ಟೆಹ್ರಾನ್: ಶುಕ್ರವಾರವಷ್ಟೇ ಹೋರ್ಮುಜ್ ಜಲಸಂಧಿಯನ್ನು ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ ತೆರವು ಮಾಡಿದ್ದ ಇರಾನ್, ಶನಿವಾರ ಪುನಃ ಅದನ್ನು ಬಂದ್ ಮಾಡಿದೆ. ಅದರ ಬೆನ್ನಲ್ಲೇ, 'ಭಾರತ ನಮ್ಮ ಮಿತ್ರ. ಅದರ ಹಡಗುಗಳ ಮೇಲೆ ನಾವು ಕ್ರಮ ಜರು ಗಿಸಲ್ಲ' ಎನ್ನುತ್ತಿದ್ದ ಇರಾನ್ ರಾಗ ಬದಲಿಸಿದೆ ಹಾಗೂ ಜಲಸಂಧಿ ದಾಟಿ ಭಾರತದತ್ತ ಹೊರಟಿದ್ದ 14 ಹಡಗುಗಳನ್ನು ತಡೆದಿದೆ. ಈ ಪೈಕಿ ಒಂದು ಹಡಗಿನ ಮೇಲೆ ಗುಂಡಿನ ದಾಳಿ ಕೂಡಾ ನಡೆದಿದೆ. ಇದರ ನಡುವೆ ಭಾರತದ ಒಂದು ಹಡಗು ಮಾತ್ರ ಜಲಸಂಧಿ ದಾಟುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ ಬ್ರಿಟನ್ ಕೂಡಾ ತನ್ನ 2 ವಾಣಿಜ್ಯ ಹಡಗಿನ ಮೇಲೆ ಹೋರ್ಮುಜ್‌ನಲ್ಲಿ ಗುಂಡಿನ ದಾಳಿ ನಡೆದಿದ್ದಾಗಿ ಹೇಳಿಕೊಂಡಿದೆ. ಗುಂಡಿನ ದಾಳಿಯ ಘಟನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತದ ವಿದೇಶಾಂಗ ಸಚಿವಾಲಯ, ನವದೆಹಲಿಯಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಅವರನ್ನು ಕರೆಸಿ ತನ್ನ ಆಕ್ರೋಶ ವ್ಯಕ್ತಪಡಿಸಿದೆ.

10:43 PM (IST) Apr 19
ಪ್ರಧಾನಿ ಮೋದಿ ದಿಢೀರ್ ಭೇಟಿಯಿಂದ ಸಣ್ಣ ಜಲ್ಮುರಿ ಅಂಗಡಿಗೆ ಈಗ ಜನವೋ ಜನ, ಪಶ್ಚಿಮ ಬಂಗಾಳದಲ್ಲಿ ಸರಣಿ ರ‍್ಯಾಲಿಗಳ ಬಳಿಕ ಅಂಗಡಿಗೆ ತೆರಳಿ ಜಲ್ಮುರಿ ಖರೀದಿಸಿ ಸವಿದಿದ್ದಾರೆ, ಸ್ಥಳೀಯರಿಗೂ ನೀಡಿದ್ದಾರೆ.
08:36 PM (IST) Apr 19
ಕೆಲವು ಹಾಡುಗಳು ಮನಸ್ಸನ್ನು ಮಾತ್ರವಲ್ಲ, ಕಾಲವನ್ನೂ ನಿಲ್ಲಿಸಿಬಿಡುತ್ತವೆ. 'ಪಚ್ಚಮಲ ಪೂವು, ನೀ ಉಚ್ಚಿಮಲ ತೇನು...' ಆ ಸಾಲಿಗೆ ಸೇರುವ ಹಾಡು. ಸಂಗೀತ, ಸಾಹಿತ್ಯ, ಧ್ವನಿ-ಈ ಮೂರೂ ಸೇರಿ ಒಂದು ಮ್ಯಾಜಿಕ್ ಸೃಷ್ಟಿಸಿವೆ.
