ನಟಿ ಸೊನಾಲಿ ರಾವತ್, 'ಬಿಗ್ ಬಾಸ್ ಮರಾಠಿ' ಶೋ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಶೋನಲ್ಲಿ ಹೊರಗೆ ಕಾಣುವ ಗ್ಲಾಮರ್ ಹಿಂದೆ, ಸ್ಪರ್ಧಿಗಳ ಶೋಷಣೆಯ ಕರಾಳ ಸತ್ಯ ಅಡಗಿದೆ ಎಂದು ಅವರು ಹೇಳಿದ್ದಾರೆ.

ಬಿಗ್ ಬಾಸ್ ಮರಾಠಿ ಶೋನಲ್ಲಿ ಸ್ಪರ್ಧಿಗಳನ್ನು ನಡೆಸಿಕೊಳ್ಳುವ ರೀತಿ ಸರಿ ಇಲ್ಲ, ಅಲ್ಲಿನ ಪರಿಸ್ಥಿತಿ ಅಸಹ್ಯ ಹುಟ್ಟಿಸುವಂತಿದೆ ಎಂದು ನಟಿ ಸೊನಾಲಿ ರಾವತ್ ಆರೋಪಿಸಿದ್ದಾರೆ. 17 ಜನಕ್ಕೆ ಒಂದೇ ಟಾಯ್ಲೆಟ್, ಅಡುಗೆಮನೆಯಲ್ಲಿ ಇಲಿಗಳು ಓಡಾಡುತ್ತಿದ್ದವು, ತನಗೆ ಚರ್ಮರೋಗ ತಗುಲಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ನಟಿ ಸೊನಾಲಿ ರಾವತ್, 'ಬಿಗ್ ಬಾಸ್ ಮರಾಠಿ' ಶೋ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಶೋನಲ್ಲಿ ಹೊರಗೆ ಕಾಣುವ ಗ್ಲಾಮರ್ ಹಿಂದೆ, ಸ್ಪರ್ಧಿಗಳ ಶೋಷಣೆಯ ಕರಾಳ ಸತ್ಯ ಅಡಗಿದೆ ಎಂದು ಅವರು ಹೇಳಿದ್ದಾರೆ. ಶಿಕ್ಷೆಯ ಭಾಗವಾಗಿ 17 ಜನ ಸ್ಪರ್ಧಿಗಳಿಗೆ ಒಂದೇ ಒಂದು ಟಾಯ್ಲೆಟ್ ಬಳಸಲು ಹೇಳಿದ್ದರು, ಅಡುಗೆಮನೆಯಂತೂ ಪೂರ್ತಿ ಇಲಿಗಳಿಂದ ತುಂಬಿಹೋಗಿತ್ತು ಎಂದು ಸೊನಾಲಿ ವಿವರಿಸಿದ್ದಾರೆ. ಅಡುಗೆಮನೆಯಲ್ಲಿದ್ದ ಇಲಿಗಳು ಆಹಾರ ಪದಾರ್ಥಗಳನ್ನು ತಿಂದುಹಾಕುತ್ತಿದ್ದವು. ಊಟದ ತಟ್ಟೆಯಲ್ಲೇ ಜಿರಳೆಗಳು ಸಿಕ್ಕಿವೆ.

ಇನ್ನು, ಶಿಕ್ಷೆಯಾಗಿ 17 ಜನಕ್ಕೆ ಒಂದೇ ಟಾಯ್ಲೆಟ್ ಕೊಟ್ಟಿದ್ದರು. ಕೆಲವರು ಅದರೊಳಗೆ ಕೂತು ಸಿಗರೇಟ್ ಸೇದುತ್ತಿದ್ದರು, ಊಟ ಮಾಡುತ್ತಿದ್ದರು. ಎಲ್ಲೆಂದರಲ್ಲಿ ಕಸ, ಸತ್ತ ಇಲಿಗಳು ಬಿದ್ದಿರುತ್ತಿದ್ದವು ಎಂದು ಸೊನಾಲಿ ಹೇಳಿದ್ದಾರೆ. ಶೋನಲ್ಲಿ ನ್ಯಾಪ್‌ಕಿನ್, ಟವೆಲ್‌ಗಳು ಸಾಕಾಗುತ್ತಿರಲಿಲ್ಲ. ಹೀಗಾಗಿ ಬೇರೆಯವರದ್ದನ್ನು ಕೇಳಿ ಬಳಸಬೇಕಾದ ಸ್ಥಿತಿ ಬಂದಿತ್ತು. ನಾನು ತುಂಬಾನೇ ನಂಬಿಕೆ ಇಟ್ಟು ಬಿಗ್ ಬಾಸ್ ಮರಾಠಿ ಸೀಸನ್ 6ಕ್ಕೆ ಹೋಗಿದ್ದೆ.

ಸೊನಾಲಿ ಆಕ್ರೋಶ

ಆದರೆ, ಅಲ್ಲಿಂದ ವಾಪಸ್ ಬಂದಿದ್ದು ಒಂದು ಸಾಂಕ್ರಾಮಿಕ ಚರ್ಮರೋಗದ ಜೊತೆಗೆ. ಈಗ ಅವರು ಉತ್ತರ ಕೊಡುವ ಸಮಯ ಬಂದಿದೆ ಎಂದು ಸೊನಾಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೊನಾಲಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ್ದು, ಅವರಿಗೆ ಅನೇಕರು ಬೆಂಬಲ ಸೂಚಿಸುತ್ತಿದ್ದಾರೆ. ಶೋನಲ್ಲಿ ತಮಗಾದ ಮಾನಸಿಕ ಮತ್ತು ದೈಹಿಕ ಹಿಂಸೆಗಾಗಿ ಸೊನಾಲಿ, ಬಿಗ್ ಬಾಸ್ ನಿರ್ಮಾಪಕರಿಗೆ ವಕೀಲರ ಮೂಲಕ ನೋಟಿಸ್ ಕಳುಹಿಸಿದ್ದಾರೆ ಎಂಬ ವರದಿಗಳೂ ಇವೆ.