LIVE NOW
Published : Sep 23, 2026, 07:59 AM ISTUpdated : Sep 23, 2026, 10:56 PM IST

India News Live: ಜಪಾನ್‌ಗೆ ಹೋಗಿದ್ದು ಇದಕ್ಕೇನಾ? ಪತಿ ಬುಮ್ರಾಗೆ ಕ್ಲಾಸ್ ತೆಗೆದುಕೊಂಡ ಸಂಜನಾ ಗಣೇಶನ್

ಸಾರಾಂಶ

ಗುಜರಾತಿನ ಕೆವಾಡಿಯಾದ ಏಕತಾ ನಗರದಲ್ಲಿ ಮಂಗಳವಾರ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ ನಟ ಅನಂತ್‌ ನಾಗ್‌ ಅವರಿಗೆ ಚಿತ್ರರಂಗದ ಮೇರು ಗೌರವವಾದ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದರು.  ಉಳಿದಂತೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದ ಕನ್ನಡದ 4, ತುಳು 1 ಸಿನಿಮಾಗೆ ಇದೇ ವೇಳೆ ಗೌರವಿಸಲಾಯಿತು.

ಕನ್ನಡದ ಮಿಥ್ಯ ಸಿನಿಮಾಗೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಲಭಿಸಿತು. ನಿರ್ದೇಶಕ ಸುಮಂತ್‌ ಭಟ್‌ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಉಳಿದಂತೆ ಇದರಲ್ಲಿ ಅಭಿನಯಿಸಿದ್ದ ಅತೀಶ್ ಶೆಟ್ಟಿ ಅವರಿಗೆ ಅತ್ಯುತ್ತಮ ಬಾಲ ನಟ ಪ್ರಶಸ್ತಿ, ಚಿತ್ರದ ಪೋಷಕ ನಟಿ ರೂಪಶ್ರೀ ವರ್ಕಾಡಿ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿಯನ್ನು ಕೂಡ ಇದೇ ವೇಳೆ ಪ್ರದಾನ ಮಾಡಲಾಯಿತು. ಉಳಿದಂತೆ ಕರಾವಳಿ ದೈವರಾಧನೆ ಕಥೆ ಹೊಂದಿರುವ ಇಂಬು ಸಿನಿಮಾ ಅತ್ಯುತ್ತಮ ತುಳು ಚಿತ್ರಕ್ಕೆ ಭಾಜನರಾದ ಹಿನ್ನೆಲೆ ಚಿತ್ರ ನಿರ್ಮಾಪಕ ಪ್ರಶಾಂತ್‌ ರೈ ಮತ್ತು ನಿರ್ದೇಶಕ ಶಿವಧ್ವಜ್‌ ಅವರು ಪ್ರಶಸ್ತಿ ಸ್ವೀಕರಿಸಿದರು.

10:56 PM (IST) Sep 23

ಜಪಾನ್‌ಗೆ ಹೋಗಿದ್ದು ಇದಕ್ಕೇನಾ? ಪತಿ ಬುಮ್ರಾಗೆ ಕ್ಲಾಸ್ ತೆಗೆದುಕೊಂಡ ಸಂಜನಾ ಗಣೇಶನ್

ಟೀಂ ಇಂಡಿಯಾ ವೇಗಿ ಜಸ್‌ಪ್ರಿತ್ ಬುಮ್ರಾ ಜಪಾನ್ ಪ್ರವಾಸದ ವೇಳೆ ಕಸ್ಟಮೈಸ್ಡ್ ದಿಂಬು ಖರೀದಿಸುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಅವರ ಪತ್ನಿ ಸಂಜನಾ ಗಣೇಶನ್ ತಮಾಷೆಯಾಗಿ ಕಾಮೆಂಟ್ ಮಾಡಿ ಕಾಲೆಳೆದಿದ್ದಾರೆ. ಅಷ್ಟಕ್ಕೂ ಅವರು ಏನು ಹೇಳಿದರು? ಸ್ಟೋರಿ ಓದಿ..

Read Full Story

10:26 PM (IST) Sep 23

ಸರ್ಕಾರಿ ಉದ್ಯೋಗಿಗಳು, ಪಿಂಚಣಿದಾರರಿಗೆ ಭಾರೀ ಗುಡ್‌ನ್ಯೂಸ್‌ ನೀಡಿದ ಕೇಂದ್ರ ಸರ್ಕಾರ

ಸೆಪ್ಟೆಂಬರ್ 28 ರಿಂದ ನಡೆಯಲಿರುವ ಬ್ಯಾಂಕ್ ಮುಷ್ಕರದಿಂದಾಗಿ ಸತತ 5 ದಿನಗಳ ಕಾಲ ಬ್ಯಾಂಕಿಂಗ್ ಸೇವೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೇಂದ್ರ ಸರ್ಕಾರವು ಸೆಪ್ಟೆಂಬರ್ 25 ರಂದೇ ನೌಕರರ ವೇತನ ಮತ್ತು ಪಿಂಚಣಿ ಬಿಡುಗಡೆ ಮಾಡಲು ಸೂಚಿಸಿದೆ.

Read Full Story

09:45 PM (IST) Sep 23

'ನ್ಯಾಷನಲ್​ ಕ್ರಷ್'​ ರಿಷಬ್​ ಸಿಂ​ಗ್​ಗೆ ಇನ್​ಸ್ಟಾದಿಂದ್ಲೇ ಮಾಸಿಕ 3 ಲಕ್ಷ ಆದಾಯ! ಮಾಜಿ ಎಸಿಡಿ ರೋಚಕ ಸ್ಟೋರಿ ಕೇಳಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಎಡಿಸಿ ಆಗಿದ್ದ ಮೇಜರ್ ರಿಷಬ್ ಸಿಂಗ್ ಸಂಬ್ಯಾಲ್ 12 ವರ್ಷಗಳ ಸೇವೆ ಬಳಿಕ ಅಕಾಲಿಕ ನಿವೃತ್ತಿ ಪಡೆದು ಅಚ್ಚರಿ ಮೂಡಿಸಿದ್ದಾರೆ. ಪ್ರಸ್ತುತ ಇನ್‌ಸ್ಟಾಗ್ರಾಮ್‌ನಲ್ಲಿ ಪೇಯ್ಡ್ ಸಬ್‌ಸ್ಕ್ರಿಪ್ಷನ್ ಮೂಲಕ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುತ್ತಿರುವ ಇವರು, ತಮ್ಮ ನಿವೃತ್ತಿಗೆ ಕೌಟುಂಬಿಕ ಕಾರಣಗಳೇ ಹೊರತು ಮದುವೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story

