ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಬ್ರಾಹ್ಮಣ ಅಭ್ಯರ್ಥಿಗೆ ಟಿಕೆಟ್ ಘೋಷಿಸುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ತಮ್ಮ ಪಕ್ಷವು ಎಲ್ಲರನ್ನೂ ಒಳಗೊಳ್ಳುವ ರಾಜಕೀಯ ತಂತ್ರದ ಭಾಗ ಎಂದು ಸಮರ್ಥಿಸಿಕೊಂಡಿದ್ದಾರೆ.
ಹೈದರಾಬಾದ್‌ನ ಲೋಕಸಭಾ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥರಾಗಿರುವ ಅಸಾದುದ್ದೀನ್ ಓವೈಸಿ ಅವರನ್ನ ಸಾಮಾನ್ಯವಾಗಿ ಮುಸ್ಲಿಂ ಪಕ್ಷದ ನಾಯಕ ಎಂದೇ ಕರೆಯಲಾಗುತ್ತೆ. ಆದರೆ ಇದೀಗ ಒವೈಸಿ ತೆಗೆದುಕೊಂಡ ಆ ಒಂದು ನಿರ್ಧಾರಕ್ಕೆ ದೇಶದ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.
ಬ್ರಾಹ್ಮಣ ಅಭ್ಯರ್ಥಿಗೆ ಟಿಕೆಟ್!
ಓವೈಸಿ ಸಹೋದರರು ಯಾವಾಗ ಹಿಂದೂ ಬ್ರಾಹ್ಮಣ ಆರೆಸ್ಸೆಸ್ ವಿರುದ್ಧ ಕಟು ಶಬ್ದಗಳಲ್ಲಿ ಒಮ್ಮೊಮ್ಮೆ ಬೆದರಿಕೆ ಹಾಕುವ ಹೇಳಿಕೆ ನೀಡುತ್ತಿರುತ್ತಾರೆ. ಓವೈಸಿ ಸಹೋದರ ಹಿಂದೊಮ್ಮೆ ಪೊಲೀಸರು ಹದಿನೈದು ನಿಮಿಷ ಸುಮ್ಮನಿದ್ದರೆ ನಾವು ಹಿಂದೂಗಳನ್ನು ಮುಗಿಸುತ್ತೇವೆ ಎಂಬಂತ ಹೇಳಿಕೆ ನೀಡಿದ್ದು ನೆನಪಿರಬಹುದು. ಆದರೆ ಈಗ ಅದೇ ಓವೈಸಿಗೆ ಬ್ರಾಹ್ಮಣರ ಮೇಲೆ ಪ್ರೀತಿ ಉಕ್ಕಿ ಹರಿದಿದೆ. 2027 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿಯೇ ಓವೈಸಿ ಅಖಾಡಕ್ಕೆ ಇಳಿದಿದ್ದಾರೆ. ಅವರ ಪಕ್ಷವು ಬ್ರಾಹ್ಮಣ ಅಭ್ಯರ್ಥಿಗೆ ಟಿಕೆಟ್ ಘೋಷಿಸುವ ಮೂಲಕ ಸಂಚಲನ ಸೃಷ್ಟಿಸಿದೆ.
ಎಐಎಂಐಎಮ್‌ನಂತಹ ಮುಸ್ಲಿಂ ಪಕ್ಷದಲ್ಲಿ ಬ್ರಾಹ್ಮಣ ಅಭ್ಯರ್ಥಿಗೆ ಟಿಕೆಟ್ ಕೊಡಲು ನಿರ್ಧರಿಸಿರುವ ಓವೈಸಿಯವರ ಈ ನಿರ್ಧಾರ ರಾಜಕೀಯ ತಂತ್ರಗಾರಿಕೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಉತ್ತರ ಪ್ರದೇಶದ ಮುಂಬರುವ ಚುನಾವಣೆಗೆ ಬ್ರಾಹ್ಮಣರ ಮತಗಳ ಓಲೈಕೆಗೆ ಬ್ರಾಹ್ಮಣ ಕಾರ್ಡ್ ಅಸ್ತ್ರ ಬಳಸುತ್ತಿದ್ದಾರೆ.
ಬ್ರಾಹ್ಮಣರ ಮೇಲೆ ಓವೈಸಿಗೆ ಏಕೆ ಪ್ರೀತಿ?
ಬಹುಸಂಖ್ಯಾತ ಮುಸ್ಲಿಂ ಪಕ್ಷವು ಈಗ ಏಕಾಏಕಿ ಬ್ರಾಹ್ಮಣರ ಮೇಲೆ ಯಾಕೆ ಪ್ರೀತಿ ತೋರಿಸುತ್ತಿದೆ ಎಂಬ ಪ್ರಶ್ನೆ ಕೇಳಿಬರ್ತಿದೆ. ಹಾಗೆ ನೋಡಿದ್ರೆ 'ಬ್ರಾಹ್ಮಣ ಕಾರ್ಡ್' ಈಗ ಪ್ರಾರಂಭವಾಗಿದ್ದಲ್ಲ. 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲೇ AIMIM ಮೊದಲ ಬಾರಿಗೆ ಹಿಂದೂ ಬ್ರಾಹ್ಮಣ ಅಭ್ಯರ್ಥಿಯನ್ನ ಕಣಕ್ಕಿಳಿಸಿತ್ತು. ಗಾಜಿಯಾಬಾದ್ ಜಿಲ್ಲೆಯ ಸಾಹಿಬಾಬಾದ್ ವಿಧಾನಸಭಾ ಕ್ಷೇತ್ರದಿಂದ ಪಂಡಿತ್ ಮನಮೋಹನ್ ಝಾ ಅಲಿಯಾಸ್ ಗಾಮಾ ಅವರಿಗೆ ಓವೈಸಿ ಟಿಕೆಟ್ ಕೊಟ್ಟಿದ್ದರು.
ಪಂಡಿತ್ ಮನಮೋಹನ್ ಝಾ ಯಾರು?
2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ AIMIM ಪಕ್ಷದಿಂದ ಸ್ಪರ್ಧಿಸಿದ್ದ ಪಂಡಿತ್ ಮನಮೋಹನ್ ಝಾ ಅವರು 24 ವರ್ಷಗಳ ಕಾಲ ಸಮಾಜವಾದಿ ಪಕ್ಷದ (SP) ಸದಸ್ಯರಾಗಿದ್ದರು. ಅಲ್ಲಿ ಟಿಕೆಟ್ ಸಿಗದಿದ್ದಾಗ ಅವರು AIMIM ಪಕ್ಷ ಸೇರಿದರು. ಅಶ್ಚರ್ಯಕರ ಸಂಗತಿ ಎಂದರೆ 2022 ರ ಚುನಾವಣಾ ಪಟ್ಟಿಯಲ್ಲಿರುವ ಎಐಎಂಐಎ ಪಕ್ಷದ 66 ಅಭ್ಯರ್ಥಿಗಳಲ್ಲಿ 11 ಜನರು ಹಿಂದೂ ಸಮುದಾಯದವರಾಗಿದ್ದರು! ಇದರರ್ಥ ಶೇಕಡಾ 16 ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಹಿಂದೂಗಳಾಗಿದ್ದರು. ಇದೀಗ ಮುಂಬರುವ ಚುನಾವಣೆಯಲ್ಲೂ ಬ್ರಾಹ್ಮಣ ಕಾರ್ಡ್ ಅಸ್ತ್ರ ಪ್ರಯೋಗಿಸಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಓವೈಸಿ ಬ್ರಾಹ್ಮಣ ಕಾರ್ಡ್ ಸಮರ್ಥನೆ
ಈ ಬಗ್ಗೆ ಸಂಸದ ಓವೈಸಿ ಸಮರ್ಥಿಸಿಕೊಂಡಿದ್ದು, ನಮ್ಮ ಪಕ್ಷ ಕೇವಲ ನಿರ್ದಿಷ್ಟ ಸಮುದಾಯದ ಪಕ್ಷವಾಗಿದೆ. ಅಲ್ಲಿ ಬೇರೆ ಯಾವ ಸಮುದಾಯಕ್ಕೂ ಅವಕಾಶವಿಲ್ಲ ಎಂಬ ಆರೋಪ ಕೇಳಿಬರುತ್ತಿತ್ತು. ಆದರೆ ನಾವು ನಿರ್ದಿಷ್ಟ ಸಮುದಾಯಕ್ಕೆ ಆದ್ಯತೆ ನೀಡಿದ್ದರೆ ಬ್ರಾಹ್ಮಣ ಅಭ್ಯರ್ಥಿಯನ್ನ ಕಣಕ್ಕಿಳಿಸುತ್ತಿರಲಿಲ್ಲ. ನಿಜವಾಗಿಯೂ ಹೇಳುವುದಾದರೆ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ ಎಂದಿದ್ದಾರೆ. 2022 ರ ಚುನಾವಣೆಯಲ್ಲಿ ಮನಮೋಹನ್ ಝಾ 4,305 ಮತಗಳನ್ನು ಪಡೆದರು. ಇದು ವಿಜಯವಲ್ಲದಿದ್ದರೂ ಅವರು ಮುಸ್ಲಿಮೇತರ ಮತದಾರರನ್ನು ತಲುಪಬಹುದು ಎಂಬುದನ್ನು ತೋರಿಸಿತು.
2027 ರ ಚುನಾವಣೆಗೆ ಮುನ್ನ ಈ ತಂತ್ರ ಏಕೆ?
2027 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನವೇ ಎಐಎಂಐಎಂ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಓವೈಸಿ ಸ್ಪಷ್ಟಪಡಿಸಿದ್ದಾರೆ. ಆದರೆ ಸ್ಪರ್ಧಿಸುವ ಸ್ಥಾನಗಳ ಸಂಖ್ಯೆ ಇನ್ನೂ ಸ್ಪಷ್ಟಪಡಿಸಿಲ್ಲ. ಈ ಬಾರಿ ಉತ್ತರಪ್ರದೇಶದ ಚುನಾವಣೆಯಲ್ಲಿ AIMIM ಪಕ್ಷದಿಂದ ಬ್ರಾಹ್ಮಣ ಅಭ್ಯರ್ಥಿಗಳು ಕಣಕ್ಕಿಳಿಯುವುದು ನಿಶ್ಚಿತವಾಗಿದೆ.


