ನಟ ವಿಜಯ್ ಮತ್ತು ತ್ರಿಶಾ ವಿವಾದದ ಬಗ್ಗೆ ಮಾತನಾಡಿದ್ದಕ್ಕೇ ಯೂಟ್ಯೂಬರ್‌ಗಳಿಗೆ ಈವರೆಗೆ 100 ಕೋಟಿಗೂ ಹೆಚ್ಚು ಹಣ ಕೈ ಬದಲಾಗಿದೆ ಎಂದು ಕಾಲಿವುಡ್ ಅಂಗಳದಲ್ಲಿ ದೊಡ್ಡ ಸುದ್ದಿಯಾಗುತ್ತಿದೆ.
ತಮಿಳುನಾಡಿನಲ್ಲಿ 2026ರ ವಿಧಾನಸಭಾ ಚುನಾವಣೆಯು ಏಪ್ರಿಲ್ 23 ರಂದು ನಡೆಯಲಿದೆ. ಹೀಗಾಗಿ ರಾಜಕೀಯ ಪಕ್ಷಗಳ ನಾಯಕರು ಈಗಾಗಲೇ ಚುನಾವಣಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಕಡೆ ರಾಜಕೀಯ ನಾಯಕರು ಫೀಲ್ಡಿಗಿಳಿದು ಕೆಲಸ ಮಾಡುತ್ತಿದ್ದರೆ, ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಯದೇ ರೀತಿಯ ಕೆಲಸಗಳು ನಡೆಯುತ್ತಿವೆ. ಅದರಲ್ಲೂ ಇನ್‌ಸ್ಟಾಗ್ರಾಂ, ಯೂಟ್ಯೂಬ್‌ನಲ್ಲಿ ಜನಪ್ರಿಯರಾಗಿರುವ ಕೆಲವರನ್ನು ಬಳಸಿಕೊಂಡು ತಮ್ಮ ಪಕ್ಷಗಳನ್ನು ಪ್ರಚಾರ ಮಾಡಲಾಗುತ್ತಿದೆ.
ಯೂಟ್ಯೂಬ್‌ನಲ್ಲಿ ಒಬ್ಬರ ಚಾನೆಲ್‌ಗೆ ಎಷ್ಟು ಸಬ್‌ಸ್ಕ್ರೈಬರ್‌ಗಳಿದ್ದಾರೋ, ಅದಕ್ಕೆ ತಕ್ಕಂತೆ ರಾಜಕೀಯ ಪಕ್ಷಗಳು ಹಣ ನೀಡುತ್ತವೆ. ಹಣ ಪಡೆದ ಯೂಟ್ಯೂಬರ್‌ಗಳು, ಪಕ್ಷಗಳು ನೀಡಿದ ಸ್ಕ್ರಿಪ್ಟ್ ಅನ್ನೇ ತಮ್ಮದೇ ಕಂಟೆಂಟ್‌ನಂತೆ ಮಾತನಾಡಿ ಪಕ್ಷಕ್ಕೆ ಪ್ರಚಾರ ನೀಡುತ್ತಾರೆ. ತಮ್ಮ ವಿರೋಧಿಗಳ ಬಗ್ಗೆ ಮಾತನಾಡುವುದಕ್ಕೆ ಪ್ರತ್ಯೇಕ ಹಣವನ್ನೂ ನೀಡಲಾಗುತ್ತದೆ ಎನ್ನಲಾಗಿದೆ. ಉದಾಹರಣೆಗೆ, ಟಿವಿಜೆಕೆ ಮುಖ್ಯಸ್ಥ ವಿಜಯ್, ಪತ್ನಿ ಸಂಗೀತಾ ಜೊತೆಗಿನ ವಿಚ್ಛೇದನ ಪ್ರಕರಣದಲ್ಲಿದ್ದಾರೆ.
ಇಂತಹ ಸಮಯದಲ್ಲಿ ನಟಿ ತ್ರಿಶಾ ಜೊತೆ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಇದನ್ನೇ ಕೆಲವು ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿವೆ. ಹೌದು.. ಪತ್ನಿ ಇರುವಾಗ ವಿಜಯ್ ಹೇಗೆ ಇನ್ನೊಬ್ಬ ನಟಿಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯ? ಒಬ್ಬ ರಾಜಕೀಯ ಪಕ್ಷದ ನಾಯಕನ ಲಕ್ಷಣ ಇದೇನಾ? ಕುಟುಂಬವನ್ನೇ ನಿಭಾಯಿಸಲು ಸಾಧ್ಯವಾಗದವನು ದೇಶವನ್ನು ಹೇಗೆ ಆಳುತ್ತಾನೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಯೂಟ್ಯೂಬರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳುತ್ತಿದ್ದಾರೆ.
ಕಾಲಿವುಡ್‌ನಲ್ಲಿ ಚರ್ಚೆ
ಹೀಗೆ ಮಾತನಾಡಲು ಕೆಲವು ಯೂಟ್ಯೂಬರ್‌ಗಳಿಗೆ ಲಕ್ಷ ಲಕ್ಷ ಹಣ ಕೈ ಬದಲಾಗುತ್ತಿದೆ ಎನ್ನಲಾಗಿದೆ. ವಿಜಯ್ ಮತ್ತು ತ್ರಿಶಾ ವಿವಾದದ ಬಗ್ಗೆ ಮಾತನಾಡಿದ್ದಕ್ಕೇ ಯೂಟ್ಯೂಬರ್‌ಗಳಿಗೆ ಈವರೆಗೆ 100 ಕೋಟಿಗೂ ಹೆಚ್ಚು ಹಣ ಕೈ ಬದಲಾಗಿದೆ ಎಂದು ಕಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ವಿಜಯ್ ಅವರ ಪತ್ನಿ ಸಂಗೀತಾ, ತಮ್ಮ ಪತಿಗೆ ಬೇರೊಬ್ಬ ನಟಿಯೊಂದಿಗೆ ಸಂಬಂಧವಿದೆ ಎಂದು ಆರೋಪಿಸಿ, ಅವರಿಂದ ವಿಚ್ಛೇದನ ಬೇಕೆಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದ ವಿಚಾರಣೆಯು ಇದೇ ಏಪ್ರಿಲ್ 20 ರಂದು ನಡೆಯಲಿದೆ.


