ಕೇಂದ್ರ ಸಚಿವ ಜೆಪಿ ನಡ್ಡಾ ಉಸಿರಾಟ ಸಮಸ್ಯೆಯಿಂದ ಬಳಲಿದ್ದಾರೆ. ತಕ್ಷಣವೇ ಜೆಪಿ ನಡ್ಡಾ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಜೆಪಿ ನಡ್ಡಾ ಕುರಿತು ಆಸ್ಪತ್ರೆ ವೈದ್ಯರು ಹೇಳಿದ್ದೇನು?

ನವದೆಹಲಿ (ಆ.14) ಕೇಂದ್ರ ಸಚಿವ ಜೆಪಿ ನಡ್ಡಾ ಆರೋಗ್ಯದಲ್ಲಿ ಏರುಪೇರಾಗಿದ್ದು , ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಸಿರಾಟ ಸಮಸ್ಯೆಯಿಂದ ಬಳಲಿದ ಜೆಪಿ ನಡ್ಡಾ ಅವರನ್ನು ತಕ್ಷಣ ಆಸ್ಪತ್ಪೆ ದಾಖಲಿಸಲಾಗಿದೆ. ವೈದ್ಯರ ಸೂಚನೆಯಂತೆ ಕಾರ್ಡಿಯಾಲಜಿ ವಿಭಾಗದಲ್ಲಿ ಅಡ್ಮಿಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನರಿ ಆ್ಯಂಡಿಗ್ರಫಿ ಮಾಡಲಾಗಿದ್ದು, ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಹೇಳಿದೆ.

ಜೆಪಿ ನಡ್ಡಾ ಆರೋಗ್ಯ ಸ್ಥಿರ

ದೆಹಲಿ ಏಮ್ಸ್ ಆಸ್ಪತ್ರೆಯ ಕಾರ್ಡಿಯಲಜಿ ವಿಭಾಗದಲ್ಲಿ ಜೆಪಿ ನಡ್ಡಾ ಅವರಿಗೆ ಹಲವು ಪರೀಕ್ಷೆಗಳನ್ನು ನಡೆಸಲಾಗಿದೆ. ಸದ್ಯ ಆ್ಯಂಜಿಯೋಗ್ರಾಮ್ ಟೆಸ್ಟ್ ವರದಿಯಲ್ಲಿ ಜೆಪಿ ನಡ್ಡಾ ಉಸಿರಾಟ ಸಮಸ್ಯೆ ಅಸಲಿ ಆರೋಗ್ಯ ಸಮಸ್ಯೆಗಳು ಬಹಿರಂಗವಾಗಲಿದೆ. ಜೆಪಿ ನಡ್ಡಾ ಆಸ್ಪತ್ರ ದಾಖಲು ಹಾಗೂ ವೈದ್ಯಕೀಯ ಪರೀಕ್ಷೆ ಕುರಿತು ದೆಹಲಿ ಏಮ್ಸ್ ಆಸ್ಪತ್ಪೆ ಮಾಹಿತಿ ನೀಡಿದೆ. ಕೇಂದ್ರ ಸಚಿವ ಜೆಪಿ ನಡ್ಡಾ ಉಸಿರಾಟದ ಸಮಸ್ಯೆಯಿಂದ ಏಮ್ಸ್ ಆಸ್ಪತ್ರೆ ದಾಖಲಾಗಿದ್ದಾರೆ. ನಡ್ಡಾ ಆವರ ಆರೋಗ್ಯ ಸ್ಥಿತಿ ಪರಿಶೀಲಿಸಿ ಕೊರೊನರ್ ಆ್ಯಂಡಿಯೋಗ್ರಫಿ ಟೆಸ್ಟ್ ಮಾಡಲಾಗಿದೆ. ಜೆಪಿ ನಡ್ಡಾ ಆರೋಗ್ಯ ಸ್ಥಿರವಾಗಿದೆ ಎಂದು ಮಾಹಿತಿ ನಡಿದೆ. ಸದ್ಯ ಜೆಪಿ ನಡ್ಡಾ ಚಿಕಿತ್ಸೆ ಮುಂದುವರಿದಿದೆ. ವರದಿ ಬಳಿಕ ವೈದ್ಯರು ಜೆಪಿ ನಡ್ಡಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದ್ದಾರೆ.

ಆಗಸ್ಟ್ 13ರ ಸಂಜೆ ಜೆಪಿ ನಡ್ಡಾಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು. ಆರಂಭಿಕ ಹಂತದಲ್ಲಿ ಉಸಿರಾಟ ಸಮಸ್ಯೆ ತೀವ್ರಗೊಂಡಿದೆ. ಪರಿಣಾಮ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಏಮ್ಸ್ ವೈದ್ಯರ ತಂಡ ಜೆಪಿ ನಡ್ಡಾ ಆರೋಗ್ಯದ ಮೇಲೆ ನಿಗಾ ಇಟ್ಟಿದೆ.

65ರ ಹರೆಯದ ಜೆಪಿ ನಡ್ಡಾ ಕೇಂದ್ರ ಆರೋಗ್ಯ ಸಚಿವರಾಗಿದ್ದಾರೆ. ಹಿಮಾಚಲ ಪ್ರದೇಶ ಮೂಲದ ಜೆಪಿ ನಡ್ಡಾ ಹಾಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿಗೂ ಮೊದಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಎಬಿವಿಪಿ ಮೂಲಕ ವಿದ್ಯಾರ್ಥಿ ಚಳುವಳಿಯಿಂದ ಗುರುತಿಸಿಕೊಂಡ ಜೆಪಿ ನಡ್ಡಾ 1989ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಗಮನಸೆಳೆದಿದ್ದರು. 1993ರಲ್ಲಿ ಹಿಮಾಟಲ ಪ್ರದೇಶದಿಂದ ಶಾಸಕನಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ನಾಯಕನಾಗಿ ಬೆಳೆದಿದ್ದರು. 2014ರಿಂದ 2019ರ ವರೆಗೆ ಕೇಂದ್ರ ಆರೋಗ್ಯ ಸಚಿವರಾಗಿದ್ದ ಜೆಪಿ ನಡ್ಡಾ ಬಳಿಕ 2020ರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷನಾಗಿ ಅಧಿಕಾರವಹಿಸಿಕೊಂಡಿದ್ದರು.