08:10 PM (IST) Apr 19
ದೇವಸ್ಥಾನಕ್ಕೆ ಹೋಗಿ ಅತ್ತು ಕೂಗಿ ಮರಳಿದ್ದೆ, ಮಗಳ ಸಾವಿನ ನೋವು ಬಿಚ್ಚಿಟ್ಟ ಗಾಯಕಿ ಚಿತ್ರ, ನನಗೆ ವಾಪಸ್ ಬರಲು ಇಷ್ಟವಿರಲಿಲ್ಲ. ಯಾರ ಭೇಟಿಗೂ ಇಷ್ಟವಿರಲಿಲ್ಲ. ಹಾಡು ನಿಲ್ಲಿಸಿದ್ದೆ. ಯಾರಿಗೆ ನೋವು ಮಾಡಿದ್ದೇ ನಾನು? ಕೆಎಸ್ ಚಿತ್ರ ನೋವು ಎಂತವರ ಕಣ್ಣಾಲಿ ತೇವಗೊಳಿಸಲಿದೆ.
08:05 PM (IST) Apr 19
ಸಿನಿಮಾ ಪ್ರೇಕ್ಷಕರು ವಿಭಿನ್ನ ಕಥಾಹಂದರದ ಚಿತ್ರಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಆ ಸಾಲಿಗೆ ಇತ್ತೀಚೆಗೆ ಸೇರಿದ ಚಿತ್ರ 'ತಾಯಿ ಕಿಳವಿ'. ಶಿವಕುಮಾರ್ ಮುರುಗೇಶನ್ ನಿರ್ದೇಶನದ ಈ ಚಿತ್ರವು ಹಾಸ್ಯದ ಜೊತೆಗೆ ಸಾಮಾಜಿಕ ಸಂದೇಶವನ್ನು ಸಾರುತ್ತದೆ.
07:33 PM (IST) Apr 19
ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ಅಗಸ್ತ್ಯ ನಂದಾ ಜೊತೆಗಿನ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ, ಮಗಳ ಹೊಟ್ಟೆ ಕಾಣದಂತೆ ಶಾರುಖ್ ಬಟ್ಟೆ ಸರಿಪಡಿಸಿದ ವಿಡಿಯೋ ವೈರಲ್ ಆಗಿದ್ದು, ಇದು ಅಭಿಮಾನಿಗಳ ಮೆಚ್ಚುಗೆ ಹಾಗೂ ಟ್ರೋಲಿಗರ ಕುಹಕಕ್ಕೆ ಕಾರಣವಾಗಿದೆ.
07:00 PM (IST) Apr 19
ಕೊಹ್ಲಿ ಬ್ಯಾಟಿಂಗ್‌ಗಿಂತ ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಶೋ ಆಫ್ ಹೆಚ್ಚಾಯ್ತು, ಸೋಲಿಗೆ ಫ್ಯಾನ್ಸ್ ಗರಂ ಆಗಿದ್ದಾರೆ. ಕೆಲ ಅಭಿಮಾನಿಗಳು ಡೆಲ್ಲಿ ವಿರುದ್ದ ಆರ್‌ಸಿಬಿ ಸೋಲಿಗೆ ಕೊಹ್ಲಿ ಕಳಪೆ ಬ್ಯಾಟಿಂಗ್ ಕಾರಣ ಎಂದಿದ್ದಾರೆ.
06:18 PM (IST) Apr 19
06:02 PM (IST) Apr 19
ನಟಿ ತಮನ್ನಾ ಭಾಟಿಯಾ ಭಾನುವಾರ ಬೆಳಗ್ಗೆ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ತಮನ್ನಾ, ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಆಶೀರ್ವಾದ ಬೇಡಿದರು.
05:44 PM (IST) Apr 19
ಭಾನುವಾರ ಹೊಂಬಾಳೆ ಫಿಲ್ಮ್ಸ್, ಏಳು ಭಾಗಗಳಲ್ಲಿ ನಿರ್ಮಾಣವಾಗಲಿರುವ ತನ್ನ ಮಹಾವತಾರ ಸಿನೆಮ್ಯಾಟಿಕ್ ಯೂನಿವರ್ಸ್‌ನ ಎರಡನೇ ಚಿತ್ರ 'ಮಹಾವತಾರ ಪರಶುರಾಮ್' ಅನ್ನು ಘೋಷಿಸಿದೆ. ಸಿನಿಮಾ 2027ರ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ.
05:41 PM (IST) Apr 19
ಟೀಂ ಇಂಡಿಯಾದ ಟಿ20 ತಂಡದ ನಾಯಕತ್ವವನ್ನು ಶ್ರೇಯಸ್ ಅಯ್ಯರ್‌ಗೆ ವಹಿಸಿಕೊಡಲು ಬಿಸಿಸಿಐ ಚಿಂತನೆ ನಡೆಸಿದೆ. ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಕಳವಳಕಾರಿಯಾಗಿರುವುದರಿಂದ, ಈ ಪ್ರಮುಖ ಬದಲಾವಣೆಗೆ ಬಿಸಿಸಿಐ ಸಿದ್ಧವಾಗಿದೆ ಎಂದು ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗುತ್ತಿದೆ.
