Published : May 23, 2026, 04:25 AM ISTUpdated : May 23, 2026, 09:41 PM IST

India Latest News Live: ನಟಿಯಷ್ಟೇ ಅಲ್ಲ, ಆ ಕೆಲಸವೂ ಗೊತ್ತು.. ಗುಟ್ಟಾಗಿ ಕೈಚಳಕ ಮಾಡಿ ಈಗ ಸಖತ್ ಸುದ್ದಿಯಾದ ರಶ್ಮಿಕಾ ಮಂದಣ್ಣ!

ಸಾರಾಂಶ

ನವದೆಹಲಿ: ಯುಎಪಿಎ ಕಾಯ್ದೆಯಡಿ ಬಂಧಿತನಾಗಿರುವ ದೆಹಲಿ ಗಲಭೆ ಆರೋಪಿ ಉಮರ್‌ ಖಾಲೀದ್‌ಗೆ ದೆಹಲಿ ಹೈಕೋರ್ಟ್‌ 3 ದಿನಗಳ ಜಾಮೀನನ್ನು ಶುಕ್ರವಾರ ಮಂಜೂರು ಮಾಡಿದೆ. ತಾಯಿಗೆ ಶಸ್ತ್ರಚಿಕಿತ್ಸೆ ನಡೆಯಬೇಕಿರುವುದರಿಂದ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದ. ಇದನ್ನು ಮನ್ನಿಸಿದ ಹೈಕೋರ್ಟ್‌ ಜೂ.1ರಿಂದ 3ರವರೆಗೆ ಜಾಮೀನು ನೀಡಿದೆ.

ಇದೇ ವೇಳೆ, ಸುಪ್ರೀಂ ಕೋರ್ಟ್‌ನ ದ್ವಿಪಕ್ಷೀಯ ಪೀಠ ಉಮರ್‌ ಸೇರಿದಂತೆ ಇತರ ಆರೋಪಿಗಳ ಕಾಯಂ ಜಾಮೀನು ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. ಆದರೆ ಅಬ್ದುಲ್‌ ಖಾಲೀದ್‌ ಸೈಫಿ ಹಾಗೂ ತಸ್ಲೀಂ ಅಹ್ಮದ್‌ ಎಂಬ ಇಬ್ಬರು ಆರೋಪಿಗಳಿಗೆ 6 ತಿಂಗಳ ಮಧ್ಯಂತರ ಜಾಮೀನು ನೀಡಿದೆ.

09:41 PM (IST) May 23

ನಟಿಯಷ್ಟೇ ಅಲ್ಲ, ಆ ಕೆಲಸವೂ ಗೊತ್ತು.. ಗುಟ್ಟಾಗಿ ಕೈಚಳಕ ಮಾಡಿ ಈಗ ಸಖತ್ ಸುದ್ದಿಯಾದ ರಶ್ಮಿಕಾ ಮಂದಣ್ಣ!

ಉದಯಪುರದ ಅರಮನೆಯಲ್ಲಿ ನಡೆದ ಈ ಮದುವೆಯಲ್ಲಿ ದಕ್ಷಿಣ ಭಾರತದ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ರಶ್ಮಿಕಾ ಧರಿಸಿದ್ದ ಕೆಂಪು ಬಣ್ಣದ ಸೀರೆ ಮತ್ತು ವಿಜಯ್ ಅವರ ರಾಯಲ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತ್ತು. ಇದೀಗ ಈ ಸೀಕ್ರೆಟ್ ಹೊರಬರುತ್ತಿದ್ದಂತೆ ಫ್ಯಾನ್ಸ್ ಶಾಕ್ ಆಗಿದ್ದಾರೆ!

Read Full Story

08:53 PM (IST) May 23

ಬಕ್ರೀದ್ ರಜೆ ಸೀಮಿತಗೊಳಿಸಿದ ಬಂಗಾಳ ಸಿಎಂ ಸುವೇಂದು ಅಧಿಕಾರಿ, ಹಬ್ಬದ ಬೆನ್ನಲ್ಲೇ ಕೋಲಾಹಲ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರ ಹಿಡಿದ ಬಳಿಕ ಐತಿಹಾಸಿಕ ನಿರ್ಧಾರಗಳನ್ನು ತೆಗೆಗುಕೊಳ್ಳಲಾಗಿದೆ. ಇದೀಗ ಬಕ್ರೀದ್ ಹಬ್ಬ ಸಮೀಪಿಸುತ್ತಿದ್ದಂತೆ ಹಬ್ಬದ ರಜೆಯನ್ನು ಕಡಿತಗೊಳಿಸಲಾಗಿದೆ. ಇದು ಕೋಲಾಹಲಕ್ಕೆ ಕಾರಣವಾಗಿದೆ.

Read Full Story

08:34 PM (IST) May 23

ಶಾರುಖ್ ಜೊತೆ 'ಡರ್' ಚಿತ್ರಕ್ಕೆ ಐಶ್ವರ್ಯಾ ರೈ ಆಯ್ಕೆ ಆಗಿದ್ರು; ಆಮೇಲೆ ಜೂಹಿ ಚಾವ್ಲಾ ಬಂದಿರೋ ಸೀಕ್ರೆಟ್ ಸ್ಟೋರಿ ಇದು!

'ಡರ್' ಸಿನಿಮಾ ಬಾಲಿವುಡ್‌ನ ಸಾರ್ವಕಾಲಿಕ ಶ್ರೇಷ್ಠ ಥ್ರಿಲ್ಲರ್ ಸಿನಿಮಾಗಳಲ್ಲಿ ಒಂದಾಗಿ ಹೊರಹೊಮ್ಮಿತು. ಶಾರುಖ್ ಖಾನ್ ಅವರ ನೆಗೆಟಿವ್ ಶೇಡ್ ನಟನೆ ಮತ್ತು ಜೂಹಿ ಚಾವ್ಲಾ ಅವರ 'ಕಿರಣ್' ಪಾತ್ರ ಇಂದಿಗೂ ಫೇಮಸ್. ಆದ್ರೆ ಐಶ್ವರ್ಯಾ ರೈ ಮಿಸ್ ಆದ್ರು!

