ಡಾಕ್ಟರ್ ಆಯ್ತು ಈಗ ಲಾಯರ್, ಪಾಕ್ ಐಎಸ್ಐ ಪರ ಕೆಲಸ ಮಾಡುತ್ತಿದ್ದ ವಕೀಲ ರಿಜ್ವಾನ್ ಅರೆಸ್ಟ್, ಆತಂಕದ ಬೆಳವಣಿಗೆ ಎಂದರೆ ಇದು ಕೆಲವೇ ತಿಂಗಳಲ್ಲಿ ದಾಖಲಾದ ಮೂರನೇ ಪ್ರಕರಣ. ದೆಹಲಿ ಸ್ಫೋಟದಲ್ಲಿ ವೈದ್ಯರೇ ಉಗ್ರರಾಗಿದ್ದರೆ, ಇಲ್ಲಿ ವಕೀಲರನ್ನು ಬಳಸಿಕೊಳ್ಳಲಾಗಿದೆ.

ನವದೆಹಲಿ (ನ.27) ಭಾರತದೊಳಗೆ ರಹಸ್ಯವಾಗಿ ಪಾಕಿಸ್ತಾನ ಉಗ್ರ ಸಂಘಟನೆಗಳು ಕಾರ್ಯನಿರ್ವಹಿಸುತ್ತಿದೆ. ದೆಹಲಿ ಕಾರು ಸ್ಫೋಟ ಪ್ರಕರಣದಲ್ಲಿ ಮೆಡಿಕಲ್ ಕಾಲೇಜಿನ ವೈದ್ಯರೇ ಉಗ್ರರಾಗಿದ್ದರು ಅನ್ನೋದು ಬಯಲಾಗಿದೆ. ವೈದ್ಯರ ಸೋಗಿನಲ್ಲಿ ಯಾರಿರಗೂ ಅನುಮಾನ ಬರದ ರೀತಿ ಕಾರ್ಯಾಚರಣೆ ನಡೆಸಲಾಗಿತ್ತು. ಇದೀಗ ಉಗ್ರ ಚಟುವಟಿಕೆಗೆ ವಕೀರಲನೊಬ್ಬನನ್ನು ಬಳಿಸಿಕೊಂಡ ಘಟನೆ ಬಯಲಾಗಿದೆ. ಪಾಕಿಸ್ತಾನದ ಐಎಸ್ಐಗೆ ರಹಸ್ಯವಾಗಿ ಮಾಹಿತಿ ನೀಡುತ್ತಾ, ಪಾಕಿಸ್ತಾನದ ಪರ ಕೆಲಸ ಮಾಡುತ್ತಿದ್ದ ಗುರುಗಾಂವ್ ಮೂಲದ ವಕೀಲ ರಿಜ್ವಾನ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದೇ ಪ್ರಕರಣದಲ್ಲಿ ಲಾಯರ್ ರಿಜ್ವಾನ್ ಜೊತೆ ಮತ್ತೊಬ್ಬ ಅಜಯ್ ಅರೋರಾನನ್ನೂ ಬಂಧಿಸಲಾಗಿದೆ.

ಬಂಧಿತರಿಂದ 40 ಲಕ್ಷ ರೂಪಾಯಿ ವಶ

ರಿಜ್ವಾನ್ ಗುರುಗಾಂವ್‌ನಲ್ಲಿ ಲಾಯರ್ ಪ್ರಾಕ್ಟೀಸ್ ಮಾಡುತ್ತಿದ್ದ. ಆದರೆ ಈತನ ಮುಖ್ಯ ಕಸುಬು ಬೇರೆ ಆಗಿತ್ತು. ಪಾಕಿಸ್ತಾನ ಕೆಲವರ ಜೊತೆ ನಿಕಟ ಸಂಪರ್ಕದಲ್ಲಿದ್ದ. ಜೊತೆಗೆ ಹಲವು ವೇದಿಕೆಗಳ ಮೂಲಕ ಪಾಕಿಸ್ತಾನದ ವ್ಯಕ್ತಿಗಳನ್ನು ಸಂಪರ್ಕಿಸುತ್ತಿದ್ದ. ಇದೇ ವೇಳೆ ಪಾಕಿಸ್ತಾನದ ಐಎಸ್ಐ ಜೊತೆ ಹಣದ ವ್ಯವಹಾರ ಮಾಡುತ್ತಿದ್ದ ಅನ್ನೋ ಗಂಭೀರ ಆರೋಪಗಳು ಕೇಳಿಬಂದಿತ್ತು. ಈ ಕುರಿತು ತೌರು ಸದಾರ್ ಪೊಲೀಸ್ ಠಾಣೆಯೆಯಲ್ಲಿ ರಿಜ್ವಾನ್ ವಿರುದ್ದ ದೂರು ದಾಖಲಾಗಿತ್ತು. ತನಿಖಾ ಸಂಸ್ಥೆಗಳು ಈ ಲಾಯರ್ ರಿಜ್ವಾನ್ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಈತನ ಹಣದ ವ್ಯವಹಾರ, ಸಂಪರ್ಕ, ಮಾತುಕತೆಗಳ ಮೇಲೆ ಅನುಮಾನ ಹುಟ್ಟಿತ್ತು. ಹೀಗಾಗಿ ದಾಳಿ ನಡೆಸಿ ರಿಜ್ವಾನ್ ಹಾಗೂ ಅಜಯ್ ಅರೋರಾನನ್ನು ಬಂಧಿಸಲಾಗಿದೆ. ಈ ವೇಳೆ ಇವರಿಂದ 40 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

