LIVE NOW
Published : Jul 21, 2026, 06:48 AM ISTUpdated : Jul 21, 2026, 10:59 PM IST

India Latest News Live: Bad Cholesterol ಅಂದ್ರೇನು? ನಿಮ್ಮ ದೇಹ ಈ ಸೂಚನೆಗಳನ್ನು ಕೊಡ್ತಿದ್ರೆ ಅಪ್ಪಿತಪ್ಪಿಯೂ ನಿರ್ಲಕ್ಷ್ಯ ಮಾಡ್ಬೇಡಿ!

ಸಾರಾಂಶ

ನವದೆಹಲಿ: ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯ ಮಾದರಿಯಲ್ಲಿ ದೆಹಲಿ ಸರ್ಕಾರ ‘ದೆಹಲಿ ಲಕ್ಷ್ಮಿ ಯೋಜನೆ’ಯನ್ನು ಜಾರಿಗೆ ತರಲು ಮುಂದಾಗಿದೆ. ವಿಶೇಷವೆಂದರೆ, ಮಹಿಳೆಯರಿಗೆ ಆರ್ಥಿಕ ಬೆಂಬಲ ನೀಡುವುದರ ಜತೆಗೆ ಉಳಿತಾಯವನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಇದಕ್ಕೆ ಸಚಿವ ಸಂಪುಟದ ಅನುಮೋದನೆ ಸಿಗುವುದು ಬಾಕಿ ಇದೆ. ರಕ್ಷಾಬಂಧನದ (ಆಗಸ್ಟ್‌) ವೇಳೆ ಜಾರಿಗೆ ಬರುವ ನಿರೀಕ್ಷೆಯಿದೆ.

ದೆಹಲಿ ಲಕ್ಷ್ಮಿಯ ಅಡಿ 21ರಿಂದ 60 ವರ್ಷದ ಸ್ತ್ರೀಯರ ಖಾತೆಗೆ 2,500 ರು. ಹಾಕಲಾಗುತ್ತದೆ. ಆದರೆ ಮಹಿಳೆಯರು ಅದರಲ್ಲಿ 1 ಸಾವಿರ ರು.ಅನ್ನಷ್ಟೇ ವಿತ್‌ಡ್ರಾ ಮಾಡಬಹುದು. ಉಳಿದ 1,500 ರು. ನೇರವಾಗಿ ಆವರ್ತಕ ಠೇವಣಿ(ಆರ್‌ಡಿ) ಖಾತೆಗೆ ಹೋಗಲಿದೆ. 3 ವರ್ಷಗಳ ಬಳಿಕ ಆ ಮೊತ್ತವು ಬಡ್ಡಿ ಸಮೇತ ಫಲಾನುಭವಿಗಳ ಖಾತೆಗೆ ಹೋಗಲಿದೆ. ಈ ಮೂಲಕ ಮಹಿಳೆಯರ ಕೈಗೆ ದುಡ್ಡನ್ನು ಕೊಡುವುದರ ಜತೆಗೆ, ಭವಿಷ್ಯಕ್ಕಾಗಿ ಉಳಿತಾಯ ಮಾಡುವಂತೆಯೂ ಅವರನ್ನು ಪ್ರೋತ್ಸಾಹಿಸುವುದು ಈ ವ್ಯವಸ್ಥೆಯ ಉದ್ದೇಶ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಚುನಾವಣೆಗೂ ಮುನ್ನ ಮಹಿಳಾ ಸಮೃದ್ಧಿ ಯೋಜನೆ ಹೆಸರಿನಲ್ಲಿ ಮಹಿಳೆಯರಿಗೆ ಮಾಸಿಕ 2,500 ರು. ನೀಡುವುದಾಗಿ ಬಿಜೆಪಿ ಘೋಷಿಸಿತ್ತು. ಈಗ ಅದನ್ನೇ ದೆಹಲಿ ಲಕ್ಷ್ಮಿ ಯೋಜನೆ ಎಂದು ಬದಲಿಸಿದೆ.

10:59 PM (IST) Jul 21

Bad Cholesterol ಅಂದ್ರೇನು? ನಿಮ್ಮ ದೇಹ ಈ ಸೂಚನೆಗಳನ್ನು ಕೊಡ್ತಿದ್ರೆ ಅಪ್ಪಿತಪ್ಪಿಯೂ ನಿರ್ಲಕ್ಷ್ಯ ಮಾಡ್ಬೇಡಿ!

ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುವುದರಿಂದ ಹೃದ್ರೋಗ ಮತ್ತು ಪಾರ್ಶ್ವವಾಯುವಿನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಈ ಲೇಖನವು ಹೈ ಕೊಲೆಸ್ಟ್ರಾಲ್‌ನ ಲಕ್ಷಣಗಳು, ಕಾರಣಗಳು, ಮತ್ತು ಆರೋಗ್ಯಕರ ಜೀವನಶೈಲಿಯ ಮೂಲಕ ಅದನ್ನು ತಡೆಯುವ ಹಾಗೂ ನಿಯಂತ್ರಿಸುವ ವಿಧಾನಗಳನ್ನು ವಿವರಿಸುತ್ತದೆ.
Read Full Story

10:53 PM (IST) Jul 21

ಅಖಿಲ್ 'ಲೆನಿನ್' ವಿಚಾರದಲ್ಲಿ ನಾನೂ ತಪ್ಪು ಮಾಡಿದೆ - ಇಂಡಸ್ಟ್ರಿಗೆ ಚಾಟಿ ಬೀಸಿದ ನಾಗಾರ್ಜುನ!

ಮಗ ಅಖಿಲ್ ನಟನೆಯ 'ಲೆನಿನ್' ಸಿನಿಮಾ ಹಿಟ್ ಆದ ಖುಷಿಯಲ್ಲಿ ನಟ ನಾಗಾರ್ಜುನ, ಇಡೀ ಚಿತ್ರರಂಗದ ಕಾರ್ಯವೈಖರಿಗೆ ಚಾಟಿ ಬೀಸಿದ್ದಾರೆ. 'ಲೆನಿನ್' ವಿಚಾರದಲ್ಲಿ ತಮ್ಮದು ಕೂಡ ತಪ್ಪಿದೆ ಎಂದು ಒಪ್ಪಿಕೊಂಡಿದ್ದಾರೆ.

