Published : Jul 08, 2026, 07:03 AM ISTUpdated : Jul 08, 2026, 11:47 PM IST

India Latest News Live: Bigg Boss Telugu 10 - ಬಿಗ್ ಬಾಸ್ ತಂಡಕ್ಕೆ ಶಾಕ್ ಕೊಟ್ಟ ನಾಗಾರ್ಜುನ - ಕಿಂಗ್ ಕೇಳಿದ ಸಂಭಾವನೆ ಎಷ್ಟು?

ಸಾರಾಂಶ

ನವದೆಹಲಿ: ಶೀಘ್ರವೇ ತನ್ನ ಮೊತ್ತಮೊದಲ ಉಡ್ಡಯನಕ್ಕೆ ಸಜ್ಜಾಗಿರುವ ಖಾಸಗಿ ವಲಯದ ಸ್ಕೈರೂಟ್‌ ಸಂಸ್ಥೆಯ ವಿಕ್ರಮ್‌ 1 ರಾಕೆಟ್‌, ತನ್ನೊಂದಿಗೆ ಚಿನ್ನ ಮತ್ತು ವಜ್ರವನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯಲಿದೆ. ಚಿನ್ನ ಮತ್ತು ವಜ್ರ ಅತ್ಯಂತ ಕಠಿಣ ವಸ್ತುಗಳಾಗಿದ್ದು, ಅತ್ಯಂತ ಪ್ರಬಲ ಉಷ್ಣವಾಹಕಗಳಾಗಿಯೂ ಗುರುತಿಸಿಕೊಂಡಿವೆ. ಹೀಗಾಗಿ ಇವುಗಳನ್ನು ಬಾಹ್ಯಾಕಾಶದಲ್ಲಿ ಪ್ರಯೋಗಕ್ಕೆ ಒಳಪಡಿಸಿದ ಅದರಿಂದ ಸಿಗುವ ಮಾಹಿತಿಯನ್ನು ಆಧರಿಸಿ ಭವಿಷ್ಯದಲ್ಲಿ ಹೊಸ ತಲೆಮಾರನ ವಿಕಿರಣ ಶೋಧಕಗಳು, ಹೆಚ್ಚಿನ ಸಾಮರ್ಥ್ಯದ ಎಲೆಕ್ಟ್ರಾನಿಕ್‌ ಉಪಕರಣ, ಕ್ವಾಂಟಮ್ ತಂತ್ರಜ್ಞಾನವನ್ನು ಅವಿಷ್ಕರಿಸುವ ಉದ್ದೇಶವನ್ನು ವಿಜ್ಞಾನಿಗಳು ಹೊಂದಿದ್ದಾರೆ.

King Nagarjuna

11:47 PM (IST) Jul 08

Bigg Boss Telugu 10 - ಬಿಗ್ ಬಾಸ್ ತಂಡಕ್ಕೆ ಶಾಕ್ ಕೊಟ್ಟ ನಾಗಾರ್ಜುನ - ಕಿಂಗ್ ಕೇಳಿದ ಸಂಭಾವನೆ ಎಷ್ಟು?

ನಾಗಾರ್ಜುನ ಬಿಗ್ ಬಾಸ್ ತೆಲುಗು ಸೀಸನ್ 3ರಿಂದ ನಿರೂಪಕರಾಗಿದ್ದಾರೆ. ಮೊದಲ ಸೀಸನ್‌ಗೆ ಎನ್‌ಟಿಆರ್, ಎರಡನೇ ಸೀಸನ್‌ಗೆ ನಾನಿ ನಿರೂಪಕರಾಗಿದ್ದರು. ಮೂರನೇ ಸೀಸನ್‌ನಿಂದ ನಾಗಾರ್ಜುನ ಜವಾಬ್ದಾರಿ ವಹಿಸಿಕೊಂಡರು.

Read Full Story

10:44 PM (IST) Jul 08

ಪವನ್ ಕಲ್ಯಾಣ್ ಅಲ್ಲ... ಆಂಧ್ರದ ಮುಂದಿನ ಸಿಎಂ ಜೂ.ಎನ್‌ಟಿಆರ್? ವೇಣು ಸ್ವಾಮಿ ಸ್ಫೋಟಕ ಭವಿಷ್ಯ

ಸಿನಿಮಾ ಮಂದಿಯ ಜಾತಕ ಹೇಳುವುದನ್ನು ನಿಲ್ಲಿಸಿದ್ದ ಜ್ಯೋತಿಷಿ ವೇಣು ಸ್ವಾಮಿ ಮತ್ತೆ ಸುದ್ದಿಯಲ್ಲಿದ್ದಾರೆ. ಪವನ್ ಕಲ್ಯಾಣ್ ಮತ್ತು ಜೂ.ಎನ್‌ಟಿಆರ್ ಅಭಿಮಾನಿಗಳ ನಡುವೆ ತಮ್ಮ ಹೊಸ ಭವಿಷ್ಯದ ಮೂಲಕ ಕಿಚ್ಚು ಹಚ್ಚಿದ್ದಾರೆ.

Read Full Story

10:17 PM (IST) Jul 08

ಕೋಟ್ಯಂತರ ಉದ್ಯೋಗಿಗಳಿಗೆ ಸಂತಸದ ಸುದ್ದಿ, ಜುಲೈ 15ಕ್ಕೆ ಅಕೌಂಟ್‌ಗೆ ಜಮೆ ಆಗಲಿದೆ 1.44 ಲಕ್ಷ ಕೋಟಿ PF ಬಡ್ಡಿ

ಇಪಿಎಫ್‌ಒ, ಪಿಎಫ್ ಖಾತೆದಾರರಿಗೆ ಶೀಘ್ರದಲ್ಲೇ ಶೇ. 8.25ರಷ್ಟು ಬಡ್ಡಿ ಹಣವನ್ನು ಜಮೆ ಮಾಡುವುದಾಗಿ ಘೋಷಿಸಿದೆ. ಜುಲೈ 15ರೊಳಗೆ ಸುಮಾರು 34 ಕೋಟಿ ಖಾತೆಗಳಿಗೆ ಈ ಹಣ ವರ್ಗಾವಣೆಯಾಗಲಿದ್ದು, ಜೊತೆಗೆ ವೇಗದ ಸೇವೆಗಾಗಿ ಹೊಸ ಕೇಂದ್ರೀಕೃತ ಐಟಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.
Read Full Story

09:54 PM (IST) Jul 08

ಜುಲೈ 10 ರಿಂದ ದುಬಾರಿಯಾಗಲಿವೆ ಮಹೀಂದ್ರಾ ಕಂಪನಿಯ ಜನಪ್ರಿಯ ಕಾರುಗಳು!

ಮಹೀಂದ್ರಾ ಕಂಪನಿಯು ಜುಲೈ 10 ರಿಂದ ತನ್ನ ಎಸ್‌ಯುವಿ ಮತ್ತು ವಾಣಿಜ್ಯ ವಾಹನಗಳ ಬೆಲೆಯನ್ನು ಉತ್ಪಾದನಾ ವೆಚ್ಚ ಹೆಚ್ಚಳದ ಕಾರಣದಿಂದ ಏರಿಕೆ ಮಾಡುತ್ತಿದೆ. ಈ ಬೆಲೆ ಏರಿಕೆಯ ನಡುವೆಯೂ, ಸ್ಕಾರ್ಪಿಯೋ ಎನ್, ಎಕ್ಸ್‌ಯುವಿ700 ನಂತಹ ಜನಪ್ರಿಯ ಮಾದರಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಬಲವಾಗಿ ಮುಂದುವರಿದಿದೆ.

Read Full Story

08:41 PM (IST) Jul 08

'ಮನೆಯಲ್ಲಿ ನನ್ನನ್ನು ಹೀಗೆ ಕರೆಯುತ್ತಾರೆ... - ಪತ್ನಿ ಬಗ್ಗೆ ಅಖಿಲ್ ಅಕ್ಕಿನೇನಿ ಹೇಳಿದ್ದೇನು?

ನಾಗಾರ್ಜುನ ಅವರ ಪುತ್ರನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಖಿಲ್ ಅಕ್ಕಿನೇನಿ, ಇನ್ನೂ ಮೊದಲ ಯಶಸ್ಸಿಗಾಗಿ ಕಾಯುತ್ತಿದ್ದಾರೆ. ವಿವಿ ವಿನಾಯಕ್ ನಿರ್ದೇಶನದ 'ಅಖಿಲ್' ಸಿನಿಮಾ ಮೂಲಕ ಪದಾರ್ಪಣೆ ಮಾಡಿದ್ದರು.

Read Full Story

08:24 PM (IST) Jul 08

ಪದವಿ ಮುಗಿದ ನಾಲ್ಕೇ ವರ್ಷಕ್ಕೆ ಮೈಕ್ರೋಸಾಫ್ಟ್​ ನಿರ್ದೇಶಕ! ಅಂಥದ್ದೇನು ಮಾಡಿದ್ರು ಈ ಯುವಕ ನೋಡಿ

ಐಟಿ ಉದ್ಯಮದಲ್ಲಿ ಉದ್ಯೋಗ ಕಡಿತದ ಭೀತಿ ಹೆಚ್ಚಾಗುತ್ತಿರುವಾಗ, ಐಐಟಿ ದೆಹಲಿ ಪದವೀಧರ ಮುಕುಲ್ ಸಿಂಗ್ ವಿಭಿನ್ನ ಹಾದಿ ಹಿಡಿದಿದ್ದಾರೆ. ಕೇವಲ ನಾಲ್ಕು ವರ್ಷಗಳಲ್ಲಿ ಮೈಕ್ರೋಸಾಫ್ಟ್‌ನಲ್ಲಿ ಇಂಟರ್ನ್‌ನಿಂದ ವಿಜ್ಞಾನ ನಿರ್ದೇಶಕರಾಗಿ ಬಡ್ತಿ ಪಡೆದ ಅವರ ಯಶೋಗಾಥೆ, ವಿಶೇಷ ಕೌಶಲ್ಯ ಮತ್ತು ಪ್ರತಿಭೆಯುಳ್ಳವರಿಗೆ ಅವಕಾಶಗಳು ಯಾವಾಗಲೂ ಇರುತ್ತವೆ ಎಂಬುದನ್ನು ಸಾಬೀತುಪಡಿಸುತ್ತದೆ.
Read Full Story

08:07 PM (IST) Jul 08

ಕೊನೆಗೂ ಈಡೇರಲಿಲ್ಲ ನಟ ಪವನ್​ ಕಲ್ಯಾಣ್​ ಆಸೆ - ನಗು ಉಳಿಸಿ, ಹೃದಯ ಛಿದ್ರ ಮಾಡಿ ಮರೆಯಾದ ಪುಟ್ಟ ಅಭಿಮಾನಿ

ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ 17 ವರ್ಷದ ಅಭಿಮಾನಿ ನಿರಂಜನ್‌ನ ಕೊನೆಯಾಸೆಯಂತೆ ನಟ ಪವನ್ ಕಲ್ಯಾಣ್ ಆತನನ್ನು ಭೇಟಿಯಾಗಿದ್ದರು. ಆದರೆ ಭೇಟಿಯಾದ 20 ದಿನಗಳಲ್ಲೇ ಬಾಲಕ ನಿಧನನಾಗಿದ್ದು, ಜೊತೆಯಾಗಿ ಸಿನಿಮಾ ನೋಡುವ ಆಸೆ ಈಡೇರಿಲ್ಲ. ಈ ದುರಂತ ಘಟನೆಯಿಂದ ಪವನ್ ಕಲ್ಯಾಣ್ ಕಂಬನಿ ಮಿಡಿದಿದ್ದಾರೆ.
Read Full Story

07:01 PM (IST) Jul 08

ರಕ್ಷಣಾ ರಂಗದಲ್ಲಿ ಭಾರತದ ಆತ್ಮನಿರ್ಭರ - ಸ್ವದೇಶಿ ನಿರ್ಮಿತ ‘ಅಸ್ತ್ರ’ ಕ್ಷಿಪಣಿ ಖರೀದಿಸಲಿರುವ ಮೊದಲ ವಿದೇಶಿ ದೇಶ ಇಂಡೋನೇಷ್ಯಾ!

ಭಾರತವು ತನ್ನ ಸಂಪೂರ್ಣ ಸ್ವದೇಶಿ 'ಅಸ್ತ್ರ' ಕ್ಷಿಪಣಿಯನ್ನು ಇಂಡೋನೇಷ್ಯಾಕ್ಕೆ ಮಾರಾಟ ಮಾಡುವ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ. ಇದರೊಂದಿಗೆ, ಬ್ರಹ್ಮೋಸ್ ಸಹಕಾರ ಮತ್ತು ಆಯಕಟ್ಟಿನ ಸಬಾಂಗ್ ಬಂದರಿನ ಜಂಟಿ ಅಭಿವೃದ್ಧಿ ಒಪ್ಪಂದಗಳೂ ಅಂತಿಮಗೊಂಡಿದೆ.

Read Full Story

06:14 PM (IST) Jul 08

ಬೀದಿನಾಯಿಗಳಿಂದ ಬಚಾವ್‌ ಆಗಲು ಹೋಗಿ ತೆರೆದ ಬಾವಿಗೆ ಬಿದ್ದು 13 ಕೃಷ್ಣಮೃಗ ಸಾವು!

ಮಧ್ಯಪ್ರದೇಶದ ಶಾಜಾಪುರದಲ್ಲಿ ಬೀದಿ ನಾಯಿಯೊಂದರ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ 13 ಕೃಷ್ಣಮೃಗಗಳ ಹಿಂಡು ತೆರೆದ ಬಾವಿಗೆ ಬಿದ್ದು ಸಾವನ್ನಪ್ಪಿವೆ. ಈ ಘಟನೆಯಲ್ಲಿ ಕೃಷ್ಣಮೃಗಗಳನ್ನು ಬೆನ್ನಟ್ಟಿದ ನಾಯಿಯೂ ಸಹ ಮೃತಪಟ್ಟಿದ್ದು, ಅರಣ್ಯ ಇಲಾಖೆ ಈ ದುರಂತದ ಕುರಿತು ತನಿಖೆ ನಡೆಸುತ್ತಿದೆ.
Read Full Story

05:47 PM (IST) Jul 08

55 ಅಡಿ ಎತ್ತರದ ತಾಳೆ ಮರಕ್ಕೆ ಬರೋಬ್ಬರಿ 60,000 ರೂ ವೆಚ್ಚದಲ್ಲಿ ಕಬ್ಬಿಣದ ಮೆಟ್ಟಿಲು ನಿರ್ಮಿಸಿದ ರೈತ!

ತಮಿಳುನಾಡಿನ ರೈತ ದಿನಕರಾಜ್, ಕೃಷಿ ಕಾರ್ಮಿಕರ ಕೊರತೆ ನೀಗಿಸಲು 55 ಅಡಿ ಎತ್ತರದ ತಾಳೆ ಮರಕ್ಕೆ ಸುರುಳಿಯಾಕಾರದ ಕಬ್ಬಿಣದ ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ. ಈ ದೇಶಿ ತಂತ್ರಜ್ಞಾನವು ವೃದ್ಧರು, ಮಹಿಳೆಯರು ಸೇರಿದಂತೆ ಯಾರು ಬೇಕಾದರೂ ಸುರಕ್ಷಿತವಾಗಿ ಮರ ಹತ್ತಿ, ಆದಾಯ ಗಳಿಸಲು ನೆರವಾಗಿದೆ.
Read Full Story

05:16 PM (IST) Jul 08

ದಟ್ಟ ಅರಣ್ಯದಲ್ಲಿ ಕಳೆದುಹೋಗಿ ಹುಲ್ಲು ತಿಂದು 6 ದಿನ ಬದುಕುಳಿದ 28 ವರ್ಷದ ಬುದ್ಧಿಮಾಂದ್ಯ ಯುವತಿ!

ಉತ್ತರಾಖಂಡದ ರಾಣಿಖೇತ್‌ನಲ್ಲಿ, ಬುದ್ಧಿಮಾಂದ್ಯ ಯುವತಿಯೊಬ್ಬಳು ದಟ್ಟ ಅರಣ್ಯದಲ್ಲಿ 6 ದಿನಗಳ ಕಾಲ ಕಳೆದುಹೋಗಿದ್ದಳು. ಹಸಿವಿನಿಂದ ಬದುಕಲು ಹುಲ್ಲು ಮತ್ತು ಕಾಡು ಗಿಡಗಳನ್ನು ತಿಂದು, ಅಂತಿಮವಾಗಿ ಪೊಲೀಸರು ಮತ್ತು ಗ್ರಾಮಸ್ಥರ ಜಂಟಿ ಕಾರ್ಯಾಚರಣೆಯಲ್ಲಿ ಪವಾಡಸದೃಶವಾಗಿ ರಕ್ಷಿಸಲ್ಪಟ್ಟಳು.
Read Full Story

04:40 PM (IST) Jul 08

ಸೌರವ್ ಗಂಗೂಲಿ ₹40 ಕೋಟಿ ಬಂಗಲೆಯಲ್ಲಿದೆ 48 ರೂಮ್‌ಗಳು, ವಾಲ್ ಆಫ್ ಫೇಮ್ ಮತ್ತೆ ಕ್ರಿಕೆಟ್ ಪಿಚ್!

ಭಾರತ ಕ್ರಿಕೆಟ್‌ನ ದಾದಾ ಸೌರವ್ ಗಂಗೂಲಿ ಅವರ ಕೋಲ್ಕತಾದ ಬೆಹಾಲಾದಲ್ಲಿರುವ ಭವ್ಯ ಬಂಗಲೆಯ ಬಗ್ಗೆ ಈ ಲೇಖನ ವಿವರಿಸುತ್ತದೆ. ಸುಮಾರು 40 ಕೋಟಿ ಮೌಲ್ಯದ ಈ 48 ಕೋಣೆಗಳ ಮನೆಯು, ಸಾಂಪ್ರದಾಯಿಕ ವಾಸ್ತುಶಿಲ್ಪ, 'ವಾಲ್ ಆಫ್ ಫೇಮ್' ಮತ್ತು ಕ್ರಿಕೆಟ್ ಪಿಚ್‌ನಂತಹ ವಿಶೇಷತೆಗಳನ್ನು ಹೊಂದಿದೆ.
Read Full Story

03:59 PM (IST) Jul 08

'ಇನ್ನೂ ಎರಡು ಮ್ಯಾಚ್ ಇದೆ...' - 15 ವರ್ಷದ ವೈಭವ್ ಸೂರ್ಯವಂಶಿಗೆ ವಾರ್ನಿಂಗ್ ಕೊಟ್ಟ ಇಂಗ್ಲೆಂಡ್ ಮಾರಕ ವೇಗಿ!

ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ, ಹೀನಾಯ ಸೋಲು ಅನುಭವಿಸಿದೆ. ಇದರ ನಡುವೆ ವೈಭವ್ ಸೂರ್ಯವಂಶಿಗೆ ಇಂಗ್ಲೆಂಡ್ ಮಾರಕ ವೇಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ.

Read Full Story

02:50 PM (IST) Jul 08

Niti Taylor - ಸಿಗರೇಟ್‌ನಿಂದ ಆತ ನನ್ನ ಸುಟ್ಟಿದ್ದ; ಖ್ಯಾತ ನಟಿಯ ಶಾಕಿಂಗ್ ಹೇಳಿಕೆಗೆ ಸಿನಿರಂಗ ಶಾಕ್!

ಬಾಲಿವುಡ್ ಇರಲಿ, ಸ್ಯಾಂಡಲ್‌ವುಡ್ ಇರಲಿ, ಬಣ್ಣದ ಪ್ರಪಂಚ ಎಂದರೆ ಅಲ್ಲಿ ಕೇವಲ ಬೆಳಕು, ಕ್ಯಾಮೆರಾ ಮತ್ತು ಆಕ್ಷನ್-ಕಟ್ ಮಾತ್ರ ಇರುತ್ತದೆ ಎಂದು ಹೆಚ್ಚಿನ ಎಲ್ಲರೂ ಭಾವಿಸುತ್ತಾರೆ. ಆದರೆ, ತೆರೆಯ ಹಿಂದೆ ನಡೆಯುವ ಕೆಲವು ಘಟನೆಗಳು ಸಿನಿಮಾದ ಕಥೆಗಿಂತಲೂ ಭಯಾನಕವಾಗಿರುತ್ತವೆ. ಈ ಟನಿ ಸ್ಟೋರಿ ನೋಡಿ..

Read Full Story

02:11 PM (IST) Jul 08

ಸಂಜು ಸ್ಯಾಮ್ಸನ್‌ರನ್ನು ತಂಡದಿಂದ ಹೊರಗಿಟ್ಟಿದ್ದೇಕೆ..? ಸತತ ಸೋಲಿನ ಬೆನ್ನಲ್ಲೇ ಕೊನೆಗೂ ಮೌನ ಮುರಿದ ಗೌತಮ್ ಗಂಭೀರ್

ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 125 ರನ್‌ಗಳ ಹೀನಾಯ ಸೋಲು ಕಂಡಿದೆ. ಈ ಸೋಲಿನ ನಡುವೆ, ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್‌ರನ್ನು ತಂಡದಿಂದ ಕೈಬಿಟ್ಟಿರುವ ಬಗ್ಗೆ ಕೋಚ್ ಗೌತಮ್ ಗಂಭೀರ್ ಸ್ಪಷ್ಟನೆ ನೀಡಿದ್ದು, ಆಯ್ಕೆ ವಿವಾದ ತಾರಕಕ್ಕೇರಿದೆ.
Read Full Story