09:45 PM (IST) Sep 23

'ನನ್ನ ವಿಡಿಯೋ ಲೀಕ್ ಆದಾಗ 4 ದಿನ ಮನೆಯಿಂದ ಹೊರ ಬಂದಿರಲಿಲ್ಲ' ಕಹಿ ಘಟನೆ ನೆನೆದು ಕಣ್ಣೀರಿಟ್ಟ ಸ್ಟಾರ್ ನಟಿ

ಸಿನಿಮಾ ನಟ, ನಟಿಯ ಹಸಿಬಿಸಿ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಶರವೇಗದಲ್ಲಿ ವೈರಲ್ ಆಗಿಬಿಡುತ್ತವೆ. ಕೆಲವೊಮ್ಮೆ ಈ ದೃಶ್ಯಗಳು ಆ ಕಲಾವಿದನ ವೈಯಕ್ತಿಕ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇಂತಹದೇ ಒಂದು ಕಹಿ ಘಟನೆಯನ್ನ ಬಾಲಿವುಡ್ ನಟಿಯೊಬ್ಬರು ಹೇಗೆ ಎದುರಿಸಿದೆ ಎಂಬುದನ್ನ ವಿವರಿಸಿದ್ದಾರೆ.

Read Full Story

09:06 PM (IST) Sep 23

ಶತಾಬ್ದಿ Vs ವಂದೇ ಭಾರತ್ ರೈಲುಗಳ ನಡುವಿನ ವ್ಯತ್ಯಾಸವೇನು? ಟಿಕೆಟ್ ಬುಕ್ ಮಾಡುವ ಮುನ್ನ ಇದನ್ನು ತಿಳಿಯಿರಿ!

ಭಾರತೀಯ ರೈಲ್ವೆಯ ಶತಾಬ್ದಿ ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಹಗಲಿನ ಪ್ರಯಾಣಕ್ಕೆ ಜನಪ್ರಿಯವಾಗಿವೆ. ಎರಡೂ ರೈಲುಗಳಲ್ಲಿ ಎಸಿ ಸೌಲಭ್ಯ ಮತ್ತು ರಿಸರ್ವೇಶನ್ ವ್ಯವಸ್ಥೆ ಇದ್ದರೂ ವೇಗ, ರೈಲು ನಿರ್ಮಾಣ, ಸೀಟಿಂಗ್, ಆಧುನಿಕ ಸೌಲಭ್ಯಗಳು ಮತ್ತು ಕೋಚ್ ವಿನ್ಯಾಸದಲ್ಲಿ ವ್ಯತ್ಯಾಸಗಳಿವೆ.

Read Full Story

09:00 PM (IST) Sep 23

ಅನುಕಂಪದ ಆಧಾರದ ಹುದ್ದೆ - ಮರುಮದ್ವೆಯಾದ್ರೂ ಸೊಸೆ ಸಂಬಳದ ಶೇ.25 ಭಾಗ ಅತ್ತೆಗೆ- ಹೈಕೋರ್ಟ್​ ಮಹತ್ವದ ತೀರ್ಪು

ಪತಿಯ ಮರಣದ ನಂತರ ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆದು ಮರುಮದುವೆಯಾದ ಮಹಿಳೆಯು ತನ್ನ ಮಾಜಿ ಅತ್ತೆಗೆ ಶೇ. 25ರಷ್ಟು ವೇತನ ನೀಡಬೇಕು ಎಂದು ರಾಜಸ್ಥಾನ ಹೈಕೋರ್ಟ್ ತೀರ್ಪು ನೀಡಿದೆ. ಅನುಕಂಪದ ನೇಮಕಾತಿಯು ವೈಯಕ್ತಿಕ ಆಸ್ತಿಯಲ್ಲ, ಕುಟುಂಬದ ನಿರ್ವಹಣೆ ಅದರ ಮೂಲ ಉದ್ದೇಶ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
Read Full Story

07:45 PM (IST) Sep 23

3 ದಿನಗಳ ಮುಷ್ಕರ ಹಿನ್ನೆಲೆ- ಭಾನುವಾರ ಬ್ಯಾಂಕ್​ಗಳು ಓಪನ್​ - ​ಗ್ರಾಹಕರಿಗೆ ಕೇಂದ್ರದ ಸೂಚನೆ

ಸೆಪ್ಟೆಂಬರ್ 28 ರಿಂದ 30ರ ವರೆಗೆ ಯುಎಫ್‌ಬಿಯು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದ ಗ್ರಾಹಕರಿಗೆ ತೊಂದರೆಯಾಗದಿರಲು ಸೆಪ್ಟೆಂಬರ್ 27ರ ಭಾನುವಾರದಂದು ಎಲ್ಲಾ ಬ್ಯಾಂಕುಗಳು ಕಾರ್ಯನಿರ್ವಹಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಮುಷ್ಕರದ ಹಿನ್ನೆಲೆಯಲ್ಲಿ ಗ್ರಾಹಕರು ಮುಂಚಿತವಾಗಿ ವಹಿವಾಟುಗಳನ್ನು ಯೋಜಿಸಲು ಬ್ಯಾಂಕುಗಳು ಸಲಹೆ ನೀಡಿವೆ.
Read Full Story

07:33 PM (IST) Sep 23

ಕ್ಯಾನ್ಸರ್‍‌ನಿಂದ ಬಳಲುತ್ತಿದ್ದ ಮಾಜಿ ಬಿಗ್‌ಬಾಸ್ ಸ್ಪರ್ಧಿಯ ಸ್ಥಿತಿ ಗಂಭೀರ, ಐಸಿಯುಗೆ ದಾಖಲು

ಬಿಗ್‌ ಬಾಸ್ ಖ್ಯಾತಿಯ ರೇಣು ಸುಧಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ನೇಹಿತೆ ನೀಡಿರುವ ಮಾಹಿತಿ ಪ್ರಕಾರ, ಆರೋಗ್ಯ ತೀರಾ ಕ್ಷೀಣಿಸಿದೆ ಎನ್ನಲಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ.

