LIVE NOW
Published : Jul 07, 2026, 07:06 AM ISTUpdated : Jul 07, 2026, 11:42 PM IST

India Latest News Live: ಸುರೇಖಾ ಜೊತೆ ಮದುವೆಗೆ ಚಿರಂಜೀವಿಗೆ ಸಿಕ್ಕಿದ್ದು ಬರೀ 3 ದಿನ ರಜೆ - ಮೆಗಾಸ್ಟಾರ್ ಫನ್ನಿ ಲವ್ ಸ್ಟೋರಿ

ಸಾರಾಂಶ

ಪ್ರಯಾಗ್‌ರಾಜ್‌: ಉತ್ತರಪ್ರದೇಶದ ಆಗ್ರಾದಲ್ಲಿರುವ ವಿಶ್ವಪ್ರಸಿದ್ಧ ತಾಜ್‌ಮಹಲ್‌ ವ್ಯಾಪ್ತಿಯೊಳಗೆ ಅಗ್ರೇಶ್ವರ ಮಹಾದೇವ ತೇಜೋ ಮಹಾಲಯ ದೇಗುಲವಿದೆ. ಹೀಗಾಗಿ ಅದನ್ನು ತೇಜೋ ಮಹಾಲಯ ದೇಗುಲ ಎಂದು ಘೋಷಿಸಬೇಕು ಎಂದು ಕೋರಿದ್ದ ಅರ್ಜಿ ವಿಚಾರಣೆ ನಡೆಸಿರುವ ಅಲಹಾಬಾದ್ ಹೈಕೋರ್ಟ್‌, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಪುರಾತತ್ವ ಇಲಾಖೆಗೆ ನೋಟಿಸ್‌ ಜಾರಿ ಮಾಡಿದೆ.

ತಾಜಮಹಲ್‌ ಅನ್ನು ದೇಗುಲ ಎಂದು ಘೋಷಿಸಬೇಕು ಎಂದು ಕೋರಿ ಹರಿಶಂಕರ್‌ ಜೈನ್‌ ಮತ್ತ ಇತರೆ ನಾಲ್ವರು ಜು.3ರಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ರೋಹಿತ್‌ ರಂಜನ್‌ ಅಗರ್‌ವಾಲ್‌ ಅವರನ್ನು ಒಳಗೊಂಡ ಪೀಠ ಈ ನೋಟಿಸ್‌ ಜಾರಿ ಮಾಡಿದೆ.

ತಾಜ್‌ಮಹಲ್‌ ಅನ್ನು ದೇಗುಲವೆಂದು ಘೋಷಿಸಬೇಕು. ಈ ಕುರಿತು ಸಮೀಕ್ಷೆ ನಡೆಸಲು ಆಯೋಗ ರಚಿಸಬೇಕು ಎಂದು ಕೋರಿದ್ದ ಮನವಿಯನ್ನು ಆಗ್ರಾದ ಎರಡು ಜಿಲ್ಲಾ ನ್ಯಾಯಾಲಯ ವಜಾ ಮಾಡಿದೆ. ಇದನ್ನು ಪ್ರಶ್ನಿಸಿ ಇದೀಗ ಅರ್ಜಿ ಸಲ್ಲಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

11:42 PM (IST) Jul 07

ಸುರೇಖಾ ಜೊತೆ ಮದುವೆಗೆ ಚಿರಂಜೀವಿಗೆ ಸಿಕ್ಕಿದ್ದು ಬರೀ 3 ದಿನ ರಜೆ - ಮೆಗಾಸ್ಟಾರ್ ಫನ್ನಿ ಲವ್ ಸ್ಟೋರಿ

ಮೆಗಾಸ್ಟಾರ್ ಚಿರಂಜೀವಿ ತಮ್ಮ ಮದುವೆಯ ಕಥೆಯನ್ನು ತಮಾಷೆಯಾಗಿ ಹೇಳಿ ನಗಿಸುತ್ತಾರೆ. 'ಮನವೂರಿ ಪಾಂಡವುಲು' ಸಿನಿಮಾ ಸಮಯದಿಂದಲೇ ಅಲ್ಲು ರಾಮಲಿಂಗಯ್ಯ ಚಿರಂಜೀವಿಯವರ ಮೇಲೆ ಒಂದು ಕಣ್ಣಿಟ್ಟಿದ್ದರು.

Read Full Story

10:41 PM (IST) Jul 07

ವಿಜಯ್‌ ಹಾದಿಯಲ್ಲೇ ಧನುಷ್ ರಾಜಕೀಯಕ್ಕೆ ಎಂಟ್ರಿ? ಫ್ಯಾನ್ಸ್ ಅಸೋಸಿಯೇಷನ್‌ನಿಂದ ಧ್ವಜ ಅನಾವರಣ!

ತಮಿಳುನಾಡಿನಲ್ಲಿ ಸ್ಟಾರ್ ನಟರ ರಾಜಕೀಯ ಪ್ರವೇಶದ ಸುದ್ದಿ ನಿಲ್ಲುತ್ತಿಲ್ಲ. ವಿಜಯ್ ಸಿಎಂ ಆದ್ಮೇಲೆ ವಿಶಾಲ್, ಸೂರ್ಯ, ಅಜಿತ್ ಬಳಿಕ ಈಗ ಧನುಷ್ ಹೆಸರು ಕೇಳಿಬರುತ್ತಿದೆ. ಹಾಗಾದ್ರೆ ಧನುಷ್ ರಾಜಕೀಯ ಎಂಟ್ರಿ ಫಿಕ್ಸ್ ಆಯ್ತಾ?