Read Full Story

10:26 PM (IST) Jul 21

ಪ್ರಭಾಸ್‌ಗೆ ಎಷ್ಟು ಮಕ್ಕಳಾಗಬೇಕಂತೆ ಗೊತ್ತಾ? ಹುಡುಗಿಯಲ್ಲಿ ಈ ಗುಣ ಇದ್ರೆ ಸಾಕು, ಮದುವೆಗೆ ರೆಡಿ!

ಪ್ರಭಾಸ್‌ಗೆ ಐವತ್ತು ವರ್ಷ ಹತ್ತಿರವಾಗ್ತಿದೆ. ಇನ್ನೂ ಮದುವೆಯಾಗಿಲ್ಲ. ಯಾವಾಗ ಆಗ್ತಾರೋ ಗೊತ್ತಿಲ್ಲ. ಆದರೆ ಮದುವೆ, ಮಕ್ಕಳ ಬಗ್ಗೆ ಅವರು ಹಿಂದೆ ನೀಡಿದ್ದ ಆಸಕ್ತಿಕರ ಹೇಳಿಕೆಯೊಂದು ಈಗ ವೈರಲ್ ಆಗಿದೆ. ತನಗೆಷ್ಟು ಮಕ್ಕಳು ಬೇಕು ಅಂತಾನೂ ಹೇಳಿದ್ದಾರೆ.

Read Full Story

09:56 PM (IST) Jul 21

ಚಿಕನ್ ತಿಂದರೆ ಬ್ಯಾಡ್ ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ..? ಯಾವ ರೀತಿಯ ಚಿಕನ್ ಖಾದ್ಯ ಬೆಸ್ಟ್‌?

ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯಾಘಾತ, BP, ಮಧುಮೇಹದಂತಹ ಹಲವು ಅಪಾಯಕಾರಿ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಯಾವಾಗಲೂ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದು ತಜ್ಞರು ಸಲಹೆ ನೀಡುತ್ತಾರೆ. ಚಿಕನ್ ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ ಎನ್ನುವುದನ್ನು ನೋಡೋಣ ಬನ್ನಿ

Read Full Story

09:28 PM (IST) Jul 21

ಭಾರತೀಯ ಮಾರುಕಟ್ಟೆಗೆ ಹೊಸ ಎಲೆಕ್ಟ್ರಿಕ್‌ ಕಾರ್‌ ಲಾಂಚ್‌ ಮಾಡಲಿರುವ Volvo, 600 ಕಿ.ಮೀ ಭರ್ಜರಿ ರೇಂಜ್‌

ವೋಲ್ವೋ ತನ್ನ ಫ್ಲ್ಯಾಗ್‌ಶಿಪ್ ಎಲೆಕ್ಟ್ರಿಕ್ ಎಸ್‌ಯುವಿ 'EX90' ಅನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. 111 kWh ಬ್ಯಾಟರಿ, ಒಂದೇ ಚಾರ್ಜ್‌ಗೆ 600 ಕಿ.ಮೀ ರೇಂಜ್ ಮತ್ತು ಅತ್ಯಾಧುನಿಕ ಲಿಡಾರ್ ಸುರಕ್ಷತಾ ತಂತ್ರಜ್ಞಾನವನ್ನು ಈ ಕಾರ್‌ ಹೊಂದಿದೆ.

Read Full Story

08:26 PM (IST) Jul 21

ಆರ್‌ಸಿಬಿ ಹ್ಯಾಟ್ರಿಕ್ ಐಪಿಎಲ್ ಕಪ್ ಗೆಲ್ಲಲು ಮಾಸ್ಟರ್ ಪ್ಲಾನ್‌; ಇಂಗ್ಲೆಂಡ್ ಮೂಲದ ಗೇಮ್‌ ಚೇಂಜರ್‌ ಆಟಗಾರನಿಗೆ ಗಾಳ ಹಾಕಿದ ಬೆಂಗಳೂರು ಕೋಚ್

ಬೆಂಗಳೂರು: 2027ರ ಐಪಿಎಲ್ ಟೂರ್ನಿಗೆ ಎಲ್ಲಾ ತಂಡಗಳು ಈಗಿನಿಂದಲೇ ಸಿದ್ದತೆ ಆರಂಭಿಸಿವೆ. ಹೀಗಿರುವಾಗಲೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಇಂಗ್ಲೆಂಡ್ ಮೂಲದ ಗೇಮ್ ಚೇಂಜರ್ ಆಟಗಾರನಿಗೆ ಗಾಳ ಹಾಕಿದೆ. ಈ ಕುರಿತಾದ ಅಪ್‌ಡೇಟ್ಸ್‌ ಇಲ್ಲಿದೆ.

Read Full Story

08:19 PM (IST) Jul 21

ಮಾರುತಿ ಸುಜುಕಿ ಕಾರುಗಳ ದರ ಶೀಘ್ರವೇ ದುಬಾರಿ - ಈ ತಿಂಗಳ ಒಳಗಾಗಿ ಕಾರ್‌ ಬುಕ್‌ ಮಾಡಿದ್ರೆ ಬೆಸ್ಟ್‌!

ದೇಶದ ಪ್ರಮುಖ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ, ಆಗಸ್ಟ್‌ನಿಂದ ತನ್ನ ಕಾರುಗಳ ಬೆಲೆಯನ್ನು 30,000 ರೂ.ವರೆಗೆ ಹೆಚ್ಚಿಸುವುದಾಗಿ ಘೋಷಿಸಿದೆ. ಕಚ್ಚಾವಸ್ತುಗಳ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚವೇ ಈ ನಿರ್ಧಾರಕ್ಕೆ ಕಾರಣವಾಗಿದೆ.

Read Full Story

08:16 PM (IST) Jul 21

'ಜನ ನಾಯಗನ್' ದಳಪತಿ ವಿಜಯ್ ಕೊನೆಯ ಸಿನಿಮಾನಾ? ನಿರ್ದೇಶಕರು ಕೊಟ್ಟ ಉತ್ತರವೇನು?