01:52 PM (IST) Jul 08

ನಿಮ್ಮ ಒಂದು ತಪ್ಪು ಕಾಮೆಂಟ್ ಜೈಲು ಕಂಬಿ ಎಣಿಸುವಂತೆ ಮಾಡಬಹುದು! ಕಠಿಣ UAPA ಕಾಯ್ದೆಯ ಈ ನಿಯಮಗಳು ತಿಳಿದಿರಲಿ

ಇತ್ತೀಚೆಗೆ ಕೇರಳ ಪೊಲೀಸರು ದೇಶ ವಿರೋಧಿ ಕಾಮೆಂಟ್ಸ್ ಮಾಡಿದ ಪ್ರಕರಣ ಸಂಬಂಧ ವ್ಯಕ್ತಿಯೊಬ್ಬನನ್ನು ಯುಎಪಿಎ ಅಡಿ ಬಂಧಿಸಿದ್ದಾರೆ. ವ್ಯಕ್ತಿ ವಿದೇಶದಲ್ಲಿದ್ದಾಗ ಪಹ್ಲಾಂ ಟೆರರಿಸ್ಟ್ ದಾಳಿ ಬೆಂಬಲಿಸಿ ಕಾಮೆಂಟ್ ಮಾಡಿದ್ದನೆಂದು ಆರೋಪಿಸಲಾಗಿದೆ. ಫೇಸ್‌ಬುಕ್‌ನಲ್ಲಿ ಮಾಡುವ ಕಾಮೆಂಟ್ಸ್ ಯುಎಪಿಎ ಅಡಿ ಕ್ರಮ?

Read Full Story

01:36 PM (IST) Jul 08

ನನ್ನಿಂದ ತಂಡ ಸೋಲುತ್ತೆ ಅಂದ್ಕೊಂಡಿದ್ದೆ, ಆದರೆ ದೇವರು ಕೈಬಿಡಲಿಲ್ಲ; ಲಿಯೋನೆಲ್ ಮೆಸ್ಸಿ ಭಾವುಕ ನುಡಿ

ಫಿಫಾ ವಿಶ್ವಕಪ್ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ, ಈಜಿಪ್ಟ್ ವಿರುದ್ಧ 2-0 ಹಿನ್ನಡೆಯಲ್ಲಿದ್ದ ಅರ್ಜೆಂಟೀನಾ, ಕೊನೆಯ 13 ನಿಮಿಷಗಳಲ್ಲಿ ಮೂರು ಗೋಲು ಬಾರಿಸಿ 3-2 ಅಂತರದ ನಾಟಕೀಯ ಗೆಲುವು ಸಾಧಿಸಿತು. ಪಂದ್ಯದಲ್ಲಿ ಪೆನಾಲ್ಟಿ ಮಿಸ್ ಮಾಡಿ ನಿರಾಸೆ ಅನುಭವಿಸಿದ್ದ ನಾಯಕ ಲಿಯೋನೆಲ್ ಮೆಸ್ಸಿ, ನಂತರ ಒಂದು ಗೋಲು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
Read Full Story

01:14 PM (IST) Jul 08

‘‘ನೀನು ಎಂದರೆ, ನಿಮ್ಮಪ್ಪ’’ ಎನ್ನುತ್ತಿದ್ದ ನಾಯಕ..! ಆಕ್ರಮಣಕಾರಿ ಮನೋಭಾವ ಅವನ ಗುರುತು.. ಸ್ವಾಭಿಮಾನ ಅವನ ಹೆಗ್ಗುರುತು..!

ಸೌರವ್ ಗಂಗೂಲಿ, ಭಾರತೀಯ ಕ್ರಿಕೆಟ್‌ಗೆ ಹೊಸ ದಿಕ್ಕು ತೋರಿದ ನಾಯಕ. ತಮ್ಮ ಆಕ್ರಮಣಕಾರಿ ನಾಯಕತ್ವದಿಂದ, ವಿದೇಶದಲ್ಲೂ ಗೆಲ್ಲುವ ಛಾತಿಯನ್ನು ತಂಡದಲ್ಲಿ ತುಂಬಿದ್ದಲ್ಲದೆ, ಸೆಹ್ವಾಗ್, ಯುವರಾಜ್, ಧೋನಿಯಂತಹ ಮ್ಯಾಚ್ ವಿನ್ನರ್‌ಗಳನ್ನು ರೂಪಿಸಿ, ಭಾರತೀಯ ಕ್ರಿಕೆಟ್'ನ 'ನೇತಾರ' ಎನಿಸಿಕೊಂಡರು.
Read Full Story

12:52 PM (IST) Jul 08

ಮಹಿಳಾ ಟಿ20 ವಿಶ್ವಕಪ್ - ಶ್ರೇಷ್ಠ ತಂಡ ಪ್ರಕಟಿಸಿದ ಐಸಿಸಿ..! ಏಕೈಕ ಭಾರತೀಯ ಆಟಗಾರ್ತಿಗೆ ಸ್ಥಾನ

2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಐಸಿಸಿ ಪ್ರಕಟಿಸಿದ 'ಟೀಮ್ ಆಫ್‌ ದಿ ಟೂರ್ನಮೆಂಟ್'ನಲ್ಲಿ ನಾಲ್ವರು ಆಸೀಸ್ ಆಟಗಾರ್ತಿಯರು ಸ್ಥಾನ ಪಡೆದರೆ, ಭಾರತದ ಪರ ಶ್ರೀ ಚಾರಿಣಿ ಏಕೈಕ ಆಟಗಾರ್ತಿಯಾಗಿ ಆಯ್ಕೆಯಾಗಿದ್ದಾರೆ.
Read Full Story

12:04 PM (IST) Jul 08

'ನಾನು ಬಿಹಾರದ ಸಿಂಹ..' ಝಡ್ ಪ್ಲಸ್ ಭದ್ರತೆ ಹಿಂಪಡೆದ ಸರ್ಕಾರದ ವಿರುದ್ಧ ಲಾಲು ಗುಡುಗು

ತಮ್ಮ ಭದ್ರತೆ ಹಿಂಪಡೆದಿದ್ದಕ್ಕೆ 'ನಾನು ಬಿಹಾರದ ಸಿಂಹ' ಎಂದು ಲಾಲು ಪ್ರಸಾದ್ ಯಾದವ್ ಗುಡುಗಿದ್ದಾರೆ. ಇತ್ತ ಭೋಜ್‌ಪುರ ಎನ್‌ಕೌಂಟರ್ ವಿಚಾರವಾಗಿ ಜೆಡಿಯುನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಇದರ ನಡುವೆ ರಾಜ್ಯ ಸರ್ಕಾರ ಹೊಸ ಕಲಾ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿದೆ.
Read Full Story

12:01 PM (IST) Jul 08

ರಾಹುಲ್ ದ್ರಾವಿಡ್ ಇಬ್ಬರು ಪುತ್ರರಲ್ಲಿ ಅಪ್ಪನಂತೆ ಆಡುವವರು ಯಾರು..?

ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ ಅವರ ಪುತ್ರರಾದ ಸಮಿತ್ ಮತ್ತು ಅನ್ವಯ್ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಆಲ್ರೌಂಡರ್ ಸಮಿತ್ ಮಹಾರಾಜ ಟ್ರೋಫಿಯಲ್ಲಿ ಮಿಂಚಿದರೆ, ವಿಕೆಟ್ ಕೀಪರ್ ಬ್ಯಾಟರ್ ಅನ್ವಯ್ ಭಾರತದ ಅಂಡರ್-19 ತಂಡದಲ್ಲಿ ಭರವಸೆ ಮೂಡಿಸಿದ್ದಾರೆ. ಈ ಲೇಖನವು ತಂದೆಯ ಪರಂಪರೆಯನ್ನು ಮುಂದುವರಿಸುವ ಸವಾಲು ಮತ್ತು ಅವರ ವಿಶಿಷ್ಟ ಆಟದ ಶೈಲಿಯನ್ನು ವಿಶ್ಲೇಷಿಸುತ್ತದೆ.
Read Full Story

12:00 PM (IST) Jul 08

ಫುಡ್ ಡೆಲಿವರಿ ಎಜೆಂಟ್ ಮೇಲೆ ಚಿರತೆ ದಾಳಿ, ಕೂದಲೆಳೆ ಅಂತರದಿಂದ ಪಾರಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ರಾತ್ರಿ ವೇಳೆ ಫುಡ್ ಡೆಲಿವರಿ ಮಾಡಲು ತೆರಳಿದ ಬ್ಲಿಂಕಿಟ್ ಎಜೆಂಟ್ ಮೇಲೆ ಚಿರತೆ ದಾಳಿ ಮಾಡಿದ ಘಟನೆ ನಡೆದಿದೆ. ರಸ್ತೆ ಮೂಲಕ ಸಾಗಿ ಬಂದ ಚಿರತೆ ಡೆಲಿವರಿ ಎಜೆಂಟ್ ಮೇಲೆ ದಾಳಿ ಮಾಡಿದೆ. ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

 

Read Full Story

11:44 AM (IST) Jul 08

Yash-Toxic - ಕಿಯಾರ ಮೇಲೆ ಮುತ್ತಿನ ಮಳೆ ಹೊರಬಂತು ಮೋಸದ ಕಥೆ; ಮಿತಿಮೀರಿಸುತ್ತಿದೆ ಟಾಕ್ಸಿಕ್ ಕ್ರೇಜ್!

ಇಂದು (8 ಜುಲೈ 2026) ಬಿಡುಗಡೆ ಆಗಿರುವ ಸಾಂಗ್ ಮೂಲಕ, ಯಶ್ ನಾಯಕತ್ವ ಹಾಗೂ ಗೀತೂ ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರಕ್ಕೆ ಭಾರೀ ಕ್ರೇಜ್ ಸೃಷ್ಟಿಯಾಗಿದೆ. ಈ ಮೂಲಕ, 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವ 'ಪ್ಯಾನ್ ವರ್ಲ್ಡ್' ಟಾಕ್ಸಿಕ್‌ ಸಿನಿಮಾಗೆ ಸಂಚಲನ ಹಾಗೂ ನಿರೀಕ್ಷೆ ಮುಗಿಲು ಮುಟ್ಟಿದೆ.

Read Full Story

11:32 AM (IST) Jul 08

Gold Rate Today - 8 ದಿನದಲ್ಲಿ 5ನೇ ಬಾರಿ ಕುಸಿತ ಕಂಡ ಬಂಗಾರ; ಹಣ ಇದ್ರೆ ಇಂದೇ ಖರೀದಿಸಿ ಚಿನ್ನ

ಬೆಂಗಳೂರು: ಕಳೆದ ಎಂಟು ದಿನಗಳಿಂದಲೂ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಮುಂದುವರೆದಿದೆ. ಇದರ ನಡುವೆ ಜುಲೈ 08ರಂದು ಮತ್ತೆ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಎನ್ನುವುದನ್ನು ನೋಡೋಣ ಬನ್ನಿ.

