LIVE NOW
Published : Jun 02, 2026, 07:02 AM ISTUpdated : Jun 02, 2026, 09:26 PM IST

India Latest News Live: Viral Video - ಐಫೆಲ್ ಟವರ್ ಮುಂದೆ ಭಾರತೀಯ ಮಹಿಳೆಯರ ಸೀರೆ ಕ್ಯಾಟ್‌ವಾಕ್ - ಡ್ಯಾನ್ಸ್‌ಗಿಂತ ಇದೇ ಚೆಂದ ಅನ್ನೋದಾ!

ಸಾರಾಂಶ

ತಿರುಚಿರಾಪಳ್ಳಿ: ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಹಲವು ಬಾರಿ ಸೂಟ್‌ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದ ತಮಿಳುನಾಡು ಸಿಎಂ ವಿಜಯ್‌, ಅದರ ಕಾರಣವನ್ನು ಬಹಿರಂಗಪಡಿಸಿದ್ದಾರೆ. ನಾನು ಎಲ್ಲವನ್ನೂ ಕಪ್ಪು ಬಿಳುಪಾಗಿ (ಅಕ್ರಮ ಹಾಗೂ ಸಕ್ರಮ) ನೋಡುವುದರ ಸಂಕೇತವಿದು ಎಂದಿದ್ದಾರೆ.

ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿ ಸಾರ್ವಜನಿಕರ ಎದುರು ತಮ್ಮ ಕ್ಷೇತ್ರವಾದ ತಿರುಚಿರಾಪಳ್ಳಿಯಲ್ಲಿ ಮಾತನಾಡಿದ ಅವರು, ‘ನನ್ನ ಸೂಟ್‌ ಬಣ್ಣ ಯಾವಾಗಲೂ ಕಪ್ಪು ಮತ್ತು ಬಿಳಿ ಆಗಿರುತ್ತದೆ. ಕಾರಣ ನಾನು ಎಲ್ಲವನ್ನು ಈ ಎರಡು ಬಣ್ಣಗಳಲ್ಲಷ್ಟೇ ನೋಡುತ್ತೇನೆ. ಅದರ ನಡುವಿನ ಯಾವ ಬಣ್ಣವನ್ನೂ ಧರಿಸುವುದಿಲ್ಲ ಹಾಗೂ ನೋಡುವುದಿಲ್ಲ’ ಎಂದಿದ್ದಾರೆ.

ಇದೇ ವೇಳೆ ಚೊಚ್ಚಲ ಚುನಾವಣೆಯಲ್ಲಿ ತಮ್ಮ ಕೈಹಿಡಿದು ಅಧಿಕಾರಕ್ಕೇರಿಸಿದ ಮತದಾರರಿಗೆ ಧನ್ಯವಾದವನ್ನು ಅರ್ಪಿಸಿದ ವಿಜಯ್‌, ‘ಇಷ್ಟು ವರ್ಷ ನಿಮಗೆ ಮೋಸ ಮಾಡಿದ ಇಬ್ಬರನ್ನು (ಡಿಎಂಕೆ ಮತ್ತು ಅಣ್ಣಾಡಿಎಂಕೆ) ನಿರ್ಲಕ್ಷಿಸಿ ನನ್ನನ್ನು ಬೆಂಬಲಿಸಿದ್ದಕ್ಕೆ ಶಿರಬಾಗಿ ವಂದಿಸುತ್ತೇನೆ’ ಎಂದರು. ಜತೆಗೆ, ‘ನನ್ನ ಆಡಳಿತವನ್ನು ನೀವೆಲ್ಲಾ ಮೆಚ್ಚುತ್ತೀರಿ ಹಾಗೂ ಮುಂದೆಯೂ ಬೆಂಬಲಿಸುತ್ತೀರಿ ಎಂಬ ನಂಬಿಕೆಯಿದೆ’ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.

09:26 PM (IST) Jun 02

Viral Video - ಐಫೆಲ್ ಟವರ್ ಮುಂದೆ ಭಾರತೀಯ ಮಹಿಳೆಯರ ಸೀರೆ ಕ್ಯಾಟ್‌ವಾಕ್ - ಡ್ಯಾನ್ಸ್‌ಗಿಂತ ಇದೇ ಚೆಂದ ಅನ್ನೋದಾ!

ಈಗಿನ ಕಾಲದಲ್ಲಿ ಟೂರಿಗೆ ಹೋದರೆ ಅಲ್ಲಿ ಒಂದು ರೀಲ್ಸ್ ಮಾಡೋದು ಕಾಮನ್ ಆಗಿದೆ. ಅದರಲ್ಲೂ ಡ್ಯಾನ್ಸ್ ರೀಲ್ಸ್ ಮಾಡೋದು ಈಗಿನ ಟ್ರೆಂಡ್. ಆದರೆ, ಇಂಥಾ ರೀಲ್ಸ್‌ಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗೋದೇ ಹೆಚ್ಚು.

Read Full Story

08:43 PM (IST) Jun 02

ಕಾಂಗ್ರೆಸ್​ನ​ 72 ವರ್ಷಗಳ ದಾಖಲೆ ಮುರಿದು ಬೀಗಿದ ಪ್ರಧಾನಿ ನರೇಂದ್ರ ಮೋದಿ - ಏನಿದು ರೆಕಾರ್ಡ್​

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 10 ರಂದು, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸತತ ಅತಿ ದೀರ್ಘ ಅವಧಿಯ ಪ್ರಧಾನಿ ಎಂಬ ದಾಖಲೆಯನ್ನು ಮುರಿಯಲಿದ್ದಾರೆ. 2014ರಲ್ಲಿ ಅಧಿಕಾರ ವಹಿಸಿಕೊಂಡ ಮೋದಿ, 4,397 ದಿನಗಳ ನೆಹರೂ ಅವರ ನಿರಂತರ ಅಧಿಕಾರಾವಧಿಯನ್ನು ಮೀರಿಸಲಿದ್ದು, ಈ ಮೂಲಕ ಭಾರತೀಯ ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.
Read Full Story

08:36 PM (IST) Jun 02

ತಮಿಳುನಾಡಿನಲ್ಲಿ ಮತ್ತೆ ಬಿರುಗಾಳಿ? ವಿಜಯ್ ಸಿಎಂ ಆಗಿರೋ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ನಟ ರೆಡಿ, ಅಜಿತ್ ಅಲ್ಲ!

ತಮಿಳುನಾಡು ಅಂದ್ರೆ ಅಲ್ಲಿ ಸಿನಿಮಾ ರಾಜಕೀಯದ ಹೆಬ್ಬಾಗಿಲು ಎನ್ನಬಹುದು. ಬೆಳ್ಳಿಪರದೆಯ ಮೇಲೆ ಮಿಂಚಿದವರು ಕೋಟೆ ಕಟ್ಟಿ ಆಳೋದು ಅಲ್ಲಿನ ಹಳೆಯ ಸಂಪ್ರದಾಯ. ದಳಪತಿ ವಿಜಯ್ ಸಿಎಂ ಆಗಿ ದೊಡ್ಡ ಸಂಚಲನ ಮೂಡಿಸಿದ ಬೆನ್ನಲ್ಲೇ ಈಗ ಮತ್ತೊಬ್ಬ ಸ್ಟಾರ್ ನಟನ ಹೆಸರು ಕೇಳಿಬರುತ್ತಿದೆ.

Read Full Story

08:30 PM (IST) Jun 02

ನಟ ಮಾತ್ರವಲ್ಲ, ಸಂಸ್ಕೃತ ಪಂಡಿತನಂತೆ ಮಾತನಾಡಿದ ಫಿಟ್ನೆಸ್ ಹೀರೋ ವಿದ್ಯುತ್ - ಯೋಗಾತ್ಸವದಲ್ಲಿ ಆಗಿದ್ದೇನು?

ಯೋಗಾತ್ಸವ ಕಾರ್ಯಕ್ರಮದಲ್ಲಿ ನಟ ವಿದ್ಯುತ್ ಜಮ್ವಾಲ್ ಸಂಸ್ಕೃತದಲ್ಲಿ ಮಾತನಾಡಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಯೋಗದ ಮಹತ್ವದ ಬಗ್ಗೆ ಮಾತನಾಡುತ್ತಾ, ನಿರರ್ಗಳವಾಗಿ ಸಂಸ್ಕೃತದಲ್ಲಿ ಭಾಷಣ ಮಾಡಿದ್ದು, ಸಭಿಕರಿಂದ ಭಾರಿ ಚಪ್ಪಾಳೆ ಗಿಟ್ಟಿಸಿಕೊಂಡಿದೆ.

Read Full Story

08:11 PM (IST) Jun 02

ಅಮೆರಿಕದ ಕಠಿಣ ನಿಯಮಗಳಿಂದ ಬೇಸತ್ತು 12 ವರ್ಷಗಳ ಜೀವನ ತೊರೆದು - ಭಾರತಕ್ಕೆ ಮರಳಿದ ಸ್ಟಾರ್ಟ್ಅಪ್ ಸಹ-ಸಂಸ್ಥಾಪಕ!

ಅಮೆರಿಕದ ಸ್ಟಾರ್ಟ್‌ಅಪ್ ಸಹ-ಸಂಸ್ಥಾಪಕ ಕರಣ್ ಪಾಟೀಲ್, 12 ವರ್ಷಗಳ ನಂತರ ವೀಸಾ ನಿಯಮಗಳ ಸಂಕಷ್ಟ ಮತ್ತು ಸ್ವಾತಂತ್ರ್ಯದ ಕೊರತೆಯಿಂದಾಗಿ ಭಾರತಕ್ಕೆ ಮರಳಲು ನಿರ್ಧರಿಸಿದ್ದಾರೆ. ಅವರ ಈ ನಿರ್ಧಾರವು 'ರಿವರ್ಸ್ ಬ್ರೈನ್ ಡ್ರೈನ್' ಮತ್ತು ವಲಸಿಗರ ಸವಾಲುಗಳ ಕುರಿತು ಜಾಗತಿಕ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

07:58 PM (IST) Jun 02

Swiggy - ಐಪಿಎಲ್‌ ಸೀಸನ್‌ನಲ್ಲಿ ಕೋಟ್ಯಂತರ ಮೊತ್ತದ ಫುಡ್‌ ತಿಂದು ತೇಗಿದ ಕ್ರಿಕೆಟ್‌ ಫ್ಯಾನ್ಸ್‌!

ಐಪಿಎಲ್ 2026ರ ಅವಧಿಯಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಮತ್ತು ರೆಸ್ಟೋರೆಂಟ್ ಬುಕಿಂಗ್‌ಗಳು ಸಾರ್ವಕಾಲಿಕ ದಾಖಲೆ ಬರೆದಿವೆ. ಸ್ವಿಗ್ಗಿ ವರದಿ ಪ್ರಕಾರ, ಫುಡ್ ಆರ್ಡರ್‌ಗಳು ಶೇ. 32.31ರಷ್ಟು ಮತ್ತು ಡೈನ್‌ಔಟ್ ಬುಕಿಂಗ್‌ಗಳು ಶೇ. 41ರಷ್ಟು ಹೆಚ್ಚಾಗಿದ್ದು, ಬೆಂಗಳೂರು, ಮುಂಬೈ, ಹೈದರಾಬಾದ್ ನಗರಗಳು ಮುಂಚೂಣಿಯಲ್ಲಿದ್ದವು. 

Read Full Story

07:51 PM (IST) Jun 02

ಮಳೆಗಾಲ ಆರಂಭಕ್ಕೂ ಮೊದಲೇ ರೈತರ 2 ಲಕ್ಷ ರೂ ಸಾಲ ಮನ್ನ, ಮಹಾ ಸರ್ಕಾರದಿಂದ ಮಹತ್ವದ ಆದೇಶ

ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ರೈತರಿಗೆ ನೀಡಿದ್ದ ಸಾಲದಲ್ಲಿ 2 ಲಕ್ಷ ರೂಪಾಯಿ ಮನ್ನಾ ಮಾಡಲು ಮಹಾ ಸರ್ಕಾರ ಆದೇಶ ನೀಡಿದೆ. ಈ ಆದೇಶ ಹೊರಬೀಳುತ್ತಿದ್ದಂತೆ ರೈತರ ನಿಟ್ಟುಸಿರು ಬಿಟ್ಟಿದ್ದಾರೆ. ಪರಿಣಾಮ 56 ಲಕ್ಷ ರೈತರಿಗೆ ಅನುಕೂಲವಾಗಲಿದೆ.

Read Full Story

07:13 PM (IST) Jun 02

ಬ್ಯಾಂಕ್‌ ಖಾತೆಯಲ್ಲಿ ದುಡ್ಡಿಲ್ಲದಿದ್ರೂ ಹಣ ಪಾವತಿಸಿ! ಯುಪಿಐನಲ್ಲೇ ಸಿಗಲಿದೆ 45 ದಿನಗಳ ಬಡ್ಡಿ ರಹಿತ ಸಾಲ

ಭಾರತ್‌ಪೇ ಮತ್ತು ಯೆಸ್ ಬ್ಯಾಂಕ್ ಸಹಯೋಗದಲ್ಲಿ 'ಭಾರತ್‌ಪೇ ಫ್ಲೆಕ್ಸ್' ಎಂಬ ಯುಪಿಐ ಕ್ರೆಡಿಟ್ ಲೈನ್ ಸೌಲಭ್ಯವನ್ನು ಪರಿಚಯಿಸಲಾಗಿದೆ. ಈ ಸೇವೆಯಡಿ, ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೂ, ಮಂಜೂರಾದ ಸಾಲದ ಮಿತಿಯನ್ನು ಬಳಸಿ ಕ್ಯೂಆರ್ ಕೋಡ್ ಮೂಲಕ ಪಾವತಿ ಮಾಡಬಹುದು. ಇದು 45 ದಿನಗಳ ಬಡ್ಡಿ ರಹಿತ ಅವಧಿ ಮತ್ತು ಸುಲಭ ಇಎಂಐ ಆಯ್ಕೆಗಳನ್ನು ನೀಡುತ್ತದೆ.
Read Full Story

07:04 PM (IST) Jun 02

EPFO - ಎರಡು ತಿಂಗಳಾದ್ರೂ ಬರದ ಹಣ, ನಿಮ್ಮ ಖಾತೆಗೆ EPF ಬಡ್ಡಿ ಜಮೆ ಆಗುವುದು ಯಾವಾಗ? ಇಲ್ಲಿದೆ ಸಂಪೂರ್ಣ ವಿವರ

2025-26ನೇ ಸಾಲಿನ ಇಪಿಎಫ್ ಬಡ್ಡಿ ದರವನ್ನು ಶೇ. 8.25ಕ್ಕೆ ನಿಗದಿಪಡಿಸಲಾಗಿದ್ದರೂ, ಹಣ ಇನ್ನೂ ಚಂದಾದಾರರ ಖಾತೆಗೆ ಜಮೆಯಾಗಿಲ್ಲ. ಈ ವಿಳಂಬಕ್ಕೆ ಕಾರಣವೇನು, ಇದರಿಂದ ನೌಕರರಿಗೆ ಆರ್ಥಿಕ ನಷ್ಟವಾಗುವುದೇ ಮತ್ತು ಬಡ್ಡಿ ಹಣ ಯಾವಾಗ ಜಮೆಯಾಗಬಹುದು ಎನ್ನುವ ವಿವರ ಇಲ್ಲಿದೆ.

Read Full Story

07:01 PM (IST) Jun 02

ಹಾಲು ಕುಡಿಸಿ ಮಹಿಳೆಯರ ಮೇಲೆ ಲೈ0ಗಿಕ ದೌರ್ಜನ್ಯ ಎಸಗಿದ 29ರ ಧಾರ್ಮಿಕ ಗುರು,12 ವಿಡಿಯೋ ಪತ್ತೆ

ನಾಸಿಕ್ ಗುರು ಅರೆಸ್ಟ್ ಬಳಿಕ ನೂರಾರು ವಿಡಿಯೋ ಪತ್ತೆಯಾಗಿತ್ತು. ಇದೀಗ 29ರ ಹರೆಯದ ಐಟಿಟಿ ಪದವೀಧರ ಧಾರ್ಮಿಕ ಗುರು ಅನ್ನೋ ಹೆಸರಿನಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಪತ್ತೆಯಾಗಿದೆ. ಗುರು ಅರೆಸ್ಟ್ ಆಗಿದ್ದು, 12 ವಿಡಿಯೋಗಳು ಪತ್ತೆಯಾಗಿದೆ.

Read Full Story

06:57 PM (IST) Jun 02

'ಪೆದ್ದಿ' ಮೊದ್ಲೇ ಬಂದಿದ್ರೆ ಒಳ್ಳೆ ಸಂಬಂಧ ಬರ್ತಿತ್ತು - ಉಪಾಸನಾ ಜೊತೆ ಮದುವೆ ಬಗ್ಗೆ ರಾಮ್ ಚರಣ್ ಹೀಗಾ ಹೇಳೋದು?

ನಟ ರಾಮ್ ಚರಣ್ ತಮ್ಮ ಮುಂಬರುವ 'ಪೆದ್ದಿ' ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ವೇಳೆ ಪತ್ನಿ ಉಪಾಸನಾ ಬಗ್ಗೆ ತಮಾಷೆಯಾಗಿ ಮಾತನಾಡಿದ್ದು, ಈ ಸಿನಿಮಾ ಮದುವೆಗೂ ಮುನ್ನ ಬಂದಿದ್ದರೆ, ಇನ್ನಷ್ಟು ಒಳ್ಳೆ ಸಂಬಂಧ ಬರುತ್ತಿತ್ತು ಎಂದಿದ್ದಾರೆ.

Read Full Story

06:34 PM (IST) Jun 02

TV Actresses - ಸೀರಿಯಲ್ ಲೋಕದ ಟಾಪ್ 10 ಗ್ಲಾಮರಸ್ ನಟಿಯರು - ಇವರ ಮುಂದೆ ಹೀರೋಯಿನ್‌ಗಳೂ ಫೇಲ್!

ಕಿರುತೆರೆ ನಟಿಯರಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ತೆಲುಗು ಪ್ರೇಕ್ಷಕರು ಟಿವಿ ಸೀರಿಯಲ್‌ಗಳನ್ನು ಬಹಳ ಇಷ್ಟಪಡುತ್ತಾರೆ. ಧಾರಾವಾಹಿಗಳಲ್ಲಿ ನಟಿಸುವ ಸುಂದರ ಮತ್ತು ಆಕರ್ಷಕ ನಟಿಯರ ಪಟ್ಟಿ ಇಲ್ಲಿದೆ.

Read Full Story

06:24 PM (IST) Jun 02

ಬರೋಬ್ಬರಿ 5 ಪುಟಗಳ ಸುದೀರ್ಘ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಅಣ್ಣಾಮಲೈ!

ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಹೈಕಮಾಂಡ್ ಜೊತೆಗಿನ ಭಿನ್ನಾಭಿಪ್ರಾಯದಿಂದ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮದೇ ಆದ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುವ ಮೂಲಕ 'ದ್ರಾವಿಡ ಮಾದರಿ'ಗೆ ಪರ್ಯಾಯವನ್ನು ಒದಗಿಸಲು ಸಜ್ಜಾಗಿದ್ದಾರೆ.

Read Full Story

06:21 PM (IST) Jun 02

OSM ಪೋರ್ಟಲ್ ಹಗರಣದ ಬೆನ್ನಲ್ಲೇ ಕೇಂದ್ರ ಆಪರೇಷನ್‌ - CBSE ಅಧ್ಯಕ್ಷ, ಕಾರ್ಯದರ್ಶಿ ವರ್ಗಾವಣೆ; ಭ್ರಷ್ಟಾಚಾರದ ಕುರಿತು ತನಿಖೆ

ಸಿಬಿಎಸ್ಇಯ 'ಆನ್-ಸ್ಕ್ರೀನ್ ಮಾರ್ಕಿಂಗ್' (OSM) ಪೋರ್ಟಲ್ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಂಡಳಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ವರ್ಗಾವಣೆ ಮಾಡಿದೆ. ಟೆಂಡರ್ ಪ್ರಕ್ರಿಯೆ ಮತ್ತು ತಾಂತ್ರಿಕ ವೈಫಲ್ಯಗಳ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.

Read Full Story

06:02 PM (IST) Jun 02

₹35 ಕೇಕ್‌ಗೆ ₹50 ಯಾಕೆ? ವ್ಯಾಪಾರಿ ಕೊಟ್ಟ ಉತ್ತರ ಕೇಳಿ ದಂಗಾದ ಪ್ರಯಾಣಿಕ!

ಟ್ರೈನ್ ಪ್ರಯಾಣದ ವೇಳೆ ಪ್ರಯಾಣಿಕರೊಬ್ಬರು ಖರೀದಿಸಿದ ಒಂದು ಕೇಕ್ ಪ್ಯಾಕೆಟ್ ಬೆಲೆ ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. 35 ರೂಪಾಯಿ MRP ಇದ್ದ ಕೇಕ್‌ಗೆ ವ್ಯಾಪಾರಿಯೊಬ್ಬ..

Read Full Story

05:48 PM (IST) Jun 02

1.14 ಲಕ್ಷ ಕೋಟಿ ರೂಪಾಯಿ ಮೌಲ್ಯದ ಚಿನ್ನ ಮಾರಾಟ ಮಾಡಿದ್ದೇಕೆ RBI

ಅಮೆರಿಕ-ಇರಾನ್ ಸಂಘರ್ಷದಿಂದ ಉಂಟಾದ ಆರ್ಥಿಕ ಒತ್ತಡವನ್ನು ಎದುರಿಸಲು ಆರ್‌ಬಿಐ ತನ್ನ ಚಿನ್ನದ ನಿಧಿಯ ಒಂದು ಭಾಗವನ್ನು ಮಾರಾಟ ಮಾಡಿದೆ. ಇಂಧನ ವೆಚ್ಚ ಮತ್ತು ದುರ್ಬಲಗೊಳ್ಳುತ್ತಿರುವ ರೂಪಾಯಿ ಮೌಲ್ಯದಂತಹ ಬಾಹ್ಯ ಆಘಾತಗಳಿಂದ ವಿದೇಶಿ ವಿನಿಮಯ ಮೀಸಲನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ. 

Read Full Story

05:26 PM (IST) Jun 02

ಸ್ಕಾರ್ಪಿಯೋ, ಥಾರ್ ಅಬ್ಬರಕ್ಕೆ ನಡುಗಿದ ಆಟೋ ಮಾರುಕಟ್ಟೆ - ಖುಷಿಯಿಂದ ಹಿಗ್ಗಿದ ಆನಂದ್‌ ಮಹೀಂದ್ರಾ

ಮಹೀಂದ್ರಾ ಆಂಡ್ ಮಹೀಂದ್ರಾ ಕಂಪನಿಯು ಮೇ ತಿಂಗಳಲ್ಲಿ ಒಟ್ಟು ವಾಹನ ಮಾರಾಟದಲ್ಲಿ ಶೇಕಡಾ 20 ರಷ್ಟು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ. ಎಸ್‌ಯುವಿ ವಿಭಾಗದಲ್ಲಿ 58 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದ್ದು, ವಾಣಿಜ್ಯ ಮತ್ತು ತ್ರಿಚಕ್ರ ವಾಹನಗಳ ವಿಭಾಗದಲ್ಲೂ ಗಣನೀಯ ಪ್ರಗತಿ ಸಾಧಿಸಿದೆ.

Read Full Story

04:53 PM (IST) Jun 02

Snake Droppings - ಪಕ್ಷಿ ಹಿಕ್ಕೆ ಎಂದು ಮೋಸ ಹೋಗ್ಬೇಡಿ! ಆ ರೀತಿ ಇದ್ರೆ ಪಕ್ಕಾ ಹಾವಿನ ಮಲ! ಮುಟ್ಟಿದ್ರೂ ಡೇಂಜರ್‌

Snake Droppings: ಹಾವಿನ ಬಗ್ಗೆ ಮಾತನಾಡುತ್ತೇವೆ, ಆದರೆ ಹಾವಿನ ಮಲದ ಬಗ್ಗೆ ನಿರ್ಲಕ್ಷ್ಯ ಮಾಡುತ್ತೇವೆ. ನೀವೂ ಊಹಿಸೋಕೂ ಆಗದ ಜಾಗದಲ್ಲಿ ಮಲ ಇರುತ್ತದೆ. ಆ ಮಲ ಸಿಕ್ಕಾಪಟ್ಟೆ ಡೇಂಜರ್. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

Read Full Story

04:35 PM (IST) Jun 02

Kissing Scene - ಶಾಹಿದ್-ಟಾಕ್ಸಿಕ್ ಬ್ಯೂಟಿಯ ಬೈಕ್ ಕಿಸ್ ಹಿಂದಿನ ಅಸಲಿ ಕಥೆ - ವೈರಲ್ ವಿಡಿಯೋದಿಂದ ಗುಟ್ಟು ರಟ್ಟು!

ಶಾಹಿದ್ ಕಪೂರ್-ಕಿಯಾರಾ ಅಡ್ವಾಣಿ ನಟನೆಯ 'ಕಬೀರ್ ಸಿಂಗ್' ಸಿನಿಮಾದ ಬೈಕ್ ಕಿಸ್ಸಿಂಗ್ ಸೀನ್ ನೆನಪಿದೆಯಾ? ಆ ಸೀನ್ ಶೂಟ್ ಮಾಡಿದ್ದು ಹೇಗೆ ಅಂತ ಒಂದು ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಅಸಲಿಗೆ ಆ ಕಿಸ್ ನಿಜವಾಗಿತ್ತಾ? ನಕಲಿಯಾ? ಇಲ್ಲಿದೆ ನೋಡಿ ಅಸಲಿ ಕಥೆ.

Read Full Story

04:16 PM (IST) Jun 02

ಟಿ20ಯಲ್ಲಿ ಡಬಲ್ ಸೆಂಚುರಿ ಬಾರಿಸೋ ಮೊದಲ ಆಟಗಾರ ಇವನೇ ನೋಡಿ! ಲಲಿತ್ ಮೋದಿ ಅಚ್ಚರಿ ಭವಿಷ್ಯ

ಲಂಡನ್: 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಮುಕ್ತಾಯವಾಗಿದೆ. ಈ ಟೂರ್ನಿಯಲ್ಲಿ ಹೆಚ್ಚು ಗಮನ ಸೆಳೆದಿದ್ದು, ಬಿಹಾರ ಮೂಲದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ. ಈ ಆಟಗಾರನ ಬಗ್ಗೆ ಐಪಿಎಲ್‌ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅಚ್ಚರಿ ಭವಿಷ್ಯ ನುಡಿದಿದ್ದಾರೆ.

Read Full Story

04:15 PM (IST) Jun 02

Sushmita Sen - ಲಲಿತ್ ಮೋದಿ ಮಾತ್ರವಲ್ಲ, ಈ 10 ಜನರ ಜೊತೆಗೂ ಇತ್ತು ನಟಿ ಸುಶ್ಮಿತಾಗೆ ಲವ್ ಅಫೇರ್!

ನಟಿ ಸುಶ್ಮಿತಾ ಸೇನ್ ಮತ್ತು ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಅವರ ಸಂಬಂಧದ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಇವರಿಬ್ಬರ ಸಂಬಂಧ ಮುರಿದುಬಿದ್ದು ಬಹಳ ದಿನಗಳೇ ಕಳೆದಿದೆ. ಅಷ್ಟಕ್ಕೂ 50 ವರ್ಷದ..

Read Full Story

03:32 PM (IST) Jun 02

IPL 2026 ಟೂರ್ನಿಯಲ್ಲಿ ಅತಿ ದೊಡ್ಡ ಸಿಕ್ಸರ್ ಬಾರಿಸಿದ ಟಾಪ್-5 ಬ್ಯಾಟರ್‌ಗಳಿವರು! ವೈಭವ್ ಸೂರ್ಯವಂಶಿಗಿಲ್ಲ ಸ್ಥಾನ

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಯಶಸ್ವಿಯಾಗಿ ಮುಕ್ತಾಯವಾಗಿದೆ. ಈ ಟೂರ್ನಿಯು ಬ್ಯಾಟರ್‌ಗಳ ಆರ್ಭಟಕ್ಕೆ ಸಾಕ್ಷಿಯಾಯಿತು. ಇದರ ಜತೆಗೆ ಹಲವು ದಾಖಲೆಗಳು ನಿರ್ಮಾಣವಾದವು. ಬನ್ನಿ ನಾವಿಂದು ಐಪಿಎಲ್‌ನಲ್ಲಿ ಅತಿದೊಡ್ಡ ಸಿಕ್ಸರ್ ಬಾರಿಸಿದ ಟಾಪ್-5 ಬ್ಯಾಟರ್‌ಗಳು ಯಾರು ನೋಡೋಣ.

Read Full Story

03:30 PM (IST) Jun 02

ಸಿನಿಮಾ, ಸೀರಿಯಲ್‌ನಲ್ಲಿ ಕಿಸ್‌ ಮಾಡೋದು ನಿಜಾನಾ? ಇದರ ಹಿಂದಿದ್ದಾರೆ ನಡುಕ ಹುಟ್ಟಿಸೋ ಕಿಲಾಡಿ! ಯಾರದು?

ಸಿನಿಮಾದಲ್ಲಿ ಕಿಸ್‌ ಮಾಡೋ ದೃಶ್ಯ ಕಾಣಿಸುವುದು. ಹಾಗಿದ್ರೆ ಕಲಾವಿದರು ಕಿಸ್‌ ಮಾಡ್ತಾರಾ ಎಂದು ಅನೇಕರು ಅಂದುಕೊಳ್ತಾರೆ. ಆದರೆ ಇದರ ಹಿಂದಿನ ಕಥೆ ಏನು? ಈಗ ಕಾಲ ಬದಲಾಗಿದ್ದು, ಎಲ್ಲವೂ ರಿಯಲ್‌ ಎನ್ನೋ ಥರ ತೋರಿಸ್ತಾರೆ. 

Read Full Story

03:12 PM (IST) Jun 02

‌ಅಂಬಾನಿ ಫಂಕ್ಷನ್‌ಗೂ ಹೋಗದ Virat Kohli ಆ ಪವಾಡದಿಂದಲೇ ಪ್ರೇಮಾನಂದ್ ಗುರೂಜಿ ಬಳಿ ಪದೇ ಪದೇ ಹೋಗೋದು!

Virat Kohli Anushka Sharma visit Premanand Ji Maharaj: ವೃಂದಾವನದ ಶ್ರೀ ಹಿತ ರಾಧಾ ಕೇಳಿ ಕುಂಜ ಆಶ್ರಮದ ಪ್ರಸಿದ್ಧ ಸಂತ, ಆಧ್ಯಾತ್ಮಿಕ ಗುರು ಶ್ರೀ ಪ್ರೇಮಾನಂದ್ ಮಹಾರಾಜ್ ಅವರು ಯಾವುದೇ ತಂತ್ರ-ಮಂತ್ರ ಅಥವಾ ಮ್ಯಾಜಿಕ್ ಮಾಡೋದಿಲ್ಲ, ಮುಂದೆ ಆಗೋದನ್ನು ಕೂಡ ಹೇಳೋದಿಲ್ಲ. ಅವರು ಜೀವಂತ ಪವಾಡ.

Read Full Story

02:54 PM (IST) Jun 02

ಐಪಿಎಲ್‌ ಯಶಸ್ಸಿನ ಬೆನ್ನಲ್ಲೇ ಜಾಹೀರಾತು ಕಂಪನಿಗಳ ಪಾಲಿಗೆ ದುಬಾರಿಯಾದ ವೈಭವ್‌ ಸೂರ್ಯವಂಶಿ

15 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ, ಐಪಿಎಲ್ 2026ರಲ್ಲಿ 776 ರನ್ ಗಳಿಸಿ ಆರೆಂಜ್ ಕ್ಯಾಪ್ ಮತ್ತು ಎಂವಿಪಿ ಪ್ರಶಸ್ತಿ ಗೆದ್ದಿದ್ದಾರೆ. ಈ ಯಶಸ್ಸಿನಿಂದಾಗಿ ಅವರ ಬ್ರ್ಯಾಂಡ್ ಮೌಲ್ಯ ದುಪ್ಪಟ್ಟಾಗಿದ್ದು, ಭವಿಷ್ಯದ ಹರಾಜಿನಲ್ಲಿ ಅವರು ₹30 ಕೋಟಿ ಗಳಿಸಬಹುದು ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.
Read Full Story

02:36 PM (IST) Jun 02

ವಿರಾಟ್ ಕೊಹ್ಲಿ ಟೀಂ ಇಂಡಿಯಾ ಪರ ಮುಂದಿನ ಮ್ಯಾಚ್ ಆಡೋದು ಯಾವಾಗ? ಈ ಡೇಟ್ ನೋಟ್ ಮಾಡ್ಕೊಳ್ಳಿ

ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ತೋರುವ ಮೂಲಕ ವಿರಾಟ್ ಕೊಹ್ಲಿ, ಆರ್‌ಸಿಬಿ ತಂಡವು ಎರಡನೇ ಬಾರಿಗೆ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೀಗ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಜೆರ್ಸಿಯಲ್ಲಿ ಕಣಕ್ಕಿಳಿಯೋದು ಯಾವಾಗ ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿದೆ.

 

Read Full Story

02:31 PM (IST) Jun 02

ದೇಹದಲ್ಲಿ 51 ಗಾಯ, ಸಿಗರೇಟ್‌ನಿಂದ ಸುಟ್ಟ ಗುರುತು - ಕೇರಳದಲ್ಲಿ ಮಲತಂದೆಯ ಕ್ರೌರ್ಯಕ್ಕೆ ಸಾವು ಕಂಡ ಒಂದೂವರೆ ವರ್ಷದ ಮಗು!

ತಿರುವನಂತಪುರಂ ಬಳಿ, ಆಹಾರ ಗಂಟಲಲ್ಲಿ ಸಿಲುಕಿ ಮಗು ಸತ್ತಿದೆ ಎಂದು ಬಿಂಬಿಸಲಾದ ಪ್ರಕರಣ ಭೀಕರ ಕೊಲೆಯೆಂದು ಬಯಲಾಗಿದೆ. ಮಲತಂದೆಯೇ ಹಲ್ಲೆ ನಡೆಸಿ ಕೊಂದಿದ್ದು, ತಾಯಿ ಮೂಕಪ್ರೇಕ್ಷಕಳಾಗಿದ್ದಳು. ಶವಪರೀಕ್ಷೆಯಲ್ಲಿ ಮಗುವಿನ ದೇಹದ ಮೇಲೆ 51 ಗಾಯಗಳಿರುವುದು ಪತ್ತೆಯಾಗಿದೆ.
Read Full Story

01:28 PM (IST) Jun 02

ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚಾರಕ್ಕೂ ಮುನ್ನ ಗಮನಿಸಿ - ಜೂನ್ 15 ರಿಂದ ಜಾರಿಯಾಗಲಿದೆ ಮಾನ್ಸೂನ್‌ ವೇಳಾಪಟ್ಟಿ

ಕೇಂದ್ರ ರೈಲ್ವೆಯು ಮುಂಬರುವ ಮುಂಗಾರು ಋತುವಿಗಾಗಿ ಕೊಂಕಣ ರೈಲ್ವೆ ಮಾರ್ಗದ 40 ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಜೂನ್ 15 ರಿಂದ ಅ.20 ರವರೆಗೆ ಜಾರಿಯಲ್ಲಿರುವ ಈ ಹೊಸ ವೇಳಾಪಟ್ಟಿಯ ಪ್ರಕಾರ, ವಂದೇ ಭಾರತ್ ಮತ್ತು ತೇಜಸ್ ಎಕ್ಸ್‌ಪ್ರೆಸ್‌ನಂತಹ ಪ್ರಮುಖ ರೈಲುಗಳ ಸಂಚಾರದ ದಿನ ಕಡಿತಗೊಳಿಸಲಾಗಿದೆ.

Read Full Story

01:08 PM (IST) Jun 02

IPL 2026 - ಈ ಆಟಗಾರನ ಒಂದು ರನ್‌ಗೆ ಫ್ರಾಂಚೈಸಿ ಖರ್ಚು ಮಾಡಿದ್ದು ₹86.66 ಲಕ್ಷ..! ಹರಾಜಿನಲ್ಲೇ ದೊಡ್ಡ ಎಡವಟ್ಟು

2026ರ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪ್ಲೇಆಫ್ ಪ್ರವೇಶಿಸಿದರೂ, ಎಲಿಮಿನೇಟರ್‌ನಲ್ಲಿ ಸೋತು ಹೊರಬಿದ್ದಿತು. ತಂಡವು 13 ಕೋಟಿ ರೂ. ನೀಡಿ ಖರೀದಿಸಿದ್ದ ಲಿಯಾಮ್ ಲಿವಿಂಗ್‌ಸ್ಟೋನ್ ಕೇವಲ 15 ರನ್ ಗಳಿಸಿ ನಿರಾಸೆ ಮೂಡಿಸಿದರು, ಇದರಿಂದಾಗಿ ಅವರ ಪ್ರತಿ ರನ್‌ಗೆ ಫ್ರಾಂಚೈಸಿ 86.66 ಲಕ್ಷ ರೂ. ಖರ್ಚು ಮಾಡಿದಂತಾಗಿದೆ. ಈ ಕಳಪೆ ಪ್ರದರ್ಶನದಿಂದಾಗಿ ಅವರನ್ನು ಮುಂದಿನ ಸೀಸನ್‌ಗೆ ತಂಡದಿಂದ ಕೈಬಿಡುವ ಸಾಧ್ಯತೆ ದಟ್ಟವಾಗಿದೆ.
Read Full Story

10:37 AM (IST) Jun 02

IPL 2026 ಟೂರ್ನಿಯ ಸರ್ವಶ್ರೇಷ್ಠ ತಂಡ ಪ್ರಕಟ; ಸಾಯಿ ಸುದರ್ಶನ್, ಶುಭ್‌ಮನ್ ಗಿಲ್‌ಗಿಲ್ಲ ಸ್ಥಾನ!

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗುವುದರೊಂದಿಗೆ ಯಶಸ್ವಿಯಾಗಿ ಮುಕ್ತಾವಾಗಿದೆ. ಇದರ ಬೆನ್ನಲ್ಲೇ ಕ್ರಿಕೆಟ್‌ ವೆಬ್‌ಸೈಟ್‌ ESPNCricinfo ಈ ಸೀಸನ್ ಸರ್ವಶ್ರೇಷ್ಠ ತಂಡವನ್ನು ಪ್ರಕಟಿಸಿದೆ.

 

Read Full Story

10:05 AM (IST) Jun 02

NEET Row - ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಟೀಕೆ ನಡುವೆಯೇ ಪ್ರಧಾನಿ ಮೋದಿಗೆ ಹಿರಿಯ ಕಾಂಗ್ರೆಸಿಗ ದಿಗ್ವಿಜಯ್‌ ಸಾಥ್‌!

ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ನಡುವೆ, ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಪ್ರಧಾನಿ ಮೋದಿ ಮತ್ತು ವ್ಯವಸ್ಥೆಯ ಮೇಲೆ ತಮಗೆ ನಂಬಿಕೆ ಇದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದು ರಾಜಕೀಯ ವಿಷಯವಲ್ಲ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಎಂದಿದ್ದಾರೆ.

Read Full Story

10:00 AM (IST) Jun 02

TCS ಬಾಸ್ ಹೊಟ್ಟೆಕಿಚ್ಚು ಪಡುವಂತಿದೆ ಇನ್ಫೋಸಿಸ್ CEO ಸ್ಯಾಲರಿ! ನಂಬರ್ 1 ಆದ್ರೂ, ಸಂಬಳ ಕಡಿಮೆ

ಟಿಸಿಎಸ್ ಮತ್ತು ಇನ್ಫೋಸಿಸ್ ಕಂಪನಿಗಳ 2025-26ರ ವಾರ್ಷಿಕ ವರದಿಯ ಪ್ರಕಾರ, ಸಿಇಒಗಳ ಸಂಬಳದಲ್ಲಿ ದೊಡ್ಡ ವ್ಯತ್ಯಾಸವಿದೆ. ಟಿಸಿಎಸ್‌ಗಿಂತ ಇನ್ಫೋಸಿಸ್ ವಹಿವಾಟು ಕಡಿಮೆ ಇದ್ದರೂ, ಸಿಇಒ ಸಂಬಳದಲ್ಲಿ ಈ ಅಂತರ ಕಂಡುಬಂದಿದೆ.

Read Full Story

09:39 AM (IST) Jun 02

IPL 2026 Flop XI - ಈ ಸೀಸನ್‌ ಐಪಿಎಲ್‌ನ ಅತ್ಯಂತ ಪ್ಲಾಫ್ ತಂಡಕ್ಕೆ ರಿಷಭ್ ಪಂತ್ ಕ್ಯಾಪ್ಟನ್! ಈ ತಂಡದಲ್ಲಿ ಆರ್‌ಸಿಬಿ ಆಟಗಾರನಿಗೂ ಸ್ಥಾನ!

ಐಪಿಎಲ್ 2026 ಸೀಸನ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಸೂಪರ್‌ಸ್ಟಾರ್ ಆಟಗಾರರನ್ನು ಸೇರಿಸಿ 'ಫ್ಲಾಪ್ XI' ತಂಡವನ್ನು ರಚಿಸಲಾಗಿದೆ. ರಿಷಭ್ ಪಂತ್ ನಾಯಕತ್ವದ ಈ ತಂಡದಲ್ಲಿ ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾರಂತಹ ದೊಡ್ಡ ಹೆಸರುಗಳು ಸೇರಿವೆ.
Read Full Story

09:26 AM (IST) Jun 02

ಐಪಿಎಲ್ ಟ್ರೋಫಿ ಗೆಲ್ಲುತ್ತಿದ್ದಂತೆಯೇ ಭಾವುಕರಾದ ರಜತ್ ಪಾಟೀದಾರ್! ಆ ನೋವು ಬಿಚ್ಚಿಟ್ಟ ಆರ್‌ಸಿಬಿ ನಾಯಕ

19ನೇ ಆವೃತ್ತಿಯ ಐಪಿಎಲ್‌ ಟ್ರೋಫಿ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್, ಕಳೆದ ವರ್ಷದ ಕಾಲ್ತುಳಿತದಲ್ಲಿ ಮಡಿದ 11 ಅಭಿಮಾನಿಗಳಿಗೆ ಈ ಗೆಲುವನ್ನು ಅರ್ಪಿಸಿದ್ದಾರೆ. ಈ ದುರಂತದ ಹಿನ್ನೆಲೆಯಲ್ಲಿ ಮತ್ತು ಇತರೆ ಕಾರಣಗಳಿಂದಾಗಿ ಈ ಬಾರಿ ಬೆಂಗಳೂರಿನಲ್ಲಿ ವಿಕ್ಟರಿ ಪರೇಡ್ ನಡೆಸದಿರಲು ಫ್ರಾಂಚೈಸಿ ನಿರ್ಧರಿಸಿದೆ.
Read Full Story

07:52 AM (IST) Jun 02

ಆನ್‌ಲೈನ್‌ನಲ್ಲಿ ಕಿಡಿ ಹಚ್ಚಿದ್ದ ಜಿರಳೆ ಪಕ್ಷ ಈಗ ಬೀದಿಗಿಳಿದಿದೆ! ನೀಟ್ ಸೋರಿಕೆ ವಿರುದ್ಧ ನೇರ ಹೋರಾಟ, ಜೂ.6ಕ್ಕೆ ಬಿಗ್ ಆಕ್ಷನ್

ಆನ್‌ಲೈನ್‌ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಸ್ಥಾಪಿಸಿ ಸಂಚಲನ ಮೂಡಿಸಿದ್ದ ಅಮೆರಿಕ ವಾಸಿ ಅಭಿಜಿತ್ ದೀಪ್ಕೆ, ಇದೀಗ ಭಾರತಕ್ಕೆ ಆಗಮಿಸುತ್ತಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಅವರು ಪ್ರತಿಭಟನೆ.

Read Full Story

07:48 AM (IST) Jun 02

ಆರ್‌ಸಿಬಿ ಚಾಂಪಿಯನ್ - ಕೊಹ್ಲಿ ಡ್ಯಾನ್ಸ್‌ಗೆ ದಂಗಾದ ಅನುಷ್ಕಾ!

ಗುಜರಾತ್‌ ಟೈಟಾನ್ಸ್‌ ವಿರುದ್ಧ ಐಪಿಎಲ್‌ ಫೈನಲ್‌ ಗೆದ್ದ ಆರ್‌ಸಿಬಿ ತಂಡದ ಆಟಗಾರರು ಭರ್ಜರಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆ ನೃತ್ಯ ಮಾಡಿದ್ದು, ದೇಶ-ವಿದೇಶಗಳಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
Read Full Story

07:26 AM (IST) Jun 02

West Bengal Kalita Majhi - ಮನೆ ಮನೆ ಮುಸುರೆ ತಿಕ್ಕುತ್ತಿದ್ದ ಕಲಿತಾ ಮಾಝಿ ಈಗ ಬಂಗಾಳ ಸಚಿವೆ!

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸಂಪುಟ ವಿಸ್ತರಣೆಯಾಗಿದ್ದು, 35 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಾಜಿ ಕ್ರಿಕೆಟಿಗ ಅಶೋಕ್‌ ದಿಂಡಾ ಹಾಗೂ ಈ ಹಿಂದೆ ಮನೆಗೆಲಸ ಮಾಡುತ್ತಿದ್ದ ಕಲಿತಾ ಮಾಝಿ ಅವರು ಸಚಿವರಾಗಿರುವುದು ವಿಶೇಷ.
Read Full Story

More Trending News