Read Full Story

08:20 PM (IST) May 23

'ರಾಮಾಯಣ' ಚಿತ್ರಕ್ಕೆ ಹೊಸ ಟ್ವಿಸ್ಟ್ - ದೀಪಾವಳಿಗೂ ಮುನ್ನವೇ ಲಂಕಾಧಿಪತಿ ರಾವಣ ಯಶ್ ದರ್ಶನ?

ರಣಬೀರ್ ಕಪೂರ್, ಯಶ್ ಅವರ ಬಹುನಿರೀಕ್ಷಿತ ಸಿನಿಮಾ 'ರಾಮಾಯಣ'ದ ಟೀಸರ್ ನೋಡಿದ ಮೇಲೆ ಫ್ಯಾನ್ಸ್ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. 4000 ಕೋಟಿ ಬಜೆಟ್‌ನ ಈ ಚಿತ್ರದ ಬಗ್ಗೆ ಒಂದು ಹೊಸ ಅಪ್‌ಡೇಟ್ ಬಂದಿದ್ದು, ಅಭಿಮಾನಿಗಳಿಗೆ ಖುಷಿ ತಂದಿದೆ.

Read Full Story

08:06 PM (IST) May 23

ಕಾಂಗೋ ಬೆನ್ನಲ್ಲೇ ಉಗಾಂಡದಲ್ಲಿ 3 ಎಬೋಲಾ ಕೇಸ್, ರಾಜ್ಯಗಳಿಗೆ ಅಲರ್ಟ್ ನೀಡಿದ ಕೇಂದ್ರ ಸರ್ಕಾರ

ಕಾಂಗೋದಲ್ಲಿ ಎಬೋಲಾ ವೈರಸ್ ಸ್ಫೋಟಗೊಂಡ ಬೆನ್ನಲ್ಲೇ ಇದೀಗ ಉಗಾಂಡದಲ್ಲಿ 3 ಎಬೋಲಾ ಪ್ರಕರಣ ಖಚಿತಗೊಂಡಿದೆ. ವೈರಸ್ ಎಲ್ಲೆಡೆ ಹರಡುತ್ತಿದೆ. ಆತಂಕ ಹೆಚ್ಚಾಗುತ್ತಿದ್ದಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಲರ್ಟ್ ನೀಡಿದೆ.

 

Read Full Story

07:11 PM (IST) May 23

ಮೇ.25ರಿಂದ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಜಾರಿಗೊಳಿಸಿದ ಸೆಬಿ, ಇಂಧನ ಮಿತ ಬಳಕೆಗೆ ಒತ್ತು

ಸೆಬಿ ಉದ್ಯೋಗಿಗಳಿಗೆ ಬಂಪರ್ ಕೊಡುಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಮನವಿ ಬೆನ್ನಲ್ಲೇ ಇದೀಗ ಮೇ.25 ರಿಂದ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ( ವರ್ಕ್ ಫ್ರಮ್ ಹೋಮ್‌)ಕ್ಕೆ ಅನುಮತಿಸಿದೆ. ಇದರ ಜೊತೆ ಹಲವು ಕ್ರಮ ಕೈಗೊಂಡಿದೆ.

Read Full Story

06:33 PM (IST) May 23

ಪೆಟ್ರೋಲ್ ಬೆಲೆ ಏರಿಕೆಯಾದರೂ ಚಿಂತೆ ಇಲ್ಲ, ಜೂ.5ಕ್ಕೆ ಮಾರುತಿ ಸುಜುಕಿ ಫ್ಲೆಕ್ಸ್ ಫ್ಯೂಯೆಲ್ ಕಾರು ಲಾಂಚ್

ಪೆಟ್ರೋಲ್ ಡೀಸೆಲ್ ಬೆಲೆ ದಿನಂದ ದಿನಕ್ಕೆ ಏರಿಕೆಯಾಗುತ್ತಿದೆ. ವಾಹನ ನಿರ್ವಹಣೆ ದುಬಾರಿಯಾಗುತ್ತಿದೆ. ಇದರ ಬೆನ್ನಲ್ಲೇ ಮಾರುತಿ ಸುಜುಕಿ ಕೈಗೆಟುಕುವ ದರದಲ್ಲಿ ಫ್ಲೆಕ್ಸ್ ಫ್ಯೂಯೆಲ್ ಕಾರು ಲಾಂಚ್ ಮಾಡುತ್ತಿದೆ. ಈ ಕುರಿತು ನಿತಿನ್ ಗಡ್ಕರಿ ಮಹತ್ವದ ಘೋಷಣೆ ಮಾಡಿದ್ದಾರೆ.

Read Full Story

06:22 PM (IST) May 23

3 ಲಕ್ಷಕ್ಕೆ ಮಾರಾಟವಾಯ್ತು 'ಡೊನಾಲ್ಡ್​ ಟ್ರಂಪ್​ ಎಮ್ಮೆ' - ಬಕ್ರೀದ್​ ಹಬ್ಬಕ್ಕೆ ಬಲಿ- ಏನಿದರ ವಿಶೇಷತೆ

ಬಾಂಗ್ಲಾದೇಶದಲ್ಲಿ 'ಡೊನಾಲ್ಡ್ ಟ್ರಂಪ್' ಎಂದು ಅಡ್ಡಹೆಸರಿಟ್ಟ ಅಪರೂಪದ ಆಲ್ಬಿನೋ ಎಮ್ಮೆ, ಅದರ ವಿಶಿಷ್ಟ ನೋಟದಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಕ್ರೀದ್ ಹಬ್ಬದ ಬಲಿಗಾಗಿ ಸಾಕಲಾಗಿದ್ದ ಈ ಗುಲಾಬಿ ಬಣ್ಣದ ಎಮ್ಮೆಯನ್ನು ಅಂತಿಮವಾಗಿ ಸುಮಾರು 3 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ.
Read Full Story

06:21 PM (IST) May 23

ದೀಪಿಕಾ ಪಡುಕೋಣೆ ಹೀರೋ ಆಗಲು ಪ್ರಯತ್ನಿಸಲಿಲ್ಲ - ಆ ನಟಿ ಹೇಳಿದ ಮಾತು ಈಗ ವೈರಲ್!

ನಟಿ ದೀಪಿಕಾ ಪಡುಕೋಣೆ ಯುವ ನಟರಿಗೆ ದೊಡ್ಡ ಸ್ಫೂರ್ತಿ ಎಂದು ಪಲಕ್ ತಿವಾರಿ ಹೇಳಿದ್ದಾರೆ. ದೀಪಿಕಾ ಅವರ ಸ್ಕ್ರೀನ್ ಪ್ರೆಸೆನ್ಸ್, ಸಿನಿಮಾದಲ್ಲಿ ಅವರು ಸಾಗಿ ಬಂದ ದಾರಿ ಹಾಗೂ ಮಹಿಳಾ ಪಾತ್ರಗಳನ್ನು ಅವರು ತೆರೆ ಮೇಲೆ ತರುವ ರೀತಿ ಬಗ್ಗೆ ಪಲಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read Full Story

06:06 PM (IST) May 23

ಪ್ರಧಾನಿಗೆ ಝಲ್ಮುರಿ ಕೊಟ್ಟವನಿಗೆ ಪಾಕ್​, ಬಾಂಗ್ಲಾದಿಂದ ಜೀವ ಬೆದರಿಕೆ - ಬಾಂಬ್​ ಸ್ಫೋಟಿಸುವ ಭಯ

ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿಗೆ ಝಲ್ಮುರಿ ನೀಡಿದ್ದ ಅಂಗಡಿ ಮಾಲೀಕ ವಿಕ್ರಮ್ ಸಾಹುಗೆ ಈಗ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಕೊಲೆ ಬೆದರಿಕೆಗಳು ಬರುತ್ತಿವೆ. ಶಸ್ತ್ರಾಸ್ತ್ರಗಳನ್ನು ತೋರಿಸಿ, ಬಾಂಬ್ ಸ್ಫೋಟಿಸುವುದಾಗಿ ಬೆದರಿಸುತ್ತಿದ್ದು, ಈ ಘಟನೆಯಿಂದ ಭಯಭೀತರಾದ ವಿಕ್ರಮ್ ಮತ್ತು ಅವರ ಕುಟುಂಬಕ್ಕೆ ಪೊಲೀಸ್ ರಕ್ಷಣೆ ಒದಗಿಸಲಾಗಿದೆ.
Read Full Story

05:55 PM (IST) May 23

ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮಾಡೆಲ್ ಮೇಲೆ ಕತ್ತರಿ ದಾಳಿ, ಎಲ್ಲೆಡೆ ಆತಂಕ - ವಿಡಿಯೋ ವೈರಲ್

ಕೇನ್ಸ್ ಫಿಲ್ಮ್ ಫೆಸ್ಟಿವಲ್ ಈ ಬಾರಿ ಸಿನಿಮಾ ಮತ್ತು ಸೆಲೆಬ್ರಿಟಿಗಳ ರೆಡ್ ಕಾರ್ಪೆಟ್ ಲುಕ್‌ಗಿಂತ ಹೆಚ್ಚಾಗಿ ಒಂದು ಆಘಾತಕಾರಿ ಘಟನೆಯಿಂದ ಸುದ್ದಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

Read Full Story

05:31 PM (IST) May 23

ಅಂಗಡಿಗೆ ತೆರಳಿದ 10 ಬಾಲಕಿಯನ್ನು ಕಿಡ್ನಾಪ್ ಮಾಡಿ ಕೊಲೆ, ಕೆರಳಿದ ಸಿಎಂ ವಿಜಯ್ ಖಡಕ್ ಸೂಚನೆ

ತಾಯಿ ಸೂಚನೆ ಬೆನ್ನಲ್ಲೇ ವಸ್ತುಗಳ ಖರೀದಿಗೆ ಅಂಗಡಿ ತೆರಳಿದ 10 ವರ್ಷದ ಬಾಲಕಿಯನ್ನು ಅಪಹರಿಸಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ. ಈ ಘಟನೆಯಿಂದ ತಮಿಳುನಾಡು ನೂತನ ಸಿಎಂ ವಿಜಯ್ ಕೆರಳಿದ್ದಾರೆ. ಘಟನೆ ಖಂಡಿಸಿ ಖಡಕ್ ಸೂಚನೆ ನೀಡಿದ್ದಾರೆ.

Read Full Story

05:14 PM (IST) May 23

ಕಾಕ್ರೋಚ್​ ಜನತಾ ಪಕ್ಷ - ಬೆಂಗಳೂರಿಗೆ ನೋ ಎಂಟ್ರಿ- ಗುಪ್ತಚರ ಇಲಾಖೆ ಶಾಕಿಂಗ್​ ವರದಿಯಲ್ಲಿ ಏನಿದೆ

ನಿರುದ್ಯೋಗದ ವಿಷಯದ ಮೇಲೆ ಸ್ಥಾಪನೆಯಾದ ಕಾಕ್ರೋಚ್ ಜನತಾ ಪಕ್ಷವು ಯುವಜನರಲ್ಲಿ ಭಾರೀ ಸದ್ದು ಮಾಡುತ್ತಿದೆ. ಆದರೆ, ಇದರ ಹಿಂದೆ ಇರುವ ಉದ್ದೇಶದ ಬಗ್ಗೆ  ಗುಪ್ತಚರ ಇಲಾಖೆ ಭಾರಿ ಎಚ್ಚರಿಕೆ ನೀಡಿದೆ. ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲಾಗಿದೆ, ಬೆಂಗಳೂರಿನ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ.

Read Full Story

04:55 PM (IST) May 23

ಕಾಕ್ರೋಚ್ ಜನತಾ ಪಾರ್ಟಿ ಖಾತೆ ಹ್ಯಾಕ್ 'ಶುದ್ಧ ದಡ್ಡತನ' - ನಟ ಹೇಳಿದ ಸ್ಟ್ರೈಸ್ಯಾಂಡ್ ಎಫೆಕ್ಟ್ ಅರ್ಥವೇನು?

'ಕಾಕ್ರೋಚ್ ಜನತಾ ಪಾರ್ಟಿ' ಚಳವಳಿಯ X (ಹಿಂದಿನ ಟ್ವಿಟರ್) ಮತ್ತು ಇನ್‌ಸ್ಟಾಗ್ರಾಂ ಖಾತೆಗಳಿಗೆ ಸಮಸ್ಯೆಯಾದ ಬೆನ್ನಲ್ಲೇ, ನಟ ವೀರ್ ದಾಸ್ ಇದೊಂದು 'ಶುದ್ಧ ದಡ್ಡತನದ ನಡೆ' ಎಂದು ಪ್ರತಿಕ್ರಿಯಿಸಿದ್ದಾರೆ.