Read Full Story

06:33 PM (IST) Sep 23

Pressure Cooker Mistakes - ಪ್ರೆಶರ್ ಕುಕ್ಕರ್‌ನಲ್ಲಿ ಅಡುಗೆ ಮಾಡ್ತಿದ್ದೀರಾ? ಹಾಗಿದ್ರೆ ಈ 5 ತಪ್ಪುಗಳನ್ನ ಮಾಡಲೇಬೇಡಿ!

ಪ್ರೆಶರ್ ಕುಕ್ಕರ್ ನಮ್ಮ ಅಡುಗೆ ಕೆಲಸವನ್ನು ಸುಲಭಗೊಳಿಸುತ್ತದೆ. ಆದರೆ, ಕುಕ್ಕರ್ ಅತಿಯಾಗಿ ತುಂಬಿಸುವುದು, ಹೈ ಫ್ಲೇಮ್‌ನಲ್ಲಿ ಬೇಯಿಸುವುದು ಮತ್ತು ಸರಿಯಾಗಿ ನೀರು ಹಾಕದಿರುವಂತಹ ತಪ್ಪುಗಳಿಂದ ಅಡುಗೆಯ ರುಚಿ ಹಾಳಾಗುತ್ತದೆ. ಈ ಸಣ್ಣ ತಪ್ಪುಗಳನ್ನು ತಿದ್ದಿಕೊಂಡರೆ ಅಡುಗೆ ರುಚಿಯಾಗಿರುತ್ತದೆ ಮತ್ತು ಕುಕ್ಕರ್ ಬಾಳಿಕೆ ಬರುತ್ತದೆ.
Read Full Story

06:25 PM (IST) Sep 23

'ನಂಬಿದವರೇ ಮೋಸ ಮಾಡಿದರು' - ನಟಿ ಸಿಲ್ಕ್ ಸ್ಮಿತಾ ಕೊನೆಯ ಪತ್ರದ ಕಥೆ ಇಂದಿಗೂ ನಿಗೂಢ!

ದಕ್ಷಿಣ ಭಾರತದ ಖ್ಯಾತ ನಟಿ ಸಿಲ್ಕ್ ಸ್ಮಿತಾ ಅವರ ಜೀವನ ಮತ್ತು ದುರಂತ ಅಂತ್ಯ ಇಂದಿಗೂ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸುತ್ತದೆ. 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದ ಸಿಲ್ಕ್ ಸ್ಮಿತಾ 35ನೇ ವಯಸ್ಸಿನಲ್ಲಿ ಮೃತಪಟ್ಟರು.

Read Full Story

06:07 PM (IST) Sep 23

Numerology - ಈ ದಿನಾಂಕಗಳಲ್ಲಿ ಹುಟ್ಟಿದವರು ಚಿಕ್ಕ ವಯಸ್ಸಿನಲ್ಲೇ ಕೋಟ್ಯಾಧಿಪತಿಗಳಾಗ್ತಾರೆ! ನಿಮ್ಮ ಬರ್ತ್‌ ಡೇ ಇದೆಯಾ?

Birth Date Numerology: ಚಿಕ್ಕ ವಯಸ್ಸಿನಲ್ಲೇ ಲೈಫ್‌ನಲ್ಲಿ ಸೆಟಲ್ ಆಗಿ ಕೋಟ್ಯಾಧಿಪತಿ ಆಗಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ಆದರೆ ಸಂಖ್ಯಾಶಾಸ್ತ್ರದ ಪ್ರಕಾರ ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಹುಟ್ಟಿದವರಿಗೆ ಮಾತ್ರ ಇದು ಸಾಧ್ಯ. ಆ ಲಕ್ಕಿ ಡೇಟ್ಸ್ ಯಾವುವು ಅಂತ ಇಲ್ಲಿ ನೋಡೋಣ.

Read Full Story

05:46 PM (IST) Sep 23

ಗೃಹಿಣಿಯರೇ ಎಚ್ಚರ, ದಸರಾ, ದೀಪಾವಳಿ ಟೈಮ್‌ನಲ್ಲಿ ಮತ್ತೊಮ್ಮೆ ದೇಶಕ್ಕೆ ಗ್ಯಾಸ್‌ ಸಿಲಿಂಡರ್‌ ಸಂಕಷ್ಟ?

ಪರ್ಷಿಯನ್ ಕೊಲ್ಲಿಯ ಯುದ್ಧದ ಕಾರಣದಿಂದಾಗಿ ಭಾರತಕ್ಕೆ ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಮುಂಬರುವ ಹಬ್ಬದ ಸೀಸನ್‌ನಲ್ಲಿ ಗ್ಯಾಸ್ ಅಭಾವ ತಪ್ಪಿಸಲು ಭಾರತವು ದೇಶೀಯ ಉತ್ಪಾದನೆಯನ್ನು ಹೆಚ್ಚಿಸಿದೆ.

Read Full Story

05:30 PM (IST) Sep 23

ಮಕ್ಕಳಾಗಬೇಕೆಂದರೆ ಮದುವೆಯಾಗಲೇಬೇಕಾ? ಅದಕ್ಕೆ ಹಲವು.. - ನಟಿ ಶ್ರುತಿ ಹಾಸನ್ ಹೇಳೋದೇನು?

ಮದುವೆ, ಜೀವನ ಸಂಗಾತಿ ಮತ್ತು ಮಾತೃತ್ವದ ಬಗ್ಗೆ ನಟಿ ಶ್ರುತಿ ಹಾಸನ್ ಮುಕ್ತವಾಗಿ ಮಾತನಾಡಿದ್ದಾರೆ. ಸೋಹಾ ಅಲಿ ಖಾನ್ ನಡೆಸಿಕೊಡುವ ‘ಆಲ್ ಅಬೌಟ್ ಹರ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಶ್ರುತಿ, ಜೀವನದಲ್ಲಿ ಸಂಗಾತಿ ಬೇಕಾದರೂ ಮದುವೆಯೇ ಅನಿವಾರ್ಯವಲ್ಲ ಎಂದು ಹೇಳಿದ್ದಾರೆ.