Read Full Story

10:14 PM (IST) Jul 07

Natural ingredients for Sink Cleaning - ಸಿಂಕ್‌ನಲ್ಲಿರೋ ಕೊಳೆ, ವಾಸನೆ ತೆಗೆಯಲು ಈ ಪೌಡರ್ ರಾಮಬಾಣ;

Natural ingredients for Sink Cleaning : ಅಡುಗೆಮನೆಯ ಸಿಂಕ್‌ನಲ್ಲಿ ಜಿರಳೆಗಳು ಇರುತ್ತವೆ, ವಾಸನೆ ಕೂಡ ಇರುತ್ತವೆ. ಈ ಸಿಂಕ್‌ನ ಪೈಪ್‌ಗಳಲ್ಲಿ ಒದ್ದೆ ಇರುತ್ತದೆ, ಆಹಾರದ ಕಣಗಳೇ ಇರುತ್ತವೆ. ಮನೆಯಲ್ಲಿರುವ ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸಿ, ಜಿರಳೆಗಳನ್ನುಓಡಿಸಬಹುದು.

Read Full Story

10:02 PM (IST) Jul 07

ಕಚೇರಿಯ ಮೀಟಿಂಗ್‌ನಲ್ಲಿ ಬಿಟ್ಟ ಬಿಸ್ಕೆಟ್‌ ಮಕ್ಕಳಿಗೆ ಕೊಂಡೊಯ್ದ ಅಟೆಂಡರ್‌ಗೆ ವಜಾ ಶಿಕ್ಷೆ - ಹೈಕೋರ್ಟ್ ಗರಂ

ಕಚೇರಿಯಲ್ಲಿ ಉಳಿದಿದ್ದ ಬಿಸ್ಕೆಟ್‌ ಅನ್ನು ಹಸಿದ ಮಕ್ಕಳಿಗೆ ಕೊಂಡೊಯ್ದ ಅಟೆಂಡರ್‌ ಮೇಲೆ ಕಳ್ಳತನದ ಆರೋಪ ಹೊರಿಸಿ ಕೆಲಸದಿಂದ ವಜಾಗೊಳಿಸಲಾಗಿತ್ತು. 17 ವರ್ಷಗಳ ಸೇವೆ ಸಲ್ಲಿಸಿದ್ದ ನೌಕರನಿಗೆ ಅಂತಿಮವಾಗಿ ನ್ಯಾಯಾಲಯವು ನ್ಯಾಯ ಒದಗಿಸಿದ್ದು, ಮರುನೇಮಕಕ್ಕೆ ಆದೇಶಿಸಿ, ಬಾಕಿ ವೇತನ ಪಾವತಿಸುವಂತೆ ಸೂಚಿಸಿದೆ.
Read Full Story

09:54 PM (IST) Jul 07

Cockroach Killer - ಎಷ್ಟೇ ಸ್ಪ್ರೇ ಹೊಡೆದ್ರೂ ಜಿರಳೆ ಹೋಗ್ತಿಲ್ವಾ? ಮನೆಯಲ್ಲಿ ಈ ಗಿಡ ನೆಟ್ಟರೆ ಕೀಟವೇ ಬರಲ್ಲ

Cockroach Killer Plants: ಮನೆಯಲ್ಲಿ ಜಿರಳೆ ಕಾಣೋದು ಸಹಜ. ಇದಕ್ಕೆ ಒಂದಿಷ್ಟು ಕೆಮಿಕಲ್‌ ಸ್ಪ್ರೇ ಮಾಡಿದರೆ, ಆರೋಗ್ಯ ಹಾಳಾಗಬಹುದು. ಈಗ ಮನೆಯಿಂದ ಜಿರಳೆಗಳನ್ನು ದೂರ ಇಡಬಹುದಾದ 7 ಒಳಾಂಗಣ ಸಸ್ಯಳಿವು. ಜಿರಳೆಗಳನ್ನು ದೂರ ಇಡಲು ನಿಮ್ಮ ಮನೆಯೊಳಗೆ ಬೆಳೆಸಬಹುದಾದ 7 ಅತ್ಯುತ್ತಮ Indoor Plants)

 

Read Full Story

08:46 PM (IST) Jul 07

Ketan Murder ಬೆಚ್ಚಿಬೀಳೋ ರಹಸ್ಯ ಬಯಲು ​ - ಸಿಯಾಗೆ ಮದ್ವೆಯಾಗಿ 4 ತಿಂಗಳು? ಹನಿಮೂನ್‌ ಹಂತಕಿ ಸೋನಂ ಈಕೆ ಗುರು

ಭಾವಿ ಪತಿಯನ್ನು ಕೊಲೆ ಮಾಡಿದ ಆರೋಪ ಹೊತ್ತಿರುವ ಸಿಯಾ ಗೋಯಲ್, ತನ್ನ ಲವರ್‌ನನ್ನು ಮೊದಲೇ ಮದುವೆಯಾಗಿದ್ದಳು. ಕೊಲೆ ಮಾಡಿ ಸಿಕ್ಕಿಬಿದ್ದರೆ ತಪ್ಪಿಸಿಕೊಳ್ಳುವುದು ಹೇಗೆಂದು ತಿಳಿಯಲು, ಈಕೆ ಗೂಗಲ್‌ನಲ್ಲಿ 'ಹನಿಮೂನ್‌ ಹಂತಕಿ' ಸೋನಂ ರಘುವಂಶಿ ಕುರಿತು ಅಧ್ಯಯನ ಮಾಡಿದ್ದಳು ಎಂಬುದು ತನಿಖೆಯಿಂದ ಬಯಲಾಗಿದೆ.
Read Full Story

08:08 PM (IST) Jul 07

ಆ ಹುಡುಗಿಯ ಸ್ಯಾಡಿಸಂನಿಂದಲೇ ಹಿಟ್ ಆಯ್ತು - ವಿಶ್ವವನ್ನೇ ಅಲ್ಲಾಡಿಸಿದ 'ಅಬ್ಸೆಶನ್' ಬಗ್ಗೆ ನಿರ್ಮಾಪಕ ಹೇಳಿದ್ದೇನು?

Obsession Movie Success: ಹಲವು ಬಾರಿ ನಾಗವಂಶಿ ಮಾಡಿದ ಕಾಮೆಂಟ್‌ಗಳು ವಿವಾದಕ್ಕೆ ಕಾರಣವಾಗುತ್ತವೆ. ಇದೀಗ ನಾಗವಂಶಿ ವಿಶ್ವದಾದ್ಯಂತ ಸಂಚಲನ ಮೂಡಿಸಿದ ಚಿತ್ರವೊಂದರ ಬಗ್ಗೆ ಮಾತನಾಡಿದ್ದಾರೆ.

Read Full Story

06:17 PM (IST) Jul 07

'ಮಿಮಿ'ಗಾಗಿ ದಪ್ಪ ಆಗ್ತಿದ್ದಾಗಲೇ ಅಂಡಾಣು ಫ್ರೀಜ್ ಮಾಡಿಸಿದ್ದೆ - ಕೃತಿ ಸನೋನ್ ರಹಸ್ಯ ಇದೇನಾ?

ಬಾಲಿವುಡ್‌ನ ಜನಪ್ರಿಯ ನಟಿ ಕೃತಿ ಸನೋನ್ ತಮ್ಮ ನೇರ ನುಡಿಗಳಿಗೆ ಹೆಸರುವಾಸಿ. ಇತ್ತೀಚೆಗೆ ಅವರ 'ಕಾಕ್‌ಟೇಲ್ 2' ಸಿನಿಮಾ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿ ಶಾಹಿದ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದರು.

Read Full Story

06:11 PM (IST) Jul 07

Airtel ₹548 vs Jio ₹448 - ಪ್ರೀಪೇಯ್ಡ್‌ ಪ್ಲಾನ್ ಪೈಕಿ ಯಾವುದು ಬೆಸ್ಟ್? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಏರ್‌ಟೆಲ್‌ನ ₹548 ಮತ್ತು ಜಿಯೋದ ₹448 ವಾಯ್ಸ್-ಓನ್ಲಿ ಪ್ರಿಪೇಯ್ಡ್ ಪ್ಲಾನ್‌ಗಳ ನಡುವಿನ ಹೋಲಿಕೆ ಇಲ್ಲಿದೆ. 84 ದಿನಗಳ ವ್ಯಾಲಿಡಿಟಿಯ ಈ ಎರಡೂ ಪ್ಲಾನ್‌ಗಳಲ್ಲಿ, ಏರ್‌ಟೆಲ್ ಸ್ವಲ್ಪ ಡೇಟಾ ನೀಡಿದರೆ, ಜಿಯೋ ಡೇಟಾ ಇಲ್ಲದೆ ಕರೆ ಮತ್ತು SMS ಮೇಲೆ ಗಮನಹರಿಸುತ್ತದೆ.
Read Full Story

06:11 PM (IST) Jul 07

ನೆಟ್ಸ್‌ ಅಭ್ಯಾಸದ ವೇಳೆ ವೈಭವ್‌ ಸೂರ್ಯವಂಶಿಗೆ ಗಾಯ, ಇಂದಿನ ಪಂದ್ಯದಲ್ಲಿ ಆಡೋದು ಅನುಮಾನ?

ಭಾರತೀಯ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ, ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯಕ್ಕೂ ಮುನ್ನ ನೆಟ್ಸ್‌ನಲ್ಲಿ ಗಾಯಗೊಂಡಿದ್ದಾರೆ. ಚೆಂಡು ಪಕ್ಕೆಲುಬಿಗೆ ಬಡಿದು ನೋವಿನಿಂದ ನರಳುತ್ತಿದ್ದರೂ, ಸಹಾಯಕ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದು ವಿವಾದಕ್ಕೆ ಕಾರಣವಾಗಿದೆ.

Read Full Story

05:14 PM (IST) Jul 07

ಜಿಂಬಾಬ್ವೆ ಪ್ರವಾಸ.. ಬಿಸಿಸಿಐ ಆಯ್ಕೆ ಸಮಿತಿ ಮಾಡಿದ ಮೂರು ದೊಡ್ಡ ಪ್ರಮಾದಗಳು..!

