MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಮಾಡೆಲ್​ ತ್ವಿಷಾ ಶರ್ಮಾ ಸಾವಿಗೂ ಮುನ್ನ ಕೊನೆಯ ವಿಡಿಯೋ ವೈರಲ್​: ಕೊ*ಲೆಯೋ, ಆ*ತ್ಮಹತ್ಯೆಯೊ

ಮಾಡೆಲ್​ ತ್ವಿಷಾ ಶರ್ಮಾ ಸಾವಿಗೂ ಮುನ್ನ ಕೊನೆಯ ವಿಡಿಯೋ ವೈರಲ್​: ಕೊ*ಲೆಯೋ, ಆ*ತ್ಮಹತ್ಯೆಯೊ

ನೋಯ್ಡಾ ಮಾಡೆಲ್ ತ್ವಿಷಾ ಶರ್ಮಾ ಅವರ ನಿಗೂಢ ಸಾವು ಹಲವು ತಿರುವುಗಳನ್ನು ಪಡೆದಿದೆ. ವರದಕ್ಷಿಣೆಗಾಗಿ ಪತಿ ಮತ್ತು ಮಾಜಿ ಜಡ್ಜ್ ಅತ್ತೆಯೇ ಕೊಲೆ ಮಾಡಿದ್ದಾರೆಂದು ಕುಟುಂಬ ಆರೋಪಿಸಿದ್ದು, ಪತಿಯನ್ನು ಬಂಧಿಸಲಾಗಿದೆ. ಸಾವಿಗೂ ಮುನ್ನ ಸ್ಪಾಗೆ ಹೋಗಿದ್ದ ತ್ವಿಷಾಳ ವಿಡಿಯೋ ಆತ್ಮಹತ್ಯೆಯ ವಾದ ಅಲ್ಲಗಳೆಯುತ್ತಿದೆ.

2 Min read
Author : Suchethana D
Published : May 23 2026, 04:19 PM IST
Share this Photo Gallery
  • FB
  • TW
  • Linkdin
  • Whatsapp
15
ಮಾಡೆಲ್​ ಕೊ*ಲೆ?
Image Credit : X

ಮಾಡೆಲ್​ ಕೊ*ಲೆ?

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರೋ ನೋಯ್ಡಾ ಮೂಲದ 33 ವರ್ಷದ ನಟಿ, ಮಾಡೆಲ್​, ಮಿಸ್​ ಪುಣೆ ತ್ವಿಷಾ ಶರ್ಮಾ (Twisha Sharma) ಸಾವು ದಿನದಿಂದ ದಿನಕ್ಕೆ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಪಡೆಯುತ್ತಿದೆ. ಮದುವೆಯಾದ ಐದೇ ತಿಂಗಳಿನಲ್ಲಿ ಈಕೆ ನಿಗೂಢ ಸಾವನ್ನಪ್ಪಿದ್ದಾರೆ. ಮಾಜಿ ಜಡ್ಜ್​ ಅತ್ತೆ, ವಕೀಲ ಗಂಡನ ಕೈಯಲ್ಲಿ ತ್ವಿಷಾ ಕೊ*ಲೆಯಾಗಿರುವುದು ಇದಾಗಲೇ ಬಹುತೇಕ ತನಿಖೆಯಿಂದ ತಿಳಿದುಬಂದಿದೆ.

Add Asianetnews Kannada as a Preferred SourcegooglePreferred
25
ಅತ್ತೆ ಹೇಳೋದೇನು?
Image Credit : chatgpt

ಅತ್ತೆ ಹೇಳೋದೇನು?

ಇದರ ಹೊರತಾಗಿಯೂ ಅವರು ತ್ವಿಷಾ ಅವರು ಡ್ರಗ್​ ವ್ಯಸನಿ ಆಗಿದ್ಲು, ಅಫೇರ್​ ಇಟ್ಟುಕೊಂಡಿದ್ಲು ಅಂದೆಲ್ಲಾ ಸಬೂಬು ಹೇಳುತ್ತಲೇ ಆ*ತ್ಮಹತ್ಯೆಯ ಲೇಪ ಹಚ್ಚಲು ನೋಡುತ್ತಿದ್ದಾರೆ. ಹೇಳಿ ಕೇಳಿ ಮಾಜಿ ನ್ಯಾಯಾಧೀಶೆ ಈ ಅತ್ತೆ. ಸೊಸೆ ಸತ್ತ ಮೇಲೂ ಇನಿತೂ ಬೇಸರ ಇಲ್ಲದೇ ಸೊಸೆಗೆ ಗಿಡಗಳಿಗೆ ನೀರು ಹಾಕುವುದು ಇಷ್ಟವಿರಲಿಲ್ಲ. ಅಡುಗೆ ಮಾಡುವುದು ಇಷ್ಟವಿರಲಿಲ್ಲ, ಮಕ್ಕಳು ಎಂದರೆ ಇಷ್ಟವಿರಲಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳುವಾಗಲೇ ತ್ವಿಷಾನ ಸಾವು ಯಾವ ರೀತಿ ಆಗಿರಬಹುದು ಎಂದು ಎಂಥವರೂ ಊಹಿಸಲು ಸಾಧ್ಯವಾಗಿದೆ.

Related Articles

Related image1
Just Married ಕಾರಿನ ಒಳಗೆ ನೂತನ ಜೋಡಿ, ಪೊಲೀಸ್ರು ಚೆಕ್​ ಮಾಡಿದಾಗ ಮಾತ್ರ ಸಿಕ್ಕಿದ್ದೇ ಬೇರೆ!
Related image2
'ಅಮ್ಮನ ಮಗ'ನ ಮದ್ವೆಯಾದ್ರೆ ನಿಮ್ಮ ಲೈಫ್​ ಬರ್ಬಾದ್​: ನೂರಾರು ಕೇಸ್​ ಡಿಟೇಲ್ಸ್​ ಕೊಟ್ಟ ಮ್ಯಾಚ್​ ಮೇಕರ್​
35
ಕೊನೆಯ ವಿಡಿಯೋ ವೈರಲ್​
Image Credit : ANI

ಕೊನೆಯ ವಿಡಿಯೋ ವೈರಲ್​

ಇದರ ಬೆನ್ನಲ್ಲೇ ತ್ವಿಷಾ ಅವರ ಸಾವಿಗೂ ಕೆಲವೇ ಗಂಟೆ ಮೊದಲು ಸಿಸಿಟಿವಿಯಲ್ಲಿ ದಾಖಲಾಗಿರುವ ವಿಡಿಯೋ ವೈರಲ್​ ಆಗಿದೆ. ಅದರಲ್ಲಿ ತ್ವಿಷಾ ಅವರು ಸ್ಪಾನಲ್ಲಿ ಫ್ರೆಷಪ್​ ಆಗುತ್ತಿರುವುದನ್ನು ನೋಡಬಹುದು. ತಲೆಗೆ ಮಸಾಜ್​ ಮಾಡಿಸಿಕೊಳ್ಳುತ್ತಿರುವುದು ಕಾಣಿಸುತ್ತದೆ. ಯಾರಾದರೂ ಆ*ತ್ಮಹತ್ಯೆ ಮಾಡಿಕೊಳ್ಳುವ ಒಂದೆರಡು ಗಂಟೆ ಮೊದಲು ಹೀಗೆಲ್ಲಾ ಮಾಡಿಕೊಳ್ಳಲು ಸಾಧ್ಯವೇ ಎನ್ನುವುದಾಗಿ ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ತ್ವಿಷಾ ಅವರ ಮೈಮೇಲೆ ಗಾಯದ ಗುರುತುಗಳೂ ಪತ್ತೆಯಾಗಿದ್ದರೂ, ಇದುವರೆಗೆ ಅತ್ತೆಯನ್ನು ಬಂಧಿಸದೇ ಇರುವುದು ಹಲವರ ಅಸಮಾಧಾನಕ್ಕೆ ಗುರಿಯಾಗಿದೆ. ಘಟನೆ ನಡೆದ ತಕ್ಷಣ ಗಂಡ ಸಮರ್ಥ್ ಸಿಂಗ್ (Samarth Singh) ತಪ್ಪಿಸಿಕೊಂಡು ಓಡಿಹೋಗಿದ್ದ. 10 ದಿನಗಳ ಬಳಿಕ ಆತನ ಬಂಧನವಾಗಿದೆ.

