ನವದೆಹಲಿ (ಆ.29): ಕಂಡು ಕೇಳರಿಯದ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಹಿಮಾಲ ಯದ ತಪ್ಪಲಿನ ಪುಟ್ಟ ದೇಶ ನೇಪಾಳದಲ್ಲಿ 320 ಭಾರತೀಯರು ನಾಪತ್ತೆಯಾಗಿದ್ದು, ಸುಮಾರು 400 ಮಂದಿ ಚೀನಾದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವಿದೇಶಾಂಗ ಇಲಾಖೆ ಶುಕ್ರವಾರ ಮಾಹಿತಿ ನೀಡಿದೆ. ಈ ನಡುವೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಾಪತ್ತೆಯಾದವರಿಗಾಗಿ ಹುಡುಕಾಟ ಮುಂದುವರಿದಿದ್ದು ಮತ್ತಷ್ಟು ಶವಗಳು ಪತ್ತೆಯಾಗಿವೆ. ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 580ಕ್ಕೆ ಏರಿಕೆಯಾಗಿದೆ. ಸುಮಾರು 1 ಸಾವಿರ ಮಂದಿ ಕಾಣೆಯಾಗಿದ್ದು, ಅವರಿಗಾಗಿ ಶೋಧಕಾರ್ಯ ನಡೆದಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
10:46 PM (IST) Aug 29
ಸಾಮಾನ್ಯ ಸರ್ಕಾರಿ ನೌಕರನೊಬ್ಬ ಅಚಾನಕ್ಕಾಗಿ ಬ್ಯಾಂಕ್ ದರೋಡೆ ಕೇಸ್‌ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಪೊಲೀಸ್, ಮೀಡಿಯಾ, ಸಮಾಜದ ಅನುಮಾನ ಹೀಗೆ ಎಲ್ಲ ಕಡೆಯಿಂದ ಒತ್ತಡ ಬಂದಾಗ, ತನ್ನ ಕುಟುಂಬವನ್ನು ಉಳಿಸಲು ಆತ ಏನು ಮಾಡುತ್ತಾನೆ ಎನ್ನುವುದೇ ಈ ವಿಭಿನ್ನ ಥ್ರಿಲ್ಲರ್ ಕಥೆಯ ತಿರುಳು.
10:32 PM (IST) Aug 29
10:20 PM (IST) Aug 29
ಸಿಎಸ್‌ಕೆ ಆಟಗಾರ ಡೆವಾಲ್ಡ್ ಬ್ರೆವಿಸ್ ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಕೇವಲ 32 ಎಸೆತಗಳಲ್ಲಿ ಅಜೇಯ 75 ರನ್ ಚಚ್ಚುವ ಮೂಲಕ ದಕ್ಷಿಣ ಆಫ್ರಿಕಾಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ. 234ರ ಸ್ಟ್ರೈಕ್ ರೇಟ್‌ನಲ್ಲಿ ಆಡಿ 6 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿ ಬಾರಿಸಿದ ಬ್ರೆವಿಸ್, ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾವನ್ನು ತ್ರಿಕೋನ ಸರಣಿಯಲ್ಲಿ ಜೀವಂತವಾಗಿರಿಸಿದ್ದಾರೆ.
09:16 PM (IST) Aug 29
'ಟಾಕ್ಸಿಕ್' ಸಿನಿಮಾದ 'ವಿಷಯಸ್ ಫೈಟ್' ಅನ್ನೋ ಸರ್ಕಸ್ ಆ್ಯಕ್ಷನ್ ಸೀನ್‌ನ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. ಹಾಲಿವುಡ್ ಸ್ಟಂಟ್ ಕೋಆರ್ಡಿನೇಟರ್ ಜೆಜೆ ಪೆರ್ರಿ, ನಟ ಯಶ್ ಅವರ ಫಿಟ್ನೆಸ್ ಹಾಗೂ ಕ್ರಿಯೇಟಿವ್ ಇನ್‌ಪುಟ್‌ಗಳನ್ನು ಹಾಡಿ ಹೊಗಳಿದ್ದಾರೆ.
09:16 PM (IST) Aug 29
ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಕಳ್ಳತನ ಮಾಡುವಾಗ ಸಾಕುನಾಯಿ ಬೊಗಳಬಾರದು ಎಂಬ ಕಾರಣಕ್ಕೆ ಕಳ್ಳರು ಅದರ ಬಾಯಿಗೆ ಪ್ಲಾಸ್ಟರ್ ಅಂಟಿಸಿ ದರೋಡೆ ನಡೆಸಿದ್ದಾರೆ. ಮಧ್ಯರಾತ್ರಿ ಸುರಿದ ಭಾರಿ ಮಳೆಯ ಲಾಭ ಪಡೆದು ಮನೆಯ ಬೀಗ ಮುರಿದ ಖದೀಮರು ಸುಮಾರು 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 40,000 ರೂ. ನಗದು ದೋಚಿ ಪರಾರಿಯಾಗಿದ್ದಾರೆ.
07:28 PM (IST) Aug 29
06:59 PM (IST) Aug 29
06:32 PM (IST) Aug 29
05:57 PM (IST) Aug 29
ಇತ್ತೀಚಿಗಿನ ವರ್ಷಗಳಲ್ಲಿ ನಮ್ಮ ಅನಾರೋಗ್ಯಕರ ಜೀವನಶೈಲಿ ಹಾಗೂ ಆಹಾರ ಪದ್ದತಿಯಿಂದ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆಯಾಗುವುದನ್ನು ಕೇಳುತ್ತಲೇ ಬರುತ್ತಿದ್ದೇವೆ. ಅಷ್ಟಕ್ಕೂ ಕಿಡ್ನಿಯಲ್ಲಿ ಕಲ್ಲಾಗುವುದು ಅಂದರೆ ಏನು? ಅದರ ಲಕ್ಷಣಗಳೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್
05:55 PM (IST) Aug 29
ಟಾಲಿವುಡ್ ನಟಿ ಮೀನಾಕ್ಷಿ ಚೌಧರಿ ಸಿಂಬು ಬಗ್ಗೆ ಹಿಂದೆ ನೀಡಿದ್ದ ಹೇಳಿಕೆಯೊಂದು ಇದೀಗ ಮತ್ತೆ ವೈರಲ್ ಆಗಿದೆ. ಸಿನಿಮಾ ಇಂಡಸ್ಟ್ರಿಯ ಯಾವ ಹೀರೋ ಜೊತೆ ‘ಮೂವಿ ಡೇಟ್’ಗೆ ಹೋಗಲು ಇಷ್ಟಪಡುತ್ತೀರಿ ಎಂಬ ಪ್ರಶ್ನೆಗೆ ಮೀನಾಕ್ಷಿ, ತಾನು ಸಿಂಬು ಜೊತೆ ಹೋಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು.
05:37 PM (IST) Aug 29
OTT ಪ್ಲಾಟ್‌ಫಾರ್ಮ್‌ಗಳು ಹೊಸ ಸಿನಿಮಾಗಳು ಮತ್ತು ವೆಬ್ ಸಿರೀಸ್‌ಗಳಿಗೆ ದೊಡ್ಡ ವೇದಿಕೆಯಾಗಿವೆ. ಪ್ರತಿವಾರ ಹತ್ತಾರು ಸಿನಿಮಾಗಳು, ಸಿರೀಸ್‌ಗಳು ಬಿಡುಗಡೆಯಾದರೂ ಕೆಲವೇ ಕೆಲವು ಕಂಟೆಂಟ್‌ಗಳು ಮಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತವೆ.
05:36 PM (IST) Aug 29
ಬೆಳಗ್ಗೆ ಅಕ್ಕನ ಮನೆಗೆ ಹೋಗಿ ಖುಷಿ ಖುಷಿಯಾಗಿ ರಾಖಿ ಕಟ್ಟಿಸಿಕೊಂಡು ಬಂದಿದ್ದ. ಸಂಜೆ ವೇಳೆಗೆ ಅದೇ ಅಕ್ಕನಿಗೆ ಶಾಕಿಂಗ್ ಮೆಸೇಜ್ ಒಂದು ಬಂದಿತ್ತು. ಮಮತೆಯ ತೊಟ್ಟಿಲಾಗಿದ್ದ ಅಕ್ಕನಿಗೆ ರಕ್ಷಾ ಬಂಧನ್ ದಿನವೇ ತಮ್ಮ ಮರೆಯಲಾಗದ ನೆನಪನ್ನು ಕೊಟ್ಟು ಹೋಗಿದ್ದಾನೆ.
05:34 PM (IST) Aug 29
ಸೆಪ್ಟೆಂಬರ್ ತಿಂಗಳಲ್ಲಿ ಸೂರ್ಯ, ಬುಧ, ಶುಕ್ರ ಮತ್ತು ಮಂಗಳ ಗ್ರಹಗಳು ತಮ್ಮ ರಾಶಿಗಳನ್ನು ಬದಲಾಯಿಸಲಿವೆ. ಈ ಮಹಾ ಸಂಚಾರವು ಕೆಲವು ರಾಶಿಗಳಿಗೆ ಅದೃಷ್ಟವನ್ನು ತರಲಿದೆ. ಆ ರಾಶಿಗಳು ಯಾವುವು ಅಂತ ನೋಡೋಣ.
05:18 PM (IST) Aug 29
05:05 PM (IST) Aug 29
ಕಿಂಗ್ ನಾಗಾರ್ಜುನ ಅವರ ಬಹುನಿರೀಕ್ಷಿತ 100ನೇ ಸಿನಿಮಾ 'ಕಿಂಗ್ 100'ನ ಟೈಟಲ್ ಗ್ಲಿಂಪ್ಸ್ ಬಿಡುಗಡೆಯಾಗಿದೆ. ಕಾರ್ತಿಕ್ ನಿರ್ದೇಶನದ ಈ ಚಿತ್ರದಲ್ಲಿ ನಾಗಾರ್ಜುನ ಅವರು ಬಡತನದಿಂದ ಸಾವಿರಾರು ಕೋಟಿ ರೂಪಾಯಿ ಸಾಮ್ರಾಜ್ಯ ಕಟ್ಟಿದ ಉದ್ಯಮಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
04:33 PM (IST) Aug 29
ನೇಪಾಳದ ರಸುವಾ ಜಿಲ್ಲೆಯಲ್ಲಿ ಪ್ರವಾಹಕ್ಕೆ ಕೊಚ್ಚಿಹೋಗಿದ್ದ ನಗದು ತುಂಬಿದ ಭದ್ರತಾ ಪೆಟ್ಟಿಗೆಯೊಂದು ನೆರೆಯ ಧಾಡಿಂಗ್ ಜಿಲ್ಲೆಯ ತ್ರಿಶೂಲಿ ನದಿಯ ದಡದಲ್ಲಿ ಪತ್ತೆಯಾಗಿದೆ. ಈ ಪೆಟ್ಟಿಗೆಯನ್ನು ಕಂಡ ಸ್ಥಳೀಯರು ಒಡೆದು ಹಣ ದೋಚಿದ್ದು, ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ 29 ಜನರನ್ನು ಬಂಧಿಸಿ ಸುಮಾರು 57 ಲಕ್ಷ ರೂ. ನಗದನ್ನು ಜಪ್ತಿ ಮಾಡಿದ್ದಾರೆ.
04:27 PM (IST) Aug 29
04:19 PM (IST) Aug 29
ಭಾರತದಲ್ಲಿ 2006ರಲ್ಲಿ ಮೊದಲ ಬಾರಿಗೆ ಬಿಗ್ ಬಾಸ್ ಶುರುವಾದಾಗ ಅರ್ಷದ್ ವಾರ್ಸಿ ನಿರೂಪಣೆ ಮಾಡಿದ್ದರು. ಆಮೇಲೆ ಶಿಲ್ಪಾ ಶೆಟ್ಟಿ, ಮಹಾ ನಾಯಕ ಅಮಿತಾಭ್ ಬಚ್ಚನ್ ಕೂಡ ಬಂದು ಹೋದರು. ಆದರೆ ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಮತ್ತು ಕನ್ನಡದಲ್ಲಿ ಕಿಚ್ಚ ಸುದೀಪ್ ಈ ಶೋಗೆ ಬ್ರಾಂಡ್ ವ್ಯಾಲ್ಯೂ ತಂದುಕೊಟ್ಟರು. ಈ ಸೀಕ್ರೆಟ್ ನೋಡಿ..
04:08 PM (IST) Aug 29
2021ರಲ್ಲಿ ಬಿಡುಗಡೆಯಾದ ಮಲಯಾಳಂನ ಒಂದು ನಿಗೂಢ ಹಾರರ್ ಸಿನಿಮಾವಾಗಿದೆ. ಆರೋಪಿಯೊಬ್ಬನನ್ನು ಬಂಧಿಸಲು ಕಾಡಿನ ಗ್ರಾಮಕ್ಕೆ ಮಾರುವೇಷದಲ್ಲಿ ಬರುವ ಪೊಲೀಸರು, ಅಲ್ಲಿನ ವಿಚಿತ್ರ ಘಟನೆಗಳಿಂದ ಭಯಭೀತರಾಗಿ ಸಿಕ್ಕಿಹಾಕಿಕೊಳ್ಳುತ್ತಾರೆ. ಈ ರೋಚಕ ಸಿನಿಮಾ ಸೋನಿ ಲಿವ್ ಓಟಿಟಿಯಲ್ಲಿ ಲಭ್ಯವಿದೆ.
03:55 PM (IST) Aug 29
03:30 PM (IST) Aug 29
03:30 PM (IST) Aug 29
03:27 PM (IST) Aug 29
02:57 PM (IST) Aug 29
ಉತ್ತರಾಖಂಡದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಭಾಷಣದ ವೇದಿಕೆ 'ಶುದ್ಧೀಕರಣ' ಮಾಡಿದ ಘಟನೆ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ. ಇದು ಅಸ್ಪೃಶ್ಯತೆಯ ಇನ್ನೊಂದು ರೂಪ, ದೇಶದಲ್ಲಿ ಸಂವಿಧಾನ ಮತ್ತು ಆರ್‌ಎಸ್‌ಎಸ್ ಸಿದ್ಧಾಂತದ ನಡುವೆ ರಾಜಕೀಯ ಸಂಘರ್ಷ ನಡೆಯುತ್ತಿದೆ ಎಂದರು.
02:25 PM (IST) Aug 29
ಶಿವ ನಿರ್ದೇಶನದ, ರವಿ ತೇಜ ನಟನೆಯ 'ಇರುಮುಡಿ' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ₹135 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಎಂದು ವರದಿಯಾಗಿದೆ. ಅಪ್ಪ-ಮಗಳ ಬಾಂಧವ್ಯದ ಕಥೆಯುಳ್ಳ ಈ ಸಿನಿಮಾ OTTಯಲ್ಲಿ ಯಾವಾಗ ಬರಲಿದೆ ಗೊತ್ತಾ?
01:42 PM (IST) Aug 29
01:22 PM (IST) Aug 29
ಮೊಬೈಲ್ ಚಾರ್ಜಿಂಗ್‌ನಿಂದ ತೆಗೆಯುವಾಗ ವೈರ್ ಹಿಡಿದು ಎಳೆಯುವುದರಿಂದ ಚಾರ್ಜಿಂಗ್ ಕೇಬಲ್, ಅಡಾಪ್ಟರ್ ಮತ್ತು ಫೋನ್‌ನ ಪೋರ್ಟ್ ಬೇಗನೆ ಹಾಳಾಗಬಹುದು. ಬ್ಯಾಟರಿ ದೀರ್ಘಕಾಲ ಬಾಳಿಕೆ ಬರಲು ಮತ್ತು ಬಿಸಿಯಾಗದಂತೆ ತಡೆಯಲು ಯಾವಾಗಲೂ ಕನೆಕ್ಟರ್‌ನ ಪ್ಲಾಸ್ಟಿಕ್ ಅಥವಾ ಮೆಟಲ್ ಭಾಗವನ್ನು ಹಿಡಿದು ಹೊರತೆಗೆಯಬೇಕು.
12:14 PM (IST) Aug 29
11:44 AM (IST) Aug 29
ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ, ಸಾಲದ ಬಾಧೆಯಿಂದ ಬೇಸತ್ತ ದಂಪತಿಯು ತಮ್ಮ ಮೂರು ವರ್ಷದ ಮಗುವನ್ನು ಸೇತುವೆಯ ಮೇಲೆ ಬಿಟ್ಟು ಗೋದಾವರಿ ನದಿಗೆ ಹಾರಿ ಸಾವಿಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮಗುವನ್ನು ರಕ್ಷಿಸಿ, ದಂಪತಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
11:41 AM (IST) Aug 29
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಬ್ರಾಹ್ಮಣ ಅಭ್ಯರ್ಥಿಗೆ ಟಿಕೆಟ್ ಘೋಷಿಸುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ತಮ್ಮ ಪಕ್ಷವು ಎಲ್ಲರನ್ನೂ ಒಳಗೊಳ್ಳುವ ರಾಜಕೀಯ ತಂತ್ರದ ಭಾಗ ಎಂದು ಸಮರ್ಥಿಸಿಕೊಂಡಿದ್ದಾರೆ.
11:23 AM (IST) Aug 29
10:59 AM (IST) Aug 29
10:38 AM (IST) Aug 29
ಎಸ್ಸೆಲ್ ಗ್ರೂಪ್ ಸಂಸ್ಥಾಪಕ ಸುಭಾಷ್ ಚಂದ್ರ ಅವರ 22,006 ಕೋಟಿ ರೂ. ಸಾಲಕ್ಕೆ NCLT ಕೇವಲ 6.5 ಕೋಟಿ ರೂ. ಮರುಪಾವತಿ ಯೋಜನೆಗೆ ಅನುಮೋದನೆ ನೀಡಿದೆ. ಎಲ್ಲವನ್ನೂ ಕಳೆದುಕೊಂಡಿರುವುದಾಗಿ ಹೇಳಿರುವ ಚಂದ್ರ, ತಾವು ಸ್ವಿಜರ್ಲೆಂಡ್‌ನಲ್ಲಿ ಕೆಲಸ ಮಾಡಲು ಯೋಜಿಸಿರುವುದಾಗಿ ತಿಳಿಸಿದ್ದಾರೆ.
10:16 AM (IST) Aug 29
ದೆಹಲಿಯಲ್ಲಿ 6 ಗಂಟೆಗಳ ಓಲಾ ಪ್ಯಾಕೇಜ್ ಬುಕ್ ಮಾಡಿದ ಪ್ರಯಾಣಿಕರ ಗುಂಪಿಗೆ ಆಘಾತ ಎದುರಾಗಿದೆ. ಕೇವಲ 60 ಕಿ.ಮೀ ಪ್ರಯಾಣಕ್ಕೆ 240 ಕಿ.ಮೀ ಹೆಚ್ಚುವರಿ ಶುಲ್ಕ ಸೇರಿಸಿ 5,662 ರೂ. ಬಿಲ್ ನೀಡಲಾಗಿದ್ದು, ಈ ವಂಚನೆಯ ಬಗ್ಗೆ ಗ್ರಾಹಕ ಸೇವಾ ವಿಭಾಗ ಸ್ಪಂದಿಸಿಲ್ಲ.
10:16 AM (IST) Aug 29
09:25 AM (IST) Aug 29
08:38 AM (IST) Aug 29
ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ನಂತರ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ ಮುಖ್ಯಸ್ಥ ಲಕ್ಷ್ ಗೋಪಿಸೆಟ್ಟಿ ನಾಪತ್ತೆಯಾಗಿದ್ದಾರೆ. ವೈಯಕ್ತಿಕ ಭೇಟಿಗಾಗಿ ತೆರಳಿದ್ದ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಇನ್ಫೋಸಿಸ್ ದೃಢಪಡಿಸಿದ್ದು, ಅವರ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ.
08:17 AM (IST) Aug 29
07:53 AM (IST) Aug 29
ಟಿಬೆಟ್ ಬದಿಯ ಅಣೆಕಟ್ಟು ಮತ್ತೆ ಒಡೆದಿದೆ ಎಂಬ ಮಾಹಿತಿಯಿಂದ ನೇಪಾಳದಲ್ಲಿ ಮತ್ತೊಮ್ಮೆ ಪ್ರವಾಹದ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರವು ಭೋಟೆ ಕೋಶಿ ಮತ್ತು ತ್ರಿಶೂಲಿ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಿ, ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಿದೆ.
07:37 AM (IST) Aug 29