Read Full Story

05:22 PM (IST) Sep 23

ರಾಜೀನಾಮೆ ಕೋಲಾಹಲ ನಡುವೆ 8 ಶಾಸಕರು ಬಿಜೆಪಿ ಸೇರ್ಪಡೆ, ನಾಯಕರಿಗೆ ಅಮಿತ್ ಶಾ ಭರವಸೆ

ರಾಜಕೀಯ ಕೋಲಾಹಗಳು ಸೃಷ್ಟಿಯಾಗಿದೆ. ಒಂದೇ ಬಾರಿ 8 ಶಾಸಕರು ಬಿಜೆಪಿ ಸೇರಿಕೊಂಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಪ್ರಮುಖ ಭರವಸೆ ನೀಡಿದ್ದಾರೆ. ಕಿರಣ್ ರಿಜಿಜು ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

Read Full Story

05:13 PM (IST) Sep 23

Zodiac Signs - ಈ 4 ರಾಶಿಯವರು ಯಾರನ್ನೂ ಈಸಿಯಾಗಿ ನಂಬಲ್ಲ, ಆದ್ರೆ ನಂಬಿದ್ರೆ ಪ್ರಾಣಾನೇ ಕೊಡ್ತಾರೆ!

ಸಾಮಾನ್ಯವಾಗಿ ಕೆಲವರು ಹೊಸಬರನ್ನ ಬೇಗ ನಂಬಿಬಿಡ್ತಾರೆ. ಆದ್ರೆ ಇನ್ನು ಕೆಲವರು ಎದುರಿಗಿರೋರ ಬಗ್ಗೆ ಪೂರ್ತಿ ತಿಳಿದುಕೊಂಡ ಮೇಲಷ್ಟೇ ನಂಬ್ತಾರೆ. ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರು ನಂಬಿಕೆ ವಿಚಾರದಲ್ಲಿ ತುಂಬಾನೇ ಹುಷಾರಾಗಿರ್ತಾರೆ. ಆ ರಾಶಿಗಳು ಯಾವುವು ಅಂತ ನೋಡೋಣ.

Read Full Story

04:55 PM (IST) Sep 23

ಬ್ಯಾಂಕ್ ಉದ್ಯೋಗ ಪಡೆಯಲು ಕನಸು ಕಾಣುವವರಿಗೆ ಐಬಿಪಿಎಸ್‌ನಿಂದ 13,706 ಹುದ್ದೆಗಳ ಬೃಹತ್ ನೇಮಕಾತಿ

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ದೇಶಾದ್ಯಂತ 13,706 ಕಚೇರಿ ಸಹಾಯಕ ಮತ್ತು ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪದವಿ, ಡಿಪ್ಲೊಮಾ ಅಥವಾ ಇಂಜಿನಿಯರಿಂಗ್ ಮುಗಿಸಿದ 18 ರಿಂದ 45 ವರ್ಷದೊಳಗಿನ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 27, 2026 ಕೊನೆಯ ದಿನಾಂಕವಾಗಿದೆ.
Read Full Story

04:36 PM (IST) Sep 23

ಐಟಿಬಿಪಿಯಲ್ಲಿ 12ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ - ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯು (ITBP) 21 ಹೆಡ್ ಕಾನ್ಸ್‌ಟೇಬಲ್ (ಮೋಟಾರ್ ಮೆಕ್ಯಾನಿಕ್) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. 12ನೇ ತರಗತಿ ಪಾಸಾದ 18 ರಿಂದ 25 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತರು ಅಕ್ಟೋಬರ್ 27, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Read Full Story

04:28 PM (IST) Sep 23

ಸಿಎಂ ದಳಪತಿ ವಿಜಯ್ ಮಗನ ಸಿನಿಮಾಗೆ ಧ್ವನಿಯಾದ ಸಾನ್ವಿ ಸುದೀಪ್ - ಕಾಲಿವುಡ್‌ನಲ್ಲಿ ಕಿಚ್ಚನ ಪುತ್ರಿ ಹವಾ!

ಸಾನ್ವಿ ಸುದೀಪ್ ಇದೀಗ ಜೇಸನ್ ಸಂಜಯ್ ನಿರ್ದೇಶನದ ‘ಸಿಗ್ಮಾ’ ಸಿನಿಮಾದ ‘ಸುಲೋಚನ’ ಹಾಡಿಗೆ ಧ್ವನಿಯಾಗಿದ್ದಾರೆ. ಎಸ್. ಥಮನ್ ಸಂಗೀತ ಸಂಯೋಜಿಸಿರುವ ಈ ರೊಮ್ಯಾಂಟಿಕ್ ಮೆಲೋಡಿ ಯೂಟ್ಯೂಬ್‌ನಲ್ಲಿ ಗಮನ ಸೆಳೆಯುತ್ತಿದೆ.

Read Full Story

03:58 PM (IST) Sep 23

ಸತ್ಯಭಾಮೆಯ ಕಣ್ಣುಗಳಿಂದ ಬಂದ ಕೃಷ್ಣನ ಕಥೆ.. ಸಂಸ್ಕೃತಿ ಜಯನಾ ಬ್ಯಾಕ್‌ಗ್ರೌಂಡ್ ಗೊತ್ತಾದ್ರೆ ಶಾಕ್ ಆಗ್ತೀರಾ?

ತಮ್ಮ ಕುಟುಂಬದ ಹೆಸರಿನಿಂದ ಜನರು ತಮ್ಮನ್ನು ವಿಭಿನ್ನವಾಗಿ ನೋಡುತ್ತಾರೆ ಎಂಬುದನ್ನು ಸಂಸ್ಕೃತಿ ಒಪ್ಪಿಕೊಂಡಿದ್ದಾರೆ. ಆದರೆ ಅದನ್ನು ಒಳ್ಳೆಯದು ಅಥವಾ ಕೆಟ್ಟದು ಎಂದು ತಾವು ಪರಿಗಣಿಸುವುದಿಲ್ಲ ಎಂದಿದ್ದಾರೆ. ಬದಲಾಗಿ, ಇಂತಹ ಕುಟುಂಬದ ಹಿನ್ನೆಲೆಯಿಂದ ಬಂದಾಗ ಏನಾಗುತ್ತದೆ? ಸಂಸ್ಕೃತಿ ಜಯನಾ ಏನಂದ್ರು..?!