Read Full Story

04:34 PM (IST) May 23

ತಂಗಿ ಓಡಿಹೋದಳು, ಬೈಗುಳ ತಿಂದಿದ್ದು ನಾನು - ವೈರಲ್‌ ಆಯ್ತು ನಟಿಯ ಭಾವುಕ ಮಾತು

ಸೀರಿಯಲ್‌ಗಳ ಮೂಲಕ ಮನೆಮಾತಾದ ನಟಿ ಮೃದುಲಾ ವಿಜಯ್. ಇವರ ತಂಗಿ ಪಾರ್ವತಿ ಕೂಡಾ ಪ್ರೇಕ್ಷಕರಿಗೆ ಚಿರಪರಿಚಿತರು. ಪಾರ್ವತಿ ಓಡಿಹೋಗಿ ಮದುವೆಯಾಗಿದ್ದು ಸೀರಿಯಲ್ ಲೋಕದಲ್ಲಿ ದೊಡ್ಡ ಸುದ್ದಿಯಾಗಿತ್ತು.

Read Full Story

04:31 PM (IST) May 23

ಬಿಆರ್‌ಎಸ್ ನಾಯಕನ ಮೃತದೇಹ ಗೋಣಿಚೀಲದಲ್ಲಿ ಪತ್ತೆ, ವ್ಯವಸ್ಥಿತ ಕೊಲೆಗೆ ಬೆಚ್ಚಿಬಿದ್ದ ಜನ

ಬಿಆರ್‌ಎಸ್ ನಾಯಕನ ಮೃತದೇಹ ಗೋಣಿಚೀಲದಲ್ಲಿ ಪತ್ತೆಯಾಗಿದೆ. 42ರ ಹರೆಯದ ಯುವ ನಾಯಕನ ಮನೆಗೆ ನುಗ್ಗಿ ವ್ಯವಸ್ಥಿತವಾಗಿ ಕೊಲೆ ಮಾಡಿ ರಸ್ತೆ ಬದಿಯಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.

Read Full Story

04:19 PM (IST) May 23

ಮಾಡೆಲ್​ ತ್ವಿಷಾ ಶರ್ಮಾ ಸಾವಿಗೂ ಮುನ್ನ ಕೊನೆಯ ವಿಡಿಯೋ ವೈರಲ್​ - ಕೊ*ಲೆಯೋ, ಆ*ತ್ಮಹತ್ಯೆಯೊ

ನೋಯ್ಡಾ ಮಾಡೆಲ್ ತ್ವಿಷಾ ಶರ್ಮಾ ಅವರ ನಿಗೂಢ ಸಾವು ಹಲವು ತಿರುವುಗಳನ್ನು ಪಡೆದಿದೆ. ವರದಕ್ಷಿಣೆಗಾಗಿ ಪತಿ ಮತ್ತು ಮಾಜಿ ಜಡ್ಜ್ ಅತ್ತೆಯೇ ಕೊಲೆ ಮಾಡಿದ್ದಾರೆಂದು ಕುಟುಂಬ ಆರೋಪಿಸಿದ್ದು, ಪತಿಯನ್ನು ಬಂಧಿಸಲಾಗಿದೆ. ಸಾವಿಗೂ ಮುನ್ನ ಸ್ಪಾಗೆ ಹೋಗಿದ್ದ ತ್ವಿಷಾಳ ವಿಡಿಯೋ ಆತ್ಮಹತ್ಯೆಯ ವಾದ ಅಲ್ಲಗಳೆಯುತ್ತಿದೆ.

Read Full Story

04:15 PM (IST) May 23

ಡಿಸೈನರ್‌ಗಳ ಮಾತು ಕೇಳದ ರಶ್ಮಿಕಾ ಮಂದಣ್ಣ - ಬಯಲಾಯ್ತು ಮಂಗಳಸೂತ್ರದ ರಹಸ್ಯ!

ರಶ್ಮಿಕಾ ಮಂದಣ್ಣ ಸಂಪರ್ಕಿಸಿದ ಡಿಸೈನರ್‌ಗಳೆಲ್ಲ ಸದ್ಯ ಚಾಲ್ತಿಯಲ್ಲಿರುವ ಐವರಿ ಬಣ್ಣ ಅಥವಾ ಕೆಂಪು ಬಣ್ಣದ ಉಡುಗೆ ಧರಿಸಲು ಸೂಚಿಸಿದ್ದರು. ಆದರೆ ಕೊಡಗಿನ ಬೆಡಗಿ ರಶ್ಮಿಕಾಗೆ ಕಿತ್ತಳೆ ಬಣ್ಣದ ಸೀರೆ ಉಡುವ ಆಸೆ ಇತ್ತು.

Read Full Story

04:13 PM (IST) May 23

Big Deal - ಭಾರತದ ಸಿನಿಮಾ ಇತಿಹಾಸದಲ್ಲೇ ಬಿಗ್ ಡೀಲ್‌.. 'ಇಷ್ಟೊಂದು ಕೋಟಿ' ಹಣಕ್ಕೆ ರಾಮಾಯಣ ರೈಟ್ಸ್‌ ಸೇಲ್‌?

ರಾಮಾಯಣ’ ಕೇವಲ ಒಂದು ಸಿನಿಮಾವಾಗಿ ಉಳಿದಿಲ್ಲ, ಇದು ಭಾರತೀಯ ಚಿತ್ರರಂಗದ ಅಸ್ಮಿತೆಯಾಗಿ ಹೊರಹೊಮ್ಮುತ್ತಿದೆ. ರಣಬೀರ್-ಸಾಯಿ ಪಲ್ಲವಿ-ಯಶ್ ಚಿತ್ರದ ಥಿಯೇಟರ್‌ ಹಕ್ಕು ಭಾರೀ ಮೊತ್ತಕ್ಕೆ ಸೇಲ್ ಆಗಲಿದ್ದು, ಹೊಸ ದಾಖಲೆ ಬರೆಯಲಿದೆ.. ರಾಮಾಯಣದ ಪವರ್ ಎಷ್ಟು ನೋಡಿ!

Read Full Story

03:43 PM (IST) May 23

ಚೇಸ್ ಮಾಡಿ ಗೆಲ್ಲೋ ಚಾನ್ಸ್ ಇದ್ದರೂ 166 ರನ್ ದಾಟಿಸಲು ಪ್ರಯತ್ನಿಸಿ ಸೋಲು ಕಂಡಿತಾ ಆರ್‌ಸಿಬಿ?

ಆರ್‌ಸಿಬಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್ ನೀಡಿದ 256 ರನ್ ಟಾರ್ಗೆಟ್ ಚೇಸ್ ಮಾಡುವ ಅವಕಾಶ ಹಾಗೂ ಸಾಮರ್ಥ್ಯವಿದ್ದರೂ ಕೇವಲ 166 ರನ್ ದಾಟಿಸಿ ಸೋತರೂ ಪರ್ವಾಗಿಲ್ಲ ಅನ್ನೋ ಲೆಕ್ಕಾಚಾರದಲ್ಲೇ ಬ್ಯಾಟಿಂಗ್ ಮಾಡಿತಾ?

Read Full Story

03:34 PM (IST) May 23

IPL 2026 Playoffs - ಆರ್‌ಸಿಬಿಯ ಮುಂದಿನ ಪಂದ್ಯ ಯಾವುದು? ಯಾವಾಗ? ಎದುರಾಳಿ ಯಾರು?

ಹೈದರಾಬಾದ್: ಐಪಿಎಲ್ 2026ರ ಸೀಸನ್‌ನ ಮೊದಲ ಕ್ವಾಲಿಫೈಯರ್ ಪಂದ್ಯದ ಚಿತ್ರಣ ಈಗ ಸ್ಪಷ್ಟವಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ನಂತರ ಪ್ಲೇಆಫ್ ಲೆಕ್ಕಾಚಾರಗಳು ಖಚಿತಗೊಂಡಿವೆ. ಆರ್‌ಸಿಬಿಯ ಮುಂದಿನ ಪಂದ್ಯ ಎಲ್ಲಿ? ಯಾವಾಗ? ಯಾರು ಎದುರಾಳಿ ನೋಡೋಣ ಬನ್ನಿ.

 

Read Full Story

02:51 PM (IST) May 23

ಅಮೆರಿಕದಲ್ಲಿನ ಭಾರತೀಯರ ಕಣ್ಣೀರು - 60 ದಿನಗಳಲ್ಲಿ ಕೆಲ್ಸ ಹುಡುಕದಿದ್ರೆ ಗಂಟುಮೂಟೆ ಕಟ್ಟಲೇಬೇಕು

ಅಮೆರಿಕದ ಟೆಕ್ ಕಂಪನಿಗಳಲ್ಲಿನ ಬೃಹತ್ ಉದ್ಯೋಗ ಕಡಿತವು H-1B ವೀಸಾದಲ್ಲಿರುವ ಸಾವಿರಾರು ಭಾರತೀಯ ಟೆಕ್ ಉದ್ಯೋಗಿಗಳ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಉದ್ಯೋಗ ಕಳೆದುಕೊಂಡವರಿಗೆ ಹೊಸ ಕೆಲಸ ಹುಡುಕಲು ಕೇವಲ 60 ದಿನಗಳ ಕಾಲಾವಕಾಶವಿದ್ದು, ವಿಫಲವಾದರೆ ಅಮೆರಿಕವನ್ನು ತೊರೆಯಬೇಕಾದ ಅನಿವಾರ್ಯತೆ ಎದುರಾಗಿದೆ.
Read Full Story

02:32 PM (IST) May 23

27 KM ಮೈಲೇಜ್ ಕೊಡುವ ಹೊಸ ಫೇಸ್‌ಲಿಫ್ಟ್‌ ಕಾರು ಭಾರತದಲ್ಲಿ ಬಿಡುಗಡೆ - ಕೇವಲ ₹11.99 ಲಕ್ಷಕ್ಕೆ ಲಕ್ಷುರಿ ಫೀಚರ್ಸ್!

ಹೋಂಡಾ ಕಾರ್ಸ್ ಇಂಡಿಯಾ ತನ್ನ ಜನಪ್ರಿಯ ಸೆಡಾನ್ '2026 ಹೋಂಡಾ ಸಿಟಿ ಫೇಸ್‌ಲಿಫ್ಟ್‌' ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ₹11.99 ಲಕ್ಷದ ಆರಂಭಿಕ ಬೆಲೆಯೊಂದಿಗೆ ಬಂದಿರುವ ಈ ಕಾರು, ಆಕರ್ಷಕ ವಿನ್ಯಾಸ, ಲೆವೆಲ್ 2 ADAS ಸುರಕ್ಷತಾ ತಂತ್ರಜ್ಞಾನ ಮತ್ತು 27.26 ಕಿ.ಮೀ ಮೈಲೇಜ್ ನೀಡಲಿದೆ.

Read Full Story

02:17 PM (IST) May 23

ಇಂಟರ್‌ವ್ಯೂನಲ್ಲಿ CA ಮಾಡಿದ ಮಹಿಳೆಗೆ ಕೈ ಮುಗಿದು, ಕಣ್ಮುಚ್ಚಿ ಕೂರುವಂತೆ ಹೇಳಿದ ಸಂದರ್ಶಕಿ! ಇದು ಹೊಸ ತಂತ್ರವೇ?

Interview: ಒಬ್ಬ ಚಾರ್ಟರ್ಡ್ ಅಕೌಂಟೆಂಟ್ ಯುವತಿ ತನಗಾದ ವಿಚಿತ್ರ ವರ್ಚುವಲ್ ಸಂದರ್ಶನದ ಅನುಭವವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಸಂದರ್ಶಕಿ 15 ನಿಮಿಷಗಳ ಕಾಲ 'ನಮಸ್ತೆ' ಭಂಗಿಯಲ್ಲಿ ಕಣ್ಣು ಮುಚ್ಚಿ ಕೂರುವಂತೆ ಹೇಳಿದ್ದು, ಈ ಘಟನೆ ಆನ್‌ಲೈನ್‌ನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

 

Read Full Story

01:54 PM (IST) May 23

ಕೆಜಿಗಟ್ಟಲೆ ಚಿನ್ನ ಬೆಂಗಳೂರಿಗೆ ತರಲು ಸಿನಿಮಾ ಮೀರಿಸೋ ಸ್ಟೈಲ್​ನಲ್ಲಿ ಪ್ಲ್ಯಾನ್​ - ಶಾಮೀಲಾದೋರು ಯಾರು ನೋಡಿ!