45
ಪತಿ ಅರೆಸ್ಟ್​
Image Credit : X

ಪತಿ ಅರೆಸ್ಟ್​

ಘಟನೆಯ ನಂತರ ಸಮರ್ಥ್ ನಾಪತ್ತೆಯಾಗಿದ್ದರಿಂದ ಪೊಲೀಸರು ಆತನ ಬಗ್ಗೆ ಮಾಹಿತಿ ನೀಡಿದವರಿಗೆ 30,000 ರೂಪಾಯಿ ಬಹುಮಾನ ಘೋಷಿಸಿದ್ದರು. ಅಲ್ಲದೆ, ಆತ ವಿದೇಶಕ್ಕೆ ಪರಾರಿಯಾಗದಂತೆ ಪಾಸ್‌ಪೋರ್ಟ್ ರದ್ದುಗೊಳಿಸುವ ಪ್ರಕ್ರಿಯೆಯನ್ನೂ ಸಹ ಆರಂಭಿಸಲಾಗಿತ್ತು. ಅವನ ನಿರೀಕ್ಷಣಾ ಜಾಮೀನು ವಜಾಗೊಂಡಿತ್ತು. ಆದ್ದರಿಂದ ಜಬಲ್ಪುರ್ ನ್ಯಾಯಾಲಯದಲ್ಲಿ (Jabalpur Court) ಹಾಜರಾಗುವ ನಾಟವಾಡಿದ್ದ. ಅವನನ್ನು ಅರೆಸ್ಟ್​ ಮಾಡಲಾಗಿದೆ ಮಾತ್ರವಲ್ಲದೇ ವಕೀಲಿ ವೃತ್ತಿ ನಡೆಸಲು ಬೇಕಾಗಿರುವ ಸನದನ್ನು ಬಾರ್​ ಕೌನ್ಸಿಲ್​ ಆಫ್​ ಇಂಡಿಯಾ ಅಮಾನತು ಮಾಡಿದೆ. ಅತ್ತೆಗೆ ಇನ್ನು ಯಾವ ರೀತಿಯ ಶಿಕ್ಷೆ ಆಗುತ್ತದೆಯೋ ಕಾದು ನೋಡಬೇಕಿದೆ.

55
ಏನಿದು ಕೇಸ್​?
Image Credit : X

ಏನಿದು ಕೇಸ್​?

33 ವರ್ಷದ ತ್ವಿಷಾ ಶರ್ಮಾ ಮೇ 12ರಂದು ಭೋಪಾಲ್‌ನ ಅರೆರಾ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮೃತರ ಕುಟುಂಬಸ್ಥರು ಇದೊಂದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದು, ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ದೂರಿದ್ದಾರೆ. ಆದರೆ, ತಮಗೆ ಕೈಕೊಂದು ಕಾಲಿಗೊಂದು ಆಳು ಇದ್ದಾರೆ. ನಮಗ್ಯಾಕೆ ದುಡ್ಡು ಬೇಕು ಎಂದು ಅತ್ತೆ ಗಿರಿಬಾಲಾ ಸಿಂಗ್ ಮಾಧ್ಯಮದವರ ಮುಂದೆ ಪ್ರಶ್ನಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕೊಲೆ
ಫ್ಯಾಷನ್
ಮನರಂಜನಾ ಸುದ್ದಿ
ಸಂಬಂಧಗಳು
ಮಹಿಳೆಯರು
ಕ್ರೈಮ್ ನ್ಯೂಸ್

Latest Videos
Recommended Stories
Recommended image1
ಡಿಸೈನರ್‌ಗಳ ಮಾತು ಕೇಳದ ರಶ್ಮಿಕಾ ಮಂದಣ್ಣ: ಬಯಲಾಯ್ತು ಮಂಗಳಸೂತ್ರದ ರಹಸ್ಯ!
Recommended image2
Big Deal: ಭಾರತದ ಸಿನಿಮಾ ಇತಿಹಾಸದಲ್ಲೇ ಬಿಗ್ ಡೀಲ್‌.. 'ಇಷ್ಟೊಂದು ಕೋಟಿ' ಹಣಕ್ಕೆ ರಾಮಾಯಣ ರೈಟ್ಸ್‌ ಸೇಲ್‌?
Recommended image3
IPL ಅಬ್ಬರದ ನಡುವೆಯೂ ಗೃಹಿಣಿಯರ ಮನಗೆದ್ದು TRP ಚಾರ್ಟ್‌ನಲ್ಲಿ ಮುನ್ನುಗ್ಗುತ್ತಿರುವ ಟಾಪ್ 5 ಕನ್ನಡ ಸೀರಿಯಲ್ಸ್
Related Stories
Recommended image1
Just Married ಕಾರಿನ ಒಳಗೆ ನೂತನ ಜೋಡಿ, ಪೊಲೀಸ್ರು ಚೆಕ್​ ಮಾಡಿದಾಗ ಮಾತ್ರ ಸಿಕ್ಕಿದ್ದೇ ಬೇರೆ!
Recommended image2
'ಅಮ್ಮನ ಮಗ'ನ ಮದ್ವೆಯಾದ್ರೆ ನಿಮ್ಮ ಲೈಫ್​ ಬರ್ಬಾದ್​: ನೂರಾರು ಕೇಸ್​ ಡಿಟೇಲ್ಸ್​ ಕೊಟ್ಟ ಮ್ಯಾಚ್​ ಮೇಕರ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved