ಕೇವಲ ನಾಲ್ಕೇ ಆರು ಗಂಟೆಯಲ್ಲಿ ಬೆಂಗಳೂರಿನಿಂದ ವಿಜಯವಾಡ ತಲಪಲು ಸಾಧ್ಯ. ಸದ್ಯ ರಸ್ತೆ ಮೂಲಕ ಸಾಗಲು 11 ಗಂಟೆ ಸಮಯ ಬೇಕು. ಆದರೆ ಹೊಸ ಎಕ್ಸ್‌ಪ್ರೆಸ್‌ವೇ ಮೂಲಕ ಕೇವಲ ಆರು ಗಂಟೆ ಸಾಕು. ಇಷ್ಟೇ ಅಲ್ಲ ಈ ಎಕ್ಸ್‌ಪ್ರೆಸ್‌ವೆ ರಾಷ್ಟ್ರೀಯ ಹೆದ್ದಾರಿ 44 ಹಾಗೂ 16ಕ್ಕೆ ಲಿಂಕ್ ಮಾಡಲಾಗುತ್ತಿದೆ.
ಬೆಂಗಳೂರು (ಜು.21) ಭಾರತದಲ್ಲಿ ಎಕ್ಸ್‌ಪ್ರೆಸ್ ವೇ ಮೂಲಕ ಸಾರಿಗೆ ಸಂಪರ್ಕದಲ್ಲಿ ಮಹತ್ತರ ಬದಲಾವಣೆ ಹಾಗೂ ಕ್ರಾಂತಿ ಮಾಡಲಾಗುತ್ತಿದೆ. ಸಂಚಾರ ದಟ್ಟಣೆ ಮಾತ್ರವಲ್ಲ, ಟ್ರಾಫಿಕ್ ಕಿರಿಕಿರಿ ಇಲ್ಲದೆ ಅತೀ ಕಡಿಮೆ ಸಮಯದಲ್ಲಿ, ಅತೀ ಕಡಿಮೆ ಇಂಧನದಲ್ಲಿ ಗುರಿ ತಲುಪಲು ಸಾಧ್ಯವಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಆಂಧ್ರ ಪ್ರದೇಶದ ವಿಜಯವಾಡ ನಗರಕ್ಕೆ ಹೊಸ ಎಕ್ಸ್‌ಪ್ರೆಸ್‌ವೇ ಮೂಲಕ ಕೇವಲ ನಾಲ್ಕು ಗಂಟೆ ಸಾಕು. 624 ಕಿಲೋಮೀಟರ್ ದೂರದ ಎರಡು ನಗರಗಳ ಸಂಪರ್ಕಕ್ಕೆ ಸದ್ಯ 11 ಗಂಟೆ ಸಮಯಬೇಕು. ಆದರೆ ಹೊಸ ಎಕ್ಸ್‌ಪ್ರೆಸ್‌ವೇ ಮೂಲಕ 6 ರಿಂದ 8 ಗಂಟೆಯಲ್ಲಿ ತಲಪಬಹುದು. ಬೆಂಗಳೂರು ವಿಜಯವಾಡ ಹೊಸ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಪೂರ್ಣಗೊಂಡರೆ ಸಾರಿಗೆ ಸಂಪರ್ಕ ಅತೀ ಸುಲಭ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದೆ.
ಸದ್ಯ ಪ್ರಯಾಣ ಅವಧಿ 11 ರಿಂದ 12 ಗಳಾಗಿದ್ದರೆ, ಹೊಸ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡರೆ ಪ್ರಯಾಣದ ಅವಧಿಯಲ್ಲಿ 4 ಗಂಟೆಗಳು ಕಡಿತಗೊಳ್ಳಲಿದೆ. ಇದರಿಂದ ಎರಡು ನಗರಗಳ ನಡುವಿನ ಸಂಪರ್ಕ, ಸರಕು ಸಾಗಾಣೆ ಅತ್ಯಂತ ಸುಲಭವಾಗಲಿದೆ. ಕಾಮಗಾರಿಗಳು ನಡೆಯುತ್ತಿದ್ದು, ಹಂತ ಹಂತವಾಗಿ ಹೆದ್ದಾರಿ ಕಾರ್ಯ ಪೂರ್ಣಗೊಳ್ಳಲಿದೆ.
ಎರಡು ರಾಷ್ಟ್ರೀಯ ಹೆದ್ದಾರಿ ಜೊತೆ ಜೋಡಣೆ
ಬೆಂಗಳೂರು ವಿಜಯವಾಡ ಎಕ್ಸ್‌ಪ್ರೆಸ್‌ವೇ ಹೆದ್ದಾರಿಯನ್ನು ಪ್ರಮುಖ ಎರಡು ರಾಷ್ಟ್ರೀಯ ಹೆದ್ದಾರಿ ಜೊತೆ ಜೋಡಿಸಲಾಗುತ್ತದೆ. NH-44 ಬೆಂಗಳೂರು - ಹೈದರಾಬಾದ್ ಹಾಗೂ NH-16 ಚೆನ್ನೈ - ವಿಜಯವಾಡ ಹೆದ್ದಾರಿಗಳಿಗೆ ಲಿಂಕ್ ಮಾಡಲಾಗುತ್ತದೆ. ಇದರಿಂದ ದಕ್ಷಿಣ ಪ್ರಮುಖ ಮೂರು ನಗರಗಳ ಸಂಪರ್ಕ ಕಲ್ಪಿಸುವ ರಸ್ತೆಯಾಗಿ ಹೊರಹೊಮ್ಮಲಿದೆ.
ಬರೋಬ್ಬರಿ 19 ಸಾವಿರ ಕೋಟಿ ರೂಪಾಯಿ ಯೋಜನೆ
ಬರೋಬ್ಬರಿ 19 ಸಾವಿರ ಕೋಟಿ ರೂಪಾಯಿ ಯೋಜನೆಯ ಈ ಹೆದ್ದಾರಿ ಭಾರತದ ಅತ್ಯಂತ ದುಬಾರಿ ರಸ್ತೆಗಳಲ್ಲಿ ಒಂದಾಗಿದೆ. 624 ಕಿಲೋಮೀಟರ್ ದೂರದ ಪ್ರಯಾಣವನ್ನು ಹೊಸ ರಸ್ತೆ 343 ಕಿಲೋಮೀಟರ್‌ಗೆ ಇಳಿಸಲಿದೆ. ಕೈಗಾರಿಗೆಳಿಗೆ ಉತ್ತೇಜನ ಸಿಗಲಿದೆ. ಇಧರಿಂದ ಆರ್ಥಿಕತೆಗೂ ನೆರವಾಗಲಿದೆ.


