ನವದೆಹಲಿ (ಆ.14): ವಿಪಕ್ಷಗಳ ತೀವ್ರ ಗದ್ದಲ, ಪ್ರತಿಭಟನೆ ಹಾಗೂ ಧರಣಿಗಳ ನಡುವೆಯೇ ಸಂಸತ್ತಿನ ಮುಂಗಾರು ಅಧಿವೇಶನ ಗುರುವಾರ ಮುಕ್ತಾಯಗೊಂಡಿದೆ. ಲೋಕಸಭೆ ಮತ್ತು ರಾಜ್ಯಸಭೆ ಎರಡನ್ನೂ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ಜು.20ರಿಂದ ಆರಂಭವಾಗಿದ್ದ ಅಧಿವೇಶನವು ಕಳಪೆ ಉತ್ಪಾದಕತೆಗೆ ಸಾಕ್ಷಿಯಾಗಿದೆ. ಅಧಿವೇಶನದ ಉದ್ದಕ್ಕೂ ಪ್ರತಿಪಕ್ಷಗಳು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಹಾಗೂ ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು ಪ್ರಕರಣಗಳನ್ನು ಮುನ್ನೆಲೆಗೆ ತಂದು ನಿರಂತರ ಪ್ರತಿಭಟನೆ ನಡೆಸಿದವು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಉತ್ತರಕ್ಕೆ ಪಟ್ಟುಹಿಡಿದವು. ಹೀಗಾಗಿ ಅಧಿವೇಶನದ ಬಹುತೇಕ ಸಮಯ ಗದ್ದಲದಲ್ಲೇ ವ್ಯರ್ಥವಾಯಿತು. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
11:36 PM (IST) Aug 14
ಸನಾತನ ಧರ್ಮದ ಬಗ್ಗೆ ತಾನು ನೀಡಿದ್ದ ಹೇಳಿಕೆ ಕುರಿತು ನಟಿ ಅನಸೂಯಾ ಭಾರದ್ವಾಜ್ ಸ್ಪಷ್ಟನೆ ನೀಡಿದ್ದಾರೆ. ನನ್ನ ಮಾತುಗಳನ್ನು ತಿರುಚಿ ಪ್ರಚಾರ ಮಾಡಲಾಗುತ್ತಿದೆ, ಯಾವುದೇ ಧರ್ಮವನ್ನು ಅವಮಾನಿಸುವ ಉದ್ದೇಶ ನನಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ
10:53 PM (IST) Aug 14
ವೆಂಕಿ ಅಟ್ಲೂರಿ ನಿರ್ದೇಶನದ 'ವಿಶ್ವನಾಥ್ ಅಂಡ್ ಸನ್ಸ್' ಚಿತ್ರದಲ್ಲಿ ಸೂರ್ಯ ಮೊದಲ ಬಾರಿಗೆ ನಟಿಸಿದ್ದಾರೆ. ಇಂದು ಬಿಡುಗಡೆಯಾದ ಈ ಸಿನಿಮಾ ಹೇಗಿದೆ? ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆಯೇ? ಇಲ್ಲಿದೆ ಸಂಪೂರ್ಣ ವಿಮರ್ಶೆ.
10:48 PM (IST) Aug 14
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿ ನಂತರ ಏನು ಮಾಡಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳ ಕಾಡಿದೆ. ಅದಕ್ಕೆ ಆರ್.ಅಶ್ವಿನ್ ಉತ್ತರ ನೀಡಿದ್ದಾರೆ.
10:11 PM (IST) Aug 14
ಪ್ರತಿ 2000 ಕಿಲೋ ಮೀಟರ್‌ಗೆ ಬೈಕ್ ಸರ್ವೀಸ್ ಮಾಡಿಸುವುದು ಯಾಕೆ ಅಗತ್ಯ? ಲೇಟ್ ಆದರೆ ಏನಾಗುತ್ತದೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
10:03 PM (IST) Aug 14
09:55 PM (IST) Aug 14
ಥಿಯೇಟರ್‌ನಲ್ಲಿ ಸದ್ದು ಮಾಡಿದ್ದ ಸಿನಿಮಾ, ಬಳಿಕ OTTಯಲ್ಲೂ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ವಿಶೇಷವಾಗಿ ಹಾರರ್, ಮಿಸ್ಟರಿ ಮತ್ತು ಫ್ಯಾಂಟಸಿ ಕಥೆಗಳನ್ನು ಇಷ್ಟಪಡುವವರಿಗೆ ಈ ಸಿನಿಮಾ ಸಖತ್ ಇಂಟರೆಸ್ಟಿಂಗ್ ಆಗಿದೆ.
