MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Varamahalakshmi Wishes
Karnataka Rains
Bengaluru New Elevated Corridor
H1N1 in Bengaluru
Karnataka Apartment Bill 2026
Bengaluru Medical Institutions Fined
Mandya Students Protest
MUDA Sites
Bengaluru Lokayukta Raid
Union Ministers Interaction with Gen Zs
Pakistan occupied Kashmir
  • Home
  • Business
  • IOC: ಜನರೇ ಮತ್ತೊಂದು ಶಾಕ್‌ಗೆ ಸಿದ್ಧರಾಗಿ; ಯಾವುದೇ ಕ್ಷಣದಲ್ಲಾದರೂ ಹೆಚ್ಚಾಗಲಿದೆ ಬೆಲೆ

IOC: ಜನರೇ ಮತ್ತೊಂದು ಶಾಕ್‌ಗೆ ಸಿದ್ಧರಾಗಿ; ಯಾವುದೇ ಕ್ಷಣದಲ್ಲಾದರೂ ಹೆಚ್ಚಾಗಲಿದೆ ಬೆಲೆ

ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸಲು ನಿರ್ಧರಿಸಿದೆ. ಇದರ ಜೊತೆಗೆ, ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್‌ಗಳ ತೀವ್ರ ಕೊರತೆ ಉಂಟಾಗಿದ್ದು, ಬೆಂಗಳೂರಿನ ಸಾವಿರಾರು ಹೋಟೆಲ್‌ಗಳು ಮುಚ್ಚುವ ಭೀತಿಯನ್ನು ಎದುರಿಸುತ್ತಿವೆ.

2 Min read
Author : Mahmad Rafik
Published : Mar 10 2026, 01:36 PM IST
Share this Photo Gallery
  • FB
  • TW
  • Linkdin
  • Whatsapp
15
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ
Image Credit : facebook

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ

ದೇಶದಲ್ಲಿ ಅಡುಗೆ ಅನಿಲದ ಬಿಕ್ಕಟ್ಟು ದಿನೇ ದಿನೇ ಹೆಚ್ಚಾಗುತ್ತಿದೆ. ಇದರ ನಡುವೆಯೇ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸಲು ನಿರ್ಧಾರ ಮಾಡಿದೆ. 'ಬೆಲೆ ಏರಿಸದೆ ಬೇರೆ ದಾರಿಯೇ ಇಲ್ಲ' ಎಂದು ಐಓಸಿ ಕಂಟ್ರಿ ಹೆಡ್ ಬಿ.ಬಿ. ಪಾತ್ರ ಅವರು ವಿತರಕರಿಗೆ ಪತ್ರ ಬರೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಎಷ್ಟು ದರ ಹೆಚ್ಚಳ?
Image Credit : Social media

ಎಷ್ಟು ದರ ಹೆಚ್ಚಳ?

ಯಾವುದೇ ಕ್ಷಣದಲ್ಲಾದರೂ ಬೆಲೆ ಏರಿಕೆ ಜಾರಿಗೆ ಬರಬಹುದು. ಎಷ್ಟು ರೂಪಾಯಿ ಹೆಚ್ಚಳವಾಗಲಿದೆ ಎಂಬುದನ್ನು ಸೇಲ್ಸ್ ಟೀಮ್ ತಿಳಿಸಲಿದೆ ಎಂದು ಸೋಮವಾರ ವಿತರಕರಿಗೆ ಕಳುಹಿಸಿದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತದ ಕಾರಣ ನೀಡಿ ಐಓಸಿ ಈ ಪತ್ರವನ್ನು ಕಳುಹಿಸಿದೆ.

Related Articles

Related image1
ಕೊಲ್ಲಿ ದೇಶದಲ್ಲಿ ಯುದ್ಧ: ಇಂಧನ ಸಿಗದ ಭೀತಿ ಕರ್ನಾಟಕದ ಅಲ್ಲಲ್ಲಿ ಪಂಪ್ ಮುಂದೆ ಕ್ಯೂ ನಿಂತ ವಾಹನ ಸವಾರರು!
Related image2
ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ ಗ್ರೀನ್ ಸಿಗ್ನಲ್ ನೀಡಿದ ಅಮೆರಿಕ; 30 ದಿನ ಮಾತ್ರ!
35
ವಾಣಿಜ್ಯ ಸಿಲಿಂಡರ್‌ಗಳ ವಿತರಣೆಯಲ್ಲಿ ವ್ಯತ್ಯಯ
Image Credit : X

ವಾಣಿಜ್ಯ ಸಿಲಿಂಡರ್‌ಗಳ ವಿತರಣೆಯಲ್ಲಿ ವ್ಯತ್ಯಯ

ಅಡುಗೆ ಅನಿಲದ ಸಮಸ್ಯೆ ತೀವ್ರವಾಗಿರುವುದರಿಂದ ವಾಣಿಜ್ಯ ಸಿಲಿಂಡರ್‌ಗಳ ವಿತರಣೆಯನ್ನು ನಿಲ್ಲಿಸಿರುವುದಾಗಿ ಐಓಸಿ ತಿಳಿಸಿದೆ. ಬೆಂಗಳೂರಿನ ಹೋಟೆಲ್‌ಗಳು ಮತ್ತು ಕೈಗಾರಿಕೆಗಳಿಗೆ ಗ್ಯಾಸ್ ಸಪ್ಲೈ ನಿಲ್ಲಿಸಲಾಗಿದೆ. ಗ್ರಾಹಕರು ಬೇರೆ ದಾರಿ ನೋಡಿಕೊಳ್ಳುವಂತೆ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಚೆನ್ನೈ ವಿಭಾಗ ಸೂಚನೆ ನೀಡಿದೆ. ಇದರ ಬೆನ್ನಲ್ಲೇ, ಭಾರತ್ ಪೆಟ್ರೋಲಿಯಂ ಮತ್ತು ಎಚ್‌ಪಿ ಕೂಡಾ ನಿರ್ಬಂಧಗಳನ್ನು ಹೇರಿವೆ.

45
ಸಂಕಷ್ಟದಲ್ಲಿ ಬೆಂಗಳೂರಿನ 35 ಸಾವಿರ ಹೋಟೆಲ್‌ಗಳು
Image Credit : our own

ಸಂಕಷ್ಟದಲ್ಲಿ ಬೆಂಗಳೂರಿನ 35 ಸಾವಿರ ಹೋಟೆಲ್‌ಗಳು

ಈ ಬೆಳವಣಿಗೆಯಿಂದ ಬೆಂಗಳೂರು ನಗರದ ಸುಮಾರು 35,000 ಹೋಟೆಲ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ನಗರಕ್ಕೆ ತಿಂಗಳಿಗೆ 3 ಲಕ್ಷ ಸಿಲಿಂಡರ್‌ಗಳ ಅಗತ್ಯವಿದೆ. ಪ್ರತಿದಿನ 22,000 ಸಿಲಿಂಡರ್‌ಗಳು ಬೇಕಾಗಿದ್ದು, ಸದ್ಯ ಕೇವಲ 11,000 ಸಿಲಿಂಡರ್‌ಗಳನ್ನು ಮಾತ್ರ ವಿತರಿಸಲಾಗುತ್ತಿದೆ. ಈಗಿರುವ ಸ್ಟಾಕ್ ಖಾಲಿಯಾದರೆ ಹೋಟೆಲ್‌ಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಹೋಟೆಲ್ ಮಾಲೀಕರ ಸಂಘ ಮುಖ್ಯಮಂತ್ರಿಯನ್ನು ಭೇಟಿಯಾಗಲು ತೀರ್ಮಾನಿಸಿದೆ.

ಇದನ್ನೂ ಓದಿ: ಎರಡು ದಿನದ ಬಳಿಕ ಮತ್ತೆ ಕುಸಿತವಾಯ್ತು ಚಿನ್ನದ ಬೆಲೆ; ಯುಗಾದಿ, ರಂಜಾನ್‌ಗೆ ಖರೀದಿಸಿ ಬಂಗಾರ

55
ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ ಕೊರತೆ
Image Credit : X

ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ ಕೊರತೆ

ಕೇರಳದಲ್ಲೂ ಎಲ್‌ಪಿಜಿ ಬಳಕೆಯ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ. ಹೋಟೆಲ್ ವಲಯದಲ್ಲಿ ಬಳಸುವ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳ ಲಭ್ಯತೆಯಲ್ಲಿ ಕೊರತೆ ಉಂಟಾಗಲಿದೆ ಎಂದು ಹೋಟೆಲ್ ಮಾಲೀಕರಿಗೆ ಮಾಹಿತಿ ಸಿಕ್ಕಿದೆ. ಎಲ್‌ಪಿಜಿ ಡಿಸ್ಟ್ರಿಬ್ಯೂಟರ್ಸ್ ಫೆಡರೇಷನ್ ಈ ಕುರಿತು ವಿತರಕರಿಗೆ ಪತ್ರ ಬರೆದಿದೆ. ಹೋಟೆಲ್‌ಗಳು ಮತ್ತು ಕೈಗಾರಿಕೆಗಳು ಬಳಸುವ 19 ಕೆ.ಜಿ ಹಾಗೂ 47.5 ಕೆ.ಜಿ ಸಿಲಿಂಡರ್‌ಗಳ ಲಭ್ಯತೆಯಲ್ಲಿ ಕೊರತೆ ಉಂಟಾಗಿದೆ.

ಇದನ್ನೂ ಓದಿ: ಇರಾನ್ ಇಸ್ರೇಲ್ ಯುದ್ಧದಿಂದ ಷೇರುಪೇಟೆಯಲ್ಲಿ ಮಹಾಪತನ: 10 ದಿನದಲ್ಲಿ 31 ಲಕ್ಷ ಕೋಟಿ ಸಂಪತ್ತು ನಾಶ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಎಲ್‌ಪಿಜಿ
ಪೆಟ್ರೋಲ್ ಬೆಲೆ
ಬೆಲೆ ಏರಿಕೆ
ಕೊಲ್ಲಿ ಯುದ್ಧ
ಹಣದುಬ್ಬರ

Latest Videos
Recommended Stories
Recommended image1
ಎಚ್‌ಎಎಲ್-ಸೈಯಂಟ್ ಜಂಟಿ ಉದ್ಯಮಕ್ಕೆ ತೆರೆ: ಇನ್ಫೋಟೆಕ್ HAL ಮುಚ್ಚಲು NCLT ಆದೇಶ, ತೆರೆಮರೆಗೆ ಸರಿದ ಜಂಟಿ ಉದ್ಯಮ
Recommended image2
ಭಾರತದ ಮೊದಲ ಎಟಿಎಂ ಯಾವುದು? ಎಲ್ಲಿ ಸ್ಥಾಪಿಸಲಾಯಿತು? ಇದರ ಹಿಂದಿನ ಇತಿಹಾಸ ಗೊತ್ತಾ?
Recommended image3
AIನಿಂದ ಉದ್ಯೋಗ ನಷ್ಟ ಭೀತಿ: ಕಾರ್ಪೊರೇಟ್ ಕಂಪನಿಗಳಿಗೆ ಮಾಜಿ RBI ಗವರ್ನರ್ ರಘುರಾಮ್ ಹೊಸ ತೆರಿಗೆ ಅಸ್ತ್ರ ಪ್ರಸ್ತಾಪ!
Related Stories
Recommended image1
ಕೊಲ್ಲಿ ದೇಶದಲ್ಲಿ ಯುದ್ಧ: ಇಂಧನ ಸಿಗದ ಭೀತಿ ಕರ್ನಾಟಕದ ಅಲ್ಲಲ್ಲಿ ಪಂಪ್ ಮುಂದೆ ಕ್ಯೂ ನಿಂತ ವಾಹನ ಸವಾರರು!
Recommended image2
ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ ಗ್ರೀನ್ ಸಿಗ್ನಲ್ ನೀಡಿದ ಅಮೆರಿಕ; 30 ದಿನ ಮಾತ್ರ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved