 PM IST
Share this Photo Gallery
  • FB
  • TW
  • Linkdin
  • Whatsapp
16
ಲಖನೌ ಪರ ಮೊದಲ ಐಪಿಎಲ್ ಮ್ಯಾಚ್ ಆಡಿದ ಅರ್ಜುನ್ ತೆಂಡೂಲ್ಕರ್
Image Credit : X

ಲಖನೌ ಪರ ಮೊದಲ ಐಪಿಎಲ್ ಮ್ಯಾಚ್ ಆಡಿದ ಅರ್ಜುನ್ ತೆಂಡೂಲ್ಕರ್

2026ರ ಐಪಿಎಲ್ ಟೂರ್ನಿಯುದ್ದಕ್ಕೂ ಲಖನೌ ಸೂಪರ್ ಜೈಂಟ್ಸ್ ಪರ ಬೆಂಚ್ ಕಾಯಿಸಿದ್ದ ಪ್ರತಿಭಾನ್ವಿತ ಆಲ್ರೌಂಡರ್ ಅರ್ಜುನ್ ತೆಂಡೂಲ್ಕರ್‌ಗೆ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ಎದುರು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿತ್ತು. ತಮಗೆ ಸಿಕ್ಕ ಅವಕಾಶದಲ್ಲಿ ಗರ್ಮನಾರ್ಹ ಪ್ರದರ್ಶನ ತೋರುವಲ್ಲಿ ಅರ್ಜುನ್ ತೆಂಡೂಲ್ಕರ್ ಯಶಸ್ವಿಯಾಗಿದ್ದಾರೆ.

Add Asianetnews Kannada as a Preferred SourcegooglePreferred
26
ಸೋಷಿಯಲ್ ಮೀಡಿಯಾದಲ್ಲಿ ಸಚಿನ್ ಭಾವುಕ ಸಂದೇಶ
Image Credit : Social Media

ಸೋಷಿಯಲ್ ಮೀಡಿಯಾದಲ್ಲಿ ಸಚಿನ್ ಭಾವುಕ ಸಂದೇಶ

ಇನ್ನು ಲಖನೌ ಸೂಪರ್ ಜೈಂಟ್ಸ್‌ ಹಾಗೂ ಪಂಜಾಬ್ ಕಿಂಗ್ಸ್‌ ನಡುವಿನ ಪಂದ್ಯ ಮುಕ್ತಾಯದ ಬಳಿಕ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ತಮ್ಮ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ತಮ್ಮ ಮಗನ ತಾಳ್ಮೆ ಹಾಗೂ ಬದ್ದತೆಯನ್ನು ಕೊಂಡಾಡಿದ್ದಾರೆ.

Related Articles

Related image1
IPL Playoffs ಪಂದ್ಯಕ್ಕೂ ಮೊದಲೇ ಆರ್‌ಸಿಬಿಗೆ ದೊಡ್ಡ ಹಿನ್ನಡೆ; ಸ್ಪೋಟಕ ಬ್ಯಾಟರ್ ತವರಿಗೆ ವಾಪಾಸ್!
Related image2
IPL 2026: ಪಂಜಾಬ್ ಕಿಂಗ್ಸ್ ಗೆಲ್ಲುತ್ತಿದ್ದಂತೆಯೇ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದ ಮತ್ತೊಂದು ತಂಡ!
36
ಅರ್ಜುನ್ ಕ್ರಿಕೆಟ್ ಮೇಲಿನ ಬದ್ದತೆಗೆ ಸಂತಸ ವ್ಯಕ್ತಪಡಿಸಿದ ಸಚಿನ್
Image Credit : X/@spideypant_

