ವಿಶಾಖಪಟ್ಟಣದಿಂದ ದೆಹಲಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಎಂಜಿನ್ ದೋಷ ಕಾಣಿಸಿಕೊಂಡಿದೆ. ಲ್ಯಾಂಡಿಂಗ್‌ಗೂ ಸ್ವಲ್ಪ ಮುನ್ನ ತಾಂತ್ರಿಕ ದೋಷ ಪತ್ತೆಯಾಗಿದ್ದು, 161 ಪ್ರಯಾಣಿಕರಿದ್ದ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.

ದೆಹಲಿ: ಇಂಡಿಗೋ ವಿಮಾನವೊಂದು ಎಂಜಿನ್ ದೋಷದಿಂದಾಗಿ ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಶಾಖಪಟ್ಟಣದಿಂದ ದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ.

ಇಂದು ಬೆಳಗ್ಗೆ 10:39ಕ್ಕೆ ಪೈಲಟ್, ವಿಮಾನವನ್ನು ದೆಹಲಿಯ ಐಜಿಐ ಏರ್‌ಪೋರ್ಟ್‌ನ ರನ್‌ವೇ 28ರಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ವಿಮಾನದಲ್ಲಿ ಒಟ್ಟು 161 ಪ್ರಯಾಣಿಕರಿದ್ದರು. ಲ್ಯಾಂಡಿಂಗ್‌ಗೆ ಕೆಲವೇ ಕ್ಷಣಗಳ ಮೊದಲು ವಿಮಾನದಲ್ಲಿ ತಾಂತ್ರಿಕ ದೋಷ ಇರುವುದು ಪತ್ತೆಯಾಗಿದೆ.

ಇಂಡಿಗೋ 6E579 ವಿಮಾನದಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ತಾಂತ್ರಿಕ ದೋಷ ಪತ್ತೆಯಾದ ತಕ್ಷಣ, ಪೈಲಟ್ ಲ್ಯಾಂಡಿಂಗ್‌ಗೆ ಮೊದಲ ಆದ್ಯತೆ ನೀಡಿ, ಅಪಾಯವನ್ನು ತಪ್ಪಿಸಿದ್ದಾರೆ. ಇದು ಬೋಯಿಂಗ್ 737 ಮಾದರಿಯ ವಿಮಾನವಾಗಿದ್ದು, ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಅದೃಷ್ಟವಶಾತ್, ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Scroll to load tweet…