ಇರಾನ್ ಇಸ್ರೇಲ್ ನಡುವಿನ ಯುದ್ದ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಲೈವ್ ಮೂಲಕ ಪ್ರತ್ಯಕ್ಷಗೊಂಡ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಸಾವಿನ ಊಹಾಪೋಹಳಿಗೆ ತೆರೆ ಎಳೆದಿದ್ದಾರೆ. ಇಷ್ಟೇ ಅಲ್ಲ ಯುದ್ಧ ಮುಂದುವರಿಸುವ ಕುರಿತು ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಜನರ ಊಹೆಗೂ ಮೀರಿದ ವೇಗದಲ್ಲಿ ಯುದ್ಧ ಅಂತ್ಯಗೊಳ್ಳಲಿದೆ ಎಂದಿದ್ದಾರೆ. ಅಮೆರಿಕ ಜೊತೆ ಇಸ್ರೇಲ್ ನಡೆಸುತ್ತಿರುವ ಜಂಟಿ ಕಾರ್ಯಾಚರಣೆ 20 ದಿನಕ್ಕೆ ಕಾಲಿಟ್ಟಿದೆ. ಇದರ ಬೆನ್ನಲ್ಲೇ ಯುದ್ದ ಅಂತ್ಯಗೊಳಿಸುವ ಸೂಚನೆ ನೀಡಿದ್ದಾರೆ. ಭಾರತದಲ್ಲಿ ಯುದ್ಧದಿಂದ ಗ್ಯಾಸ್, ಇಂಧನ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿದೆ. ಜೊತೆಗೆ ಪಂಚ ರಾಜ್ಯ ಚುನಾವಣೆ ಸೇರಿದಂತೆ ದೇಶ ವಿದೇಶಗಳ ಲೈವ್ ಅಪ್‌ಡೇಟ್ ಇಲ್ಲಿದೆ.

11:01 PM (IST) Mar 20
10:52 PM (IST) Mar 20
ಕೇರಳದ ರೈಲ್ವೇ ನಿಲ್ದಾಣದಲ್ಲಿ ಬುರ್ಖಾ ಧರಿಸಿದ್ದ ಯಾಸ್ಮಿನ್ ಎಂಬ ಯುವತಿಯ ಮುಂದೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಘಟನೆಯನ್ನು ಧೈರ್ಯವಾಗಿ ಚಿತ್ರೀಕರಿಸಿದ ಯುವತಿ, 'ದೌರ್ಜನ್ಯಕ್ಕೆ ಬಟ್ಟೆಯೇ ಕಾರಣ' ಎನ್ನುವವರಿಗೆ ಉತ್ತರ ನೀಡಲು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
10:46 PM (IST) Mar 20
10:30 PM (IST) Mar 20
ನಂದಮೂರಿ ಬಾಲಕೃಷ್ಣ ಅವರು 'ಸಿಂಹ' ಹೆಸರಿನಲ್ಲಿ ಹಲವು ಸಿನಿಮಾ ಮಾಡಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಹಿಟ್ ಆಗಿವೆ. ಆದರೆ, ತಮ್ಮ ತಂದೆ ಎನ್‌ಟಿಆರ್ ಜೊತೆ ನಟಿಸಿದ್ದ ಒಂದು ಸಿನಿಮಾ ಮಾತ್ರ ಫ್ಲಾಪ್ ಆಗಿತ್ತು. ಈಗ ಅದೇ ಸಿನಿಮಾ ಬಗ್ಗೆ ಬಾಲಯ್ಯ ತಮಾಷೆ ಮಾಡಿದ್ದಾರೆ.
10:27 PM (IST) Mar 20
ಸೌರಮಂಡಲವು ಪಠ್ಯಪುಸ್ತಕಗಳಲ್ಲಿ ವಿವರಿಸುವುದಕ್ಕಿಂತ ಹೆಚ್ಚು ವಿಚಿತ್ರ ಮತ್ತು ಕ್ರಿಯಾತ್ಮಕವಾಗಿದೆ. ಶುಕ್ರ ಗ್ರಹದ ಅತಿಯಾದ ತಾಪಮಾನ, ನೆಪ್ಚೂನ್‌ನಲ್ಲಿ ವಜ್ರದ ಮಳೆ, ಮತ್ತು ಸೂರ್ಯನು ಸೌರಮಂಡಲದ ಬಹುತೇಕ ದ್ರವ್ಯರಾಶಿಯನ್ನು ಹೊಂದಿರುವುದು ಸೇರಿದಂತೆ ಹಲವು ನಂಬಲಾಗದ ರಹಸ್ಯ ಇಲ್ಲಿದೆ.
09:21 PM (IST) Mar 20
ಓರಲ್ ಸೆ*ಕ್ಸ್ ಮೂಲಕ ಹರಡುವ ಹ್ಯೂಮನ್ ಪ್ಯಾಪಿಲೋಮಾ ವೈರಸ್ (HPV) ಬಾಯಿ ಮತ್ತು ಗಂಟಲಿನ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ಇತ್ತೀಚಿನ ಅಧ್ಯಯನಗಳು ದೃಢಪಡಿಸಿವೆ. ಈ ಅಪಾಯವನ್ನು ತಗ್ಗಿಸಲು, ಆರೋಗ್ಯ ತಜ್ಞರು ಕಾಂಡೋಮ್ ಮತ್ತು 'ಡೆಂಟಲ್ ಡ್ಯಾಮ್'ಗಳಂತಹ ಸುರಕ್ಷತಾ ಕ್ರಮಗಳನ್ನು ಬಳಸಲು ಶಿಫಾರಸು ಮಾಡಿದ್ದಾರೆ.
08:47 PM (IST) Mar 20
08:41 PM (IST) Mar 20
08:39 PM (IST) Mar 20
ತಮ್ಮ ಬಗ್ಗೆ ಹಬ್ಬಿದ್ದ ಗಾಸಿಪ್‌ಗಳಿಗೆ ನಟಿ ಶೋಭಿತಾ ಧೂಳಿಪಾಲ ಬ್ರೇಕ್ ಹಾಕಿದ್ದಾರೆ. ಗದ್ದರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಶೋಭಿತಾ ಬಗ್ಗೆ ಹಬ್ಬಿದ್ದ ಆ ವದಂತಿಗಳು ಯಾವುವು? ಇಲ್ಲಿದೆ ಪೂರ್ತಿ ವಿವರ.
08:24 PM (IST) Mar 20
ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸುರಕ್ಷತೆಗೆ ಸಹಾಯ ಮಾಡದ ನ್ಯಾಟೋ ರಾಷ್ಟ್ರಗಳ ವಿರುದ್ಧ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾಗತಿಕ ತೈಲ ಬೆಲೆ ಏರಿಕೆಗೆ ಮಿತ್ರರಾಷ್ಟ್ರಗಳ ನಿರಾಸಕ್ತಿಯೇ ಕಾರಣ ಎಂದು ದೂಷಣೆ ಮಾಡಿದ್ದಾರೆ.
08:15 PM (IST) Mar 20
ಅಕ್ರಮ ಬಾಡಿಗೆ ತಾಯ್ತನ ಮತ್ತು ಶಿಶು ಮಾರಾಟ ಜಾಲದ ಕುರಿತು ಜಾರಿ ನಿರ್ದೇಶನಾಲಯ (ED) ನಡೆಸಿದ ತನಿಖೆಯಲ್ಲಿ ಭಾರಿ ಹಣಕಾಸು ಅವ್ಯವಹಾರಗಳು ಬೆಳಕಿಗೆ ಬಂದಿವೆ. ಡಾ. ಪಚಿಪಾಲ ನಮೃತಾ ನೇತೃತ್ವದ ಈ ಜಾಲದಲ್ಲಿ ₹40 ಕೋಟಿ ನಗದು ಠೇವಣಿ ಪತ್ತೆಯಾಗಿದ್ದು, ₹29.7 ಕೋಟಿ ಮೌಲ್ಯದ 50ಕ್ಕೂ ಹೆಚ್ಚು ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.
08:06 PM (IST) Mar 20
08:02 PM (IST) Mar 20
ಸಂಜಯ್ ಬಂಗಾರ್ ಅವರ ಪುತ್ರಿ ಅನಾಯಾ ಬಂಗಾರ್, ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಭವಿಷ್ಯದಲ್ಲಿ ತಾಯಿಯಾಗುವ ಕನಸನ್ನು ನನಸಾಗಿಸಲು, ಅವರು ಶಸ್ತ್ರಚಿಕಿತ್ಸೆಗೂ ಮುನ್ನ ತಮ್ಮ ವೀರ್ಯವನ್ನು ಶೇಖರಿಸಿಟ್ಟಿದ್ದು, ಬಾಡಿಗೆ ತಾಯ್ತನದ ಮೂಲಕ ಜೈವಿಕ ಮಗುವನ್ನು ಪಡೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.
07:40 PM (IST) Mar 20
ನಟ ಸೂರ್ಯ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಕರುಪ್ಪು' ರಿಲೀಸ್ ದಿನಾಂಕ ಘೋಷಣೆಯಾಗಿದೆ. ಆರ್.ಜೆ. ಬಾಲಾಜಿ ನಿರ್ದೇಶನದ ಈ ಚಿತ್ರ ಮೇ 14 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.
07:33 PM (IST) Mar 20
ಏರ್ ಇಂಡಿಯಾದ ಅವಾಂತರವೊಂದು ತಡವಾಗಿ ಬೆಳಕಿಗೆ ಬಂದಿದೆ. 300 ಜನರಿದ್ದ ವಿಮಾನವನ್ನು ತಪ್ಪಾಗಿ ಕೆನಡಾಗೆ ಕಳುಹಿಸಿದ್ದರಿಂದ ಆ ವಿಮಾನವೂ 7 ಗಂಟೆಗಳ ಕಾಲ ನಿರಂತರ ಪ್ರಯಾಣ ಮಾಡಿ ಚೀನಾ ಮೂಲಕ ವಾಪಸ್ ಬಂದಿದ್ದು, ಇದರಿಂದ ಏರ್ ಇಂಡಿಯಾಗೆ ಭಾರಿ ನಷ್ಟ ಉಂಟಾಗಿದೆ.
07:03 PM (IST) Mar 20
06:52 PM (IST) Mar 20
06:19 PM (IST) Mar 20
ಅಮೆರಿಕಾ ಇಸ್ರೇಲ್ ನಡುವಣ ಯುದ್ಧ ಸತತ 21ನೇ ದಿನವೂ ಮುಂದುವರೆದಿದೆ. ತನಗೆ ಸಂಬಂಧವಿಲ್ಲದಿದ್ದರೂ ಇರಾನ್ ಮೇಲೆ ಯುದ್ಧಕ್ಕಿಳಿದು ಇಡೀ ಪ್ರಪಂಚದ ಆರ್ಥಿಕತೆಯನ್ನೇ ಬುಡಮೇಲಾಗುವಂತೆ ಮಾಡಿದ ಅಮೆರಿಕಾದ ಈ ವರ್ತನೆ ವಿರುದ್ಧ ಈಗ ಪಾಶ್ಚಿಮಾತ್ಯ ರಾಷ್ಟ್ರಗಳು ಕೂಡ ಸಿಟ್ಟಾಗಿವೆ.
06:07 PM (IST) Mar 20
ಭಾರತದ ಮಾಜಿ ಲೆಗ್ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು 23 ವರ್ಷಗಳ ಕಾಮೆಂಟರಿ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಈ ನಿರ್ಗಮನದ ವೇಳೆ, ಅವರು ಬಿಸಿಸಿಐ ಕಾಮೆಂಟರಿ ಪ್ಯಾನಲ್‌ನಲ್ಲಿ ತಮಗಾದ ವರ್ಣಭೇದ ಮತ್ತು ವ್ಯವಸ್ಥಿತ ಪಕ್ಷಪಾತದ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
06:01 PM (IST) Mar 20
ಪವರ್ ಸ್ಟಾರ್ ಪವನ್ ಕಲ್ಯಾಣ್ ಹೈದರಾಬಾದ್‌ನ ಜೂಬ್ಲಿ ಹಿಲ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ಇದು ದೇಶದ ಅತ್ಯಂತ ದುಬಾರಿ ಸೆಲೆಬ್ರಿಟಿ ಏರಿಯಾಗಳಲ್ಲಿ ಒಂದು. ಸುಮಾರು 6,300 ಚದರ ಅಡಿ ವಿಸ್ತೀರ್ಣದ ಈ ಬಂಗಲೆಯನ್ನು ಅವರು ಎಷ್ಟು ಕೋಟಿಗೆ ಖರೀದಿಸಿದ್ದಾರೆ ಗೊತ್ತಾ?