Read Full Story

03:23 PM (IST) Sep 23

ರಿಚಾ ಚಡ್ಡಾ ನಟನೆಗೆ ಬ್ರೇಕ್, ಆ 'ದುರಂತಮಯ ಕಾರಣ' ಬಹಿರಂಗ; ‘ಬ್ರೈನ್ ಫಾಗ್’ ಏಕಾಯ್ತು?!

ಬಾಲಿವುಡ್‌ನಲ್ಲಿ ಮಹಿಳಾ ಪಾತ್ರಗಳ ಬದಲಾವಣೆಯ ಬಗ್ಗೆ ಕೇಳಿದಾಗಲೂ ರಿಚಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತಮ್ಮ ಬಳಿ ಬರುತ್ತಿರುವ ಕೆಲಸದ ಬಗ್ಗೆ ಸಂತಸವಿದೆ ಎಂದ ಅವರು, ಕೆಲವೊಮ್ಮೆ ಮಹಿಳೆಯರನ್ನು ನೋಡುವ ದೃಷ್ಟಿಕೋನ ಉತ್ತಮವಾಗಿರುತ್ತದೆ, ಮತ್ತೆ ಕೆಲವೊಮ್ಮೆ ಅದು ಮೇಲ್ನೋಟಕ್ಕೆ ಸೀಮಿತವಾಗಿರುತ್ತದೆ ಎಂದು ಹೇಳಿದ್ದಾರೆ.

Read Full Story

03:22 PM (IST) Sep 23

ಬಿಜೆಪಿ ರಾಜ್ಯ ಉಸ್ತುವಾರಿ ನಾಯಕರ ಪಟ್ಟಿ ಘೋಷಣೆ, ಹರೀಶ್ ದ್ವಿವೇದಿಗೆ ಕರ್ನಾಟಕ ಜವಾಬ್ದಾರಿ

ಬಿಜೆಪಿ ಮಹತ್ವದ ಘೋಷಣೆ ಮಾಡಿದೆ. ಪ್ರಮುಖ ರಾಜ್ಯಗಳ ಉಸ್ತುವಾರಿ ಹಾಗೂ ಸಹ ಉಸ್ತುವಾರಿ ನಾಯಕರ ಪಟ್ಟಿ ಘೋಷಣೆ ಮಾಡಿದೆ. ಕರ್ನಾಟಕದ ಜವಾಬ್ದಾರಿ ಹರೀಶ್ ದ್ವಿವೇದಿಗೆ ನೀಡಲಾಗಿದೆ. ಇಲ್ಲಿದೆ ಸಂಪೂರ್ಣ ಲಿಸ್ಟ್

Read Full Story

02:34 PM (IST) Sep 23

ಎಲ್‌ನಿನೋ ಪ್ರಕೋಪ ಜಗತ್ತು ತತ್ತರ - ಭಾರತದಲ್ಲೇ 15,800ಕ್ಕೂ ಹೆಚ್ಚು ಸಾವು, ಮುಂಬರುವ ತಿಂಗಳಲ್ಲಿ ತಾಪಮಾನ ಏರಿಕೆ!

ಅಮೆರಿಕದ ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್ ವರದಿಯ ಪ್ರಕಾರ, 'ಎಲ್ ನಿನೋ' ಹವಾಮಾನ ವಿದ್ಯಮಾನದಿಂದಾಗಿ ಮುಂದಿನ ಆರು ತಿಂಗಳಲ್ಲಿ ಜಾಗತಿಕವಾಗಿ 4.5 ಲಕ್ಷಕ್ಕೂ ಹೆಚ್ಚು ಸಾವುಗಳು ಸಂಭವಿಸುವ ಭೀತಿಯಿದೆ. ಈ ಜಾಗತಿಕ ಹವಾಮಾನ ದುರಂತದಲ್ಲಿ ಭಾರತದಲ್ಲೇ ಸುಮಾರು 15,800 ಜನರು ಅತಿಯಾದ ಶಾಖಕ್ಕೆ ಬಲಿಯಾಗಲಿದ್ದಾರೆ. ಪ್ರಕೋಪ ತಡೆಯಲು ಸರ್ಕಾರಗಳು ತುರ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ.
Read Full Story

01:22 PM (IST) Sep 23

Mahindra Thar OG - ಸೂಪರ್ ಲುಕ್, ಪವರ್‌ಫುಲ್ ಇಂಜಿನ್‌ನೊಂದಿಗೆ ಹೊಸ ಥಾರ್ ಲಾಂಚ್; ಕೈಗೆಟುಕುವ ಬೆಲೆ ನಿಗದಿ..!

ಮಹೀಂದ್ರಾದ ಹೊಸ 'ಥಾರ್ OG' ಸೂಪರ್ ಲುಕ್, ಪವರ್‌ಫುಲ್ ಇಂಜಿನ್ ಹಾಗೂ ಟಾಪ್ ಕ್ಲಾಸ್ ಸೇಫ್ಟಿ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಕಂಪನಿಯು ಈ ಹೊಸ ಥಾರ್ OG ಕಾರನ್ನು 10.32 ಲಕ್ಷ ರೂ. ಆರಂಭಿಕ ಬೆಲೆಗೆ ಭಾರತದಲ್ಲಿ ಲಾಂಚ್ ಮಾಡಿದೆ. ಇದರ ಫೀಚರ್‌ಗಳ ಡೀಟೇಲ್ಸ್ ಇಲ್ಲಿದೆ.

Read Full Story

01:13 PM (IST) Sep 23

ಹಂಸ ಹಾಲು ಕುಡಿದು ನೀರು ಬಿಡುವುದು ಸತ್ಯವೇ? ಪೌರಾಣಿಕ ಕಥೆಗೆ ವಿಜ್ಞಾನ ಹೇಳುವುದೇನು?