Read Full Story

11:27 AM (IST) Jul 08

11 ವರ್ಷ ಬಾಲಕಿ ಮೇಲಿನ ಗ್ಯಾ0ಗ್ ರೇP ಪ್ರಮುಖ ಆರೋಪಿ ಎನ್‌ಕೌಂಟರ್, ಸ್ಥಳ ಮಹಜರು ವೇಳೆ ಕತೆ ಕ್ಲೋಸ್

ಪಶ್ಚಿಮ ಬಂಗಾಳ ಹಾಗೂ ದೇಶದ ಜನತೆಯನ್ನು ಬೆಚ್ಚಿ ಬೀಳಿಸಿದ ಸಾಮೂಹಿಕ ಅತ್ಯಾ** ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.ಮತ್ತಿಬ್ಬರು ಆರೋಪಿಗಳ ಆತಂಕ ಹೆಚ್ಚಾಗಿದೆ.

 

Read Full Story

11:11 AM (IST) Jul 08

Amarnath Yatra - ಅಮರನಾಥ ಯಾತ್ರಿಗಳ ರಕ್ಷಣೆಗೆ CRPF ಭದ್ರಕೋಟೆ, ದಾರಿಯುದ್ಧಕ್ಕೂ ಯೋಧರು! ಭಕ್ತರಿಗಾಗಿ 24/7 ಆರೋಗ್ಯ ಸೇವೆ

2026ರ ಶ್ರೀ ಅಮರನಾಥ ಯಾತ್ರೆ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಯಾತ್ರೆಯಲ್ಲಿ ಭಾಗವಹಿಸುವ ಭಕ್ತರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ರಾಷ್ಟ್ರೀಯ ಹೆದ್ದಾರಿ-44ರ ಉದ್ದಕ್ಕೂ ಸಿಆರ್‌ಪಿಎಫ್ ಯೋಧರು ಕಾವಲು ನಿಂತಿದ್ದಾರೆ.,

 

Read Full Story

10:40 AM (IST) Jul 08

ವಿಶ್ವಕಿರೀಟ ಮುಡಿಗೇರಿಸಲಾಗದೆ ಕ್ರಿಸ್ಟಿಯಾನೊ ರೊನಾಲ್ಡೊ ಕಣ್ಣೀರಿನ ವಿದಾಯ!

ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ವಿಶ್ವಕಪ್ ಗೆಲ್ಲುವ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ಸ್ಪೇನ್ ವಿರುದ್ಧದ ಸೋಲಿನ ನಂತರ, ಇದು ತಮ್ಮ ಕೊನೆಯ ವಿಶ್ವಕಪ್ ಎಂದು ಹೇಳಿರುವ ರೊನಾಲ್ಡೊ ಮೈದಾನದಲ್ಲೇ ಕಣ್ಣೀರಿಟ್ಟಿದ್ದು, ಅವರ 23 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನದ ವಿಶ್ವಕಪ್ ಅಭಿಯಾನಕ್ಕೆ ಭಾವನಾತ್ಮಕ ತೆರೆ ಬಿದ್ದಿದೆ.
Read Full Story

10:36 AM (IST) Jul 08

Stock Market - ಅಮೆರಿಕ-ಇರಾನ್ ಸಂಘರ್ಷ; ಷೇರುಪೇಟೆಯಲ್ಲಿ ಮತ್ತೆ ಅಲ್ಲೋಲ ಕಲ್ಲೋಲ! ತೈಲ ಬೆಲೆ ದಾಖಲೆ ಜಿಗಿತ!

ಅಮೆರಿಕ-ಇರಾನ್ ಸಂಘರ್ಷದಿಂದಾಗಿ ಕಚ್ಚಾ ತೈಲದ ಬೆಲೆ ಗಗನಕ್ಕೇರಿದೆ. ಇದರ ಪರಿಣಾಮವಾಗಿ ಬುಧವಾರ ಭಾರತದ ಷೇರು ಮಾರುಕಟ್ಟೆ ಭಾರೀ ಕುಸಿತದೊಂದಿಗೆ ಆರಂಭವಾಯಿತು. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ಯಾಪ್-ಡೌನ್ ಓಪನಿಂಗ್ ಪಡೆದವು. ಹೆಚ್ಚಿನ ವಲಯಗಳು ನಷ್ಟದಲ್ಲಿದ್ದರೆ, ಫಾರ್ಮಾ ಷೇರುಗಳು ಮಾತ್ರ ಲಾಭ ಗಳಿಸಿವೆ.

Read Full Story

10:11 AM (IST) Jul 08

FIFA World Cup 2026 - ಅರ್ಜೆಂಟಲ್ಲಿ ಮೂರು ಗೋಲು ಗಳಿಸಿ ಗೆದ್ದ ಅರ್ಜೆಂಟೀನಾ!