05:19 PM (IST) Apr 19
ಸೂಪರ್ ಸ್ಟಾರ್ ಆರ್ಯ, ಮಂಜು ವಾರಿಯರ್ ನಟನೆಯ 'ಮಿಸ್ಟರ್ ಎಕ್ಸ್' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕರೂ, ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ನಿರಾಶಾದಾಯಕವಾಗಿದೆ. ಚಿತ್ರದ ಕಲೆಕ್ಷನ್ ವರದಿ ಇಲ್ಲಿದೆ.
05:07 PM (IST) Apr 19
ನಟಿ ಸೊನಾಲಿ ರಾವತ್, 'ಬಿಗ್ ಬಾಸ್ ಮರಾಠಿ' ಶೋ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಶೋನಲ್ಲಿ ಹೊರಗೆ ಕಾಣುವ ಗ್ಲಾಮರ್ ಹಿಂದೆ, ಸ್ಪರ್ಧಿಗಳ ಶೋಷಣೆಯ ಕರಾಳ ಸತ್ಯ ಅಡಗಿದೆ ಎಂದು ಅವರು ಹೇಳಿದ್ದಾರೆ.
04:54 PM (IST) Apr 19
04:39 PM (IST) Apr 19
ಗ್ಯಾರೆಂಟಿಯಿಂದ ಕಂಗೆಟ್ಟ ಸರ್ಕಾರ, ಹಿಮಾಚಲ ಅಧಿಕಾರಿಗಳ ಶೇ.30ರಷ್ಟು ವೇತನ 6 ತಿಂಗಳು ಮುಂದೂಡಿಕೆ, ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಾಗಿದೆ. ಇದು ಭಾರಿ ವಿರೋಧಕ್ಕೆ ಕಾರಣವಾಗಿದೆ.
04:35 PM (IST) Apr 19
ಸದ್ಯ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಅಂದ್ರೆ ಅದು ಮೋಹನ್‌ಲಾಲ್-ಜೀತು ಜೋಸೆಫ್ ಕಾಂಬಿನೇಷನ್‌ನ 'ದೃಶ್ಯಂ 3'. ಈ ಚಿತ್ರವನ್ನು ಏಪ್ರಿಲ್ 2 ರಂದು ವಿಶ್ವಾದ್ಯಂತ ರಿಲೀಸ್ ಮಾಡಲು ಮೊದಲು ನಿರ್ಧರಿಸಲಾಗಿತ್ತು.
04:13 PM (IST) Apr 19
ನಟಿ ಸಾಯಿ ಪಲ್ಲವಿ ಅವರದೊಮದು ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ಅವರು ತಮ್ಮ ತಾಯಿ ಹೇಳಿದ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಅದೀಗ ಸಾಕಷ್ಟು ವೈರಲ್ ಅಗುತ್ತಿದೆ.
04:09 PM (IST) Apr 19
03:58 PM (IST) Apr 19
ಮಿಸ್ ಇಂಡಿಯಾ ವರ್ಲ್ಡ್ 2026 ಕಿರೀಟ ಗೆದ್ದ ಸಾಧ್ವಿ ಸೈಲ್ ಯಾರು?, 61ನೇ ಆವೃತ್ತಿ ಫೆಮಿನಾ ಮಿಸ್ ಇಂಡಿಯಾಗೆ ಹೊಸ ಬ್ಯೂಟಿ ಕ್ವೀನ್ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಕಿರೀಟ ಗೆದ್ದ ಹೊಸ ಸುಂದರಿ ಯಾರು?
03:16 PM (IST) Apr 19
ಭಾರತದ ವನ್ಯಜೀವಿ ಸುರಕ್ಷಿತ ರೆಡ್ ರೋಡ್ ಹೆದ್ದಾರಿ ಈಗ ಭಾರಿ ಟ್ರೆಂಡ್, ಕಡಿತಗೊಳ್ಳಲಿದೆ ವೇಗ, ವನ್ಯಜೀವಿಗಳು ರಸ್ತೆ ದಾಟುವಾಗ ಅಪಘಾತಕ್ಕೀಡಾಗಿ ಸಾಯುವ ಪ್ರಮಾಣ ತಗ್ಗಿಸಲು ಈ ಹೆದ್ದಾರಿ ನಿರ್ಮಾಣ ಮಾಡಿದ NHAI ಬಹೇತಕ ಯಶಸ್ವಿಯಾಗಿದೆ.
