ಸದ್ಯ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಅಂದ್ರೆ ಅದು ಮೋಹನ್‌ಲಾಲ್-ಜೀತು ಜೋಸೆಫ್ ಕಾಂಬಿನೇಷನ್‌ನ 'ದೃಶ್ಯಂ 3'. ಈ ಚಿತ್ರವನ್ನು ಏಪ್ರಿಲ್ 2 ರಂದು ವಿಶ್ವಾದ್ಯಂತ ರಿಲೀಸ್ ಮಾಡಲು ಮೊದಲು ನಿರ್ಧರಿಸಲಾಗಿತ್ತು.
ಮಲಯಾಳಂನ ಬಹುನಿರೀಕ್ಷಿತ ಸಿನಿಮಾ 'ದೃಶ್ಯಂ 3' ಬಗ್ಗೆ ನಿರ್ದೇಶಕ ಜೀತು ಜೋಸೆಫ್ ಮಾತನಾಡಿದ್ದಾರೆ. ಈ ಚಿತ್ರಕ್ಕೆ ಬೇರೆ ಬರಹಗಾರರನ್ನು ಸೇರಿಸಿಕೊಳ್ಳುವ ಯಾವುದೇ ಉದ್ದೇಶವಿಲ್ಲ, ಅಭಿಮಾನಿಗಳು ಕಳುಹಿಸುವ ಸ್ಕ್ರಿಪ್ಟ್‌ಗಳನ್ನು ಓದದೇ ಡಿಲೀಟ್ ಮಾಡುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಸದ್ಯ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಅಂದ್ರೆ ಅದು ಮೋಹನ್‌ಲಾಲ್-ಜೀತು ಜೋಸೆಫ್ ಕಾಂಬಿನೇಷನ್‌ನ 'ದೃಶ್ಯಂ 3'. ಈ ಚಿತ್ರವನ್ನು ಏಪ್ರಿಲ್ 2 ರಂದು ವಿಶ್ವಾದ್ಯಂತ ರಿಲೀಸ್ ಮಾಡಲು ಮೊದಲು ನಿರ್ಧರಿಸಲಾಗಿತ್ತು.
ಆದರೆ, ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ಚಿತ್ರದ ಬಿಡುಗಡೆಯನ್ನು ಮೇ 21ಕ್ಕೆ ಮುಂದೂಡಲಾಯಿತು. ವಿಶೇಷ ಅಂದ್ರೆ, ಮೇ 21 ಮೋಹನ್‌ಲಾಲ್ ಅವರ ಹುಟ್ಟುಹಬ್ಬ ಕೂಡ ಹೌದು. 'ದೃಶ್ಯಂ 2' ಓಟಿಟಿಯಲ್ಲಿ ಬಿಡುಗಡೆಯಾಗಿ ದೊಡ್ಡ ಹಿಟ್ ಆಗಿದ್ದರಿಂದ, ಮೂರನೇ ಭಾಗದ ಮೇಲೆ ಪ್ರೇಕ್ಷಕರಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಈಗ, 'ದೃಶ್ಯಂ' ಚಿತ್ರದ ಕಥೆಯ ಬಗ್ಗೆ ನಿರ್ದೇಶಕ ಜೀತು ಜೋಸೆಫ್ ಹೇಳಿದ ಮಾತುಗಳು ಚರ್ಚೆಗೆ ಗ್ರಾಸವಾಗಿವೆ. 'ದೃಶ್ಯಂ' ಮೊದಲ ಭಾಗ ರಿಲೀಸ್ ಆದಾಗ, ಚಿತ್ರಕ್ಕೆ ಎರಡನೇ ಭಾಗ ಬರುತ್ತಾ ಅಂತ ಬಹಳಷ್ಟು ಜನ ಕೇಳುತ್ತಿದ್ದರು.
ಅಷ್ಟೇ ಅಲ್ಲ, 'ದೃಶ್ಯಂ 3'ಗಾಗಿ ಅನೇಕರು ತಮಗೆ ಸ್ಕ್ರಿಪ್ಟ್‌ಗಳನ್ನೂ ಕಳುಹಿಸುತ್ತಿದ್ದರು ಎಂದು ಜೀತು ಜೋಸೆಫ್ ಹೇಳಿದ್ದಾರೆ. ಆದರೆ, ತಾನು ಅಂತಹ ಸ್ಕ್ರಿಪ್ಟ್‌ಗಳನ್ನು ಓದದೇ ಡಿಲೀಟ್ ಮಾಡುತ್ತಿದ್ದೆ ಎಂದೂ ಅವರು ತಿಳಿಸಿದ್ದಾರೆ. 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್'ಗೆ ನೀಡಿದ ಸಂದರ್ಶನದಲ್ಲಿ ಜೀತು ಜೋಸೆಫ್ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ. 'ದೃಶ್ಯಂ' ಸರಣಿಗೆ ಹೊಸ ಬರಹಗಾರರನ್ನು ಕರೆತರುವ ಯಾವುದೇ ಯೋಚನೆ ನನಗಿಲ್ಲ. ಆದರೆ, ಸಾಕಷ್ಟು ಜನ ನನಗೆ ಸ್ಕ್ರಿಪ್ಟ್‌ಗಳನ್ನು ಕಳುಹಿಸುತ್ತಲೇ ಇರುತ್ತಾರೆ. 'ದೃಶ್ಯಂ' ಮೊದಲ ಭಾಗ ಬಂದಾಗ, ಇದಕ್ಕೆ ಸೀಕ್ವೆಲ್ ಇರುತ್ತಾ ಅಂತ ಕೆಲವರು ಕೇಳುತ್ತಿದ್ದರು.
ಖಚಿತತೆ ಇರಲಿಲ್ಲ
ಆಗ ನಾನು ಆ ಪ್ರಶ್ನೆಗಳಿಂದ ನುಣುಚಿಕೊಳ್ಳುತ್ತಿದ್ದೆ. ಯಾಕಂದ್ರೆ, ಆ ಬಗ್ಗೆ ನನಗೇ ಖಚಿತತೆ ಇರಲಿಲ್ಲ. ಹಾಗಾಗಿ, ಹೊಸ ಬರಹಗಾರರ ಬಳಿ ಹೋಗುವ ಉದ್ದೇಶ ನನಗಿಲ್ಲ. 'ದೃಶ್ಯಂ 3'ಗೆ ಅಂತ ಹಲವರು ನನಗೆ ಸ್ಕ್ರಿಪ್ಟ್ ಮೇಲ್ ಮಾಡಿದ್ದರು. ನಾನು ಅವನ್ನು ಓದದೇ ಡಿಲೀಟ್ ಮಾಡುವುದೇ ಸರಿ. ಒಂದು ವೇಳೆ ಓದಿ, ಯಾವುದಾದರೂ ಐಡಿಯಾ ಇಷ್ಟವಾಗಿಬಿಟ್ಟರೆ, ಅದನ್ನು ಬಿಡಲೂ ಆಗಲ್ಲ, ನನ್ನ ಸ್ವಂತ ಐಡಿಯಾ ಜೊತೆ ಮುಂದೆ ಹೋಗಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತೆ. ಅದಕ್ಕಾಗಿಯೇ ಎಲ್ಲಾ ಮೇಲ್‌ಗಳನ್ನು ಡಿಲೀಟ್ ಮಾಡಿಬಿಡುತ್ತೇನೆ," ಎಂದು ಜೀತು ಜೋಸೆಫ್ ವಿವರಿಸಿದ್ದಾರೆ.