ಅಹಮದಾಬಾದ್ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಸಾಗಬೇಕಿದ್ದ 2.5 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳನ್ನು, ವಿಮಾನ ನಿಲ್ದಾಣದ ಸಿಬ್ಬಂದಿಯೇ ಬಾಲಿವುಡ್ ಶೈಲಿಯಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದಾರೆ. ಆದರೆ, ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ಈ ಸಂಚು ವಿಫಲವಾಗಿದ್ದು, ಮಾಸ್ಟರ್‌ಮೈಂಡ್ ಸೇರಿದಂತೆ 8 ಆರೋಪಿಗಳನ್ನು ಬಂಧಿಸಲಾಗಿದೆ.
Read Full Story

12:07 PM (IST) May 23

ಎಂಥ ಕಾಲ ಬಂತಪ್ಪಾ..! ಶಾಪಿಂಗ್‌ ಮಾಡಿ, ಸುಸ್ತಾದೋರಿಗೆ ಬ್ಯಾಗ್ ಹಿಡ್ಕೊಳ್ಳಲು ಜನ ಸಿಗ್ತಾರೆ!

Shopping ಮಾಡುವಾಗ ಬ್ಯಾಗ್‌ಗಳನ್ನು ಹೊತ್ತುಕೊಂಡು ಸುಸ್ತಾಗಿದೆಯೇ? 'ಕ್ಯಾರಿಮೆನ್' ಎಂಬ ಸ್ಟಾರ್ಟಪ್ ಬಂದಿದೆ. ಸಹಾಯಕರು ನಿಮ್ಮ ಬ್ಯಾಗ್‌ಗಳನ್ನು ಹೊರುವುದಲ್ಲದೆ, ಜನಜಂಗುಳಿಯಲ್ಲಿ ಆರಾಮವಾಗಿ ಓಡಾಡಲು ಸಹಾಯ ಮಾಡುತ್ತಾರೆ. ಈಗಾಗಲೇ ಈ ಸ್ಟಾರ್ಟಪ್ 50ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪೂರ್ಣಗೊಳಿಸಿದೆ.

Read Full Story

11:17 AM (IST) May 23

ಇನ್ನೂ ಮರೆತಿಲ್ಲ ಟ್ರ್ಯಾವಿಸ್ ಹೆಡ್ ಮೇಲಿನ ಸೇಡು! ಆಸೀಸ್ ಆಟಗಾರನ ಮೇಲೆ ಕೊಹ್ಲಿ ಕಿಡಿಕಾರಿದ್ದೇಕೆ? ವಿಡಿಯೋ ವೈರಲ್

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಸೋಲಿನ ಬಳಿಕ, ವಿರಾಟ್ ಕೊಹ್ಲಿ ಎದುರಾಳಿ ಆಟಗಾರ ಟ್ರ್ಯಾವಿಸ್ ಹೆಡ್‌ಗೆ ಹಸ್ತಲಾಘವ ನೀಡದೆ ನಿರ್ಲಕ್ಷಿಸಿದ್ದಾರೆ ಎನ್ನಲಾಗಿದೆ. ಈ ಘಟನೆಯು 2023ರ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಸೋಲಿಗೆ ಕಾರಣವಾದ ಹೆಡ್ ಮೇಲಿನ ಕೊಹ್ಲಿಯ ಹಳೆಯ ಸೇಡಿನ ಮುಂದುವರಿದ ಭಾಗವೆಂದು ಚರ್ಚಿಸಲಾಗುತ್ತಿದೆ.
Read Full Story

11:10 AM (IST) May 23

ಪ್ರೇಮಲೋಕದ ಸುಂದರಿ ಜೂಹಿ ಚಾವ್ಲಾ ಬಾಳಿನಲ್ಲಿ ಮತ್ತೊಂದು ಸಂತಸದ ಸುದ್ದಿ, ಎಲ್ಲರೊಂದಿಗೆ ಹಂಚಿಕೊಂಡ ನಟಿ!

ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರ ಪುತ್ರ ಅರ್ಜುನ್ ಮೆಹ್ತಾ, ಅಮೆರಿಕದ ಪ್ರತಿಷ್ಠಿತ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಮಗನ ಘಟಿಕೋತ್ಸವದ ವಿಡಿಯೋ ಹಂಚಿಕೊಂಡು ಜೂಹಿ ತಮ್ಮ ಸಂತಸ ವ್ಯಕ್ತಪಡಿಸಿದ್ದು, ಕಳೆದ ವರ್ಷ ಇವರ ಪುತ್ರಿ ಜಾನ್ವಿ ಕೂಡ ಇದೇ ವಿವಿಯಿಂದ ಪದವಿ ಪಡೆದಿದ್ದರು.
Read Full Story

10:08 AM (IST) May 23

ಲೆಹ್‌ನಲ್ಲಿ ಭೀಕರ ದುರಂತ - ಪರ್ವತದ ಮೇಲೆ ಹೆಲಿಕಾಪ್ಟರ್ ನಜ್ಜುಗುಜ್ಜಾದರೂ ಪವಾಡಸದೃಶವಾಗಿ ಪಾರಾದ ಸೇನಾ ಅಧಿಕಾರಿಗಳು!

ಲಡಾಖ್‌ನ ಲೇಹ್ ಬಳಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನಗೊಂಡು, ಮೇಜರ್ ಜನರಲ್ ಸೇರಿದಂತೆ ಮೂವರು ಅಧಿಕಾರಿಗಳು ಪವಾಡಸದೃಶವಾಗಿ ಪಾರಾಗಿದ್ದಾರೆ. ಈ ಘಟನೆಯು ಹಳೆಯ ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್‌ಗಳನ್ನು ಸೇವೆಯಿಂದ ಹಿಂಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

Read Full Story

09:58 AM (IST) May 23

ಈ ಸಲ IPL ಕಪ್ ಗೆಲ್ಲೋದು ಯಾರು? ಅಚ್ಚರಿ ಭವಿಷ್ಯ ನುಡಿದ Google Gemini..! ಹೊಸ ಇತಿಹಾಸ ನಿರ್ಮಾಣ?

2026ರ ಐಪಿಎಲ್ ಟೂರ್ನಿ ನಿರ್ಣಾಯಕ ಹಂತ ತಲುಪಿದ್ದು, ಪ್ಲೇ ಆಫ್‌ ರೇಸ್ ತೀವ್ರಗೊಂಡಿದೆ. ಈ ನಡುವೆ, ಗೂಗಲ್ ಜೆಮಿನಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಈ ಬಾರಿಯ ಚಾಂಪಿಯನ್ ಯಾರೆಂದು ಭವಿಷ್ಯ ನುಡಿದಿದೆ. ಅದರ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಕಪ್ ಗೆದ್ದು ಹೊಸ ಇತಿಹಾಸ ನಿರ್ಮಿಸುವ ಸಾಧ್ಯತೆಯಿದೆ.
Read Full Story

09:51 AM (IST) May 23

ಸಿಕ್ಸ್ ಪ್ಯಾಕ್ ಕ್ರೇಜ್‌ನಲ್ಲಿ ಪ್ರೋಟೀನ್ ಪೌಡರ್ ಮೊರೆ ಹೋಗ್ತಿದ್ದೀರಾ? - ಸುಮ್ನೆ ಕಿಡ್ನಿ, ಲಿವರ್ ಹಾಳು ಮಾಡ್ಕೋಬೇಡಿ!

ಇಂದಿನ ಫಿಟ್ನೆಸ್ ಜಗತ್ತಿನಲ್ಲಿ ಪ್ರೋಟೀನ್ ಸಪ್ಲಿಮೆಂಟ್‌ಗಳ ಕುರಿತಾದ ಜಾಗೃತಿ ಹೆಚ್ಚಾಗಿದ್ದು, "ಹೆಚ್ಚು ಪ್ರೋಟೀನ್ ಹೆಚ್ಚು ಶಕ್ತಿ" ಎಂಬ ತಪ್ಪು ಕಲ್ಪನೆ ಜನಪ್ರಿಯವಾಗಿದೆ. ಆದರೆ, ಮಿತಿಮೀರಿದ ಪ್ರೋಟೀನ್ ಸೇವನೆಯು ಕಿಡ್ನಿ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಹಾನಿಯುಂಟುಮಾಡಬಹುದು. 

Read Full Story

09:00 AM (IST) May 23

ಡೊನಾಲ್ಡ್‌ ಟ್ರಂಪ್ ಪುತ್ರಿ ಇವಾಂಕಾ ಕೊಲೆಗೆ ಯತ್ನಿಸಿದ ಇರಾನ್‌, ಉಗ್ರನ ಭೀಕರ ಪ್ಲಾನ್ ಬಯಲು!

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಹತ್ಯೆಗೆ ನಡೆದಿದ್ದ ಜಾಗತಿಕ ಸಂಚು ಬಯಲಾಗಿದೆ. ಇರಾನ್ ಸೇನಾ ಮುಖ್ಯಸ್ಥ ಸುಲೈಮಾನಿ ಸಾವಿಗೆ ಪ್ರತೀಕಾರವಾಗಿ, ಇರಾಕ್ ಮೂಲದ ಉಗ್ರನೊಬ್ಬ ಈ ಸಂಚು ರೂಪಿಸಿದ್ದು, ಟರ್ಕಿಯಲ್ಲಿ ಬಂಧಿಸಲಾಗಿದೆ. 

Read Full Story

08:13 AM (IST) May 23

ಮೂವರು ಸಿಎಂಗಳು ಬದಲಾದ್ರೂ ಕದಲದ ಏರ್‌ಪೋರ್ಟ್‌ ಮಸೀದಿ - ಸ್ಥಳಾಂತರಕ್ಕೆ ಬಿಗಿಪಟ್ಟು ಹಿಡಿದ ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ!

ಕೋಲ್ಕತ್ತಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣಾ ಪ್ರದೇಶದಲ್ಲಿರುವ ದಶಕಗಳ ಹಳೆಯ ಮಸೀದಿಯನ್ನು ಸ್ಥಳಾಂತರಿಸುವ ಪ್ರಯತ್ನಗಳು ತೀವ್ರಗೊಂಡಿವೆ. ವಿಮಾನಗಳ ಸುರಕ್ಷತೆ ಮತ್ತು ಕಾರ್ಯಾಚರಣೆಗೆ ಅಡ್ಡಿಯಾಗಿರುವ ಈ ಮಸೀದಿಯ ಸ್ಥಳಾಂತರ ಕುರಿತು ಮಾತುಕತೆ ನಡೆದಿದೆ.

Read Full Story

07:55 AM (IST) May 23

ಸೋತರೂ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ - ಅಚ್ಚರಿಯ ಪ್ಲೇಆಫ್ ಲೆಕ್ಕ!

ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ 55 ರನ್‌ಗಳ ಸೋಲಿನ ಹೊರತಾಗಿಯೂ, ಆರ್‌ಸಿಬಿ ತಂಡವು ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. 256 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ 200 ರನ್ ಗಳಿಸಿ ಕ್ವಾಲಿಫೈಯರ್‌-1ಕ್ಕೆ ಪ್ರವೇಶಿಸಿತು, ಆದರೆ ಸನ್‌ರೈಸರ್ಸ್‌ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತು.
Read Full Story

07:48 AM (IST) May 23

ಮಗನ ಮದುವೆಗಿಂತ ದೇಶವೇ ಮೊದಲು - ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಸ್ವಂತ ಪುತ್ರನ ವಿವಾಹಕ್ಕೆ ಟ್ರಂಪ್ ಗೈರು!

ಇರಾನ್ ಜೊತೆಗಿನ ಯುದ್ಧದ ಭೀತಿ ಮತ್ತು ಜಾಗತಿಕ ರಾಜಕೀಯ ಬಿಕ್ಕಟ್ಟಿನ ಕಾರಣ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ವಿವಾಹದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. 

