Published : Mar 28, 2026, 06:57 AM ISTUpdated : Mar 28, 2026, 11:08 PM IST

India Latest News Live: IPL 2026 - ಚಿನ್ನಸ್ವಾಮಿಯಲ್ಲಿ RCB ವಿಜಯದುಂದುಭಿ - ಕೊಹ್ಲಿ-ಪಡಿಕ್ಕಲ್ ಅಬ್ಬರಕ್ಕೆ ಸನ್‌ರೈಸರ್ಸ್ ಧೂಳೀಪಟ!

ಸಾರಾಂಶ

ಕೊಲಂಬೊ: ಮಧ್ಯಪ್ರಾಚ್ಯ ಯುದ್ಧದಿಂದ ಇಂಧನ ಕೊರತೆ ಅನುಭವಿಸುತ್ತಿರುವ ಶ್ರೀಲಂಕಾದಲ್ಲಿ, ‘ಅಕ್ರಮವಾಗಿ’ 4 ಲೀ. ಪೆಟ್ರೋಲ್ ಸಂಗ್ರಹಿಸಿ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬನಿಗೆ 21 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ನಿಕವೆರತಿಯ ತಾಲೂಕಿನ ಲಸಂತ ಕುಮಾರ ಬಾಲಸೂರ್ಯ (48) ಶಿಕ್ಷೆಗೊಳಗಾದವರು. ತಮ್ಮ ತಂದೆ ತಾಯಿಯ ಶ್ರಾದ್ಧಕ್ಕಾಗಿ ಸುತ್ತಮುತ್ತಲಿನ ಪರಿಸರ ಸ್ವಚ್ಛಗೊಳಿಸಲು ಆ ಪೆಟ್ರೋಲ್ ಬಳಸುವುದಾಗಿ ಕೋರ್ಟ್‌ಗೆ ತಿಳಿಸಿದರು. ಆದರೂ ನ್ಯಾಯಾಧೀಶರು 21 ದಿನಗಳ ಜೈಲುಶಿಕ್ಷೆ ಮತ್ತು 1,500 ಶ್ರೀಲಂಕಾ ರು. ದಂಡ ವಿಧಿಸಿದ್ದಾರೆ.

ಶ್ರೀಲಂಕಾ ಸರ್ಕಾರ ಕ್ಯೂಆರ್‌ ಕೋಡ್ ಆಧರಿತ ರೇಷನಿಂಗ್ ವ್ಯವಸ್ಥೆ ಜಾರಿಗೆ ತಂದಿದೆ. ಇದರ ಪ್ರಕಾರ ಕಾರುಗಳಿಗೆ ವಾರಕ್ಕೆ 15 ಲೀ. ಮತ್ತು ಬಸ್‌ಗಳಿಗೆ ವಾರಕ್ಕೆ 60 ಲೀ. ಇಂಧನ ಮಾತ್ರ ಅನುಮತಿಸಲಾಗಿದೆ. ಇದಕ್ಕಿಂತ ಹೆಚ್ಚು ಖರೀದಿಸಿದರೆ ಅಪರಾಧ.

11:08 PM (IST) Mar 28

IPL 2026 - ಚಿನ್ನಸ್ವಾಮಿಯಲ್ಲಿ RCB ವಿಜಯದುಂದುಭಿ - ಕೊಹ್ಲಿ-ಪಡಿಕ್ಕಲ್ ಅಬ್ಬರಕ್ಕೆ ಸನ್‌ರೈಸರ್ಸ್ ಧೂಳೀಪಟ!

ಐಪಿಎಲ್ 2026ರ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ಆರ್‌ಸಿಬಿ ಗೆಲುವು ಕಂಡಿದೆ.

Read Full Story

10:50 PM (IST) Mar 28

ಭಾರತೀಯ ಸೇನೆಗೆ 'ಪ್ರಹಾರ' ಬಲ - 2,000 ಲೈಟ್ ಮೆಷಿನ್ ಗನ್‌ಗಳ ಮೊದಲ ಬ್ಯಾಚ್ ಹಸ್ತಾಂತರಿಸಿದ ಅದಾನಿ ಡಿಫೆನ್ಸ್!

ಅದಾನಿ ಡಿಫೆನ್ಸ್ ಮತ್ತು ಏರೋಸ್ಪೇಸ್ ಕಂಪನಿಯು 2,000 'ಪ್ರಹಾರ' ಲೈಟ್ ಮೆಷಿನ್ ಗನ್‌ಗಳ ಮೊದಲ ಬ್ಯಾಚ್ ಅನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ. ಗ್ವಾಲಿಯರ್‌ನಲ್ಲಿ ತಯಾರಾದ ಈ 7.62 ಎಂಎಂ ಕ್ಯಾಲಿಬರ್‌ನ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನಿಗದಿತ ಸಮಯಕ್ಕಿಂತ 11 ತಿಂಗಳು ಮುಂಚಿತವಾಗಿ ವಿತರಿಸಲಾಗಿದೆ.

Read Full Story

10:37 PM (IST) Mar 28

ಸಿಚುಯೇಷನ್‌ಶಿಪ್ ಅಂದ್ರೆ ಏನು? Gen Z ಕಾಲದ ಹೊಸ ಲವ್ ಸ್ಟೋರಿ ಇದು!