Jana Nayagan Movie: ದಳಪತಿ ವಿಜಯ್ ನಟನೆಯ, ಬಹುನಿರೀಕ್ಷಿತ 'ಜನ ನಾಯಗನ್' ಸಿನಿಮಾ ಬಗ್ಗೆ ನಿರ್ದೇಶಕರು ನೀಡಿರುವ ಹೊಸ ಹೇಳಿಕೆ ಈಗ ಸಿನಿಮಾ ಹಾಗೂ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

Read Full Story

08:06 PM (IST) Jul 21

ಹನಿಮೂನ್​ ಹಂತಕಿ ಸೋನಂ ರಘುವಂಶಿಗೆ ಎರಡು ಆಯ್ಕೆ ಕೊಟ್ಟ ಸುಪ್ರೀಂ ಕೋರ್ಟ್​ - ಏನದು? ಮುಂದೇನು

ಹನಿಮೂನ್ ಮರ್ಡರ್ ಕೇಸ್‌ನ ಆರೋಪಿ ಸೋನಂ ರಘುವಂಶಿಗೆ ನೀಡಲಾಗಿದ್ದ ಜಾಮೀನನ್ನು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಇದರ ವಿಚಾರಣೆ ನಡೆಸಿದ ನ್ಯಾಯಪೀಠ, ಜಾಮೀನು ರದ್ದತಿ ಅರ್ಜಿಯ ವಿಚಾರಣೆ ಎದುರಿಸುವುದು ಅಥವಾ ಸಾಕ್ಷಿಗಳ ವಿಚಾರಣೆ ಮುಗಿಯುವವರೆಗೆ ಶರಣಾಗುವುದು ಎಂಬ ಎರಡು ಆಯ್ಕೆಗಳನ್ನು ಸೋನಂಗೆ ನೀಡಿದೆ. ಪೊಲೀಸರ ತನಿಖಾ ವೈಫಲ್ಯದಿಂದಾಗಿ ಈ ಹಿಂದೆ ಆಕೆಗೆ ಜಾಮೀನು ಸಿಕ್ಕಿತ್ತು.
Read Full Story

07:52 PM (IST) Jul 21

Cat Vs Cobra - ನಾಗರಹಾವಿನ ಪ್ರತಿ ದಾಳಿಯಿಂದಲೂ ತಪ್ಪಿಸಿಕೊಂಡ ಬೆಕ್ಕು - ಮಿಂಚಿನ ವೇಗಕ್ಕೆ ನೆಟ್ಟಿಗರು ಫಿದಾ!

ನಾಗರಹಾವೊಂದು ದಾಳಿ ಮಾಡಲು ಮುಂದಾದಾಗ ಬೆಕ್ಕು ಅದಕ್ಕೆ ಎದುರಾಗಿ ನಿಂತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕ್ಲಿಪ್‌ನಲ್ಲಿ, ಹಾವು ಪದೇ ಪದೇ ದಾಳಿ ಮಾಡಲು ಯತ್ನಿಸುತ್ತಿರುವುದನ್ನು ನೋಡಬಹುದು.

Read Full Story

07:26 PM (IST) Jul 21

ವಿಶ್ವದ ಗಮನ ಸೆಳೆದ ನೀತಾ ಅಂಬಾನಿಯ ನೀಲಿ ಬಣ್ಣದ ಕಾಂಜೀವರಂ ಚಿನ್ನದ ಸೀರೆ - ಏನಿದರ ವಿಶೇಷತೆ

ಉದ್ಯಮಿ ನೀತಾ ಅಂಬಾನಿ ಅವರು ಎಎಪಿಐ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ವಿಶೇಷ ನೇರಳೆ ಬಣ್ಣದ ಕಾಂಜೀವರಂ ಸೀರೆ ಧರಿಸಿ ಗಮನ ಸೆಳೆದಿದ್ದಾರೆ. ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಮತ್ತು ಬಿ. ಕೃಷ್ಣಮೂರ್ತಿ ಅವರು ಕೈಯಿಂದ ತಯಾರಿಸಿದ ಈ ಸೀರೆಯು, ತಂಜಾವೂರು ಕಲೆ ಮತ್ತು ಸಾಂಪ್ರದಾಯಿಕ ನೇಯ್ಗೆಯನ್ನು ಸಂಯೋಜಿಸಿ ಭಾರತೀಯ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದೆ.
Read Full Story

07:18 PM (IST) Jul 21

ರೋಹಿತ್ ಶರ್ಮಾ ಶತಕ ಸಿಡಿಸುತ್ತಿದ್ದಂತೆಯೇ ಟೀಂ ಇಂಡಿಯಾ ಸೀನಿಯರ್ಸ್‌ಗೆ ಖುಲಾಯಿಸಿದ ಅದೃಷ್ಟ! ಅಗರ್ಕರ್ ಜರ್ನಿ ಖತಂ?

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಸೋಲಿನ ಬಳಿಕ, ಯುವ ಆಟಗಾರರ ಕಳಪೆ ಪ್ರದರ್ಶನದಿಂದಾಗಿ ಬಿಸಿಸಿಐ ಚಿಂತನೆಗೀಡಾಗಿದೆ. ರೋಹಿತ್ ಶರ್ಮಾ ಅವರ ಶತಕವು 2027ರ ವಿಶ್ವಕಪ್‌ಗೆ ಅವರ ಸಿದ್ಧತೆಯನ್ನು ಸೂಚಿಸಿದ್ದು, ಮುಂಬರುವ ದಿನಗಳಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಹಿರಿಯ ಆಟಗಾರರು ತಂಡಕ್ಕೆ ಮರಳುವ ನಿರೀಕ್ಷೆ ಹೆಚ್ಚಾಗಿದೆ.
Read Full Story

07:17 PM (IST) Jul 21

ಪ್ರಧಾನಿ ನಿವಾಸದ ಬಳಿ 'ಕೈ' ನಾಯಕರ ಭಾರಿ ಹೈಡ್ರಾಮಾ; ನೆಲದ ಮೇಲೆ ಮಲಗಿ ಪ್ರತಿಭಟಿಸಿದ ರಾಹುಲ್ ಗಾಂಧಿ ವಶಕ್ಕೆ!

ಪ್ರಧಾನಿ ನಿವಾಸದ ಬಳಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿಪಕ್ಷ ನಾಯಕರು ದಿಢೀರ್ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆಯಲು ಯತ್ನಿಸಿದಾಗ, ರಾಹುಲ್ ಗಾಂಧಿ ನೆಲದ ಮೇಲೆ ಮಲಗಿ ವಿರೋಧ ವ್ಯಕ್ತಪಡಿಸಿದರು.

Read Full Story

07:03 PM (IST) Jul 21

ರಾಮಾಯಣ ರಿಲೀಸ್ ಡೇಟ್ ಫಿಕ್ಸ್? ಈ ದೊಡ್ಡ ಸಿನಿಮಾದ ಜೊತೆ ಯಶ್ ಚಿತ್ರದ ಕ್ಲ್ಯಾಶ್!

ನಿತೇಶ್ ತಿವಾರಿ ಅವರ 'ರಾಮಾಯಣ' ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಮಾಧ್ಯಮದವರಿಗೆ ಮತ್ತು ಸಿನಿಮಾ ಮಂದಿಗೆ ವಿಶೇಷ ಟ್ರೇಲರ್‌ ಪ್ರದರ್ಶನ ನೀಡಿದ ನಂತರ, ಆನ್‌ಲೈನ್‌ನಲ್ಲಿ ಹೊಸ ಚರ್ಚೆಗಳು ಶುರುವಾಗಿವೆ. ಚಿತ್ರತಂಡ ಅಧಿಕೃತವಾಗಿ ಏನೂ ಹೇಳಿಲ್ಲವಾದರೂ, ನಿರೀಕ್ಷೆಗಳು ಮಾತ್ರ ಗರಿಗೆದರಿವೆ.

Read Full Story

06:42 PM (IST) Jul 21

IND vs ZIM - ಭಾರತ-ಜಿಂಬಾಬ್ವೆ ನಡುವಿನ ಟಿ20 ಮ್ಯಾಚ್ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ! ಈ ಹೊಸ ಚಾನೆಲ್‌ನಲ್ಲಿ ನೇರ ಪ್ರಸಾರ

ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದು, ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಈ ಸರಣಿಯು ಭಾರತೀಯ ಕಾಲಮಾನ ಸಂಜೆ 4.30ಕ್ಕೆ ಆರಂಭವಾಗಲಿದ್ದು, ಲೇಖನದಲ್ಲಿ ಸರಣಿಯ ವೇಳಾಪಟ್ಟಿ, ನೇರಪ್ರಸಾರದ ಮಾಹಿತಿ ಮತ್ತು ತಂಡಗಳ ವಿವರಗಳನ್ನು ನೀಡಲಾಗಿದೆ.
Read Full Story

06:40 PM (IST) Jul 21

ಭಾರತದ ಈ ಕಂಪನಿಗೆ ಮಾರಾಟವಾಗಲಿದ್ಯಾ ಸ್ಕೋಡಾ ಆಟೋ ವೋಕ್ಸ್‌ವಾಗನ್‌ ಇಂಡಿಯಾ?

ಜರ್ಮನಿಯ ಫೋಕ್ಸ್‌ವೇಗನ್ ತನ್ನ ಭಾರತೀಯ ಅಂಗಸಂಸ್ಥೆಯಾದ ಸ್ಕೋಡಾ ಆಟೋ ಫೋಕ್ಸ್‌ವೇಗನ್ ಇಂಡಿಯಾದ ಪಾಲನ್ನು ಜೆಎಸ್‌ಡಬ್ಲ್ಯೂ ಗ್ರೂಪ್‌ಗೆ ಮಾರಾಟ ಮಾಡಲು ಮಾತುಕತೆ ನಡೆಸುತ್ತಿದೆ. ಈ ಒಪ್ಪಂದವು ಫೋಕ್ಸ್‌ವೇಗನ್‌ಗೆ ಹಾಗೂ JSW ಇಬ್ಬರಿಗೂ ಸಹಾಯ ಮಾಡಲಿದೆ.

Read Full Story

06:25 PM (IST) Jul 21

ರಾವಣನ ಪಾತ್ರದಲ್ಲಿ ಯಶ್ ಅತ್ಯಂತ ಭಯಾನಕ - 'ರಾಮಾಯಣ' ಟ್ರೇಲರ್‌ಗೆ ನಿರ್ದೇಶಕ ಅಟ್ಲೀ ಮೆಚ್ಚುಗೆ

Ramayana Trailer: ಬಹುನಿರೀಕ್ಷಿತ ಪೌರಾಣಿಕ ಚಿತ್ರ 'ರಾಮಾಯಣ: ಪಾರ್ಟ್ 1' ಟ್ರೇಲರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ಖ್ಯಾತ ನಿರ್ದೇಶಕ ಅಟ್ಲೀ ಕೂಡ ಟ್ರೇಲರ್‌ಗೆ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Read Full Story

06:16 PM (IST) Jul 21

ದೇಶೀಯ 'ಕಾವೇರಿ 2.0' ಎಂಜಿನ್‌ಗೆ ಮತ್ತೆ ಜೀವಕಳೆ - ಅಮೆರಿಕ ಕಂಪನಿ ಮೇಲಿನ ಅವಲಂಬನೆ ತಪ್ಪಿಸಲು ಭಾರತದ ಮಾಸ್ಟರ್‌ಪ್ಲಾನ್!

ಸುಮಾರು ನಾಲ್ಕು ದಶಕಗಳ ಹಿಂದೆ ಆರಂಭವಾದ ಸ್ವದೇಶಿ 'ಕಾವೇರಿ' ಎಂಜಿನ್ ಯೋಜನೆ, ತೇಜಸ್ ವಿಮಾನಕ್ಕೆ ವಿಫಲವಾದ ನಂತರ ಇದೀಗ 'ಕಾವೇರಿ 2.0' ಆಗಿ ಮರುಜೀವ ಪಡೆದಿದೆ. ಈ ನೂತನ ಎಂಜಿನ್, ಭಾರತದ 5ನೇ ತಲೆಮಾರಿನ AMCA ಯುದ್ಧವಿಮಾನ ಮತ್ತು ಡ್ರೋನ್‌ಗಳಿಗೆ ಶಕ್ತಿ ತುಂಬುವ ಗುರಿ ಹೊಂದಿದೆ.

