MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • Mobiles
  • 8100mAh ದೈತ್ಯ ಬ್ಯಾಟರಿಯ ವಿವೋ Y500 ಸ್ಮಾರ್ಟ್‌ಫೋನ್ ಬಿಡುಗಡೆ; ಕ್ಯಾಮೆರಾ, ಬೆಲೆ ಎಷ್ಟು?

8100mAh ದೈತ್ಯ ಬ್ಯಾಟರಿಯ ವಿವೋ Y500 ಸ್ಮಾರ್ಟ್‌ಫೋನ್ ಬಿಡುಗಡೆ; ಕ್ಯಾಮೆರಾ, ಬೆಲೆ ಎಷ್ಟು?

ವಿವೋ ಕಂಪನಿಯು ದೀರ್ಘಕಾಲದ ಬ್ಯಾಟರಿ ಬ್ಯಾಕಪ್ ಹೊಂದಿರುವ ತನ್ನ ಹೊಸ Y500 4G ಸ್ಮಾರ್ಟ್‌ಫೋನ್ ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಹೊಂದಿರುವ  ಪ್ರಮುಖ ಫೀಚರ್‌ಗಳ ಮಾಹಿತಿ ಇಲ್ಲಿದೆ

2 Min read
Author : Mahmad Rafik
Published : Jul 07 2026, 09:43 AM IST
Share this Photo Gallery
  • FB
  • TW
  • Linkdin
  • Whatsapp
15
ದೀರ್ಘಕಾಲದ ಬ್ಯಾಟರಿ ಬ್ಯಾಕಪ್
Image Credit : Vivo

ದೀರ್ಘಕಾಲದ ಬ್ಯಾಟರಿ ಬ್ಯಾಕಪ್

ದೀರ್ಘಕಾಲದ ಬ್ಯಾಟರಿ ಬ್ಯಾಕಪ್ ಹೊಂದಿರುವ ವಿವೋ ಕಂಪನಿ ತನ್ನ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಕಳೆದ ವರ್ಷ ಚೀನಾದಲ್ಲಿ ರಿಲೀಸ್ ಆಗಿದ್ದ Y500 5G ಮಾಡೆಲ್‌ನ 4G ಆವೃತ್ತಿಯಾಗಿ ಈ ಫೋನ್ ಈಗ ಗ್ಲೋಬಲ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ನೆರೆಯ ನೇಪಾಳ ಮತ್ತು ಪಾಕಿಸ್ತಾನದಲ್ಲಿ ಹೊಸ ವಿವೋ ಫೋನ್ ಲಾಂಚ್ ಆಗಿದೆ. ಸಾಮಾನ್ಯವಾಗಿ ದೀರ್ಘಕಾಲದ ಬ್ಯಾಟರಿಗಾಗಿ ಜನರು ವಿವೋ ಆಯ್ಕೆ ಮಾಡಿಕೊಳ್ಳುತ್ತಾರೆ. ಹೊಸ Vivo Y500 ಫೀಚರ್ಸ್ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
Vivo Y500 Smartphone Features
Image Credit : X- @Sudhanshu1414

Vivo Y500 Smartphone Features

Vivo Y500 ಸ್ಮಾರ್ಟ್‌ಫೋನ್ 6.83 ಇಂಚಿನ 1.5K AMOLED ಡಿಸ್‌ಪ್ಲೇ ಹೊಂದಿದೆ. 120Hz ರಿಫ್ರೆಶ್ ರೇಟ್, 5,000 ನಿಟ್ಸ್‌ವರೆಗಿನ ಗರಿಷ್ಠ ಬ್ರೈಟ್‌ನೆಸ್ ಮತ್ತು 100% DCI-P3 ಕಲರ್ ಗ್ಯಾಮಟ್‌ನಂತಹ ಫೀಚರ್‌ಗಳು ಈ ಸ್ಕ್ರೀನ್‌ನಲ್ಲಿವೆ. ಇದರ ಜೊತೆಯಲ್ಲಿ ಧೂಳು ಮತ್ತು ನೀರಿನಿಂದ ರಕ್ಷಣೆ ನೀಡಲು IP69 ರೇಟಿಂಗ್ ಫೀಚರ್ ಸಹ ಹೊಂದಿದೆ. ಆಂಡ್ರಾಯ್ಡ್ 16 ಆಧಾರಿತ ಒರಿಜಿನ್ ಓಎಸ್ 6 ಆಪರೇಟಿಂಗ್ ಸಿಸ್ಟಮ್‌ನಲ್ಲಿ Vivo Y500 ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸುತ್ತದೆ.

Related Articles

Related image1
ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ OPPO Find X9s ಅಬ್ಬರ: ಗ್ರಾಹಕರು ಫಿದಾ ಆಗಲು ಇಲ್ಲಿದೆ 5 ಮುಖ್ಯ ಕಾರಣಗಳು!
Related image2
Tech info: ಒಂದು ಸ್ಮಾರ್ಟ್‌ಫೋನ್ ಎಷ್ಟು ವರ್ಷ ಬಳಸಬಹುದು? ಹೊಸ ಮೊಬೈಲ್ ಖರೀದಿಗೂ ಮುನ್ನ ಈ 5 ಲಕ್ಷಣಗಳನ್ನು ಗಮನಿಸಿ!
35
Processor And Battery
Image Credit : Vivo

Processor And Battery

6nm ಟೆಕ್ನಾಲಜಿಯ ಯುನಿಸೋಕ್ T7300 ಆಕ್ಟಾ-ಕೋರ್ ಪ್ರೊಸೆಸರ್ ಪವರ್ ನೀಡಲಿದೆ . 8GB LPDDR4X RAM ಜೊತೆಗೆ 128GB ಮತ್ತು 256GB UFS 2.2 ಸ್ಟೋರೇಜ್ ಆಯ್ಕೆಗಳು ಗ್ರಾಹಕರಿಗೆ ಲಭ್ಯವಿವೆ. ಸ್ಮಾರ್ಟ್‌ಫೋನ್ ಬಿಸಿಯಾಗುವುದನ್ನು ತಡೆಯಲು 4,300 ಚದರ ಮಿಲಿಮೀಟರ್ ವಿಸ್ತೀರ್ಣದ ವೇಪರ್ ಚೇಂಬರ್ ಕೂಲಿಂಗ್ ಸಿಸ್ಟಮ್ ಅಳವಡಿಸಲಾಗಿದೆ. 8100mAh ಬ್ಯಾಟರಿಗೆ 44W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.

45
Camera And Censor Features
Image Credit : Vivo

Camera And Censor Features

ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಮೇನ್‌ 50MP ಮತ್ತು ಮ್ಯಾಕ್ರೋ ಎಂಬ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಸೆಲ್ಫಿಗಾಗಿ 32MP ಸಾಮಾರ್ಥ್ಯದ ಕ್ಯಾಮೆರಾ ಹೊಂದಿದೆ. 4G LTE, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ 5.4, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ನಂತಹ ಕನೆಕ್ಟಿವಿಟಿ ಆಯ್ಕೆಗಳನ್ನೂ ಈ ಫೋನ್ ಒಳಗೊಂಡಿದೆ.

55
ಬೆಲೆ ಎಷ್ಟು?
Image Credit : Vivo

ಬೆಲೆ ಎಷ್ಟು?

8GB RAM ಮತ್ತು 128GB ಸ್ಟೋರೇಜ್

ಪಾಕಿಸ್ತಾನದಲ್ಲಿ ವಿವೋ Y500 4Gಯ 8GB RAM ಮತ್ತು 128GB ಸ್ಟೋರೇಜ್ ಬೇಸ್ ಮಾಡೆಲ್‌ಗೆ 99,999 ಪಾಕಿಸ್ತಾನಿ ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. ಇದು ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು ₹34,000 ಆಗುತ್ತದೆ.

8GB RAM ಮತ್ತು 256GB ಸ್ಟೋರೇಜ್

8GB RAM ಮತ್ತು 256GB ಸ್ಟೋರೇಜ್ ಮಾಡೆಲ್‌ನ ಬೆಲೆ 1,09,999 ಪಾಕಿಸ್ತಾನಿ ರೂಪಾಯಿ (ಸುಮಾರು ₹38,000). ಈ ಫೋನ್ ಮಿಡ್‌ನೈಟ್ ಬ್ಲೂ ಮತ್ತು ಪರ್ಲ್ ವೈಟ್ ಎಂಬ ಎರಡು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಸ್ಮಾರ್ಟ್‌ಫೋನ್
ಮೊಬೈಲ್

Latest Videos
Recommended Stories
Recommended image1
ಗೂಗಲ್ ಪಿಕ್ಸೆಲ್ 10 ಮೊಬೈಲ್ ಮೇಲೆ ಭರ್ಜರಿ ₹13,000 ಡಿಸ್ಕೌಂಟ್: ಪ್ರೀಮಿಯಂ ಫೋನ್ ಪ್ರಿಯರಿಗೆ ಬೆಸ್ಟ್ ಆಫರ್!
Recommended image2
ಕಂಟೆಂಟ್ ಕ್ರಿಯೇಟರ್ಸ್‌ ಮೂಲಕ ಆದಾಯಗಳಿಸಲು ಇಲ್ಲಿದೆ 30 ಸಾವಿರ ರೂ ಒಳಗಿನ ಉತ್ತಮ ಕ್ಯಾಮೆರಾ ಫೋನ್
Recommended image3
ಬಿಡುಗಡೆಗೂ ಮೊದಲೇ ಐಫೋನ್ 18ಗೆ ನಡುಕ, ಬರುತ್ತಿದೆ 200MP ಕ್ಯಾಮೆರಾ ಸ್ಯಾಮ್‌ಸಂಗ್ ಗ್ಯಾಲಕ್ಸಿ S27 ಅಲ್ಟ್ರಾ
Related Stories
Recommended image1
ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ OPPO Find X9s ಅಬ್ಬರ: ಗ್ರಾಹಕರು ಫಿದಾ ಆಗಲು ಇಲ್ಲಿದೆ 5 ಮುಖ್ಯ ಕಾರಣಗಳು!
Recommended image2
Tech info: ಒಂದು ಸ್ಮಾರ್ಟ್‌ಫೋನ್ ಎಷ್ಟು ವರ್ಷ ಬಳಸಬಹುದು? ಹೊಸ ಮೊಬೈಲ್ ಖರೀದಿಗೂ ಮುನ್ನ ಈ 5 ಲಕ್ಷಣಗಳನ್ನು ಗಮನಿಸಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved