ಗೆಳತಿ ಜೊತೆ ಹಾಸಿಗೆಯಲ್ಲಿ ಮಜಾ ಮಾಡ್ತಿದ್ದ ಗಂಡನಿಗೆ ಶಾಕ್ ಕೊಟ್ಟ ಹೆಂಡ್ತಿ; ವಿಡಿಯೋ ವೈರಲ್
ಪರಸ್ತ್ರೀಯೊಂದಿಗೆ ಖಾಸಗಿ ಸಮಯ ಕಳೆಯುತ್ತಿದ್ದ ಪತಿಯನ್ನು ಪತ್ನಿ ರೆಡ್ ಹ್ಯಾಂಡಾಗಿ ಹಿಡಿದಿದ್ದಾಳೆ. ಈ ವೇಳೆ ಪತಿ, ಪತ್ನಿ ಹಾಗೂ ಪ್ರೇಯಸಿ ನಡುವೆ ನಡೆದ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಕ್ರಮ ಸಂಬಂಧ
ಅಕ್ರಮ ಸಂಬಂಧದಲ್ಲಿದ್ದ ಗಂಡನನ್ನು ರೆಡ್ ಹ್ಯಾಂಡ್ ಹಿಡಿದು ಪತ್ನಿ ಗೂಸಾ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿದ್ದ ಗಂಡನ ಪ್ರೇಯಸಿ ಮುಖಕ್ಕೆ ಬಟ್ಟೆ ಸುತ್ತಿಕೊಂಡಿರೋದನ್ನು ಗಮನಿಸಬಹುದು.
ಮೂವರ ನಡುವಿನ ಕಾದಾಟ
ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಫ್ಲಾಟ್‌ಫಾರಂಗಳಲ್ಲಿ ಮೂವರ ನಡುವಿನ ಕಾದಾಟದ ವಿಡಿಯೋ ಹರಿದಾಡುತ್ತಿದ್ದು, ಲಕ್ಷಾಂತರ ವ್ಯೂವ್ ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ರೂಪದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಥೈಲ್ಯಾಂಡ್ ಘಟನೆ
ವರದಿಗಳ ಪ್ರಕಾರ, ಈ ಘಟನೆ ಥೈಲ್ಯಾಂಡ್‌ನಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಮದುವೆಯಾಗಿರುವ ವ್ಯಕ್ತಿ ತನ್ನ ಸಂಗಾತಿಯೊಂದಿಗೆ ಕೋಣೆಯಲ್ಲಿ ಖಾಸಗಿ ಸಮಯ ಕಳೆಯುತ್ತಿದ್ದನು. ಗಂಡ ಬೇರೆ ಯುವತಿಯೊಂದಿಗಿರುವ ವಿಷಯ ತಿಳಿದ ಮಹಿಳೆ ಆತನಿರುವ ಸ್ಥಳಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ಬಾಗಿಲು ತೆರೆದ ಗಂಡನಿಗೆ ಬಿಗ್ ಶಾಕ್ ಎದುರಾಗಿದೆ.
ಅವನಿಗಾಗಿ ಇಬ್ಬರ ನಡುವೆ ಜಗಳ
ಪ್ರಿಯಕರನ ಮಡದಿ ಬರುತ್ತಿದ್ದಂತೆ ಸಂಗಾತಿ ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದಾಳೆ. ಕೋಣೆಯಲ್ಲಿ ಗಂಡನೊಂದಿಗೆ ಮಹಿಳೆ ಜಗಳ ಮಾಡಿದ್ದಾಳೆ. ಹಾಗೆಯೇ ಯುವತಿ ಮೇಲೆ ಹಲ್ಲೆ ಮಾಡೋಕೆ ಸಹ ಮುಂದಾಗಿದ್ದಾಳೆ. ಹಲ್ಲೆ ಮಾಡದಂತೆ ಪತ್ನಿಯನ್ನು ಗಂಡ ತಡೆದಿದ್ದಾನೆ.
ಇದನ್ನೂ ಓದಿ: ಮದುವೆಯಾದ ತಂಗಿಯ ಮೇಲೆ ಕಣ್ಣುಹಾಕಿದ ಬಾಮೈದನ ಕಥೆ ಮುಗಿಸಿದ ಭಾವ!
ವಿಡಿಯೋ ವೈರಲ್
ಈ ವಿಷಯವಾಗಿಯೂ ಗಂಡ-ಹೆಂಡ್ತಿ ನಡುವೆ ಮತ್ತೆ ಜಗಳ ತಾರಕಕ್ಕೇರಿದೆ. ಮಹಿಳೆ ಜೊತೆಯಲ್ಲಿ ಬಂದಿದ್ದ ಕೆಲವರು ಈ ಎಲ್ಲಾ ದೃಶ್ಯಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ಗಲಾಟೆ ವಿಡಿಯೋ ವೈರಲ್ ಆಗುತ್ತಿದೆ.
ಇದನ್ನೂ ಓದಿ: 20 ವರ್ಷ ಗೊತ್ತೇ ಆಗ್ಲಿಲ್ಲ ಗಂಡನ ಸೀಕ್ರೆಟ್! ಸತ್ಯ ಬಯಲಾಗ್ತಿದ್ದಂತೆ ಸೋಡಾಚೀಟಿ ಕೊಟ್ಟ ಪತ್ನಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