ಹಂಸಗಳು ಹಾಲಿನಿಂದ ನೀರನ್ನು ಬೇರ್ಪಡಿಸುತ್ತವೆ ಎಂಬುದು ಕೇವಲ ಪೌರಾಣಿಕ ಕಲ್ಪನೆ ಮತ್ತು ಆಧ್ಯಾತ್ಮಿಕ ಸಂಕೇತವಾಗಿದೆ. ವೈಜ್ಞಾನಿಕವಾಗಿ, ಹಂಸದ ಕೊಕ್ಕಿನಲ್ಲಿರುವ 'ಲ್ಯಾಮೆಲ್ಲಾ' ಎಂಬ ರಚನೆಯು ನೀರಿನಿಂದ ಘನ ಆಹಾರವನ್ನು ಮಾತ್ರ ಶೋಧಿಸುತ್ತದೆ. ಒಳ್ಳೆಯದನ್ನು ಸ್ವೀಕರಿಸಿ ಕೆಟ್ಟದ್ದನ್ನು ತ್ಯಜಿಸಬೇಕು ಎಂಬ ಸಂದೇಶವನ್ನು ಸಾರಲು ಈ ರೂಪಕವನ್ನು ಬಳಸಲಾಗಿದೆ.
Read Full Story

01:11 PM (IST) Sep 23

ಆಫ್ರಿಕಾ ಶ್ರೀಮಂತ ವ್ಯಕ್ತಿಯನ್ನೇ ಉದ್ಯೋಗಿಯಾಗಿ ನೇಮಕ ಮಾಡಿದ ಭಾರತದ ಕಂಪನಿ, ಸ್ಯಾಲರಿ ₹4032 ಕೋಟಿ

ಆಫ್ರಿಕಾದ ಶ್ರೀಮಂತ ವ್ಯಕ್ತಿ ಆಲಿಕೋ ಡಾಂಗೋಟೆಯನ್ನು ಭಾರತದ ಕಂಪನಿಯೊಂದು ತನ್ನ ಉದ್ಯೋಗಿಯಾಗಿ ನೇಮಕ ಮಾಡಿಕೊಂಡಿದೆ. ಸ್ಯಾಲರಿಯಾಗಿ ಬರೋಬ್ಬರಿ 4032 ಕೋಟಿ ರೂಪಾಯಿ ನೀಡಲು ಒಪ್ಪಿಕೊಂಡಿದೆ

Read Full Story

12:47 PM (IST) Sep 23

3000 ವರ್ಷಗಳ ರಹಸ್ಯ ಭೇದಿಸಿದ ಈಜಿಪ್ಟ್, ಮರುಭೂಮಿಯಲ್ಲಿ ಪತ್ತೆಯಾಯ್ತು ಕಳೆದುಹೋಗಿದ್ದ 'ಮೆಸೆನ್' ನಗರದ ಸುಳಿವು!

ಈಜಿಪ್ಟ್‌ನ ಉತ್ತರ ಸಿನೈ ಮರುಭೂಮಿಯಲ್ಲಿ 3,000 ವರ್ಷಗಳ ಇತಿಹಾಸವಿರುವ 'ಮೆಸೆನ್' ಎಂಬ ಕಳೆದುಹೋದ ಪ್ರಾಚೀನ ನಗರದ ಕುರುಹುಗಳು ಪತ್ತೆಯಾಗಿವೆ. ಉತ್ಖನನದ ವೇಳೆ ರಾಮೆಸ್ಸೆಸ್ II ಆಳ್ವಿಕೆಯ ಶಾಸನಗಳು ಮತ್ತು ಹೋರಸ್ ದೇವರಿಗೆ ಸಂಬಂಧಿಸಿದ ದೇವಾಲಯದ ಅವಶೇಷಗಳು ದೊರೆತಿವೆ. ಈ ಆವಿಷ್ಕಾರವು ಪ್ರಾಚೀನ ಈಜಿಪ್ಟ್‌ನ ಪ್ರಮುಖ ಮಿಲಿಟರಿ ಮತ್ತು ವ್ಯಾಪಾರ ಕೇಂದ್ರದ ರಹಸ್ಯವನ್ನು ಭೇದಿಸುವ ಭರವಸೆ ಮೂಡಿಸಿದೆ.
Read Full Story

12:17 PM (IST) Sep 23

Python - ಮಳೆಗಾಲದಲ್ಲಿ ಹೆಬ್ಬಾವು ಮನೆಗೆ ಬರದಂತೆ ತಡೆಯುವ ಅಚ್ಚರಿಯ ವಿಧಾನ ಇಲ್ಲಿವೆ

ಮಳೆಗಾಲದಲ್ಲಿ ಹೆಬ್ಬಾವುಗಳು ಸುರಕ್ಷಿತ ಸ್ಥಳ ಹುಡುಕಿಕೊಂಡು ಮನೆಗಳತ್ತ ಬರುವ ಸಾಧ್ಯತೆ ಇರುತ್ತದೆ. ಇವುಗಳನ್ನು ತಡೆಯಲು ಮನೆಯ ಸುತ್ತಮುತ್ತ ಕೆಲವೊಂದು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

Read Full Story

12:02 PM (IST) Sep 23

Mahaveer Karna - ಪೌರಾಣಿಕ ಯೋಧನಾಗಿ ರಾಘವ ಲಾರೆನ್ಸ್; ಫಸ್ಟ್ ಲುಕ್ ಬೆಂಕಿ! ಯಾವಾಗ ರಿಲೀಸ್?

ನಟ, ನಿರ್ದೇಶಕ, ನೃತ್ಯ ನಿರ್ದೇಶಕನಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತುಂಬಾ ಅಭಿಮಾನಿಗಳನ್ನ ಹೊಂದಿರುವ ರಾಘವ್ ಲಾರೆನ್ಸ್ ಈಗ ಹಾರರ್ ಚಿತ್ರದಿಂದ ರಣರೋಚಕ ಕಥೆಯೊಂದಿಗೆ ಪೌರಾಣಿಕ ಚಿತ್ರವೊಂದರಲ್ಲಿ ವೀರಯೋಧನವಾಗಿ ಕಾಣಿಸಿಕೊಂಡಿದ್ದಾರೆ. 'ಮಹಾವೀರ ಕರ್ಣ' ಫಸ್ಟ್ ಲುಕ್ ಹೇಗಿದೆ?

Read Full Story

11:39 AM (IST) Sep 23

ಕಾಲೇಜು ಅರ್ಧಕ್ಕೆ ಬಿಟ್ಟವರು ಮುಂದೆ ಕಟ್ಟಿದ್ದು ₹66,000 ಕೋಟಿಗೂ ಮೀರಿದ ಬಿಸಿನೆಸ್‌ ಸಾಮ್ರಾಜ್ಯ! ಡಿಮಾರ್ಟ್ ಶುರು ಮಾಡುವಾಗ ರಾಧಾಕಿಶನ್ ವಯಸ್ಸೆಷ್ಟು ಗೊತ್ತಾ?

Radhakishan Damani success story : 30 ವರ್ಷಕ್ಕೇ ಲೈಫ್ ಮುಗೀತು ಅಂತ ಕೆಲವರು ಅಂದುಕೊಳ್ತಾರೆ. ಆದ್ರೆ ಸಾಧನೆ ಮಾಡೋಕೆ ವಯಸ್ಸಿನ ಹಂಗಿಲ್ಲ ಅಂತ ಡಿಮಾರ್ಟ್ ಸಂಸ್ಥಾಪಕ ರಾಧಾಕಿಶನ್ ದಮಾನಿ ಪ್ರೂವ್ ಮಾಡಿದ್ದಾರೆ. ಇವರ ಸಕ್ಸಸ್ ಸ್ಟೋರಿ ಪ್ರತಿಯೊಬ್ಬರಿಗೂ ದೊಡ್ಡ ಇನ್ಸ್‌ಪಿರೇಷನ್.

Read Full Story

11:12 AM (IST) Sep 23

ಮುರಿದು ಬಿತ್ತಾ ಲವ್ ಮ್ಯಾರೇಜ್ ಆಗಿದ್ದ ಸೆಲೆಬ್ರಿಟಿ ಜೋಡಿಯ 13 ವರ್ಷಗಳ ದಾಂಪತ್ಯ? ಏನಾಯ್ತು..!?

ಪ್ರೀತಿಯಿಂದ ಆರಂಭವಾಗಿದ್ದ ವಿನು ಮೋಹನ್ ಮತ್ತು ವಿದ್ಯಾ ಅವರ ದಾಂಪತ್ಯ ಇದೀಗ ಪ್ರತ್ಯೇಕತೆಯ ಹಂತ ತಲುಪಿದೆ ಎಂಬ ವರದಿ ಮಲಯಾಳಂ ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದೆ. ಆದರೆ ಇವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಹಲವು ವಿಚಾರಗಳು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಇವರಿಬ್ಬರ ಅಧಿಕೃತ ಹೇಳಿಕೆ ಬರುವವರೆಗೂ ಇದು ಕೇವಲ ವದಂತಿಯಷ್ಟೇ!

Read Full Story

11:01 AM (IST) Sep 23

TRAI ಹೊಸ ನಿಯಮ ಜಾರಿ - 30 ಕೋಟಿ ಮೊಬೈಲ್ ಬಳಕೆದಾರರಿಗೆ ಗುಡ್‌ನ್ಯೂಸ್! ಇನ್ಮುಂದೆ ಇಂಟರ್‌ನೆಟ್ ಡೇಟಾ ಇಲ್ಲದಿದ್ರೂ ಸಿಗುತ್ತೆ ಈ ಸೌಲಭ್ಯ!

TRAI New Rules: ಟ್ರಾಯ್ (TRAI) ಹೊಸ ನಿಯಮದ ಪ್ರಕಾರ, ಟೆಲಿಕಾಂ ಕಂಪನಿಗಳು ಇಂಟರ್‌ನೆಟ್ ಡೇಟಾ ಇಲ್ಲದ ಕೇವಲ ಕರೆ ಮತ್ತು SMS ಸೌಲಭ್ಯದ ಕಡಿಮೆ ದರದ ರೀಚಾರ್ಜ್ ಪ್ಯಾಕ್‌ಗಳನ್ನು ನೀಡುವುದು ಕಡ್ಡಾಯವಾಗಿದೆ. ಇದರಿಂದ ಭಾರತದ 30 ಕೋಟಿ ಮೂಲ ಮೊಬೈಲ್ ಬಳಕೆದಾರರಿಗೆ ಪ್ರಯೋಜನ ಸಿಗಲಿದೆ.

Read Full Story

10:28 AM (IST) Sep 23

ಕುಕ್ಕರ್‌ನಲ್ಲಿ ಬೇಯಿಸಿದ ಅನ್ನ ಉತ್ತಮವೇ? ಅಥವಾ ಸ್ಟೀಮರ್‌ನಲ್ಲಿ ಬೇಯಿಸುವುದು ಆರೋಗ್ಯಕರವೇ?

ಅನ್ನವನ್ನು ಕುಕ್ಕರ್‌ನಲ್ಲಿ ಬೇಯಿಸುವುದು ಮತ್ತು ಪಾತ್ರೆಯಲ್ಲಿ ಬೇಯಿಸಿ ಗಂಜಿ ಬಸಿಯುವ ವಿಧಾನಗಳ ನಡುವಿನ ವ್ಯತ್ಯಾಸಗಳನ್ನು ಈ ಲೇಖನ ವಿವರಿಸುತ್ತದೆ. ಪಾತ್ರೆಯಲ್ಲಿ ಬೇಯಿಸಿದಾಗ ಕೆಲವು ಪೋಷಕಾಂಶಗಳು ನಷ್ಟವಾದರೆ, ಕುಕ್ಕರ್ ವಿಧಾನವು ಪೋಷಕಾಂಶಗಳನ್ನು ಉಳಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವು ಕೇವಲ ಬೇಯಿಸುವ ವಿಧಾನವಲ್ಲದೆ, ಅಕ್ಕಿಯ ಪ್ರಕಾರ ಮತ್ತು ಬೇಯಿಸುವ ಸಮಯವನ್ನು ಅವಲಂಬಿಸಿರುತ್ತದೆ.
Read Full Story

09:59 AM (IST) Sep 23

ನಿಮ್ಮ ಸ್ಮಾರ್ಟ್‌ಫೋನ್ ಸ್ಕ್ರೀನ್ ಗಾರ್ಡ್‌ಗೆ ಕಾದಿದೆ ದೊಡ್ಡ ಕಂಟಕ! 2027ರ ಏಪ್ರಿಲ್ 1ರಿಂದ ಈ ನಿಯಮ ಅನ್ವಯ

ಕೇಂದ್ರ ಸರ್ಕಾರವು 2027ರ ಏಪ್ರಿಲ್ 1ರಿಂದ ಕಳಪೆ ಗುಣಮಟ್ಟದ ಸ್ಮಾರ್ಟ್‌ಫೋನ್ ಸ್ಕ್ರೀನ್ ಗಾರ್ಡ್‌ಗಳನ್ನು ನಿಷೇಧಿಸಲು ನಿರ್ಧರಿಸಿದೆ. ಇನ್ನು ಮುಂದೆ ಸ್ಕ್ರೀನ್ ಗಾರ್ಡ್‌ಗಳು ಕಡ್ಡಾಯವಾಗಿ ಬಿಐಎಸ್ (BIS) ಮಾನದಂಡಗಳನ್ನು ಪಾಲಿಸಬೇಕಾಗುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ಸ್ಕ್ರೀನ್ ಗಾರ್ಡ್‌ಗಳ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ.
Read Full Story

09:52 AM (IST) Sep 23

2027-31ರ ಕ್ರಿಕೆಟ್‌ ಕ್ಯಾಲೆಂಡರ್‌ನಲ್ಲಿ ಭರ್ಜರಿ ಬದಲಾವಣೆ? ODI ಸರಣಿ ಕಡಿತ, T20ಗೆ ಹೆಚ್ಚು ಒತ್ತು!

2027-31ರ ಐಸಿಸಿ ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ದ್ವಿಪಕ್ಷೀಯ ಏಕದಿನ ಪಂದ್ಯಗಳನ್ನು ಕಡಿತಗೊಳಿಸಿ ಟಿ20ಗೆ ಒತ್ತು ನೀಡಲು ಚಿಂತನೆ ನಡೆಸಲಾಗುತ್ತಿದೆ. ಇನ್ನೊಂದೆಡೆ, ಭಾರತದ ಸ್ಮೃತಿ ಮಂಧನಾ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ 11,000 ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Read Full Story

09:26 AM (IST) Sep 23

ಡೆನ್ಮಾರ್ಕ್‌ ವಶದಲ್ಲಿರುವ ಗ್ರೀನ್‌ಲ್ಯಾಂಡ್‌ ಅಮೆರಿಕ ವಶ, ವಿಶ್ವಸಂಸ್ಥೆಯಲ್ಲಿ ಸೇನಾ ಒಪ್ಪಂದಕ್ಕೆ ಟ್ರಂಪ್ ಸಹಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗ್ರೀನ್‌ಲ್ಯಾಂಡ್‌ನಲ್ಲಿ ಸೇನಾ ನೆಲೆ ಸ್ಥಾಪಿಸಲು ಡೆನ್ಮಾರ್ಕ್‌ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಆರ್ಕ್ಟಿಕ್ ಪ್ರದೇಶದಲ್ಲಿ ರಷ್ಯಾ ಮತ್ತು ಚೀನಾದ ಪ್ರಭಾವವನ್ನು ತಡೆಯಲು ಅಮೆರಿಕ ಮುಂದಾಗಿದೆ. ಅಲ್ಲದೆ, ಗ್ರೀನ್‌ಲ್ಯಾಂಡ್‌ನ ಅಪರೂಪದ ಖನಿಜ ಮತ್ತು ತೈಲ ಸಂಪತ್ತಿನ ಮೇಲೆ ಅಮೆರಿಕ ಕಣ್ಣಿಟ್ಟಿದೆ.
Read Full Story

09:21 AM (IST) Sep 23

ಸೈಕ್ಲೋನ್ ಪರಿಣಾಮ ಶಾಲಾ ಕಾಲೇಜಿಗೆ ರಜೆ ಘೋಷಣೆ, ಒಡಿಶಾ-ಆಂಧ್ರ ಪ್ರದೇಶದಲ್ಲಿ ಭಾರಿ ಮಳೆ ಎಚ್ಚರಿಕೆ

ವಾಯುಭಾರ ಕುಸಿತಗೊಂಡ ಪರಿಣಾಮ ಹವಾಮಾನದಲ್ಲಿ ಭಾರಿ ವೈಪರಿತ್ಯ ಸಂಭವಿಸಿದೆ. ಸೈಕ್ಲೋನ್ ಸೃಷ್ಟಿಯಾಗಿರುವ ಪರಿಣಾಮ ಬಿರುಗಾಳಿ ಸಹಿತ ಮಳೆಯಾಗಲಿದೆ ಎಚ್ಚರಿಕೆ ನೀಡಿದೆ. ಹೀಗಾಗಿ ಕೆಲ ರಾಜ್ಯಗಳ ಶಾಲಾ ಕಾಲೇಜಿಗೆ ಇಂದು ರಜೆ ಘೋಷಿಸಲಾಗಿದೆ.

Read Full Story

08:13 AM (IST) Sep 23

ದಾದಾ ಸಾಹೇಬ್ ಫಾಲ್ಕೆ ಸ್ವೀಕರಿಸಿದ ಕನ್ನಡದ 2ನೇ ನಟ ಅನಂತ್ ನಾಗ್; ಮುಂದಿನ ಸಮಾರಂಭಕ್ಕೆ ಪ್ರವಾಸಿ ತಾಣಗಳ ಆಹ್ವಾನ!

ಗುಜರಾತ್‌ನ ಕೆವಾಡಿಯಾದಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ನಟ ಅನಂತ್‌ ನಾಗ್‌ ಅವರಿಗೆ ಪ್ರತಿಷ್ಠಿತ 'ದಾದಾಸಾಹೇಬ್‌ ಫಾಲ್ಕೆ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಇದೇ ವೇಳೆ ಇತರ ಭಾಷೆಯ ಸಾಧಕರಿಗೂ ಪ್ರಶಸ್ತಿ ನೀಡಲಾಗಿದ್ದು, ಮುಂದಿನ ಸಮಾರಂಭ ಆಯೋಜಿಸಲು ರಾಜ್ಯಗಳಿಗೆ ಆಹ್ವಾನ ನೀಡಲಾಗಿದೆ.

Read Full Story

More Trending News