MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Bengaluru Weather Today
Kasturi Rangan Report
Karnataka Kodava Language
Wife Appreciation Day
Milk Price Hike Karnataka
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Sports
  • Cricket
  • ಟೀಂ ಇಂಡಿಯಾದಿಂದ ಹೊರಗುಳಿದಿರುವ ಚಹಲ್‌ರಿಂದ ಮಹತ್ವದ ನಿರ್ಧಾರ! ಈಗ ಈ ತಂಡ ಕೂಡಿಕೊಂಡು ವಿದೇಶದಲ್ಲಿ ಮಿಂಚಲು ರೆಡಿಯಾದ ಸ್ಟಾರ್ ಸ್ಪಿನ್ನರ್

ಟೀಂ ಇಂಡಿಯಾದಿಂದ ಹೊರಗುಳಿದಿರುವ ಚಹಲ್‌ರಿಂದ ಮಹತ್ವದ ನಿರ್ಧಾರ! ಈಗ ಈ ತಂಡ ಕೂಡಿಕೊಂಡು ವಿದೇಶದಲ್ಲಿ ಮಿಂಚಲು ರೆಡಿಯಾದ ಸ್ಟಾರ್ ಸ್ಪಿನ್ನರ್

ಬೆಂಗಳೂರು: ಟೀಂ ಇಂಡಿಯಾ ಅನುಭವಿ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ ಸಾಕಷ್ಟು ಸಮಯದಿಂದ ಭಾರತ ತಂಡದಿಂದ ಹೊರಗುಳಿಯುತ್ತಲೇ ಬಂದಿದ್ದಾರೆ. ಇದೀಗ ಯುಜಿ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ವಿದೇಶದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

2 Min read
Author : Naveen Kodase
Published : Jul 21 2026, 05:27 PM IST
Share this Photo Gallery
  • FB
  • TW
  • Linkdin
  • Whatsapp
16
2024ರಿಂದೀಚೆಗೆ ಟೀಂ ಇಂಡಿಯಾದಿಂದ ಹೊರಗುಳಿದಿರುವ ಚಹಲ್
Image Credit : X

2024ರಿಂದೀಚೆಗೆ ಟೀಂ ಇಂಡಿಯಾದಿಂದ ಹೊರಗುಳಿದಿರುವ ಚಹಲ್

ಟೀಂ ಇಂಡಿಯಾ ಲೆಗ್‌ ಸ್ಪಿನ್ನರ್ ಯುಜುವೇಂದ್ರ ಚಹಲ್ 2023ರಲ್ಲಿ ಕೊನೆಯ ಬಾರಿಗೆ ಭಾರತ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದರು. ಇದಾದ ಬಳಿಕ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರಾದರೂ, ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕ್ರಿಕೆಟ್ ವೃತ್ತಿಜೀವನದಲ್ಲಿ ಚಹಲ್ ಮಹತ್ವದ ನಿರ್ಧಾರ
Image Credit : X/Yuzvendra Chahal

ಕ್ರಿಕೆಟ್ ವೃತ್ತಿಜೀವನದಲ್ಲಿ ಚಹಲ್ ಮಹತ್ವದ ನಿರ್ಧಾರ

2024ರಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ತಮ್ಮ ಸ್ಥಾನವನ್ನು ಭಾರತ ತಂಡದಲ್ಲಿ ಭದ್ರಪಡಿಸಿಕೊಂಡಿದ್ದು, ಚಹಲ್ ಕೇವಲ ಐಪಿಎಲ್‌ಗಷ್ಟೇ ಸೀಮಿತ ಎನಿಸಿಕೊಂಡಿದ್ದಾರೆ. ಇದೀಗ ಚಹಲ್ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ವಿದೇಶಿದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

