ಟಿ20 ವಿಶ್ವಕಪ್ ಗೆಲುವಿನ ರೂವಾರಿಯಾಗಿದ್ದ ಸಂಜು ಸ್ಯಾಮ್ಸನ್, ಕೇವಲ ಮೂರು ಪಂದ್ಯಗಳ ವೈಫಲ್ಯದಿಂದಾಗಿ ಭಾರತ ತಂಡದಿಂದ ಹೊರಬಿದ್ದಿದ್ದಾರೆ. ವಿಶ್ವಕಪ್ ನಾಕೌಟ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರನಿಗೆ ಈ ರೀತಿ ಅವಮಾನ ಮಾಡಿರುವುದು ಸರಿಯೇ ಎಂದು ಲೇಖನ ಪ್ರಶ್ನಿಸುತ್ತದೆ.

  •  ಸುದರ್ಶನ್‌, ಏಷ್ಯಾನೆಟ್ ಸುವರ್ಣ ನ್ಯೂಸ್

ಮಾರ್ಚ್ 8: ಟಿ20 ವಿಶ್ವಕಪ್’ನಲ್ಲಿ ಸರಣಿ ಶ್ರೇಷ್ಠ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜುಲೈ 6: ಭಾರತ ಟಿ20 ತಂಡದಿಂದಲೇ ಔಟ್

ಈ ಜಗತ್ತಲ್ಲಿ ಸಂಜು ಸ್ಯಾಮ್ಸನ್ ಆಗಿರುವುದು ತುಂಬಾ ಕಷ್ಟದ ಕೆಲಸ. ಅವನು ಎಡವಿದ್ದು ಮೂರು ಪಂದ್ಯಗಳಲ್ಲಷ್ಟೇ. ಮೂರೇ ಪಂದ್ಯಗಳಲ್ಲಿ. ಅದಕ್ಕೂ ಹಿಂದಿನ ಮೂರು ಅಂತರಾಷ್ಟ್ರೀಯ ಪಂದ್ಯಗಳಲ್ಲಿ. ಅಂದರೆ ಟಿ20 ವಿಶ್ವಕಪ್ ಟೂರ್ನಿಯ ನಾಕೌಟ್ ಪಂದ್ಯಗಳಲ್ಲಿ ಅವನು ಅದೆಂಥಾ ಆಟವಾಡಿದ್ದನೆಂದರೆ...

* ವೆಸ್ಟ್ ಇಂಡಿಸ್ ವಿರುದ್ಧ: 50 ಎಸೆತಗಳಲ್ಲಿ 97* ರನ್

* ಇಂಗ್ಲೆಂಡ್ ವಿರುದ್ಧ (ಸೆಮಿಫೈನಲ್): 42 ಎಸೆತಗಳಲ್ಲಿ 89 ರನ್

* ನ್ಯೂಜಿಲೆಂಡ್ ವಿರುದ್ಧ (ಫೈನಲ್): 46 ಎಸೆತಗಳಲ್ಲಿ 89 ರನ್.

ಸಂಜು ಸ್ಯಾಮ್ಸನ್ ಆ ಮೂರು ಅದ್ಭುತ ಇನ್ನಿಂಗ್ಸ್’ಗಳನ್ನು ಆಡದೇ ಹೋಗಿದ್ದರೆ ಭಾರತ ಖಂಡಿತಾ ಟಿ20 ವಿಶ್ವಕಪ್ ಗೆಲ್ಲುತ್ತಿರಲಿಲ್ಲ. ಗೆಲ್ಲುವುದಿರಲಿ, ಸೆಮಿಫೈನಲ್ ತಲುಪುತ್ತಲೇ ಇರಲಿಲ್ಲ. ಈಗ ಮೂರೇ 3 ವೈಫಲ್ಯಗಳಿಗೆ ಸಂಜು ಅಡಿದ ಆ ಮೂರು ಅದ್ಭುತಗಳನ್ನು ಮರೆತಿರಾ?

ಮೊದಲು ಆಡುವ ಬಳಗದಿಂದ ಹೊರಗಿಟ್ಟರು. ಅದಾಗಿ ಎರಡೇ ದಿನಗಳಲ್ಲಿ ತಂಡದಿಂದಲೇ ಹೊರಗಟ್ಟಿದರು. ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾದ ಭಾರತ ತಂಡದಲ್ಲಿ ಅವನಿಗೆ ಸ್ಥಾನವಿಲ್ಲ. ಹೀಗೆ ತಂಡದಿಂದ ಹೊರ ಬಿದ್ದವನು ಯಾರು ಗೊತ್ತೇ..?

ಟಿ20 ವಿಶ್ವಕಪ್‌ನಲ್ಲಿ ಸಂಜು ಸ್ಯಾಮ್ಸನ್ ಟ್ರ್ಯಾಕ್ ರೆಕಾರ್ಡ್

* ಟಿ20 ವಿಶ್ವಕಪ್: ಒಂದೇ ಟೂರ್ನಿಯಲ್ಲಿ ಅತೀ ಹೆಚ್ಚು ರನ್ (321)

* ಟಿ20 ವಿಶ್ವಕಪ್ ನಾಕೌಟ್ ಪಂದ್ಯಗಳಲ್ಲಿ ಅತೀ ಹೆಚ್ಚು ರನ್ (178)

* ಟಿ20 ವಿಶ್ವಕಪ್ ಫೈನಲ್’ನಲ್ಲಿ ಅತೀ ಹೆಚ್ಚು ರನ್ (89)

* ಒಂದೇ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತೀ ಹೆಚ್ಚು ಸಿಕ್ಸರ್’ಗಳು (24)

* ಟಿ20 ವಿಶ್ವಕಪ್ ನಾಕೌಟ್ ಪಂದ್ಯಗಳಲ್ಲಿ ಅತೀ ಹೆಚ್ಚು ಸಿಕ್ಸರ್’ಗಳು (15)

* ಟಿ20 ವಿಶ್ವಕಪ್ ಫೈನಲ್’ನಲ್ಲಿ ಅತೀ ಹೆಚ್ಚು ಸಿಕ್ಸರ್’ಗಳು (5)

ಸಂಜು ಸ್ಯಾಮ್ಸನ್ ಇಂಥಾ ಆಟವಾಡದೇ ಇದ್ದಿದ್ದರೆ ಗೌತಮ್ ಗಂಭೀರ್ ಭಾರತ ತಂಡದ ಕೋಚ್ ಆಗಿ ಮುಂದುವರಿಯುತ್ತಿದ್ದನೇ..?

‘ಇದೇ ಸಂಜು ಸ್ಯಾಮ್ಸನ್ ಬಗ್ಗೆ ಇದೇ ಗೌತಮ್ ಗಂಭೀರ್ ಹಿಂದೊಮ್ಮೆ ಏನು ಹೇಳಿದ್ದ ಗೊತ್ತೇ..?’

‘’ಸಂಜು 21 ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದರೂ 22ನೇ ಪಂದ್ಯದಲ್ಲಿ ಆತನನ್ನು ಆಡಿಸುತ್ತೇನೆ’’ ಮಾತನಾಡುವುದು ಸುಲಭ. ಮಾತಿಗೆ ತಕ್ಕಂತೆ ನಡೆದುಕೊಳ್ಳುವುದು ಕಷ್ಟ. ಸೂರ್ಯಕುಮಾರ್ ಯಾದವ್’ನನ್ನು ತಂಡದಿಂದ ಹೊರಗಿಟ್ಟ ನಿರ್ಧಾರದಲ್ಲಿ ಅರ್ಥವಿತ್ತು. ಹೌದು.. ಸೂರ್ಯ ಆಟಗಾರನಾಗಿ ವಿಫಲವಾಗಿದ್ದ. ನಾಯಕನೆಂಬ ಕಾರಣಕ್ಕಷ್ಟೇ ತಂಡದಲ್ಲಿದ್ದ. ಆದರೆ ಸಂಜು ಸ್ಯಾಮ್ಸನ್..? ಅವನೆಂಥಾ ಮ್ಯಾಚ್ ವಿನ್ನರ್ ಎಂಬುದಕ್ಕೆ ಟಿ20 ವಿಶ್ವಕಪ್’ನಲ್ಲಿ ಅವನು ಆಡಿದ ಆ ಮೂರು ಇನ್ನಿಂಗ್ಸ್’ಗಳು ಸಾಕು. ಅದಾದ ನಂತರ ಈ ವರ್ಷದ ಐಪಿಎಲ್’ನಲ್ಲಿ ಎರಡು ಶತಕಗಳು. ಈಗ ಮೂರು ವೈಫಲ್ಯಗಳು. ಅದಕ್ಕಾಗಿ ಸಂಜು ಅದೆಂಥಾ ಬೆಲೆ ತೆರಬೇಕಾಯಿತು..!

ದೇಶಕ್ಕೆ ಟಿ20 ವಿಶ್ವಕಪ್ ಗೆದ್ದು ಕೊಟ್ಟವನನ್ನು ಮೂರು ವೈಫಲ್ಯಗಳಿಗೆ ಈ ರೀತಿ ಅವಮಾನಕಾರಿಯಾಗಿ ತಂಡದಿಂದ ಹೊರ ಹಾಕುತ್ತೀರಿ ಎಂದಾದರೆ ನಿಮ್ಮಂಥಾ ಧೂರ್ತರು ಇನ್ನೊಬ್ಬರಿಲ್ಲ.