ತೀವ್ರ ಹಿನ್ನಡೆಯಿಂದ ಚೇತರಿಸಿಕೊಂಡ ಹಾಲಿ ಚಾಂಪಿಯನ್‌ ಅರ್ಜೆಂಟೀನಾ, ಈಜಿಪ್ಟ್‌ ವಿರುದ್ಧ 3-2 ಗೋಲುಗಳಿಂದ ರೋಚಕ ಜಯ ಸಾಧಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಇನ್ನೊಂದೆಡೆ, ಸ್ಪೇನ್‌ ವಿರುದ್ಧ 1-0 ಅಂತರದಲ್ಲಿ ಸೋತ ಪೋರ್ಚುಗಲ್‌ ತಂಡ ವಿಶ್ವಕಪ್‌ನಿಂದ ಹೊರಬಿದ್ದಿದ್ದು, ಕ್ರಿಸ್ಟಿಯಾನೊ ರೊನಾಲ್ಡೊ ಅವರ ವಿಶ್ವಕಪ್ ಕನಸು ಭಗ್ನಗೊಂಡಿದೆ.
Read Full Story

09:49 AM (IST) Jul 08

ಸಮೋಸಾ ಖರೀದಿಗಾಗಿ ರೈಲು ನಿಲ್ಲಿಸಿದ್ರಾ ಲೋಕೋ ಪೈಲಟ್? ಇಲ್ಲಿದೆ ವೈರಲ್ ವಿಡಿಯೋ ಸತ್ಯ

Viral Video Fact: ಲೋಕೋಪೈಲಟ್ ಒಬ್ಬರು ಸಮೋಸ ಖರೀದಿಸಲು ರೈಲು ನಿಲ್ಲಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯಿಂದ ಸ್ಪಷ್ಟನೆ ಬಂದಿದೆ.

Read Full Story

09:09 AM (IST) Jul 08

ಈ ಎಮ್ಮೆ ಮಗುವಿನಷ್ಟೇ ಹಠಮಾರಿ! ಟಿವಿ ನೋಡದೆ ಒಂದು ಹನಿ ಹಾಲು ಕೊಡುವುದಿಲ್ಲ; Video

ಸಾಮಾಜಿಕ ಜಾಲತಾಣದಲ್ಲಿ ಎಮ್ಮೆಯೊಂದು ವೈರಲ್ ಆಗಿದೆ. ಈ ಎಮ್ಮೆಗೆ ಟಿವಿ ತೋರಿಸಿದರೆ ಮಾತ್ರ ಹಾಲು ಕೊಡುತ್ತದೆ, ಇಲ್ಲದಿದ್ದರೆ ಹಠ ಹಿಡಿಯುತ್ತದೆ. ಈ ವಿಚಿತ್ರ ಎಮ್ಮೆಯ ವಿಡಿಯೋಗೆ ಲಕ್ಷಾಂತರ ವೀಕ್ಷಣೆಗಳು ಬಂದಿವೆ.
Read Full Story

09:03 AM (IST) Jul 08

WhatsApp username - ಭಾರತವು ಮೆಟಾದ ಪ್ರಯೋಗ ಶಾಲೆಯಲ್ಲ - ರಾಜೀವ್‌ ಚಂದ್ರಶೇಖರ್‌

ವಾಟ್ಸಾಪ್‌ನ ಹೊಸ ಯೂಸರ್‌ನೇಮ್ ಸೌಲಭ್ಯಕ್ಕೆ ಕೇಂದ್ರ ಸರ್ಕಾರವು ತಡೆ ನೀಡಿದೆ. ಈ ವೈಶಿಷ್ಟ್ಯವು ಬಳಕೆದಾರರ ಗುರುತನ್ನು ಮೊಬೈಲ್ ಸಂಖ್ಯೆಯಿಂದ ಮೆಟಾ-ನಿಯಂತ್ರಿತ ಹೆಸರಿಗೆ ಬದಲಾಯಿಸುತ್ತದೆ, ಇದು ಸುರಕ್ಷತೆ, ವಂಚನೆ ಮತ್ತು ಡೇಟಾ ಏಕಸ್ವಾಮ್ಯದ ಬಗ್ಗೆ ಗಂಭೀರ ಕಳವಳ ಮೂಡಿಸಿದೆ ಎಂದು ಲೇಖಕರು ವಾದಿಸುತ್ತಾರೆ. 

Read Full Story

07:34 AM (IST) Jul 08

ಗೃಹಲಕ್ಷ್ಮೀ ಮಾದರಿಯ ಗ್ಯಾರಂಟಿ ಯೋಜನೆ - ಪ್ರಧಾನಿಗಳ ಆರ್ಥಿಕ ಸಲಹಾ ಸಮಿತಿ ಬಹುಪರಾಕ್‌

ಕರ್ನಾಟಕದ ಗೃಹಲಕ್ಷ್ಮೀ ಮಾದರಿಯ ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿಗಳ ಆರ್ಥಿಕ ಸಲಹಾ ಸಮಿತಿ ಶ್ಲಾಘಿಸಿದೆ. ಈ ಯೋಜನೆಗಳಿಂದ ಮಹಿಳೆಯರ ಕುಟುಂಬಗಳಲ್ಲಿ ಉಳಿತಾಯ ಮತ್ತು ಬಳಕೆ ಹೆಚ್ಚಾಗಿದ್ದು, ಹಣದುಬ್ಬರಕ್ಕೆ ಅನುಗುಣವಾಗಿ ಮೊತ್ತವನ್ನು ಪರಿಷ್ಕರಿಸಬೇಕು ಎಂದು ತನ್ನ ಕಾರ್ಯಪತ್ರದಲ್ಲಿ ಸಮಿತಿ ಶಿಫಾರಸು ಮಾಡಿದೆ.
Read Full Story

More Trending News