ಅರ್ಜುನ್ ಕ್ರಿಕೆಟ್ ಮೇಲಿನ ಬದ್ದತೆಗೆ ಸಂತಸ ವ್ಯಕ್ತಪಡಿಸಿದ ಸಚಿನ್

ವೆಲ್‌ಡನ್ ಅರ್ಜುನ್, ಈ ಸೀಸನ್‌ನಲ್ಲಿ ನೀನು ನಿನ್ನ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟಿದ್ದು, ಕೊನೆಯ ತನಕ ತಾಳ್ಮೆಯಿಂದಿದ್ದು, ಕಠಿಣ ಪರಿಶ್ರಮಪಟ್ಟಿದ್ದು. ಪಾಸಿಟಿವ್ ಆಗಿ ಇದ್ದ ರೀತಿ, ಕೊನೆಯ ಪಂದ್ಯದವರೆಗೂ ಅವಕಾಶಕ್ಕಾಗಿ ಕಾದ ರೀತಿ ನಿಜಕ್ಕೂ ನಿನ್ನೆ ಮೇಲೆ ಹೆಮ್ಮೆ ಎನಿಸುತ್ತಿದೆ.

46
ಅರ್ಜುನ್‌ಗೆ ಕಿವಿ ಮಾತು ಹೇಳಿದ ಸಚಿನ್ ತೆಂಡೂಲ್ಕರ್
Image Credit : X

ಅರ್ಜುನ್‌ಗೆ ಕಿವಿ ಮಾತು ಹೇಳಿದ ಸಚಿನ್ ತೆಂಡೂಲ್ಕರ್

ಕ್ರಿಕೆಟ್‌ ನಿನ್ನಲ್ಲಿ ಎಷ್ಟು ಕೌಶಲ್ಯವಿದೆಯೋ ಅಷ್ಟೇ ತಾಳ್ಮೆಯನ್ನು ಪರೀಕ್ಷಿಸುತ್ತದೆ. ನೀನು ಅವರೆಡನ್ನೂ ಇಂದು ತುಂಬಾ ಚೆನ್ನಾಗಿ ನಿಭಾಯಿಸಿದ್ದೀಯ. ನಿನ್ನ ಕಾಲು ಮೈದಾನದಲ್ಲಿಯೇ ಇರಲಿ. ಹಾಗೆಯೇ ಕ್ರಿಕೆಟ್‌ ಮೇಲಿನ ಪ್ರೀತಿ ಹೀಗೆಯೇ ಮುಂದುವರೆಯಲಿ. ಎಂದಿನಂತೆ ಪ್ರೀತಿಸುತ್ತೇನೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬರೆದುಕೊಂಡಿದ್ದಾರೆ.

Well done, Arjun. ❤️
Proud of the way you’ve carried yourself through this season, always believing in your ability, staying patient, working hard quietly, and remaining positive despite having to wait for your opportunity till the very last match.
Cricket tests patience as much… pic.twitter.com/3RdiGkXbfT

— Sachin Tendulkar (@sachin_rt) May 23, 2026

56
ಮುಂಬೈ ಇಂಡಿಯನ್ಸ್‌ನಿಂದ ಲಖನೌ ತೆಕ್ಕೆಗೆ ಜಾರಿದ್ದ ಅರ್ಜುನ್
Image Credit : Asianet News

ಮುಂಬೈ ಇಂಡಿಯನ್ಸ್‌ನಿಂದ ಲಖನೌ ತೆಕ್ಕೆಗೆ ಜಾರಿದ್ದ ಅರ್ಜುನ್

19ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಅರ್ಜುನ್ ತೆಂಡೂಲ್ಕರ್ ಕೇವಲ 30 ಲಕ್ಷ ರುಪಾಯಿಗೆ ಮುಂಬೈ ಇಂಡಿಯನ್ಸ್‌ನಿಂದ ಲಖನೌ ಸೂಪರ್ ಜೈಂಟ್ಸ್‌ ತೆಕ್ಕೆಗೆ ಜಾರಿದ್ದರು. ಇನ್ನು 19ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗಿ 56 ದಿನಗಳು ಹಾಗೂ 67 ಪಂದ್ಯಗಳ ಬಳಿಕ ಕೊನೆಗೂ ಲಖನೌ ಪಾಲಿನ ಕೊನೆಯ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್‌ಗೆ ಐಪಿಎಲ್ ಪಂದ್ಯವನ್ನಾಡಲು ಅವಕಾಶ ಸಿಕ್ಕಿತ್ತು.

66
ಗಮನಾರ್ಹ ಪ್ರದರ್ಶನ ತೋರಿದ ಅರ್ಜುನ್ ತೆಂಡೂಲ್ಕರ್
Image Credit : X/ANI

ಗಮನಾರ್ಹ ಪ್ರದರ್ಶನ ತೋರಿದ ಅರ್ಜುನ್ ತೆಂಡೂಲ್ಕರ್

ಸಿಕ್ಕ ಅವಕಾಶವನ್ನು ಬಳಸಿಕೊಂಡ ಅರ್ಜುನ್ ತೆಂಡೂಲ್ಕರ್ ಬ್ಯಾಟಿಂಗ್‌ನಲ್ಲಿ ಐದು ಎಸೆತಗಳಲ್ಲಿ 5 ರನ್ ಗಳಿಸಿದರು. ಇನ್ನು ಬೌಲಿಂಗ್‌ನಲ್ಲಿ 4 ಓವರ್ ಬೌಲಿಂಗ್ ಮಾಡಿ 9ರ ಎಕನಮಿಯಲ್ಲಿ 36 ರನ್ ನೀಡಿ ಅಪಾಯಕಾರಿ ಬ್ಯಾಟರ್ ಪ್ರಭ್‌ಸಿಮ್ರನ್ ಸಿಂಗ್ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಪಿಎಲ್
ಸಚಿನ್ ತೆಂಡೂಲ್ಕರ್
ಲಕ್ನೋ ಸೂಪರ್ ಜೈಂಟ್ಸ್

Latest Videos
Recommended Stories
Recommended image1
IPL Playoffs ಪಂದ್ಯಕ್ಕೂ ಮೊದಲೇ ಆರ್‌ಸಿಬಿಗೆ ದೊಡ್ಡ ಹಿನ್ನಡೆ; ಸ್ಪೋಟಕ ಬ್ಯಾಟರ್ ತವರಿಗೆ ವಾಪಾಸ್!
Recommended image2
ನನ್ನದು ತಪ್ಪಾಯ್ತು..! ಜಸ್ಪ್ರೀತ್ ಬುಮ್ರಾ ಬಳಿ ಬಹಿರಂಗವಾಗಿ ಕ್ಷಮೆ ಕೇಳಿದ ರಾಮ್‌ಚರಣ್..! ಅಷ್ಟಕ್ಕೂ ಆಗಿದ್ದೇನು?
Recommended image3
ಇಂದು ಐಪಿಎಲ್ ಪ್ಲೇ-ಆಫ್‌ ರೇಸ್‌ ಕ್ಲೈಮ್ಯಾಕ್ಸ್‌: ರಾಜಸ್ಥಾನ, ಕೋಲ್ಕತಾ ಭವಿಷ್ಯ ನಿರ್ಧಾರ
Related Stories
Recommended image1
IPL Playoffs ಪಂದ್ಯಕ್ಕೂ ಮೊದಲೇ ಆರ್‌ಸಿಬಿಗೆ ದೊಡ್ಡ ಹಿನ್ನಡೆ; ಸ್ಪೋಟಕ ಬ್ಯಾಟರ್ ತವರಿಗೆ ವಾಪಾಸ್!
Recommended image2
IPL 2026: ಪಂಜಾಬ್ ಕಿಂಗ್ಸ್ ಗೆಲ್ಲುತ್ತಿದ್ದಂತೆಯೇ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದ ಮತ್ತೊಂದು ತಂಡ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved