ನವದೆಹಲಿ: ಅಯೋಧ್ಯೆಯ ರಾಮಮಂದಿರದ ನಿರ್ಮಾಣ ಸಂಪನ್ನವಾದ ನಿಮಿತ್ತ ಮಂಗಳವಾರ ಮಂದಿರದ ಶಿಖರದ ಮೇಲೆ ಹಾರಿಸಲಾದ ಭಗವಾಧ್ವಜಕ್ಕೆ ಪಾಕಿಸ್ತಾನ ಆಕ್ಷೇಪಿಸಿದೆ. ಈ ಕುರಿತು ಹೇಳಿಕೆ ಬಿಡು ಗಡೆ ಮಾಡಿರುವ ಪಾಕ್‌ನ ವಿದೇಶಾಂಗ ಸಚಿವಾಲಯ, 'ಇದು ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ವ್ಯಾಪಕ ಒತ್ತಡ ಹೇರುವ ತಂತ್ರ. ಬಹುಸಂಖ್ಯಾತ ಹಿಂದೂಗಳ ಪ್ರಭಾವದಿಂದ ಮುಸ್ಲಿಮರ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆ ನಾಶಮಾಡುವ ಉದ್ದೇಶಪೂರ್ವಕ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ' ಎಂದಿದೆ.
ಜತೆಗೆ, ಭಾರತದಲ್ಲಿ ಹೆಚ್ಚುತ್ತಿ ರುವ ಮುಸ್ಲಿಂ ದ್ವೇಷದತ್ತ ಅಂತಾರಾಷ್ಟ್ರೀಯ ಸಮುದಾಯ ಗಮನ ಹರಿಸಬೇಕು ಎಂದೂ ಆಗ್ರಹಿಸಲಾಗಿದೆ. ಇದಕ್ಕೆ ಭಾರತದ ವಿದೇಶಾಂಗ ಇಲಾಖೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿ ಪಾಕ್‌ನಿಂದ ಪಾಠ ಕಲಿಯಬೇಕಿಲ್ಲ ಎಂದು ಕಪಾಳಮೋಕ್ಷ ಮಾಡಿದೆ.
10:57 PM (IST) Nov 27
Video ಮದುವೆ ಮಂಟಪದಲ್ಲಿ ಚಿಪ್ಸ್ ಪ್ಯಾಕೆಟ್‌ಗಾಗಿ ಮುಗಿಬಿದ್ದ ಜನ, ರಂಪಾಟದಲ್ಲಿ ಹಲವರಿಗೆ ಗಾಯ, ಅತಿಥಿಗಳು, ಕುಟುಂಬಸ್ಥರು ಬಾಕ್ಸ್ ಹರಿದು ಚಿಪ್ಸ್ ಪ್ಯಾಕೆಟ್ ಮಾಲೆಗಳನ್ನೇ ಹೊತ್ತೊಯ್ದಿದ್ದಾರೆ. ಈ ರಂಪಾಟದಲ್ಲಿ ಹಲವರು ಗಾಯಗಂಡಿದ್ದಾರೆ.
09:54 PM (IST) Nov 27
ಅಸ್ಸಾಂ ಸರ್ಕಾರ ಬಹುಪತ್ನಿತ್ವ ಮಸೂದೆಯನ್ನು ಅಂಗೀಕರಿಸಿದ್ದು, ಒಂದಕ್ಕಿಂತ ಹೆಚ್ಚು ಮದುವೆಯಾಗುವುದನ್ನು ಅಪರಾಧ ಎಂದು ಪರಿಗಣಿಸಿದೆ. ಅಪರಾಧಿಗೆ ಜೈಲು ಮತ್ತು ದಂಡ ವಿಧಿಸಬಹುದು. ಇದರೊಂದಿಗೆ, ಯಾರಾದರೂ ಕಾನೂನು ಮುರಿದರೆ, ಅವರ ಸರ್ಕಾರಿ ಉದ್ಯೋಗ ಮತ್ತು ಮತದಾನದ ಹಕ್ಕನ್ನು ಸಹ ಕಳೆದುಕೊಳ್ಳುತ್ತಾರೆ.
08:54 PM (IST) Nov 27
ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಎಸ್‌ಬಿಐ ಬ್ಯಾಂಕ್‌ನ ಮೆಟ್ಟಿಲುಗಳನ್ನು ಕೆಡವಲಾಯಿತು. ಇದರಿಂದಾಗಿ, ಸಿಬ್ಬಂದಿ ಮತ್ತು ಗ್ರಾಹಕರು ಏಣಿಯ ಸಹಾಯದಿಂದ ಬ್ಯಾಂಕ್ ಪ್ರವೇಶಿಸಬೇಕಾಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ತಮಾಷೆಯ ಕಾಮೆಂಟ್‌ಗಳಿಗೆ ಕಾರಣವಾಯಿತು.
08:36 PM (IST) Nov 27
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿಯು ದೇಶದ 4,092 ಶಾಸಕರ ಸಂಪತ್ತಿನ ಅಂತರ ಬಹಿರಂಗಪಡಿಸಿದೆ. ಮಹಾರಾಷ್ಟ್ರದ ಪರಾಗ್ ಶಾ ₹3,383 ಕೋಟಿ ಆಸ್ತಿಯೊಂದಿಗೆ ಅತ್ಯಂತ ಶ್ರೀಮಂತರಾಗಿದ್ದರೆ, ಪ.ಬಂಗಾಳದ ನಿರ್ಮಲ್ ಕುಮಾರ್ ಧಾರ ಕೇವಲ ₹1,700 ಆಸ್ತಿಯೊಂದಿಗೆ ಅತ್ಯಂತ ಬಡ ಶಾಸಕರಾಗಿದ್ದ
08:08 PM (IST) Nov 27
ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ, ಆರ್‌ಸಿಬಿ ತಂಡವು ಸ್ಟಾರ್ ಆಟಗಾರ್ತಿ ಸೋಫಿ ಡಿವೈನ್ ಅವರನ್ನು ಕಳೆದುಕೊಂಡಿದೆ. ಮತ್ತೊಂದೆಡೆ, ದೀಪ್ತಿ ಶರ್ಮಾ ಅವರು 3.20 ಕೋಟಿ ರುಪಾಯಿಗೆ ಯುಪಿ ವಾರಿಯರ್ಸ್ ಪಾಲಾಗಿದ್ದಾರೆ. ಆರ್‌ಸಿಬಿ ಖರೀದಿಸಿದ ಆಟಗಾರ್ತಿಯರ ವಿವರ ಇಲ್ಲಿದೆ.
07:56 PM (IST) Nov 27
07:24 PM (IST) Nov 27
07:19 PM (IST) Nov 27
ತೆಲಂಗಾಣದ ವೇಮುಲವಾಡದಲ್ಲಿ ನಿರ್ಮಾಣ ಹಂತದ ಡಬಲ್ ಬೆಡ್‌ರೂಮ್ ಮನೆಗಳ ಪರಿಶೀಲನೆ ವೇಳೆ, ಕಾಂಗ್ರೆಸ್ ಶಾಸಕ ಆದಿ ಶ್ರೀನಿವಾಸ್ ಮತ್ತು ಅಧಿಕಾರಿಗಳಿದ್ದಾಗಲೇ ನೆಲಮಾಳಿಗೆ ಕುಸಿದುಬಿದ್ದಿದೆ. ಈ ಘಟನೆಗೆ ಹಿಂದಿನ ಬಿಆರ್‌ಎಸ್ ಸರ್ಕಾರ ಕಾರಣ ಎಂದು ಶಾಸಕರು ಆರೋಪಿಸಿದ್ದು, ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
07:03 PM (IST) Nov 27
ಮನೆ ನಿರ್ಮಾಣ ಸೈಟ್‌ಗೆ ಭೇಟಿ ವೇಳೆ ಕುಸಿದ ಛಾವಣಿ, ಕಾಂಗ್ರೆಸ್ ಶಾಸಕ ಪ್ರಾಣಪಾಯದಿಂದ ಪಾರು, ಬಡವರಿಗೆ, ಸೂರಿಲ್ಲದವರಿಗೆ ನಿರ್ಮಿಸುತ್ತಿರವ ಮನೆ ಇದಾಗಿದೆ. ಛಾವಣಿ ಕುಸಿತ ಘಟನೆ ಬೆನ್ನಲ್ಲೇ ಗುಣಮಟ್ಟ, ಸರ್ಕಾರದ ಭ್ರಷ್ಟಾಚಾರ ಕುರಿತು ಭಾರಿ ಟೀಕೆ ಕೇಳಿಬಂದಿದೆ.
06:39 PM (IST) Nov 27
ಪಶ್ಚಿಮ ಬಂಗಾಳದ ಬೇಗುಂಕೋಡರ್ ರೈಲು ನಿಲ್ದಾಣವು ಹೆಣ್ಣು ದೆವ್ವದ ಕಾಟದ ವದಂತಿಯಿಂದಾಗಿ ದಶಕಗಳ ಕಾಲ ಮುಚ್ಚಲ್ಪಟ್ಟಿತ್ತು. ಈ ಭಯದಿಂದಾಗಿ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಅಂತಿಮವಾಗಿ, ಸಂಘ-ಸಂಸ್ಥೆಗಳ ಪ್ರಯತ್ನ ಮತ್ತು ವೈಚಾರಿಕ ಸವಾಲಿನ ನಂತರ, 2009ರಲ್ಲಿ ರೈಲು ಸೇವೆ ಪುನರಾರಂಭಗೊಂಡಿದೆ.
06:34 PM (IST) Nov 27
ಮೇರಿ ಡಿಕೋಸ್ಟಾ ಈ ಹಿಂದೆ ಪಲಾಶ್ ಜೊತೆಗಿನ ಫ್ಲರ್ಟಿ ಚಾಟ್‌ಗಳ ಫೋಟೋಗಳನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದರು. ಈಗ, ಮತ್ತೊಬ್ಬ ಮಹಿಳೆಯ ಹೆಸರು ವೈರಲ್ ಆಗುತ್ತಿದ್ದು, ಪಲಾಶ್ ಜೊತೆ ತಳುಕು ಹಾಕಿಕೊಂಡಿದೆ.
06:24 PM (IST) Nov 27
stock market investment scam: ಮುಂಬೈನ 72 ವರ್ಷದ ಉದ್ಯಮಿಯೊಬ್ಬರಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಾಗಿ ನಂಬಿಸಿ ಬ್ರೋಕರೇಜ್ ಸಂಸ್ಥೆಯೊಂದು ನಾಲ್ಕು ವರ್ಷಗಳಲ್ಲಿ 35 ಕೋಟಿ ರೂಪಾಯಿ ವಂಚಿಸಿದೆ.
06:15 PM (IST) Nov 27
ಅಳಿವಿನಂಚಿನ ಕಸ್ತೂರಿ ಮೃಗ ಬರೋಬ್ಬರಿ 70 ವರ್ಷದ ಬಳಿಕ ಪಶ್ಚಿಮ ಬಂಗಾಳದಲ್ಲಿ ಪತ್ತೆ, ಕಸ್ತೂರಿ ಪರಿಮಳ, ಮಾಂಸಕ್ಕಾಗಿ ಕಸ್ತೂರಿ ಮೃಗವನ್ನು ಬೇಟೆಯಾಡಿದ ಪರಿಣಾಮ ಭಾರತದಲ್ಲಿ ಕಸ್ತೂರಿ ಮೃಗಗಳು ಸಂತತಿ ಅಳಿವಿನಂಚಿನಲ್ಲಿದೆ. ಈ ಕಸ್ತೂರಿ ಮೃಗ ಬಂಗಾಳ ಕಾಡಿನಲ್ಲಿ ಪತ್ತೆಯಾಗಿದೆ.
06:07 PM (IST) Nov 27
05:56 PM (IST) Nov 27
ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಸಿರಾಜ್, ಗುವಾಹಟಿಯಿಂದ ಹೈದರಾಬಾದ್‌ಗೆ ತೆರಳುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ನಾಲ್ಕು ಗಂಟೆಗಳ ಕಾಲ ವಿಳಂಬವಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏರ್‌ಲೈನ್ಸ್‌ನಿಂದ ಸರಿಯಾದ ಮಾಹಿತಿ ಸಿಗದ ಕಾರಣ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.
05:51 PM (IST) Nov 27
05:49 PM (IST) Nov 27
Ayodhya real estate boom: ರಾಮ ಮಂದಿರ ನಿರ್ಮಾಣದ ನಂತರ ಅಯೋಧ್ಯೆ ದೇಶದ ಪ್ರಮುಖ ರಿಯಲ್ ಎಸ್ಟೇಟ್ ಕೇಂದ್ರವಾಗಿ ಮಾರ್ಪಟ್ಟಿದೆ. ಬೃಹತ್ ಮೂಲಸೌಕರ್ಯ ಅಭಿವೃದ್ಧಿ ಹೆಚ್ಚಿದ ಪ್ರವಾಸೋದ್ಯಮದಿಂದ, ಕಳೆದ 5 ವರ್ಷಗಳಲ್ಲಿ ಭೂಮಿಯ ಬೆಲೆಗಳು ಶೇ. 300-500ರಷ್ಟು ಏರಿಕೆ, ಹೂಡಿಕೆದಾರರಿಗೆ ಲಾಭದಾಯಕ ತಾಣವಾಗಿದೆ.
05:38 PM (IST) Nov 27
ಬ್ರಿಟನ್ ರಾಜಮನೆತನದ ಸೊಸೆ ಮೇಘನ್ ಮಾರ್ಕೆಲ್ ಮೇಲೆ ₹1.5 ಲಕ್ಷ ಮೌಲ್ಯದ ಉಡುಪನ್ನು ಕದ್ದ ಆರೋಪ ಕೇಳಿಬಂದಿದೆ. ನೆಟ್‌ಫ್ಲಿಕ್ಸ್ ಪ್ರೋಮೋದಲ್ಲಿ ಅವರು ಧರಿಸಿದ್ದ ಉಡುಪು ಮೂರು ವರ್ಷಗಳ ಹಿಂದಿನ ಫೋಟೋಶೂಟ್‌ನದ್ದು ಎಂದು ವರದಿಯಾಗಿದೆ.
05:09 PM (IST) Nov 27
school auto Overturned: ರಸ್ತೆಯಲ್ಲಿ ಸಾಗುತ್ತಿದ್ದ ಹಾವನ್ನು ರಕ್ಷಿಸುವುದಕ್ಕೆ ಹೋಗಿ ಆಟೋವೊಂದು ಉರುಳಿ ಬಿದ್ದ ಪರಿಣಾಮ ಆಟೋದಲ್ಲಿದ್ದ ಎರಡು ಪುಟಾಣಿ ಮಕ್ಕಳು ಸಾವನ್ನಪ್ಪಿದ ಆಘಾತಕಾರಿ ಘಟನೆ ಕೇರಳದ ಪಟ್ಟಣತಿಟ್ಟ ಜಿಲ್ಲೆಯಲ್ಲಿ ನಡೆದಿದೆ.
04:46 PM (IST) Nov 27
ಪ್ರಸ್ತಾವಿತ ತೆರಿಗೆ ಬದಲಾವಣೆಗಳಿಂದಾಗಿ ಲಕ್ಷ್ಮಿ ಮಿತ್ತಲ್ ಇಂಗ್ಲೆಂಡ್‌ನಿಂದ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ, ದುಬೈನಲ್ಲಿ ನಯಾ ದ್ವೀಪದಲ್ಲಿರುವ ಹೊಸ ಅಲ್ಟ್ರಾ-ಐಷಾರಾಮಿ ಎಸ್ಟೇಟ್‌ನಲ್ಲಿ ತಮ್ಮ ಮುಂದಿನ ಜೀವನ ಕಳೆಯಲಿದ್ದಾರೆ.
04:36 PM (IST) Nov 27
ಹಲವರೊಂದಿಗೆ ಇತ್ತಾ ರಿಲೇಶನ್‌ಶಿಪ್? ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ಜೊತೆ ಪಲಾಶ್ ವಿಡಿಯೋ ಬಹಿರಂಗ, ಪಲಾಶ್ ಮುಚ್ಚಾಲ್ ಹಾಗೂ ಸ್ಮೃತಿ ಮಂದನಾ ಮದುವೆ ಬಹುತೇಕ ಮುರಿದು ಬಿದ್ದಿದೆ. ಅಧಿಕೃತ ಪ್ರಕಟಣೆ ಮಾತ್ರ ಬಾಕಿ. ಇದಕ್ಕೆ ಕಾರಣವೂ ಬಹಿರಂಗವಾಗಿದೆ.
04:34 PM (IST) Nov 27
banned dog breeds: 23 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತಾನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಪಿಟ್‌ಬುಲ್ ಶ್ವಾನಗಳ ದಾಳಿಗೆ ಬಲಿಯಾಗಿದ್ದಾಳೆ. ಈ ಘಟನೆಯು ಪಿಟ್‌ಬುಲ್‌ಗಳಂತಹ ಅಪಾಯಕಾರಿ ತಳಿಗಳನ್ನು ಸಾಕುವುದು ಎಷ್ಟು ಮಾರಣಾಂತಿಕ ಎಂಬುದನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತದೆ.
04:02 PM (IST) Nov 27
Wealth Creator Stocks: ನೀವು ಈ ಕಂಪನಿಗಳ ಪಟ್ಟಿಯನ್ನು ನೋಡಿದಾಗ, ಈ ಕಂಪನಿಗಳು ತುಂಬಾ ಸಾಮರ್ಥ್ಯವನ್ನು ಹೊಂದಿವೆ ಎಂದು ನೀವು ಭಾವಿಸಬಹುದು. ಬಹುಶಃ ನಿಮ್ಮ ಪೋರ್ಟ್‌ಫೋಲಿಯೊದಲ್ಲಿ ಒಂದು ಅಥವಾ ಎರಡು ಇರಬಹುದು, ಆದರೆ ನೀವು ಬಹುಶಃ ಸಾಕಷ್ಟು ಸಮಯದವರೆಗೆ ಹೂಡಿಕೆ ಮಾಡಿಲ್ಲ.
03:48 PM (IST) Nov 27
ತಮಿಳುನಾಡು-ಆಂಧ್ರ ತೀರಕ್ಕೆ ಅಪ್ಪಳಿಸುತ್ತಿದೆ ದಿತ್ವಾ ಚಂಡಮಾರುತ, ಬೆಂಗಳೂರು-ಕರ್ನಾಟಕ ಮೇಲೂ ಪರಿಣಾಮ, ಬಂಗಾಳ ಕೊಲ್ಲಿಯಲ್ಲಿ ಈ ಚಂಡಮಾರುತ ರೂಪುಗೊಂಡಿದೆ. ನವೆಂಬರ್ 30ರಂದು ತಮಿಳುನಾಡು, ಆಂಧ್ರ ಪ್ರದೇಶ ಕರಾವಳಿ ತೀರಕ್ಕೆ ಅಪ್ಪಳಿಸುತ್ತಿದೆ.
03:26 PM (IST) Nov 27
ಕೇರಳದ ತ್ರಿಶೂರ್‌ನಲ್ಲಿ 20 ವರ್ಷದ ಗರ್ಭಿಣಿ ಮಹಿಳೆ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾರೆ. ಆರು ತಿಂಗಳ ಹಿಂದಷ್ಟೇ ಅವರು ಪ್ರೇಮ ವಿವಾಹವಾಗಿದ್ದರು. ಆಕೆಯ ಸಾವಿಗೆ ಪತಿ ಶರೋನ್‌ನ ನಿರಂತರ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
03:13 PM (IST) Nov 27
ಡಾಕ್ಟರ್ ಆಯ್ತು ಈಗ ಲಾಯರ್, ಪಾಕ್ ಐಎಸ್ಐ ಪರ ಕೆಲಸ ಮಾಡುತ್ತಿದ್ದ ವಕೀಲ ರಿಜ್ವಾನ್ ಅರೆಸ್ಟ್, ಆತಂಕದ ಬೆಳವಣಿಗೆ ಎಂದರೆ ಇದು ಕೆಲವೇ ತಿಂಗಳಲ್ಲಿ ದಾಖಲಾದ ಮೂರನೇ ಪ್ರಕರಣ. ದೆಹಲಿ ಸ್ಫೋಟದಲ್ಲಿ ವೈದ್ಯರೇ ಉಗ್ರರಾಗಿದ್ದರೆ, ಇಲ್ಲಿ ವಕೀಲರನ್ನು ಬಳಸಿಕೊಳ್ಳಲಾಗಿದೆ.
03:04 PM (IST) Nov 27
ಮುಂಬೈ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸ್ಮೃತಿ ಮಂಧನಾ ಅವರ ಗೆಳತಿ ಹಾಗೂ ಭಾರತ ಮಹಿಳಾ ತಂಡದ ಆಟಗಾರ್ತಿ ಜೆಮಿಮಾ ರೋಡ್ರಿಗ್ಸ್, ಮಹಿಳಾ ಬಿಗ್‌ಬ್ಯಾಷ್ ಲೀಗ್‌ನಿಂದ ಹಿಂದೆ ಸರಿದಿದ್ದಾರೆ. ಸ್ಮೃತಿಗೆ ನೈತಿಕ ಬೆಂಬಲ ನೀಡುವ ಸಲುವಾಗಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ.
02:51 PM (IST) Nov 27
02:06 PM (IST) Nov 27
Dog owner slaps woman: ಬೇರೆಯವರ ಸಾಕುನಾಯಿಯೊಂದು ಮಹಿಳೆಯ ಮೇಲೆ ದಾಳಿ ಮಾಡಿದೆ. ಈ ವೇಳೆ, ಕ್ಷಮೆ ಕೇಳುವ ಬದಲು ನಾಯಿಯ ಮಾಲಕಿ ಸಂತ್ರಸ್ತ ಮಹಿಳೆಯ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ.
01:05 PM (IST) Nov 27
ಪುದುಚೇರಿಯಲ್ಲಿ 90 ಕೋಟಿ ರೂಪಾಯಿ ಮೌಲ್ಯದ ಬೃಹತ್ ಸೈಬರ್ ವಂಚನೆ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಈ ಪ್ರಕರಣದಲ್ಲಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳೇ ಆರೋಪಿಗಳಾಗಿದ್ದು, ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ ಎಂಬ ಡಿಟೇಲ್ ಇಲ್ಲಿದೆ.
01:02 PM (IST) Nov 27
ಟೀಮ್ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧನಾ ಹಾಗೂ ಪಲಾಶ್ ಮುಚ್ಚಾಲ್ ಮದುವೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಸ್ಮೃತಿ ತಂದೆಯ ಅನಾರೋಗ್ಯದ ಕಾರಣ ಎನ್ನಲಾಗಿತ್ತಾದರೂ, ಮದುವೆಯ ಹಿಂದಿನ ದಿನ ಪಲಾಶ್ ತನ್ನ ಮಾಜಿ ಗೆಳತಿಯೊಂದಿಗೆ ಸಿಕ್ಕಿಬಿದ್ದಿದ್ದೇ ಕಾರಣ ಎಂಬ ಹೊಸ ವದಂತಿಗಳು ಹರಿದಾಡುತ್ತಿವೆ.
12:07 PM (IST) Nov 27
ಗೋವಾದ ಶ್ರೀ ಸಂಸ್ಥಾನ ಗೋಕರ್ಣ ಪಾರ್ಥಗಲಿ ಜೀವೋತ್ತಮ ಮಠದ 550ನೇ ಸಂಸ್ಥಾಪನಾ ವಾರ್ಷಿಕೋತ್ಸವದ ಅಂಗವಾಗಿ, ವಿಶ್ವದ ಅತ್ಯಂತ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆಯು ಅನಾವರಣಗೊಳ್ಳಲಿದೆ. ಗೋವಾ ಮತ್ತು ಶ್ರೀರಾಮಚಂದ್ರನ ನಡುವಿನ ಅವಿನಾಭಾವ ಸಂಬಂಧ ಹೊಂದಿದೆ.
12:04 PM (IST) Nov 27
ಹಾಟ್‌ಮೇಲ್ ಸಹ-ಸಂಸ್ಥಾಪಕ ಸಬೀರ್ ಭಾಟಿಯಾ ಅವರು ಭಾರತದ ಆರ್ಥಿಕ ಪ್ರಗತಿಯನ್ನು ಪ್ರಶ್ನಿಸಿದ್ದಾರೆ. ದೇಶವು ಜಿಡಿಪಿಯಲ್ಲಿ ಬೆಳೆಯುತ್ತಿದ್ದರೂ, ನಾಗರಿಕರಿಗೆ ಶುದ್ಧ ಗಾಳಿ, ನೀರು ಮತ್ತು ಗೌರವಯುತ ಜೀವನದಂತಹ ಮೂಲಭೂತ ಸೌಕರ್ಯಗಳೇ ಇಲ್ಲದಿದ್ದರೆ ಆ ಬೆಳವಣಿಗೆಗೆ ಅರ್ಥವಿಲ್ಲ ಎಂದು ಅವರು ವಾದಿಸಿದ್ದಾರೆ.
11:11 AM (IST) Nov 27
ಪಶ್ಚಿಮ ಬಂಗಾಳದ ಪ್ರಸ್ತುತ ಮತದಾರರ ಪಟ್ಟಿಯಲ್ಲಿರುವ ಸುಮಾರು 26 ಲಕ್ಷ ಹೆಸರುಗಳು 2002ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಚುನಾವಣಾ ಆಯೋಗ ವರದಿ ಮಾಡಿದೆ. SIR ಪ್ರಕ್ರಿಯೆಯಡಿ ನಡೆಯುತ್ತಿರುವ ಡಿಜಿಟಲೀಕರಣ ಮತ್ತು ಮ್ಯಾಪಿಂಗ್ ಕಾರ್ಯದಲ್ಲಿ ಈ ವ್ಯತ್ಯಾಸ ಕಂಡುಬಂದಿದೆ.
10:00 AM (IST) Nov 27
ನವದೆಹಲಿ: ಬಹುನಿರೀಕ್ಷಿತ ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ನಡೆಯಲಿದ್ದು, ಸಾಕಷ್ಟು ಕುತೂಹಲ ಗರಿಗೆದರಿದೆ. ಈ ಬಾರಿ ಹರಾಜಿನಲ್ಲಿ ಎಷ್ಟು ಆಟಗಾರ್ತಿಯರು ಪಾಲ್ಗೊಂಡಿದ್ದಾರೆ? ಹರಾಜು ಆರಂಭ ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್
09:17 AM (IST) Nov 27
ಕೆಎಸ್‌ಸಿಎ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರವನ್ನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಕೆ.ಎನ್. ಶಾಂತಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸದಂತೆ ಚುನಾವಣಾಧಿಕಾರಿಗೆ ಸೂಚನೆ ನೀಡಿದ್ದಾರೆ.
08:50 AM (IST) Nov 27
ಸ್ಮೃತಿ ಮಂಧನಾ ಮತ್ತು ಪಲಾಶ್ ಮುಚ್ಚಲ್ ಮದುವೆ ಮುಂದೂಡಲ್ಪಟ್ಟ ಸಮಯದಲ್ಲಿ ವೈರಲ್ ಆದ ಚಾಟ್‌ಗಳ ಬಗ್ಗೆ ಮೇರಿ ಡಿಕೋಸ್ಟಾ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ಮೇರಿ ಡಿಕೋಸ್ಟಾ ಏನಂದ್ರು? ವೈರಲ್ ಚಾಟ್ ಸತ್ಯಾಸತ್ಯತೆ ಏನು ನೋಡೋಣ ಬನ್ನಿ
07:42 AM (IST) Nov 27
ಟೀಂ ಇಂಡಿಯಾದ ಮಾಜಿ ಸ್ಟಾರ್ ಆಟಗಾರ ಚೇತೇಶ್ವರ್ ಪೂಜಾರ ಅವರ ಭಾವಮೈದುನ ಜೀತ್ ಪಬಾರಿ ರಾಜ್‌ಕೋಟ್‌ನಲ್ಲಿ ಸಾವಿಗೆ ಶರಣಾಗಿದ್ದಾರೆ. ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.