05:57 PM (IST) Mar 20
05:48 PM (IST) Mar 20
05:43 PM (IST) Mar 20
ಸೂಪರ್ ಸ್ಟಾರ್ ಮಹೇಶ್ ಬಾಬು ಸದ್ಯ ಒಂದು ಸಿನಿಮಾಗೆ 100 ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಜಾಹೀರಾತುಗಳಿಗೂ ಕೋಟಿ ಕೋಟಿ ಚಾರ್ಜ್ ಮಾಡುವ ಮಹೇಶ್ ಬಾಬು ಅವರ ಮೊದಲ ಸಂಬಳ ಎಷ್ಟಿತ್ತು ಗೊತ್ತಾ?
05:17 PM (IST) Mar 20
ಅಮೆರಿಕಾ-ಇರಾನ್ ಸಂಘರ್ಷದ ನಡುವೆ, ಶ್ರೀಲಂಕಾ ತನ್ನ ತಟಸ್ಥ ನೀತಿಯನ್ನು ಪ್ರದರ್ಶಿಸಿದೆ. ತನ್ನ ನೆಲದಲ್ಲಿ ಯುದ್ಧ ವಿಮಾನಗಳನ್ನು ಇಳಿಸಲು ಅಮೆರಿಕಾ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದು, ಇತ್ತೀಚೆಗೆ ಇರಾನ್ ಹಡಗಿನ ಮೇಲಿನ ದಾಳಿಯ ನಂತರವೂ ಮಾನವೀಯ ನೆರವು ನೀಡಿ ಜಗತ್ತಿನ ಗಮನ ಸೆಳೆದಿದೆ.
05:07 PM (IST) Mar 20
ಐಪಿಎಲ್ 18ನೇ ಸೀಸನ್ ಆರಂಭಕ್ಕೂ ಮುನ್ನ, ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್ ಸೊಂಟದ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ನಿಂದ ತಂಡಕ್ಕೆ ಬಂದಿದ್ದ ಕರನ್ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
04:55 PM (IST) Mar 20
ನಿರ್ದೇಶಕ ಪೂರಿ ಜಗನ್ನಾಥ್ ಹೇಳಿದ ಮೂರು ಇಂಡಸ್ಟ್ರಿ ಹಿಟ್ ಕಥೆಗಳನ್ನು ಪವರ್ ಸ್ಟಾರ್ ಪವನ್ ಕಲ್ಯಾಣ್ ಯಾಕೆ ಒಪ್ಪಿಕೊಳ್ಳಲಿಲ್ಲ? ಆ ಸಿನಿಮಾಗಳನ್ನು ಮಾಡಿದ ಸ್ಟಾರ್‌ಗಳು ಯಾರು? ಇಲ್ಲಿದೆ ವಿವರ.
04:53 PM (IST) Mar 20
ಜೊಮಾಟೋ ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು ಶೇ. 19ರಷ್ಟು ಹೆಚ್ಚಿಸಿದ್ದು, ಪ್ರತಿ ಆರ್ಡರ್‌ಗೆ ಈಗ ₹14.90 ಪಾವತಿಸಬೇಕು. ಈ ಬೆಲೆ ಏರಿಕೆಗೆ ಹೆಚ್ಚುತ್ತಿರುವ ಕಾರ್ಯನಿರ್ವಹಣಾ ವೆಚ್ಚಗಳು ಮತ್ತು ಕಚ್ಚಾ ತೈಲ ಬೆಲೆ ಏರಿಕೆಯೇ ಪ್ರಮುಖ ಕಾರಣವೆಂದು ಹೇಳಲಾಗಿದೆ.