ಜಿಂಬಾಬ್ವೆ ಪ್ರವಾಸಕ್ಕೆ ಭಾರತೀಯ ಟಿ20 ತಂಡದ ಆಯ್ಕೆಯು ಭಾರೀ ಚರ್ಚೆಗೆ ನಾಂದಿ ಹಾಡಿದೆ. ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಗೆಲುವಿನ ಸೂತ್ರದ ಬದಲು ಪ್ರಮಾದಗಳ ಸರಮಾಲೆ ಸೃಷ್ಟಿಸಿದೆಯೇ ಎಂಬ ಅನುಮಾನ ಮೂಡುತ್ತಿದೆ. ಮೂರು ಆಟಗಾರರ ಆಯ್ಕೆಯು ತೀವ್ರ ವಿಮರ್ಶೆಗೆ ಗುರಿಯಾಗಿದ್ದು, ಅವುಗಳ ವಿಶ್ಲೇಷಣೆ ಇಲ್ಲಿದೆ.

Read Full Story

04:55 PM (IST) Jul 07

‘‘ಚಿನ್ನದ ಹುಂಡಿಯನ್ನು ಚಿಲ್ಲರೆ ಕಾಸು ಹಾಕಲು ಇಟ್ಟಿದ್ದರು’’ - ಧೋನಿ ಸಾಮರ್ಥ್ಯದ ಮೇಲೆ ಸ್ವತಃ ತಂದೆಗೂ ನಂಬಿಕೆ ಇರಲಿಲ್ಲ

ರೈಲ್ವೇ ಟಿಕೆಟ್ ಕಲೆಕ್ಟರ್ ಕೆಲಸವನ್ನು ತೊರೆದು ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಮಹೇಂದ್ರ ಸಿಂಗ್ ಧೋನಿ, ಭಾರತಕ್ಕೆ ಎರಡು ವಿಶ್ವಕಪ್‌ಗಳನ್ನು ಗೆದ್ದುಕೊಟ್ಟರು. ಇಂದು ಅವರು ರಾಂಚಿಯಲ್ಲಿ ಕೃಷಿಕನಾಗಿ ಸರಳ ಜೀವನ ನಡೆಸುತ್ತಾ, ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.
Read Full Story

04:54 PM (IST) Jul 07

ದಿವಾಳಿಯಾಗುತ್ತಾ OLA Electric? 40 ಕೋಟಿ ಬಾಕಿ ಪಾವತಿ ವಿವಾದಕ್ಕೆ NCLT ಮೆಟ್ಟಿಲೇರಿದ ಸಪ್ಲೈಯರ್ಸ್!

ಓಲಾ ಎಲೆಕ್ಟ್ರಿಕ್‌ಗೆ ಸುಮಾರು 40 ಕೋಟಿ ರೂ. ಬಾಕಿ ಪಾವತಿಸದ ಆರೋಪದ ಮೇಲೆ ಇಬ್ಬರು ಬಿಡಿಭಾಗಗಳ ಪೂರೈಕೆದಾರರು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ (NCLT) ದಿವಾಳಿತನ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದ್ದಾರೆ. 

Read Full Story

04:31 PM (IST) Jul 07

Shapoor Zadran - 2015ರ ಏಕದಿನ ವಿಶ್ವಕಪ್‌ನಲ್ಲಿ ಧೋನಿ ವಿಕೆಟ್‌ ಉರುಳಿಸಿದ್ದ ಅಫ್ಘನ್‌ ಸ್ಟಾರ್‌ ವೇಗಿ ಅಪರೂಪದ HLH ಕಾಯಿಲೆಗೆ ಬಲಿ!

ಅಫ್ಘಾನಿಸ್ತಾನದ ಸ್ಟಾರ್ ವೇಗದ ಬೌಲರ್ ಶಾಪೂರ್ ಜದ್ರಾನ್ (38) ಅವರು 'ಹೆಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್' (HLH) ಎಂಬ ಅಪರೂಪದ ಕಾಯಿಲೆಯಿಂದ ದೆಹಲಿಯಲ್ಲಿ ನಿಧನರಾಗಿದ್ದಾರೆ. 

Read Full Story

04:25 PM (IST) Jul 07

ಸಂಜು ಸ್ಥಾನ ಕಿತ್ಕೊಂಡ್ರಾ ಸೂರ್ಯವಂಶಿ.. ಬಿಸಿಸಿಐಗೆ ಹಿಗ್ಗಾಮುಗ್ಗಾ ಕ್ಲಾಸ್..!

ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್‌ ಹೆಸರು ಇಲ್ಲದಿರೋದು ಭಾರೀ ಚರ್ಚೆಗೆ ಕಾರಣವಾಗಿದೆ. ವೈಭವ್ ಸೂರ್ಯವಂಶಿಗಾಗಿ ಸಂಜುಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಂತೆಯೇ ಬಿಸಿಸಿಐ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.  

Read Full Story

04:24 PM (IST) Jul 07

Sanju Samson Drop - ಮೂರೇ 3 ವೈಫಲ್ಯಗಳಿಗೆ ಆ ಮೂರು ಅದ್ಭುತಗಳನ್ನು ಮರೆತಿರಾ?

ಟಿ20 ವಿಶ್ವಕಪ್ ಗೆಲುವಿನ ರೂವಾರಿಯಾಗಿದ್ದ ಸಂಜು ಸ್ಯಾಮ್ಸನ್, ಕೇವಲ ಮೂರು ಪಂದ್ಯಗಳ ವೈಫಲ್ಯದಿಂದಾಗಿ ಭಾರತ ತಂಡದಿಂದ ಹೊರಬಿದ್ದಿದ್ದಾರೆ. ವಿಶ್ವಕಪ್ ನಾಕೌಟ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರನಿಗೆ ಈ ರೀತಿ ಅವಮಾನ ಮಾಡಿರುವುದು ಸರಿಯೇ ಎಂದು ಲೇಖನ ಪ್ರಶ್ನಿಸುತ್ತದೆ.
Read Full Story

03:08 PM (IST) Jul 07

ಸ್ಟೈಲ್, ಮೈಲೇಜ್, ಪವರ್… ಎಲ್ಲವೂ ಇದೆ! ಕಾಲೇಜ್ ಸ್ಟೂಡೆಂಟ್ಸ್‌ಗೆ ₹2 ಲಕ್ಷದೊಳಗೆ ಸಿಗುವ ಟಾಪ್ ಬೈಕ್‌ಗಳು

ಕಾಲೇಜು ವಿದ್ಯಾರ್ಥಿಗಳಿಗೆ ಬೈಕ್ ಆಯ್ಕೆ ಮಾಡುವಾಗ ಸ್ಟೈಲ್, ಮೈಲೇಜ್, ಪರ್ಫಾರ್ಮೆನ್ಸ್ ಹಾಗೂ ಬಜೆಟ್ ಮುಖ್ಯ. ₹2 ಲಕ್ಷದೊಳಗೆ ಸಿಗುವ ಅತ್ಯುತ್ತಮ ಬೈಕ್‌ಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ದಿನನಿತ್ಯದ ಕಾಲೇಜು ಪ್ರಯಾಣ ಹಾಗೂ ವೀಕೆಂಡ್ ರೈಡ್‌ಗಳಿಗೆ ಸೂಕ್ತವಾದ ಆಯ್ಕೆಗಳು ಇಲ್ಲಿವೆ.

Read Full Story

02:52 PM (IST) Jul 07

ರಾಮ ಮಂದಿರದ ಹಣದಲ್ಲಿ ಲಕಲಕ ಜೀವನ.. ಗೆಳತಿಗೆ ಐಫೋನ್, ಅಣ್ಣನಿಗೆ ಮದುವೆ ಮಾಡಿಸಿದ ಕಳ್ಳ!

ಕೆಲವು ದಿನಗಳಿಂದ ಅಯೋಧ್ಯೆ ರಾಮಮಂದಿರದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಕಳ್ಳತನ ವಿಚಾರ ಭಾರೀ ಸುದ್ದಿಯಲ್ಲಿದೆ. ಇದೀಗ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದ್ದು, ಕಳ್ಳನೊಬ್ಬನ ಐಷಾರಾಮಿ ಜೀವನ ಹೇಗಿತ್ತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ. 

Read Full Story

01:39 PM (IST) Jul 07

ಪಹಲ್ಗಾಮ್ ನರಮೇಧಕ್ಕೆ ಕಾರಣ ಪಾಕ್ ಉಗ್ರ ಹಫೀಜ್ ಸಯೀದ್! NIA ಚಾರ್ಜ್‌ಶೀಟ್ ಸಲ್ಲಿಕೆ

ಜಮ್ಮು-ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿ ಪ್ರಕರಣದಲ್ಲಿ ಎನ್‌ಐಎ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ದಾಳಿಯಲ್ಲಿ ಕನ್ನಡಿಗರೂ ಸೇರಿದಂತೆ 26 ಮಂದಿ ಮೃತಪಟ್ಟಿದ್ದು, ಲಷ್ಕರ್-ಎ-ತೊಯ್ದಾ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಪ್ರಮುಖ ಆರೋಪಿಯನ್ನಾಗಿಸಲಾಗಿದೆ. ಈ ಮೂಲಕ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಪಾತ್ರವನ್ನು ಎನ್‌ಐಎ ಬಯಲು ಮಾಡಿದೆ.
Read Full Story

01:10 PM (IST) Jul 07

ತಂದೆಗೆ ತಕ್ಕ ಮಕ್ಕಳು..! ಅಂಡರ್-19 ಪಂದ್ಯದಲ್ಲಿ ಅನ್ವಯ್ ಸ್ಪೋಟಕ ಬ್ಯಾಟಿಂಗ್; ಮಹಾರಾಜ ಟ್ರೋಫಿಯಲ್ಲಿ ಬೆಂಗಳೂರು ಗೆಲ್ಲಿಸಿದ ಸಮಿತ್ ದ್ರಾವಿಡ್!

ರಾಹುಲ್ ದ್ರಾವಿಡ್ ಅವರ ಕಿರಿಯ ಮಗ ಅನ್ವಯ್ ದ್ರಾವಿಡ್ ಭಾರತ ಅಂಡರ್-19 ಪರ ಸ್ಪೋಟಕ 87 ರನ್ ಸಿಡಿಸಿದರೆ, ಹಿರಿಯ ಮಗ ಸಮಿತ್ ದ್ರಾವಿಡ್ ಮಹಾರಾಜ ಟ್ರೋಫಿಯಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಈ ಇಬ್ಬರೂ ಸಹೋದರರು ತಮ್ಮ ತಂದೆಯಂತೆ ಕ್ರಿಕೆಟ್‌ನಲ್ಲಿ ಭರವಸೆ ಮೂಡಿಸುತ್ತಿದ್ದಾರೆ.
Read Full Story

01:06 PM (IST) Jul 07

ವಯನಾಡಿನಲ್ಲಿ ಭಾರೀ ಭೂಕುಸಿತ; ಮನೆ-ಚರ್ಚ್ ಸಂಪೂರ್ಣ ನಾಶ, ಮಣ್ಣಿನಡಿ ಹಲವರು ಸಿಲುಕಿರೋ ಶಂಕೆ

ವಯನಾಡಿನ ಕಲ್ಲಾಡಿಯಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ಸೇತುವೆ, ಬಸ್ ನಿಲ್ದಾಣ ಸೇರಿದಂತೆ ಹಲವು ಕಟ್ಟಡಗಳು ನೆಲಸಮವಾಗಿವೆ. ಸುರಂಗ ಮಾರ್ಗದ ಕಾಮಗಾರಿ ಸ್ಥಳದಲ್ಲಿ ನಡೆದ ಈ ದುರಂತದಲ್ಲಿ ಹಲವು ಕಾರ್ಮಿಕರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
Read Full Story

12:49 PM (IST) Jul 07

ಮೊಬೈಲ್ ಗ್ರಾಹಕರಿಗೆ ಟೆಲಿಕಾಂ ಕಂಪೆನಿಯಿಂದ ಮತ್ತೆ ಶಾಕ್ - ರೀಚಾರ್ಜ್ ದರ ಶೇ.12-15 ಏರಿಕೆ ಸಾಧ್ಯತೆ!

ಮುಂಬರುವ 3-4 ತಿಂಗಳಲ್ಲಿ ಮೊಬೈಲ್ ರೀಚಾರ್ಜ್ ದರಗಳು ಶೇ. 12-15ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸೆಂಟ್ರಮ್ ಇನ್‌ಸ್ಟಿಟ್ಯೂಷನಲ್ ರಿಸರ್ಚ್ ವರದಿ ಮಾಡಿದೆ. '3+1' ಮಾರುಕಟ್ಟೆ ವ್ಯವಸ್ಥೆಯಿಂದಾಗಿ ಸ್ಪರ್ಧೆ ಕಡಿಮೆಯಾಗಿದ್ದು, ಜಿಯೋ ಮತ್ತು ಏರ್‌ಟೆಲ್ ಲಾಭ ಗಳಿಸುವ ನಿರೀಕ್ಷೆಯಿದ್ದರೆ, ವೊಡಾಫೋನ್-ಐಡಿಯಾ ಹಿನ್ನಡೆ ಅನುಭವಿಸಲಿದೆ.
Read Full Story

12:45 PM (IST) Jul 07

2008ರ ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದ ತೀರ್ಪು ಪ್ರಕಟ; 38 ಅಪರಾಧಿಗಳಿಗೆ ಮರಣದಂಡನೆ

2008ರ ಅಹಮದಾಬಾದ್ ಸರಣಿ ಸ್ಪೋಟ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಈ ಮಹತ್ವದ ತೀರ್ಪಿನಲ್ಲಿ, 38 ಅಪರಾಧಿಗಳಿಗೆ ಮರಣದಂಡನೆ ಮತ್ತು 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ಖಾಯಂಗೊಳಿಸಿದ್ದು, ಸಂತ್ರಸ್ತರಿಗೆ ಪರಿಹಾರವನ್ನು ಘೋಷಿಸಿದೆ.
Read Full Story

12:37 PM (IST) Jul 07

ಸಂಜು vs ವೈಭವ್ - ಸ್ಯಾಮ್ಸನ್‌ಗೆ ಎಚ್ಚರಿಕೆ ಕೊಟ್ಟ ಶ್ರೀಶಾಂತ್..!

ಟೀಂ ಇಂಡಿಯಾಗೆ ವೈಭವ್ ಸೂರ್ಯವಂಶಿ ಎಂಟ್ರಿಯಿಂದ ಹಿರಿಯ ಆಟಗಾರ ಸಂಜು ಸ್ಯಾಮ್ಸನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಸ್ಥಿರ ಪ್ರದರ್ಶನದಿಂದ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಅವರಿಗೆ ಟೀಂ ಇಂಡಿಯಾದ ಮಾಜಿ ವೇಗೆ ಎಸ್.ಶ್ರೀಶಾಂತ್ ಕಿವಿಮಾತು ಹೇಳಿದ್ದಾರೆ. ಏನು ಹೇಳಿದ್ದಾರೆ ಅನ್ನೋದ್ರ ವಿವರ ಈ ಸ್ಟೋರಿಯಲ್ಲಿದೆ. 