Related Articles

Related image1
ಟೀಂ ಇಂಡಿಯಾ ಸೋಲಿಗೆ ಚೇಸ್‌ ಮಾಸ್ಟರ್ ವಿರಾಟ್ ಕೊಹ್ಲಿ ಮಂದಗತಿಯ ಬ್ಯಾಟಿಂಗ್ ಕಾರಣನಾ? ಇರ್ಫಾನ್ ಪಠಾಣ್ ಹೇಳಿದ್ದೇನು?
Related image2
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತೆ ಟೀಂ ಇಂಡಿಯಾ ಪರ ಮೈದಾನಕ್ಕಿಳಿಯೋದು ಯಾವಾಗ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
36
ನಾರ್ಥ್‌ಹ್ಯಾಂಪ್ಟನ್‌ಶೈರ್ ಕೌಂಟಿ ಕ್ಲಬ್ ಪರ ಚಹಲ್ ಕಣಕ್ಕೆ
Image Credit : ANI

ನಾರ್ಥ್‌ಹ್ಯಾಂಪ್ಟನ್‌ಶೈರ್ ಕೌಂಟಿ ಕ್ಲಬ್ ಪರ ಚಹಲ್ ಕಣಕ್ಕೆ

ಹೌದು, 35 ವರ್ಷದ ಚಹಲ್ ಇದೀಗ ಮತ್ತೊಮ್ಮೆ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಲೆಗ್ ಸ್ಪಿನ್ನರ್ ಚಹಲ್ 2026ರ ದ್ವಿತಿಯಾರ್ಧದಲ್ಲಿ ನಾರ್ಥ್‌ಹ್ಯಾಂಪ್ಟನ್‌ಶೈರ್ ಕೌಂಟಿ ಕ್ಲಬ್ ಪರ ಮೈದಾನಕ್ಕಿಳಿಯುವ ನಿರ್ಧಾರ ಮಾಡಿದ್ದಾರೆ. ಈ ಮೊದಲು ಚಹಲ್ 2024 ಹಾಗೂ 2025ರಲ್ಲಿ ನಾರ್ಥ್‌ಹ್ಯಾಂಪ್ಟನ್‌ಶೈರ್ ಪರ ಕೌಂಟಿ ಕ್ರಿಕೆಟ್ ಆಡಿ ಮಿಂಚಿದ್ದಾರೆ.

46
ಕೌಂಟಿ ಒನ್‌ ಡೇ ಕಪ್ ಟೂರ್ನಿಯಲ್ಲಿ ಯುಜಿ ಭಾಗಿ
Image Credit : Getty

ಕೌಂಟಿ ಒನ್‌ ಡೇ ಕಪ್ ಟೂರ್ನಿಯಲ್ಲಿ ಯುಜಿ ಭಾಗಿ

ಇನ್ನು ಯುಜುವೇಂದ್ರ ಚಹಲ್ ಈ ಬಾರಿ ಕೌಂಟಿ ಕ್ರಿಕೆಟ್‌ ಚಾಂಪಿಯನ್‌ಶಿಪ್ ಜತೆಜತೆಗೆ ಏಕದಿನ ಮಾದರಿಯ ಟೂರ್ನಿಯಲ್ಲೂ ಕಣಕ್ಕಿಳಿಯಲಿದ್ದಾರೆ. ಕೌಂಟಿ ಒನ್‌ ಡೇ ಕಪ್ ಟೂರ್ನಿಯು ಜುಲೈ 21ರಿಂದ ಆರಂಭವಾಗಲಿದೆ. ಈಗಾಗಲೇ ಯುಜುವೇಂದ್ರ ಚಹಲ್ ತಮ್ಮ ಕೌಂಟಿ ತಂಡದ ಜತೆಗೆ ಭರ್ಜರಿ ಅಭ್ಯಾಸವನ್ನೂ ಆರಂಭಿಸಿದ್ದಾರೆ.

56
ಇಂಗ್ಲೆಂಡ್‌ ಪಿಚ್‌ನಲ್ಲಿ ಚಹಲ್ ಅದ್ಭುತ ಟ್ರ್ಯಾಕ್ ರೆಕಾರ್ಡ್ಸ್:
Image Credit : our own

ಇಂಗ್ಲೆಂಡ್‌ ಪಿಚ್‌ನಲ್ಲಿ ಚಹಲ್ ಅದ್ಭುತ ಟ್ರ್ಯಾಕ್ ರೆಕಾರ್ಡ್ಸ್:

ಸಾಮಾನ್ಯವಾಗಿ ಇಂಗ್ಲೆಂಡ್‌ ಪಿಚ್ ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತದೆ ಎನ್ನುವುದು ವಾಡಿಕೆಯಾಗಿದೆ. ಆದರೆ ಚಹಲ್ ಇಂಗ್ಲೆಂಡ್ ಪಿಚ್‌ನಲ್ಲೇ ತಮ್ಮ ಅದ್ಭುತ ಸ್ಪಿನ್ ಬೌಲಿಂಗ್ ಮೂಲಕ ತಮ್ಮ ಕೈಚಳಕ ತೋರಿಸಿದ್ದಾರೆ. ನಾರ್ಥ್‌ಹ್ಯಾಂಪ್ಟನ್‌ಶೈರ್ ಪರ ಕಳೆದೆರಡು ಸೀಸನ್ ಕೌಂಟಿ ಕ್ರಿಕೆಟ್‌ನಲ್ಲಿ ಚಹಲ್ 31 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

66
ಚಹಲ್ ಕ್ರಿಕೆಟ್ ವೃತ್ತಿಜೀವನದ ಟ್ರ್ಯಾಕ್ ರೆಕಾರ್ಡ್‌:kV
Image Credit : our own

ಚಹಲ್ ಕ್ರಿಕೆಟ್ ವೃತ್ತಿಜೀವನದ ಟ್ರ್ಯಾಕ್ ರೆಕಾರ್ಡ್‌:kV

ಯುಜುವೇಂದ್ರ ಚಹಲ್‌ ಜಗತ್ತಿನ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಚಹಲ್ ಭಾರತ ಪರ 72 ಏಕದಿನ ಹಾಗೂ 80 ಟಿ20 ಪಂದ್ಯಗಳನ್ನಾಡಿದ್ದಾರೆ. ಎರಡೂ ಮಾದರಿಯಿಂದ ಚಹಲ್ ಒಟ್ಟಾರೆ 217 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಚಹಲ್, ಆರ್‌ಸಿಬಿ, ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪರ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಯುಜ್ವೇಂದ್ರ ಚಹಲ್
ಟೀಮ್ ಇಂಡಿಯಾ
ಇಂಗ್ಲೆಂಡ್ ಕ್ರಿಕೆಟ್
 

Latest Videos
Recommended Stories
Recommended image1
ಕೃನಾಲ್, ಭುವಿ, ಪಾಟೀದಾರ್ ಮಾಡಿದ ಅಪರಾಧ ಏನು? ಬಿಸಿಸಿಐ ಹೆಂಗೆಲ್ಲ ದ್ರೋಹ ಮಾಡ್ತಿದೆ ನೋಡಿ..
Recommended image2
ಐಪಿಎಲ್ ಟೈಟಲ್ ಸ್ಪಾನ್ಸರ್ ಶಾಪ, ಡಿಎಲ್ಎಫ್, ಪೆಪ್ಸಿ, ವಿವೋ, ಡ್ರೀಮ್11 ಸಾಲಿಗೆ ಸೇರಿತಾ ಟಾಟಾ?
Recommended image3
10,120 ರನ್, 38 ಶತಕ, 67ರ ಸರಾಸರಿ! ಭಾರತಕ್ಕೆ ಆಡಿದ್ದು ಒಂದೇ ಟೆಸ್ಟ್ – ಅಜರ್ ಜೊತೆ ಬ್ಯಾನ್ ಆದ ದಿಗ್ಗಜನ ಕಥೆ!
Related Stories
Recommended image1
ಟೀಂ ಇಂಡಿಯಾ ಸೋಲಿಗೆ ಚೇಸ್‌ ಮಾಸ್ಟರ್ ವಿರಾಟ್ ಕೊಹ್ಲಿ ಮಂದಗತಿಯ ಬ್ಯಾಟಿಂಗ್ ಕಾರಣನಾ? ಇರ್ಫಾನ್ ಪಠಾಣ್ ಹೇಳಿದ್ದೇನು?
Recommended image2
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತೆ ಟೀಂ ಇಂಡಿಯಾ ಪರ ಮೈದಾನಕ್ಕಿಳಿಯೋದು ಯಾವಾಗ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved