MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • 'ಇನ್ನೂ ಎರಡು ಮ್ಯಾಚ್ ಇದೆ...': 15 ವರ್ಷದ ವೈಭವ್ ಸೂರ್ಯವಂಶಿಗೆ ವಾರ್ನಿಂಗ್ ಕೊಟ್ಟ ಇಂಗ್ಲೆಂಡ್ ಮಾರಕ ವೇಗಿ!

'ಇನ್ನೂ ಎರಡು ಮ್ಯಾಚ್ ಇದೆ...': 15 ವರ್ಷದ ವೈಭವ್ ಸೂರ್ಯವಂಶಿಗೆ ವಾರ್ನಿಂಗ್ ಕೊಟ್ಟ ಇಂಗ್ಲೆಂಡ್ ಮಾರಕ ವೇಗಿ!

ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ, ಹೀನಾಯ ಸೋಲು ಅನುಭವಿಸಿದೆ. ಇದರ ನಡುವೆ ವೈಭವ್ ಸೂರ್ಯವಂಶಿಗೆ ಇಂಗ್ಲೆಂಡ್ ಮಾರಕ ವೇಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ.

2 Min read
Author : Naveen Kodase
Published : Jul 08 2026, 03:59 PM IST
Share this Photo Gallery
  • FB
  • TW
  • Linkdin
  • Whatsapp
16
ವೈಭವ್ ಸೂರ್ಯವಂಶಿಗೆ ವಾರ್ನಿಂಗ್
Image Credit : Getty

ವೈಭವ್ ಸೂರ್ಯವಂಶಿಗೆ ವಾರ್ನಿಂಗ್

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 202 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಭಾರತಕ್ಕೆ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಸ್ಪೋಟಕ ಆರಂಭ ಒದಗಿಸಿಕೊಟ್ಟಿದ್ದರು. ಎರಡು ಸಿಕ್ಸರ್ ಸಿಡಿಸಿ ದೊಡ್ಡ ಇನ್ನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದ್ದ 15 ವರ್ಷದ ವೈಭವ್ ಸೂರ್ಯವಂಶಿಯನ್ನು ಬಲಿ ಪಡೆಯುವಲ್ಲಿ ವೇಗಿ ಜೋಫ್ರಾ ಆರ್ಚರ್ ಯಶಸ್ವಿಯಾದರು. ಇದೀಗ ವೈಭವ್ ಸೂರ್ಯವಂಶಿ ಬಗ್ಗೆ ಆರ್ಚರ್ ಅಚ್ಚರಿಯ ಹೇಳಿಕೆ ನೀಡಿದ್ದು ಮಾತ್ರವಲ್ಲದೇ, ಮುಂಬರುವ ಪಂದ್ಯಗಳ ಕುರಿತಂತೆ ಯುವ ಆಟಗಾರನಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಆರ್ಚರ್-ವೈಭವ್ ನಡುವೆ ಶುರುವಾಗಿದೆ ದೊಡ್ಡ ಫೈಟ್
Image Credit : Getty

ಆರ್ಚರ್-ವೈಭವ್ ನಡುವೆ ಶುರುವಾಗಿದೆ ದೊಡ್ಡ ಫೈಟ್

ಜೋಫ್ರಾ ಆರ್ಚರ್ ಹಾಗೂ ವೈಭವ್ ಸೂರ್ಯವಂಶಿ ನಡುವೆ ಈ ಟಿ20 ಸರಣಿಯಲ್ಲಿ ದೊಡ್ಡ ಪೈಪೋಟಿ ಏರ್ಪಟ್ಟಿದೆ. ಎರಡನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ, ಆರ್ಚರ್‌ಗೆ ಸಿಕ್ಸರ್ ಚಚ್ಚಿದ್ದರು. ಮೂರನೇ ಟಿ20 ಪಂದ್ಯದಲ್ಲೂ ಅದನ್ನೇ ರಿಪೀಟ್ ಮಾಡಿದ್ದರು. ಆದರೆ ಇದಾದ ಬಳಿಕ ಸತತವಾಗಿ ಬೌನ್ಸರ್ ಎಸೆಯುವ ಮೂಲಕ ಆರ್ಚರ್‌, ಸೂರ್ಯವಂಶಿಯನ್ನು ಕೇವಲ 13 ರನ್‌ಗಳಿಗೆ ಔಟ್ ಮಾಡುವಲ್ಲಿ ಯಶಸ್ವಿಯಾದರು.