04:48 PM (IST) Mar 20
ಇಲ್ಲಿವರೆಗೆ ಬಾಡಿಗೆ ಗಂಡ ಬಾಡಿಗೆ ಹೆಂಡತಿ ಬಾಡಿಗೆ ಸ್ನೇಹಿತ ಎಂಬೆಲ್ಲಾ ಉದ್ಯಮಗಳಿರುವುದರ ಬಗ್ಗೆ ವರದಿಯಾಗಿದ್ದವು. ಆದರೆ ಈಗ ನಮ್ಮ ಭಾರತದಲ್ಲಿ ನಿಮ್ಮ ಕಷ್ಟ ಕೇಳುವ ಉದ್ಯಮವೊಂದನ್ನು ವ್ಯಕ್ತಿಯೊಬ್ಬರು ಸ್ಥಾಪಿಸಿದ್ದು, ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
04:31 PM (IST) Mar 20
ನಟ ವಿಜಯ್ ಮತ್ತು ತ್ರಿಶಾ ವಿವಾದದ ಬಗ್ಗೆ ಮಾತನಾಡಿದ್ದಕ್ಕೇ ಯೂಟ್ಯೂಬರ್‌ಗಳಿಗೆ ಈವರೆಗೆ 100 ಕೋಟಿಗೂ ಹೆಚ್ಚು ಹಣ ಕೈ ಬದಲಾಗಿದೆ ಎಂದು ಕಾಲಿವುಡ್ ಅಂಗಳದಲ್ಲಿ ದೊಡ್ಡ ಸುದ್ದಿಯಾಗುತ್ತಿದೆ.
04:27 PM (IST) Mar 20
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಇಂಡಸ್ಟ್ರಿಯಲ್ ಡೀಸೆಲ್ ಬೆಲೆಯನ್ನು ಶೇ. 25ಕ್ಕಿಂತ ಹೆಚ್ಚು ಹೆಚ್ಚಿಸಿದೆ. ಈ ಕ್ರಮವು ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್‌ನಂತಹ ಕೈಗಾರಿಕೆಗಳ ಇನ್‌ಪುಟ್ ವೆಚ್ಚವನ್ನು ಹೆಚ್ಚಿಸಿ, ಉತ್ಪನ್ನಗಳನ್ನು ದುಬಾರಿಯಾಗಿಸುವ ಸಾಧ್ಯತೆಯಿದೆ.
04:10 PM (IST) Mar 20
ಕ್ರೆಡಿಟ್ ಸ್ಯೂಸ್ ಎಟಿ-1 ಬಾಂಡ್‌ಗಳ ಮಾರಾಟದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ HDFC ಬ್ಯಾಂಕ್ ತನ್ನ 3 ಹಿರಿಯ ಅಧಿಕಾರಿಗಳನ್ನು ವಜಾಗೊಳಿಸಿದೆ. ಎನ್‌ಆರ್‌ಐ ಗ್ರಾಹಕರಿಗೆ ಶಾಶ್ವತ ಬಾಂಡ್‌ಗಳನ್ನು 'ಫಿಕ್ಸೆಡ್ ಮೆಚ್ಯೂರಿಟಿ' ಎಂದು ಸುಳ್ಳು ಹೇಳಿ ಮಾರಾಟ ಮಾಡಿರುವ ಆರೋಪ ಅವರ ಮೇಲಿದೆ.
03:53 PM (IST) Mar 20
ಮಧ್ಯಪ್ರಾಚ್ಯ ಯುದ್ಧದ ನಡುವೆ, ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಖಾಸಗಿ ತೈಲ ಟ್ಯಾಂಕರ್‌ಗಳ ಸುರಕ್ಷಿತ ಸಾಗಣೆಗೆ 18 ಕೋಟಿ ರೂ. ಟೋಲ್ ವ್ಯವಸ್ಥೆ ಜಾರಿಗೆ ತಂದಿದೆ ಎಂದು ವರದಿಯಾಗಿದೆ. ಭಾರತ ಸೇರಿದಂತೆ ಹಲವು ದೇಶಗಳು ತಮ್ಮ ಹಡಗುಗಳ ಸುರಕ್ಷತೆಗಾಗಿ ಇರಾನ್‌ನೊಂದಿಗೆ ಮಾತುಕತೆ ನಡೆಸುತ್ತಿವೆ.
03:19 PM (IST) Mar 20
02:28 PM (IST) Mar 20
ಭಾರತ-ಪಾಕ್ ಗಡಿ ನಿಯಂತ್ರಣ ರೇಖೆಯ ಬಳಿ ಭಾರತೀಯ ಸೇನೆಯು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಸ್ಥಾಪಿಸಿದೆ. ಪೂಂಚ್ ಸೆಕ್ಟರ್‌ನಲ್ಲಿ ಸ್ಥಾಪಿಸಲಾದ ಈ ಪ್ರತಿಮೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
01:53 PM (IST) Mar 20
ಸೋಶಿಯಲ್ ಮೀಡಿಯಾದಲ್ಲಿ ದಂಪತಿ, ತಮ್ಮ ಫೋಟೋಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಮನಶಾಸ್ತ್ರಜ್ಞರ ಪ್ರಕಾರ ಇದು ಅಭದ್ರತೆಯ ಸಂಕೇತವಾಗಿದ್ದು, ಜ್ಯೋತಿಷ್ಯದ ಪ್ರಕಾರ ಇಂತಹ ಸಾರ್ವಜನಿಕ ಪ್ರದರ್ಶನವು ಶುಕ್ರನ ಶಕ್ತಿಯನ್ನು ಕುಗ್ಗಿಸಿ, ಸಂಬಂಧದಲ್ಲಿ ಬಿರುಕು ಮೂಡಿಸಬಹುದು.
01:31 PM (IST) Mar 20
ನ್ಯೂಯಾರ್ಕ್ ನಗರದ ಮೇಯರ್ ಜೊಹ್ರಾನ್ ಮಮ್ದಾನಿ ಅವರ ಪತ್ನಿ ರಾಮಾ ದುವಾಜಿ ಅವರು ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರೆನ್ನಲಾದ ಪೋಸ್ಟ್‌ಗಳು ಈಗ ಮತ್ತೆ ವೈರಲ್ ಆಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿವೆ.
01:19 PM (IST) Mar 20
ಗಂಭೀರ ಗಾಯ ಅನುಮಾನದ ನಡುವೆ ಮೊಜ್ತಬಾ ಖಮೇನಿ ವಿಡಿಯೋ ರಿಲೀಸ್, ಭುಗಿಲೆದ್ದ ಆತಂಕ, ದಾಳಿಯಲ್ಲಿ ಮೊಜ್ತಬಾ ಖಮೇನಿ ಬದುಕುಳಿದಿರುವುದೇ ಅನುಮಾನ ಎಂದು ಹೇಳಲಾಗಿತ್ತು. ಆದರೆ ಇದೀಗ ವಿಡಿಯೋ ಮೂಲಕ ಸ್ಪಷ್ಟ ಸಂದೇಶ ನೀಡಿದೆ.
01:04 PM (IST) Mar 20
12:41 PM (IST) Mar 20
19ನೇ ಐಪಿಎಲ್ ಸೀಸನ್‌ಗೂ ಮುನ್ನ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಅಪ್ಪನಾದ ಸಿಹಿ ಸುದ್ದಿ ನೀಡಿದ್ದಾರೆ. ಅವರು ಮತ್ತು ಅವರ ಪತ್ನಿ ಗುಂಜನ್ ಪಾಟೀದಾರ್ ಗಂಡು ಮಗುವನ್ನು ಸ್ವಾಗತಿಸಿದ್ದು, ಕಳೆದ ಸೀಸನ್ ಗೆದ್ದಿರುವ ಆರ್‌ಸಿಬಿ ಈ ಬಾರಿಯೂ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.
12:40 PM (IST) Mar 20
ATMನಿಂದ 10 ಸಾವಿರ ತೆಗೆಯಲು ಹೋಗಿ 3 ಲಕ್ಷ ರೂ ಪಡೆದ ಗ್ರಾಹಕ, ದಿಕ್ಕು ತೋಚದೆ ಕುಳಿತ ಬ್ಯಾಂಕ್, ಎಟಿಎಂ ಮೂಲಕ ನಡೆದ ಅತೀ ದೊಡ್ಡ ಮಿಸ್ಟೇಕ್ ಇದು. ಇತ್ತ ಬ್ಯಾಂಕ್ ಏನೂ ಮಾಡಲು ಸಾಧ್ಯವಾಗದೇ ತಲೆ ಮೇಲೆ ಕೈಹೊತ್ತು ಕುಳಿತಿದೆ.