02:38 PM (IST) Apr 19
ಜಪ್ತಿಯಾದ ವಾಹನ ಬಿಡುಗಡೆಗೆ 55 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಇಬ್ಬರು ಕೇಂದ್ರ ಜಿಎಸ್‌ಟಿ ಅಧಿಕಾರಿಗಳನ್ನು ಗುಜರಾತ್ ಭ್ರಷ್ಟಾಚಾರ ನಿಗ್ರಹದಳ ಬಂಧಿಸಿದೆ. ಮೊದಲ ಕಂತಿನ 10 ಲಕ್ಷ ರೂಪಾಯಿ ಸ್ವೀಕರಿಸುತ್ತಿದ್ದಾಗ ಕಚೇರಿಯಲ್ಲೇ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
02:29 PM (IST) Apr 19
2006ರಲ್ಲಿ ಬಿಡುಗಡೆಯಾದ ಚಿತ್ರದ 6 ನಿಮಿಷದ ದೃಶ್ಯಕ್ಕಾಗಿ 90 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಆದರೆ, ಚಿತ್ರಕ್ಕೆ ಹೊಂದಿಕೆಯಾಗದ ಕಾರಣ ಈ ದುಬಾರಿ ದೃಶ್ಯವನ್ನು ಸಿನಿಮಾದಿಂದ ಅಂತಿಮವಾಗಿ ತೆಗೆದುಹಾಕಲಾಯಿತು, ಇದು ಹಾಲಿವುಡ್‌ನ ಅತ್ಯಂತ ದುಬಾರಿ ಡಿಲೀಟೆಡ್ ದೃಶ್ಯವೆನಿಸಿದೆ.
02:08 PM (IST) Apr 19
01:50 PM (IST) Apr 19
ಬಾಲಿವುಡ್ ನಟ ಅಮಿತಾಭ್ ಬಚ್ಚನ್ 'ಕೂಲಿ' ಚಿತ್ರದ ಚಿತ್ರೀಕರಣದ ವೇಳೆ ಗಾಯಗೊಂಡಾಗ, ಡಾ. ರಾಜ್‌ಕುಮಾರ್ ಅವರು ನಂಜನಗೂಡಿಗೆ ತೆರಳಿ ಉರುಳು ಸೇವೆ ಮಾಡಿ ಪ್ರಾರ್ಥಿಸಿದ್ದರು. ಸಾಹಿತಿ ಜಯಂತ್ ಕಾಯ್ಕಿಣಿ ಮತ್ತು ಸ್ವತಃ ಅಮಿತಾಭ್ ಬಚ್ಚನ್ ಅವರೇ ಈ ಘಟನೆಯನ್ನು ನೆನಪಿಸಿಕೊಂಡಿದ್ದರು.
01:34 PM (IST) Apr 19
ಬಾಲಿವುಡ್- ದಕ್ಷಿಣ ಭಾರತದ ಚಿತ್ರರಂಗದಲ್ಲಿ 'ಆಪಲ್ ಬ್ಯೂಟಿ' ಎಂದೇ ಖ್ಯಾತರಾಗಿರುವ ನಟಿ ಹನ್ಸಿಕಾ ಮೊಟ್ವಾನಿ. ಅವರು ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟಾಗಿನಿಂದಲೂ ಅವರನ್ನು ಒಂದು ವಿವಾದ ಮಾತ್ರ ಬೆನ್ನ ಬಿಡದೆ ಕಾಡುತ್ತಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.
01:23 PM (IST) Apr 19
01:06 PM (IST) Apr 19
12:56 PM (IST) Apr 19
ಪಶ್ಚಿಮ ಬಂಗಾಳದ ಬಿಷ್ಣುಪುರದಲ್ಲಿ ಪ್ರಧಾನಿ ಮೋದಿ ಅವರು ಟಿಎಂಸಿ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಹಿಳಾ ಮೀಸಲಾತಿ ಮಸೂದೆ ವಿಚಾರದಲ್ಲಿ ಈ ಪಕ್ಷಗಳು 'ಷಡ್ಯಂತ್ರ' ಮಾಡಿವೆ ಎಂದು ಆರೋಪಿಸಿದ
12:18 PM (IST) Apr 19
'ಮಕ್ಬೂಲ್', 'ಹೈದರ್' ಮತ್ತು 'ಅಂಧಾಧುನ್' ಅಂತಹ ಸಿನಿಮಾಗಳ ಮೂಲಕ ತಮ್ಮ ನಟನಾ ಚಾತುರ್ಯವನ್ನು ಸಾಬೀತುಪಡಿಸಿರುವ ಇವರು, ಇಂದಿಗೂ ಯುವ ನಟಿಯರಿಗೆ ಸವಾಲು ಹಾಕುವಂತೆ ಬೆಳೆಯುತ್ತಿದ್ದಾರೆ. ಸದ್ಯ ಅವರು ಪ್ರಿಯದರ್ಶನ್ ನಿರ್ದೇಶನದ ಬಹುನಿರೀಕ್ಷಿತ ‘ಭೂತ್ ಬಂಗ್ಲಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
12:15 PM (IST) Apr 19
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲ್-ಲೆಬನಾನ್ ಕದನ ವಿರಾಮದ ಬಗ್ಗೆ ಗೊಂದಲಕಾರಿ ಹೇಳಿಕೆ ನೀಡಿ ಮಿತ್ರರಾಷ್ಟ್ರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಮತ್ತೊಂದೆಡೆ, ಹೋರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್‌ಗೆ ಎಚ್ಚರಿಕೆ ನೀಡಿದ್ದು, ಇದಕ್ಕೆ ಇರಾನ್ ಆಕ್ರೋಶ ವ್ಯಕ್ತಪಡಿಸಿದೆ.
11:34 AM (IST) Apr 19
11:20 AM (IST) Apr 19
ಬಾಲಿವುಡ್ ತಾರಾ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಅವರು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಿಹಿ ಸುದ್ದಿಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮೊದಲ ಮಗುವಿನ ಕೈಯಲ್ಲಿರುವ ಫೋಟೋದೊಂದಿಗೆ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಶುಭಾಶಯ ಹರಿದು ಬರುತ್ತಿವೆ.
11:05 AM (IST) Apr 19
10:25 AM (IST) Apr 19
ಕೇಂದ್ರದ ಎಫ್‌ಸಿಆರ್‌ಎ ತಿದ್ದುಪಡಿ ವಿಧೇಯಕದ ಹಿನ್ನೆಲೆಯಲ್ಲಿ, ದೇವಸ್ಥಾನಗಳಲ್ಲಿರುವ ಚಿನ್ನವನ್ನು ಜನರ ಸೇವೆಗೆ ಬಳಸಬೇಕು ಎಂದು ಕೇರಳದ ಫಾದರ್ ಪೌಲ್ ಥಲೈಕಾಡ್ ಹೇಳಿದ್ದಾರೆ. ಚರ್ಚ್ ಹಣವನ್ನು ಸಮಾಜ ಸೇವೆಗೆ ಬಳಸುವಂತೆ ದೇಗುಲದ ಸಂಪತ್ತನ್ನೂ ಬಳಸಬೇಕು ಎಂಬ ಅವರ ಹೇಳಿಕೆ ವಿವಾದ ಸೃಷ್ಟಿಸಿದೆ.
10:23 AM (IST) Apr 19
10:09 AM (IST) Apr 19
09:54 AM (IST) Apr 19
ದೆಹಲಿ ಪೊಲೀಸರು ನಾಲ್ವರು ಮೂಲಭೂತವಾದಿಗಳನ್ನು ಬಂಧಿಸುವ ಮೂಲಕ ಭಾರೀ ಉಗ್ರ ದಾಳಿಯ ಸಂಚನ್ನು ವಿಫಲಗೊಳಿಸಿದ್ದಾರೆ. ಆರೋಪಿಗಳು ರಿಮೋಟ್ ಕಂಟ್ರೋಲ್ಡ್ ಆಟಿಕೆ ಕಾರು ಬಳಸಿ ಸ್ಫೋಟ ನಡೆಸಲು ಯೋಜಿಸಿದ್ದರು ಮತ್ತು ದೇಶದಲ್ಲಿ ಖಲೀಫತ್ ಸ್ಥಾಪಿಸುವ ಉದ್ದೇಶ ಹೊಂದಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.
09:47 AM (IST) Apr 19
09:46 AM (IST) Apr 19
08:29 AM (IST) Apr 19