LIVE NOW
Published : Mar 10, 2026, 06:55 AM ISTUpdated : Mar 10, 2026, 09:55 PM IST

India Latest News Live: 'ಪ್ಲೀಸ್‌ ನಮಗೆ ಡೀಸೆಲ್‌ ಕೊಡಿ..' ಭಾರತದ ಮುಂದೆ ಮಂಡಿಯೂರಿ ಮನವಿ ಇಟ್ಟ ಬಾಂಗ್ಲಾದೇಶ!

ಸಾರಾಂಶ

ನವದೆಹಲಿ: ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಬ್ಯಾರೆಲ್‌ಗೆ 100 ಡಾಲರ್‌ಗಳನ್ನು ದಾಟಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಸದ್ಯಕ್ಕೆ ಹೆಚ್ಚಿಸುವುದಿಲ್ಲ ಎಂದು ಸರ್ಕಾರಿ ಮೂಲಗಳು ಸೋಮವಾರ ತಿಳಿಸಿವೆ.

‘ದೇಶಾದ್ಯಂತ ನಿರಂತರ ಇಂಧನ ಪೂರೈಕೆ ಮಾರ್ಗಗಳನ್ನು ನಿರ್ವಹಿಸಲು ಅಧಿಕಾರಿಗಳು ಪ್ರಯತ್ನಗಳನ್ನು ತೀವ್ರಗೊಳಿಸಿದ್ದಾರೆ. ಜಾಗತಿಕ ತೈಲ ಮಾರುಕಟ್ಟೆಗಳನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ, ಆದರೆ ಚಿಲ್ಲರೆ ಇಂಧನ ಬೆಲೆಗಳನ್ನು ಹೆಚ್ಚಿಸುವ ಯಾವುದೇ ತಕ್ಷಣದ ಯೋಜನೆ ಇಲ್ಲ’ ಎಂದು ಅವು ಹೇಳಿವೆ. ತೈಲ ಮಾರುಕಟ್ಟೆ ಕಂಪನಿಗಳು ಪ್ರಸ್ತುತ ವೆಚ್ಚದ ಒತ್ತಡವನ್ನು ಸದ್ಯಕ್ಕೆ ನಿಭಾಯಿಸುವ ನಿರೀಕ್ಷೆಯಿದೆ. ಶುಕ್ರವಾರದಿಂದಲೇ ಜಾರಿಯಾಗುವಂತೆ ಸರ್ಕಾರ ಎಲ್‌ಪಿಜಿ ದರವನ್ನು 60 ರು. ಹೆಚ್ಚಿಸಿತ್ತು.

09:55 PM (IST) Mar 10

'ಪ್ಲೀಸ್‌ ನಮಗೆ ಡೀಸೆಲ್‌ ಕೊಡಿ..' ಭಾರತದ ಮುಂದೆ ಮಂಡಿಯೂರಿ ಮನವಿ ಇಟ್ಟ ಬಾಂಗ್ಲಾದೇಶ!

ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದ ಉಂಟಾದ ಇಂಧನ ಬಿಕ್ಕಟ್ಟನ್ನು ಎದುರಿಸಲು ಬಾಂಗ್ಲಾದೇಶವು ಭಾರತದಿಂದ 50,000 ಮೆಟ್ರಿಕ್ ಟನ್ ಹೆಚ್ಚುವರಿ ಡೀಸೆಲ್ ಪೂರೈಕೆಗೆ ಅಧಿಕೃತವಾಗಿ ಮನವಿ ಮಾಡಿದೆ. ತೈಲ ಅಭಾವವನ್ನು ತಗ್ಗಿಸಲು ದೇಶಾದ್ಯಂತ ತುರ್ತು ಕ್ರಮಗಳನ್ನು ಜಾರಿಗೊಳಿಸಲಾಗಿದೆ.

Read Full Story

09:52 PM (IST) Mar 10

Ugadi Bhavishya 2026 - ಯುಗಾದಿ ಬಳಿಕ ಈ ರಾಶಿಗಳ ಸಂಬಂಧದಲ್ಲಿ ಬಿರುಕು ಮೂಡಬಹುದು; ಕಟ್ಟೆಚ್ಚರ!

Relationship Alerts In Kannada: ಹಬ್ಬಗಳು ಕಳೆದಂತೆಯೋ ಅಥವಾ ಗ್ರಹಗಳ ಚಲನೆ ಬದಲಾದಂತೆ ಸಂಬಂಧಗಳಲ್ಲಿ ಬದಲಾವಣೆ ಆಗುವುದು. 2026 ಯುಗಾದಿ ಬಳಿಕ ಕೆಲವು ರಾಶಿಗಳ ಸಂಬಂಧಗಳಲ್ಲಿ ಸಮಸ್ಯೆ ಆಗುವುದು ಎನ್ನಲಾಗಿದೆ. ಹಾಗಾದರೆ ಆ ರಾಶಿಗಳು ಯಾವುವು?

Read Full Story

09:52 PM (IST) Mar 10

ಇರಾನ್ ಮೇಲೆ ಅಮೆರಿಕಾ ಇಸ್ರೇಲ್ ದಾಳಿಯಿಂದ ಯಾವ ದೇಶಕ್ಕೆ ಆದ ಹಾನಿ ಎಷ್ಟು

ಅಮೆರಿಕಾ-ಇಸ್ರೇಲ್ ನಡುವಿನ ಯುದ್ಧದ ಪರಿಣಾಮ ಕೇವಲ ಯುದ್ಧನಿರತ ದೇಶಗಳಿಗಷ್ಟೇ ಸೀಮಿತವಾಗಿಲ್ಲ. ಈ ಸಂಘರ್ಷದಿಂದಾಗಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಹಲವು ರಾಷ್ಟ್ರಗಳು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿವೆ. ಯಾವ ದೇಶದ ಸಮಸ್ಯೆ ಏನು ಇಲ್ಲಿದೆ ಡಿಟೇಲ್ ಸ್ಟೋರಿ…

Read Full Story

09:30 PM (IST) Mar 10

ಮನಸ್ಸಿನಲ್ಲಿರೋದೊಂದು, ನಿಮಗೆ ಕಾಣಿಸೋದು ಇನ್ನೊಂದು! ನಿಮಗೆ ಗೊತ್ತೇ ಆಗಲ್ಲ, 2 ಮುಖವಿರುವ ರಾಶಿಗಳಿವು; ಹುಷಾರ್

6 Two Faced Zodiac Signs: ಕೆಲ ವ್ಯಕ್ತಿಗಳು ನೋಡಲು, ಮಾತನಾಡಲು ಚೆನ್ನಾಗಿ ಕಂಡರೂ ಕೂಡ, ರಿಯಲ್‌ ಆಗಿ ಹಾಗೆ ಇರೋದಿಲ್ಲ. ಅವರು ವರ್ತಿಸೋದು ಒಂದು, ಅವರ ಮನಸ್ಸಿನಲ್ಲಿ ಇರೋದು ಒಂದು. ಈಗ ಯಾವ ರಾಶಿಗಳು ಯಾವ ಗುಣವನ್ನು ಹೊಂದಿದ್ದಾರೆ ಎಂದು ನೋಡೋಣ

 

Read Full Story

08:47 PM (IST) Mar 10

LPG Cylinder - ಗ್ಯಾಸ್ ಬದಲು ಸಿಲಿಂಡರ್‌ನಲ್ಲಿತ್ತು ಬರೀ ನೀರು! ಸ್ಟವ್ ಆನ್ ಮಾಡ್ತಿದ್ದಂತೆ ಮಾಲೀಕನಿಗೆ ಬಿಗ್ ಶಾಕ್

ಫುಡ್ ಪ್ರಾಡಕ್ಟ್ಸ್ ಯೂನಿಟ್‌ವೊಂದಕ್ಕೆ ಸಿಕ್ಕ ಅಡುಗೆ ಅನಿಲ ಸಿಲಿಂಡರ್‌ನಲ್ಲಿ ಗ್ಯಾಸ್‌ ಬದಲು ನೀರು ಪತ್ತೆಯಾಗಿದೆ. ಈ ಬಗ್ಗೆ ದೂರು ನೀಡಿದಾಗ, ಏಜೆನ್ಸಿಯವರು ಕೈಚೆಲ್ಲಿದ್ದಾರೆ ಎಂದು ಮಾಲೀಕರು ಆರೋಪಿಸಿದ್ದಾರೆ.

Read Full Story

08:09 PM (IST) Mar 10

ಫಾರ್ಚುನರ್‌ಗೆ ನಡುಕ ಹುಟ್ಟಿಸಿದ ಎಂಜಿ ಮೆಜೆಸ್ಟರ್‌! ಕೇವಲ ₹41,000ಕ್ಕೆ ಬುಕ್ಕಿಂಗ್‌ ಆರಂಭ; ಏನಿದು '5-5-5' ಆಫರ್?

ಎಂಜಿ ಮೋಟಾರ್ ತನ್ನ ಹೊಸ ಫುಲ್-ಸೈಜ್ ಎಸ್‌ಯುವಿ 'ಮೆಜೆಸ್ಟರ್' ಅನ್ನು ಭಾರತದಲ್ಲಿ ಪರಿಚಯಿಸಲು ಸಜ್ಜಾಗಿದೆ. ಕಂಪನಿಯು ವಿಶೇಷ '5-5-5' ಮಾಲೀಕತ್ವದ ಪ್ರೋಗ್ರಾಂ ಅನ್ನು ಘೋಷಿಸಿದ್ದು, ಇದು 5 ವರ್ಷಗಳ ವಾರಂಟಿ, ರೋಡ್‌ಸೈಡ್ ಅಸಿಸ್ಟೆನ್ಸ್ ಮತ್ತು ಉಚಿತ ಸರ್ವಿಸ್ ಲೇಬರ್ ಚಾರ್ಜ್‌ಗಳನ್ನು ಒಳಗೊಂಡಿದೆ. 

Read Full Story

08:04 PM (IST) Mar 10

ಖಮೇನಿ ಹತ್ಯೆ ಬಳಿಕ ಇಸ್ರೇಲ್ ದಾಳಿಯಲ್ಲಿ ನೂತನ ನಾಯಕ ಮಜ್ತೊಬಾಗೆ ಗಾಯ, ಇರಾನ್ ಟಿವಿ ವರದಿ

ಖಮೇನಿ ಹತ್ಯೆ ಬಳಿಕ ಇಸ್ರೇಲ್ ದಾಳಿಯಲ್ಲಿ ನೂತನ ನಾಯಕ ಮಜ್ತೊಬಾಗೆ ಗಾಯ, ಇರಾನ್ ಟಿವಿ ವರದಿ, ಮತ್ತೆ ಆತಂಕ ಹೆಚ್ಚಾಗಿದೆ. ಇರಾನ್ ದೇಶದ ಟಿವಿಯ ವರದಿ ಇದೀಗ ಮತ್ತೆ ಕೋಲಾಹಲ ಸೃಷ್ಟಿಸಿದೆ. ಇಷ್ಟೇ ಅಲ್ಲ ಯುದ್ಧ ತೀವ್ರಗೊಳ್ಳೋ ಆತಂಕ ಎದುರಾಗಿದೆ.

Read Full Story

07:47 PM (IST) Mar 10

ಇರಾನ್‌ನ ಆರ್ಥಿಕ ಶಕ್ತಿ 'ಖಾರ್ಗ್ ದ್ವೀಪ'ದ ಮೇಲೆ ಅಮೆರಿಕ ಕಣ್ಣು? ತೈಲ ಸಮರಕ್ಕೆ ಸಜ್ಜಾಗುತ್ತಿದೆಯೇ ವಿಶ್ವ?

ಪರ್ಷಿಯನ್ ಗಲ್ಫ್‌ನಲ್ಲಿರುವ 'ಖಾರ್ಗ್ ಐಸ್ಲೆಂಡ್‌' ಇರಾನ್‌ನ ಒಟ್ಟು ತೈಲ ರಫ್ತಿನ ಶೇಕಡಾ 90 ರಷ್ಟು ಭಾಗವನ್ನು ನಿರ್ವಹಿಸುವ ಪ್ರಮುಖ ಕೇಂದ್ರವಾಗಿದೆ. ಅಮೆರಿಕ ಈ ದ್ವೀಪವನ್ನು ವಶಪಡಿಸಿಕೊಳ್ಳಲು ಯೋಜಿಸುತ್ತಿದೆ ಎಂಬ ವರದಿಗಳಿವೆ.

Read Full Story

07:40 PM (IST) Mar 10

ಮೆಹಂದಿಯಲ್ಲಿ ರಶ್ಮಿಕಾ ಮೀರಿಸಿದ್ರಾ ವಿಜಯ್ ದೇವರಕೊಂಡ? ಫೋಟೋಸ್ ಹಂಚಿಕೊಂಡ ನಟಿ

ಮೆಹಂದಿಯಲ್ಲಿ ರಶ್ಮಿಕಾ ಮೀರಿಸಿದ್ರಾ ವಿಜಯ್ ದೇವರಕೊಂಡ? ಫೋಟೋಸ್ ಹಂಚಿಕೊಂಡ ನಟಿ, ಮದುವೆ ಬಳಿಕ ಇದೀಗ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮೆಹಂದಿಗೆ ಧರಿಸಿದ್ದ ಡ್ರೆಸ್ ಮತ್ತೆ ಭಾರಿ ಚರ್ಚೆಯಾಗುತ್ತಿದೆ.

 

Read Full Story

07:34 PM (IST) Mar 10

Mahesh Babu - ನಟನೆ ಬಿಡಲು ನಮ್ರತಾ ಹಾಕಿದ್ದ ಆ ಒಂದು ಕಂಡೀಷನ್ - ಮಹೇಶ್ ಬಳಿ ಹೆದರಿಕೆಯಿಂದಲೇ ಕೇಳಿದ್ದರಂತೆ

ನಟಿ ನಮ್ರತಾ ಶಿರೋಡ್ಕರ್, ಮದುವೆಯ ನಂತರ ತಾನು ಮಹೇಶ್ ಬಾಬುಗೆ ಒಂದು ವಿಚಿತ್ರವಾದ ಷರತ್ತು ವಿಧಿಸಿದ್ದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಜೊತೆಗೆ, ತಾನು ನಟನೆಯನ್ನು ಯಾಕೆ ಬಿಟ್ಟೆ ಎಂಬುದರ ಹಿಂದಿನ ಕಾರಣವನ್ನೂ ಹೇಳಿದ್ದಾರೆ. ಆ ಕುತೂಹಲಕಾರಿ ವಿಷಯಗಳೇನು?

Read Full Story

06:50 PM (IST) Mar 10

10ನೇ ತರಗತಿ ಪರೀಕ್ಷೆ ಬರೆದು ಬಂದ ವಿದ್ಯಾರ್ಥಿಗೆ ಮಹೀಂದ್ರಾ ಥಾರ್ ಉಡುಗೊರೆ? ಅಪ್ಪ-ಅಮ್ಮನನ್ನು ಟೀಕಿಸಿದ ನೆಟ್ಟಿಗರು!

10ನೇ ತರಗತಿ ಬೋರ್ಡ್ ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಯೊಬ್ಬನಿಗೆ ಪೋಷಕರು ಮಹೀಂದ್ರಾ ಥಾರ್ ಕಾರನ್ನು ಸರ್ಪ್ರೈಸ್ ಆಗಿ ತೋರಿಸಿದ ವೀಡಿಯೊ ವೈರಲ್ ಆಗಿದೆ. ಅಪ್ರಾಪ್ತ ವಯಸ್ಕನಿಗೆ ಕಾರು ಉಡುಗೊರೆ ನೀಡಿದ್ದಕ್ಕೆ ಟೀಕೆಗಳು ವ್ಯಕ್ತವಾದಾಗ, ಅದು ಕುಟುಂಬದ ಬಳಕೆಗಾಗಿ ಎಂದು ಪೋಷಕರು ಸ್ಪಷ್ಟನೆ ನೀಡಿದರು. ಈ ಘಟನೆಯು ಭಾರತದಲ್ಲಿ ಅಪ್ರಾಪ್ತ ವಯಸ್ಕರ ಚಾಲನೆ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

06:38 PM (IST) Mar 10

ಭಾರೀ ಸಂಕಷ್ಟದ ಬೆನ್ನಲ್ಲೇ ಇಂಡಿಗೋ ವಿಮಾನ ಸಿಇಒ ಪೀಟರ್ ಎಲ್ಬರ್ಸ್ ರಾಜೀನಾಮೆ

ಭಾರೀ ಸಂಕಷ್ಟದ ಬೆನ್ನಲ್ಲೇ ಇಂಡಿಗೋ ವಿಮಾನ ಸಿಇಒ ಪೀಟರ್ ಎಲ್ಬರ್ಸ್ ರಾಜೀನಾಮೆ ನೀಡಿದ್ದಾರೆ. ಡಿಸೆಂಬರ್‌ನಲ್ಲಿ ಇಂಡೋಗೋ ವಿಮಾನ ಸೇವೆ ವ್ಯತ್ಯಯದಿಂದ ಭಾರಿ ಟೀಕೆ ಎದುರಿಸಿದ್ದ ಸಿಇಒ ಇದೀಗ ರಿಸೈನ್ ಮಾಡಿದ್ದಾರೆ.

 

Read Full Story

06:32 PM (IST) Mar 10

Taapsee Pannu - ಬಡವಳಾಗಿ ಸಾಯ್ತೀನಿ, ಬಡವಳಾಗಿ ಬದುಕಲ್ಲ - ಕುಟುಂಬವನ್ನೇ ತಮಾಷೆ ಮಾಡಿದ ನಟಿ ತಾಪ್ಸಿ!

ನಟಿ ತಾಪ್ಸಿ ಪನ್ನು ಸಂದರ್ಶನವೊಂದರಲ್ಲಿ ತಮ್ಮ ಜೀವನಶೈಲಿ ಮತ್ತು ಹಣದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಹಣ ಉಳಿಸುವುದಕ್ಕಿಂತ ಜೀವನವನ್ನು ಪೂರ್ಣವಾಗಿ ಬದುಕುವುದು ತಮಗೆ ಇಷ್ಟ ಎಂದು ತಮಾಷೆಯಾಗಿ ಹೇಳಿದ್ದಾರೆ.

Read Full Story

06:26 PM (IST) Mar 10

ಬಹ್ರೇನ್‌ನಲ್ಲಿ ಮೊಸಾದ್ ಪರ ಕೆಲಸ ಮಾಡ್ತಿದ್ದ ಭಾರತೀಯ ಗೂಢಚಾರ ಬಂಧನ? ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ!

ಬಹ್ರೇನ್‌ನಲ್ಲಿ ಇಸ್ರೇಲ್‌ನ 'ಮೊಸಾದ್' ಪರ ಕೆಲಸ ಮಾಡುತ್ತಿದ್ದ ಭಾರತೀಯ ಗೂಢಚಾರನನ್ನು ಬಂಧಿಸಲಾಗಿದೆ ಎಂಬ ಸಾಮಾಜಿಕ ಜಾಲತಾಣದ ವದಂತಿಯನ್ನು ಭಾರತ ಸರ್ಕಾರ ನಿರಾಕರಿಸಿದೆ. ಕೇಂದ್ರ ವಾರ್ತಾ ಇಲಾಖೆಯ (PIB) ಫ್ಯಾಕ್ಟ್ ಚೆಕ್ ತಂಡವು ಈ ಸುದ್ದಿಯನ್ನು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ಸ್ಪಷ್ಟಪಡಿಸಿದೆ.

Read Full Story

06:19 PM (IST) Mar 10

ಆ್ಯಸಿಡಿಟಿ, ಗ್ಯಾಸ್ಟ್ರಿಕ್​ ಸಮಸ್ಯೆ ಇದ್ದೋರು ಬಿಸಿನೀರಲ್ಲಿ ನಿಂಬು ಹಿಂಡಿ ಕುಡಿಯುತ್ತಿದ್ದರೆ ಕೂಡಲೇ ನಿಲ್ಲಿಸಿ!

ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯವಾಗಿರುವ ಬಿಸಿನೀರಿನಲ್ಲಿ ಲಿಂಬೆ ರಸ ಸೇವನೆಯು ಎಲ್ಲರಿಗೂ ಸೂಕ್ತವಲ್ಲ. ಆಯುರ್ವೇದ ವೈದ್ಯರ ಪ್ರಕಾರ, ಆ್ಯಸಿಡಿಟಿ, ಗ್ಯಾಸ್ಟ್ರಿಕ್, ಮತ್ತು ಮೂಳೆ ನೋವಿನ ಸಮಸ್ಯೆ ಇರುವವರು ಇದನ್ನು ಸೇವಿಸಿದರೆ ದೇಹದ ಉಷ್ಣತೆ ಹೆಚ್ಚಾಗಿ ಅನಾರೋಗ್ಯಕ್ಕೆ ಕಾರಣವಾಗಬಹುದು.
Read Full Story

06:19 PM (IST) Mar 10

ಐಪಿಎಲ್ 2026ಕ್ಕೆ ಎದುರಾದ ವಿಘ್ನ, LPG ಗ್ಯಾಸ್ ಸಮಸ್ಯೆಯಿಂದ ಟೂರ್ನಿ ಆರಂಭವೇ ಅನುಮಾನ

ಐಪಿಎಲ್ 2026ಕ್ಕೆ ಎದುರಾದ ವಿಘ್ನ, LPG ಗ್ಯಾಸ್ ಸಮಸ್ಯೆಯಿಂದ ಟೂರ್ನಿ ಆರಂಭವೇ ಅನುಮಾನ, ಐಪಿಎಲ್ ಟೂರ್ನಿ ಆರಂಭಕ್ಕೆ ಇನ್ನು ಮೂರು ವಾರ ಮಾತ್ರ ಬಾಕಿ. ಆದರೆ ಮದ್ಯಪ್ರಾಚ್ಯಗಳ ಯುದ್ಧ, ಅನಿಲ ಪೂರೈಕೆಯಲ್ಲಿನ ಕೊರತೆ ಐಪಿಎಲ್‌ಗೆ ತಟ್ಟಿದೆ.

 

Read Full Story

06:13 PM (IST) Mar 10

Ilaiyaraaja - ಲೇಡಿ ವಾಯ್ಸ್‌ನಲ್ಲಿ ಇಳಯರಾಜ ಹಾಡಿದ್ದ ಹಾಡು! ಸಿನಿಮಾದಲ್ಲಿ ಸೂಪರ್‌ ಹಿಟ್ ಆದ ಕಥೆ ಗೊತ್ತಾ?

ಇಸೈಜ್ಞಾನಿ ಇಳಯರಾಜ ಅವರು ಹೆಣ್ಣು ಧ್ವನಿಯಲ್ಲಿ ಹಾಡಿದ್ದ ಒಂದು ಹಾಡು, ಮುಂದೆ ಸಿನಿಮಾಗಾಗಿ ಕೆಲವು ಬದಲಾವಣೆಗಳೊಂದಿಗೆ ರಿಲೀಸ್ ಆಗಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಆ ಹಾಡಿನ ಕುರಿತಾದ ಇಂಟ್ರೆಸ್ಟಿಂಗ್ ಕಥೆ ಇಲ್ಲಿದೆ.

Read Full Story

06:11 PM (IST) Mar 10

Home Loan - 50 ಲಕ್ಷದ ಹೋಮ್‌ ಲೋನ್‌ ಬೇಕಾದಲ್ಲಿ ನಿಮ್ಮ ಸಂಬಳ ಎಷ್ಟಿರಬೇಕು? ಎಷ್ಟಿರಲಿದೆ EMI?

ಸ್ವಂತ ಮನೆ ಖರೀದಿಸುವ ಆಸೆ ಇರುವವರು ಗೃಹಸಾಲಕ್ಕೆ ಅರ್ಜಿ ಹಾಕುತ್ತಾರೆ. ಆದರೆ, ತಮ್ಮ ಸಂಬಳಕ್ಕೆ ಎಷ್ಟು ಸಾಲ ಸಿಗುತ್ತೆ, ತಿಂಗಳಿಗೆ ಎಷ್ಟು ಇಎಂಐ ಕಟ್ಟಬೇಕು ಅನ್ನೋ ಬಗ್ಗೆ ಹಲವರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಅಂತಹವರಿಗಾಗಿಯೇ ಈ ಸ್ಟೋರಿ.
Read Full Story

05:58 PM (IST) Mar 10

Home Loan - 50 ಲಕ್ಷದ ಗೃಹಸಾಲ ಬೇಗ ತೀರಿಸಿ, 30 ಲಕ್ಷ ಉಳಿಸುವುದು ಹೇಗೆ? ಇಲ್ಲಿದೆ ಸೂಪರ್ ಐಡಿಯಾ!

How to pay off home loan early with mutual funds ಸ್ವಂತ ಮನೆ ಪ್ರತಿಯೊಬ್ಬರ ಕನಸು. ಆದರೆ ಹೋಮ್ ಲೋನ್ ಭಾರವಿಲ್ಲದೆ, ಕಡಿಮೆ ಸಮಯದಲ್ಲಿ ಸಾಲ ತೀರಿಸುವುದು ಹೇಗೆ? ಮ್ಯೂಚುವಲ್ ಫಂಡ್ ಬಳಸಿ ಲಕ್ಷಾಂತರ ರೂಪಾಯಿ ಬಡ್ಡಿ ಉಳಿಸುವ ಉಪಾಯ ಇಲ್ಲಿದೆ.

Read Full Story

05:51 PM (IST) Mar 10

ನಾಳೆ ಶೀತಲಾಷ್ಟಮಿ - ಚಿಕ್ಕ ಆಚರಣೆಯಿಂದ ಬಹುದೊಡ್ಡ ಲಾಭ; ಸರ್ವ ರೋಗ ವಾಸಿಗಿದು ಶುಭ ದಿನ

ಶೀತಲಾಷ್ಟಮಿಯು ಬೇಸಿಗೆಯ ಕಾಯಿಲೆಗಳನ್ನು ತಡೆಯಲು ಶೀತಲಾ ದೇವಿಯನ್ನು ಪೂಜಿಸುವ ಹಬ್ಬವಾಗಿದೆ. ಈ ದಿನ ದೇವಿಗೆ ತಂಗಳನ್ನವನ್ನು ನೈವೇದ್ಯ ಮಾಡಿ, ಅದನ್ನೇ ಪ್ರಸಾದವಾಗಿ ಸೇವಿಸುವ ವಿಶಿಷ್ಟ ಸಂಪ್ರದಾಯವಿದೆ. ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿರುವ ಈ ಪೂಜೆಯು ಕರುಳಿನ ಆರೋಗ್ಯ ಸೇರಿದಂತೆ ಹಲವು ಪ್ರಯೋಜನ ಹೊಂದಿದೆ.

Read Full Story

05:34 PM (IST) Mar 10

Meenakshi Chaudhary - 100 ಎಕರೆ ಜಮೀನಿರಬೇಕು, ಅಡುಗೆನೂ ಬರಬೇಕು! ಗಂಡನ ಬಗ್ಗೆ ಕಂಡೀಷನ್ ಹಾಕಿದ 'ಗೋಟ್' ನಟಿ

ತಮಿಳಿನ 'ಗೋಟ್', 'ಸಿಂಗಾಪುರ್ ಸಲೂನ್' ಚಿತ್ರಗಳ ನಾಯಕಿ ಮೀನಾಕ್ಷಿ ಚೌಧರಿ, ತನ್ನ ಗಂಡ ಹೇಗಿರಬೇಕು ಎಂಬುದರ ಬಗ್ಗೆ ಕೆಲವು ಕಂಡೀಷನ್‌ಗಳನ್ನು ಹಾಕಿದ್ದಾರೆ. ಈ ವಿಚಾರ ಈಗ ಸಖತ್ ವೈರಲ್ ಆಗಿದೆ.

Read Full Story

05:08 PM (IST) Mar 10

Jailer 2 - ರಜನಿಕಾಂತ್ ಚಿತ್ರಕ್ಕೆ ಶಾರುಖ್ ಖಾನ್ ಎಂಟ್ರಿ? ಪಾತ್ರ, ಶೂಟಿಂಗ್ ಎಲ್ಲವೂ ರಿವೀಲ್!

2023ರ ಬ್ಲಾಕ್‌ಬಸ್ಟರ್ 'ಜೈಲರ್' ಚಿತ್ರದ ಸೀಕ್ವೆಲ್‌ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ವರದಿಗಳ ಪ್ರಕಾರ, ಸೂಪರ್‌ಸ್ಟಾರ್ ರಜನಿಕಾಂತ್ ಅವರ 'ಜೈಲರ್ 2' ಚಿತ್ರದಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Read Full Story

05:00 PM (IST) Mar 10

ಕೆಟ್ಟ ಕಮೆಂಟ್ ಹಾಕಿ ಕೆಟ್ಟ, ಬಾಡಿಗೆದಾರ ಬೇರೊಬ್ಬಳ ಜೊತೆಗಿರುವ ವಿಡಿಯೋವನ್ನು ಆತನ ಪತ್ನಿಗೆ ಕಳಿಸಿದ ಮಾಲಕಿ

ಕೆಟ್ಟ ಕಮೆಂಟ್ ಹಾಕಿ ಕೆಟ್ಟ, ಬಾಡಿಗೆದಾರ ಬೇರೊಬ್ಬಳ ಜೊತೆಗಿರುವ ವಿಡಿಯೋವನ್ನು ಆತನ ಪತ್ನಿಗೆ ಕಳಿಸಿದ ಮಾಲಕಿ, ಪರಿಣಾಮ ಸಂಸಾರ ಮುರಿದು ಬಿದ್ದಿದೆ. ಇತ್ತ ಈತ ಕೋರ್ಟ್ ಮೆಟ್ಟಿಲೇರಿ ಹೋರಾಟ ಶುರುಮಾಡಿದ್ದಾನೆ. ಇವೆಲ್ಲವೂ ಒಂದು ಕಮೆಂಟ್‌ನಿಂದ.

 

Read Full Story

04:42 PM (IST) Mar 10

Dhurandhar 2 - ಅಬ್ಬಬ್ಬಾ.. ರಿಲೀಸ್‌ಗೂ ಮುನ್ನವೇ 18 ಕೋಟಿ ಕಲೆಕ್ಷನ್! 2 ಲಕ್ಷ ಟಿಕೆಟ್ ಸೋಲ್ಡ್‌ಔಟ್!

ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ರಿಲೀಸ್‌ಗೂ ಮುನ್ನವೇ ಹೊಸ ದಾಖಲೆ ಬರೆದಿದೆ. ಚಿತ್ರದ ಪೇಯ್ಡ್ ಪ್ರೀಮಿಯರ್‌ನ 2 ಲಕ್ಷ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿದ್ದು, ಬರೋಬ್ಬರಿ 18 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

Read Full Story

04:33 PM (IST) Mar 10

ಕೇವಲ ಕೆಲವೇ ಗಂಟೆಗಳ ಜೀವನ! ಜಗತ್ತಿನಲ್ಲಿ ಅತ್ಯಲ್ಪ ಆಯಸ್ಸು ಹೊಂದಿರುವ 5 ಜೀವಿಗಳು..!

ಕೆಲವು ಜೀವಿಗಳು ಹುಟ್ಟಿದ ಕೆಲವೇ ಗಂಟೆಗಳಲ್ಲಿ ಅಥವಾ ದಿನಗಳಲ್ಲಿ ತಮ್ಮ ಜೀವನವನ್ನು ಕೊನೆಗೊಳಿಸುತ್ತವೆ. ಮೇಫ್ಲೈ, ಲೂನಾ ಮಾತ್, ಮತ್ತು ಸೊಳ್ಳೆಗಳಂತಹ ಜೀವಿಗಳು ಅತ್ಯಂತ ಕಡಿಮೆ ಆಯಸ್ಸನ್ನು ಹೊಂದಿದ್ದು, ಸಂತಾನೋತ್ಪತ್ತಿಗಾಗಿಯೇ ತಮ್ಮ ಅಲ್ಪಾವಧಿಯ ಜೀವನವನ್ನು ಮುಡಿಪಾಗಿಡುತ್ತವೆ.
Read Full Story

04:29 PM (IST) Mar 10

10ನೇ ಕ್ಲಾಸ್ ಎಕ್ಸಾಂಗೆ ಚಕ್ಕರ್ ಹೊಡೆದ ವೈಭವ್ ಸೂರ್ಯವಂಶಿ; ಆದ್ರೆ IPS ಎಕ್ಸಾಂ ಪಾಸ್ ಮಾಡಿದ ಸೋದರ ಮಾವ!

ಬಿಹಾರ: ಭಾರತದ ಪ್ರತಿಭಾನ್ವಿತ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಇತ್ತೀಚೆಗೆ ಹಲವು ವಿಚಾರಗಳಲ್ಲಿ ಸುದ್ದಿಯಲ್ಲಿದ್ದರು. ಆದರೆ ಇದೀಗ ವೈಭವ್ ಸೂರ್ಯವಂಶಿ ಸೋದರ ಮಾವ ಐಪಿಎಸ್ ಎಕ್ಸಾಂ ಪಾಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

 

Read Full Story

04:00 PM (IST) Mar 10

ಗ್ಯಾಸ್ ಸಿಲಿಂಡರ್‌ಗೆ ₹915.50 ಕ್ಕಿಂತ ಹೆಚ್ಚು ಹಣ ಕೇಳ್ತಿದ್ದಾರಾ? ಸುಲಿಗೆಕೋರ ಏಜೆನ್ಸಿಗಳಿಗೆ ಬ್ರೇಕ್ ಹಾಕಲು ಹೀಗೆ ದೂರು ನೀಡಿ!

ಗ್ಯಾಸ್ ಡೀಲರ್‌ಗಳು ನಿಗದಿತ ದರಕ್ಕಿಂತ ಹೆಚ್ಚು ಹಣ ಕೇಳಿದರೆ ಅಥವಾ ಅಸಭ್ಯವಾಗಿ ವರ್ತಿಸಿದರೆ, ಅವರ ವಿರುದ್ಧ ದೂರು ನೀಡಲು ಅವಕಾಶವಿದೆ. ಗ್ಯಾಸ್ ಕಂಪನಿಯ ಅಧಿಕೃತ ಪೋರ್ಟಲ್ ಅಥವಾ ಜಿಲ್ಲಾ ಪೂರೈಕೆ ಅಧಿಕಾರಿಗೆ ದೂರು ಸಲ್ಲಿಸುವ ಮೂಲಕ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬಹುದು.
Read Full Story

03:59 PM (IST) Mar 10

ಆತಿಫ್‌ಗಾಗಿ ಮತಾಂತರಗೊಂಡ ಮಿಸ್ ಇಂಡಿಯಾ ವಿನ್ನರ್ ಸಯಾಲಿ ಕಿರುಕುಳ ತಡೆಯಲಾರದೆ ಘರ್ ವಾಪ್ಸಿ

ಆತಿಫ್‌ಗಾಗಿ ಮತಾಂತರಗೊಂಡ ಮಿಸ್ ಇಂಡಿಯಾ ವಿನ್ನರ್ ಸಯಾಲಿ ಕಿರುಕುಳ ತಡೆಯಲಾರದೆ ಘರ್ ವಾಪ್ಸಿ, ಪೋಷಕರ ಇಚ್ಚೆಗೆ ವಿರದ್ಧವಾಗಿ ಮದುವೆಯಾದ ಸಯಾಲಿ ಸರ್ವೆಗೆ ಪತ್ನಿ ಆಸೀಫ್ ಇನ್ನಿಲ್ಲದ ಕಿರುಕುಳ ನೀಡಿದ್ದಾನೆ.

 

Read Full Story

03:46 PM (IST) Mar 10

T20 World Cup 2026 - ಟ್ರೋಫಿ ಗೆದ್ದು ಪತ್ನಿ ದೇವಿಶಾ ಜತೆ ಐಕಾನಿಕ ಪೋಸ್ ಕೊಟ್ಟ ಸೂರ್ಯಕುಮಾರ್

ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಪತ್ನಿ ದೇವಿಶಾ ಜತೆ ಸೂರ್ಯಕುಮಾರ್ ಯಾದವ್ ಐಕಾನಿಕ್ ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ.

Read Full Story

03:39 PM (IST) Mar 10

ಇಸ್ರೇಲ್ ಅಮೆರಿಕಾ ದಾಳಿ ಮುಂದುವರಿದರೆ ಈ ಪ್ರದೇಶದಿಂದ ಒಂದೇ ಒಂದು ಲೀಟರ್ ತೈಲ ಸಾಗಣೆಗೆ ಬಿಡುವುದಿಲ್ಲ - ಇರಾನ್ ಎಚ್ಚರಿಕೆ

ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆ, ಹಾರ್ಮುಜ್ ಜಲಸಂಧಿ ಮೂಲಕ ಸಾಗಲು ಇರಾನ್ ಹೊಸ ಷರತ್ತುಗಳನ್ನು ವಿಧಿಸಿದೆ. ಇಸ್ರೇಲ್ ಮತ್ತು ಅಮೆರಿಕದ ರಾಯಭಾರಿಗಳನ್ನು ತೆಗೆದುಹಾಕಿದರೆ ಮಾತ್ರ ಹಡಗುಗಳಿಗೆ ಅನುಮತಿ ನೀಡುವುದಾಗಿ ಹೇಳಿದ್ದು, ದಾಳಿ ಮುಂದುವರಿದರೆ ತೈಲ ರಫ್ತು ತಡೆಯುವುದಾಗಿ ಐಆರ್‌ಜಿಸಿ ಬೆದರಿಸಿದೆ. 

Read Full Story

03:09 PM (IST) Mar 10

ಟೀಂ ಇಂಡಿಯಾಗೆ ಬಿಸಿಸಿಐ ಬಂಪರ್ ಗಿಫ್ಟ್! ಸಂಜು ಸೇರಿ ಪ್ರತಿ ಆಟಗಾರನಿಗೆ ಸಿಗುವ ನಗದು ಬಹುಮಾನ ಎಷ್ಟು?

ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತ ತಂಡಕ್ಕೆ ಬಿಸಿಸಿಐ 131 ಕೋಟಿ ರೂಪಾಯಿಗಳ ಬೃಹತ್ ಬಹುಮಾನವನ್ನು ಘೋಷಿಸಿದೆ. ಐಸಿಸಿ ನೀಡಿದ ಬಹುಮಾನಕ್ಕಿಂತ ಸುಮಾರು ಐದು ಪಟ್ಟು ಹೆಚ್ಚಿರುವ ಈ ಮೊತ್ತವನ್ನು ಆಟಗಾರರು, ಕೋಚ್‌ಗಳು ಮತ್ತು ಸಹಾಯಕ ಸಿಬ್ಬಂದಿಗೆ ಹಂಚಲಾಗುವುದು.  

Read Full Story

03:05 PM (IST) Mar 10

3 ಬಾರಿ ವಿಷ ಹಾಕಿ ಪತ್ನಿ ಕೊಲ್ಲಲು ಯತ್ನಿಸಿದ ಗಂಡ, 4ನೇ ಬಾರಿ ಪ್ಲಾನ್ ಬದಲಿಸಿದಾಗ ಏನಾಯ್ತು?

3 ಬಾರಿ ವಿಷ ಹಾಕಿ ಪತ್ನಿ ಕೊಲ್ಲಲು ಯತ್ನಿಸಿದ ಗಂಡ, 4ನೇ ಬಾರಿ ಪ್ಲಾನ್ ಬದಲಿಸಿದಾಗ ಏನಾಯ್ತು?, ಮೂರು ವಿಫಲ ಪ್ರಯತ್ನಗಳ ಬಳಿಕ 4ನೇ ಪ್ರಯತ್ನ ಯಾವುದೇ ಕಾರಣಕ್ಕೂ ವಿಫಲವಾಗಬಾರದು ಎಂದು 1 ಲಕ್ಷ ರೂಪಾಯಿ ಖರ್ಚು ಮಾಡಿದ್ದ.

 

Read Full Story

02:59 PM (IST) Mar 10

ಕೇವಲ 2 ದಿನದ ಟ್ರೈನಿಂಗ್! ತಿಂಗಳಿಗೆ ₹40000 ನಿಮ್ಮದಾಗಿಸಿಕೊಳ್ಳಿ; ಏನಿದು ಬ್ಯುಸಿನೆಸ್?

ಸ್ವಂತ ಉದ್ಯೋಗ ಶುರು ಮಾಡಲು ಬಯಸುವ ಯುವಕರು ಮತ್ತು ಗೃಹಿಣಿಯರಿಗಾಗಿ 'ವ್ಯಾಲ್ಯೂ ಆಡೆಡ್ ರೆಡಿ-ಮಿಕ್ಸ್ ಉತ್ಪನ್ನಗಳ' ಬಗ್ಗೆ ಎರಡು ದಿನಗಳ ತರಬೇತಿ ಆಯೋಜಿಸಲಾಗಿದೆ. ಈ ತರಬೇತಿಯಿಂದ ತಿಂಗಳಿಗೆ ₹40,000 ಗಳಿಸುವ ಉತ್ತಮ ಅವಕಾಶವಿದೆ.

Read Full Story

02:08 PM (IST) Mar 10

ಕಡಿಮೆ ಖರ್ಚಿನಲ್ಲಿ 5 ದಿನದ ಊಟಿ-ಕುನ್ನೂರ್ ಪ್ರವಾಸ - IRCTCಯಿಂದ ಬಜೆಟ್ ಫ್ರೆಂಡ್ಲಿ ಪ್ಯಾಕೇಜ್

IRCTCಯ ಊಟಿ ಮತ್ತು ಕುನ್ನೂರ್‌ಗೆ 5 ದಿನಗಳ ಹೊಸ ಬಜೆಟ್ ಸ್ನೇಹಿ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಈ ಪ್ಯಾಕೇಜ್‌ನಲ್ಲಿ ರೈಲು ಪ್ರಯಾಣ, ವಸತಿ, ಮತ್ತು ದೊಡ್ಡಬೆಟ್ಟ, ಮುದುಮಲೈ, ಸಿಮ್ಸ್ ಪಾರ್ಕ್‌ನಂತಹ ಪ್ರಮುಖ ಸ್ಥಳಗಳ ಭೇಟಿ ಸೇರಿದೆ

Read Full Story

01:54 PM (IST) Mar 10

ದಳಪತಿ ವಿಜಯ್ ತಂದೆಗಾಗಿ ಕಥೆ ಕೇಳದೆ ಬ್ಲಾಕ್‌ಬಸ್ಟರ್ ಕೊಟ್ಟ ಮೆಗಾಸ್ಟಾರ್ ಚಿರಂಜೀವಿ!

ದಳಪತಿ ವಿಜಯ್ ಅವರ ತಂದೆ ಮತ್ತು ಮೆಗಾಸ್ಟಾರ್ ಚಿರಂಜೀವಿ ನಡುವೆ ಉತ್ತಮ ಬಾಂಧವ್ಯವಿದೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ 3 ಸಿನಿಮಾಗಳು ಬಂದಿವೆ. ಅದರಲ್ಲಿ ಒಂದು ಚಿತ್ರವನ್ನು ಚಿರಂಜೀವಿ ಕಥೆಯನ್ನೂ ಕೇಳದೆ ಮಾಡಿದ್ದರಂತೆ. ಆ ಕುತೂಹಲಕಾರಿ ವಿವರಗಳು ಇಲ್ಲಿವೆ.
Read Full Story

01:37 PM (IST) Mar 10

LPG ಗ್ಯಾಸ್ ಸಿಲಿಂಡರ್ ಬುಕಿಂಗ್​ಗೆ ಬಂತು ಹೊಸ ನಿಯಮ- ಕೂಡಲೇ ಜಾರಿ - ಏನಿದು ರೂಲ್ಸ್​?

LPG ಸಿಲಿಂಡರ್ ಸಂಗ್ರಹಣೆ ಮತ್ತು ಕಾಳ ಸಂತೆಯನ್ನು ತಡೆಯಲು, ಸರ್ಕಾರವು ಎರಡು ಬುಕಿಂಗ್‌ಗಳ ನಡುವಿನ ಕನಿಷ್ಠ ಅವಧಿಯನ್ನು 25 ದಿನಗಳಿಗೆ ಹೆಚ್ಚಿಸಿದೆ. ಜಾಗತಿಕ ಇಂಧನ ಪೂರೈಕೆಯಲ್ಲಿನ ಅಡೆತಡೆಗಳ ಹೊರತಾಗಿಯೂ, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನದ ಕೊರತೆಯಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
Read Full Story

01:36 PM (IST) Mar 10

IOC - ಜನರೇ ಮತ್ತೊಂದು ಶಾಕ್‌ಗೆ ಸಿದ್ಧರಾಗಿ; ಯಾವುದೇ ಕ್ಷಣದಲ್ಲಾದರೂ ಹೆಚ್ಚಾಗಲಿದೆ ಬೆಲೆ

ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸಲು ನಿರ್ಧರಿಸಿದೆ. ಇದರ ಜೊತೆಗೆ, ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್‌ಗಳ ತೀವ್ರ ಕೊರತೆ ಉಂಟಾಗಿದ್ದು, ಬೆಂಗಳೂರಿನ ಸಾವಿರಾರು ಹೋಟೆಲ್‌ಗಳು ಮುಚ್ಚುವ ಭೀತಿಯನ್ನು ಎದುರಿಸುತ್ತಿವೆ.
Read Full Story

01:35 PM (IST) Mar 10

ಟಾಕ್ಸಿಕ್ ಪೋಸ್ಟ್​​ಪೋನ್‌​ಗೆ ಕಾರಣ ಬ್ಯಾರೇನೆ ಐತಿ..! ಫಸ್ಟ್ ಕಾಪಿ ನೋಡಿ ಅಪ್ಸೆಟ್ ಆದ್ರಾ ರಾಕಿಂಗ್ ಸ್ಟಾರ್..?

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಮುಂದೂಡಲ್ಪಟ್ಟಿದೆ. ಯುದ್ಧ ಅಥವಾ 'ಧುರಂಧರ್-2' ಜೊತೆಗಿನ ಸ್ಪರ್ಧೆ ಕಾರಣವಲ್ಲ, ಬದಲಾಗಿ ಸಿನಿಮಾದ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲು ಯಶ್ ಕೆಲವು ದೃಶ್ಯಗಳನ್ನು ರೀ-ಶೂಟ್ ಮಾಡಲು ನಿರ್ಧರಿಸಿದ್ದೇ ನಿಜವಾದ ಕಾರಣ ಎಂದು ಈ ಲೇಖನ ವಿವರಿಸುತ್ತದೆ.
Read Full Story

01:23 PM (IST) Mar 10

ಶಾಲೆ ಹೋಗುತ್ತಿದ್ದಾಗ ಒಲಿದಿತ್ತು ಐಪಿಎಲ್ ಅದೃಷ್ಠ, ಸಂಜು ಸ್ಯಾಮ್ಸನ್ ಮೊದಲ ಸಂದರ್ಶನ ಈಗ ವೈರಲ್

ಶಾಲೆ ಹೋಗುತ್ತಿದ್ದಾಗ ಒಲಿದಿತ್ತು ಐಪಿಎಲ್ ಅದೃಷ್ಠ, ಸಂಜು ಸ್ಯಾಮ್ಸನ್ ಮೊದಲ ಸಂದರ್ಶನ ಈಗ ವೈರಲ್, ಬಾಲಕ ಸಂಜು ಸ್ಯಾಮ್ಸನ್ ಐಪಿಎಲ್‌ ಹರಾಜಿನ ಬಳಿಕ ಏಷ್ಯಾನೆಟ್ ನ್ಯೂಸ್‌ಗೆ ನೀಡಿದ ಮೊದಲ ಸಂದರ್ಶನ ಇದೀಗ ಭಾರಿ ಸದ್ದು ಮಾಡುತ್ತಿದೆ.

Read Full Story

12:55 PM (IST) Mar 10

Iran-Israel conflict - ಪೆಟ್ರೋಲ್, ಡೀಸೆಲ್ ಅಭಾವ ನೀಗಿಸಲೇನು ಮಾಡಬಹುದು?

Iran-Israel conflict: ಗಲ್ಫ್‌ ಯುದ್ಧದ ಬಿಸಿ ಭಾರತೀಯರಿಗೂ ತಟ್ಟಿದೆ. ಕಮರ್ಶಿಯಲ್ ಗ್ಯಾಸ್‌ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹಾಗಾದ್ರೆ ನಮ್ಮ ಮುಂದಿರುವ ಆಯ್ಕೆಗಳೇನು? ಜನ ಏನ್ಮಾಡ್ಬೇಕು? ಸರ್ಕಾರ ಏನ್ಮಾಡ್ಬೇಕು? ಕೊರೋನಾ ಸ್ಥಿತಿ ಮತ್ತೆ ಮುಂದುವರಿಯುವ ಸಾಧ್ಯತೆ ಇದೆಯಾ? ಜನರ ಓಡಾಟ ಕಡಿಮೆ ಮಾಡಲು ಸರಕಾರ ಹಾಗೂ ಸಾರ್ವಜನಿಕರು ಜಂಟಿಯಾಗಿ ಏನು ಮಾಡಬಹುದು? ಇಲ್ಲಿವೆ ಕೆಲವು ಟಿಪ್ಸ್

Read Full Story

More Trending News