ನವದೆಹಲಿ: ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದ ಬಳಿಕ ಕಾಂಗ್ರೆಸ್- ಬಿಜೆಪಿ ನಡುವೆ ಶುರುವಾಗಿದ್ದ ‘ಬೌದ್ಧಿಕ ನಕ್ಸಲ್’ ತಿಕ್ಕಾಟ ಮತ್ತಷ್ಟು ತೀವ್ರಗೊಂಡಿದೆ. ‘ನಾನು ಬೌದ್ಧಿಕ ನಕ್ಸಲ್ ಆಗಲು ಹೆಮ್ಮೆ ಪಡುತ್ತೇನೆ’ನೆಂಬ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿಕೆಗೆ ಬಿಜೆಪಿ ತೀವ್ರ ಕಿಡಿಕಾರಿದೆ.
2006ರಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರು ಮಾವೋವಾದಿಗಳ ಸಮಸ್ಯೆ ದೇಶ ಎದುರಿಸುತ್ತಿರುವ ಏಕೈಕ ಅತಿದೊಡ್ಡ ಆಂತರಿಕ ಭದ್ರತಾ ಸವಾಲು ಎಂದಿದ್ದರು. ಆದರೆ, ಈಗ ಚಿದಂಬರಂ ನಾನು ಬೌದ್ಧಿಕ ನಕ್ಸಲ್ ಆಗಲು ಹೆಮ್ಮೆ ಪಡುತ್ತೇನೆ ಎಂದಿದ್ದಾರೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷವು ಮಾಜಿ ಪ್ರಧಾನಿ ಕುಟುಂಬದ ಕ್ಷಮೆ ಯಾಚಿಸಬೇಕು ಎಂದು ಸಚಿವ ಕಿರಣ್ ರಿಜಿಜು ಆಗ್ರಹಿಸಿದರು.
ತ್ರಿವೇದಿ ತಿರುಗೇಟು:
ಈ ನಡುವೆ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಅವರು, ಕಾಂಗ್ರೆಸ್ ಪಕ್ಷ ‘ಮುಸ್ಲಿಂ ಲೀಗ್ ಮಾವೋವಾದಿ ಕಾಂಗ್ರೆಸ್’ ಎಂಬುದಾಗಿ ಅವರ ಪಕ್ಷದವರೇ ಬಯಲು ಮಾಡಿದ್ದರು. ಇದೀಗ ತಮ್ಮದು ‘ಬೌದ್ಧಿಕ ನಕ್ಸಲ್ ಕಾಂಗ್ರೆಸ್’ ಎಂದು ಹೇಳಿಕೊಳ್ಳುತ್ತಿದ್ದಾರೆ’ಎಂದು ವ್ಯಂಗ್ಯವಾಡಿದರು.
10:54 PM (IST) Aug 18
ಠಾಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 'ವಂದೇ ಮಾತರಂ'ನ ಅನಧಿಕೃತ ಆವೃತ್ತಿ ಪ್ರಸಾರವಾಗಿದ್ದು, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ವೇದಿಕೆಯಲ್ಲೇ ಆಯೋಜಕರಿಗೆ ಎಚ್ಚರಿಕೆ ನೀಡಿದ್ದಾರೆ.
10:40 PM (IST) Aug 18
ಫೆರಾರಿಯ ಚೊಚ್ಚಲ ಎಲೆಕ್ಟ್ರಿಕ್ ಕಾರು 'ಫೆರಾರಿ ಲ್ಯೂಸ್ ಚಾಸಿಸ್ ಒ' ದಾಖಲೆಯ 382 ಕೋಟಿ ರೂಪಾಯಿಗೆ ಹರಾಜಾಗಿದೆ, ಇದು ವಿಶ್ವದ ಅತ್ಯಂತ ದುಬಾರಿ ಇವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಾರನ್ನು ಅಮೆರಿಕದ ಉದ್ಯಮಿ ಹರ್ಬರ್ಟ್ ವರ್ಥೈಮ್ ಖರೀದಿಸಿದ್ದಾರೆ.
10:31 PM (IST) Aug 18
09:34 PM (IST) Aug 18
2021 ರಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ನೋ-ಬಾಲ್ (84) ಎಸೆದ ಸ್ಪಿನ್ನರ್ ಎಂಬ ಬೇಡದ ದಾಖಲೆ ರವೀಂದ್ರ ಜಡೇಜಾ ಹೆಸರಿಗೆ ಸೇರಿದೆ. ಈ ನಡುವೆ ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ 3 ವಿಕೆಟ್ ಪಡೆಯುವ ಮೂಲಕ ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ 350 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಿದ್ದಾರೆ.
08:12 PM (IST) Aug 18
ಗುರುಗ್ರಾಂನಲ್ಲಿ, ಜೆನ್ ಜಿ ಉದ್ಯೋಗಿಯೊಬ್ಬರು ತೀವ್ರ ಮುಟ್ಟಿನ ನೋವಿನ ಕಾರಣ ನೀಡಿ ತಮ್ಮ ಸಿಇಒಗೆ ರಜೆ ಕೋರಿ ಇಮೇಲ್ ಮಾಡಿದ್ದಾರೆ. ಈ ಇಮೇಲ್ ಅನ್ನು ಸಿಇಒ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
07:46 PM (IST) Aug 18
07:18 PM (IST) Aug 18
ಡೆಹ್ರಾಡೂನ್‌ನ 'ಇಂಡಿಯನ್ ಮಿಲಿಟರಿ ಅಕಾಡೆಮಿ'ಯಲ್ಲಿ ತರಬೇತಿ ಪಡೆಯುತ್ತಿದ್ದ 21 ವರ್ಷದ ಕೆಡೆಟ್ ನಿಶಾಂತ್ ಧನ್‌ಕರ್, ಜಂಗಲ್ ಕ್ಯಾಂಪ್ ತರಬೇತಿ ವೇಳೆ ಕುಸಿದುಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
07:06 PM (IST) Aug 18
07:03 PM (IST) Aug 18
06:52 PM (IST) Aug 18
ದೇಶದ ಅತ್ಯಂತ ಶ್ರೀಮಂತ ಗಣೇಶ ಮಂಡಳಿಯಾದ ಮುಂಬೈನ 'ಜಿಎಸ್‍ಬಿ ಸೇವಾ ಮಂಡಳ' ಈ ಬಾರಿಯ ಗಣೇಶೋತ್ಸವಕ್ಕಾಗಿ ₹508 ಕೋಟಿ ಮೊತ್ತದ ದಾಖಲೆಯ ವಿಮೆ ಪಡೆಯಲು ಮುಂದಾಗಿದೆ. ಚಿನ್ನ ಮತ್ತು ಬೆಳ್ಳಿಯ ದರ ಏರಿಕೆಯಿಂದಾಗಿ ವಿಮಾ ಮೊತ್ತ ಹೆಚ್ಚಾಗಿದೆ.
06:18 PM (IST) Aug 18
06:13 PM (IST) Aug 18
05:52 PM (IST) Aug 18
ಮಲ್ಲಸಂದ್ರ ಮತ್ತು ಗುಬ್ಬಿ ನಡುವಿನ ಕಾಮಗಾರಿಯಿಂದಾಗಿ, ಆಗಸ್ಟ್ 19 ರಿಂದ 26 ರವರೆಗೆ ತಾಳಗುಪ್ಪ-ಬೆಂಗಳೂರು ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ಇನ್ನು ಕೆಲವು ರೈಲುಗಳ ಸೇವೆಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.
05:37 PM (IST) Aug 18
05:08 PM (IST) Aug 18
05:02 PM (IST) Aug 18
ಮಳೆಗಾಲದಲ್ಲಿ ಹಾವುಗಳು ತಮ್ಮ ಬಿಲಗಳಿಂದ ಹೊರಬಂದು ಒಣ ಜಾಗಗಳನ್ನು ಹುಡುಕಿಕೊಂಡು ಮನೆಗಳತ್ತ ಬರುತ್ತವೆ. ಆದರೆ, ಮನೆಯ ಅಂಗಳದಲ್ಲಿ ಅಥವಾ ಹಿತ್ತಲಲ್ಲಿ ಕೆಲವು ವಿಶೇಷ ಗಿಡಗಳನ್ನು ಬೆಳೆಸುವುದರಿಂದ ಹಾವುಗಳು ಬರದಂತೆ ತಡೆಯಬಹುದು.
04:56 PM (IST) Aug 18
ದೆಹಲಿಯ ಸಿರ್ ಗಂಗಾರಾಮ್ ಆಸ್ಪತ್ರೆಯ ವೈದ್ಯರು ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯೊಂದನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಬರೋಬ್ಬರಿ 275 ಕೆಜಿ ತೂಕವಿದ್ದ 16 ವರ್ಷದ ಬಾಲಕನಿಗೆ 'ಬಾರಿಯಾಟ್ರಿಕ್ ಸರ್ಜರಿ' ಮಾಡುವ ಮೂಲಕ ಆತನ ಜೀವನದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.
04:27 PM (IST) Aug 18
04:12 PM (IST) Aug 18
03:51 PM (IST) Aug 18
03:21 PM (IST) Aug 18
03:15 PM (IST) Aug 18
02:21 PM (IST) Aug 18
01:30 PM (IST) Aug 18
01:27 PM (IST) Aug 18
LPG ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಅಡುಗೆ ಅನಿಲ e-KYC ಪೂರ್ತಿ ಮಾಡಲು ಈ ಹಿಂದೆ ನಿಗದಿ ಮಾಡಿದ್ದ ದಿನಾಂಕವನ್ನು ಆಗಸ್ಟ್ 23ರ ವರೆಗೂ ವಿಸ್ತರಣೆ ಮಾಡಿದೆ. ಆ ಮೂಲಕ ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದೆ.
12:42 PM (IST) Aug 18
ಪ್ರಯಾಣಿಕರ ಜಾತಿ ನಿಂದನೆಗೆ ಆಕ್ಷೇಪ ವ್ಯಕ್ತಪಡಿಸಿದ ರಾಪಿಡೋ ಚಾಲಕ ಅಂಕಿತ್ ಕುಮಾರ್ ಅವರನ್ನು ಸಂಸ್ಥೆಯು ಸುಮಾರು 100 ವರ್ಷಗಳ ಕಾಲ ನಿಷೇಧಿಸಿದೆ. ತನ್ನ ಸ್ಪಷ್ಟನೆ ಪಡೆಯದೆ ಏಕಪಕ್ಷೀಯವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಚಾಲಕ ಆರೋಪಿಸಿದ್ದಾರೆ.
12:36 PM (IST) Aug 18
ಪುನೀತ್ ರಾಜ್‌ಕುಮಾರ್ ಜತೆ ನಟಸಾರ್ವಭೌಮ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ತಮ್ಮ ಬಾಯ್‌ಫ್ರೆಂಡ್ ಬಾಯ್‌ಫ್ರೆಂಡ್ ಒಬ್ಬ 'ನಾರ್ಸಿಸಿಸ್ಟ್' ಆಗಿದ್ದ, ಅದಕ್ಕೇ ಬ್ರೇಕಪ್ ಮಾಡಿಕೊಂಡೆ ಎಂದಿದ್ದರು.
12:11 PM (IST) Aug 18
ಅಬಾರ್ಷನ್ ಮಾತ್ರೆ ಪರಿಣಾಮ ತಡೆಯಲು ಏನು ಮಾಡಬೇಕು ಎಂದು ಗೂಗಲ್ ಮೂಲಕ ಸರ್ಚ್ ಮಾಡಿದ ತ್ವಿಷಾ ಶರ್ಮಾ ಕೊನೆಯ ಗಳಿಗೆಯಲ್ಲಿ ಕರೆಯೊಂದನ್ನು ಮಾಡಿದ್ದಾರೆ. ಪೋಷಕರ ಕರೆ ಮಾಡಿ ತ್ವಿಷಾ ಹೇಳಿದ್ದೇನು?
12:08 PM (IST) Aug 18
ಖಾಸಗಿ ವಸತಿ ಶಾಲೆಯ 8 ಮತ್ತು 12 ವರ್ಷದ ಇಬ್ಬರು ವಿದ್ಯಾರ್ಥಿಗಳು ಮೊಮೊಸ್ ತಿಂದ ನಂತರ ಸಾವನ್ನಪ್ಪಿದ್ದಾರೆ. ಚಟ್ನಿಯೊಂದಿಗೆ ಮೊಮೊಸ್ ಸೇವಿಸಿದ ಕೆಲವೇ ಗಂಟೆಗಳಲ್ಲಿ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದು, ಆಹಾರ ವಿಷಪ್ರಾಶನದಿಂದ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದೆ.
11:08 AM (IST) Aug 18
ಬೆಳಗ್ಗೆ ಜನರು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿರುವ ನಡುವೆ ಗ್ರಾಮಕ್ಕೆ ನುಗ್ಗಿದ ಹುಲಿ, ಕುದುರೆಯನ್ನೇ ಹೊತ್ತೊಯ್ದ ಘಟನೆ ನಡೆದಿದೆ. ಜನರು ಚೀರಾಡಿದರೂ ಹುಲಿ ದೈತ್ಯ ಕುದುರೆಯನ್ನೇ ಕಾಡಿಗೆ ಎಳೆದೊಯ್ದ ಘಟನೆ ಮೊಬೈಲ್‌ನಲ್ಲಿ ಸೆರೆಯಾಗಿದೆ.
10:29 AM (IST) Aug 18
ಮಾಜಿ ಪ್ರೇಯಸಿಯ ಮೇಲೆ ಅ*ತ್ಯಾ*ಚಾ*ರ ಮತ್ತು ಕೊಲೆ ಮಾಡಲು ಚಾಟ್‌ಜಿಪಿಟಿಯಲ್ಲಿ ಐಡಿಯಾ ಕೇಳಿದ ಫ್ಲೋರಿಡಾದ ಯುವಕನನ್ನು OpenAI ಕಂಪನಿಯೇ ಪೊಲೀಸರಿಗೆ ಹಿಡಿದುಕೊಟ್ಟಿದೆ. ಈ ಸಂಭಾಷಣೆಯ ಅಪಾಯವನ್ನು ಅರಿತ ಕಂಪನಿ ಎಫ್‌ಬಿಐಗೆ ಮಾಹಿತಿ ನೀಡಿದ್ದರಿಂದ, ಆರೋಪಿಯನ್ನು ಬಂಧಿಸಿ ಎಂಟು ವರ್ಷಗಳ ಪ್ರೊಬೇಷನ್ ಶಿಕ್ಷೆ ವಿಧಿಸಲಾಗಿದೆ.
09:18 AM (IST) Aug 18
09:15 AM (IST) Aug 18
08:49 AM (IST) Aug 18
08:34 AM (IST) Aug 18
07:06 AM (IST) Aug 18
ರಸ್ತೆ ಇಲ್ಲದ ಕಾರಣ ಚಿಕಿತ್ಸೆ ಸಿಗದೆ ಗರ್ಭಿಣಿ ಪತ್ನಿ ಮೃತಪಟ್ಟಿದ್ದರಿಂದ ನೊಂದ ಪತಿ ತುಳಸಿರಾಮ್ ಗೆಡಮ್, ಗ್ರಾಮಸ್ಥರ ನೆರವಿನಿಂದ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತನ್ನ ಪತ್ನಿಗಾದ ದುರ್ಗತಿ ಬೇರೆಯವರಿಗೆ ಬರಬಾರದೆಂಬ ಉದ್ದೇಶದಿಂದ ಅವರು ಈ ಕಾರ್ಯಕ್ಕೆ ಕೈಹಾಕಿದ್ದಾರೆ.
05:58 AM (IST) Aug 18