Read Full Story

06:05 PM (IST) Jul 21

ಅಚಾನಕ್ಕಾಗಿ ಮನೆಯಿಂದ ಬೆಳ್ಳಿ ಕಳಶ ನಾಪತ್ತೆ, ಕೈಮುಗಿದು ಬೇಡಿದ ಕುಟುಂಬಕ್ಕೆ 48 ಗಂಟೆಯಲ್ಲಿ ಸಿಕ್ಕಿತು ವಸ್ತು

ದೇವರ ಕೋಣೆಯಲ್ಲಿ ನೀರಿಡುವ ಬೆಳ್ಳಿಯ ಕಳಶ ಏಕಾಏಕಿ ನಾಪತ್ತೆಯಾಗಿತ್ತು. ಸರಿಸುಮಾರ 5 ಲಕ್ಷ ಮೌಲ್ಯದ ಬೆಳ್ಳಿ ಕಳಶಕ್ಕಾಗಿ ಕುಟುಂಬ ಕೈಮುಗಿದು ಬೇಡಿಕೊಂಡಿತ್ತು. ಹೀಗೆ ಬೇಡಿಕೊಂಡ 48 ಗಂಟೆಯಲ್ಲಿ ನಾಪತ್ತೆಯಾದ ಬೆಳ್ಳಿ ಕಳಶ ಮತ್ತೆ ಕುಟುಂಬದ ಕೈಸೇರಿದೆ.

Read Full Story

05:43 PM (IST) Jul 21

ಮಾರ್ವೆಲ್‌ಗೆ ಬಿಗ್ ಶಾಕ್? 'ರಾಮಾಯಣ' ದೃಶ್ಯ ವೈಭವದ ಮುಂದೆ 'ಡೂಮ್ಸ್‌ಡೇ' VFX ಮಂಕಾಯಿತೇ?

ಟ್ರೇಲರ್ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಒಬ್ಬರು, "'ಅವೆಂಜರ್ಸ್: ಡೂಮ್ಸ್‌ಡೇ' ಚಿತ್ರದ VFX ಮತ್ತು ದೃಶ್ಯ ಗುಣಮಟ್ಟ ಸ್ವಲ್ಪ ಅಪೂರ್ಣವಾಗಿ ಕಾಣುತ್ತಿದೆ.

Read Full Story

05:27 PM (IST) Jul 21

ಟೀಂ ಇಂಡಿಯಾದಿಂದ ಹೊರಗುಳಿದಿರುವ ಚಹಲ್‌ರಿಂದ ಮಹತ್ವದ ನಿರ್ಧಾರ! ಈಗ ಈ ತಂಡ ಕೂಡಿಕೊಂಡು ವಿದೇಶದಲ್ಲಿ ಮಿಂಚಲು ರೆಡಿಯಾದ ಸ್ಟಾರ್ ಸ್ಪಿನ್ನರ್

ಬೆಂಗಳೂರು: ಟೀಂ ಇಂಡಿಯಾ ಅನುಭವಿ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ ಸಾಕಷ್ಟು ಸಮಯದಿಂದ ಭಾರತ ತಂಡದಿಂದ ಹೊರಗುಳಿಯುತ್ತಲೇ ಬಂದಿದ್ದಾರೆ. ಇದೀಗ ಯುಜಿ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ವಿದೇಶದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

Read Full Story

05:11 PM (IST) Jul 21

ಕೇವಲ ಆರು ಗಂಟೆಯಲ್ಲಿ ಬೆಂಗಳೂರು-ವಿಜಯವಾಡ ಪ್ರಯಾಣ,ಹೊಸ ಎಕ್ಸ್‌ಪ್ರೆಸ್‌ವೇ‌ನಿಂದ NHಗೆ ಲಿಂಕ್

ಕೇವಲ ನಾಲ್ಕೇ ಆರು ಗಂಟೆಯಲ್ಲಿ ಬೆಂಗಳೂರಿನಿಂದ ವಿಜಯವಾಡ ತಲಪಲು ಸಾಧ್ಯ. ಸದ್ಯ ರಸ್ತೆ ಮೂಲಕ ಸಾಗಲು 11 ಗಂಟೆ ಸಮಯ ಬೇಕು. ಆದರೆ ಹೊಸ ಎಕ್ಸ್‌ಪ್ರೆಸ್‌ವೇ ಮೂಲಕ ಕೇವಲ ಆರು ಗಂಟೆ ಸಾಕು. ಇಷ್ಟೇ ಅಲ್ಲ ಈ ಎಕ್ಸ್‌ಪ್ರೆಸ್‌ವೆ ರಾಷ್ಟ್ರೀಯ ಹೆದ್ದಾರಿ 44 ಹಾಗೂ 16ಕ್ಕೆ ಲಿಂಕ್ ಮಾಡಲಾಗುತ್ತಿದೆ.

Read Full Story

04:16 PM (IST) Jul 21

ಈ 5 ಬೆಳಗಿನ ಉಪಹಾರಗಳು ನಿಮ್ಮ ಕೊಲೆಸ್ಟ್ರಾಲ್ ಹೆಚ್ಚಿಸಬಹುದು ಎಚ್ಚರ! ಈ ತಿಂಡಿಗಳಿಂದ ದೂರವಿರಿ

ಕೆಲವು ಉಪಾಹಾರ ಆಹಾರಗಳು ನಿಮ್ಮ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು ಎಂದು ನಿಮಗೆ ತಿಳಿದಿದೆಯೇ? ನಿಮ್ಮ ಹೃದಯ ಮತ್ತು ಕೊಲೆಸ್ಟ್ರಾಲ್ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ಐದು ಆಹಾರ ತಿನ್ನುವುದನ್ನು ಇಂದಿನಿಂದಲೇ ಬಿಟ್ಟುಬಿಡಿ

Read Full Story

04:10 PM (IST) Jul 21

ಆಂಧ್ರದಲ್ಲಿ ಕೋವಿಡ್-19ಗೆ 4 ಜನ ಮೃತಪಟ್ಟ ಬೆನ್ನಲ್ಲೇ ಹೊಸ ರೂಪಾಂತರಿ ತಳಿ ಪತ್ತೆ! ಏನಿದು ಒಮಿಕ್ರಾನ್ RF.5?

ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಕೋವಿಡ್-19ರ ಹೊಸ ರೂಪಾಂತರಿ 'ಆರ್‌ಎಫ್.5' ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ತಜ್ಞರ ಪ್ರಕಾರ, ಇದು ಒಮಿಕ್ರಾನ್‌ನ ಉಪ-ವಂಶಾವಳಿಯಾಗಿದ್ದು, ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲವಾದರೂ, ವಯಸ್ಸಾದವರು ಮತ್ತು ಇತರ ಕಾಯಿಲೆಗಳಿರುವವರು ಜಾಗರೂಕರಾಗಿರಬೇಕು ಎಂದು ಸಲಹೆ ನೀಡಲಾಗಿದೆ.
Read Full Story

04:04 PM (IST) Jul 21

ಏಕಕಾಲಕ್ಕೆ ಆರು ಭಾಷೆಗಳಲ್ಲಿ Bigg Boss Show ಲಾಂಚ್‌ ಮಾಡಿದ Jio Star; ಯಾವಾಗ ಆರಂಭವಾಗುತ್ತೆ?

Bigg Boss Show: ಯಾವಾಗ ಬಿಗ್‌ ಬಾಸ್‌ ಶೋ ಶುರು ಆಗಲಿದೆ ಎಂಬ ಪ್ರಶ್ನೆ ಇದ್ದೇ. ಆಡಿಷನ್‌ ಶುರು ಆಗಿದ್ದರೂ ಕೂಡ, ಬಿಗ್‌ ಬಾಸ್‌ ಯಾವಾಗ ಆರಂಭ ಆಗಲಿದೆ ಎಂಬ ಡೌಟ್‌ ಇತ್ತು. ಇದಕ್ಕೀಗ ಜಿಯೋ ಸ್ಟಾರ್‌ ಪ್ರತಿಕ್ರಿಯೆ ನೀಡಿದೆ.

Read Full Story

03:50 PM (IST) Jul 21

ಶೂಟಿಂಗ್‌ ವೇಳೆ ತಪ್ಪಿದ ಭಾರೀ ದುರಂತ.. ಬಾಲಯ್ಯಗೆ ಗಾಯ, ಆಸ್ಪತ್ರೆಗೆ ದಾಖಲು

ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರು ತಮ್ಮ 111ನೇ ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ. ಕಾಕಿನಾಡದಲ್ಲಿ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಅಪಘಾತ ಸಂಭವಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರ ಆರೋಗ್ಯ ಸ್ಥಿರವಾಗಿದೆ.
Read Full Story

03:45 PM (IST) Jul 21

ಖಾಸಗಿ ಆಸ್ಪತ್ರೆಗೆ ಸೋನಮ್‌ ವಾಂಗ್ಚುಕ್‌ ಸ್ಥಳಾಂತರಕ್ಕೆ ದೆಹಲಿ ಹೈಕೋರ್ಟ್‌ ಅಸ್ತು, ಷರತ್ತು ವಿಧಿಸಿದ ಕೇಂದ್ರ ಸರ್ಕಾರ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್ಚುಕ್ ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.

Read Full Story

03:36 PM (IST) Jul 21

Jantar mantar - ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸೋದು ಕೇಂದ್ರದ ಹಳೇ ಚಾಳಿ - ಮೋದಿ ಸರ್ಕಾರದ ವಿರುದ್ಧ ಒವೈಸಿ ವಾಗ್ದಾಳಿ!

ಸಂಸತ್ ಚಲೋ Rally ವೇಳೆ ನಡೆದ ಹಿಂಸಾಚಾರದಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ವಿವಾದದ ನಡುವೆಯೇ, ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಓವೈಸಿ ಅವರು ಮಂಗಳವಾರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Read Full Story

03:20 PM (IST) Jul 21

ಇನ್‌ಸ್ಟಾಗ್ರಾಮ್‌ನಿಂದ ಹಣ ಮಾಡೋ ಈ ಕಾಲದಲ್ಲಿ 100 ಕೋಟಿ ಕೊಟ್ರೂ ಅಕೌಂಟ್‌ ಒಪನ್‌ ಮಾಡಲ್ಲ - Aishwarya Lekshmi -

Aishwarya Lekshmi Instagram: ಸೋಶಿಯಲ್‌ ಮೀಡಿಯಾದಲ್ಲಿ‌ ಒಂದು ಪೋಸ್ಟ್ ಹಾಕಿ, ಲಕ್ಷಾಂತರ ರೂಪಾಯಿ ದುಡಿಯುವ ನಟ, ನಟಿಯರಿದ್ದಾರೆ. ಆದರೆ 100 ಕೋಟಿ ರೂಪಾಯಿ ಕೊಟ್ಟರೂ ಕೂಡ, ನಾನು ಸೋಶಿಯಲ್‌ ಮೀಡಿಯಾ ಅಕೌಂಟ್‌ ಮಾಡೋದಿಲ್ಲ ಎಂದು ನಟಿ ಐಶ್ವರ್ಯಾ ಲಕ್ಷ್ಮೀ ಹೇಳಿದ್ದಾರೆ.

Read Full Story

03:11 PM (IST) Jul 21

Jantar Mantar Violence - ಜಂತರ್ ಮಂತರ್ ಗಲಭೆ - 100ಕ್ಕೂ ಹೆಚ್ಚು ಪೊಲೀಸರಿಗೆ ಗಾಯ, SITಯಿಂದ ತನಿಖೆ ಚುರುಕು

ದೆಹಲಿಯ ಜಂತರ್ ಮಂತರ್ ಬಳಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, 100ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಈ ಸಂಬಂಧ ದೆಹಲಿ ಪೊಲೀಸರು ದೊಡ್ಡ ಮಟ್ಟದ ತನಿಖೆ ಆರಂಭಿಸಿದ್ದಾರೆ. ವಿಶೇಷ ತನಿಖಾ ತಂಡ (SIT) 250ಕ್ಕೂ ಹೆಚ್ಚು ವಿಡಿಯೋಗಳನ್ನು ಪರಿಶೀಲಿಸುತ್ತಿದ್ದಾರೆ. ಯಾವ್ಯಾವ ಪ್ರಕರಣ ದಾಖಲು?