8 ದಿನಗಳ ಕಾಲ ಆರೋಪಿಗಳು ಪೊಲೀಸ್ ಕಸ್ಟಡಿಗೆ

ರಿಜ್ವಾನ್ ಹಾಗೂ ಅಜಯ್ ಅರೋರಾ ಇಬ್ಬರನ್ನು ಪೊಲೀಸರು ಪಾಕಿಸ್ತಾನದ ಪರ ಗೂಢಚರ್ಯೆ ಕೆಲಸ ಮಾಡುತ್ತಿದ್ದ ಆರೋಪದಡಿ ಬಂಧಿಸಿದೆ. ಇದಕ್ಕೆ ಸಂಬಂಧ ಪಟ್ಟ ಪ್ರಾಥಮಿ ತನಿಖೆಗಳ ದಾಖಲೆಗಳನ್ನು ಪೊಲೀಸರು ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದಾರೆ. ಬಳಿಕ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಕೇಳಿದ್ದಾರೆ. ಕೋರ್ಟ್ 8 ದಿನಗಳ ಕಾಲ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿದೆ. ಡಿಸೆಂಬರ್ 4ರಂದು ಆರೋಪಿಗಳನ್ನು ಪೊಲೀಸರು ಮತ್ತೆ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.

ಆರೋಪ ನಿರಾಕರಿಸಿದ ಕುಟುಂಬ

ರಿಜ್ವಾನ್ ಕುಟುಂಬ ಆರೋಪ ನಿರಾಕರಿಸಿದೆ. ಪಾಕಿಸ್ತಾನದಲ್ಲಿ ತಮ್ಮ ಸಂಬಂಧಿಕರಿದ್ದಾರೆ. ಅವರ ಜೊತೆ ರಿಜ್ವಾನ್ ಸಂಪರ್ಕದಲ್ಲಿದ್ದಾನೆ.ಬೇರೆ ಯಾರ ವ್ಯಕ್ತಿಗಳ ಜೊತೆ ರಿಜ್ವಾನ್ ಸಂಪರ್ಕದಲ್ಲಿಲ್ಲ. ಇದು ಸುಳ್ಳು ಆರೋಪ ಎಂದು ರಿಜ್ವಾನ್ ಕುಟುಂಬಸ್ಥರು ಹೇಳಿದ್ದಾರೆ.

ಭಾರದಲ್ಲಿ ಇದೀಗ ಪಾಕಿಸ್ತಾನದ ಪರ ಕೆಲಸ ಮಾಡುತ್ತಾ, ಗೂಢಚರ್ಯೆ ಮಾಡುತ್ತಿರುವ ಸ್ಲೀಪರ್ ಸೆಲ್‌ಗಳ ಪತ್ತೆ ಹಚ್ಚಲು ರಹಸ್ಯ ತಂಡವೊಂದು ಕಾರ್ಯನಿರ್ವಹಿಸುತ್ತಿದೆ. ಇದೇ ವರ್ಷ ಪಾಕಿಸ್ತಾನದ ಪರ ಗೂಢಚರ್ಯೆ ಮಾಡುತ್ತಿರುವ ಮೂರನೇ ಪ್ರಕರಣ ಇದಾಗಿದೆ. ಮೇ ತಿಂಗಳಲ್ಲಿ ಮೀವತ್‌ನ ತೌರು ಸಫರ್ ವ್ಯಾಪ್ತಿಯ ಮೊಹಮ್ಮದ್ ತಾರಿಫ್‌ನ ಪೊಲೀಸರು ಬಂಧಿಸಿದ್ದರು. ಪಾಕಿಸ್ತಾನಕ್ಕೆ ಭಾರತದ ಮಿಲಿಟರಿ ಮಾಹಿತಿ ಸೋರಿಕೆ, ಭಾರತದ ಸಿಮ್ ಕಾರ್ಡ್‌ಗಳ ಪೂರೈಕೆ ಸೇರಿದಂತೆ ಹಲವು ಆರೋಪಗಳು ಈತನ ಮೇಲಿದೆ. ಇದಕ್ಕೂ ಮೊದಲು ಪೊಲೀಸರು ಅರ್ಮಾನ್ ಅನ್ನೋ ಯುವಕನನ್ನು ಪಾಕಿಸ್ತಾನದ ಪರ ಕೆಲಸ ಮಾಡುತ್ತಿರುವ ಆರೋಪದಡಿ ಬಂಧಿಸಿದೆ.