ಕಾಲ ಬದಲಾದಂತೆ ಸಂಬಂಧಗಳ ಸ್ವರೂಪವೂ ಬದಲಾಗುತ್ತಿದೆ. ಮೊದಲು ಪ್ರೀತಿ, ಮದುವೆ ಅಂತ ಸ್ಪಷ್ಟವಾದ ಸಂಬಂಧಗಳು ಹೆಚ್ಚಾಗಿದ್ದವು. ಆದರೆ ಈಗ 'ಸಿಚುಯೇಷನ್‌ಶಿಪ್' (Situationship) ಅನ್ನೋ ಹೊಸ ಬಗೆಯ ಸಂಬಂಧದ ಬಗ್ಗೆ ಹೆಚ್ಚು ಕೇಳಿಬರುತ್ತಿದೆ. ಹಾಗಿದ್ರೆ ಏನಿದು?
Read Full Story

10:09 PM (IST) Mar 28

RCB vs SRH - ಆರ್‌ಸಿಬಿ ಪಾಲಿನ 'ಸ್ಪೈಡರ್ ಮ್ಯಾನ್' - ಸಾಲ್ಟ್ ಹಿಡಿದ ಅದ್ಭುತ ಕ್ಯಾಚ್‌ಗಳಿಗೆ ಅಭಿಮಾನಿಗಳು ಶಾಕ್!

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತು ಹೆನ್ರಿಕ್ ಕ್ಲಾಸನ್ ಅಬ್ಬರಿಸಿದರೂ, ಫಿಲ್ ಸಾಲ್ಟ್ ಹಿಡಿದ ಎರಡು ಅದ್ಭುತ ಕ್ಯಾಚ್‌ಗಳು ಪಂದ್ಯದ ಗತಿಯನ್ನೇ ಬದಲಿಸಿದವು. ಈ ಕ್ಯಾಚ್‌ಗಳಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 201 ರನ್‌ಗಳಿಗೆ ನಿಯಂತ್ರಣಗೊಂಡಿತು.
Read Full Story

09:52 PM (IST) Mar 28

IPL 2026 - ಇಶಾನ್ ಕಿಶನ್ ಆರ್ಭಟಕ್ಕೆ ಬೆಚ್ಚಿದ ಬೆಂಗಳೂರು - RCB ಗೆಲುವಿಗೆ ಬೇಕಿದೆ 202 ರನ್!

ಐಪಿಎಲ್ 2026ರ ಮೊದಲ ಪಂದ್ಯದಲ್ಲಿ, ಆರಂಭಿಕ ಕುಸಿತದ ಹೊರತಾಗಿಯೂ ನಾಯಕ ಇಶಾನ್ ಕಿಶನ್ (80) ಮತ್ತು ಅನಿಕೇತ್ ವರ್ಮಾ (43) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆರ್‌ಸಿಬಿ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ.

Read Full Story

08:21 PM (IST) Mar 28

ಬಾಲಯ್ಯ ಜೊತೆ ಸಿನಿಮಾ ಮಾಡಲು ಭಯ - ಸೂಪರ್ ಸ್ಟಾರ್ ಕೃಷ್ಣರ ಫ್ಲಾಪ್ ಚಿತ್ರದ ಬಗ್ಗೆ ನಾಗಾರ್ಜುನ ವ್ಯಂಗ್ಯ!

ತೆಲುಗಿನ ಕ್ಲಾಸಿಕ್ ಸಿನಿಮಾಗಳ ರೀಮೇಕ್ ಬಗ್ಗೆ ಮಾತನಾಡಿದ ನಟ ನಾಗಾರ್ಜುನ, ಸೂಪರ್ ಸ್ಟಾರ್ ಕೃಷ್ಣ ಅವರ ಫ್ಲಾಪ್ ಚಿತ್ರದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಬಾಲಕೃಷ್ಣ ಬಗ್ಗೆಯೂ ಮಾತನಾಡಿದ್ದಾರೆ. ಏನಿದು ವಿಚಾರ? ಇಲ್ಲಿದೆ ವಿವರ.

Read Full Story

08:08 PM (IST) Mar 28

Vi ನಿಂದ 2 ವಿಶೇಷ ರೀಚಾರ್ಜ್ ಪ್ಲಾನ್ ಲಾಂಚ್; ಏರ್‌ಟೆಲ್-ಜಿಯೋಗೆ ಹೆಚ್ಚಿದ ಟೆನ್ಶನ್!

ವೊಡಾಫೋನ್ ಐಡಿಯಾ ತನ್ನ 20 ಕೋಟಿ ಗ್ರಾಹಕರಿಗಾಗಿ ಹೊಸ ವಿಶೇಷ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿದೆ. ₹670 ಮತ್ತು ₹1005 ಬೆಲೆಯ ಈ ಪ್ಲಾನ್‌ಗಳು ಕ್ರಮವಾಗಿ 56 ಮತ್ತು 84 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್‌ಲಿಮಿಟೆಡ್ ಹೈ-ಸ್ಪೀಡ್ ಡೇಟಾ, ಕಾಲಿಂಗ್ ಮತ್ತು ಹೆಚ್ಚುವರಿ OTT ಪ್ರಯೋಜನಗಳನ್ನು ನೀಡುತ್ತವೆ.

Read Full Story

08:00 PM (IST) Mar 28

ಪ್ರಭಾಸ್ ಜೊತೆ ಆ ಪಾತ್ರ ಮಾಡಲ್ಲ, ಬೇರೆ ಯಾವುದಾದ್ರೂ ಓಕೆ... ಸ್ಪಷ್ಟನೆ ಕೊಟ್ಟ ನಟಿ ರಾಶಿ

ನಟ ಪ್ರಭಾಸ್ ಅವರ ತಾಯಿ ಪಾತ್ರದಲ್ಲಿ ನಟಿಸಲು ನಿರಾಕರಿಸಿದ್ದರ ಬಗ್ಗೆ ನಟಿ ರಾಶಿ ಸ್ಪಷ್ಟನೆ ನೀಡಿದ್ದಾರೆ. ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಮಾತ್ರ ಮಾಡುತ್ತಾ ಬಂದಿರುವ ಈ ತಾರೆ, ಈ ವಿವಾದದ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?

Read Full Story

07:37 PM (IST) Mar 28

ಟ್ರಾಫಿಕ್ ಜಾಮ್ ಈಗ ಹೊಸ 'ಪ್ರೈಮ್ ಟೈಮ್'! ಭಾರತದ ಮೆಟ್ರೋ ನಗರಗಳಲ್ಲಿ ರೇಡಿಯೋ ಅಬ್ಬರ!

ಬೆಂಗಳೂರು ಮತ್ತು ದೆಹಲಿಯಂತಹ ಮಹಾನಗರಗಳಲ್ಲಿ ಪ್ರಯಾಣದ ಅವಧಿ ಒಂದು ಗಂಟೆ ಮೀರಿದ್ದು, ಇದು 'ಸ್ಕ್ರೀನ್-ಫ್ರೀ' ಸಮಯವನ್ನು ಸೃಷ್ಟಿಸಿದೆ. ಈ ದೀರ್ಘಾವಧಿಯ ಪ್ರಯಾಣದಲ್ಲಿ ರೇಡಿಯೋ ಪ್ರಯಾಣಿಕರ 'ದೈನಂದಿನ ಸಂಗಾತಿ'ಯಾಗಿದೆ.

Read Full Story

06:56 PM (IST) Mar 28

6 ವರ್ಷಗಳ ಅಪ್‌ಡೇಟ್ ಗ್ಯಾರಂಟಿ! ಸ್ಯಾಮ್‌ಸಂಗ್‌ನಿಂದ ಹೊಸ ಎ-ಸೀರೀಸ್ ಫೋನ್‌ಗಳ ಬಿಡುಗಡೆ; ಬೆಲೆ ಎಷ್ಟು?

ಸ್ಯಾಮ್‌ಸಂಗ್ ಭಾರತದಲ್ಲಿ ತನ್ನ ಗ್ಯಾಲಕ್ಸಿ A-ಸೀರೀಸ್‌ನ ಹೊಸ Galaxy A57 ಮತ್ತು Galaxy A37 ಫೋನ್‌ಗಳನ್ನು ಪರಿಚಯಿಸಿದೆ. ಈ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು 120Hz ಡಿಸ್‌ಪ್ಲೇ, 50MP ಕ್ಯಾಮೆರಾ, ಮತ್ತು 6 ವರ್ಷಗಳ ಸಾಫ್ಟ್‌ವೇರ್ ಅಪ್‌ಡೇಟ್ ಭರವಸೆಯಂತಹ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬಂದಿವೆ.
Read Full Story

06:23 PM (IST) Mar 28

Vijay Politics - ಮುಂದಿನ ಸಿಎಂ ವಿಜಯ್! ಜ್ಯೋತಿಷಿಗಳ ಭವಿಷ್ಯ ನಿಜವಾಗುತ್ತಾ? ಏನಿದು ರಾಜಯೋಗದ ಕಥೆ?

ನಟ ವಿಜಯ್ ಕಟಕ ರಾಶಿಯಲ್ಲಿ ಜನಿಸಿದ್ದು, ಅವರ ಜಾತಕದಲ್ಲಿ ರಾಜಯೋಗವಿದೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. 2026ರ ಚುನಾವಣೆಯಲ್ಲಿ ಅವರು ರಾಜಕೀಯವಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಾರಾ? ಈ ಕುರಿತ ಜ್ಯೋತಿಷ್ಯ ವಿಶ್ಲೇಷಣೆ ಇಲ್ಲಿದೆ.

Read Full Story

06:01 PM (IST) Mar 28

ತಾನು ಶಿವನ ಅವತಾರ ಎಂದು ನಂಬಿಸಿ 35ರ ಹರೆಯದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ - ಮತ್ತೊಬ್ಬ ಜ್ಯೋತಿಷಿ ಅರೆಸ್ಟ್!

ಪಾಲ್ಘರ್‌ನ ಸ್ವಘೋಷಿತ ದೇವಮಾನವ ಋಷಿಕೇಶ್ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ. ತಾನು ಶಿವನ ಅವತಾರ ಎಂದು ನಂಬಿಸಿ, ಪುಣೆಯ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ದೃಶ್ಯಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪ ಆತನ ಮೇಲಿದೆ.
Read Full Story

06:01 PM (IST) Mar 28

ಗೋವಾದಲ್ಲಿ 42 ಲಕ್ಷದ ಆಸ್ತಿ! ದಾಖಲೆಯಲ್ಲಿ 'ಅವಿವಾಹಿತ' ಎಂದ ನಟ ರವಿ ಮೋಹನ್ - ಏನಿದು ರಹಸ್ಯ ಡೀಲ್?

ತಮಿಳು ನಟ ಜಯಂ ರವಿ ಮತ್ತು ಗಾಯಕಿ ಕೆನಿಶಾ ಫ್ರಾನ್ಸಿಸ್ ನಡುವಿನ ಸ್ನೇಹ ಹಾಗೂ ಆಸ್ತಿ ವ್ಯವಹಾರದ ಕುರಿತ ಇತ್ತೀಚಿನ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ.

Read Full Story

05:47 PM (IST) Mar 28

Daily Walking - ದಿನಕ್ಕೆ 1 ಕಿ.ಮೀ. ನಡೆದರೆ ಸಾಕು, ನಿಮ್ಮ ದೇಹದಲ್ಲಿ ಆಗುತ್ತೆ ಈ ಅದ್ಭುತ ಬದಲಾವಣೆ!

ಪ್ರತಿದಿನ ಒಂದು ಕಿಲೋಮೀಟರ್ ನಡೆಯುವುದು ಚಿಕ್ಕ ಅಭ್ಯಾಸದಂತೆ ಕಂಡರೂ, ಇದು ದೇಹದ ಚಲನೆಯನ್ನು ಉತ್ತೇಜಿಸಿ ರಕ್ತ ಸಂಚಾರವನ್ನು ಸುಧಾರಿಸುತ್ತದೆ. ಇದರಿಂದ ಆಗುವ ಬದಲಾವಣೆಗಳೇನು ಎಂಬುದನ್ನು ಇಲ್ಲಿ ನೋಡೋಣ.

Read Full Story

05:31 PM (IST) Mar 28

ರಜನಿಕಾಂತ್‌ಗೆ ಹೆದರಿ ವಿಜಯ್ ಹಿಂದೆ ಸರಿದ್ರಾ? 'ಜನ ನಾಯಗನ್' ರಿಲೀಸ್ ಬಗ್ಗೆ ಬಂತು ಶಾಕಿಂಗ್ ಅಪ್‌ಡೇಟ್

ನಟ ವಿಜಯ್ ಅವರ 'ಜನ ನಾಯಗನ್' ಸಿನಿಮಾ ಬಿಡುಗಡೆಯಾಗದೆ ಬಾಕಿ ಉಳಿದಿದೆ. ಇದೀಗ ಈ ಚಿತ್ರದ ರಿಲೀಸ್ ಬಗ್ಗೆ ಹೊಸ ಮಾಹಿತಿಯೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಅದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story

05:20 PM (IST) Mar 28

ಮಲಗಿದ್ದ ಕುದುರೆಗೆ ಈಕೆ ಎಲ್ಲರೆದುರೇ ಇದೇನು ಮಾಡಿದ್ಲು ನೋಡಿ! ಛಂಗನೆ ಎದ್ದು ಕುಣಿದಾಡಿದ ಪ್ರಾಣಿ

ಟಾಂಜಾನಿಯಾದ ವಿಚಿತ್ರ ಸಂಪ್ರದಾಯವೊಂದರ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಕುದುರೆಯೊಂದನ್ನು ಗುಣಪಡಿಸಲು ಕನ್ಯೆಯೊಬ್ಬಳು ಅದರ ಮೇಲೆ ಹಾರುತ್ತಾಳೆ. ಈ ಘಟನೆಯು ಪ್ರಾಣಿ ಚಿಕಿತ್ಸೆಯ ಕುರಿತಾದ ಮೂಢನಂಬಿಕೆ ಮತ್ತು ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಹಾಗೂ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

04:55 PM (IST) Mar 28

ಐಫೋನ್ ಪ್ರಿಯರಿಗೆ ಶಾಕ್ - ಭಾರತದಲ್ಲಿ ಭಾರೀ ದುಬಾರಿಯಾಗಲಿವೆ ಹಳೆಯ ಐಫೋನ್ ಮಾಡೆಲ್‌ಗಳು! ಕಾರಣವೇನು?

ಭಾರತದಲ್ಲಿ ಹಳೆಯ ಐಫೋನ್ ಮಾಡೆಲ್‌ಗಳ ಬೆಲೆ ₹5,000 ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ಆಪಲ್ ಸಂಸ್ಥೆಯು ರಿಟೇಲರ್‌ಗಳಿಗೆ ನೀಡುತ್ತಿದ್ದ 'ಡಿಮ್ಯಾಂಡ್ ಜನರೇಷನ್' ಪ್ರೋತ್ಸಾಹ ಧನವನ್ನು ಹಿಂತೆಗೆದುಕೊಳ್ಳುತ್ತಿರುವುದೇ ಇದಕ್ಕೆ ಕಾರಣ. 

Read Full Story

04:41 PM (IST) Mar 28

ಧುರಂಧರ್‌ ಸಿನಿಮಾ ಮಾದರಿ ಅನುಸರಿಸುತ್ತಿದ್ದರಾ ರಾಜಮೌಳಿ - ಹಾಗಿದ್ರೆ ವಾರಣಾಸಿ ಕತೆಯೇನು?

ವಾರಣಾಸಿ ಸಿನಿಮಾದ್ದು ಬಹುದೊಡ್ಡ ಕ್ಯಾನ್ವಾಸ್‌. ಆ ಕಥೆಯನ್ನು ಮೂರು ಗಂಟೆಗಳಲ್ಲಿ ಹೇಳುವುದು ಕಷ್ಟಸಾಧ್ಯ. ಹೀಗಾಗಿ ಈ ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡ ಚಿಂತಿಸುತ್ತಿದೆ.

Read Full Story

04:13 PM (IST) Mar 28

ಗ್ರಾಹಕರಿಗೆ ಮೋಸ ಮಾಡಿದ ಅಮೆಜಾನ್‌ಗೆ ₹21,000 ಕೋಟಿ ದಂಡ - ಪ್ರೈಮ್ ಸಬ್‌ಸ್ಕ್ರಿಪ್ಶನ್‌ ಹೊಂದಿವರಿಗೆ ಸಿಗಲಿದೆ ಭರ್ಜರಿ ರೀಫಂಡ್‌

ಗ್ರಾಹಕರನ್ನು ತಪ್ಪುದಾರಿಗೆಳೆಯುವ ಪ್ರೈಮ್ ಸಬ್‌ಸ್ಕ್ರಿಪ್ಶನ್‌ ತಂತ್ರಗಳಿಗಾಗಿ ಅಮೆಜಾನ್, ಅಮೆರಿಕದ ಎಫ್‌ಟಿಸಿ ಜೊತೆ ₹21,000 ಕೋಟಿ ಮೊತ್ತದ ಇತ್ಯರ್ಥಕ್ಕೆ ಒಪ್ಪಿದೆ. ಈ ಒಪ್ಪಂದದ ಅಡಿಯಲ್ಲಿ, ತಿಳಿಯದಂತೆ ಚಂದಾದಾರರಾದ ಅಥವಾ ರದ್ದುಗೊಳಿಸಲು ಕಷ್ಟಪಟ್ಟ ಅರ್ಹ ಗ್ರಾಹಕರಿಗೆ ಹಣವನ್ನು ಮರುಪಾವತಿಸಲಾಗುತ್ತದೆ.
Read Full Story

04:06 PM (IST) Mar 28

ತಂಗಳನ್ನ ಹೀಗೆ ತಿನ್ನಿ; ಕರುಳಿನ ಸಮಸ್ಯೆಗೆ ಹೇಳಿ ಗುಡ್​ಬೈ - ನಟ ಮಾಧವನ್ ಡಯಟೀಷಿಯನ್​ ಟಿಪ್ಸ್​ ಕೇಳಿ

ಕರುಳಿನ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ, ನಟ ಮಾಧವನ್ ಅವರ ಡಯಟೀಷಿಯನ್ ಲ್ಯೂಕ್ ಕೌಟಿನ್ಹೋ ಅವರು ತಂಗಳನ್ನ ಸೇವನೆಯನ್ನು ಶಿಫಾರಸು ಮಾಡಿದ್ದಾರೆ. ರಾತ್ರಿ ನೀರಿನಲ್ಲಿ ನೆನೆಸಿಟ್ಟ ಅನ್ನಕ್ಕೆ ಬೆಳಿಗ್ಗೆ ಮೊಸರು ಅಥವಾ ಮಜ್ಜಿಗೆ ಸೇರಿಸಿ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಇದು ಮಾಧವನ್ ಅವರ ಫಿಟ್ನೆಸ್ ರಹಸ್ಯವೂ ಆಗಿದೆ.
Read Full Story

03:27 PM (IST) Mar 28

ಐಪಿಎಲ್‌ ಕ್ರೇಝ್‌ಗೆ ಕಂಗಾಲಾದ ಬಾಂಗ್ಲಾದೇಶ! ಐಪಿಎಲ್ ಪ್ರಸಾರಕ್ಕೆ ಗ್ರೀನ್ ಸಿಗ್ನಲ್! ನಿಷೇಧ ಹಿಂಪಡೆದ ಬಾಂಗ್ಲಾ ಸರ್ಕಾರ

ಬಾಂಗ್ಲಾದೇಶ ಸರ್ಕಾರವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಸಾರದ ಮೇಲಿನ ನಿರ್ಬಂಧವನ್ನು ತೆಗೆದುಹಾಕಿದೆ. ಹಿಂದಿನ ಮಧ್ಯಂತರ ಸರ್ಕಾರವು ಮುಸ್ತಾಫಿಜುರ್ ರಹಮಾನ್ ವಿವಾದದ ನಂತರ ಹೇರಿದ್ದ ನಿಷೇಧವನ್ನು, ಹೊಸ ಸರ್ಕಾರವು 'ಕ್ರೀಡೆಯನ್ನು ರಾಜಕೀಯದೊಂದಿಗೆ ಬೆರೆಸುವುದಿಲ್ಲ' ಎಂದು ಹೇಳಿ ಹಿಂಪಡೆದಿದೆ.  

Read Full Story

01:54 PM (IST) Mar 28

LPG Shipment - ಗುಜರಾತ್ ತೀರಕ್ಕೆ ಬಂತು 47,000 ಟನ್ ಎಲ್‌ಪಿಜಿ; ನೌಕಾಪಡೆ ಹೈ ಅಲರ್ಟ್!

ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ, ಭಾರತೀಯ ನೌಕಾಪಡೆಯ ಬೆಂಬಲದೊಂದಿಗೆ 47,000 ಟನ್ ಎಲ್‌ಪಿಜಿ ಹೊತ್ತ ಹಡಗು ಗುಜರಾತ್‌ನ ವಡಿನಾರ್ ಟರ್ಮಿನಲ್‌ಗೆ ಬಂದು ತಲುಪಿದೆ. ಭಾರತೀಯ ಹಡಗುಗಳು ಮತ್ತು ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
Read Full Story

01:42 PM (IST) Mar 28

ಆರ್‌ಸಿಬಿಯ ಮೊದಲ ಪಂದ್ಯಕ್ಕೆ ಕನ್ನಡದಲ್ಲೇ ಶುಭ ಹಾರೈಸಿದ ವಿಜಯ್ ಮಲ್ಯ! ಬೆಂಗಳೂರು ಫ್ಯಾನ್ಸ್ ಫುಲ್ ಖುಷ್

ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಮೊದಲ ಪಂದ್ಯವಾಡಲು ಸಜ್ಜಾಗಿರುವ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾಜಿ ಓನರ್ ವಿಜಯ್ ಮಲ್ಯ ಕನ್ನಡದಲ್ಲೇ ಶುಭ ಹಾರೈಸಿದ್ದಾರೆ.

 

Read Full Story

01:42 PM (IST) Mar 28

Emergency Landing - ದೆಹಲಿ ಏರ್‌ಪೋರ್ಟ್‌ನಲ್ಲಿ ಇಂಡಿಗೋ ವಿಮಾನಕ್ಕೆ ಎಂಜಿನ್ ಫೇಲ್ಯೂರ್, 161 ಜನ ಬಚಾವ್!

ವಿಶಾಖಪಟ್ಟಣದಿಂದ ದೆಹಲಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಎಂಜಿನ್ ದೋಷ ಕಾಣಿಸಿಕೊಂಡಿದೆ. ಲ್ಯಾಂಡಿಂಗ್‌ಗೂ ಸ್ವಲ್ಪ ಮುನ್ನ ತಾಂತ್ರಿಕ ದೋಷ ಪತ್ತೆಯಾಗಿದ್ದು, 161 ಪ್ರಯಾಣಿಕರಿದ್ದ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.
Read Full Story

01:26 PM (IST) Mar 28

ಸಪ್ತಪದಿಯ ಸಾರ್ಥಕತೆ - ಶತಾಯುಷಿ ದಂಪತಿಯ ಅಪರೂಪದ ಪ್ರೇಮಕಾವ್ಯ- ವಿಡಿಯೋ ನೋಡಿ ನೆಟ್ಟಿಗರ ಕಣ್ಣೀರು

ಇಂದಿನ ಕಾಲದಲ್ಲಿ ಮದುವೆಗಳು ಮುರಿದು ಬೀಳುತ್ತಿರುವಾಗ, ಶತಾಯುಷಿ ದಂಪತಿಯೊಬ್ಬರ ಪ್ರೀತಿಯ ವಿಡಿಯೋ ವೈರಲ್ ಆಗಿದೆ. ಹಾಸಿಗೆ ಹಿಡಿದಿರುವ ಪತ್ನಿಗೆ ಪತಿ ಪ್ರೀತಿಯಿಂದ ಇಡ್ಲಿ ತಿನ್ನಿಸಲು ಯತ್ನಿಸುತ್ತಿರುವ ದೃಶ್ಯವು, ಸಪ್ತಪದಿಯ ನಿಜವಾದ ಅರ್ಥವನ್ನು ಸಾರುತ್ತಾ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.
Read Full Story

01:12 PM (IST) Mar 28

ಕೌನ್ ಬನೇಗಾ ಕರೋಡ್ ಪತಿ ಶೋ ನಲ್ಲಿ 50 ಲಕ್ಷ ಗೆದ್ದಿದ್ದ ಮಹಿಳಾ ತಹಶೀಲ್ದಾರ್ ಪರಿಹಾರ ನಿಧಿ ಹಗರಣದಲ್ಲಿ ಜೈಲು ಪಾಲು!

'ಕೌನ್ ಬನೇಗಾ ಕರೋಡ್ ಪತಿ'ಯಲ್ಲಿ 50 ಲಕ್ಷ ಗೆದ್ದು ಖ್ಯಾತಿ ಗಳಿಸಿದ್ದ ಮಹಿಳಾ ತಹಶೀಲ್ದಾರ್ ಅಮಿತಾ ಸಿಂಗ್ ತೋಮರ್ ಅವರನ್ನು ಪ್ರವಾಹ ಪರಿಹಾರ ನಿಧಿ ಹಗರಣದಲ್ಲಿ ಬಂಧಿಸಲಾಗಿದೆ. ಶಿಯೋಪುರ ಜಿಲ್ಲೆಯಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ಸುಮಾರು ₹2.57 ಕೋಟಿ ದುರುಪಯೋಗಪಡಿಸಿಕೊಂಡ ಆರೋಪ ಅವರ ಮೇಲಿದೆ.
Read Full Story

01:05 PM (IST) Mar 28

ಶುದ್ಧ, ನಕಲಿ ತುಪ್ಪ ಐದೇ ನಿಮಿಷದಲ್ಲಿ ಕಂಡುಹಿಡಿಯೋದು ಹೇಗೆ? ವಿಡಿಯೋ ಸಹಿತ ಹಂತ ಹಂತದ ಮಾಹಿತಿ ಇಲ್ಲಿದೆ

ಮಾರುಕಟ್ಟೆಯಲ್ಲಿ ಸಿಗುವ ತುಪ್ಪವು ವನಸ್ಪತಿಯಂತಹ ಪದಾರ್ಥಗಳಿಂದ ಕಲಬೆರಕೆಯಾಗಿರಬಹುದು, ಇದು ಆರೋಗ್ಯಕ್ಕೆ ಹಾನಿಕಾರಕ. ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಸೂಚಿಸಿದ ಸರಳ ಮನೆ ಪರೀಕ್ಷೆಯ ಮೂಲಕ ತುಪ್ಪದ ಶುದ್ಧತೆಯನ್ನು ಸುಲಭವಾಗಿ ಪರಿಶೀಲಿಸಬಹುದು. ಈ ಪರೀಕ್ಷೆಯಲ್ಲಿ ಕಂಡುಬರುವ ಬಣ್ಣ ಬದಲಾವಣೆಯು ತುಪ್ಪದಲ್ಲಿನ ಕಲಬೆರಕೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ.
Read Full Story

12:43 PM (IST) Mar 28

ಸಸ್ಯಾಹಾರ ಎಂದ್ರೆ ಏನು? KBC ಸ್ಪರ್ಧಿ ಮಾತು ಕೇಳಿ ಅಮಿತಾಭ್​ ತತ್ತರ! ಕಣ್ಣು ತೆರೆಸಿದ್ರಿ ಎಂದ ಬಿಗ್​ ಬಿ

ಕೌನ್​ ಬನೇಗಾ ಕರೋಡ್​ ಪತಿ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರು ಪ್ರಾಣಿ ಹಿಂಸೆಯ ಕಾರಣ ನೀಡಿ ಹಾಲು, ಚರ್ಮ ಮತ್ತು ರೇಷ್ಮೆ ಉತ್ಪನ್ನಗಳನ್ನು ಬಳಸುವುದಿಲ್ಲ ಎಂದು ಹೇಳಿದ್ದಾರೆ. ಈ ಮಾತುಗಳನ್ನು ಕೇಳಿದ ನಿರೂಪಕ ಅಮಿತಾಭ್​ ಬಚ್ಚನ್​ ಅವರು ಆಶ್ಚರ್ಯಚಕಿತರಾಗಿದ್ದಾರೆ.

Read Full Story

11:59 AM (IST) Mar 28

IPL 2026 ಟೂರ್ನಿ ಆರಂಭಕ್ಕೂ ಮೊದಲೇ ಚೆನ್ನೈ ಸೂಪರ್ ಕಿಂಗ್ಸ್‌ ದೊಡ್ಡ ಹಿನ್ನಡೆ; ಧೋನಿ ಆರಂಭಿಕ ಐಪಿಎಲ್ ಪಂದ್ಯಗಳಿಂದ ಔಟ್!

ಚೆನ್ನೈ: 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮೊದಲೇ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಬಿಗ್ ಶಾಕ್ ಎದುರಾಗಿದೆ. ತಂಡದ ಮಾಜಿ ನಾಯಕ ಹಾಗೂ ಚಾಣಾಕ್ಷ ವಿಕೆಟ್ ಕೀಪರ್ ಧೋನಿ, ಆರಂಭಿಕ ಐಪಿಎಲ್ ಪಂದ್ಯಗಳಿಂದ ಹೊರಬಿದ್ದಿದ್ದಾರೆ.

 

Read Full Story

11:29 AM (IST) Mar 28

ತುಂಡುಡುಗೆಯಲ್ಲಿ ನರ್ಸ್‌ಗಳಿಂದ ಕೆಲಸ; ಬಿಹಾರ ಖಾಸಗಿ ಆಸ್ಪತ್ರೆಯ ವಿಡಿಯೋ ಅಸಲಿ ಸತ್ಯ ಇಲ್ಲಿದೆ!

ಬಿಹಾರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳು ತುಂಡುಡುಗೆ ಧರಿಸಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಶೀರ್ಷಿಕೆಯನ್ನು ಸತ್ಯವೆಂದು ನಂಬಿ, ಆಕ್ರೋಶದಿಂದ ಕಮೆಂಟ್ ಮಾಡುತ್ತಿದ್ದಾರೆ. ಆದ್ರೆ ಈ ವಿಡಿಯೋಗಳ ಅಸಲಿ ಸತ್ಯವೇ ಬೇರೆಯಾಗಿದೆ.

Read Full Story

10:11 AM (IST) Mar 28

ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ನೋಡ ನೋಡುತ್ತಿದ್ದಂತೆ ಬಣ್ಣ ಬದಲಿಸಿದ ಚೆಂಡು! ಕಳಪೆ ಜೆರ್ಸಿ ಕ್ವಾಲಿಟಿ ಬಗ್ಗೆ ಜೋರಾಯ್ತು ಚರ್ಚೆ!

ಪಾಕಿಸ್ತಾನ ಸೂಪರ್ ಲೀಗ್‌ನ ಮೊದಲ ಪಂದ್ಯದಲ್ಲಿ, ಬಿಳಿ ಚೆಂಡು ಕೆಂಪು ಬಣ್ಣಕ್ಕೆ ತಿರುಗಿದ ವಿಚಿತ್ರ ಘಟನೆ ನಡೆದಿದೆ. ಆಟಗಾರರು ಧರಿಸಿದ್ದ ಕಳಪೆ ಗುಣಮಟ್ಟದ ಜೆರ್ಸಿಯ ಬಣ್ಣವೇ ಚೆಂಡಿಗೆ ಅಂಟಿಕೊಂಡಿದ್ದು ಇದಕ್ಕೆ ಕಾರಣವಾಗಿತ್ತು. ಇದರೊಂದಿಗೆ, ಇಬ್ಬನಿಯ ಪರಿಣಾಮವನ್ನು ತಗ್ಗಿಸಲು ಜಾರಿಗೆ ತಂದಿರುವ ಹೊಸ ನಿಯಮವೂ ಚರ್ಚೆಗೆ ಗ್ರಾಸವಾಗಿದೆ.
Read Full Story

09:55 AM (IST) Mar 28

ಗೆಳತಿ ಜೊತೆ ಹಾಸಿಗೆಯಲ್ಲಿ ಮಜಾ ಮಾಡ್ತಿದ್ದ ಗಂಡನಿಗೆ ಶಾಕ್ ಕೊಟ್ಟ ಹೆಂಡ್ತಿ; ವಿಡಿಯೋ ವೈರಲ್

ಪರಸ್ತ್ರೀಯೊಂದಿಗೆ ಖಾಸಗಿ ಸಮಯ ಕಳೆಯುತ್ತಿದ್ದ ಪತಿಯನ್ನು ಪತ್ನಿ ರೆಡ್ ಹ್ಯಾಂಡಾಗಿ ಹಿಡಿದಿದ್ದಾಳೆ. ಈ ವೇಳೆ ಪತಿ, ಪತ್ನಿ ಹಾಗೂ ಪ್ರೇಯಸಿ ನಡುವೆ ನಡೆದ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Read Full Story

09:52 AM (IST) Mar 28

Viagra History - ವಯಾಗ್ರಾವನ್ನು ಕಂಡುಹಿಡಿದಿದ್ದು ಯಾವುದಕ್ಕೆ ಗೊತ್ತಾ? ಅಸಲಿ ಕಥೆ ಬೇರೇನೇ ಇದೆ!

ವಯಾಗ್ರಾ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಿಸಲು ಇದನ್ನು ಬಳಸುತ್ತಾರೆ. ಇದೇ ಕಾರಣಕ್ಕೆ ಇದು ಜಗತ್ತಿನಲ್ಲೇ ಅತಿ ಹೆಚ್ಚು ಮಾರಾಟವಾಗುವ ಮಾತ್ರೆಗಳಲ್ಲಿ ಒಂದು. ಆದರೆ, ಈ ವಯಾಗ್ರಾವನ್ನು ಮೂಲತಃ ಯಾವ ಉದ್ದೇಶಕ್ಕಾಗಿ ಕಂಡುಹಿಡಿಯಲಾಗಿತ್ತು ಗೊತ್ತಾ?
Read Full Story

09:17 AM (IST) Mar 28

ಸಮಯದ ವಿರುದ್ದ ಹೋರಾಡಿ ಐಪಿಎಲ್‌ಗೆ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜುಗೊಳಿಸಿದ ಕೆಎಸ್‌ಸಿಎ!

ಕಳೆದ ಜೂನ್‌ನಲ್ಲಿ ನಡೆದ ಕಾಲ್ತುಳಿತ ದುರಂತದ ನಂತರ, ಚಿನ್ನಸ್ವಾಮಿ ಕ್ರೀಡಾಂಗಣವು ಐಪಿಎಲ್‌ಗಾಗಿ ಸಂಪೂರ್ಣವಾಗಿ ಸಜ್ಜಾಗಿದೆ. ಕೆಎಸ್‌ಸಿಎಯು ಕಳೆದ 3 ತಿಂಗಳಲ್ಲಿ ಹಲವು ಸುರಕ್ಷತಾ ಕ್ರಮಗಳನ್ನು ಅಳವಡಿಸಿ, ಕ್ರೀಡಾಂಗಣಕ್ಕೆ ಹೊಸ ರೂಪ ನೀಡಿದೆ ಮತ್ತು ದುರಂತದಲ್ಲಿ ಮೃತಪಟ್ಟ ಅಭಿಮಾನಿಗಳಿಗೆ ವಿಶೇಷ ಗೌರವವನ್ನೂ ಸಲ್ಲಿಸಿದೆ.
Read Full Story

08:48 AM (IST) Mar 28

IPL 2026 ಆರಂಭಕ್ಕೂ ಮುನ್ನವೇ ಆರ್‌ಸಿಬಿಗೆ ಡಬಲ್ ಶಾಕ್! ಇಬ್ಬರು ಸ್ಟಾರ್ ಬೌಲರ್‌ಗಳು ಮೊದಲ ಪಂದ್ಯದಿಂದ ಔಟ್

ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಇಂದಿನಿಂದ ಆರಂಭವಾಗುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಡಲಿವೆ. ಈ ಪಂದ್ಯ ಆರಂಭಕ್ಕೂ ಮೊದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಡಬಲ್ ಶಾಕ್ ಎದುರಾಗಿದೆ.

 

Read Full Story

07:50 AM (IST) Mar 28

RCB Vs SRH IPL 2026 - ಹೇಗಿರುತ್ತೆ ಆರ್‌ಸಿಬಿ ಟೀಂ ಸಂಯೋಜನೆ? ಸಂಭವನೀಯ ಆಟಗಾರರ ಪಟ್ಟಿ

ಹಾಲಿ ಚಾಂಪಿಯನ್ ಆರ್‌ಸಿಬಿ ತಂಡವು ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ. ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ, ರಜತ್ ಪಾಟೀದಾರ್ ನಾಯಕತ್ವದ ಆರ್‌ಸಿಬಿ ಬಲಿಷ್ಠವಾಗಿದ್ದರೂ, ವಿದೇಶಿ ಆಟಗಾರರ ಆಯ್ಕೆಯ ಗೊಂದಲದಲ್ಲಿದೆ. 

Read Full Story

More Trending News