Read Full Story

02:58 PM (IST) Jul 21

ಎಣ್ಣೆ ಪಾರ್ಟಿ ಮಾಡುವಾಗ ಸೈಡ್ಸ್‌ಗೆ ಈ 4 ಐಟಂ ಅಪ್ಪಿತಪ್ಪಿಯೂ ತಿನ್ಬೇಡಿ..! ಯಾಕಂದ್ರೆ, ಈ ವಿಚಾರ ನಿಮಗೆ ಗೊತ್ತಿರಲಿ

ಮದ್ಯಪಾನ ಮಾಡುವಾಗ ಹಲವರು ಸೈಡ್ಸ್ ಆಗಿ ಸಿಹಿ ತಿನಿಸು, ಮಸಾಲೆ ಪದಾರ್ಥ, ಪಿಜ್ಜಾ ಮತ್ತು ಕರಿದ ಬೀನ್ಸ್ ಸೇವಿಸುತ್ತಾರೆ. ಆದರೆ, ಈ ಆಹಾರಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿ, ಜೀರ್ಣಕ್ರಿಯೆ ಸಮಸ್ಯೆ, ಗ್ಯಾಸ್ಟ್ರಿಕ್ ಮತ್ತು ಎದೆಯುರಿಯಂತಹ ತೊಂದರೆಗಳನ್ನು ಉಂಟುಮಾಡಬಹುದು.
Read Full Story

02:22 PM (IST) Jul 21

ಫೀನಿಕ್ಸ್‌ನಂತೆ ಎದ್ದ ಟೀಮ್‌ ಸ್ಪ್ಯಾನಿಶ್‌! ಇದು ಕೇವಲ ವಿಶ್ವಕಪ್ ಗೆಲುವಲ್ಲ, ದಶಕದ ನಿರಾಸೆ ಬಳಿಕ ಮತ್ತೆ ವಿಶ್ವ ಫುಟ್ಬಾಲ್‌ನ ಶಿಖರಕ್ಕೇರಿದ ಕಥೆ

2010ರ ವಿಶ್ವಕಪ್ ಗೆಲುವಿನ ಬಳಿಕ ಪಾತಾಳಕ್ಕೆ ಕುಸಿದಿದ್ದ ಸ್ಪೇನ್ ಫುಟ್ಬಾಲ್ ತಂಡವು ಇದೀಗ ಮತ್ತೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೋಚ್ ಲೂಯಿಸ್ ಡೆ ಲಾ ಫ್ಯುಂಟೆ ಅವರ ಮಾರ್ಗದರ್ಶನದಲ್ಲಿ, ಯುವ ಆಟಗಾರರೊಂದಿಗೆ ತಂಡವು ತನ್ನ ಗತವೈಭವವನ್ನು ಮರಳಿ ಪಡೆದು ಫುಟ್ಬಾಲ್ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದಿದೆ.
Read Full Story

01:28 PM (IST) Jul 21

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೊ ಬಳಸಿ ಬೆಂಗಳೂರಿನ ಹಿರಿಯ ನಾಗರಿಕನಿಗೆ ₹6.88 ಲಕ್ಷ ದೋಖಾ!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಡೀಪ್‌ಫೇಕ್ ವಿಡಿಯೋ ಬಳಸಿ ಸೈಬರ್ ವಂಚಕರು ಬೆಂಗಳೂರಿನ ಹಿರಿಯ ನಾಗರಿಕರೊಬ್ಬರಿಗೆ ₹6.88 ಲಕ್ಷ ವಂಚಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಕಂಡ ನಕಲಿ ಹೂಡಿಕೆ ಯೋಜನೆಯನ್ನು ನಂಬಿ ಹಣ ಕಳೆದುಕೊಂಡ ಸಂತ್ರಸ್ತರು ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

01:11 PM (IST) Jul 21

The Odyssey Movie - ಭಾರತದಲ್ಲಿ ದಾಖಲೆ ಮಟ್ಟದಲ್ಲಿ ಕಲೆಕ್ಷನ್‌ ಮಾಡ್ತಿರೋ ನೋಲನ್‌ ಸಿನಿಮಾ! ಏನ್ರೀ ಇದು..!

The odyssey box office collection : ಕ್ರಿಸ್ಟೋಫರ್ ನೋಲನ್ ನಿರ್ದೇಶನದ 'ದಿ ಒಡಿಸ್ಸಿ' ಸಿನಿಮಾ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಕೇವಲ 4 ದಿನಗಳಲ್ಲಿ 80 ಕೋಟಿ ರೂಪಾಯಿ ಕಲೆಕ್ಷನ್ ದಾಟಿದೆ. ಗಳಿಕೆ ಕುಸಿದಿದ್ದರೂ, ಮ್ಯಾಟ್ ಡ್ಯಾಮನ್ ನಟನೆಯ ಈ ಚಿತ್ರ ಥಿಯೇಟರ್‌ಗಳಲ್ಲಿ ಪ್ರಾಬಲ್ಯ ಮುಂದುವರಿಸಿದೆ.

Read Full Story

01:08 PM (IST) Jul 21

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಡಿಜಿಟಲ್ ಕ್ರಾಂತಿ - ಇನ್ನು ಮೊಬೈಲಲ್ಲೇ ಸಿಗಲಿದೆ ಟೋಲ್ ಪಾಸ್!

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) 'ರಾಜಮಾರ್ಗಯಾತ್ರಾ' ಆ್ಯಪ್‌ನಲ್ಲಿ ಎರಡು ಹೊಸ ಸೌಲಭ್ಯಗಳನ್ನು ಪರಿಚಯಿಸಿದೆ. ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಆನ್‌ಲೈನ್ 'ಸ್ಥಳೀಯ ಪಾಸ್' ಮತ್ತು 22 ಭಾಷೆಗಳಲ್ಲಿ ಸಹಾಯ ನೀಡುವ 'ಮಾರ್ಗ್‌ಮಿತ್ರ' ಎಐ ಸಹಾಯವಾಣಿಯನ್ನು ಆರಂಭಿಸಿದೆ. ಈ ಸ್ಥಳೀಯ ಪಾಸ್ ಮೂಲಕ ₹350ಕ್ಕೆ ತಿಂಗಳಿಡೀ ಅನಿಯಮಿತವಾಗಿ ಪ್ರಯಾಣಿಸಬಹುದು.
Read Full Story

01:01 PM (IST) Jul 21

ಇವರ ಮಗು ಅವರಿಗೆ, ಅವರ ಮಗು ಇವರಿಗೆ - 38 ವರ್ಷಗಳ ಬಳಿಕ ಬಯಲಾಯ್ತು ಆ ಸತ್ಯ! ಮುಂದೇನಾಯ್ತು

1988ರಲ್ಲಿ ಅಮೆರಿಕದ ಆಸ್ಪತ್ರೆಯೊಂದರಲ್ಲಿ ಅದಲು ಬದಲಾಗಿದ್ದ ಇಬ್ಬರು ಮಕ್ಕಳು, 38 ವರ್ಷಗಳ ನಂತರ ಡಿಎನ್ಎ ಪರೀಕ್ಷೆಯ ಮೂಲಕ ಸತ್ಯವನ್ನು ಕಂಡುಕೊಂಡಿದ್ದಾರೆ. ಈ ಆಘಾತಕಾರಿ ಘಟನೆಯಿಂದ ಎರಡೂ ಕುಟುಂಬಗಳು ಆಸ್ಪತ್ರೆಯ ವಿರುದ್ಧ ನಿರ್ಲಕ್ಷ್ಯದ ಆರೋಪ ಹೊರಿಸಿ ದಾವೆ ಹೂಡಿವೆ.
Read Full Story

12:34 PM (IST) Jul 21

ಸ್ಮೃತಿ ಮಂದಾನ ನೋಡಿ ದಂಗಾದ ಆರ್‍‌ಸಿಬಿ ಫ್ಯಾನ್ಸ್.. ಈಗ ಅವರು Super Giant ತಂಡದ ಉಪನಾಯಕಿ

ಸದ್ಯ ಸ್ಮೃತಿ ಮಂದಾನಾ ಅವರು ಧರಿಸಿರುವ ಜರ್ಸಿ ನೋಡಲು ಅಚ್ಚಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಜರ್ಸಿಯಂತೆಯೇ ಇದೆ. ಇದನ್ನು ನೋಡಿದ ಅಭಿಮಾನಿಗಳು, ನಮ್ಮ ಕ್ವೀನ್ ಆರ್‌ಸಿಬಿಗೆ ಕೈಕೊಟ್ಟು ಎಲ್‌ಎಸ್‌ಜಿ ಸೇರಿಬಿಟ್ರಾ? ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Read Full Story

12:34 PM (IST) Jul 21

ರೈಲ್ವೆ ಟಿಕೆಟ್ ವರ್ಗಾಯಿಸಲು ಅವಕಾಶ - ಸಾಮಾನ್ಯರಿಗೆ, ಸರ್ಕಾರಿ ನೌಕರರಿಗೆ, ವಿದ್ಯಾರ್ಥಿಗಳಿಗೆ ಹೀಗಿದೆ ರೂಲ್ಸ್​

ದೃಢೀಕೃತ ರೈಲ್ವೆ ಟಿಕೆಟ್​ ಹೊಂದಿದ್ದು, ಪ್ರಯಾಣಿಸಲು ಸಾಧ್ಯವಾಗದಿದ್ದರೆ, ಅದನ್ನು ನಿಮ್ಮ ರಕ್ತ ಸಂಬಂಧಿಗಳಿಗೆ ವರ್ಗಾಯಿಸಬಹುದು. ರೈಲು ಹೊರಡುವ 24 ಗಂಟೆಗಳ ಮೊದಲು, ಸಮೀಪದ ಮೀಸಲಾತಿ ಕೌಂಟರ್​ಗೆ ಖುದ್ದಾಗಿ ಭೇಟಿ ನೀಡಿ, ಲಿಖಿತ ಅರ್ಜಿ ಸಲ್ಲಿಸುವ ಮೂಲಕ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಸರ್ಕಾರಿ ನೌಕರರು ಮತ್ತು ವಿದ್ಯಾರ್ಥಿಗಳಿಗೆ ಪ್ರತ್ಯೇಕ ನಿಯಮಗಳಿವೆ.
Read Full Story

12:26 PM (IST) Jul 21

Yash Toxic Movie - ಕಿಯಾರಾ ಅಡ್ವಾಣಿ ಬಳಿಕ ತಾರಾ ಸುತಾರಿಯಾ, ನಯನತಾರಾ ಜೊತೆಯೂ ಯಶ್‌ ರೊಮ್ಯಾನ್ಸ್!‌ ಏನ್ರೀ..ಕಥೆ ಇದು

Actor Yash Toxic Movie: ನಟ ಯಶ್‌ ಅವರು ‘ಟಾಕ್ಸಿಕ್’‌ ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರದ ಎರಡನೇ ಹಾಡು ರಿಲೀಸ್‌ ಆಗಿದೆ. ಮನಮೋಹಕ ಎಂಬ ಹಾಡು ರಿಲೀಸ್‌ ಆಗಿದೆ. ಈ ಹಾಡಿನಲ್ಲಿ ಕೂಡ ಅವರು ನಟಿ ತಾರಾ ಸುತಾರಿಯಾ ಜೊತೆ ರೊಮ್ಯಾನ್ಸ್‌ ಮಾಡಿದ್ದಾರೆ.

Read Full Story

12:23 PM (IST) Jul 21

ಸಂಕಷ್ಟದಲ್ಲಿದ್ದ ಪಿವಿ ಸಿಂಧುಗೆ ಕೊಹ್ಲಿ ನೀಡಿದ ಒಂದು ಸಲಹೆ, 2 ವರ್ಷ ಬಳಿಕ ಕಮ್‌ಬ್ಯಾಕ್ ಮಾಡಿ ಪ್ರಶಸ್ತಿ ಗರಿ

ಕಳೆದೆರಡು ವರ್ಷಗಳಿಂದ ಪಿವಿ ಸಿಂಧು ಸೋಲು, ಇಂಜುರಿಗಳಿಂದ ಸಂಕಷ್ಟ ಅನುಭವಿಸಿದ್ದಾರೆ. ಮದುವೆಯೊಂದಿಗೆ ಸಿಂಧು ಕರಿಯರ್ ಮುಗೀತು ಎಂದವರೆ ಹೆಚ್ಚು. ಆದರೆ ವಿರಾಟ್ ಕೊಹ್ಲಿ ನೀಡಿದ ಒಂದು ಸಲಹೆಯಿಂದ ಇದೀಗ ಸಿಂಧು ಐತಿಹಾಸಿಕ ಸಾಧನೆ ಮಾಡಿದ್ದಾರೆ

Read Full Story

More Trending News