ನಾಸಿಕ್ ಗುರು ಅರೆಸ್ಟ್ ಬಳಿಕ ನೂರಾರು ವಿಡಿಯೋ ಪತ್ತೆಯಾಗಿತ್ತು. ಇದೀಗ 29ರ ಹರೆಯದ ಐಟಿಟಿ ಪದವೀಧರ ಧಾರ್ಮಿಕ ಗುರು ಅನ್ನೋ ಹೆಸರಿನಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಪತ್ತೆಯಾಗಿದೆ. ಗುರು ಅರೆಸ್ಟ್ ಆಗಿದ್ದು, 12 ವಿಡಿಯೋಗಳು ಪತ್ತೆಯಾಗಿದೆ.
ಲಖನೌ(ಜೂ.02) ಭಾರತದಲ್ಲಿ ಧಾರ್ಮಿಕ ಗುರು, ಬಾಬಾ ಹೆಸರಿನಲ್ಲಿ ನಡೆಯುತ್ತಿರುವ ಮೋಸ, ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚೆಗೆ ನಾಸಿಕ್‌ನ ಧಾರ್ಮಿಕ ಗುರು ಅಶೋಕ್ ಖಾರಟ್ ಅರೆಸ್ಟ್ ಬಳಿಕ ನೂರಾರು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಪ್ರಕರಣ ತಣ್ಣಾಗುತ್ತಿದ್ದಂತೆ ಇದೀಗ ಒಡಿಶಾ ಮೂಲಕ ಐಐಟಿ ಪದವೀಧರ ಅಭಿಷೇಕ್ ಮಿಶ್ರಾ, ಉತ್ತರ ಪ್ರದೇಶದ ಮಥುರಾದಲ್ಲಿ ಆಚಾರ್ತ ನಾರಾಯಣ ದಾಸ್ ಗುರು ಎಂದು ಗುರುತಿಸಿಕೊಂಡಿದ್ದ. ಯೂಟ್ಯೂಬ್ ಮೂಲಕ ಭಜನೆ ಹಾಡಿ ಮರಳು ಮಾಡುತ್ತಿದ್ದ ಈ ಗುರು ಮಹಿಳೆಯರು, ಯುವತಿಯರಿಗೆ ಪ್ರಸಾದ ರೂಪದಲ್ಲಿ ಹಾಲು ಕುಡಿಸಿ ಲೈ0ಗಿಕವಾಗಿ ಬಳಸಿಕೊಳ್ಳುತ್ತಿದ್ದ. ಇದೀಗ ಯುಪಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮೆಕಾನಿಕಲ್ ಎಂಜಿನೀಯರ್ ಮುಗಿಸಿ ಧಾರ್ಮಿಕ ಗುರು
ರೂರ್ಕೆಯಲ್ಲಿ ಮೆಕಾನಿಕಲ್ ಎಂಜಿನೀಯರ್ ಪದವಿ ಮುಗಿಸಿ ರಾಧಾ ಕೃಪಾ ಅಮೃತಾ ಅನ್ನೋ ಯೂಟ್ಯೂಬ್ ಚಾನೆಲ್ ಆರಂಭಿಸಿದ ಅಭಿಷೇಕ್ ಮಿಶ್ರಾ ಭಜನೆ, ಧಾರ್ಮಿಕ ಕಾರ್ಯಕ್ರಮ, ಆಧ್ಯಾತ್ಮ ಮಾತುಗಳ ಮೂಲಕ ಭಾರಿ ಸದ್ದು ಮಾಡಿದ್ದ. ಯೂಟ್ಯೂಬ್ ಮೂಲಕ ಅಪಾರ ಅನುಯಾಯಿಗಳ ಪಡೆದುಕೊಂಡ ಅಭಿಷೇಕ್ ಮಿಶ್ರಾ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಂಚಲನ ಮೂಡಿಸಿದ್ದ.
ಹಾಲಿನಲ್ಲಿ ಅಮಲು ಪದಾರ್ಥ
ಕೇವಲ 29ರ ಹರೆಯದ ಅಭಿಷೇಕ್ ಮಿಶ್ರಾ ಧಾರ್ಮಿಕ ಗುರುವಾಗಿ ಗುರುತಿಸಿಕೊಂಡಿದ್ದ. ಮಥುರಾದ ವೃಂದಾವನದಲ್ಲಿ ನೆಲೆ ನಿಂತ ಅಭಿಷೇಕ್ ಮಿಶ್ರಾ ಎಂಜಿನೀಯರಿಂಗ್ ಯುವತಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ಯುವತಿಯರನ್ನು ಆಧ್ಯಾತ್ಮದ ಹೆಸರಲ್ಲಿ ಅವರ ಕುಟುಂಬದಿಂದ ದೂರ ಉಳಿಯುವಂತೆ ಮಾಡುತ್ತಿದ್ದ. ಬಳಿಕ ಮಥುರಾದಲ್ಲಿ ಈತನ ಅಪಾರ್ಟ್‌ಮೆಂಟ್‌ಗೆ ಕರೆದೊಯ್ಯುತ್ತಿದ್ದ. ಹಾಲಿನಲ್ಲಿ ಮತ್ತುಭರಿಸುವ ಪದಾರ್ಥ ನೀಡಿ ಲೈ0ಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಗಂಧರ್ವ ವಿವಾಹ ಹೆಸರಿನಲ್ಲಿ ದೌರ್ಜನ್ಯ
ಅಮಲಿನಲ್ಲಿರುವ ಯುವತಿಯರನ್ನು ಗಂಧರ್ವ ವಿವಾಹ ಹೆಸರಿನಲ್ಲಿ ಮದುವೆ, ಮೊದಲ ರಾತ್ರಿ ಎಂದೆಲ್ಲಾ ಶಾಸ್ತ್ರಗಳನ್ನು ಮಾಡಿ ಯುವತಿಯರನ್ನು ಬಳಸಿಕೊಳ್ಳುತ್ತಿದ್ದ. ಈ ಎಲ್ಲಾ ಘಟನೆಗಳನ್ನು ಮೊಬೈಲ್ ಮೂಲಕ ರೆಕಾರ್ಡ್ ಮಾಡುತ್ತಿದ್ದ. ಮತ್ತು ಇಳಿದಂತೆ ಯುವತಿಯರಿಗೆ ತಾವು ಮೋಸ ಹೋಗಿರುವುದಾಗಿ ಅರಿವಾಗುತ್ತಿದ್ದಂತೆ ವಿಡಿಯೋ ಕಳುಹಿಸಿ ಬೆದರಿಕೆ ಹಾಕುತ್ತಿದ್ದ. ಹಲವು ಪೋಷಕರಿಗೂ ವಿಡಿಯೋ ಕಳುಹಿಸಿ ಲಕ್ಷ ಲಕ್ಷ ರೂಪಾಯಿ ಪೀಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮೊಬೈಲ್‌ನಲ್ಲಿ 12 ವಿಡಿಯೋ ಪತ್ತೆ
ಅರೆಸ್ಟ್ ಆಗಿರುವ ಅಭಿಷೇಕ್ ಮಿಶ್ರಾ ಮೊಬೈಲ್‌ನಲ್ಲಿ 12 ಬೇರೆ ಬೇರೆ ಯುವತಿಯರ ಜೊತೆಗಿನ ವಿಡಿಯೋ ಪತ್ತೆಯಾಗಿದೆ. ಹಲವು ದಾಖಲೆಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