Read Full Story

12:29 PM (IST) Jul 07

ತಿರುಪತಿ, ಶಿರಡಿ ಸಾಯಿಬಾಬಾ ಮಂದಿರದಲ್ಲಿ ದೇಣಿಗೆ ಹೇಗೆ ಲೆಕ್ಕ ಹಾಕಲಾಗುತ್ತೆ ಗೊತ್ತಾ?

ಅಯೋಧ್ಯೆ ರಾಮ ಮಂದಿರಕ್ಕೆ ದೇಶಾದ್ಯಂತ ಭಕ್ತರು ನೀಡಿದ್ದ ಕೋಟ್ಯಂತರ ರೂಪಾಯಿ ಹಣ ಚಿನ್ನಾಭರಣ ಕಳ್ಳತನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ ಪ್ರತಿದಿನ ಲಕ್ಷ ಲಕ್ಷ ದೇಣಿಗೆ ಸಂಗ್ರಹಿಸುವ ತಿರುಪತಿ, ಶಿರಡಿ ದೇವಸ್ಥಾನಗಳು ಹೇಗೆ ಲೆಕ್ಕ ಹಾಕಲಾಗುತ್ತಿದೆ ಎಂಬ ಪ್ರಶ್ನೆಗಳು ಎದ್ದಿವೆ.

 

Read Full Story

12:19 PM (IST) Jul 07

Microsoft layoffs - ತನ್ನ 2 ವಿಭಾಗ ಮುಚ್ಚುವ ಹಂತ, ಮೈಕ್ರೋಸಾಫ್ಟ್ ನಿಂದ 4800 ಉದ್ಯೋಗಿಗಳ ವಜಾ!

ಜಾಗತಿಕ ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್, ತನ್ನ ಹೊಸ ಆರ್ಥಿಕ ವರ್ಷದ ಆರಂಭದಲ್ಲಿ ಸುಮಾರು 4,800 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಈ ಉದ್ಯೋಗ ಕಡಿತವು ಮುಖ್ಯವಾಗಿ ಕಂಪನಿಯ ವಾಣಿಜ್ಯ ಮಾರಾಟ ಮತ್ತು ಎಕ್ಸ್‌ಬಾಕ್ಸ್ ಗೇಮಿಂಗ್ ವಿಭಾಗಗಳ ಮೇಲೆ ಪರಿಣಾಮ ಬೀರಿದ್ದು, ಆಂತರಿಕ ಪುನರ್ರಚನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.
Read Full Story

12:10 PM (IST) Jul 07

44 ರೂ.ಯಲ್ಲಿ ಇಡೀ ವರ್ಷ Jio ಸಿಮ್ ಆಕ್ಟಿವ್ ಆಗಿ ಇಟ್ಕಳ್ಳೋ ವೈರಲ್ ಟ್ರಿಕ್‌ ನಿಜವೇ?

ಕೇವಲ 44 ರೂಪಾಯಿಗೆ ಇಡೀ ವರ್ಷ ಜಿಯೋ ಸಿಮ್ ಆಕ್ಟಿವ್ ಆಗಿಡಬಹುದು ಎಂಬ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಈ ಲೇಖನ ಪರಿಶೀಲಿಸುತ್ತದೆ. ಈ ಸುದ್ದಿ ಸಂಪೂರ್ಣ ಸುಳ್ಳಾಗಿದ್ದು, ಸಿಮ್ ಸಕ್ರಿಯವಾಗಿಡಲು ಬೇಸಿಕ್ ಪ್ಲಾನ್ ರೀಚಾರ್ಜ್ ಕಡ್ಡಾಯವಾಗಿದೆ ಎಂದು ಇದು ಸ್ಪಷ್ಟಪಡಿಸುತ್ತದೆ.
Read Full Story

11:20 AM (IST) Jul 07

ಹೇಗೆಲ್ಲ ಹಣ ಹೂಡಿಕೆ ಮಾಡಿ ದುಡ್ಡು ಮಾಡಬಹುದು? ಬೆಂಗಳೂರಿನ ದಂಪತಿ ಬಿಚ್ಚಿಟ್ಟ ಸೀಕ್ರೇಟ್‌ ಇದು!

Investment Strategy For Beginners: ಇಂದು ಹಣ ಉಳಿತಾಯ ಮಾಡುವ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ. ಈಗ ದಂಪತಿಯೊಂದು ಹೇಗೆಲ್ಲ ಹಣ ಉಳಿತಾಯ ಮಾಡಬಹುದು ಎಂಬುದನ್ನು ವಿಡಿಯೋ ಮೂಲಕ ಹೇಳಿದ್ದಾರೆ. ಎಸ್‌ಐಪಿ (SIP), ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದರ ಜೊತೆಗೆ ಬೇರೆ ಏನೆಲ್ಲ ಮಾಡಬಹುದು ಎಂದಿದ್ದಾರೆ.

Read Full Story

10:43 AM (IST) Jul 07

ಫಲಿಸಿತು ರಾಹುಲ್ ದ್ರಾವಿಡ್ ಪ್ರಾರ್ಥನೆ; ಅಂಜನಾದ್ರಿ ಹನುಮನ ದರ್ಶನದ ಬೆನ್ನಲ್ಲೇ ಸ್ಪೋಟಕ ಅರ್ಧಶತಕ ಚಚ್ಚಿದ ಅನ್ವಯ್!

ಬೆಂಗಳೂರು: ರಾಹುಲ್ ದ್ರಾವಿಡ್ ಇತ್ತೀಚೆಗಷ್ಟೇ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ತಮ್ಮ ಮಗನ ಕ್ರಿಕೆಟ್ ಭವಿಷ್ಯ ಉಜ್ವಲವಾಗಲಿ ಎನ್ನುವ ಸದುದ್ದೇಶದಿಂದ ಯಂತ್ರೋದ್ಧಾರಕ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಕಿರಿಯ ಪುತ್ರ ಅನ್ವಯ್ ಚೊಚ್ಚಲ ಅರ್ಧಶತಕ ಸಿಡಿಸಿದ್ದಾರೆ.

 

Read Full Story

10:24 AM (IST) Jul 07

ಅಯೋಧ್ಯೆಯಲ್ಲಿ ಅಮಿತಾಬ್ ಬಚ್ಚನ್ ಭಾರಿ ಹೂಡಿಕೆ - ಬೆಳಗಿನ ಜಾವ 3 ಗಂಟೆಗೆ ಉದ್ಯಮಿಗೆ ಕರೆ ಮಾಡಿ 15 ಕೋಟಿ ರವಾನೆ!

ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಯಲ್ಲಿ 'ಹೌಸ್ ಆಫ್ ಅಭಿನಂದನ್ ಲೋಧಾ' ಮೂಲಕ ಕೋಟ್ಯಂತರ ರೂಪಾಯಿಗಳ ರಿಯಲ್ ಎಸ್ಟೇಟ್ ಹೂಡಿಕೆ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣ ಮತ್ತು ಹೆಚ್ಚುತ್ತಿರುವ ಪ್ರವಾಸೋದ್ಯಮದಿಂದಾಗಿ ಅಯೋಧ್ಯೆಯು ಜಾಗತಿಕ ಹೂಡಿಕೆ ತಾಣವಾಗಿ ಮಾರ್ಪಡುತ್ತಿದೆ.

Read Full Story

10:22 AM (IST) Jul 07

Gold Price - ಸತತ ನಾಲ್ಕನೇ ದಿನವೂ ಕುಸಿದ ಚಿನ್ನ - ಬಂಗಾರ ಖರೀದಿಗೆ ಇದುವೇ ಸುವರ್ಣವಕಾಶ

ಭಾರತದಲ್ಲಿ ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಕಳೆದ ನಾಲ್ಕು ದಿನಗಳಲ್ಲಿ 24 ಕ್ಯಾರಟ್ 100 ಗ್ರಾಂ ಚಿನ್ನದ ಮೇಲೆ 15,000 ರೂ.ಗಳಿಗಿಂತ ಹೆಚ್ಚು ಇಳಿಕೆಯಾಗಿದ್ದು, ಬೆಳ್ಳಿ ಬೆಲೆ ಸ್ಥಿರವಾಗಿದೆ. ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ದರಗಳ ಮಾಹಿತಿ ಇಲ್ಲಿದೆ.
Read Full Story

09:58 AM (IST) Jul 07

ವಿಡಿಯೋ ಕಾಲ್‌ನಲ್ಲಿ ಪತ್ನಿಗೆ ಸಾವು ತೋರಿಸುತ್ತ ಉಸಿರು ನಿಲ್ಲಿಸಿದ ಪತಿ.. ಹೃದಯ ವಿದ್ರಾವಕ ಘಟನೆ

ಇದು ಪತಿ ಮತ್ತು ಪತ್ನಿ ನಡುವಿನ ಗಲಾಟೆ ಸಾವಿನಲ್ಲಿ ಅಂತ್ಯವಾಗಿದೆ. ಭಯಾನಕ ವಿಚಾರ ಏನಂದ್ರೆ ಪತಿ,ಪತ್ನಿಗೆ ತನ್ನ ಸಾವನ್ನ ವಿಡಿಯೋ ಕಾಲ್ ಮೂಲಕ ತೋರಿಸುತ್ತ ರೈಲಿಗೆ ತಲೆಗೊಟ್ಟಿದ್ದಾರೆ. ಭಯಾನಕ ಸ್ಟೋರಿಯ ಮಾಹಿತಿ ಇಲ್ಲಿದೆ. 

Read Full Story

09:43 AM (IST) Jul 07

8100mAh ದೈತ್ಯ ಬ್ಯಾಟರಿಯ ವಿವೋ Y500 ಸ್ಮಾರ್ಟ್‌ಫೋನ್ ಬಿಡುಗಡೆ; ಕ್ಯಾಮೆರಾ, ಬೆಲೆ ಎಷ್ಟು?

ವಿವೋ ಕಂಪನಿಯು ದೀರ್ಘಕಾಲದ ಬ್ಯಾಟರಿ ಬ್ಯಾಕಪ್ ಹೊಂದಿರುವ ತನ್ನ ಹೊಸ Y500 4G ಸ್ಮಾರ್ಟ್‌ಫೋನ್ ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಹೊಂದಿರುವ  ಪ್ರಮುಖ ಫೀಚರ್‌ಗಳ ಮಾಹಿತಿ ಇಲ್ಲಿದೆ

Read Full Story

More Trending News