Read Full Story

07:30 AM (IST) May 23

ಜನಸಾಮಾನ್ಯರಿಗೆ ಇಂಧನ ಬೆಲೆ ಏರಿಕೆಯ ಬರೆ - 10 ದಿನಗಳಲ್ಲಿ 3ನೇ ಬಾರಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಪಶ್ಚಿಮ ಏಷ್ಯಾದ ಉದ್ವಿಗ್ನತೆಯಿಂದಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತೊಮ್ಮೆ ಏರಿಕೆಯಾಗಿವೆ. ಮೇ 23 ರಂದು ಪೆಟ್ರೋಲ್ ಬೆಲೆ 87 ಪೈಸೆ ಮತ್ತು ಡೀಸೆಲ್ ಬೆಲೆ 91 ಪೈಸೆ ಹೆಚ್ಚಳವಾಗಿದ್ದು, ಕಳೆದ 10 ದಿನಗಳಲ್ಲಿ ಒಟ್ಟು ₹5 ರಷ್ಟು ಏರಿಕೆ ಕಂಡಿದೆ.
Read Full Story

06:42 AM (IST) May 23

ಪಾಕಿಸ್ತಾನಕ್ಕೂ ವಿಸ್ತರಿಸಿದ ಕಾಕ್ರೋಚ್‌ ಜನತಾ ಪಾರ್ಟಿ! 3 ಹೆಸರುಗಳಲ್ಲಿ ಆನ್‌ಲೈನ್ ಅಭಿಯಾನ ಶುರು

ಭಾರತದಲ್ಲಿ ರಾಜಕೀಯ ವ್ಯವಸ್ಥೆಯ ವಿರುದ್ಧ ಆರಂಭವಾದ 'ಕಾಕ್ರೋಚ್ ಜನತಾ ಪಾರ್ಟಿ' ಆನ್ಲೈನ್ ಅಭಿಯಾನವು ಇದೀಗ ಪಾಕಿಸ್ತಾನಕ್ಕೂ ವಿಸ್ತರಿಸಿದೆ. ಅಲ್ಲಿ 'ಕಾಕ್ರೋಚ್ ಅವಾಮಿ ಪಾರ್ಟಿ'ಯಂತಹ ಹೆಸರುಗಳಲ್ಲಿ, ಪಾಕ್ ಧ್ವಜ ಹಿಡಿದ ಜಿರಳೆಯ ಲೋಗೋದೊಂದಿಗೆ ಸ್ಥಾಪಿತ ಪಕ್ಷಗಳಿಗೆ ಸವಾಲು ಹಾಕುತ್ತಿದೆ.
Read Full Story

06:38 AM (IST) May 23

ಕೇರಳದಲ್ಲಿ ರಾಜೀವ್ ಚಂದ್ರಶೇಖರ್‌ ಕಚೇರಿ 24 ಗಂಟೆಯೂ ಓಪನ್; ತುರ್ತು ಆ್ಯಂಬುಲೆನ್ಸ್ ಸೇವೆ ಆರಂಭ

ನೇಮಂ ಕ್ಷೇತ್ರದ ನೂತನ ಶಾಸಕ ರಾಜೀವ್ ಚಂದ್ರಶೇಖರ್, ತಮ್ಮ ಕ್ಷೇತ್ರದಲ್ಲಿ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಶಾಸಕರ ಕಚೇರಿಯನ್ನು ಘೋಷಿಸಿದ್ದಾರೆ. ಇದರೊಂದಿಗೆ, ತುರ್ತು ಆರೋಗ್ಯ ಸೇವೆಗಾಗಿ ದಿನವಿಡೀ ಲಭ್ಯವಿರುವ ಆ್ಯಂಬುಲೆನ್ಸ್ ಸೇವೆಯನ್ನು ಜೂನ್‌ನಿಂದ ಆರಂಭಿಸುವುದಾಗಿ ತಿಳಿಸಿದ್ದಾರೆ.
Read Full Story

06:06 AM (IST) May 23

ರಾಜ್ಯಸಭೆ - ಎಚ್‌.ಡಿ.ದೇವೇಗೌಡರ ಮರು ಆಯ್ಕೆಗೆ ಒಪ್ತಾರಾ ಮೋದಿ? JDSಗಿಲ್ಲ ಸಂಖ್ಯಾಬಲ

ರಾಜ್ಯಸಭಾ ಸದಸ್ಯತ್ವದ ಅವಧಿ ಪೂರ್ಣಗೊಳ್ಳುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮರು ಆಯ್ಕೆಗೆ ಜೆಡಿಎಸ್ ಬಳಿ ಸಂಖ್ಯಾಬಲವಿಲ್ಲ. ಹೀಗಾಗಿ, ಮಿತ್ರಪಕ್ಷವಾದ ಬಿಜೆಪಿಯ ಬೆಂಬಲವನ್ನು ಜೆಡಿಎಸ್ ನಿರೀಕ್ಷಿಸುತ್ತಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವೇ ಅಂತಿಮವಾಗಲಿದೆ.
Read Full Story

05:51 AM (IST) May 23

74 ವರ್ಷಗಳಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಮಹಿಳಾ ಸದಸ್ಯರ ಸಂಖ್ಯೆ ಎಷ್ಟು?

ರಾಜ್ಯಸಭೆಗೆ ದ್ವೈವಾರ್ಷಿಕ ಚುನಾವಣೆ ಘೋಷಣೆಯಾಗಿದ್ದು, ಕರ್ನಾಟಕದ ಸ್ಥಾನಗಳಿಗೂ ಚುನಾವಣೆ ನಡೆಯಲಿದೆ. ಆದರೆ, ಕಳೆದ 74 ವರ್ಷಗಳಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಮಹಿಳಾ ಸದಸ್ಯರ ಸಂಖ್ಯೆ ಕೇವಲ 11 ಆಗಿದ್ದು, ಇದು ರಾಜಕೀಯ ಪಕ್ಷಗಳಿಂದ ಮಹಿಳೆಯರ ನಿರಂತರ ಕಡೆಗಣನೆಯನ್ನು ತೋರಿಸುತ್ತದೆ.
Read Full Story

More Trending News