09:15 PM (IST) Aug 14
ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸಿರೀಸ್ ಆಡಲಿದೆ. ನಾಳೆಯಿಂದ ಮೊದಲ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಂಭಾವ್ಯ ಪ್ಲೇಯಿಂಗ್-11 ಮಾಜಿ ಕ್ರಿಕೆಟಿಕ ಆಕಾಶ್ ಚೋಪ್ರಾ ಪ್ರಕಟಿಸಿದ್ದಾರೆ.
08:44 PM (IST) Aug 14
ಈ ಫೋಟೋದಲ್ಲಿರುವ ಕ್ಯೂಟ್ ಹುಡುಗಿಯನ್ನು ನೋಡಿದರೆ, ಸಿನಿಮಾ ಪ್ರೇಕ್ಷಕರಿಗೆ ಒಮ್ಮೆಲೆ ನೆನಪಾಗದೇ ಇರಬಹುದು. ಆದರೆ ಈ ಚೆಲುವೆ ಸೌತ್ ಸಿನಿರಂಗದಲ್ಲಿ ಒಂದು ಕಾಲದಲ್ಲಿ ಸಖತ್ ಸದ್ದು ಮಾಡಿದ್ದ ನಟಿ.
08:16 PM (IST) Aug 14
ಭಾರತದ ಅನಾಥಾಶ್ರಮಗಳಿಂದ ದತ್ತು ಹೋಗಿ ನೆದರ್ಲ್ಯಾಂಡ್ಸ್‌ನಲ್ಲಿ ಬೆಳೆದ ಇಬ್ಬರು ಬಾಲ್ಯದ ಸ್ನೇಹಿತೆಯರು, 30 ವರ್ಷಗಳ ನಂತರ DNA ಪರೀಕ್ಷೆಯ ಮೂಲಕ ತಾವು ಸ್ವಂತ ಅಕ್ಕ-ತಂಗಿಯರು ಎಂಬ ಸತ್ಯವನ್ನು ಪತ್ತೆಹಚ್ಚಿದ್ದಾರೆ.
08:14 PM (IST) Aug 14
07:51 PM (IST) Aug 14
07:42 PM (IST) Aug 14
ವಿಮಾನ ಪ್ರಯಾಣದ ವೇಳೆ ಸೀಟ್ ಬೆಲ್ಟ್ ಧರಿಸುವುದು ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯ. ಆದರೆ ಪುಟ್ಟ ಮಗುವೊಂದು ಸೀಟ್ ಬೆಲ್ಟ್ ಧರಿಸಲು ನಿರಾಕರಿಸಿದ ಒಂದೇ ಒಂದು ಕಾರಣಕ್ಕೆ ಇಡೀ ವಿಮಾನವೇ ರದ್ದಾದ (Cancel) ಅಪರೂಪದ ಘಟನೆ ಕೆನಡಾದಲ್ಲಿ ನಡೆದಿದೆ. ಅಷ್ಟಕ್ಕೂ ಆಗಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ..
07:34 PM (IST) Aug 14
07:31 PM (IST) Aug 14
ಜಾನ್ವಿ ಕಪೂರ್ ಅವರ ಬಾಂದ್ರಾ ಮನೆ ಕೇವಲ ಒಂದು ಐಷಾರಾಮಿ ಕಟ್ಟಡವಲ್ಲ. ಸುಂದರ ಒಳಾಂಗಣ, ಖಾಸಗಿ ಗಾರ್ಡನ್‌ನಿಂದ ಹಿಡಿದು, ಅಮ್ಮ ಶ್ರೀದೇವಿಯ ನೆನಪುಗಳನ್ನು ಹೊತ್ತಿರುವ ಫೋಟೋಗಳವರೆಗೆ, ಮನೆಯ ಪ್ರತಿಯೊಂದು ಮೂಲೆಯೂ ಪ್ರೀತಿ ಮತ್ತು ನೆನಪುಗಳಿಂದ ತುಂಬಿದೆ.
06:52 PM (IST) Aug 14
06:19 PM (IST) Aug 14
05:59 PM (IST) Aug 14
ಆಂಧ್ರಪ್ರದೇಶದ ಕಾಕಿನಾಡದಲ್ಲಿ, ಸುಮಾರು 6.50 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 50 ಸಾವಿರ ನಗದು ಕದ್ದಿದ್ದ ಕಳ್ಳರು, 15 ದಿನಗಳ ನಂತರ ಪಶ್ಚಾತ್ತಾಪದಿಂದ ಅದನ್ನು ವಾಪಸ್ ತಂದಿಟ್ಟಿದ್ದಾರೆ. ಕದ್ದ ವಸ್ತುಗಳ ಜೊತೆಗೆ, ತಾವು ಮಾಡಿದ್ದು ತಪ್ಪು ಎಂದು ಅರಿವಾಗಿರುವುದಾಗಿ ಮತ್ತು ಖರ್ಚಾದ 22 ಸಾವಿರ ರೂಪಾಯಿ ಹೊರತುಪಡಿಸಿ ಉಳಿದದ್ದನ್ನು ಹಿಂದಿರುಗಿಸುತ್ತಿರುವುದಾಗಿ ಕ್ಷಮಾಪಣೆ ಪತ್ರವನ್ನೂ ಬರೆದಿಟ್ಟಿದ್ದಾರೆ.
05:36 PM (IST) Aug 14
05:24 PM (IST) Aug 14
ಅಕ್ಕಿನೇನಿ ನಾಗಾರ್ಜುನ ಕುಟುಂಬದಲ್ಲಿ, ಅವರಿಗೆ ಮೊಮ್ಮಗಳು ಆಗುವ ಸಂಬಂಧಿಯೊಬ್ಬರಿದ್ದಾರೆ. ಅವರು ಪ್ರಸ್ತುತ ಅನ್ನಪೂರ್ಣ ಸ್ಟುಡಿಯೋಸ್‌ನಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಅವರ ಕುಟುಂಬದಲ್ಲಿ ಒಂದು ದುರಂತವೂ ನಡೆದಿದೆ. ಆ ವಿವರಗಳನ್ನು ಈ ಲೇಖನದಲ್ಲಿ ತಿಳಿಯೋಣ.
05:06 PM (IST) Aug 14
Prabhas Instagram DP: ಸಿನಿಮಾ ತಾರೆಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಪ್ರೊಫೈಲ್ ಪಿಕ್ಚರ್ ಬದಲಿಸುವುದು ಸಾಮಾನ್ಯ ವಿಚಾರ. ಆದರೆ, ಪ್ರಭಾಸ್ ವಿಷಯದಲ್ಲಿ ಅದು ಕೂಡ ಒಂದು ದೊಡ್ಡ ಸುದ್ದಿಯಾಗಿಬಿಟ್ಟಿದೆ.
04:58 PM (IST) Aug 14
2027ರ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಯಾವ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಕೆಕೆಆರ್ ಮತ್ತು ಸಿಎಸ್‌ಕೆ ಹೆಸರುಗಳು ಕೇಳಿಬರುತ್ತಿರುವ ಮಧ್ಯೆ, ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಪಾಂಡ್ಯ ತಮ್ಮ ಹಳೆಯ ತಂಡವಾದ ಗುಜರಾತ್ ಟೈಟಾನ್ಸ್‌ಗೆ ಮರಳಲಿದ್ದಾರೆ ಎಂದು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.
04:50 PM (IST) Aug 14
ಕಿಯಾರಾ ಅಡ್ವಾಣಿ ಅವರ ಡೆಡಿಕೇಷನ್ ಮತ್ತು ಯಶ್ ಅವರ ಈ ಕಾಳಜಿಯ ಕಥೆಗಳು ಈಗ ಸಿನಿಮಾದ ಮೇಲಿನ ಕುತೂಹಲವನ್ನು ನೂರು ಪಟ್ಟು ಹೆಚ್ಚಿಸಿವೆ. ಸದ್ಯಕ್ಕಂತೂ ಕಿಯಾರಾ, ‘ಬಾಡಿಗಾರ್ಡ್’ ಗೀತೂ ಮೋಹನ್‌ದಾಸ್ ಕಥೆಗಳು, ರಾಕಿಂಗ್ ಸ್ಟಾರ್ ಅಸಲಿ ಲೈಫ್‌ನಲ್ಲೂ ಹೀರೋ ಎನಿಸಿಕೊಂಡಿದ್ದು, ಎಲ್ಲವೂ ವೈರಲ್ ಆಗುತ್ತಿವೆ!
02:19 PM (IST) Aug 14
ಕೇಂದ್ರ ಸಚಿವ ಜೆಪಿ ನಡ್ಡಾ ಉಸಿರಾಟ ಸಮಸ್ಯೆಯಿಂದ ಬಳಲಿದ್ದಾರೆ. ತಕ್ಷಣವೇ ಜೆಪಿ ನಡ್ಡಾ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಜೆಪಿ ನಡ್ಡಾ ಕುರಿತು ಆಸ್ಪತ್ರೆ ವೈದ್ಯರು ಹೇಳಿದ್ದೇನು?
01:59 PM (IST) Aug 14
01:32 PM (IST) Aug 14
ಶಿರಡಿ ಸಾಯಿಬಾಬಾ ಮತ್ತು ಸಂಸ್ಥಾನ ಟ್ರಸ್ಟ್ ವಿರುದ್ಧದ ನಿಂದನಾತ್ಮಕ ಯೂಟ್ಯೂಬ್ ವೀಡಿಯೋಗಳ ಕುರಿತು ದೆಹಲಿ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಸಂಸ್ಥಾನ ಸಲ್ಲಿಸಿದ್ದ ಅರ್ಜಿಯ ಮೇರೆಗೆ, ಈ ಆಕ್ಷೇಪಾರ್ಹ ವೀಡಿಯೋಗಳನ್ನು ತೆಗೆದುಹಾಕಲು ನ್ಯಾಯಾಲಯ ಸೂಚಿಸಿದೆ.
01:29 PM (IST) Aug 14
ನಲ್ಸಾರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಹೊರಡಿಸಿದ್ದ ಸುತ್ತೋಲೆಗೆ ಸಿಜೆಐ ಸೂರ್ಯಕಾಂತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಇದು ನನ್ನ ಹಾಗೂ ವಿದ್ಯಾರ್ಥಿಗಳ ನಡುವಿನ ಸಂವಾದ, ಇದರಲ್ಲಿ ಮೂಗು ತೂರಿಸಲು ಅವರು ಯಾರು?' ಎಂದು ಪ್ರಶ್ನಿಸಿದ್ದಾರೆ.
01:15 PM (IST) Aug 14
01:05 PM (IST) Aug 14
ಈ ಇಬ್ಬರು ಸ್ಟಾರ್‌ಗಳ ನಡುವೆ ಎಲ್ಲವನ್ನೂ ಸರಿಪಡಿಸಲು ನಟಿ ಖುಷ್ಬೂ ಸುಂದರ್ ಬಹಳ ಪ್ರಯತ್ನ ಪಟ್ಟರಂತೆ. ತಮ್ಮ ಮಗಳ ಮದುವೆಗೆ ವಿಜಯ್ ಅವರಿಗೆ ಆಮಂತ್ರಣ ನೀಡಿದಾಗ, ಅಲ್ಲಿ ತ್ರಿಶಾ ಕೂಡ ಇರುತ್ತಾರೆ ಎಂಬ ಕಾರಣಕ್ಕೆ ವಿಜಯ್ ಕಾರ್ಯಕ್ರಮಕ್ಕೇ ಹೋಗಲಿಲ್ಲವಂತೆ. ಆದರೆ, ಬ್ರೇಕಪ್‌ಗೆ ಅಸಲಿ ಕಾರಣ ಅದಲ್ಲ, ಇದು.. ಈ ಸ್ಟೋರಿ ನೋಡಿ..
10:46 AM (IST) Aug 14
09:59 AM (IST) Aug 14
09:42 AM (IST) Aug 14
09:38 AM (IST) Aug 14
ಕೇಂದ್ರ ಸಚಿವ ಸುಕಾಂತ ಮಜುಂದಾರ್ ಅವರು, ಪ್ರತಿಪಕ್ಷಗಳು ಸಂಸತ್ತಿನಲ್ಲಿ ಚರ್ಚೆಯಿಂದ ನುಣುಚಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ. ಚರ್ಚೆಗೆ ಸರ್ಕಾರ ಸಿದ್ಧವಿದ್ದು, ವಿಪಕ್ಷಗಳು ಭಾಗವಹಿಸಲಿ ಎಂದು ಸವಾಲು ಹಾಕಿದ್ದಾರೆ. ಆರ್‌ಜಿ ಕರ ಪ್ರಕರಣವನ್ನು ಪ್ರಸ್ತಾಪಿಸಿ ಸರ್ಕಾರದ ಕ್ರಮ ಪ್ರಶ್ನಿಸಿದ್ದಾರೆ.
09:28 AM (IST) Aug 14
08:47 AM (IST) Aug 14
08:11 AM (IST) Aug 14
ಚೀನಾದ ಮ್ಯಾಗ್ಲೇವ್ ಬುಲೆಟ್ ರೈಲು ಕೇವಲ 5.3 ಸೆಕೆಂಡುಗಳಲ್ಲಿ ಗಂಟೆಗೆ 800 ಕಿ.ಮೀ. ವೇಗವನ್ನು ತಲುಪುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದೆ. ಈ ಕಾಂತೀಯ ತೇಲುವಿಕೆ ತಂತ್ರಜ್ಞಾನವನ್ನು ಸಾರ್ವಜನಿಕ ಸಾರಿಗೆಗೆ ಬಳಸಾಗೋದಿಲ್ಲ.
08:00 AM (IST) Aug 14