Related Articles

Related image1
'ವೈಭವ್‌ ಸೂರ್ಯವಂಶಿ ಭವಿಷ್ಯ ಹಾಳು ಮಾಡಬೇಡಿ': ಟೀಂ ಇಂಡಿಯಾ ಕೋಚ್ ಮೇಲೆ ತಿರುಗಿಬಿದ್ದ ಆರ್‌ಸಿಬಿ ಆಪತ್ಬಾಂಧವ..!
Related image2
ಟೀಂ ಇಂಡಿಯಾದ ಈ ಆಟಗಾರನ ಗರ್ಲ್‌ಫ್ರೆಂಡ್‌ ಜತೆ ವೈಭವ್ ಹೆಸರು ಥಳುಕು..! ಏನೋ ಮಾಡಲು ಹೋಗಿ ಇನ್ನೇನೋ ಮಾಡಿದ್ನಾ 15 ವರ್ಷದ ಪೋರಾ?
36
ವೈಭವ್ ಔಟ್ ಮಾಡಿದ್ದರ ಬಗ್ಗೆ ಜೋಫ್ರಾ ಆರ್ಚರ್ ಹೇಳಿದ್ದೇನು?
Image Credit : vaibhav sooryavanshi instagram

ವೈಭವ್ ಔಟ್ ಮಾಡಿದ್ದರ ಬಗ್ಗೆ ಜೋಫ್ರಾ ಆರ್ಚರ್ ಹೇಳಿದ್ದೇನು?

ಭಾರತ-ಇಂಗ್ಲೆಂಡ್ ನಡುವಿನ ಮೂರನೇ ಮ್ಯಾಚ್ ಮುಕ್ತಾಯವಾದ ಬಳಿಕ ಮಾತನಾಡಿದ ಆರ್ಚರ್, ಎರಡು ಸಿಕ್ಸರ್ ಚಚ್ಚಿದ ವೈಭವ್ ಸೂರ್ಯವಂಶಿಯನ್ನು ಔಟ್ ಮಾಡಿ ಸೇಡು ತೀರಿಸಿಕೊಂಡೆ. ಈಗ ಲೆಕ್ಕ ಚುಕ್ತವಾಗಿದೆ ಎಂದೆನಿಸುತ್ತಿದೆ ಎಂದು ಇಂಗ್ಲೆಂಡ್ ಮಾರಕ ವೇಗಿ ಅಭಿಪ್ರಾಯಪಟ್ಟಿದ್ದಾರೆ.

46
ವೈಭವ್ ಸೂರ್ಯವಂಶಿಗೆ ಆರ್ಚರ್‌ ವಾರ್ನಿಂಗ್!
Image Credit : Getty

ವೈಭವ್ ಸೂರ್ಯವಂಶಿಗೆ ಆರ್ಚರ್‌ ವಾರ್ನಿಂಗ್!

ಇದೀಗ ಭಾರತ ಹಾಗೂ ಇಂಗ್ಲೆಂಡ್ ನಡುವೆ ಇನ್ನೂ ಎರಡು ಟಿ20 ಪಂದ್ಯಗಳು ನಡೆಯುವುದು ಬಾಕಿ ಇದೆ. ಮುಂದಿನ ಎರಡು ಪಂದ್ಯಗಳಿಗೂ ಮುನ್ನ 15 ವರ್ಷದ ಸೂರ್ಯವಂಶಿಗೆ ಆರ್ಚರ್‌ಗೆ ವಾರ್ನಿಂಗ್ ಕೊಟ್ಟಿದ್ದಾರೆ. ಇನ್ನೂ ಎರಡು ಮ್ಯಾಚ್ ಬಾಕಿ ಇದೆ. ಯಾರು ಬೇಕಾದರೂ ಮೇಲುಗೈ ಸಾಧಿಸಬಹುದು. ಯಾರು ಚೆನ್ನಾಗಿ ಆಡುತ್ತಾರೋ ಅವರೇ ಮೇಲುಗೈ ಸಾಧಿಸುತ್ತಾರೆ ಎಂದು ಆರ್ಚರ್ ಹೇಳಿದ್ದಾರೆ.

56
ಇಂಗ್ಲೆಂಡ್ ಗೆಲುವಿನ ಬಗ್ಗೆ ಆರ್ಚರು ಮಾತು:
Image Credit : Getty

ಇಂಗ್ಲೆಂಡ್ ಗೆಲುವಿನ ಬಗ್ಗೆ ಆರ್ಚರು ಮಾತು:

ಇನ್ನು ಹಾಲಿ ಚಾಂಪಿಯನ್ ಭಾರತ ಎದುರು ಸತತ ಎರಡು ಗೆಲುವು ಸಾಧಿಸಿದ ಇಂಗ್ಲೆಂಡ್ ಪ್ರದರ್ಶನದ ಬಗ್ಗೆ ಮಾತನಾಡಿದ ಆರ್ಚರ್, ಒಮ್ಮೊಮ್ಮೆ ತಮ್ಮ ಗೆಲುವಿನ ಜೋಶ್‌ ಅನ್ನು ಕಂಟ್ರೋಲ್ ಮಾಡಬೇಕಾಗುತ್ತದೆ. ನಾವು ಚೆನ್ನಾಗಿ ಆಡಿದ್ದರಿಂದ ಫಲಿತಾಂಶ ನಮ್ಮ ಪರವಾಗಿ ಬಂದಿದೆ ಎಂದು ಆರ್ಚರ್ ಹೇಳಿದ್ದಾರೆ.

66
ಭಾರತ-ಇಂಗ್ಲೆಂಡ್ ನಡುವಿನ ಮುಂದಿನ ಟಿ20 ಮ್ಯಾಚ್ ಯಾವಾಗ?
Image Credit : Getty

ಭಾರತ-ಇಂಗ್ಲೆಂಡ್ ನಡುವಿನ ಮುಂದಿನ ಟಿ20 ಮ್ಯಾಚ್ ಯಾವಾಗ?

ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯವು ಜುಲೈ 09ರಂದು ಬ್ರಿಸ್ಟಾಲ್‌ನಲ್ಲಿ ನಡೆಯಲಿದೆ. ಸದ್ಯ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಮೂರು ಪಂದ್ಯಗಳು ಮುಕ್ತಾಯವಾಗಿದ್ದು ಇಂಗ್ಲೆಂಡ್ 2-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯ ಮಳೆಯಿಂದ ಅರ್ಧಕ್ಕೆ ರದ್ದಾಗಿತ್ತು. ಇದೀಗ ಸಮಬಲ ಸಾಧಿಸಬೇಕಿದ್ದರೇ ನಾಲ್ಕನೇ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿದೆ ಟೀಂ ಇಂಡಿಯಾ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಟೀಮ್ ಇಂಡಿಯಾ
ವೈಭವ್ ಸೂರ್ಯವಂಶಿ
ಇಂಗ್ಲೆಂಡ್ ಕ್ರಿಕೆಟ್

Latest Videos
Recommended Stories
Recommended image1
ಸಂಜು ಸ್ಯಾಮ್ಸನ್‌ರನ್ನು ತಂಡದಿಂದ ಹೊರಗಿಟ್ಟಿದ್ದೇಕೆ..? ಸತತ ಸೋಲಿನ ಬೆನ್ನಲ್ಲೇ ಕೊನೆಗೂ ಮೌನ ಮುರಿದ ಗೌತಮ್ ಗಂಭೀರ್
Recommended image2
‘‘ನೀನು ಎಂದರೆ, ನಿಮ್ಮಪ್ಪ’’ ಎನ್ನುತ್ತಿದ್ದ ನಾಯಕ..! ಆಕ್ರಮಣಕಾರಿ ಮನೋಭಾವ ಅವನ ಗುರುತು.. ಸ್ವಾಭಿಮಾನ ಅವನ ಹೆಗ್ಗುರುತು..!
Recommended image3
ಮಹಿಳಾ ಟಿ20 ವಿಶ್ವಕಪ್: ಶ್ರೇಷ್ಠ ತಂಡ ಪ್ರಕಟಿಸಿದ ಐಸಿಸಿ..! ಏಕೈಕ ಭಾರತೀಯ ಆಟಗಾರ್ತಿಗೆ ಸ್ಥಾನ
Related Stories
Recommended image1
'ವೈಭವ್‌ ಸೂರ್ಯವಂಶಿ ಭವಿಷ್ಯ ಹಾಳು ಮಾಡಬೇಡಿ': ಟೀಂ ಇಂಡಿಯಾ ಕೋಚ್ ಮೇಲೆ ತಿರುಗಿಬಿದ್ದ ಆರ್‌ಸಿಬಿ ಆಪತ್ಬಾಂಧವ..!
Recommended image2
ಟೀಂ ಇಂಡಿಯಾದ ಈ ಆಟಗಾರನ ಗರ್ಲ್‌ಫ್ರೆಂಡ್‌ ಜತೆ ವೈಭವ್ ಹೆಸರು ಥಳುಕು..! ಏನೋ ಮಾಡಲು ಹೋಗಿ ಇನ್ನೇನೋ ಮಾಡಿದ್ನಾ 15 ವರ್ಷದ ಪೋರಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved